ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, July 17, 2024

ಭಾರತೀಯರ ಸ್ಥಿತಿಗೆ ಶಿಕ್ಷಣವೆಷ್ಟು ಕಾರಣ?

ಭಾರತೀಯರ ಈ ಸ್ಥಿತಿಗೆ ಕಾರಣವಾಗಿರುವ ಶಿಕ್ಷಣ ಪದ್ದತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ  ಸಾಕಷ್ಟು  ಪ್ರಯತ್ನಗಳಾಗುತ್ತಿದೆ. NEP ಪ್ರಕಾರ  ಕೆಲವು ಶಾಲಾ ಕಾಲೇಜುಗಳಲ್ಲಿ  ಪಠ್ಯಪುಸ್ತಕಗಳನ್ನು ಅಳವಡಿಸಿ ಪ್ರಾರಂಭವೂ ಆಗಿದೆ. ಆದರೆ ನಮ್ಮ ಶಿಕ್ಷಣ ಪದ್ದತಿಯು ಮನೆಯೊಳಗಿನ ಮೊದಲ ಗುರುವಿನಿಂದ  ಪ್ರಾರಂಭಿಸಿ ನಂತರವೇ ಹೊರಗಿನ‌ ಗುರುವಿನ ಕಡೆಗೆ  ನಡೆಸಿರೋದನ್ನು ಹಿಂದೂಗಳಾದವರು  ಗಮನಿಸಿದರೆ   ಹೊರಗಿನ ಕೆಲವು ಶಾಲೆ ಬಿಟ್ಟರೆ ಉಳಿದೆಲ್ಲಾ ಹಿಂದಿನ ಪಠ್ಯಕ್ರಮದಲ್ಲಿಯೇ
ತರಗತಿಗಳು ನಡೆದಿದ್ದು ಮಕ್ಕಳ ಬೆನ್ನಿಗೆ ಹೊರೆ ತಲೆಗೆ  ಭಾರವನ್ನು ಇಳಿಸಿಲ್ಲ. ಅದೇ ಶಿಕ್ಷೆ ಅದೇ ರಾಜಕೀಯ, ಅದೇ
ಸುಲಿಗೆಯಲ್ಲಿ ಪೋಷಕರಿಗೂ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಪರಿಹಾರವೇನು? 
ಪರಿಹಾರ ಒಳಗಿದೆ ಮನೆಯೊಳಗಿನಿಂದಲೇ ನಮ್ಮ ಧರ್ಮ ಸಂಸ್ಕೃತಿ, ಭಾಷೆಯ‌ಕಡೆಗೆ ಹೆಚ್ಚು ಒತ್ತುಕೊಟ್ಟು ಮಕ್ಕಳನ್ನು
ಸಂಸ್ಕಾರದೆಡೆಗೆ ನಡೆಸಲು ಮಹಿಳೆಯರು ತಯಾರಾದರೆ ಮುಂದಿನ ದಿನಗಳಲ್ಲಿ  ಹೊರಗೂ ಬದಲಾವಣೆ ಸಾಧ್ಯ.
ಮೊದಲು ಪೋಷಕರಾದವರು ಒಗ್ಗಟ್ಟಿನಿಂದ ಸತ್ಯದೆಡೆಗೆ ನಡೆದರೆ ಮಕ್ಕಳಿಗೂ ಉತ್ತಮ ದಾರಿಯಾಗುತ್ತದೆ. ಹಾಗಾದರೆ ಇಲ್ಲಿ ಸತ್ಯ ಇಲ್ಲವೆ? ಧರ್ಮ ಯಾವುದು? ಪ್ರಶ್ನೆಗೆ ಉತ್ತರ ನಮ್ಮ ದೇಶ,ರಾಜ್ಯದ ನೆಲ ಜಲವನ್ನು ಬಳಸುವಾಗ ಅಲ್ಲಿ ನಾವಿರೋದು ಸತ್ಯ. ಇನ್ನು ಅದರ ಋಣ ತೀರಿಸಲು  ಅಲ್ಲಿಯ ಭಾಷೆ,ಸಂಸ್ಕೃತಿ, ಧರ್ಮವನ್ನು ಉಳಿಸುವ ಬೆಳೆಸುವ ಶಿಕ್ಷಣ ನೀಡುವುದು ಧರ್ಮ ವಾಗುತ್ತದೆ. ಇಲ್ಲಿ ಯಾರೂ ಹಿಂದೂಗಳೂ ಅಲ್ಲ,ಮುಸ್ಲಿಂ ಅಲ್ಲ, ಕ್ರೈಸ್ತ ರೂ ಅಲ್ಲ ಎಲ್ಲಾ ಒಂದೇ ದೇಶದ ರಾಜ್ಯದ ಪ್ರಜೆಗಳಷ್ಟೆ. ಮೊದಲು
ನಿಂತ ನೆಲವನ್ನು ಗಟ್ಟಿ ಮಾಡಿಕೊಂಡರೆ ಜಲವೂ ಶುದ್ದ .ಇದಕ್ಕೆ ರಾಜಕೀಯ ಬೇಕೆ?
