ಕರ್ಮ ಮಾಡುವವರು ಕಾರ್ಮಿಕರು .ಇದರಲ್ಲಿ ಸತ್ಕರ್ಮ ವೆಂಬುದಿದೆ.ಸತ್ಯದಿಂದ ಕೆಲಸ ಮಾಡುವವರು. ಯಾರೇ ಆಗಿರಲಿ ಕೆಲಸದಲ್ಲಿ ಶ್ರದ್ದೆ ಭಕ್ತಿ ನ್ಯಾಯ ನೀತಿ ಧರ್ಮ ವಿದ್ದರೆ ಅವರು ಸತ್ಕರ್ಮವಂತರಾಗಿರುವರು. ಇಲ್ಲವಾದರೆ ಅದು ಕೇವಲ ಕೆಲಸವಷ್ಟೆ. ಇದರಿಂದ ಋಣ ತೀರೋದು ಕಷ್ಟ.
ಋಣವೆಂದರೆ ಸಾಲ.ಹಿಂದಿನ ಜನ್ಮಜನ್ಮಾಂತರದ ಸಾಲದಮೂಟೆ ಹೊತ್ತು ಭೂಮಿಯಲ್ಲಿ ಜನ್ಮ ಪಡೆದಿರುವ ಮಾನವನಿಗೆ ಇದನ್ನು ತೀರಿಸುವ ಸುಜ್ಞಾನವಿದ್ದರೆ ಆಗ ಪ್ರತಿಯೊಂದು ಕೆಲಸವೂ ಸತ್ಕರ್ಮ ವಾಗಿರುತ್ತದೆ. ಅಜ್ಞಾನದಲ್ಲಿ ಮಾಡುವ ಕೆಲಸದಿಂದ ಋಣ ತೀರುವುದಿಲ್ಲ ಎನ್ನುವ ಮೂಲಕ. ನಮ್ಮ ಸನಾತನ ಧರ್ಮ ಅಂದಿನಿಂದ ಇಂದಿನವರೆಗೂ ಋಣ ಮತ್ತು ಸಾಲವೇ ಜನ್ಮಕ್ಕೆ ಕಾರಣವೆಂದಿದೆ.
ನಾವೆಲ್ಲಿ ಜನ್ಮಪಡೆದೆವೋ ಅದು ಪರಮಾತ್ಮನ ಇಚ್ಚೆ. ಇದನ್ನು ಯಾರೂ ತಪ್ಪಿಸಲಾಗಿಲ್ಲ.ಬೆಳೆಸುವುದುಪೋಷಕರ ಇಚ್ಚೆ ಇದನ್ನು ಬದಲಾಯಿಸಬಹುದು, ನಡೆಯುವುದು ನಮ್ಮ ಇಚ್ಚೆ ಕೊನೆಯಲ್ಲಿ ಹೋಗೋದು ಪರಮಾತ್ಮನ ಇಚ್ಚೆಯೇ ಆಗಿರುತ್ತದೆ.ಮದ್ಯದಲ್ಲಿ ಬೆಳೆದು ನಡೆಯುವುದು ಉತ್ತಮವಾಗಿದ್ದರಷ್ಟೆ ಸದ್ಗತಿ. ಹೀಗಾಗಿ ಕರ್ಮ ಫಲಕ್ಕೆ ತಕ್ಕಂತೆ ಜನ್ಮಸಿದ್ದವಾಗಿರುತ್ತದೆ.
ಜನನ ಮರಣಗಳ ನಡುವಿರುವ ಈ ಜೀವನ ಕರ್ಮದ ಮೇಲೇ ನಿರ್ಧಾರವಾದಾಗ ಅದರಲ್ಲಿ ಸತ್ಯ ಧರ್ಮ ದ ಪ್ರಮಾಣಗಳೇ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ.
ಕಲಿಯುಗದಲ್ಲಿ ಜನರು ಸೋಮಾರಿಗಳು ವಿಲಾಸಿಗಳು ಆಲಸಿಗಳಾಗಿ ರೋಗಿಗಳಾಗಿರುವರೆಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿದಂತೆ ಇಂದು ನಮಗೆ ಮಂತ್ರ ತಂತ್ರ ಯಂತ್ರದ ಬಳಕೆ ಸುಲಭವಾಗಿ ಕೆಲಸ ಮಾಡುವಂತೆ ಸಹಕಾರಿಯಾಗಿದೆ. ಆದರೆ ,ಈ ಮಂತ್ರ ತಂತ್ರ ಯಂತ್ರದ ಹಿಂದಿನ ಶಕ್ತಿ ಕಣ್ಣಿಗೆ ಕಾಣದಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ ಸದ್ಗತಿ ದುರ್ಭಳಕೆ ಮಾಡಿಕೊಂಡರೆ ದುರ್ಗತಿ.
