ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಹಿಂದೂ ಧರ್ಮ ಹಿಂದುಳಿಯುತ್ತಿದೆ,ಹಿಂದೂ ದಾರಿತಪ್ಪಿದ್ದಾನೆ ..ಮಹಿಳೆ ಮಕ್ಕಳು ಹಿಂದಿನಂತಿಲ್ಲ....ಹೀಗೇ ಸಮಸ್ಯೆಗಳ ಪಟ್ಟಿ ಬೆಳೆಸುವವರೊಮ್ಮೆ ಆತ್ಮಾವಲೋಕನ ಮಾಡಿಕೊಂಡರೆ ನಾವು ಹಿಂದಿನವರಂತಿರಲು ಸಾಧ್ಯವಾಗಿದೆಯೆ? ಅಂತಹ ಜ್ಞಾನದ ಶಿಕ್ಷಣ ಪಡೆದಿರುವೆವೋ? ಅಂತಹ ತಾಳ್ಮೆ ಸಹನೆ,ಕರುಣೆ, ಆತ್ಮಶಕ್ತಿ ಆತ್ಮವಿಶ್ವಾಸ ದ ಜೀವನ ನಡೆಸಲಾಗಿದೆಯೆ? ದೈವತತ್ವವನರಿತು ಒಗ್ಗಟ್ಟಿನಿಂದ ಸತ್ಯದ ಕಡೆಗೆ ನಡೆಯಲಾಗಿದೆಯೆ? ಮಹಾತ್ಮರನಡೆನುಡಿಯೊಳಗಿದ್ದ ರಾಜಯೋಗ ಅಂದರೆ ತನ್ನ ತಾನರಿತು ತನ್ನ ತಾನು ಆಳಿಕೊಳ್ಳುವ ಜ್ಞಾನ ನಮಗಿದೆಯೆ? ಇಂತಹ ಹಲವಾರು ಪ್ರಶ್ನೆಗೆ ಉತ್ತರ ಒಳಗೆ ಸಿಕ್ಕಿದರೆ ನಾವು ಹಿಂದೂಗಳೆ ಮುಂದುವರಿದವರೆ ಅಥವಾ ಮಧ್ಯವರ್ತಿಗಳೆ ಎಂದು ಸ್ಪಷ್ಟವಾಗಿ ಅರ್ಥ ವಾಗುತ್ತದೆ.
ಇತ್ತೀಚಿನ. ದಿನಗಳಲ್ಲಿ ವೈಚಾರಿಕತೆ ಬಿಟ್ಟು ವೈಜ್ಞಾನಿಕತೆ ಬೆಳೆದಿದೆ.ವೈಜ್ಞಾನಿಕ ವಾಗಿ ನಾವು ಹೊರಗಿನ ಜಗತ್ತನ್ನು ಆಳಲು ಹೊರಟು ಒಳಜಗತ್ತಿನಿಂದ ದೂರವಾದಾಗ ಹಿಂದಿನವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಪೋಷಕರೆ ಅರ್ಥ ಮಾಡಿಕೊಳ್ಳಲಾಗದ. ವೈಚಾರಿಕತೆಯ ವಿಜ್ಞಾನವನ್ನು ಮಕ್ಕಳು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ. ಕಲಿಗಾಲದ ಕಲಿಕೆಯೇ ಹೊರಗಿರುವಾಗ ಹಿಂದಿನ ಸತ್ಯ ಧರ್ಮ ಸೂಕ್ಮ ಹಿಂದುಳಿಯುವುದು ಸಹಜ. ಕೇವಲ ಪ್ರಚಾರ ಮಾಡಿದಾಕ್ಷಣ ಜನ ಬದಲಾಗುವರೆನ್ನುವ ನಂಬಿಕೆಯಲ್ಲಿ ಇಷ್ಟು ವರ್ಷ ಸರಿಯಾದ ಶಿಕ್ಷಣ ಕೊಡದೆ ಆಳಿದ ರಾಜಕೀಯತೆಯಲ್ಲಿ ದೈವತ್ವ ಹಿಂದುಳಿಯಿತು. ಈಗ ಕೆಲವು ಬದಲಾವಣೆ ಆಗುತ್ತಿದೆ. ಎಲ್ಲಾ ಪೂರ್ವ ನಿರ್ಧಾರಿತ ಎನ್ನುವ ಸನಾತನ ಧರ್ಮ ಆಗೋದೆಲ್ಲಾ ಒಳ್ಳೆಯದಕ್ಕೆ, ಅನುಭವಿಸಿಯೇ ತೀರಬೇಕು ಎನ್ನುವುದು ಹಿಂದೆ ಇಂದುಮುಂದೆ ಒಂದೆ ಇರೋವಾಗನಮ್ಮನ್ನು ನಾವು ಬದಲಾವಣೆಗೆ ತೊಡಗಿಸಿಕೊಳ್ಳುವುದಕ್ಕೆ ನಮ್ಮವರೆ ಬಿಡೋದಿಲ್ಲವೆಂದರೆ ತಪ್ಪು ಯಾರದ್ದು?
