" ಹಾವಿನ ದ್ವೇಷ ಹನ್ನೆರಡು ವರುಷ ನನ್ನ ರೋಷ ನೂರು ವರುಷ " ಚಲನ ಚಿ ತ್ರ. ಗೀತೆ ಕೇಳುತ್ತೇವೆ .ಆದರೆ, ಕೊನೆಯಲ್ಲಿ ಚಿತ್ರ ಮುಗಿಯುವುದು ಕ್ಷಮಿಸಿ ಬಾಳುವುದರಿಂದಲೋ ಅಥವಾ ಹೊಡೆದಾಡಿ ಸಾಯುವುದರಿಂದಲೋ ಆಗಿರುತ್ತದೆ.ಅಂದರೆ ಸಿಟ್ಟು ದ್ವೇಷ ರೋಷಗಳು ನಕಾರಾತ್ಮಕ ಶಕ್ತಿಯ ಪ್ರಚೋಧನೆಗಳಾಗಿವೆ. ದ್ವೇಷ ಹೆಚ್ಚಿಸಲು ಕ್ಷಣ ಸಾಕು ಸುಲಭ ,ಪ್ರೀತಿ ಅರಳಿಸುವುದೇ ಕಷ್ಟ.
ದ್ವೇಷ ಒಂದು ನಕಾರಾತ್ಮಕ ಶಕ್ತಿ ಇದನ್ನು ಬಿಟ್ಟು ಜೀವನ ನಡೆಸುವುದೇ ಅಧ್ಯಾತ್ಮಿಕ ಶಕ್ತಿ ಆಗಲೇ ಆತ್ಮಕ್ಕೆ ತೃಪ್ತಿ ಮುಕ್ತಿಹಾಗಾದರೆ ದುಷ್ಟರನ್ನು ದ್ವೇಷ ಮಾಡಬಾರದೆ ? ಮಾಡಿದರೆ ಇನ್ನಷ್ಟು ದ್ವೇಷ ಒಳಗೇ ಬೆಳೆಯುವುದೆಂದಾಗ ದ್ವೇಷಕ್ಕೆ ಮೂಲ ಕಾರಣ ತಿಳಿದು ಅದನ್ನು ಸರಿಪಡಿಸುವತ್ತ ಪ್ರಯತ್ನ ಪಟ್ಟರೆ ಫಲ ಉತ್ತಮವಿರುವುದು.
ದೇಶ ದೇಶದ ನಡುವೆ ಸ್ನೇಹದ ಪಂದ್ಯಾವಳಿ ನಡೆಯುತ್ತದೆ.ಆದರೆ, ಅದನ್ನು ವೀಕ್ಷಣೆ ಮಾಡುವ ಜನರಲ್ಲಿ ದ್ವೇಷ ಬೆಳೆಯಲು ಕಾರಣ ಪಂದ್ಯವನ್ನು ನೋಡುವ ದೃಷ್ಟಿ ಸರಿಯಿಲ್ಲವೆಂದರ್ಥ. ಹಾಗೆಯೇ ಒಡಹುಟ್ಟಿದವರು ಬೆಳೆದು ದೊಡ್ಡವರಾದಂತೆಲ್ಲಾ ದೈಹಿಕವಾಗಿ ಬೆಳೆದರೂ ಮಾನಸಿಕತೆಯಲ್ಲಿ ಬೆಳೆದಿರೋದಿಲ್ಲ. ಸಂಕುಚಿತ ಮನಸ್ಸಿನಲ್ಲಿ ನೋಡುವ ದೃಷ್ಟಿ ಕೋನವೇಬೇರೆಯಾದಾಗ ನಮ್ಮವರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾದರೆ ಜ್ಞಾನ.ಕುಸಿದರೆ ಅಜ್ಞಾನ.ಇದಕ್ಕೆ ಕಾರಣ ನಾವು ಕೊಡುವ ಶಿಕ್ಷಣ..ದ್ವೇ
. ಶಿಕ್ಷಣದಲ್ಲಿಯೇ ಸಂಸ್ಕಾರದ ವಿಷಯವಿಲ್ಲದೆ ತಲೆಗೆ ಒತ್ತಾಯದಿಂದ ತುಂಬಿದ್ದರೆ ಬೆಳೆದಂತೆಲ್ಲಾ ಅನಾವಶ್ಯಕ ವಿಷಯಗಳು ಮನಸ್ಸಿನಲ್ಲಿ ಹರಿದಾಡಿಕೊಂಡು ಮನಸ್ಸನ್ನು ಮನೆಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ನಮಗೆ ನಾವೇ ಶತ್ರುಗಳು.
ಕಲಿಯುಗ ಕಲಿಕೆಯ ಪ್ರಭಾವದಿಂದಾಗಿ ಹೊರಗಿನ ರಾಜಕೀಯ ಮಿತಿಮೀರಿದೆ ಒಳಗಿದ್ದ ರಾಜಯೋಗದ ವಿಷಯ ಕುಸಿಯುತ್ತಿದೆ. ಕೆಲವರು ಎಚ್ಚರವಾಗಿ ಹಿಂದೆ ತಿರುಗಿ ತಮ್ಮ ಮೂಲ ಧರ್ಮ ಕರ್ಮ ದೆಡೆಗೆ ಬಂದರೆ ಹಲವರು ಹಿಂದಿರುಗಲಾಗದೆ ತಮ್ಮ ಭೂಮಿಯನ್ನು ಮಾರಿ ಪರಕೀಯರ ಕೈವಶವಾಗಿದ್ದರೂ ದ್ವೇಷ ಬಿಡಲಾಗುತ್ತಿಲ್ಲ.
ಮನಸ್ಸಿನ ಈ ಸಮಸ್ಯೆಯಮೂಲ ನಮ್ಮವರೆ ಹಿಂದಿನವರೆ ಆದಾಗ ಹೋದವರು ಇನ್ನೂ ಇಲ್ಲೇ ಇರುವರೆಂದರ್ಥ. ಆತ್ಮಕ್ಕೆ ಸಾವಿಲ್ಲ. ಪರಮಾತ್ಮನಿಗೆ ಯಾರೂ ವೈರಿಗಳಿಲ್ಲ.
ದೈವತ್ವಕ್ಕೆ ದ್ವೇಷವಿರಬಾರದು. ದೇವಸ್ಥಾನ ಎಲ್ಲರನ್ನೂ ಒಂದಾಗಿಸುವ ತಾಣ ಸ್ಥಳ .ಶುದ್ದಿ ಮಾಡಿಯೇ ದೇವರನ್ನು ಪ್ರತಿಷ್ಟಾಪಿಸುತ್ತಾರೆಂದರೆ ಒಂದು ಮನೆ ಕಟ್ಟಲು ಆ ಸ್ಥಳ ಶುದ್ದಿ ಮಾಡುವರು, ಮಂದಿರ ಕಟ್ಟಲೂ ಆ ಸ್ಥಳದ ಹಿಂದಿನ ಸತ್ವದ ಬಗ್ಗೆ ತಿಳಿಯುವರು ಹಾಗೆ ಮನಸ್ಸು ಶುದ್ದವಾಗೋದಕ್ಕೆ ನಮ್ಮ ಹಿಂದಿನವರ ಧರ್ಮ ಕರ್ಮದ ಬಗ್ಗೆ ಅರಿವಿರಬೇಕು.ಅದೇ ಸರಿಯಿಲ್ಲದಿದ್ದರೆ ಹೊರಗಿನ ಶುದ್ದತೆಗೆ ಅರ್ಥ ವಿರದು.ಅಂತರಂಗ ಶುದ್ದಿಯೇ ಹಿಂದೂ ಸನಾತನ ಧರ್ಮದ ರಕ್ಷಣೆಯ ಮೂಲವಾಗಿದೆ.
