ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, July 17, 2024

ಪ್ರಥಮ ಏಕಾದಶಿ ಶಯನ ಏಕಾದಶಿ

ಸಾಮಾನ್ಯವಾಗಿ ಹಿಂದೂಗಳ ಉಪವಾಸವ್ರತ ಆಚರಣೆಗಳ ದಿನದಂದು ಅನ್ಯಧರ್ಮದವರ ಹಬ್ಬಗಳು ಜೊತೆಗಿರುತ್ತವೆ. ಆದರೆ ಆಚಾರ ವಿಚಾರ ಪ್ರಚಾರದಲ್ಲಿ ಆಹಾರ ವಿಹಾರಗಳಲ್ಲಿ ಬಹಳ. ವ್ಯತ್ಯಾಸ ವಿರುವ ಕಾರಣ ಅಂತರ ಬೆಳೆದಿದೆ ಸಾತ್ವಿಕತೆಯ ಜೊತೆಗೆ ತಾಮಸಿಕತೆ ಸೇರಿದರೆ  ಪ್ರಕೃತಿಯಲ್ಲಿ ವಿರುದ್ದ ಬದಲಾವಣೆ ಹೇಗೆ ಆಗುವುದೋ ಹಾಗೆಯೇ ನಮ್ಮ ಆಚಾರ ವಿಚಾರಗಳಲ್ಲಿ ಆಹಾರವಿಹಾರಗಳಲ್ಲಿ ಸತ್ವವಿದ್ದರೆ  ಪ್ರಕೃತಿವಿಕೋಪವಿರದು. ಇದು ಹಿಂದೂಗಳಲ್ಲಿಯೇ ಬೇರೆ ಬೇರೆಯಾದಾಗಂತೂ ಧರ್ಮ ಸಂಕಟ‌ ಹೇಳತೀರದು.
ಅನ್ಯರಿಗೆ ತಿಳಿಯದೆ ಮಾಡಿದರೆ ತಿಳಿದೂ ಮಾಡುವವರ ಕಥೆ ಗೋವಿಂದ.
ಇಂದು ಆ ಆಷಾಢ ಏಕಾದಶಿಯ ಪ್ರಯುಕ್ತ ಕೆಲವರಿಗೆ ಉಪವಾಸ,ಹಲವರಿಗೆ ಉಪಚಾರ .ಉಪಯೋಗಿಸುವ  ಪದಾರ್ಥದಿಂದ ಹಿಡಿದು ನಡೆ ನುಡಿಗಳಲ್ಲಿ ತುಂಬುವ ಸತ್ವ ದಿಂದ ಆತ್ಮಶುದ್ದಿಯಾಗುತ್ತದೆ.
ವರ್ಷವಿಡೀ ತುಂಬಿಕೊಳ್ಳುವ ವಿಷಯವನ್ನು ಒಂದು ದಿನದಲ್ಲಿ ಶುದ್ದಿಗೊಳಿಸಲಾಗದು.ಆದರೂ ಶುದ್ದವಾಗಿಟ್ಟುಕೊಂಡರೆ ನಮಗೇ ಒಳ್ಳೆಯದೆನ್ನುವ ಕಾರಣಕ್ಕಾಗಿ ಹಲವಾರು ಉಪವಾಸವ್ರತ ಪೂಜೆ ಯಾಗ ಯಜ್ಞ ಹವನ ಹೋಮಗಳಿಂದ ಭಗವಂತನೆಡೆಗೆ ಹೋಗಲು ನಮ್ಮ ಆಚರಣೆಗಳು  ಆತ್ಮಶುದ್ದಿಗೆ  ಸಹಕಾರಿಯಾಗಿದೆ.

