ಅಂಬಾನಿಯವರ ಮಗನ ಮದುವೆ ಮುಗಿದುಹೋಗಿದ್ದರೂ ಅದರ ಸುದ್ದಿ ಮಾತ್ರ ಪ್ರಚಾರವಾಗುತ್ತಲೇ ಇದೆ."ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು"
ಎಂದಿರೋದು ಯಾರದ್ದೋಮದುವೆ ಮನೆಯನ್ನು ನೋಡಿ ವಿಚಾರ ಪ್ರಚಾರ. ಮಾಡುವುದಕ್ಕಲ್ಲವಾಗಿತ್ತು.ಇತ್ತೀಚಿನ ದಿನಗಳಲ್ಲಿ ಮದುವೆ ಒಂದು ಪ್ರತಿಷ್ಟೆಯಾಗುತ್ತಿದೆ.ಬಡವರ ಪಾಡಿಗೂ ಶ್ರೀಮಂತರ ಪಾಡಿಗೂ ವ್ಯತ್ಯಾಸವೇನಿಲ್ಲ. ಬಡವರ ಪಾಲಿನ ಹಣವನ್ನು ಶ್ರೀಮಂತ ವರ್ಗ ಬಳಸಿಕೊಂಡು ವೈಭೋಗದಲ್ಲಿ ಮದುವೆ ಮನೆ ಮಾಡಿ ಕಟ್ಟಿದರೆ ದೊಡ್ಡ ಪ್ರಚಾರ ಮಾಡುತ್ತಾ ಮಧ್ಯಮವರ್ಗ ತನ್ನ ಪಾಲಿಗೆಬಂದ ಪಂಚಾಮೃತದಲ್ಲಿರುವರಷ್ಟೆ.
ಇದರಿಂದಾಗಿ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ತೃಪ್ತಿ ಸಿಕ್ಕರೆ ಸರಿ.ಅತೃಪ್ತ ಆತ್ಮಗಳು ಎದ್ದು ಕುಣಿದರೆ ಸಮಾಜದ ನೆಮ್ಮದಿಯೂ ಹಾಳು ಸಂಸಾರವೂ ದಾರಿತಪ್ಪಬಹುದಷ್ಟೆ.
ಯಾಕೆ ವಿಚಾರ ತಿಳಿಸಿರುವುದೆಂದರೆ ನಿಜವಾಗಿಯೂ ಮದುವೆ ಮಾಡೋದು ಕಷ್ಟವೆ? ಮನೆ ಕಟ್ಟೋದು ಕಷ್ಟವೆ? ಎಂಬಪ್ರಶ್ನೆಗೆ ಇಂದು ಎಷ್ಟೋ ಮಂದಿಗೆ ಮದುವೆಯ ಪವಿತ್ರ ಅರ್ಥ ತಿಳಿದಿಲ್ಲ ಮನೆಯೇ ಮಂತ್ರಾಲಯವೆನ್ನುವ ಅರಿವಿಲ್ಲ.
ಸಾಲ ಮಾಡಿಯಾದರೂ ತನ್ನ ಪ್ರತಿಷ್ಠೆಯನ್ನು ತೋರಿಸಲು ಮುಂದೆ ಹೋದವರ ಗತಿ ಏನಾಗಿದೆ ಎನ್ನುವ ಬಗ್ಗೆ ಚಿಂತನೆ ನಡೆಸುವಷ್ಟೂ ಪುರುಸೊತ್ತಿಲ್ಲದ ಆಧುನಿಕ ಜಗತ್ತಿನಲ್ಲಿ ಎಷ್ಟೋ ಲಕ್ಷ ಕೋಟಿ ಸಾಲದ ಹೊರೆಹೊತ್ತವರು ಮದುವೆ ಆದ ಮೇಲೆ ಸಾಲ ತೀರಿಸದೆ ಮಕ್ಕಳು ಬೇಡವೆನ್ನುವಮಟ್ಟಿಗೆ ದುಡಿದರೂ ಸಾಲ ಮಾತ್ರ ತೀರುತ್ತಿಲ್ಲವೆಂದರೆ ಅಗತ್ಯಕ್ಕೆ ಮೀರಿದ ಆಸೆಯೇ ಕಾರಣ.
