ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, July 28, 2024

ಅಸತ್ಯದೊಳಗಿರುವ ಸತ್ಯ ಸಂಶೋಧನೆ ಒಳಗೇ ಆಗಬೇಕು

ಮೊದಲೆಲ್ಲಾ ಸತ್ಯ ಯಾವುದೆನ್ನುವ  ಗೊಂದಲ ದಲ್ಲಿ ಅಸತ್ಯವನ್ನು ಒಪ್ಪಿಕೊಂಡಿದ್ದರೂ  ಸತ್ಯ ತಿಳಿದ ನಂತರ ಅಸತ್ಯದಿಂದ ದೂರವಿರೋದು ಕಷ್ಟವಾಗುತ್ತದೆ.ಆದರೂ  ಅಸತ್ಯದೊಳಗೂ ಸೂಕ್ಮವಾಗಿರುವ ಸತ್ಯ ತಿಳಿದಾಗಲೇ ಸತ್ಯ ಒಂದೇ ಇರುವ ಸತ್ಯದ ಅರಿವಾಗೋದು.
ಇದನ್ನು ದೇವನೊಬ್ಬನೆ ನಾಮ ಹಲವು ಎನ್ನುವರು. ಒಬ್ಬ‌ದೇವನಿಗಾಗಿ ಹಲವು ದೇವರ ಸೃಷ್ಟಿ ಯಾಗಿದ್ದರೂ ಒಗ್ಗಟ್ಟು ಇಲ್ಲವಾದರೆ ಆ ಒಬ್ಬನನ್ನು ಅರ್ಥ ಮಾಡಿಕೊಳ್ಳಲು ಕಷ್ಟ. 
ಅದ್ವೈತ ದೊಳಗೇ ದ್ವೈತವಿದ್ದರೂ ಎರಡೂ‌ಬೇರೆ ಎನಿಸುತ್ತದೆ ಆದರೆ ಎರಡೂ ಒಂದೇ ಎಂದಾಗ ಸಮಾಧಾನ ಶಾಂತಿ. ಹಾಗೆ ಅಸುರರೊಳಗೆ ಸುರರು ಸೇರಿದ್ದರೂ ಸುರರು‌ಮಾಡೋದು ಸರಿ,ಅಸುರರು ಮಾಡೋದು ತಪ್ಪು ಎನಿಸುತ್ತದೆ. ಆದರೆ ಸುರರ ಉದ್ದೇಶಕ್ಕೂ ಅಸುರರ ದುರುದ್ದೇಶಕ್ಕೂ ವ್ಯತ್ಯಾಸ‌ ಕಂಡಾಗ ಸುರರಿಗೆ ಸಹಕಾರ‌ ಕೊಡುವ ಮನಸ್ಸಾಗುತ್ತದೆ.
ಈ. ಮನಸ್ಸು‌ಹೊರಮುಖವಾಗಿದ್ದರೆ  ಒಳಮುಖವಾಡ ತಿಳಿಯದು.
ಇಬ್ಬರೂ ಭೂಮಿ ಆಳಬೇಕು.ಆದರೆ ಆಳೋರಲ್ಲಿ ಸತ್ಯಧರ್ಮ ಜ್ಞಾನ ಎಷ್ಟಿದೆ.ಅವರ ಉದ್ದೇಶ ಏನಿದೆ ಎನ್ನುವ ಬಗ್ಗೆ ನಮ್ಮಲ್ಲಿ  ಜ್ಞಾನವಿದ್ದರೆ ಸರಿ. ಅಜ್ಞಾನ ವೇ ಇದ್ದು ತನ್ನ ಸ್ವಾರ್ಥ ಚಿಂತನೆಗಾಗಿಯೇ ಅಸುರರೊಂದಿಗೆ ಸೇರಿಕೊಂಡಿದ್ದರೆ  ಅಧರ್ಮ ಕ್ಕೆ ಜಯ.