ಶಿಕ್ಷಣದ ವಿಚಾರವಾಗಲಿ,ಧರ್ಮದ ವಿಚಾರವಾಗಲಿ ಇದನ್ನು ಮನೆಮನೆಯೊಳಗೆ ಸರಿಪಡಿಸಿಕೊಳ್ಳಲು ಹೊರಗಿನ ಸರ್ಕಾರದ ಅಗತ್ಯವಿರಲಿಲ್ಲ. ಆದರೆ ಆಗಿದ್ದೇನು?ಎಲ್ಲಾ ಸರ್ಕಾರ ಸರಿಮಾಡತ್ತೆ, ಸರ್ಕಾರ ಹಿಂದುಳಿದವರನ್ನುಮೇಲಕ್ಕೆ ತರತ್ತೆ, ಸರ್ಕಾರ ಭ್ರಷ್ಟಾಚಾರ ತಡೆಯುತ್ತೆ,ಸರ್ಕಾರವೇ ನಮ್ಮ ಸಂಸಾರ ನಡೆಸುತ್ತೆ ಎನ್ನುವ ಮಟ್ಟಿಗೆ ಜನ ಹೊರಬಂದುಹೋರಾಟ,ಹಾರಾಟ,ಮಾರಾಟಕ್ಕಿಳಿದು ಕಾದಾಟ ಮನೆಮನೆಯೊಳಗೆ ಬೆಳೆದಾಗ ಒಗ್ಗಟ್ಟು ಎಲ್ಲಿರುವುದು? ಇಲ್ಲಿ ತತ್ವದಿಂದ ಪರಮಾತ್ಮನ ದರ್ಶನ ಆಗಬೇಕಿತ್ತು.ತತ್ವವೇ ತಂತ್ರಕ್ಕೆ ಶರಣಾದರೆ ಪರಕೀಯರಿಗೆ ಮಣೆ ಹಾಕಿದಂತೆ.ಪಾಶ್ಚಾತ್ಯ ರನ್ನು ಅನುಸರಿಸಿದ ಶಿಕ್ಷಣದ ಬದಲಾವಣೆಗೆ ಹಿಂದೂಗಳ ಸಹಕಾರ ದೊರೆತಾಗ ಬೆಳೆಯೋದು ಯಾರು? ಇದಕ್ಕೆ ಗುರುಹಿರಿಯರು ಸಹಕಾರ ನೀಡದಿದ್ದರೆ ಬೆಳವಣಿಗೆಯೇ ಇರುತ್ತಿರಲಿಲ್ಲ.ಎಲ್ಲ ವೈಜ್ಞಾನಿಕ ದೃಷ್ಟಿಯಿಂದ ಅಳೆಯಲಾಗದು. ಅಣು ಪರಮಾಣುಗಳನ್ನು ಹೇಗಂದರೆ ಹಾಗೆ ಬಳಸಬಹುದು.ಆದರೆ ಅದರ ಪ್ರತಿಫಲ ಅನುಭವಿಸುವುದೂ ಸತ್ಯ.
ಉದಾಹರಣೆಗೆ ಮೊಬೈಲ್, ಟಿ.ವಿ.ಕಂಪೂಟರ್...ಇನ್ನಿತರ ಮಾಧ್ಯಮಗಳು ಮಾನವನಿಗೆ ಕುಳಿತಲ್ಲಿಯೇ ಸಂದೇಶಗಳನ್ನು ಕಳಿಸುತ್ತದೆ.ಆದರೆ ಆ ಸಂದೇಶದಿಂದಾಗುವ ಒಳಗಿನ ಬದಲಾವಣೆಗಳಿಂದ ಮಕ್ಕಳ ಮನಸ್ಸು ಯಾವ ದಿಕ್ಕಿನಲ್ಲಿ ಓಡುತ್ತದೆನ್ನುವ ಬಗ್ಗೆ ಚಿಂತನೆ ನಡೆಸಬೇಕಾಗಿದ್ದು ಪೋಷಕರ ಧರ್ಮ. ಅರಿವೇ ಇಲ್ಲದೆ ಗುರುವಾಗಲು ಸಾಧ್ಯವಿಲ್ಲ.
ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ ನಮ್ಮ ಹಿಂದಿನ
ಕಾಲದಲ್ಲಿದ್ದ ಸತ್ಯ ಸತ್ವ ತತ್ವಕ್ಕೆ ಬೆಲೆಕೊಡದ ಕಾಲದಲ್ಲಿ ಬೆಲೆಕೊಡುವ ಅಸತ್ಯ ಅಧರ್ಮ ಪ್ರಚಾರಕರು ಮಧ್ಯವರ್ತಿ ಗಳಾಗಿರುವಾಗ ಅವರಿಂದ ಮುಂದೆ ಹೋಗೋದಕ್ಕೆ ಕಷ್ಟ ಪಡಬೇಕು. ಹಿರಿಯರೆ ಅಸತ್ಯದಲ್ಲಿದ್ದರೆ ಮಕ್ಕಳಿಗೆ ಸತ್ಯ ತಿಳಿಸೋರು ಯಾರು?
ರಾಜರ ಕಾಲದಲ್ಲಿದ್ದ ಧಾರ್ಮಿಕ ಶಿಕ್ಷಣಕ್ಕೂ ಪ್ರಜಾಪ್ರಭುತ್ವ ದ ಶಿಕ್ಷಣಕ್ಕೂ ಅಂತರ ಬೆಳೆದು ಆ ಅಂತರದಲ್ಲಿ ಮಧ್ಯವರ್ತಿ ಅರ್ಧ ಸತ್ಯ ಹಿಡಿದು ವ್ಯವಹಾರಕ್ಕೆ ಇಳಿದಾಗ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
ಒಟ್ಟಾರೆ ಹೇಳೋದಾದರೆ ಹಿಂದೂ ಸನಾತನಧರ್ಮ ಕುಸಿದಿಲ್ಲ ಕಾರಣ ಇದು ಆಳವಾಗಿದೆಯಷ್ಟೆ. ಚರಾಚರದಲ್ಲಿಯೂ ಅಡಗಿರುವ ಈ ಶಕ್ತಿಯನ್ನು ಮಾನವ ಅರ್ಥ ಮಾಡಿಕೊಳ್ಳಲು ಸೋತು ಹೊರಗಿದ್ದಾನೆಂದರೆ ಸರಿ.
ದೇವರನ್ನು ಹೊರಗೆಳೆದು ರಾಜಕೀಯ ನಡೆಸಿದರೆ ದೇವರಾಗೋದಿಲ್ಲ,ಹಾಗೆ ಸತ್ಯ ಧರ್ಮ ವನ್ನು ವ್ಯವಹಾರದ ವಸ್ತುವಾಗಿಟ್ಟು ಹಣ ಮಾಡಿದರೆ ತತ್ವವಾಗೋದಿಲ್ಲ. ಹಿಂದೆ ಎಷ್ಟೋ ಮಹಾತ್ಮರುಗಳ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು.. ಹಾಗೆಯೇ ಈಗಲೂ ಜನಸಾಮಾನ್ಯರು ಬದಲಾವಣೆಗೆ ಸಹಕಾರ ನೀಡಿದರೂ ಮೇಲಿರುವವರಲ್ಲಿ ಬದಲಾವಣೆ ಆಗದೆ ಜನರನ್ನು ದಾರಿತಪ್ಪಿಸುವಕೆಲಸವಾದರೆ ಹಿಂದುಳಿಯುವುದು ಜನರಲ್ಲ ಮೇಲಿರುವವರೆ ಆಗುವರು.
ಕಾರಣ ಭೂಮಿಯ ಮೇಲೆ ಜೀವನನಡೆಸೋದಕ್ಕೆ ಮೊದಲು ಸಾಮಾನ್ಯರಾಗಿರಬೇಕು.ಸಾಮಾನ್ಯಜ್ಞಾನದಿಂದಲೇ ಸತ್ಯವರಿತು ಪರಮಾತ್ಮನಿಗೆ ಶರಣಾದವರು ದಾಸರಾದವರು ಹಿಂದೂಗಳಾಗಿದ್ದಾರೆ. ಅಂದೂ ಅವರನ್ನು ಬಡವರೆಂದಿದ್ದರು.ಈಗಲೂ ಹಣವಿಲ್ಲದವರನ್ನು ಬಡವರೆನ್ನುವರು.ವ್ಯತ್ಯಾಸವಿಷ್ಟೆ ಅಂದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು ಪರಮಾತ್ಮನ ಸತ್ಯ ತಿಳಿದು ಮಹಾತ್ಮರಾದರು.ಈಗ ಲೋಕದ ಅಂಕುಡೊಂಕನ್ನು ಹರಡುವ ಮಧ್ಯವರ್ತಿಗಳ ವಶದಲ್ಲಿ ಎಷ್ಟೋ ಹಿಂದುಳಿದವರು ಒಳಗೇ ಅಡಗಿರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗದೆ ಸರ್ಕಾರದ ಹಿಂದೆ ಬೇಡಿ ಸಾಲದ ಜೀವನದಲ್ಲಿ ಶ್ರೀಮಂತ ರಾಗಲು ಹೊರಟಿರುವರು.