ಯಾರೋ ಹೊರಗಿನವರು ನೋಡೋದಕ್ಕೆಮದುವೆ ಬೇಕೆ ಅಥವಾ ಮನೆ ಬೇಕೆ? ತಮ್ಮ ಹಿರಿಯರ ಕಾಲದ ಆಸ್ತಿ ಇದ್ದವರೂ ಅದನ್ನು ಹಳ್ಳಿಗಳಲ್ಲಿ ಬಿಟ್ಟು ನಗರದಲ್ಲಿ ಸ್ವಂತ ಮನೆ ಮಾಡಲು ಸಾಲ ಮಾಡುವರು.ಹಿಂದಿರುಗಿ ಹೋಗಲಾಗದೆ ಹಿರಿಯರಆಸ್ತಿ ಮಾರುವರು.ಇದೊಂದು ವೈಜ್ಞಾನಿಕ ಜಗತ್ತಿನಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ಸತ್ಯ.
ಅನಿವಾರ್ಯ ವಾಗಿದೆ ಎಂದರೂ ತಪ್ಪಿಲ್ಲ. ನಮ್ಮ ಶಿಕ್ಷಣದಲ್ಲಿ ಮೊದಲೇ ತಲೆಗೆ ಹಾಕುವ ವೈಜ್ಞಾನಿಕ ವಿಚಾರ ಆಕಾಶದೆತ್ತರ ಮನಸ್ಸನ್ನು ಎಳೆಯುತ್ತದೆ.ಅದೇ ಭೂಮಿಯ ಮೇಲಿರುವ ಸತ್ಯ ಅರ್ಥ ಮಾಡಿಸದೆ ಭೂಮಿಯ ಋಣ ತೀರಿಸಲಾಗದೆ ಜೀವ ಹೋಗುತ್ತಿದೆ.
ಶಿಕ್ಷಣವೇ ಇದರ ಮೂಲ. ಹಣದ ಸಂಪಾದನೆಯ ಶಿಕ್ಷಣ ಗುಣಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಮಾನವನನ್ನು ಆಳುತ್ತಿದೆ.
ಇಷ್ಟಪಟ್ಟ ಮನೆ ಮಡದಿ ಮಕ್ಕಳು ಕಷ್ಟಪಟ್ಟವರಿಗೆ ಸಿಗುತ್ತದೆ ಎನ್ನುವುದು ಸುಳ್ಳಾಗುತ್ತಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಸಾಲಮಾಡಿಕೆಟ್ಟ ಸಾಲವೇ ಶೂಲ, ಸರ್ಕಾರದ ಸಾಲಜನರ ಹಣವೇ ಆದಾಗ ಅದನ್ನು ಹಿಂದರುಗಿ ಕೊಡಲು ಕಷ್ಟಪಟ್ಟು ದುಡಿಯಲೇಬೇಕು ಅಲ್ಲಿಯವರೆಗೆ ಆತ್ಮಕ್ಕೆ ತೃಪ್ತಿ ಸಿಗದು.
ಆತ್ಮಕ್ಕೆ ತೃಪ್ತಿ ಸಿಗಲು ಸತ್ಯ ಧರ್ಮದ ಕಾಯಕವಿರಬೇಕು.
ಒಂದಕ್ಕೊಂದು ಅಂಟಿಕೊಂಡಿರುವಾಗ ಯಾರೋ ಮಧ್ಯವರ್ತಿ ಬೇರೆ ಮಾಡಿದರೆ ಒಗ್ಗಟ್ಟು ಹೇಗೆ ಬೆಳೆಯುವುದು?
ಅಂಬಾನಿಯಂತಹ ಮಹಾ ಶ್ರೀಮಂತರ ಮನೆ ಮದುವೆ ನೋಡಲು ಎಷ್ಟು ಸುಂದರ. ಆನೆ ಮೇಲೆ ಕುಳಿತು ಹೋದರೂ ತಪ್ಪಿಲ್ಲ ಆನೆ ಸಾಕಿದರೂ ತಪ್ಪಿಲ್ಲ.
ಅದೇ ರೀತಿಯಲ್ಲಿ ಒಬ್ಬ ಆನೆಯನ್ನು ಪಳಗಿಸಿ ಆನೆ ಮೇಲೆ ಕುಳಿತ ಬಡವನನ್ನೂ ಹಾಗೇ ಕಾಣಲಾಗದು. ಬಡವನ ಜ್ಞಾನಶಕ್ತಿ ಶ್ರೀಮಂತ ನ ಹಣದಶಕ್ತಿ ಒಂದೇ ನಾಣ್ಯದ ಎರಡುಮುಖವಷ್ಟೆ.