ಮೊದಲು ಮಾನವರಾಗಿ ಎಂದ ಮಹಾತ್ಮರ ದೇಶವನ್ನು ಭ್ರಷ್ಟಾಚಾರದ ಕಡೆಗೆ ಎಳೆದುಕೊಂಡು ಹೋರಾಟ ನಡೆಸಿದರೆ
ಆ ಹೋರಾಟದ ಫಲವನ್ನು ಮಕ್ಕಳು ಮೊಮ್ಮಕ್ಕಳೇ ಅನುಭವಿಸುವುದು. ನಮ್ಮ ಸಾಮಾನ್ಯಜ್ಞಾನ ಬಿಟ್ಟು ವಿಶೇಷ ಜ್ಞಾನಕ್ಕೆ  ಹೊರಗೆ ನಡೆದರೆ ಅಧರ್ಮ. ಇದರಿಂದಾಗಿ ಸಿಕ್ಕಿದ್ದು
ಕೇವಲ ದು:ಖ.
ಶೋಷಣೆ ವಿಚಾರದಲ್ಲೂ ರಾಜಕೀಯ ಬೆಳೆದಿದೆ. ಹಾಗಾದರೆ ಈಗ ಪ್ರಜಾಪ್ರಭುತ್ವದ ಲ್ಲಿ ಶೋಷಣೆ ಮಾಡುತ್ತಿರುವವರು ಯಾರು? ನಮ್ಮದಲ್ಲದ ಶಿಕ್ಷಣವನ್ನು ನೀಡುತ್ತಿರುವವರು ಯಾರು?  ಇದಕ್ಕಾಗಿ  ಸಾಲ ಮಾಡಿ ಮಕ್ಕಳ ತಲೆಮೇಲೆ ಹೋರಿಸಿ ಸರಿಯಾದ ಕೆಲಸವಿಲ್ಲದೆ  ಅಡ್ಡದಾರಿ ಹಿಡಿದರೆ ತಪ್ಪು ಯಾರದ್ದು?
ರಾಷ್ಟ್ರೀಯ ಶಿಕ್ಷಣ ನೀತಿಯೇನೋ ಹೊಸದಲ್ಲ.ಇದು ಹಳೇ
ಕಾಲದ್ದು.ಆದರೂ ಇಂದಿನ ಶಿಕ್ಷಣದಲ್ಲಿ  ಹೊಸದಾದ ತಂತ್ರ ಸೇರಿಸಿ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಸಾಕಷ್ಟು ರಾಜಕೀಯ
ನಡೆಸಿದ್ದಾರೆನ್ನಬಹುದು. ಮೊದಲು ಆಳುವವರಿಗೆ ಸರಿಯಾದ ಶಿಕ್ಷಣವಿರಬೇಕಿದೆ. 
ನಮ್ಮ ಭಾರತೀಯ  ಶಿಕ್ಷಣವು ತತ್ವಜ್ಞಾನದಿಂದ ತಂತ್ರಜ್ಞಾನದ ಕಡೆಗೆ ನಡೆದಿತ್ತು. ಈಗಿನ ಶಿಕ್ಷಣದಲ್ಲಿ ಮೊದಲೇ ತಂತ್ರಜ್ಞಾನದ
ದಾಸರಾಗಿಸಿಕೊಂಡು ತತ್ವದ ಭೋದನೆ ಮಾಡಿದರೆ ತಿರುಗಿ
ಬರೋದು ಕಷ್ಟ. ಬದಲಾವಣೆಯು ಸಾತ್ವಿಕವಾಗಿರಬೇಕಿದೆ.
ರಾಜಕೀಯವಾದರೆ ಶಿಕ್ಷಕರಿಂದ ಹಿಡಿದು  ಇಡೀ ಕ್ಷೇತ್ರವೇ ಮಕ್ಕಳನ್ನು ತಂತ್ರದಿಂದ ಆಳಬಹುದು.ಉತ್ತಮ ವಿಚಾರವನ್ನು ಪಠ್ಯಪುಸ್ತಕದಲ್ಲಿ ಸೇರಿಸುವಾಗ ವಾಸ್ತವ ಸತ್ಯವನ್ನು ಗಮನದಲ್ಲಿಟ್ಟುಕೊಂಡುಮುಂದೆ ಹೋಗಬೇಕಿದೆ.
