ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, July 17, 2024

ಎಲ್ಲದಕ್ಕೂ ಕಾರಣ ಸ್ತ್ರೀ ಯೆ? ಪುರುಷನೆ?

ಪುರುಷಪ್ರಧಾನ ಸಮಾಜ ಮತ್ತು ಭಾರತ
ಮಹಾಭಾರತ ಯುದ್ದವಾಗಲಿ,ರಾಮಾಯಣಯುದ್ದವಾಗಲಿ ನಡೆದಿದ್ದಕ್ಕೆ ಸ್ತ್ರೀ ಕಾರಣವೆನ್ನುವ  ಮಾತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಿದರೆ ಪುರುಷಪ್ರಧಾನ ಸಮಾಜವೇ ಇದಕ್ಕೆ ಕಾರಣವೆನ್ನಬಹುದು. ಭಾರತವನ್ನು ಪವಿತ್ರದೃಷ್ಟಿಯಿಂದ ಕಾಣೋದಕ್ಕೆ ಆತ್ಮಜ್ಞಾನವಿರಬೇಕು.ಈ ಆತ್ಮಜ್ಞಾನ ಸಿಗೋದಕ್ಕೆ ಭೂಮಿಗೆ ಬರಬೇಕು.ಭೂಮಿಯಲ್ಲಿ ಜನ್ಮ ಪಡೆಯುವುದಕ್ಕೆ ತಾಯಿಯ  ಗರ್ಭದಿಂದಷ್ಟೆ ಸಾಧ್ಯ.
ಹೀಗಾಗಿ ಜನನಿಯನ್ನು  ಯಾವ ರೀತಿಯಲ್ಲಿ ನೋಡಲಾಗುವುದೋ ಆ ರೀತಿಯಲ್ಲಿ  ಜೀವನವಿರುತ್ತದೆ. ಸಮಾಜಕ್ಕೆ ಮೊದಲು ಸಂಸಾರ ಕಾಣುವ ಮಗು ಸಂಸಾರದಲ್ಲಿರುವ  ಎಲ್ಲಾ ಸದಸ್ಯರ ಪೈಕಿ ತಾಯಿಯನ್ನು ಅವಲಂಬಿಸಿರುತ್ತದೆ.ಆ ತಾಯಿಗೆ ಸಿಗುವ ಜ್ಞಾನದಿಂದ  ತನ್ನ ಜ್ಞಾನ ಮುಂದುವರಿಸಿಕೊಂಡು ಸಮಾಜದ ಒಂದು ಅಂಗವಾಗಿ ಬೆಳೆಯುವ ಮಕ್ಕಳ ಭವಿಷ್ಯ ದ ಮೂಲಾಧಾರವೆ ಮೊದಲು ಗುರು ತಾಯಿಯಾಗಿದ್ದಳು. ಈಗಲೂ ಅಂತಹ ಗುರುವಿದ್ದರೂ ಮೊದಲ ಗುರುವಿನ ಶಿಕ್ಷಣವೇ ಭೌತಿಕ ಶಿಕ್ಷಣ ಹೀಗಾಗಿ ಆಂತರಿಕ ಅರಿವಿಲ್ಲದ ಮಕ್ಕಳು ಮೊದಲು ಮದಲು ನೋಡುವುದು ದೈಹಿಕ ಬೆಳವಣಿಗೆ.ಅಧಿಕಾರ,ಹಣ,ಸ್ಥಾನಮಾನವಿಲ್ಲದ ಸ್ತ್ರೀ ಯನ್ನು ಕೀಳಾಗಿ ಕಾಣುವ ಸಂಸಾರವು ಇಂದಿಗೂ ಭಾರತದಂತಹ ಮಹಾತ್ಮರನ್ನು ಗುರುತಿಸಲು ಸೋತಿದೆ ಎನ್ನಬಹುದು. ಎ ಷ್ಟೋ  ಕುಟುಂಬ  ಒಡೆದಿರುವುದೂ  ಈ ಅಜ್ಞಾನದಿಂದಲೇ ಇದಕ್ಕೆ ಕಾರಣವೆ ಶಿಕ್ಷಣ ವ್ಯವಸ್ಥೆ.