ಯಾಕೆ ಸರಳ ಮದುವೆ ಆಗಬಾರದು?
ಹಿಂದೂ ಶಾಸ್ತ್ರ ಸಂಪ್ರದಾಯ ಧರ್ಮದ ಪ್ರಕಾರ ಮದುವೆ ಎರಡು ಪವಿತ್ರ ಆತ್ಮಗಳ ಬಂಧನ. ಇದೀಗ ದೇಹಕ್ಕೆ ತಿರುಗಿ ಸಮಸ್ಯೆ ಹೆಚ್ಚಾಗಿದೆ.ಇದರಲ್ಲಿ ವ್ಯವಹಾರಕ್ಕಿಂತ ಧರ್ಮ ವೇ ಮುಖ್ಯವಾಗಿತ್ತು.ಈಗಿದು ವ್ಯವಹಾರಕ್ಕೆ ತಿರುಗಿದೆ ಹಾಗಾಗಿ ಪ್ರೀತಿ ವಿಶ್ವಾಸ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ವಿಚ್ಚೇದನ ಹೆಚ್ಚಾಗುತ್ತಿದೆ.ಇದು ಹಿಂದೂ ಧರ್ಮ ದವರ ಸಮಸ್ಯೆ.
ಅನ್ಯಧರ್ಮದವರೆಡೆಗೆ ಹಿಂದೂಗಳು ವಾಲತ್ತಿರುವುದಕ್ಕೆ ಕಾರಣ ಇದೇ ಆಗಿದೆ. ವೈಭೋಗದ ಮದುವೆಯಿಂದ ಯಾರಿಗೆ ಲಾಭ ಯಾವುದರನಷ್ಟ?
ಹೆಚ್ಚಿನ ಜನರಿಗೆ ಮದುವೆಯಲ್ಲಿ ಶಾಸ್ತ್ರ ಸಂಪ್ರದಾಯ ಧರ್ಮದ ಬಗ್ಗೆ ಅರಿವಿರದು. ಪುರೋಹಿತರು ಅವರವರ ಆರ್ಥಿಕ ಸ್ಥಿತಿಗೆ ತಕ್ಕಂತೆ ಮದುವೆ ನಡೆಸುವ ಕಾಲವಿದೆ. ಮದುವೆಗೆ ಬರುವ ಬಂಧು ಮಿತ್ರರೂ ಶ್ರೀಮಂತ ರಾಗಿದ್ದರೆ ಹೆಚ್ಚು ಉಡುಗೊರೆ ಬಡವರಾಗಿದ್ದರೆ ಕಡಿಮೆ ಉಡುಗೊರೆ ಕೊಡುವರೆನ್ನುವ ನಂಬಿಕೆ. ಜೊತೆಗೆ ತಾವೂ ಮದುವೆಗಾಗಿ ತಯಾರಿ ಮಾಡಿಕೊಳ್ಳಲು ಖರ್ಚು ವೆಚ್ಚದ ಲೆಕ್ಕಾಚಾರ ನಡೆಸುವಂತಾಗಿದೆ. ಕೋರ್ಟ್ ಮ್ಯಾರೇಜ್ ಇದು ಪಾಶ್ಚಾತ್ಯ ರ ಕೊಡುಗೆ ಈಗಿದು ಭಾರತದಲ್ಲಿ ಜನಪ್ರಿಯವಾಗುತ್ತಿದೆ. ಹಾಗೇ ಮುರಿದೂ ಬೀಳುತ್ತಿದೆ.