ಪೋಷಕರ ಸಮಸ್ಯೆಗೆ ಕಾರಣವನ್ನುಹೊರಗಿನ ಶಿಕ್ಷಣದಲ್ಲಿ
 ತಿಳಿಸಲಾಗದು. ಹೊರಗಿನ ಶಿಕ್ಷಣದ ಸಮಸ್ಯೆಯು ಪೋಷಕರಿಗೆ ತಿಳಿಯುತ್ತಿಲ್ಲ.ಹೀಗಿರುವಾಗಮಧ್ಯದಲ್ಲಿ ಮಕ್ಕಳ ಗತಿ ಏನಾಗಬಹುದು?
ಇಲ್ಲಿ  ಕೆಲವು ಸೂಕ್ಷ್ಮ ವಿಚಾರಗಳಿವೆ.ಇದನ್ನು ಎಲ್ಲಾ ಪ್ರಜೆಗಳು
ತಮ್ಮಲ್ಲಿ  ತಿಳಿಯಲು ಸಾಧ್ಯವಾದರೆ ನಮಗೆ ನಾವೇ ಗುರು ಆಗಬಹುದು.
ಮೊದಲನೆಯದಾಗಿ ನಾವೆಲ್ಲರೂ ದೇಶದೊಳಗಿರುವ ಸಾಮಾನ್ಯ ಪ್ರಜೆಗಳಷ್ಟೆ.ನಮ್ಮಲ್ಲಿ ಸಾಮಾನ್ಯಜ್ಞಾನವಿದೆ. ಇದು
ನಮ್ಮ ಮಕ್ಕಳಲ್ಲಿಯೂ ಇರುತ್ತದೆ. ನಾವೆಷ್ಟು ಇದನ್ನು ಸದ್ಬಳಕೆ
ಮಾಡಿಕೊಂಡು ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ? ದೇಶಭಕ್ತಿಯಾಗಲಿ,ಭಾಷಾಪ್ರೇಮವಾಗಲಿ
ಹೊರಗಿನಿಂದ ಬೆಳೆಸುವ ಶಿಕ್ಷಣವಾಗದು.ಇದು ಜನ್ಮದಿಂದ
ಒಳಗಿರುವ ಶಕ್ತಿ. ಇದಕ್ಕೆ ಪೂರಕವಾದ ಸದ್ವಿಚಾರ,ಆಚಾರ, ಸಂಸ್ಕಾರವನ್ನು ನಾವು ಪಡೆದಿದ್ದರೆ ಅದೂ ಮಕ್ಕಳಲ್ಲಿರುತ್ತದೆ
ನಾವು  ಮನೆಯಲ್ಲಿಯೇ ಇನ್ನಷ್ಟು  ಸಹಕರಿಸಿ ಬೆಳೆಸಬೇಕು.
ಇಂದಿನ ಶಿಕ್ಷಣ ಪದ್ದತಿ ಸರಿಯಿಲ್ಲದೆ ದೇಶ ಹಾಳಾಗುತ್ತಿದೆ ಎನ್ನುವ  ವಿಚಾರದ ಬಗ್ಗೆ ಬಹಳಷ್ಟು ಚರ್ಚೆ ಯಾಗುತ್ತದೆ. ವಾದ ವಿವಾದವಾಗುತ್ತದೆ.ಆದರೆ ಇದು ಸ್ವಾತಂತ್ರ್ಯ ಪೂರ್ವದ
ಕಾಲದಿಂದ  ಕೆಲವು ರಾಜಕೀಯ ಶಕ್ತಿಗಳು ಭಾರತದಲ್ಲಿದ್ದೇ
ಇದಕ್ಕೆ ವಿರುದ್ದದ ಶಿಕ್ಷಣ ಪ್ರಾರಂಭಿಸಿರೋದು ಸತ್ಯ. ಸ್ವಾತಂತ್ರ್ಯ ಬಂದ ನಂತರ ಭಾರತೀಯರೆ ಒಪ್ಪಿಕೊಂಡು ಅಪ್ಪಿಕೊಂಡು  ಬೆಳೆಸಿರುವಾಗ ನಾವದನ್ನು ನಮ್ಮ ತಪ್ಪಿಲ್ಲ ಎನ್ನುವುದರಲ್ಲಿ ಅರ್ಥ ವಿಲ್ಲ. ಈಗಂತೂ ಇದೇ ಪೋಷಕರಿಗೆ
ಗೌರವ ನೀಡುವ ಮಟ್ಟಿಗೆ  ಬೆಳೆಸಿ ವಿದೇಶವನ್ನು ತಿರಸ್ಕರಿಸಿದ
ಹಿಂದಿನ ಮಹಾತ್ಮರನ್ನೇ ತಿರಸ್ಕಾರದಿಂದ ನೋಡುವ‌ಯುವಕ
ಯುವತಿಯರನ್ನು ಪೋಷಕರೆ ಪ್ರೋತ್ಸಾಹ ಮಾಡುತ್ತಾರೆಂದರೆ  ಶಿಕ್ಷಣ ಸರಿಯಿಲ್ಲವೆಂದಲ್ಲ.ಅದರಲ್ಲಿ ತುಂಬಿದ  ವಿಷಯವೇ ಸರಿಯಿರಲಿಲ್ಲ.