ಕರ್ಮ ಎಂದರೆ ಕೆಲಸ. ಕೆಲಸವನ್ನು ಪರಮಾತ್ಮನ ಸೇವೆ ಎಂದು ಮಾಡಿದರೆ ಜ್ಞಾನ. ತನ್ನ ಸೇವೆಗಾಗಿ ಮಾಡಿಕೊಂಡರೆ ಅಜ್ಞಾನ. ಇಂದು ತಮ್ಮ ಸೇವೆಗಾಗಿ ಕಷ್ಟಪಟ್ಟು ಕೆಲಸ ಮಾಡಿಕೊಂಡರೂ ಮನಸ್ಸಿಗೆ ಶಾಂತಿ ಸಿಗದವರು ಅನೇಕರಿದ್ದಾರೆ. ಅದೇ ಕೆಲವರು ಬೇರೆಯವರ ಸೇವೆಗಾಗಿ ಕಷ್ಟಪಟ್ಟು ದುಡಿದವರಿಗೆ ಕೊನೆಯಲ್ಲಿ ತೃಪ್ತಿ ಸಿಕ್ಕಿದೆ.ಎಂದರೆ ಪರಮಾತ್ಮ ಎಲ್ಲರೊಳಗೂ ಇದ್ದು ನಡೆಸುವಾಗ ಯಾರು ಪರರಿಗಾಗಿ ನಿಸ್ವಾರ್ಥ ಸೇವೆ ಮಾಡುವರೋ ಅವರೊಳಗೇ ಪರಮಾತ್ಮ ನಿದ್ದು ಕೆಲಸ ಮಾಡಿಸುವನೆಂದರ್ಥ. ಒಟ್ಟಿನಲ್ಲಿ ಎಲ್ಲರೊಳಗೂ ಇರೋ ಶಕ್ತಿ ಒಂದೇ ಆದರೂ ಅವರು ಅದನ್ನು ಬಳಸಿಕೊಳ್ಳುವ ರೀತಿ ನೀತಿಯಲ್ಲಿ ವ್ಯತ್ಯಾಸವಿದೆ.
ಅಸುರರೂ ಕಷ್ಟಪಟ್ಟು ದುಡಿಯುವರು ಸುರರೂ ಕಷ್ಟಪಟ್ಟು ದುಡಿಯುವರು.ಅಸುರರಿಗೆ ಸತ್ಯಜ್ಞಾನ ವಿಲ್ಲ ಧರ್ಮ ಸೂಕ್ಮದ ಅರಿವಿಲ್ಲದೆ ಬೆಳೆದಿರುವರಷ್ಟೆ. ಹೀಗಾಗಿ ಭೂಮಿಯಲ್ಲಿ ಎಷ್ಟು ಕಷ್ಟಪಟ್ಟು ದುಡಿದರೂ ತೃಪ್ತಿ ಸಿಗುತ್ತಿಲ್ಲ.
ಮಹಾತ್ಮರುಗಳು ಏನೂ ಅಧಿಕಾರ ಹಣ ಸ್ಥಾನಮಾನದ ಹಿಂದೆ ನಡೆಯದೆ ಪರಮಾತ್ಮನ ಸೇವೆ ಮಾಡಿದ್ದರೆಂದರೆ ಇದರರ್ಥ ಹೊರಗಿನ ಅಧಿಕಾರ ಹಣ ಸ್ಥಾನಕ್ಕೆ ಮಾಡುವ ಕೆಲಸ ಕಾರ್ಯದಿಂದ ಪರಮಾತ್ಮ ಒಲಿಯೋದಿಲ್ಲ.
ಇದಿಲ್ಲದೆ ಜೀವನನೆಡೆಸಬಹುದೆ?
ಅಸಾಧ್ಯವೆನ್ನುವ ಸ್ಥಿತಿಗೆ ಬಂದಿದ್ದರೂ ಅದರಲ್ಲಿ ಇತಿಮಿತಿ ಇದ್ದು ನಮ್ಮ ಧರ್ಮ ಕರ್ಮದಿಂದ ಸಮಸ್ಯೆ ಬೆಳೆಯದಂತೆ ಎಚ್ಚರವಾಗಿದ್ದು ಮುಂದಿನ ಪೀಳಿಗೆಗೆ ಉತ್ತಮವಾಗಿದ್ದನ್ನು ಬಿಟ್ಟು ನಡೆಯುವುದೇ ಸತ್ಕರ್ಮ ವಾಗಿರಬಹುದು.