ಸ್ವರ್ಗದಲ್ಲಿ ಮದುವೆ ತೀರ್ಮಾನ ವಾಗಿರುತ್ತದೆ.ಋಣ ಸಂಬಂಧ ತಪ್ಪಿಸಲಾಗದು. ಮದುವೆ ಒಂದು ಪವಿತ್ರ ಸ್ಪಂಧನ ವಾಗಿದ್ದನ್ನು ವ್ಯವಹಾರಕ್ಕೆ ಎಳೆದು ಬಂಧನವ ಮಾಡಿ ಕೊನೆಗೆ ಲೆಕ್ಕಚಾರದಲ್ಲಿಯೇ ಜೀವನ. ಗಂಡುಹೆಣ್ಣಿಗೆ ಹಾಕುವಹೂ ಹಾರದಿಂದ ಹಿಡಿದು ಅಲಂಕಾರದವರೆಗೂ ಜನರ ದೃಷ್ಟಿ ಇರುತ್ತದೆ ಆದರೆ ಅವರೊಳಗಿನ ಗುಣ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸೋತವರು ಹೆಚ್ಚು. ಒಟ್ಟಿನಲ್ಲಿ ಎರಡು ಗೊಂಬೆಗಳನ್ನು ನಿಲ್ಲಿಸಿ ಮದುವೆ ಮಾಡಿ ಗೊಂಬೆಗಳನ್ನು ಆಟವಾಡಿಸುವುದರಿಂದ ಏನಾದರೂ ಧರ್ಮ ಉಳಿಯುವುದೆ? ಹಿಂದೆ ಹಾಗಿತ್ತು ಹೀಗಿತ್ತು ಎನ್ನುವವರೊಮ್ಮೆ ಯಾಕಿತ್ತು ಈಗ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ನಡೆಸಿದರೆ ತಿಳಿಯುವುದು ಅಂದಿನ ಶಿಕ್ಷಣದಲ್ಲಿ ಧರ್ಮ ತತ್ವವಿತ್ತು.ಈಗಿನಶಿಕ್ಷಣದಲ್ಲಿ ಕೇವಲ ತಂತ್ರವಿದೆ. ತಂತ್ರದಿಂದ ಹೆಣ್ಣು ಹೊನ್ನು ಮಣ್ಣಿನ ಋಣ ತೀರಿಸಲಾಗದು.
ತತ್ವದಿಂದ ಮಾತ್ರ ಸಾಧ್ಯವಿದೆ.
ಆತ್ಮಸ್ವರೂಪರಾಗಿರುವ ಗಂಡುಹೆಣ್ಣಿನ ಮಿಲನದಿಂದ ಮಹಾತ್ಮರ ಸಂತಾನವಾಗೋದು. ಇಲ್ಲವಾದರೆ ಅಸುರಿ ಸಂತಾನವೇ ಗತಿ. ಇಲ್ಲಿ ಮದುವೆ ಒಂದು ಸಂಸ್ಕಾರ.ಸಂಸ್ಕಾರ ಎಂದರೆ ಶುದ್ದಿಗೊಳಿಸುವಕ್ರಿಯೆ. ಹೀಗಿರುವಾಗ ಹೊರಗಿನಿಂದ ಎಷ್ಟು ಶುದ್ದಿ ಮಾಡಿದರೂ ಒಳಗಿನ ಶುದ್ದಿ ಇಲ್ಲವಾಗಿದ್ದರೆ ಅಶುದ್ದ ಕ್ರಿಯೆಗೇ ಹೆಚ್ಚು ಬೆಲೆ. ಆಡಂಬರಕ್ಕೆ ಸುರಿಯುವ ಹಣವನ್ನು ದಾನಧರ್ಮ ಕ್ಕೆ ಬಳಸಿದರೆ ಆರೋಗ್ಯ ಹೆಚ್ಚುವುದು.
ಮದುವೆ ಹಿಂದೆ ಮನೆಯೊಳಗೆ ನಡೆಯುತ್ತಿತ್ತು.ಈಗಿನಂತೆ ಹೊರಗಿನ ಛತ್ರ ಕಡಿಮೆಯಿತ್ತು. ಇದ್ದರೂ ಧಾರ್ಮಿಕ ಸೇವೆ ಎಂದು ಉಚಿತವಾಗಿ ಬಿಡುತ್ತಿದ್ದರು. ಆದರೆ ಈಗಲಕ್ಷ ಕೊಟ್ಟು ಹಾಲ್ ಬುಕ್ ಮಾಡಿ ಲಕ್ಷ ಲಕ್ಷ ಸುರಿದು ಅಲಂಕಾರ ಒಡವೆ ವಸ್ತು,ಬಟ್ಟಬರೆ ಉಡುಗೊರೆ ಇನ್ನಿತರ ಊಟ ಉಪಚಾರದ ಜೊತೆಗೆ ಫೋಟೋಗ್ರಫಿ ಗೆ ಕೂಡಿಟ್ಟ ಹಣದ ಜೊತೆಗೆ ಸಾಲವೂ ಬೆಳೆದಿರುತ್ತದೆ.ಇದಕ್ಕೆ ಹೇಳಿದ್ದುಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂದು.