ಮಹಾವಿಷ್ಣು ಕ್ಷೀರಸಾಗರದಲ್ಲಿರುವ ಶೇಷನ ಮೇಲೆ ಮಲಗಿನಿದ್ರಿಸುವ ಕಾರಣದಿಂದ ಇದನ್ನು ಶಯನ ಏಕಾದಶಿ ಎಂದೂ ಕರೆಯುತ್ತಾರೆ.
ಜಗದೊಡೆಯನೇ ನಿದ್ರೆಗೆ ಜಾರಿದರೆ ಸಾಮಾನ್ಯರ ಪಾಡೇನು? ಇದಕ್ಕಾಗಿ  ಈ ದಿನಗಳಲ್ಲಿ ಜನರಲ್ಲಿ ಸಾತ್ವಿಕ ಗುಣ ಹೆಚ್ಚಿಸಲು   ಉಪವಾಸ ವ್ರತ ಪೂಜೆ ಆರಾಧನೆಗಳಿವೆ. ಒಟ್ಟಾರೆ ಪರಮಾತ್ಮನಿಲ್ಲದೆ ಜೀವಾತ್ಮನಿಲ್ಲ.ಜೀವಾತ್ಮನ ಧರ್ಮ  ಕರ್ಮದಿಂದ ಪರಮಾತ್ಮನ ಸೇವೆಯಾಗುತ್ತದೆ.