ಹಣವನ್ನಾದರೂ ಸಂಪಾದಿಸಬಹುದು ಜ್ಞಾನ ಸಂಪಾದನೆ ಕಷ್ಟ.ಅದರಲ್ಲಿ ಸತ್ಯಜ್ಞಾನ ಅಧ್ಯಾತ್ಮ ಸಂಶೋಧನೆಯಿಂದಷ್ಟೆ ಸಂಪಾದಿಸಬಹುದು. ಸತ್ಯ ತಿಳಿದಷ್ಟೂ ಅಸತ್ಯ ಕಾಣುತ್ತದೆ.
ಅಸತ್ಯ ವಿರೋಧಿಸಿದಷ್ಟೂ ಸತ್ಯ ಬೆಳೆಯುತ್ತದೆ. ಆದರೆ ಇಂದು ಸತ್ಯವನ್ನು ವಿರೋಧಿಸುವವರೆ ಬೆಳೆದಿರುವಾಗ ಎಲ್ಲಿರುವುದು ಸತ್ಕರ್ಮ? ಇದಕ್ಕೆ ಕಾರಣ ಕಲಿಯುಗದ ಕಲಿಕೆಯ ವಿಷಯ. ಹೊರಗಿನ ಸತ್ಯದ ಬೆನ್ನತ್ತಿ ಒಳಗಿದ್ದ ಸತ್ಯ ಹಿಂದುಳಿದಾಗ ಕಾಣದ ಸತ್ಯವನ್ನು ಒಪ್ಪಲು ಮನಸ್ಸಿರದು.
ಮನಸ್ಸಿದ್ದರೆ ಮಾರ್ಗ, ಮನಸ್ಸೇ ಮಾನವನ ಶತ್ರು ಹಾಗು ಮಿತ್ರ.
ಮನಸ್ಸಿಗೆ ಬಂದಂತೆ ಕೆಲಸ ಕಾರ್ಯ ನಡೆಸೋದೇ ಬೇರೆ
ಮನಸ್ಸಿಟ್ಟು ಮಾಡುವ ಕೆಲಸ ಕಾರ್ಯ ವೇ ಬೇರೆ.
ಇದರಲ್ಲಿ ಒಳ್ಳೆಯ ಕೆಲಸವಾಗಿದ್ದರೆ ಒಳ್ಳೆಯ ಫಲ.ಕೆಟ್ಟ ಕೆಲಸವಾಗಿದ್ದರೆ ಕೆಟ್ಟ ಫಲ ಮನುಷ್ಯನೇ ಅನುಭವಿಸೋದು.
ಇದರಿಂದಾಗಿ ಸಾಕಷ್ಟು ಮಹರ್ಷಿಗಳು ತಪಶ್ಯಕ್ತಿಯಿಂದಲೇ ಜೀವನ್ಮುಕ್ತಿ ಪಡೆದಿದ್ದರು. ಯಾವ ರಾಜಕೀಯತೆ ಇರಲಿಲ್ಲ. ಅವರಲ್ಲಿ ಜ್ಞಾನಯೋಗವಿತ್ತು.
ಶ್ರೀ ಶಂಕರಾಚಾರ್ಯರು ತಿಳಿಸಿದಂತೆ ಕರ್ಮ ಯೋಗಕ್ಕಿಂತ ಜ್ಞಾನ ಯೋಗವೇ ಶ್ರೇಷ್ಠ. ಆದರೆ ಇಂದಿನಪ್ರಜಾಪ್ರಭುತ್ವದಲ್ಲಿ ಯಾರೂ ಸ್ವತಂತ್ರ ಜ್ಞಾನದಿಂದ ಜೀವನನಡೆಸಲಾಗದ ಪರಿಸ್ಥಿತಿ ಇರೋವಾಗ ನಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಕರ್ಮ ಯೋಗಕ್ಕೆ ಬೆಲೆಕೊಟ್ಟು ಪರಮಾತ್ಮನ ಕೆಲಸವೆಂದು ಸತ್ಯ ಧರ್ಮ ವನರಿತರೆ ಸಂಪಾದನೆ ಮಾಡಿದಹಣವೂ ಸದ್ಬಳಕೆ ಆಗಬಹುದಷ್ಟೆ.
ಎಲ್ಲಾ ನನ್ನದೇ ಎಂದು ಕೋಟಿ ಹಣವಿದ್ದರೂ ಸಾಲದೆನ್ನುವ ಕರ್ಮಕ್ಕೆ ಸರಿಯಾದ ಬೆಲೆತೆರಬೇಕಾಗುತ್ತದೆ.