ಇದು ಶ್ರೀಮಂತ ಜನರಿಗೆ ಕಷ್ಟವಿರದು.ಬಡವರಿಗೆ ಆಸೆ ಇದ್ದರೂ ಮಾಡೋದಿಲ್ಲ.ಮದ್ಯಮ ವರ್ಗ ವೇ ಹೆಚ್ಚಾಗಿ ಸಾಲ ಮಾಡೋದಾಗಿದೆ. ಈಕಡೆ ಬಡತನವನ್ನು ಒಪ್ಪದೆ ಶ್ರೀಮಂತ ರೂ ಆಗದೆ ತೋರುಗಾಣಿಕೆಯ ಜೀವನಕ್ಕಾಗಿ ಕಷ್ಟ ನಷ್ಟದ ಸುಳಿಯಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಪರಿಸ್ಥಿತಿ ಮಧ್ಯಮವರ್ಗಕ್ಕೆ ಹೆಚ್ಚಾಗಿರೋದು. ಈ ಕಡೆ ಪೂರ್ಣ ಭಾರತೀಯರೂ ಅಲ್ಲ ಆ ಕಡೆ ಪರದೇಶಿಗಳೂ ಅಲ್ಲದ ಅಲ್ಲ ಅಲ್ಲ ಎನ್ನುವ ಮಧ್ಯವರ್ತಿ ಗಳೆಂದರೆ ಸರಿಯಾಗಬಹುದಲ್ಲವೆ? ಅನ್ಯಧರ್ಮದವರು ಬೆಳೆಯಲು ಕಾರಣವೇ ಹಿಂದೂಗಳ ಈ ಮನಸ್ಥಿತಿ. ನಮ್ಮವರಿಗೆ ಸಹಕಾರ ಕೊಡದೆ ಪರಕೀಯರನ್ನು ಓಲೈಸಿಕೊಂಡು ತಮ್ಮ ಮನೆ ಮದುವೆಗೆ ಸಾಲ ಮಾಡಿದರೆ ತೀರಿಸಲು ಪರಕೀಯರ ಆಳಾಗಿ ದುಡಿಯಲೇಬೇಕು. ಪರಕೀಯರ ವ್ಯವಹಾರದಲ್ಲಿ ಹಣಗಳಿಸಬಹುದು ಆದರೆ ನಮ್ಮ ಶಿಕ್ಷಣದಲ್ಲಿ ಜ್ಞಾನಗಳಿಸಿದ್ದರೆ ಯಾರೊಂದಿಗೆ ಸಂಬಂಧ ಮಾಡಬೇಕು? ವ್ಯವಹಾರಕ್ಕಿಳಿಯಬೇಕು ಎನ್ನುವ ಧಾರ್ಮಿಕ ಸತ್ಯ ಅರ್ಥ ಆಗುತ್ತದೆ.
ಒಟ್ಟಿನಲ್ಲಿ ಮದುವೆ ಆಗಬೇಕು.ಮನೆಯೂ ಕಟ್ಟಬೇಕು.
ಇದು ಒಂದು ಧಾರ್ಮಿಕ ಕ್ರಿಯೆಯಾಗಿ ಸತ್ವಯುತವಿದ್ದರೆ ಧರ್ಮ ರಕ್ಷಣೆ. ದಿನದಿಂದ ದಿನಕ್ಕೆ ಏರುತ್ತಿರುವಬೆಲೆಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವವರು ಬೆಳೆಯುತ್ತಿರುವುದು ಅಜ್ಞಾನದ ಸಂಕೇತ.
ಯಾರು ಏನೇ ಹೇಳಿದರೂ ತನ್ನ ಆತ್ಮಕ್ಕೆ ದ್ರೋಹ ಇಲ್ಲದೆ ಬದುಕೋದು ಜೀವನವೆಂದಿದ್ದ ಸನಾತನಧರ್ಮ ಇಂದು ಯಾರದ್ದೋ ಮಾತಿಗೆ ಬೆಲೆಕೊಟ್ಟು ಹೊರಗಿನ ಜಗತ್ತಿನಲ್ಲಿ ತನ್ನ ಮನಸೋಇಚ್ಚೆ ಕುಣಿದು ಕುಪ್ಪಳಿಸುವವರ ಹಿಂದೆ ನಡೆದಿದೆ. ಸತ್ಯ ತಿಳಿಸಿದರೆ ತಪ್ಪು ಎನ್ನುವ ಮಟ್ಟಿಗೆ ಜನರ ಮನಸ್ಥಿತಿ ಹದಗೆಟ್ಟಿದೆ. ಇದಕ್ಕೆ ಕಾರಣವೇ ಕಲಿಗಾಲದ ಕಲಿಕೆ.