ಒಂದೇ ದೇಶದಲ್ಲಿ  ಎರಡು ಮೂರು‌ನಾಲ್ಕು ಐದು.....ಹೀಗೇ ಧರ್ಮ ಪಂಗಡ ವಿದ್ದರೂ ಎಲ್ಲಾ ಧರ್ಮ ಗಳ ತತ್ವ ಒಂದೇ ಎನ್ನಲಾಗದು. ಹೀಗಾದಾಗ ನಮ್ಮ ಮೂಲವನರಿತು ನಮ್ಮ ಆತ್ಮರಕ್ಷಣೆಗಾಗಿ  ಸತ್ಯ ದೆಡೆಗೆ ನಡೆದವರನ್ನು ಮಹಾತ್ಮರೆಂದರು. ಆ ಮಹಾತ್ಮರ ಹಿಂದೆ ‌ನಡೆದವರೂ ಮಹಾತ್ಮರೆ ಆಗಿದ್ದರು ಹಾಗೆ ಎಷ್ಟೋ ಮಹಾತ್ಮರುಗಳ ಹಿಂದೆ ಹಿಂದೂಗಳು‌ನಡೆದರೂ ಧರ್ಮ ಯಾಕೆ ಇಂದು ಕುಸಿದಿದೆ ಎಂದರೆ  ಹಿಂದೆ ನಡೆದವರ ಬಡತನವನ್ನು ಎತ್ತಿ ಹಿಡಿದವರ ರಾಜಕೀಯ ಕಾರಣ. ಇಲ್ಲಿ ಬಡತನ ಹಣದ ಮೂಲಕ ಜನರಿಗೆ ತೋರಿಸಲಾಗಿದೆ. ಜ್ಞಾನದ ಶಿಕ್ಷಣ ತಡೆ ಹಿಡಿದು ಜನರನ್ನು ತಮ್ಮ ವಶಕ್ಕೆ ಬಳಸಿಕೊಂಡು ವಿದೇಶದೆಡೆಗೆ ನಡೆದಿದೆ. ಹಾಗಂತ ವಿದೇಶದೊಳಗೆ ಅಡಗಿರುವ  ದೇಶ ‌ಕಾಣಲಿಲ್ಲವೆ?  ಕಂಡರೂ ಅದನ್ನು ಪ್ರಗತಿ ಎಂದು ಬೆಳೆಸಿದ ಮೇಲೆ  ಅದನ್ನು ‌ವಿರೋಧಿಸುವುದರಲ್ಲಿ ಅರ್ಥ ವಿರದು.
ಋಣ ಯಾವ ದೇಶದ್ದಾದರೂ ಸರಿ ಅದನ್ನು ತೀರಿಸಲು ಅಲ್ಲಿಯ ಸೇವೆ ಮಾಡಲೇಬೇಕು. ನಮ್ಮ ಜ್ಞಾನದ ಪ್ರಕಾರ‌ಕರ್ಮ ಅಥವಾ ಕೆಲಸ ಮಾಡುವಾಗ ಅದು ಒಳ್ಳೆಯದೋ ಕೆಟ್ಟದ್ದೋ  ಹಣ ಬಂದರೆ ಸರಿ ಎನ್ನುವ ಮಟ್ಟಿಗೆ  ಮಾನವ ಹಣಗಳಿಸುತ್ತಾ ಅದನ್ನು ಸದ್ಬಳಕೆ ಮಾಡಿಕೊಂಡರೆ ಅಧ್ಯಾತ್ಮ ಪ್ರಗತಿ. ಇಲ್ಲವಾದರೆ ಭೌತಿಕ ಪ್ರಗತಿ. ಕಲ್ಲು ಮಣ್ಣು ಚರಾಚರದಲ್ಲಿಯೂ ಪರಮಾತ್ಮನ ಸೃಷ್ಟಿ ‌ಕಾಣೋದು ಬಹಳ ಕಷ್ಟ. ಭೂಮಿಯಲ್ಲಿ ಹೇಗೆ ಜೀವನ‌ನಡೆಸಬೇಕೆಂಬ‌ ಅರಿವಿದ್ದವರಿಗೆ  ಎಲ್ಲದರಲ್ಲೂ  ಸತ್ಯ ಕಾಣುತ್ತದೆ .ಮಿಥ್ಯದಲ್ಲೂ ಸತ್ಯ ಕಾಣುತ್ತದೆ ಆದರೆ ಇದು ತಾತ್ಕಾಲಿಕ ವಾಗಿರುತ್ತದೆ.ಹೀಗಾಗಿ ಅವಿದ್ಯೆಯ ಒಳಗೇವಿದ್ಯೆ ಇದ್ದರೂ ಅದು ತಾತ್ಕಾಲಿಕ ವಷ್ಟೆ.