ಹಿಂದಿನ ಶಿಕ್ಷಣ ವ್ಯವಸ್ಥೆ ಮನೆಮನೆಯೂ ಗುರುಕುಲವಾಗಿಸಿ ಅಧ್ಯಾತ್ಮ ದೆಡೆಗೆ  ಸಾಗಿಸಿತ್ತು.ವಿಪರೀತವಾದ ಸ್ತ್ರೀ ಶೋಷಣೆಗೆ ಕಾರಣ ಅಂದಿನ  ಪುರುಷಪ್ರಧಾನ ಸಮಾಜ ವ್ಯವಸ್ಥೆ ಯಾಗಿತ್ತು.ಈಗಲೂ ಇದೇ ಸಮಾಜ ಸ್ತ್ರೀ ಯನ್ನು ಆಳಲು ಹೊರಟು ಸ್ತ್ರೀ ವಿದ್ಯಾವಂತೆಯಾಗಿ ಮನೆಯಿಂದ ಹೊರಬಂದು ಸ್ವತಂತ್ರ ಜೀವನ ನಡೆಸುವಂತೆ ಮಾಡಿದ್ದರೂ  ಒಳಗಿರಬೇಕಾದ ಜ್ಞಾನಶಕ್ತಿ  ಕುಸಿದರೆ ಅಥವಾ ತೊರೆದು ಹೊರಗೆ ಹೋದರೆ  ಏನಾಗಬಹುದು? ಇದಕ್ಕೆ ಕಾರಣವೆಂದರೆ  ಸಂಸಾರ ಬೇರೆ ಸಮಾಜ ಬೇರೆ, ಜ್ಞಾನ ಬೇರೆ ವಿಜ್ಞಾನ ಬೇರೆ, ಸ್ತ್ರೀ ಬೇರೆ ಪುರುಷ ಬೇರೆ, ಹರಿಹರ ರ ಭೇಧಭಾವ, ದ್ವೈತಾದ್ವೈತದ ದ್ವೇಷ, ಹೀಗೇ  ಬೆಳೆಯುತ್ತಾ ಹೋಗಿ ಈಗಿದು ಬಿಡಿಸಲಾಗದ ಗಂಟಾಗಿದೆ. ಸರಳವಾಗಿದ್ದ ತತ್ವವನ್ನು  ಕಠಿಣವಾಗಿಸಿಕೊಂಡು  ಅರ್ಧ ಸತ್ಯವನ್ನು  ಬಂಡವಾಳ ಮಾಡಿಕೊಂಡು ಎಲ್ಲರಿಗೂ ಹಂಚಿದ ಮಧ್ಯವರ್ತಿ ಮಾನವನಿಗೆ ತನ್ನೊಳಗೆ ಅಡಗಿರುವ ಶಿವಶಕ್ತಿಯರ  ಅಂಶದ ಅರಿವಿಲ್ಲದೆ ಹೊರಗಿನ ರಾಜಕೀಯಕ್ಕೆ ಮಣೆ ಹಾಕುತ್ತಾ ಅತಿಥಿ ಸತ್ಕಾರ ಮಾಡಿ ನಮ್ಮವರನ್ನೇ ದ್ವೇಷ ಮಾಡಿಕೊಂಡು ಹೊರಗಿನ ದೇವರನ್ನು ಬೆಳೆಸಿದರೆ  ಕಷ್ಟ ನಷ್ಟ ಯಾರಿಗೆ?