ಹುಡುಗಹುಡುಗಿ ಎಷ್ಟು ಕಲಿತಿದ್ದಾರೆನ್ನುವ ಮೊದಲು ಎಷ್ಟು ಅರಿತಿದ್ದಾರೆನ್ನುವುದೇ ಮುಖ್ಯ.
ಕಲಿಕೆ ಹೊರಗಿನ ಶಕ್ತಿ ಅರಿವು ಒಳಗಿನಶಕ್ತಿ. ಒಳಗಿನ ಶಕ್ತಿ ಜಾಗೃತವಾಗಿದ್ದರೆ ಅದೇ ನಿಜವಾದ ಮುಕ್ತಿಮಾರ್ಗ ವಾಗಿದೆ.
ಹೇಳೋರು ಲಕ್ಷಜನವಿದ್ದರೂ ಕೇಳುವ ಎರಡೂ ಕಿವಿ ಸ್ವಚ್ಚ ವಿದ್ದರೆ ಉತ್ತಮ ಜೀವನ. ನಾಟಕದ ಜಗತ್ತಿನಲ್ಲಿ ಎಷ್ಟು ಹೊರಗೆ ಅಲಂಕಾರ ಮಾಡಿದರೂ ಒಳಗಿರುವ ಅಹಂಕಾರ ಅಳಿಯುವವರೆಗೂ ಸತ್ಯದರ್ಶನವಾಗದು.
ಮದುವೆಯನ್ನು ಮ- ಮಮಕಾರ, ದು- ದು:ಖ, ವೆ- ವೇದನೆ ಆಗದಂತೆ ಮಾಡಿಕೊಂಡರೆ ಉತ್ತಮ.
ನಾನು ನನ್ನದು ನನಗಾಗಿ ನಾನೇ ಬೆಳೆಸಿಕೊಂಡ ಸಂಬಂಧ ಧರ್ಮದ ಹಾದಿಯಲ್ಲಿ ನಡೆಯುವಾಗ ಎಷ್ಟೋ ಹೊರಗಿನ ದುಷ್ಟಶಕ್ತಿಗಳು ಅಡ್ಡಬರುತ್ತವೆ. ಅದನ್ನು ಮೆಟ್ಟಿನಿಂತು ಮುಂದೆ ಒಟ್ಟಿಗೆ ಹೋಗೋದಕ್ಕೆ ಆತ್ಮಜ್ಞಾನ ಬೇಕು. ಅದಕ್ಕೆ ಹಲವರು ಹೆದರಿಕೊಂಡು ಸ್ತ್ರೀ ಮಾಯೆ ಎಂದುಬಿಟ್ಟು ಹೋದರು. ನಮ್ಮ ಅಶಕ್ತತೆಗೆ ಸ್ತ್ರೀ ಯನ್ನು ಬಲಿಪಶು ಮಾಡೋದರಿಂದ ಯಾವುದೇ ಸಾಧನೆಯಾಗದು.ಭೂ ಋಣ ತೀರಿಸದೆ ವಿಧಿಯಿಲ್ಲ. ಸಂಸಾರ ಸಾಗರ ದಾಟಲು ಸಂಸಾರಕ್ಕೆ ಬಂದೇ ಹೋಗಬೇಕು.ಬಿಟ್ಟು ಹೋದರೆ ಅನ್ಯರವಶದಲ್ಲಿ ಸ್ತ್ರೀ ತನ್ನ ಪ್ರಭಾವ ತೋರಿಸುವಳು. ಅನ್ಯಧರ್ಮದವರು ಎಷ್ಟು ಮದುವೆಯಾದರೂ ಕೇಳೋದಿಲ್ಲ.ಹಾಗೆ ಹಿಂದೂಗಳಾದರೆ ಎಲ್ಲಾ ಕೇಳೋರೆ ಹೇಳೋರೆ. ಎಂದರೆಮದುವೆಯಿಂದ ಧರ್ಮ ಉಳಿಯಿತೆ? ಧಾರ್ಮಿಕ ಸಂಸ್ಕಾರದಲ್ಲಿ ಮದುವೆ ನಡೆಯುತ್ತಿದೆಯೆ? ಇದರಬಗ್ಗೆ ಧಾರ್ಮಿಕ ವರ್ಗ ಚಿಂತನೆ ನಡೆಸಬೇಕು.ಮೂಲ ಶಿಕ್ಷಣವನ್ನೇ ಪರಕೀಯರಿಗೆ ಬಿಟ್ಟು ಹೊರಗೆ ಆಚರಣೆ ನಡೆಸಿದರೆ ಆಗೋದೇ ಹೀಗೆ.