ಪ್ರತಿಯೊಂದು ಭೌತಿಕಾಸಕ್ತಿ ಬೆಳೆಸೋ ಭೌತ ವಿಜ್ಞಾನವಿಲ್ಲದೆ
ನಮ್ಮ ಜೀವನ ನಡೆದಿಲ್ಲ.ಆದರೆ ಅಧ್ಯಾತ್ಮ ವಿಜ್ಞಾನವಿಲ್ಲದ ಜೀವನ ಜೀವನವೇ ಅಲ್ಲವೆನ್ನಬಹುದಷ್ಟೆ.
ಹಾಗಾದರೆ ನಮ್ಮ ಜೀವನ ವ್ಯರ್ಥ ವೆ? ಮಕ್ಕಳು ಕಲಿತ ಶಿಕ್ಷಣ
ವ್ಯರ್ಥ ವೆ?  ಹಾಗೆಂದರೆ ಯಾರಾದರೂ  ಒಪ್ಪುವರೆ? ಇಲ್ಲಿ ತಪ್ಪು ಒಪ್ಪುಗಳ ವಿಚಾರದಲ್ಲೂ  ಜ್ಞಾನ ವಿಜ್ಞಾನದ ಅಂತರ ಬೆಳೆದುನಿಂತು ಅಂತರವನ್ನು ಅಜ್ಞಾನದ ರಾಜಕೀಯ  ತುಂಬಿದೆ. ರಾಜಕೀಯದಿಂದ  ಯಾರಾದರೂ ಮುಕ್ತಿ  ಪಡೆದರೆ? 
ಹಿಂದಿನ ರಾಜಾಧಿರಾಜರ ಕೊನೆಗಾಲವನ್ನು ಇತಿಹಾಸದಲ್ಲಿ
ಓದಿ ತಿಳಿದರೂ ಯಾರೂ ಅವರ ಅನುಭವವನ್ನು ತಿಳಿಯಲಾಗದು.ಹಾಗೆಯೇ ಎಷ್ಟೋ ಮಹಾತ್ಮರುಗಳು ನಮ್ಮ ಭಾರತವನ್ನು ಶ್ರೇಷ್ಠ ಮಾಡಿದ್ದಾರೆ. ಇದನ್ನು ಕನಿಷ್ಠ ಮಾಡುವತ್ತ  ಶಿಕ್ಷಣವನ್ನು  ಎಳೆದಾಡಿಕೊಂಡು ಮುಂದೆ ನಡೆದವರೂ ಈಗಿಲ್ಲದಿರಬಹುದು.ಆದರೆ ವಾಸ್ತವ ಸತ್ಯವು
ನಮ್ಮ‌ಕಣ್ಣ ಮುಂದೆ ನಿಂತಿದೆ. ಈಗಲೂ ಅದೇ ಶಿಕ್ಷಣವನ್ನು
ತಲೆಗೆ ತುಂಬಿ ಮಕ್ಕಳೇ ಮುಂದಿನ  ಪ್ರಜೆಗಳಾಗಿರುವಾಗ ಅವರಿಂದ  ದೇಶಕ್ಕೇನು ಲಾಭ? ವಿದೇಶದೆಡೆಗೆ ನಡೆಸೋ ತಂತ್ರಜ್ಞಾನದಿಂದ ತತ್ವಜ್ಞಾನ ಬೆಳೆಸಬಹುದೆ?
ತತ್ವ ಒಳಗಿನ‌ಜ್ಞಾನದಲ್ಲಿರುತ್ತದೆ.ತಂತ್ರ ಹೊರಗಿನಿಂದ ಸೇರುತ್ತದೆ. ಇವೆರಡರ  ಸಮ್ಮಿಲನವೇ ವಿಜ್ಞಾನ.ವಿಶೇಷ ಜ್ಞಾನ.
ಮಕ್ಕಳ ವಿಶೇಷ ಆಸಕ್ತಿ,ಪ್ರತಿಭೆ ಗುರುತಿಸೋದು ಶಿಕ್ಷಕರ ಕರ್ತವ್ಯ. ಮಕ್ಕಳಿಗೆ ಸಂಸ್ಕಾರ ನೀಡಿ  ಶುದ್ದಗೊಳಿಸುವುದು ಪೋಷಕರ ಧರ್ಮ. ಇವುಗಳನ್ನು ತಿಳಿಯದೆ ಎಲ್ಲವನ್ನೂ ಸರ್ಕಾರವೇ ಮಾಡಲಿ ಎನ್ನುವವರಿಂದ ಯಾವ ಮಕ್ಕಳ ಭವಿಷ್ಯ ಉಜ್ವಲವಾಗದು. 