ಹಿಂದೂ ಸನಾತನಧರ್ಮ ಭೂಮಿಯ ಆಳದವರೆಗೂ ಇಳಿದಿದೆ.ಆದರೆ ಭೂಮಿಯ ಮೇಲೆ ಕಡಿಮೆಯಿದೆ ಕಾರಣ ಭೂಲೋಕದ ಜನಭೂಮಿಯ ಸತ್ಯ ಸತ್ವ ತತ್ವವರಿಯದೆ ಆಕಾಶದತ್ತ ಮುಖ ಮಾಡಿಕೊಂಡು ನೆಡೆದು ಎಡವಿ ಬಿದ್ದರೂ ಮೀಸೆಮಣ್ಣಾಗಿಲ್ಲವೆಂದುವಾದ ವಿವಾದದಲ್ಲಿ ಮುಂದೆ ನಡೆದರು. ಭೂಮಿ ಬಿಟ್ಟು ಮೇಲಿನಲೋಕದಲ್ಲಿ ಈವರೆಗೆ ಯಾರಾದರೂ ಮನುಕುಲದ ಸಂಸಾರ ನಡೆಸಿರುವರೆ? ಇಲ್ಲ ಎಂದರೆ ಸಂಸಾರ ನಡೆಸಲು ಭೂಮಿಯನ್ನುಉತ್ತಮವಾಗಿ ಬಳಸಿ ಬೆಳೆಸುವುದೇ ಧರ್ಮ.
ಇಂತಹ ಪವಿತ್ರವಾಗಿರುವ ಭೂಮಿಯಲ್ಲಿ ಅಸುರರು ಬೆಳೆದರೆ ಅಧರ್ಮ ಕ್ಕೆ ಜಯ.ಹಿಂದಿನ ಕಾಲದಲ್ಲಿ ಕುಟುಂಬದ ಮುಖ್ಯಸ್ಥ ಜ್ಞಾನದಿಂದ ಎಲ್ಲರನ್ನೂ ಒಂದಾಗಿಸಿ ತಮ್ಮ ಮೂಲದ ಧರ್ಮ ಕರ್ಮ ಕ್ಕೆ ತಲೆಬಾಗಿ ಅನ್ಯಧರ್ಮವನರಿಯದೆ ಇದ್ದಲ್ಲಿಯೇ ಸುಖ ಶಾಂತಿಯಿಂದಿದ್ದರು. ಯಾವಾಗ ಹೊರಗಿನಜ್ಞಾನ ಹೆಚ್ಚಾಯಿತೋ ಭೂಮಿಯ ದುರ್ಭಳಕೆ ಆಗುತ್ತಾ ಮಹಿಳೆ ಮಕ್ಕಳವರೆಗೂ ಹೊರಜಗತ್ತಿನ ವಿಷಯಾಸಕ್ತಿ ಅನ್ಯಧರ್ಮದ ಕಡೆಗೆ ಹರಿಯಿತು. ಮೂಲದ ಶಕ್ತಿಯಿಂದ ಅಂದರೆ ಆತ್ಮಶಕ್ತಿ ಆತ್ಮಸಾಕ್ಷಿಯಿಂದ ದೂರವಾದಂತೆ ನಾವು ಭೂಮಿಯ ಮೇಲಿರುವ ಸಾಮಾನ್ಯ ಜ್ಞಾನ ಬಿಟ್ಟು ಭೂಮಿಯನ್ನು ಅಗೆದು ಬಗೆದು ಆಳುವಷ್ಟು ವಿಜ್ಞಾನದ ಸಂಶೋಧನೆ ಬೆಳೆಯಿತು.ಈಗ ನಾವು ವಿಜ್ಞಾನದ ಸಂಶೋಧನೆಯ ಅಡಿಯಾಳುಗಳು. ನಮ್ಮ ಜೀವನ ಇದರಲ್ಲಿ ನಡೆದಿದೆ. ಆದರೆ ಭೂಮಿಯಲ್ಲಿ ಅಸುರಿ ಶಕ್ತಿ ಬೆಳೆದಿದೆ ಎಂದರೆ ನಾವು ಅಸುರರೆ? ಎಷ್ಟೋ ದೇವತಾರಾಧನೆ ಮಾಡಿದರೂ ಯಾಕೆ ಅಸುರರು ಬೆಳೆದರು?