ಈಗಕೆಲವರು ಸಂಸ್ಕಾರದ ವಿಚಾರದಲ್ಲಿ ಆಳವಾಗಿರುವ ಸತ್ಯವನ್ನು ಹೊರಹಾಕುವ ಪ್ರಯತ್ನ ನಡೆಸಿದರೂ ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ತಾವೇ ಸೋತಿರುವುದಾಗಿದ್ದರೆ ಕೇವಲ ಪ್ರಚಾರಕ್ಕೆ ಸೀಮಿತವಾದ ಕಾರ್ಯ ಕ್ರಮವಾಗುತ್ತದೆ. ಯಾವುದನ್ನು ಸರಿಪಡಿಸಲಾಗದು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಒಗ್ಗಟ್ಟು ಮುಖ್ಯ. ನಮ್ಮ ಮಾತನ್ನು ಬೇರೆಯವರು ಕೇಳಿಸಿಕೊಳ್ಳುವರೆನ್ನುವುದು ಸಂತೋಷವಾದರೂ ಅವರ ಪರಿಸ್ಥಿತಿ ಸರಿಪಡಿಸುವ ಶಕ್ತಿ ನಮಗಿದೆಯೆ?
ಒಬ್ಬರು ಸಂನ್ಯಾಸಿಗಳಿಗೆ ಸಾಕಷ್ಟು ಜನಬಲ ಹಣಬಲ ಅಧಿಕಾರಬಲವಿದ್ದರೂ ಸಂಸಾರಕ್ಕೆ ಇಳಿದು ಅನುಭವಿಸಲಾಗದು. ಸಂನ್ಯಾಸವೆಂದರೆ ನಿಸ್ಸಂಗ ನಿಸ್ವಾರ್ಥ ನಿರಹಂಕಾರವಾಗಿತ್ತು.
ಹಾಗಂತ ಹೇಳೋದು ತಪ್ಪಲ್ಲ ನಾನೇ ಸರಿ ಎನ್ನುವ ಮೊದಲು ನಾನ್ಯಾರಿಂದ ಮೇಲೆ ಬಂದೆ ಎನ್ನುವ ಬಗ್ಗೆ ತಿಳಿದರೆ ಪರಮಾತ್ಮನ ಸತ್ಯ ಅರ್ಥ ವಾಗುತ್ತದೆ.
ಯಾರದ್ದೋ ಕಣ್ಣಿಗೆ ನಮ್ಮ ಜೀವನ ಬದಲಾವಣೆಯಾಗದೆ ನಮ್ಮ ಆತ್ಮಕ್ಕೆ ತೃಪ್ತಿ ಸಿಗುವಂತಹ ಬದಲಾವಣೆಗೆ ಸ್ಪಂದನೆ ಇದ್ದರೆ ಮದುವೆ ಬಂಧನವಾಗದು...
ಈವರೆಗೆ ಯಾರೂ ಮದುವೆಯಿಂದ ಜೀವನ್ಮುಕ್ತಿಪಡೆದೆ ಎಂದವರಿಲ್ಲ.ಪುರಂಧರ ದಾಸರಂತಹಮಹಾತ್ಮರಿಗೆ ಸಿಕ್ಕಿದ ಪತ್ನಿ ಎಲ್ಲರಿಗೂ ಸಿಗೋದಿಲ್ಲವಲ್ಲ. ಧಾರ್ಮಿಕ ಪ್ರಜ್ಞೆ ಯಿದ್ದರೆ ಎಲ್ಲಾ ಸರಿಕಾಣುತ್ತದೆ. ಇಲ್ಲವಾದರೆ ಎಲ್ಲಾ ತಪ್ಪಾಗೇ ಕಾಣೋದಷ್ಟೆ.