ಸ್ತ್ರೀ ಶಕ್ತಿಯನ್ನು  ಯಾರೋ ಆಳಲು ಹೋಗಿ ಆಳಾಗಿ ಹಾಳಾಗಿ ಹೋದರೂ ಅದರಲ್ಲಿಯೂ ಸಾಧನೆ ಎನ್ನುವವರು ಪುರುಷರಿದ್ದಾರೆ.ಅದೇ ಸ್ತ್ರೀ ತನ್ನ ಆತ್ಮರಕ್ಷಣೆಯ ಜೊತೆಗೆ ದೇಹ ರಕ್ಷಣೆಯನ್ನೂ ಮಾಡಿಕೊಂಡು ಧರ್ಮದ ಹಾದಿ ಹಿಡಿದರೆ  ಅದರಲ್ಲಿ ಲೋಪದೋಷಗಳನ್ನು ಹುಡುಕಿಕೊಂಡು ಕೆಳಗಿಳಿಸುವ  ಪುರುಷಪ್ರಧಾನ ಸಮಾಜದಿಂದ ಭಾರತೀಯರಿಗೆ ಸಿಕ್ಕಿದ್ದು ಭ್ರಷ್ಟಾಚಾರ ಮಾತ್ರ. ಇಲ್ಲಿ ಯಾರೋ ಕೆಲವರು ಉತ್ತಮರಿದ್ದರೂ ಇಡೀ ಸಮಾಜ ಹಾಳಾಗಿ ಹೋಗಿರುವಾಗ  ಕೆಲವರನ್ನು ಎತ್ತಿ ಏಣಿಗೇರಿಸುವ ಅಗತ್ಯವಿಲ್ಲ.ಹಾಗೆಯೇ ಕೆಲವು ಸ್ತ್ರೀ ಯರು ದಾರಿತಪ್ಪಿ ನಡೆದರೆ ಎಲ್ಲಾ ಸ್ತ್ರೀ ಯರೂ ಹೀಗೇ ಎನ್ನಬಾರದಷ್ಟೆ. ಒಳ್ಳೆಯದು ಕಣ್ಣಿಗೆ ಕಾಣದು ಕೆಟ್ಟದ್ದು ಕಂಡರೂ ಹೇಳೋಹಾಗಿಲ್ಲ. ನಿರಾಕಾರ ಶಕ್ತಿ ಕಾಣೀದಿಲ್ಲವೆಂದ ಮಾತ್ರಕ್ಕೆ ಇಲ್ಲವೆಂದಲ್ಲ.ಹಾಗೆ ಕಾಣೋದೆಲ್ಲಾ ಸತ್ಯವಲ್ಲ. ಅಜ್ಞಾನದ ಕಣ್ಣಿಗೆ ಕಂಡದ್ದೇ ಸತ್ಯವೆನ್ನುವ ಮಟ್ಟಿಗೆ ಸಮಾಜ ಭೌತಿಕದಲ್ಲಿ ಬೆಳೆದು ಜ್ಞಾನದ ಕಣ್ಣು ಮುಚ್ಚಿಹೋಗಿದೆ. ಆ ಕಣ್ಣನ್ನು ಯಾರೋ ಹೊರಗಿನಿಂದ ಬಂದು ತೆರೆಸುವ ಮೊದಲು ನಾವೇ ಒಳಗೆಹೊಕ್ಕಿ ನೋಡಲು ಸ್ತ್ರೀ ಸಹಕಾರದ ಜೊತೆಗೆ ಪುರುಷ ಸಹಕಾರ ಅಗತ್ಯವಾಗಿತ್ತು. ವೈಜ್ಞಾನಿಕ ಚಿಂತನೆಗಳಂತೆ ಅಧ್ಯಾತ್ಮದ ಚಿಂತನೆ ಕಣ್ಣಿಗೆ ಕಾಣೋದಿಲ್ಲ. ಅವರವರ ಆತ್ಮಸಾಕ್ಷಿಗೆ ತಕ್ಕಂತೆ ನಡೆಯುವುದಕ್ಕೆ  ಅವಕಾಶ,ಸ್ವಾತಂತ್ರ್ಯ ಇದ್ದರೂ ಹಿಂದಿನವರ ಕುತಂತ್ರದ ಕೆಲವು ರಾಜಕೀಯವಿಚಾರ ಇಂದಿಗೂ  ಸಮಾಜ ಹಾಗು ಸಂಸಾರ ಪೀಡಕರನ್ನು ಸೃಷ್ಟಿ ಮಾಡಿ ಮೆರೆಯುತ್ತಿದೆ. ಎಲ್ಲಿಯವರೆಗೆ ಶಾಸ್ತ್ರ ಸಂಪ್ರದಾಯ, ಆಚರಣೆಗಳು ಶುದ್ದ  ಮನಸ್ಸಿನಿಂದ ನಡೆಯುವುದಿಲ್ಲವೋ ಎಲ್ಲಿಯವರೆಗೆ ಅತಿಯಾದ ವ್ಯವಹಾರಿಕ ಪ್ರವೃತ್ತಿಯ ರಾಜಕೀಯತೆ ಇರುವುದೋ ಅಲ್ಲಿಯವರೆಗೆ ಆತ್ಮಜ್ಞಾನವು ಹಿಂದುಳಿದಿರುತ್ತದೆ. ಪುಸ್ತಕದ ವಿಚಾರ ಮಸ್ತಕಕ್ಕೆ ಬಂದು ಮಾತಿನ ಮೂಲಕ ಹೊರಹೋಗುತ್ತಿದ್ದರೆ ಹೃದಯವಂತರಿರದೆ ಹೃದಯಹೀನ ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಹೋರಾಟ,ಹಾರಾಟ,ಮಾರಾಟದ ವ್ಯವಹಾರವೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಮನೆಯೊಳಗಿದ್ದ ಶಕ್ತಿ ಮನದೊಳಗೆ ಹೋಗಲಾಗದೆ  ಅಶುದ್ದತೆಯಿಂದ ಹೊರಗೆ  ಹೆಚ್ಚಾಗಿ ಹರಡಿಕೊಂಡರೆ  ಇದನ್ನು  ರಾಜಕೀಯತೆ ಎನ್ನಬಹುದು.ರಾಜಯೋಗವಾಗಲಾರದು. ಅಧ್ಯಾತ್ಮದ ಬೆಳವಣಿಗೆಗೆ ಆಂತರಿಕ ಶುದ್ದಿಯಾಗಬೇಕು.ಶಾಂತಿಯಿರಬೇಕು.ಇದನ್ನು ಹೊರಗಿನ ರಾಜಕೀಯ ಕೊಡುವುದೆ? ಸಂಸಾರ ಕಷ್ಟವೆಂದು  ಕಾವಿಧರಿಸಿ ಸಂನ್ಯಾಸಿಯಂತೆ ಸಮಾಜದ ಮಧ್ಯೆ ಪ್ರಚಾರಕರಾದವರು ಸಾಕಷ್ಟು ವೈಭವದ ಜೀವನ ನಡೆಸಿದರೂ  ಸಾಧನೆ ಎನ್ನುವುದಾದರೆ ಯಾರು ತಾನೆ ಸಂಸಾರಸ್ಥರಾಗಿದ್ದು ಕಷ್ಟಪಟ್ಟು ಧರ್ಮದ ಹಾದಿಯಲ್ಲಿ ನಡೆಯಲು ಇಷ್ಟಪಡುವರು? ಸಾಕಷ್ಟು ಹಣವಿರುವವರಿಗೆ ಸತ್ಯಜ್ಞಾನದ ಕೊರತೆ, ಹಣವಿಲ್ಲದವರಿಗೆ ಜ್ಞಾನವಿದ್ದರೂ  ಗೌರವದ ಕೊರತೆ.
ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಹೆಚ್ಚಾಗಿದೆ. ಭೂಮಿಯ ಸಾಲ ತೀರಿಸಲು ಬಂದವರು ಭೂಮಿಯನ್ನು ದುರ್ಭಳಕೆ ಮಾಡಿಕೊಂಡಾದರೂ ಭೂ ಆಳುವರು. ಆದರೆ ಋಣ ತೀರಿಸಲು ಭೂ ಸೇವೆ ಮಾಡಬೇಕು. ಸತ್ಕರ್ಮ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ಜ್ಞಾನವಿಲ್ಲದೆ ಸಾಲ ತೀರದು. ಇಂತಹ ವಿಚಾರವನ್ನು ಶಿಕ್ಷಣದಿಂದ  ಪಡೆದು ಭಾರತದ ಹಿಂದೂ ಸನಾತನ ಧರ್ಮ ಬೆಳೆದಿತ್ತು.ಈಗ ಶಿಕ್ಷಣವೇ ಪರಕೀಯರ ವಶವಾಗಿ ಪರದೇಶಕ್ಕೆ ಹೆಣ್ಣನ್ನು ಕೊಟ್ಟು  ಸ್ವದೇಶಕ್ಕೂ ನನಗೂ ಸಂಬಂಧ ವಿಲ್ಲವೆನ್ನುವಂತೆ ದೇಶವನ್ನೇ ವಿದೇಶ ಮಾಡಲು ಹೊರಟಿರುವ ಸರ್ಕಾರಕ್ಕೆ ಹೆಚ್ಚಿನ ಸಹಕಾರ ನೀಡುವ ಶ್ರೀಮಂತ ಪ್ರಜೆಗಳಲ್ಲಿ  ಆತ್ಮಜ್ಞಾನದ ಕೊರತೆ ಹೆಚ್ಚಾಗಿರೋದು  ಕಣ್ಣಿಗೆ ಕಾಣದ ಕಟು ಸತ್ಯ. ಇದನ್ನು ಪರಧರ್ಮದವರು ಗಮನಿಸುತ್ತಾ ಭಾರತೀಯ ಸ್ತ್ರೀ ಯರನ್ನು ತಮ್ಮೆಡೆ ಸೆಳೆಯುವ‌ಪ್ರಯತ್ನದಲ್ಲಿ ಯಶಸ್ವಿಯಾಗಿರೋದನ್ನು  ಪುರುಷರು ದ್ವೇಷ ಮಾಡಿ ಪ್ರಯೋಜನವಿಲ್ಲ. ಸಾಮಾನ್ಯಜ್ಞಾನದ ಕೊರತೆಯಿಂದ ಇಂದು  ಸಮಾಜದಲ್ಲಿ ಕೆಟ್ಟ ಬದಲಾವಣೆ ಆಗುತ್ತಿದೆ. ಒಳಗಿದ್ದ ಸತ್ವ ಸತ್ಯ ಬಿಟ್ಟು ಹೊರಗಿನ ಮಿಥ್ಯವನ್ನು ತುಂಬಿಕೊಂಡಿರುವ ಸಮಾಜವನ್ನು  ಭೌತಿಕದಲ್ಲಿ  ಕಂಡರೂ  ಅಧ್ಯಾತ್ಮದ  ಕೊರತೆಯನ್ನು  ನೀಗಿಸಲು ಸರಿಯಾದ ಶಿಕ್ಷಣ,ಶಿಕ್ಷಕ,ಗುರು ಮೂಲ ಶಕ್ತಿಯನ್ನು  ಗುರುತಿಸಲು ಸೋತಿರುವುದು ಭಾರತೀಯರ  ಈ ಸ್ಥಿತಿಗೆ ಕಾರಣವೆಂದರೂ ಇಲ್ಲಿ ತಪ್ಪಾಗುತ್ತದೆ. ಕಾರಣ ಇಲ್ಲಿ ಹೇಳಿದ್ದಷ್ಟೇ ಸತ್ಯವೆನ್ನುವ ಮಂದಿ ಹೆಚ್ಚು. ಪುರಾಣ ಇತಿಹಾಸದ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ನಮ್ಮ ಹಿಂದಿನ ರಾಜಕೀಯ ಬಿಡದೆ ರಾಜಯೋಗ ಅರ್ಥ ವಾಗದು. ತನ್ನ ತಾನು ಆಳಿಕೊಳ್ಳುವ ಜ್ಞಾನಶಕ್ತಿ ಸ್ತ್ರೀ ಪುರುಷರಿಬ್ಬರಲ್ಲಿಯೂ ಇದೆ. ಆದರೆ ಸ್ತ್ರೀ ಯ ಅಧ್ಯಾತ್ಮ ಶಕ್ತಿ ಪುರುಷರ ಭೌತಿಕ ಶಕ್ತಿಯನ್ನು  ಆಳುವುದೆನ್ನುವ ಕಾರಣಕ್ಕಾಗಿ ಸ್ತ್ರೀ ಯನ್ನು ಹಿಂದುಳಿಸಿ ಆಳಿರುವುದೇ  ಸಂತಾನದ ಅಜ್ಞಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಮೊದಲ ಗುರುವಿಗೆ ಕೊಡಬೇಕಾದ ಜ್ಞಾನದ ಶಿಕ್ಷಣದಲ್ಲಿಯೇ  ಪುರುಷಪ್ರಧಾನ ಮಿತಿಮೀರಿ ಭಾರತದಂತಹ ಪವಿತ್ರ ದೇಶ ದಾರಿತಪ್ಪಿ ನಡೆಯಲು ಕಾರಣವಾಗಿರೋದು ಸತ್ಯ. ಇಡೀ ಸಂಸಾರದ ಜವಾಬ್ದಾರಿ ಹೊತ್ತು ಹೊರಗೆ ಒಳಗೆ ದುಡಿದು ಜೀವನ ನಡೆಸುತ್ತಿರುವ ಮಹಿಳೆಯರು  ದೇಶದ ಆಸ್ತಿ.ಇವರನ್ನು ಮನರಂಜನೆಗಾಗಿ ಮೀಸಲಾಗಿಟ್ಟುಕೊಂಡವರೆಷ್ಟೋ ಮಂದಿಗೆ  ತಾವು ಆತ್ಮಹತ್ಯೆ ಮಾಡಿಕೊಂಡಿರುವ ಸತ್ಯಜ್ಞಾನವಿಲ್ಲ. ಎಲ್ಲಿಯವರೆಗೆ  ಪುರುಷ ತನ್ನ ಸಾಲ ತೀರಿಸಲು ಧರ್ಮ ಮಾರ್ಗ ಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಆತ್ಮಕ್ಕೆ ಶಾಂತಿ, ನೆಮ್ಮದಿ, ತೃಪ್ತಿ ಸಿಗೋದಿಲ್ಲ.ಅತೃಪ್ತ ಆತ್ಮಗಳಾಗಿದ್ದು ಆತ್ಮವಂಚನೆಯಲ್ಲಿಯೇ  ಕಾಲಕಳೆಯುವಂತಹ  ಮಕ್ಕಳು  ಬೆಳೆಯುತ್ತಿರುವುದರ ಹಿಂದೆ  ಅಜ್ಞಾನವಡಗಿದೆ.ಎಷ್ಟು ಪುಸ್ತಕ ಓದಿದ್ದೇವೆನ್ನುವ ಬದಲಾಗಿ ಎಷ್ಟು ಸತ್ಯ ಧರ್ಮದ  ಮಾರ್ಗ ದಲ್ಲಿ ನಡೆದು ಸ್ವತಂತ್ರ ರಾಗಿ ಸ್ವತಂತ್ರಜ್ಞಾನ ಪಡೆದಿದ್ದೇವೆನ್ನುವುದೇ ಮುಖ್ಯ. ಆಳುವುದಕ್ಕೆ ಹಣ ಬೇಕು.