ಇಂದಿನ ಹೆಚ್ಚಿನ ಮಕ್ಕಳಿಗೆ ಅವಿದ್ಯೆಯ ಶಿಕ್ಷಣ‌
ಕೊಡಲಾಗುತ್ತಿದೆ.  ಅಂತಹ ಪೋಷಕರು ಮಕ್ಕಳ ಶಿಕ್ಷಣ ಸರಿಪಡಿಸದೆ ಸರ್ಕಾರದ ವಿರುದ್ದ ದೇಶದ ವಿರುದ್ದ ನಿಂತರೂ ವ್ಯರ್ಥ ಪ್ರಯತ್ನ.ಇದರಿಂದಾಗಿ ಅವರ ಸ್ವಂತಬುದ್ದಿ ಜ್ಞಾನದ ಸದ್ಬಳಕೆ ಆಗುವುದೆ ಇಲ್ಲವೆ ಎನ್ನುವ ಚಿಂತನೆ ಪೋಷಕರೆ ಮಾಡೋದಕ್ಕೂ ಪೋಷಕರಿಗೆ ಸದ್ವಿದ್ಯೆ ಇರಬೇಕು. ಕಲಿಗಾಲದ  ಶಿಕ್ಷಣ ಧರ್ಮಯುಕ್ತವಾಗಿದ್ದರೆ ಧರ್ಮ ರಕ್ಷಣೆ ಆಗುತ್ತದೆ.ಅದರಲ್ಲಿ ರಾಜಕೀಯ‌ ವಿಚಾರವೇ ತುಂಬಿ  ತಂತ್ರವೇ ಇದ್ದು, ರಾಜಯೋಗದ ವಿಚಾರದಿಂದ ದೂರವಿದ್ದರೆ  ಅಜ್ಞಾನದ ಜೀವನ.
ಯೋಗವೆಂದರೆ ಸೇರೋದು. ಪರಮಾತ್ಮನ ಜೀವಾತ್ಮ ಸೇರೋದು‌ಮಹಾಯೋಗ.ಇದು ಸ್ವಂತ ಜ್ಞಾನದಿಂದಲೋ  ರಾಜಯೋಗದಿಂದಲೋ,ಭಕ್ತಿಯಿಂದಲೋ ಕರ್ಮ ದಿಂದಲೋ  ಆದಾಗಲೇ  ಸತ್ಯದ ಜೊತೆಗೆ ಧರ್ಮ ವಿರುತ್ತದೆ.
ಇಲ್ಲವಾದರೆ  ಸತ್ಯವಿಲ್ಲದ ಧರ್ಮ ಕುಂಟುತ್ತದೆ.ಧರ್ಮ ಇಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತದೆ.‌
ಪ್ರೀತಿ‌ಪ್ರೇಮ ವಿಶ್ವಾಸ  ನಮ್ಮ ಶ್ವಾಸದ ಮೂಲಕ ಹೃದಯದಿಂದ ಜನ್ಮ ಪಡೆದಾಗಲೇ ಯೋಗವಾಗೋದು. ಕೇವಲ  ಹೊರಗಿನ ನಾಟಕದಿಂದ ಹುಟ್ಟಿದ್ದರೆ  ಯೋಗವಾಗದು. ಅದು ತಾತ್ಕಾಲಿಕವಷ್ಟೆ.

No comments:

Post a Comment