ಇದನ್ನು ಪ್ರಜೆಗಳೇ  ಆತ್ಮಾವಲೋಕನ ದಿಂದರಿತು ತಮ್ಮಲ್ಲಿ ಬದಲಾವಣೆಯಾದರೆ ದೇಶದ ಶಿಕ್ಷಣವೂ ಬದಲಾಗುತ್ತದೆ.
ನಿರಂತರ ನಡೆಯುತ್ತಿರುವ ಮಕ್ಕಳು ಮತ್ತು ಮಹಿಳೆಯರ ಮೇಲಿನ ಶೋಷಣೆಗೆ ಕಾರಣವೇ ಅಜ್ಞಾನದ ಶಿಕ್ಷಣವಾಗಿದೆ.
ಇದು ವಿದೇಶದಲ್ಲಿ ಇದ್ದರೂ ಅಲ್ಲಿಯ ಕಾನೂನಿಗೆ ಭಯ
ಪಡುವ  ಜನರಿದ್ದಾರೆ. ಶಿಕ್ಷೆಯೂ ಚೆನ್ನಾಗಿದೆ.ಹೀಗಾಗಿ ಅಲ್ಲಿನ
ಕೆಟ್ಟ ಬುದ್ದಿಯವರು ತಮ್ಮ ಹಣಬಲದಿಂದ ಶಿಕ್ಷಣ ಕೇಂದ್ರ ತೆರೆದು ಇಲ್ಲಿಯ ಮಕ್ಕಳನ್ನು ಆಳಲು ಇಲ್ಲಿಯ ಸರ್ಕಾರಗಳು
ಒಪ್ಪಿದರೆ ಇದಕ್ಕೆ ಪ್ರೋತ್ಸಾಹ ಕೊಡುವ‌ ಹಣವಂತರಿಗೇನೂ
ಕಡಿಮೆಯಿಲ್ಲ. ಇದರ ಪರಿಣಾಮವೇ ದೇಶದ ಮೂಲ ಶಕ್ತಿ
ಹಿಂದುಳಿಯೋದು. ಪ್ರಜಾಶಕ್ತಿಯಾಗಿರುವ ಆತ್ಮಜ್ಞಾನದ ಕೊರತೆಯೇ  ಎಲ್ಲಾ  ಭ್ರಷ್ಟಾಚಾರದ ಮೂಲ. 
NEP  ಬಂದ ಮೇಲೆ ಎಲ್ಲಾ ಬದಲಾಗುವುದೆನ್ನುವ ಕನಸು ಬಿಟ್ಟು ಈಗಲೇ ನಮ್ಮಲ್ಲಿರುವ ಸ್ವಂತ ಬುದ್ದಿ,ಜ್ಞಾನವನ್ನು ನಮ್ಮ ಮಕ್ಕಳಿಗೆ ಮನೆಯೊಳಗೆ ಹೊರಗೆ ನೀಡಿದರೆ ಸಾಕು.
ಇಲ್ಲಿ ಮಕ್ಕಳಿಗೆ ರಾಜಕೀಯದ ಅಗತ್ಯವಿಲ್ಲ.ರಾಜಯೋಗದ ಅಗತ್ಯವಿದೆ. ಅವರನ್ನು ಅವರು ತಿಳಿದುಕೊಳ್ಳಲು ಯೋಗದ ಕಡೆಗೆ ಪೋಷಕರು ನಡೆಸುವುದರಿಂದ ಮುಂದೆ  ಆತ್ಮನಿರ್ಭರ ಭಾರತ ಸಾಧ್ಯವಿದೆ.ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳಿಸಿ
ಎಷ್ಟೋ ವರ್ಷ ವಾದರೂ ಈಗಲೂ ಅದರ ವಿರುದ್ದ ನಿಂತವರಿಗೆ  ನಮಗೆ ನಾವೇ ಮೋಸಹೋಗಿರುವ ಜ್ಞಾನವಿಲ್ಲ. ಇದನ್ನು  ಶಿಕ್ಷಣದಲ್ಲಿ ಜಾರಿಗೊಳಿಸುವುದಿರಲಿ ಶಿಕ್ಷಕರಾದವರಿಗೆ ಇದರ ಬಗ್ಗೆ  ಜ್ಞಾನವಿದೆಯೆ ಇದು ತಿಳಿದರೆ
ಶಿಕ್ಷಕರನ್ನು ತಯಾರಿಸುವ ಕೆಲಸ ಮಾಡೋರು ಯಾರು?