ಹಣಗಳಿಸುವುದಕ್ಕೆ ಜ್ಞಾನವಿರಬೇಕು.ಜ್ಞಾನ ಬಂದ‌ಮೇಲೆ ಹಣ ಸದ್ಬಳಕೆಯಾಗಬೇಕು. ಸದ್ಬಳಕೆ ಧರ್ಮದ ಪರವಿರಬೇಕು.ಧರ್ಮದ ಪ್ರಕಾರ ಜ್ಞಾನಕ್ಕೆ ಲಿಂಗಬೇಧವಿಲ್ಲ. ಹಾಗಾಗಿ ಜ್ಞಾನದೇವತೆಯಿಲ್ಲದ ಬ್ರಹ್ಮಜ್ಞಾನವಿಲ್ಲ. ಬ್ರಹ್ಮಜ್ಞಾನವಿಲ್ಲದೆ ಬ್ರಾಹ್ಮಣನಾಗೋದಿಲ್ಲ.ಬ್ರಾಹ್ಮಣನ ನಂತರ ಕ್ಷತ್ರಿಯಧರ್ಮ, ವೈಶ್ಯ ಶೂದ್ರರೂ ಮೇಲಿನ ತಲೆಯ ಆಧಾರದಲ್ಲಿಯೇ ಬೆಳೆದಿರುವಾಗ ತಲೆಯಿದ್ದವರು ಸರಿಯಾಗಿ ನಡೆಯಬೇಕು. ನಡೆದವರಲ್ಲಿ ತಲೆಯಿದ್ದರೂ ಗುರುತಿಸದವರು ಬೆಳೆದರು.ಇವೆಲ್ಲವೂ ಅಸಮಾನತೆಯ ಅಜ್ಞಾನವನ್ನು ಬೆಳೆಸಿತು.ಈಗಲೂ ಹಳೆಯ ಗಾಯವನ್ನು ಕೆದಕಿಕೊಂಡು ಹುಣ್ಣು ಮಾಡಿಕೊಂಡು  ಜೀವನದಲ್ಲಿ ರೋಗ ಹರಡಲು ರಾಜಕೀಯತೆ ಮನೆಮಾಡಿಕೊಂಡಿದೆ. ಇದನ್ನು ತಡೆಯಲು ಕಷ್ಟ.ಕಷ್ಟಪಟ್ಟರೆ ಸಾಧ್ಯ.ಆದರೆ ಕಷ್ಟವನ್ನು ಹಣದಿಂದ ಸರಿಪಡಿಸಹೋಗಿ ಇನ್ನಷ್ಟು ಸಾಲ ಹೋರಿಸಿ  ತಮ್ಮ ಅಧಿಕಾರ ಸ್ಥಾನಮಾನ ಉಳಿಸಿಕೊಳ್ಳಲು ಹೊರಟಿರುವ ಮಧ್ಯವರ್ತಿಗಳು  ತಾವೂ ಸತ್ಯ ತಿಳಿಯದೆ ಪರರಿಗೂ ತಿಳಿಸದಂತೆ ಅಡ್ಡದಾರಿಗೆ ಸ್ತ್ರೀ ಯರನ್ನು ಮಕ್ಕಳನ್ನು ಎಳೆದಿರೋದು ದುರಾದೃಷ್ಟಕರ ವಿಚಾರ. ಒಟ್ಟಿನಲ್ಲಿ ಮಾಡಿದ್ದುಣ್ಣೋ ಮಹಾರಾಯ ಎಂದು ಪುರುಷರಿಗೆ ಹೇಳಿರುವುದಕ್ಕೆ ಈ ರಾಜಕೀಯತೆ ಕಾರಣ.
ಹಿಂದಿನ ಸ್ತ್ರೀ ಯರಲ್ಲಿದ್ದ ಆತ್ಮಜ್ಞಾನಕ್ಕೂ ಈಗಿನ ವಿಜ್ಞಾನಕ್ಕೂ ಬಹಳ ಅಂತರವಿದೆ.ಈ ಅಂತರವನ್ನು ಮದ್ಯವರ್ತಿಗಳು ನಿಂತು ಕುತಂತ್ರದಿಂದ  ಇನ್ನಷ್ಟು ದೂರ ಮಾಡಿದರೆ‌ಯಾರಿಗೆ ಲಾಭ? ನಷ್ಟ? ಮನುಕುಲ ಎಚ್ಚರವಾಗೋದು ಕಷ್ಟವಿದೆ.