ಹಿಂದೂ ಸನಾತನಧರ್ಮ ಸಾಲದಿಂದ ಬಿಡುಗಡೆ ಪಡೆಯುವ ದಾರಿ ತೋರಿಸಿತ್ತು ಈಗಿದು ಸಾಲದ ಮಡಿಲಿಗೆ ಎಳೆಯುವ ರಾಜಕೀಯದತ್ತ ವೈಭೋಗದೆಡೆಗೆ ನಡೆಸುತ್ತಿದೆ ಎಂದರೆ ಧರ್ಮ ಹಿಂದುಳಿಯಿತೆ? ಅಥವಾ ಧರ್ಮ ವನ್ನು ಅಪಾರ್ಥ ಮಾಡಿಕೊಂಡಿರುವವರು ಹಿಂದುಳಿದವರಾದರೆ? ಎಲ್ಲಾ ಹಿಂದೂಗಳೆ ಅಂದು ದೇವರು ಮಾನವರು ಅಸುರರು ಎಂದು ಮೂರು ಪಂಗಡವಿತ್ತು.ಈಗ ಹೆಸರು ಬೇರೆಯಷ್ಟೆ. ಒಟ್ಟಿನಲ್ಲಿ ದೇವರು ಕಣ್ಣಿಗೆ ಕಾಣೋದಿಲ್ಲ ಸತ್ಯ ಕಾಣೋದಿಲ್ಲ ಧರ್ಮ ವೂ ಕಾಣೋದಿಲ್ಲ. ಜನ ಮಾತ್ರ ಕಾಣೋದು ಅವರ ಒಳಗಿರುವ ಜ್ಞಾನ ಕಾಣೋದಿಲ್ಲ. ಉತ್ತಮ ಜ್ಞಾನಕ್ಕೆ ಪೂರಕ ಶಿಕ್ಷಣ ನೀಡಿದರೆ ಜ್ಞಾನೋದಯ. ಜ್ಞಾನದಿಂದ ಬೆಳಕು.
ಅದು ಒಳಗಿನಿಂದ ಬೆಳೆಸಬೇಕು.ಹೊರಗಿನಬೆಳಕು ತಾತ್ಕಾಲಿಕ ವಷ್ಟೆ.
ಶಾಶ್ವತವಾಗಿರುವ ಎಲ್ಲರ ಹೃದಯಂತಿಕೆಯನ್ನು ಬೆಳೆಸದ ಶಿಕ್ಷಣದಿಂದ ಹೃದಯಹೀನರು ಬೆಳೆದರೆ ಹೃದಯದ ಕಸಿ ಮಾಡುವ ವೈದ್ಯರು ಬೆಳೆಯುವರು.ಕೊನೆಗೆ ಹೃದಯವನ್ನು ಕದ್ದು ಮಾರುವ ಚೋರರೂ ಬೆಳೆಯುವರು. ಇದನ್ನು ಹಿಂದೂ ಧರ್ಮ ಒಪ್ಪದು. ಜೀವ ತಾತ್ಕಾಲಿಕ ಆತ್ಮ ಶಾಶ್ವತ.ಇದು ಎಲ್ಲಾ ಧರ್ಮ ಒಪ್ಪುತ್ತದೆ.ಅಂದರೆ ಎಲ್ಲಾ ಹಿಂದೂಗಳೆ ಆಗಿದ್ದರೂ ಒಪ್ಪೋದಿಲ್ಲ. ಆಗೋದೂ ಇಲ್ಲ.
ನಿಮ್ಮ ನಿಮ್ಮ ಮನವ ಮನೆಯ ಸಂತೈಸಿಕೊಳ್ಳಲು ಸರ್ಕಾರ ಬಿಡೋದಿಲ್ಲವೆಂದರೆ ಸರ್ಕಾರದ ವಶದಲ್ಲಿ ಜೀವನವಿದೆಯೆ?
ಯಾರಿಗೆ ಗೊತ್ತು ಯಾರೊಳಗೆ ಯಾವ ಮಹಾತ್ಮರಿರುವರೋ? ಇದಕ್ಕೆ ಮುಖ್ಯವಾಗಿ ಮಕ್ಕಳ ಶಿಕ್ಷಣ ಸತ್ವ ಸತ್ಯ ತತ್ವದೊಳಗಿರಬೇಕಿತ್ತು.