ಸಾಕಷ್ಟು ಸಮಸ್ಯೆಗಳಿಗೆ ಉತ್ತರವಿಲ್ಲ.ಹೀಗಾಗಿ ಪೋಷಕರೇ ಎಚ್ಚರವಾಗಿದ್ದರೆ ಮಕ್ಕಳ ಭವಿಷ್ಯ  ಪೋಷಕರ ಕೈಯಲ್ಲಿರಬಹುದು. ಇಲ್ಲವಾದರೆ ಯಾರದ್ದೋ ಕೈ ಕೆಳಗೆ ಮಕ್ಕಳು ಸಿಲುಕಿ ದೂರವಾಗುತ್ತಾರೆ.ಈಗಾಗಲೇ ಎಷ್ಟೋ ವಿದೇಶಿ ಕಂಪನಿಗಳು ತಮ್ಮ ಲ್ಲಿ ಕೆಲಸಮಾಡುವ ವಿದ್ಯಾವಂತ
ಭಾರತೀಯ ಪ್ರಜೆಗಳನ್ನು  ಅವರವರ ದೇಶದ ಸಂಪತ್ತು ಮಾಡಿಕೊಂಡು  ದೇಶವನ್ನು ವಿದೇಶ ಮಾಡೋದರಲ್ಲಿದ್ದಾರೆ.
ಇನ್ನೂ ಮುಂದೆ ಹೋದರೆ ನಮ್ಮ ಮಕ್ಕಳೇ  ನಮಗೆ ವಿರುದ್ದ ನಿಂತು ಆಳೋದರಲ್ಲಿ ಆಶ್ಚರ್ಯ ವಿಲ್ಲ.ಈಗಾಗಲೇ ಎಷ್ಟೋ ಸಂಸಾರಗಳು ಹೀಗೇ ಆಗಿದೆ.ಕೆಲವರಿಗೆ ಇದೊಂದು ಪ್ರಗತಿ ಪ್ರತಿಷ್ಡೆಯಾದರೆ ಹಲವರಿಗೆ ರೋಧನೆಯಾಗಿದೆ.ಇದಕ್ಕೆ ಕಾರಣವೆ ನಮ್ಮ ಸಹಕಾರವೆಂದರೆ ಪ್ರತಿಫಲ ಮಕ್ಕಳ. ಅಸಹಕಾರ. ಜ್ಞಾನದ ದೇಶವನ್ನು ಅಜ್ಞಾನದಿಂದ ಆಳಿದರೆ ಜ್ಞಾನ ಬರುವುದೆ?  ಜ್ಞಾನ ಬಂದವರು ಮಕ್ಕಳಿಗೆ ಜ್ಞಾನದ ಶಿಕ್ಷಣ ನೀಡುವುದೇ ಇದಕ್ಕಿರುವ ಪರಿಹಾರ. 
ಸಾಮಾನ್ಯರ ಸತ್ಯಕ್ಕೆ ಬೆಲೆಕೊಡದೆ ದೇಶವನ್ನು ಹಾಳುಮಾಡಿ
ಜ್ಞಾನ ಕುಸಿದಿದೆ. ಜ್ಞಾನಿಗಳಿಂದ ತುಂಬಿದ್ದ ಭಾರತದಲ್ಲಿರುವ ರಾಜಕೀಯಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ ಪಡೆದ ಪ್ರಜೆಗಳ
ಸಹಕಾರ. ಇದರಿಂದಾಗಿ ಯಾರಿಗೆ ಲಾಭ ಯಾರಿಗೆ ನಷ್ಟ ಆಗಿದೆ ಎನ್ನುವ ಸತ್ಯವನ್ನು  ಎರಡು ರೀತಿಯಲ್ಲಿ ಅಳೆದರೆ
ನಿಜವಾದ  ಬಡತನವನ್ನು ಹಣದಿಂದ ಅಳೆದವರಿಗೆ ಕಷ್ಟ ನಷ್ಟ
ಜ್ಞಾನದಿಂದ ಅಳೆದವರಿಗೆ ಲಾಭವಾಗಿದೆ. 
ಜ್ಞಾನದಲ್ಲಿಯೂ ಎರಡು ರೀತಿಯಿದೆ ಒಂದು ಅಧ್ಯಾತ್ಮ ಇನ್ನೊಂದು ಭೌತಿಕ. 
ಅಧ್ಯಾತ್ಮ ಜ್ಞಾನಿಗಳಿಂದ ಶಾಂತಿ ನೆಲೆಸಬೇಕಿತ್ತು.ನೆಲೆಸಿದೆಯೆ?
ಇಲ್ಲವೆಂದರೆ  ಅಲ್ಲಿಯೂ ರಾಜಕೀಯವಿದೆ ಎಂದರ್ಥ. ಎಲ್ಲಿ ರಾಜಕೀಯವಿರುವುದೋ ಅಲ್ಲಿ ಕ್ರಾಂತಿಯೇ ಹೆಚ್ಚು.