ಒಟ್ಟಿನಲ್ಲಿ ಯಾರೂ ಬರೋವಾಗ ಹೊತ್ತು ತರೋದಿಲ್ಲ
ಹೋಗೋವಾಗ ಹೊತ್ತು ಹೋಗೋದಿಲ್ಲ.ತರೋದು ಸಾಲ ಮತ್ತು ಕರ್ಮ ವನ್ನಷ್ಟೆ. ಇದನ್ನರಿತು ತೀರಿಸುವ ಜ್ಞಾನದ ಶಿಕ್ಷಣ ಪಡೆದವರ ಜೀವನ ಸಾರ್ಥಕವಾಗಿರುವುದು.
ಅಂತಹ ಶಿಕ್ಷಣವನ್ನು ವಿರೋಧಿಸಿ ಎಷ್ಟು ದುಡಿದರೂ ವ್ಯರ್ಥ ಜೀವನ.
ಆತ್ಮಕ್ಕೆ ಸಾವಿಲ್ಲ. ಈ ಭಾರವಾಗಿರುವ ದೇಹವನ್ನು ಹಗುರವಾಗಿರುವ ಆತ್ಮ ನಡೆಸಿರುವನೆಂದರೆ ಆ ಹಗುರವಾದ ಶಕ್ತಿಯನರಿತು ನಡೆಯೋದು ಧರ್ಮ. ಎಷ್ಟು ಹೊರಗಿನ ವಿಷಯ ವಸ್ತು ಜ್ಞಾನ ಬಿಟ್ಟು ಜೀವಾತ್ಮ ಹೋಗುವುದೋ ಅಷ್ಟೆ ಹಗುರವಾಗಿರುವುದು ಮನಸ್ಸು. ಮೈ ಮನಸ್ಸು ಹಗುರವಾದಂತೆಲ್ಲಾ ಆತ್ಮದರ್ಶನವಾಗುತ್ತದೆ. ಆತ್ಮದರ್ಶನವಾದಂತೆಲ್ಲಾ ನಾನೇ ಬೇರೆ ನೀನೇ ಬೇರೆ ಎನ್ನುವ ದ್ವಂದ್ವ ಕಳೆಯುತ್ತದೆ. ಆತ್ಮನೊಂದಿಗೆ ಬೆರೆತು ಹೋದವರೆ ಮಹಾತ್ಮರಾಗಿದ್ದಾರೆ. ದೇಹಕ್ಕೆ ಸಾವಿದ್ದರೂ ಆತ್ಮಕ್ಕಿಲ್ಲ ಎಂದಿದ್ದಾರೆ. ಇದರಲ್ಲಿ ಅಸುರರೂ ಇದ್ದಾರೆ ಸುರರೂ ಇದ್ದಾರೆ. ಅಸುರರೊಳಗೇ ಸುರರು ಸೇರಿ ಕರ್ಮ ಮಾಡಿದಾಗ ಅಸುರರಿಗೆ ಶಕ್ತಿ. ಸುರರೊಂದಿಗೆ ಅಸುರರು ಸೇರಿದಾಗ ಸುರರಿಗೆ ಶಕ್ತಿ.
ಸತ್ಯ ಧರ್ಮ ವಿಲ್ಲದ ಕೆಲಸ ಕಾರ್ಯ ಕ್ಕೆ ಸಹಕಾರ ಕೊಟ್ಟಷ್ಟೂ ಅಧರ್ಮ ವಾಗುತ್ತದೆ. ಒಟ್ಟಿನಲ್ಲಿ ಯಾರೊಬ್ಬರೂ ಉಸಿರಿರುವವರೆಗೂ ಕೆಲಸ ಮಾಡದೆ ಇರೋದಿಲ್ಲ.ಕಾರಣ ನಮ್ಮ ಚಿಂತನೆಯೂ ಒಂದು ಕೆಲಸವೇ ಆಗಿರುವಾಗ ಪ್ರತಿಕ್ಷಣ ಒಂದೊಂದು ಚಿಂತನೆಗಳಿರುತ್ತವೆ. ಇದು ಸಚ್ಚಿಂತನೆ ಆದರೆ ಸತ್ಕರ್ಮಕ್ಕೆ ದಾರಿಯಾಗುತ್ತದೆ. ಹಾಗಾಗಿ ನಮ್ಮ ಚಿಂತನೆಯಲ್ಲಿ ಸತ್ಯವಿರಲಿ. ನಾವೆಲ್ಲರೂ ಕಾರ್ಮಿಕರೆ .ಒಂದು ದಿನದ ಈ ಕಾರ್ಮಿಕ ದಿನಾಚರಣೆಯ ಶುಭಾಶಯಗಳು... ಭೌತಿಕದಲ್ಲಿ ರಜೆಯಿರಬಹುದು ಅಧ್ಯಾತ್ಮ ದಲ್ಲಿ ರಜೆಯಿಲ್ಲ.
No comments:
Post a Comment