ಕಾರಣವಿಷ್ಟೆ ದೈವಶಕ್ತಿಯ ಶಿಕ್ಷಣದ ಕೊರತೆ ನಮ್ಮ ಒಳಗಿನ ಅಸುರಿಗುಣಗಳಾದ ಅತಿಯಾದ ಸ್ವಾರ್ಥ ಅಹಂಕಾರದ ರೂಪ ಪಡೆದು ನಮಗೇ ತಿಳಿಯದೆ ಅಂತಹ ಗುಣದವರನ್ನೇ ಸಹಕಾರ ಕೊಟ್ಟು ಬೆಳೆಸಿರುವಾಗ ಅದರ ಫಲ ಹಿಂದಿರುಗಿ ಬರುತ್ತಿದೆ. ಇದರಿಂದ ಬಿಡುಗಡೆ ಪಡೆಯಲು ಹಿಂದಿರುಗಿ ನಮ್ಮ ಮೂಲದ ಭೂಮಿಯನ್ನು ಉತ್ತಮವಾಗಿ ಬಳಸಬೇಕು.ಕೆಲವರಿಗಷ್ಟೆ ಈ ಅದೃಷ್ಟ ವಿರಬಹುದು.ಕಾರಣ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಭೂಮಿ ಕೊಟ್ಟು ನಗರಕ್ಕೆ ಬರುವಂತಾಗಿದೆ. ಸರಿಯಾದ ಮಳೆ ಬೆಳೆ ಆಳು ಕಾಳುಗಳಿಲ್ಲ.
ಆದರೆ ಕೊಡೋವಾಗ ಹಿಂದೂಗಳಿಗೇ ಕಡಿಮೆ ಬೆಲೆಗೆ ಕೊಟ್ಟರೆ ಉತ್ತಮ.ಅನ್ಯಧರ್ಮದವರಿಗೆ ಹೆಚ್ಚಿನಬೆಲೆ ಸಿಗುವುದೆಂದು ಮಾರಿದರೆ ಮುಂದೆ ಅದೇ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ.
ಕಾರಣ ಒಂದು ಪುರಾತನ. ದೇಗುಲವಾಗಲಿ,ಮನೆಯಾಗಲಿ ಕಟ್ಟುವಾಗ ಸಾಕಷ್ಟು ಭೂಮಿ ಪೂಜೆ ಸಂಸ್ಕಾರಗಳು ನಡೆಸಿಶುದ್ದಮಾಡಿರುವರು.ನಂತರ ಆ ಸ್ಥಳ ದೇವಸ್ಥಾನವಾಗಿರುತ್ತದೆ. ಯಾವಾಗ ಅದು ಬೇರೆಯವರ ಕೈವಶವಾಗುವುದೋ ಪವಿತ್ರತೆ ಹೋಗುತ್ತದೆ. ಅದರ ಫಲ ಕೊಟ್ಟವರು ಅನುಭವಿಸಲೇಬೇಕೆನ್ನುವರು ಅಧ್ಯಾತ್ಮ ಚಿಂತಕರು.
ಇದೇ ಕಾರಣಕ್ಕಾಗಿ ಸತ್ಪಾತ್ರರಿಗೆ ದಾನಧರ್ಮ ಮಾಡಬೇಕೇನ್ನುವರು.ನಮ್ಮ ಹಿಂದೂ ದೇವಾಲಯಗಳ ಕಥೆ ಈಗ. ಇದೇ ಆಗಿದೆ.
ಎಲ್ಲಾ ಪವಿತ್ರ ಮಂದಿರಗಳ ಸ್ಥಳವನ್ನು ಮಲಿನಗೊಳಿಸಿ ಮತ್ತೆ ಹಿಂದುಗಳಿಗೆ ಬಿಟ್ಟರೂ ಅದನ್ನು ಮತ್ತೆಶುದ್ದಗೊಳಿಸಲು ಸಾಕಷ್ಟು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಧಾರ್ಮಿಕ ಸೇವೆ ಆಗಬೇಕು. ಅದಾಗದೆ ಇನ್ನಷ್ಟು ಸಾಲ ಮಾಡಿಟ್ಟು ಆಡಂಬರದ ಕಾರ್ಯಕ್ರಮ ನಡೆಸಿ ಜನರ ಹಣವನ್ನು ದುರ್ಭಳಕೆ ಮಾಡಿ ರಾಜಕೀಯ ನಡೆಸಿದರೆ ಇರುವ ಅಲ್ಪ ಸ್ವಲ್ಪ ಪುಣ್ಯವೂ ಹೋಗಿ ಪಾಪದ ಕೂಪಕ್ಕೆ ಜೀವ ಹೋಗುತ್ತದೆ. ಅಧ್ಯಾತ್ಮ ಸತ್ಯ ಅರ್ಥ ವಾಗೋದು ಕಷ್ಟ.ಕಾರಣ ಎಲ್ಲಿಯವರೆಗೆ ದೇವರನ್ನು ಹೊರಗೆ ಬೆಳೆಸಿ ಒಳಗಿನ ದೈವತ್ವ ಹಿಂದುಳಿಯುವುದೋ ಅಲ್ಲಿಯವರೆಗೆ ಹಿಂದುಳಿದೇ ಇರುವೆವು.