ಭ್ರಷ್ಟಾಚಾರ ಬೆಳೆಯಲು ಕಾರಣ ಸ್ತ್ರೀ ಸಹಕಾರ. ಇದರಿಂದಾಗಿ ಸ್ತ್ರೀ ಶೋಷಣೆ ಹೆಚ್ಚಾಗುವುದೆನ್ನುವ ಸತ್ಯವನ್ನು ಸ್ವಯಂ ಸ್ತ್ರೀ ಅರ್ಥ ಮಾಡಿಕೊಂಡಿಲ್ಲ. ಹಣವೇ ಸರ್ವಸ್ವ ವಲ್ಲ.ಜ್ಞಾನ ಸರ್ವಸ್ವ.ಕರ್ಮಫಲ ಈ ಜನ್ಮದಲ್ಲಿ  ಅನುಭವಿಸದಿದ್ದರೂ ಮುಂದಿನ ಜನ್ಮದಲ್ಲಿ ಅನುಭವಿಸಲೇಬೇಕೆನ್ನುವುದು ಅಧ್ಯಾತ್ಮ ಸತ್ಯ. ಭೌತಿಕ ವಿಜ್ಞಾನ ಒಪ್ಪಲಿ ಬಿಡಲಿ ಸತ್ಯ ಒಂದೇ. ಇದನ್ನರಿತು  ನಡೆದರೆ ಸಮಾನತೆ ಮನೆಯೊಳಗೆ ಹೊರಗೆ ಸರಿಯಿರುತ್ತದೆ. ಸಂಸಾರ ಸಮಾಜದ ಒಂದು ಭಾಗವಷ್ಟೆ. ಸಮಾಜವೇ ಸಂಸಾರವಾದರೆ ನಡೆಸೋದು ಕಷ್ಟ.ಅವರವರ ಜ್ಞಾನದ ಸದ್ಬಳಕೆಗೆ ಸರ್ಕಾರದ ಹಣಕ್ಕಿಂತ ಜ್ಞಾನದ ಶಿಕ್ಷಣವೇ ಮೂಲಾಧಾರ.
ಮೂಲಾಧಾರ ಬಿಟ್ಟು ಸಹಸ್ರಾರದವರೆಗೆ  ಹೋಗಲು ಕಷ್ಟ.ಮೂಲದ ಧರ್ಮ ಕರ್ಮ ಜ್ಞಾನದ ಶಿಕ್ಷಣವೇ ಕೊಡದೆ ರೆಂಬೆಕೊಂಬೆಗಳನ್ನು  ಹಿಡಿದರೆ  ಮೂಲಾಧಾರ ಗಟ್ಟಿಯಾಗುವುದೆ?  ಹಲವರು ಬದಲಾಗುತ್ತಿದ್ದಾರೆ.ಕೆಲವರಿಗೆ ಬದಲಾವಣೆ ಕಷ್ಟವಾದರೂ ಸಾಧ್ಯವಿದೆ. ಬದಲಾಗದವರಿಗೆ ಬದಲಾಯಿಸಲಾಗದು. ಬದಲಾವಣೆ ಜಗದ ನಿಯಮ. ಕಾಲಚಕ್ರ ತಿರುಗುವುದಂತೂ ಸತ್ಯ. ಕಾಲಿಗೆ ಚಕ್ರ ಕಟ್ಟಿಕೊಂಡು  ಓಡುವ ಬದಲು ನಿಂತಲ್ಲಿಯೇ ಕಾಲಮಾನದ ಬಗ್ಗೆ ಚಿಂತನೆ ನಡೆಸಿ ನಡೆದರೆ ಉತ್ತಮ ದಾರಿ ಹತ್ತಿರವೇ ಸಿಗಬಹುದು.

No comments:

Post a Comment