ಹಾಗೆಯೇ ಎಲ್ಲಿ ರಾಜಯೋಗವಿದೆಯೋ ಅಲ್ಲಿ ಶಾಂತಿ ಸತ್ಯ
ಧರ್ಮ ಇರುತ್ತದೆ. ರಾಜಯೋಗವನ್ನು ರಾಜಕೀಯವೆಂದು ತಿಳಿಯುವುದೇ ಅಜ್ಞಾನ.
ಸ್ವಾಮಿ ವಿವೇಕಾನಂದರು ಭಾರತವನ್ನು ಸದೃಢವಾಗಿ ಕಟ್ಟಲು
ಯುವಶಕ್ತಿಗೆ ರಾಜಯೋಗದ ಶಿಕ್ಷಣ ನೀಡುವ ಸಂದೇಶವನ್ನು
ಎಷ್ಟು ಮಂದಿ ಅರ್ಥ ಮಾಡಿಕೊಂಡರೋ ದೇವರಿಗಷ್ಟೆ ಗೊತ್ತು. ಯುವಜನತೆಯನ್ನು ರಾಜಕೀಯದ ದಾಳ ಮಾಡಿಕೊಂಡು ಆಟವಾಡಿದವರು ದೇಶವನ್ನು ಸಾಲದೆಡೆಗೆ ಎಳೆದು ಯುವಶಕ್ತಿ ದುರ್ಭಳಕೆ  ಆಗಿದೆ.ಕಾರಣ ಶಿಕ್ಷಣದಲ್ಲಿ ಭಾರತೀಯತೆ ಮಾಯವಾಗಿ ವಿದೇಶಿಯತೆ ಬೆಳೆಸಿದ್ದಾರೆ.
ಇದರಲ್ಲಿನ  ಒಂದೊಂದು ವಿಚಾರವೂ ಭಾರತದ ಪ್ರಜೆಗಳಿಗೆ
ಇಂದು ಅರ್ಥ ವಾಗಬಹುದು. ಸತ್ಯವನ್ನು ಎಷ್ಟೇ ತಿರುಚಿದರು
ಬದಲಾಗದು.ಕಾರಣ ಒಂದೇ ಸತ್ಯ ಇರೋದು. ಒಂದೇ ದೇಶ, ಒಂದೇ ರಾಜ್ಯ, ಆದರೆ ಎಲ್ಲಾ ಒಂದಾಗೋದೆ ಕಷ್ಟದ ಕೆಲಸ.
ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ.ಸುಲಭವ ಕೆಲಸಕ್ಕೆ ಎಲ್ಲರ ಸಹಕಾರ.ಕಷ್ಟದ ಕೆಲಸಕ್ಕೆ ಎಲ್ಲರ ವಿರೋಧವಿದ್ದರೆ ಬದಲಾವಣೆ ಸಾಧ್ಯವಿಲ್ಲ. ನಿಧಾನವಾದರೂ ಸರಿ ನಮ್ಮ ದಾನ ಧರ್ಮ ಕಾರ್ಯದಲ್ಲಿ ತತ್ವವಿರಲಿ.ತಂತ್ರದ ಅಗತ್ಯವಿಲ್ಲ.
ಸತ್ಯವಿರಲಿ ಅಸತ್ಯದ ರಾಜಕೀಯ ಬೇಡ. ನ್ಯಾಯವಿರಲಿ 
ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟುವ ಅಜ್ಞಾನದ ಅನ್ಯಾಯ ಬೇಡ. ಹೀಗೇ  ನಮ್ಮ ಶಿಕ್ಷಣವನ್ನು ನಾವೇ ಅರ್ಥ ಮಾಡಿಕೊಂಡರೆ ಅದರೊಳಗಿರುವ ರಾಜಕೀಯತೆ ತೊಲಗಿಸಿ
ರಾಜಯೋಗದೆಡೆಗೆ ಮಕ್ಕಳನ್ನು  ಬೆಳೆಸಬಹುದಲ್ಲವೆ?
ಪರರೆಲ್ಲಾ ನಮ್ಮವರೆ ಆದರೆ ಅವರಲ್ಲಿ ನಮ್ಮ ಜ್ಞಾನವಿದ್ದರೆ ಮಾತ್ರ.ನಮ್ಮವರಲ್ಲಿಯೂ ಇರುವ ಪರರ ಜ್ಞಾನದಿಂದ ಅವರು ನಮ್ಮವರಾಗೋದಿಲ್ಲವೆ? ಜ್ಞಾನವಿಜ್ಞಾನದ ಮಧ್ಯೆ
ಸಾಮಾನ್ಯ ಜ್ಞಾನವಿದ್ದರೆ  ಉತ್ತಮ ಸಮಾಜ ನಿರ್ಮಾಣ.

