ಅನ್ನದ ಋಣ ಎಲ್ಲಿರುವುದೆನ್ನುವುದೋ ತಿಳಿಯಲಾಗದು. ಹಾಗಾಗಿ ಹಿಂದೆ ಇನ್ನೊಬ್ಬರ ಮನೆಗೆ ಕರೆಯದೆ ಹೋಗಬಾರದೆನ್ನುತ್ತಿದ್ದರು. ಕರೆದರೂ ಊಟಕ್ಕೆ ಹೋಗೋರು ಕಡಿಮೆಯಿದ್ದರು.ಕಾರಣವಿಷ್ಟೆ ಋಣ ತೀರಿಸೋದು ಕಷ್ಟ ಜನ್ಮ ಜನ್ಮದ ಲೆಕ್ಕಾಚಾರ ಹಾಕಿದರೆ ಈಗ ಉಚಿತ ಊಟ ಉಪಚಾರ ಉಡುಗೊರೆಗಳ ಹಿಂದೆ ಎಷ್ಟು ಋಣವಿರಬಹುದು? ಒಟ್ಟಿನಲ್ಲಿ ಜೀವ ಬರೋದೆ ಋಣ ತೀರಿಸಲೆಂದಾಗಿದೆ. ಅದಕ್ಕಾಗಿ ದಾನಧರ್ಮ ಕಾರ್ಯಕ್ರಮ ಪರಮಾತ್ಮನ ಸೇವೆ,ಸಮಾಜಸೇವೆ,ದೇಶಸೇವೆ
,ದೇವತಾರಾಧನೆ....
ಮುಂತಾದವುಗಳು ಹಿಂದಿನಿಂದಲೂ ಬೆಳೆದು ಬಂದಿದೆ.
ಯಾವ ಜನ್ಮದ ಋಣ ಯಾವ ಜನ್ಮದಲ್ಲಿ ತೀರಿಸಬೇಕೋ ಅದು ಮೇಲಿರುವ ಪರಮಾತ್ಮನಿಗಷ್ಟೆ ಗೊತ್ತು. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದ ದಾಸರಿಗೂ ಬಂದದ್ದೆಲ್ಲಾ ನನಗೇ ಬೇಕೆಂದು ಸಂಪತ್ತನ್ನು ಕೂಡಿಹಾಕುವ ಇಂದಿನ ಆಧುನಿಕತೆಗೂ ಎಷ್ಟೋ ಅಂತರವಿದೆ. ಅದಕ್ಕಾಗಿ ಎಷ್ಟು ಅನ್ನದಾನ ಮಾಡಿದರೂ ತೃಪ್ತಿ ಸಿಗದಂತಾಗಿದೆ. ಎಷ್ಟು ಅನ್ನ ತಿಂದರೂ ಸಾಲವೇ ಆಗಿದೆ.
ಸಾಲದ ಹಣದಲ್ಲಿ ಎಷ್ಟು ಧಾನ ಧರ್ಮ ಮಾಡಿದರೂ ಸಾಲಕ್ಕೆ ಹೋಗುತ್ತದೆ. ಸಾಲ ಕೊಟ್ಟವನಿಗೂ ತೃಪ್ತಿ ಇಲ್ಲ ಪಡೆದವನಿಗೂ ನೆಮ್ಮದಿ ಮುಕ್ತಿ ಇಲ್ಲ. ಪರಮಾತ್ಮನಿಗೆ ಯಾವುದೂ ತಲುಪುತ್ತಿಲ್ಲ.ಅದಕ್ಕಾಗಿ ಶ್ರೀ ಕೃಷ್ಣ ಪರಮಾತ್ಮ ತಿಳಿಸಿರೋದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯಿಂದ ಋಣಮುಕ್ತರಾಗೋ ಯೋಗಿಯಾಗು ಎಂದು..ಇದೀಗ ಎಷ್ಟು ಜನರಿಗೆ,ಯಾರಿಗೆ ಸಾಧ್ಯವಾಗಿದೆ?
ಉಚಿತ ಯೋಜನೆಗಳ ಹಿಂದಿರುವ ಸಾಲ ದೇಶದ ಸಾಲ.ಇದನ್ನು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದರ ಮೂಲಕ ತೀರಿಸಬೇಕೆಂದರೆ ಕಷ್ಟಪಟ್ಟು ದುಡಿಯಬೇಕು. ದುಡಿಯುವ ಕೈಗೆ ಉತ್ತಮ ಕೆಲಸ ಬೇಕು, ಕೆಲಸ ಮಾಡಲು ಜ್ಞಾನವಿರಬೇಕು,ಜ್ಞಾನದ ಶಿಕ್ಷಣ ಕೊಡಲೇಬೇಕು. ಕಲಿಯುವ ಯುಗ ಕಲಿಯುಗ.ಇದು ಸತ್ಯಜ್ಞಾನದಿಂದ ಮೇಲ್ಮಟ್ಟಕ್ಕೆ ಬೆಳೆದಾಗಲೇ ನಿಜವಾದ ಯೋಗದ ಜೀವನ.
ದೇಶದಿಂದ ನನಗೇನು ಲಾಭ? ದೇವರಿಂದ ಪೋಷಕರಿಂದ, ಸ್ನೇಹಿತರಿಂದ,ಸಮಾಜದಿಂದ,ಭೂಮಿಯಿಂದ, ಸ್ತ್ರೀ ಯಿಂದ ಮಕ್ಕಳಿಂದ. ನನಗೇನು ಲಾಭ ಎನ್ನುವ ಮಟ್ಟಕ್ಕೆ ವ್ಯವಹಾರ ಬೆಳೆದಿರುವಾಗ ದುಡ್ಡಿದ್ದವನೆದೊಡ್ಡಪ್ಪ.ಬಡವನಕೋಪ ದವಡೆಯ ಮೂಲ. ಎಷ್ಟು ಕೋಪತಾಪವಿದ್ದರೂ ಅನ್ನವಿಲ್ಲದೆ ಬದುಕುವುದು ಕಷ್ಟವಿದೆ.ಅದಕ್ಕೆ ಅನ್ನದಾನ ಮಹಾದಾನ ಆಗಿದೆ.ಇದಕ್ಕಿಂತ ಮುಖ್ಯವಾಗಿದ್ದು ಜ್ಞಾನ .ಜ್ಞಾನ ಸಂಪಾದನೆಗೆ ಇಳಿದವರು ಅನ್ನ ನೀರು ಬಿಟ್ಟು ನಡೆದಿದ್ದರು..
ಆಳವಾಗಿರುವ ಸನಾತನ ಧರ್ಮ ಜ್ಞಾನದ ಹಸಿವನ್ನು ಹೆಚ್ಚಿಸುತ್ತದೆ. ಇದಕ್ಕೆ ಇದನ್ನು ಅರ್ಥ ಮಾಡಿಕೊಳ್ಳಲು ರಾಜಕೀಯ ಬಿಟ್ಟು ಒಳಗಿನ ಸತ್ಯ ಧರ್ಮದೆಡೆಗೆ ನಡೆದಿದ್ದರು.
No comments:
Post a Comment