ಯಾರೋ ಹೊರಗಿನವರು ತಂದು ಹಾಕಿದ ಕಸಕಡ್ಡಿಗಳನ್ನು ಸ್ವಚ್ಚ ಮಾಡಿಕೊಂಡರೆ ಒಳಗೆ ಸ್ವಚ್ಚವಾಗುವುದೆ? ಉತ್ತಮ ಗುಣಜ್ಞಾನವಿದ್ದರೆ ಎಲ್ಲಾ ಸಾಧ್ಯ. ಒಟ್ಟಿನಲ್ಲಿ ನಮ್ಮ ಕರ್ಮಕ್ಕೆ ತಕ್ಕಂತೆ ಫಲ. ಪರಮಾತ್ಮನಿಗೇನೂ ಸಮಸ್ಯೆಯಿಲ್ಲ ಜೀವಾತ್ಮನಿಗೇ ಸಮಸ್ಯೆ. ಸ್ವಚ್ಚ ಶಿಕ್ಷಣ,ಸ್ಪಷ್ಟ ಉತ್ತರ ನೀಡುವ ಅನುಭವಿ ಗುರು ಶಿಕ್ಷಕರು ಎಂತಹ ಹಿಂದುಳಿದವರನ್ನೂ ಬದಲಾಯಿಸಬಹುದು.ಆದರೆ ರಾಜಕೀಯ ಬಿಟ್ಟು ಧರ್ಮ ತತ್ವ ಹಿಡಿದವರು ಹಿಂದೂಗಳಾಗಿರಬಹುದು.
ಹೊರಗಿನ ಆಚಾರ ವಿಚಾರ ಪ್ರಚಾರದಿಂದ ಹಣಗಳಿಸಬಹುದು.ಜ್ಞಾನ ಒಳಗಿನಿಂದ ಬೆಳೆಸುವ ಶಿಕ್ಷಣದಿಂದ ಬದಲಾವಣೆ ಸಾಧ್ಯ. ಪೋಷಕರು ಬದಲಾದರೆ ಮಕ್ಕಳೂಬದಲಾಗುವರು.ಹಾಗೆ ಹಿಂದೂಗಳು ಬದಲಾದರೆ ಎಲ್ಲಾ ಬದಲಾವಣೆ ಸಾಧ್ಯ. ಇದಕ್ಕೆ ಕಾರಣವೇ ಮನಸ್ಸು.
ಮನಸ್ಸಿನ ನಿಗ್ರಹ ಸರ್ಕಾರ ಮಾಡಲಾಗದು.ಯೋಗದಿಂದ ಸಾಧ್ಯ.ಯೋಗಿಗಳ ದೇಶವನ್ನು ಭೋಗಿಗಳಿಗೆ ಬಿಟ್ಟರೆ ರೋಗ ಹೆಚ್ಚುವುದು.ಆರೋಗ್ಯ ಎಂದರೆ ಆರು ಯೋಗ್ಯ ರೀತಿಯಲ್ಲಿ ಬಳಸುವುದಾಗಿದೆ.ಕಾಮ,ಕ್ರೋಧ ಲೋಭ ಮೋಹಮಧ ಮತ್ಸರಗಳೆಂಬ ಅರಿಷಡ್ವರ್ಗ ಎಲ್ಲರ ಗುಣ.ಇದರಿಂದಾಗಿ ಆತ್ಮಜ್ಞಾನ ಹಿಂದುಳಿದಾಗ ಹಿಂದೂ ಧರ್ಮ ಅರ್ಥ ಆಗದು.
ಬೇರನ್ನು ಕೀಳಲಾಗದು.ರೆಂಬೆಕೊಂಬೆಗಳು ಬೇರನ್ನು ಅರ್ಥ ಮಾಡಿಕೊಳ್ಳಲು ಆಳಕ್ಕೆ ಇಳಿಯುವುದು ಅಗತ್ಯ. ಮೇಲೆ ನೋಡುತ್ತಿದ್ದರೆ ಒಮ್ಮೆ ಕೆಳಗೆ ಬೀಳೋದನ್ನು ತಪ್ಪಿಸಲಾಗದು.
ಬಿದ್ದ ಮೇಲೆ ಎದ್ದು ನಿಂತು ನಡೆಯುವಷ್ಟು ಶಕ್ತಿಯಿದ್ದರೆ ಉತ್ತಮ ಬದಲಾವಣೆ.
No comments:
Post a Comment