ಇಂತಹ ಆಚರಣೆಗಳ ಮೂಲಕ ನಮ್ಮ ಧರ್ಮ ರಕ್ಷಣೆ ಆದರೂ, ನಮ್ಮ ಕೆಲಸ ಕಾರ್ಯಗಳು ಅನ್ಯರ ಕೈ ಕೆಳಗಿದ್ದರೆ ಅವರ ಧರ್ಮದ ಆಚರಣೆಯನ್ನೂ ಒಪ್ಪಲೇಬೇಕಷ್ಟೆ.
ಒಬ್ಬರ ಸತ್ಯ ಇನ್ನೊಬ್ಬರ  ಮಿಥ್ಯಕ್ಕೆ ವಿರುದ್ದವಿದ್ದರೆ ಕಷ್ಟ ನಷ್ಟ. ಇಬ್ಬರಿಗೂ  ಆಗೇ ಆಗುತ್ತದೆ.
ಇಡೀ ಜಗತ್ತಿನಲ್ಲಿ ಯಾರೂ ಸಂಪೂರ್ಣಸುಖದಿಂದಿಲ್ಲವೆಂದರೆ 
ಎಲ್ಲರಿಗೂ ಅವರವರ ಧರ್ಮ ಕರ್ಮ ವನ್ನು  ಪೂರ್ಣ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಆಗೋದು ಇಲ್ಲ.
ಬದುಕಿದು ಜಟಕಾಬಂಡಿ ವಿಧಿ ಓಡಿಸುವ ಬಂಡಿ. ಹಣೆಬರಹ ಅಳಿಸಲು ಹೋದರೆ ಆಗೋದೆ‌ಬೇರೆ.ಹಾಗಂತ ಸುಮ್ಮನಿರಲು ಸಾಮಾನ್ಯರಿಗೆ ಸಾಧ್ಯವೆ? .ಒಳ್ಳೆಯದಕ್ಕೆ ಸಹಕರಿಸಿದರಾಯಿತು.ಕೆಟ್ಟದ್ದುತಾನಾಗೇ ಹಿಂದೆ ಸರಿಯುತ್ತದೆ.
ಒಳ್ಳೆಯ ಸಹಕಾರ ನೀಡಲಾಗದಿದ್ದರೂ ಸರಿ ಕೆಟ್ಟದ್ದಕ್ಕೆ ಸಹಕಾರ ನೀಡಬಾರದು. ಕಣ್ಣಿಗೆ ಕಾಣೋದೆಲ್ಲ ಒಳ್ಳೆಯದಿರದು.ಕಾಣದ್ದು  ಹಲವು ಇದ್ದರೂ ಒಳ್ಳೆಯದೆ ಆಗುವುದು.ಆಗೋದೆಲ್ಲ ಒಳ್ಳೆಯದಕ್ಕೆ ಎಂದಿದ್ದಾರೆ.
ಪ್ರಕೃತಿವಿಕೋಪ ಒಳ್ಳೆಯದೆ? ತಡೆಯಬಹುದೆ? ಪ್ರಕೃತಿಯ ಪರ ನಿಂತು ಜೀವನ ನಡೆಸಿದರೆ ಸಾಧ್ಯವಿದೆ. ಅದಕ್ಕಾಗಿ ಪರಮಾತ್ಮನ ಸೇವೆ ಸತ್ವಯುತ ವಾಗಿದ್ದರೆ ಉತ್ತಮ.
"ನೀನ್ಯಾಕೋ ನಿನ್ನ‌ಹಂಗ್ಯಾಕೋ ನಿನ್ನನಾಮ ಒಂದಿದ್ದರೆ ಸಾಕು"
ಮಾನವ ಪರಮಾತ್ಮನ ಸ್ಮರಣೆ ಮಾತ್ರದಿಂದಲೇ ಪುಣ್ಯಗಳಿಸುವನೆಂದರೆ  ಆ ಸ್ಮರಣೆಗಾಗಿ  ಎಷ್ಟೋ ಶ್ರಮ ಪಡಬೇಕು. ಮನಸ್ಸು  ಹೊರಗಿದ್ದಾಗ ಒಳಗಿನಸ್ಮರಣೆ ಆಗದು.ಇದಕ್ಕಾಗಿ ದೇಹ ಶುದ್ದಿ ಗಾಗಿಯೋಗ ಕೂಡಿಬರಬೇಕು.
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗದಲ್ಲಿ ಯಾವುದಾದರೂ ಸರಿ ಸತ್ವ ಸತ್ಯ ತತ್ವವಿದ್ದರೆ ಪರಮಾತ್ಮನ ಸ್ಮರಣೆಯಲ್ಲಿರುವುದೇ ಮಹಾಯೋಗ. ಉಸಿರಿನಲ್ಲಿದ್ದರಂತೂ ಸ್ವಯಂ ಭಗವಂತನೇ ನಡೆಸುವನು.
ರಾಮಜಪದಿಂದಲೇ ರಾಮನನ್ನು ಸೇರಿರುವ  ಯೋಗಿಗಳ ದೇಶದಲ್ಲಿ  ರಾಮಭಕ್ತರು ಬೇರೆ ಕೃಷ್ಣ ಭಕ್ತರು ಬೇರೆಯಾಗಬಾರದು. ಹೋಗಲಿ ಶ್ರೀ ರಾಮನ ಗುಡಿ  ಗೋಪುರ ದೇವಸ್ಥಾನ  ಮಠ ಮಂದಿರಗಳನ್ನು  ಕಟ್ಟಿದವರು ಶ್ರಮಿಕರು.ಕಟ್ಟಿಸಿದವರು ಧನಿಕರಾದರು.ಶ್ರಮಿಕರಿಗೆ ಸಿಗದ ರಾಮ ಧನಿಕರಿಗೆ  ಸಿಗುವನೆ?  ಹೀಗೇ ಎಲ್ಲಾ ವಿಷಯದಲ್ಲೂ ನಾವು ಮೇಲುಕೀಳೆಂಬುದನ್ನು ಕಾಣುತ್ತೇವೆ ಆದರೆ ಪರಮಾತ್ಮನದೃಷ್ಟಿಯಲ್ಲಿ  ವ್ಯವಹಾರಕ್ಕೆ ಸ್ಥಾನವಿಲ್ಲ.ಜೀವಾತ್ಮನಲ್ಲಿದೆ.ಎಲ್ಲಿಯವರೆಗೆ ವ್ಯವಹಾರಕ್ಕೆ ಜೊತೆಗಿರುವರೋ ಅಲ್ಲಿಯವರೆಗೆ ಪರಮಾತ್ಮನ ದರ್ಶನ ವಾಗಲ್ಲ.  ಹಿಂದೆ ಯಾರಿಗೂ ಆಗಿಲ್ಲ.

No comments:

Post a Comment