ಎಲ್ಲವನ್ನೂಒಂದುವ್ಯಕ್ತಿಯಾಗಲಿ,ಶಕ್ತಿಯಾಗಲಿ,ಸರ್ಕಾರವಾಗಲಿ ಸಂಘ,ಸಂಸ್ಥೆ, ಮಠ,ಮಂದಿರವಾಗಲಿ ಮಾಡಲಾಗದು. ಅವರವರ ಮನೆ ಮನೆಯಲ್ಲಿಯೇ ಅವರವರೆ ಒಗ್ಗಟ್ಟಿನಿಂದ ಉತ್ತಮ ಕಾರ್ಯ ನಡೆಸಿದರೆ ಎಲ್ಲಾ ಬದಲಾವಣೆ ಆಗಬಹುದು. ಭ್ರಷ್ಟಾಚಾರಕ್ಕೆ ರಾಜಕೀಯಕ್ಕೆ ಕೊಡುವ ಸಹಕಾರಕ್ಕೆ  ಬದಲಾಗಿ ಶಿಷ್ಟಾಚಾರದ ಶಿಕ್ಷಣಕ್ಕೆ, 
ರಾಜಯೋಗದ ವಿಷಯಗಳಿಗೆ ಸಹಕರಿಸಲೂ ನಮಗೆ ಆತ್ಮಜ್ಞಾನವಿರಬೇಕು.ಭೌತಿಕದ ತಂತ್ರಜ್ಞಾನದ ಜೊತೆಗೆ ಧಾರ್ಮಿಕದ ತಂತ್ರವೂ  ತತ್ವವನ್ನು ಹಿಂದುಳಿಸಿ ಮಾನವನಲ್ಲಿ ಅಜ್ಞಾನ ಹೆಚ್ಚಿಸಿದೆ  ಎಂದರೆ ತಪ್ಪಿಲ್ಲ.ಇದು ಕಣ್ಣಿಗೆ ಕಾಣದ ಸತ್ಯವಾದ್ದರಿಂದ ಅನುಭವಕ್ಕೆ ಬರದೆ ಅರ್ಥ ಆಗೋದಿಲ್ಲ. 
ಜೀವನವೂ ಶಾಶ್ವತವಲ್ಲ ಜೀವವೂ ಶಾಶ್ವತವಲ್ಲ.ಆತ್ಮ ಅಮರವೆಂದರಿತು ನಡೆದಿರೋದು ನಮ್ಮ ಸೈನಿಕರಷ್ಟೆ. ಇವರು ದೇಶ ಕಾಯೋದಕ್ಕೆ  ಜೀವನ ನಡೆಸಿದ್ದಾರೆ. ಆದರೆ ದೇಶದೊಳಗಿರುವವರಲ್ಲಿಯೇ  ಅಡಗಿರುವ ದ್ವೇಷದ ರಾಜಕೀಯಕ್ಕೆ  ಶಿಕ್ಷಣವೇ ಕಾರಣವಾಗಿರೋದು ದೊಡ್ಡ ದುರಂತ. . 
 ವಾಸ್ತವದಲ್ಲಿ ವಿದೇಶದೊಳಗೆ ದೇಶವಿದೆ. ಅದ್ವೈತ ದೊಳಗೇ ದ್ವೈತವಿದೆ. ಹಾಗಾದರೆ ಅಧರ್ಮ ಅಸತ್ಯದೊಳಗೆ ಸತ್ಯ ಧರ್ಮ ಎಲ್ಲಿದೆ ?ಹೇಗಿದೆ? 
ಇವುಗಳಿಗೆಲ್ಲ ಕಾರಣವೇ ಮಿಶ್ರವರ್ಣ, ಮಿಶ್ರಜಾತಿ,ಮಿಶ್ರ ದೇಶ, ಸಮ್ಮಿಶ್ರ ಸರ್ಕಾರ. ಮಿಶ್ರಣವನ್ನು  ಸ್ವಚ್ಚಗೊಳಿಸುವ ಶಿಕ್ಷಣ ಬೇಕಿದೆ. ಅರ್ಧ ಸತ್ಯದ  ಪ್ರಚಾರಕರಾಗಿ ಮಧ್ಯವರ್ತಿಗಳು  ಬೆಳೆದರೂ  ಅವರ ಜೀವನವೂ ಅತಂತ್ರವೆ
ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಯಾರಿಗೆ ಕೊಟ್ಟಿದ್ದೇವೆ?
ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು ಎನ್ನುವರು.ಇಲ್ಲಿ ಪರಮಾತ್ಮನಿರೋದು ಎಲ್ಲಾ ಚರಾಚರದಲ್ಲಿ ಹಾಗೆ ಮಾನವನೊಳಗೇ ಮಾನವ ಮಾತ್ರ  ಸತ್ಯಕ್ಕೆ ವಿರುದ್ದ ನಡೆಯುತ್ತಾ ಎಲ್ಲಾ ಪರಮಾತ್ಮನ ಇಚ್ಚೆ ಎಂದರೆ ಧರ್ಮ ವೆ?

No comments:

Post a Comment