ಮದುವೆಗಾಗಿ ಮನೆಗಾಗಿ ಸುರಿಯುವ ಹಣವನ್ನು ದಾನ ಧರ್ಮದ ಶಿಕ್ಷಣಕ್ಕೆ ಭಾರತೀಯರು ಬಳಸಿದ್ದರೆ ಆತ್ಮನಿರ್ಭರ ಭಾರತವಾಗುತ್ತಿತ್ತು. ವಿದೇಶಿಗಳ ಕಂಪನಿಗಳನ್ನು ದೇಶದ ತುಂಬಾ ತುಂಬಿಕೊಂಡು ಅವರ ಶಿಕ್ಷಣ ಪಡೆಯುತ್ತಾ ವೈಭೋಗದೆಡೆಗೆ ಸಾಲ ಮಾಡಿಮದುವೆ ,ಮನೆಯಲ್ಲಿದ್ದರೆ ಸಾಲ ತೀರಿಸಲು ಬರಲೇಬೇಕು. ಕಾಲಕ್ಕೆ ತಕ್ಕಂತೆ ಮಾನ ಮರ್ಯಾದೆ. ಇದಕ್ಕಾಗಿ ಹಾರಾಟ ಹೋರಾಟ ಮಾರಾಟ ನಡೆಯುತ್ತಲೇಇರುತ್ತದೆ.. ಅರ್ಥ ವಾದವರು ಬದಲಾಗಬಹುದು.ಆಗದವರನ್ನು ಬದಲಾಯಿಸಲಾಗದು.
ಸಾಲ ಕೊಡೋರು ಬೆಳೆಯೋದು ಮಾಡೋರು ಬೆಳೆದಾಗಲೇ.ತೀರಿಸೋದೆ ಕಷ್ಟ. ಅದಕ್ಕೆ ಇಷ್ಟು ಜನಸಂಖ್ಯೆ.
ಉಳ್ಳವರು ಶಿವಾಲಯವ ಮಾಡುವರು ನಾನೇನುಮಾಡಲಿ ಬಡವನಯ್ಯ... ಬಡತನ ಜ್ಞಾನಕ್ಕಿಲ್ಲ. ಅದು ಸ್ವತಂತ್ರ ವಾಗಿತ್ತು.ಈಗಿದು ಅತಂತ್ರಸ್ಥಿತಿಗೆ ತಲುಪಲು ಶಿಕ್ಷಣವೇ ಕಾರಣ.
ಶೋಡಸ ಸಂಸ್ಕಾರದ ಬಗ್ಗೆ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಹೀಗಾಗಿ ಸಾಮಾನ್ಯರಾಗಿದ್ದು ನಮ್ಮ ಮನಸ್ಸನ್ನು ಶುದ್ದವಾಗಿಡುವ ಸತ್ಯ ಧರ್ಮ ವನರಿತರೆ ಉತ್ತಮ ಮನಸ್ಸಿನ ಸಂಸ್ಕಾರವಾಗಬಹುದು. ಶುದ್ದತೆಗೆ ಉತ್ತಮ ವಿಷಯ ಆಹಾರ ಕ್ರಮ ,ಕರ್ಮ ಯೋಗ ಅಗತ್ಯವಿದೆ. ಕಲಿಯುಗದಲ್ಲಿ ನಾಮಜಪದಿಂದಲೇ ಪರಮಾತ್ಮನ ಕಂಡವರಿದ್ದರು. ಈಗಿದು ಪರಕೀಯರನ್ನು ಕಾಣುವತ್ತ ನಡೆದಿರೋದು ಭಾರತೀಯರ ದುರಂತ. ನಾವು ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ಹೊರಗೆ ನಡೆಸುತ್ತಿದ್ದೇವೆಂದರೆ ಅದಕ್ಕೆ ಜನಬಲ ಹಣಬಲವೂ ಹೊರಗಿನವರ ಕೊಡುಗೆಯಾಗಿದೆ. ಆದರೆ ಅವರ ಧರ್ಮ ತತ್ವವೇ ರಾಜಕೀಯವಾಗಿದ್ದರೆ ರಾಜಯೋಗವಿರದು.
ಯೋಗವೆಂದರೆ ಸೇರೋದು ಕೂಡೋದು.ಪರಮಸತ್ಯ ಧರ್ಮದ ಜೊತೆಗೆ ಜೀವಾತ್ಮನ ಕರ್ಮ ವಿದ್ದರೆ ಅದೇ ಯೋಗ.
ಇಲ್ಲವಾದರೆ ಭೋಗದ ರೋಗ.
No comments:
Post a Comment