ಹಿಂದೂಗಳು ವಿಶ್ವದ ತುಂಬಾ ಇರುವರು. ಹಿಂದೂಸ್ತಾನಿ ಎಲ್ಲರೂ ಆಗಿಲ್ಲ. ನಮ್ಮ ಹಿಂದಿನ ಗುರುಹಿರಿಯರಲ್ಲಿದ್ದ ದೈವೀಕ ಗುಣಜ್ಞಾನ ನಮ್ಮಲ್ಲಿ ಇರಲು ಅವರ ತತ್ವಜ್ಞಾನ ಅರ್ಥ ಆಗಬೇಕು.ತತ್ವ ನಮ್ಮ ಮೂಲದೆಡೆಗೆ ಅಂದರೆ ಪರಮಾತ್ಮನ ಕಡೆಗೆ ಎಳೆಯುವುದರಿಂದ ನಮ್ಮ ನಮ್ಮ ಮೂಲದ ಭೂಮಿ ಧರ್ಮ ಕರ್ಮ ದ ಜೊತೆಗೆ ನಮ್ಮ ಜೀವನ ಇರುತ್ತದೆ.ಆಗ ಹೊರಗಿನವರ ಮಧ್ಯಸ್ಥಿಕೆ ಇರದೆ ಸ್ವತಂತ್ರ ಜ್ಞಾನದಿಂದ ಸತ್ಯದ ಅರಿವಿನಲ್ಲಿ ಸರಳ ಜೀವನ ನಡೆಸಿ ಸಂತೃಪ್ತಿ ಯಿಂದ ದೈವನೆಲೆ ಕಂಡಿದ್ದರು.
ಇದೇ ಭೂಮಿಯಲ್ಲಿದ್ದ ಎಲ್ಲಾ ದೇವತೆಗಳನ್ನು ನೆನಪಿಸಿಕೊಂಡು ಅವರ ಸತ್ಯ ಧರ್ಮದ ಹಾದಿಯಲ್ಲಿ ನಡೆಯುವುದು ಇಂದು ಕಷ್ಟ ಆದರೆ ನಡೆಯದಿದ್ದರೆ ಅಸುರರ ವಶದಲ್ಲಿ ಜೀವಸಿಲುಕುತ್ತದೆ.ನಮ್ಮ ಭೂಮಿ ಆಸ್ತಿ ಸಂಸಾರವೂ ಅವರ ವಶವಾದಾಗ ಯುದ್ದವಾಗುತ್ತದೆ.
ಒಟ್ಟಾಗಿ ಹೋರಾಡುವುದಕ್ಕೂ ಒಬ್ಬರೆ ಹೋರಾಡುವುದಕ್ಕೂ ವ್ಯತ್ಯಾಸವಿದೆ. ತನ್ನ ತಾನರಿತು ಇತರರನ್ನು ಅರಿಯುವುದಕ್ಕೂ,ತನ್ನ ತಾನರಿಯದೆ ಪರರನ್ನು ಅರಿಯುವುದಕ್ಕೂ ಅಂತರವಿದೆ. ಎಲ್ಲಾ ಬೇರೆ ಎಂದರೂ ಸರಿ.ಎಲ್ಲಾ ಒಂದೇ ಎಂದರೂ ಸರಿ. ಎಂದರೆ ನಮ್ಮ ಮನಸ್ಸಿಗೆ ಬರೋದೆ ಒಂದು ಆಗೋದೇ ಇನ್ನೊಂದು ಎಂದರೆ ನಮ್ಮನ್ನು ನಡೆಸಿರೋದು ಬೇರೆ ಶಕ್ತಿ.ನಾವಂದುಕೊಂಡದ್ದೆ ಆದರೆ ನಮ್ಮದೇ ಶಕ್ತಿ. ನಮ್ಮವರನ್ನು ಬಿಟ್ಟು ದೂರಹೋದಂತೆಲ್ಲಾ ಪರರ ವಶದಲ್ಲಿ ಜೀವನವಿರುತ್ತದೆ.
No comments:
Post a Comment