ತೊಂದರೆ ಬಂದಾಗ ತಾಳ್ಮೆಯಿಂದಿರಬೇಕಂತೆ,ಹಣ ಬಂದಾಗ ಸರಳವಾಗಿರಬೇಕಂತೆ,ಅಧಿಕಾರ ಸಿಕ್ಕಾಗ ಪ್ರಾಮಾಣಿಕರಾಗಿದ್ದು,ಕೋಪಬಂದಾಗ ಶಾಂತವಾಗಿರಬೇಕಂತೆ. ಇದು ಸಾಧ್ಯವಾಗೋದಕ್ಕೆ ನಮ್ಮಲ್ಲಿ ಜ್ಞಾನವಿರಬೇಕು. ಜ್ಞಾನಿಗಳಿಗಷ್ಟೆ ಈ ಎಲ್ಲಾ ಗುಣಗಳಿರೋದು.
ಹಣ,ಅಧಿಕಾರ,ಸ್ಥಾನಮಾನ ಸನ್ಮಾನಗಳ ಹಿಂದೆ ನಡೆದಷ್ಟೂ ನಮ್ಮೊಳಗೇ ಬೆಳೆಯುವ ಅಹಂಕಾರ ಸ್ವಾರ್ಥ ನಮ್ಮ ತಾಳ್ಮೆಯನ್ನು ಅಲ್ಲಗೆಳೆದು ಕೋಪದ ಆವೇಷಕ್ಕೆ ಸೆಳೆಯುತ್ತವೆ. ಇದಕ್ಕೆ ಕಾರಣವೇ ಹೊರಗಿನವರ ರಾಜಕೀಯ.
ಹೊರಗಿನವರ ರಾಜಕೀಯಕ್ಕೆ ಸಹಕಾರ ಕೊಟ್ಟರೆ ನಮ್ಮತನ ಹಿಂದುಳಿದು ನಮ್ಮನ್ನು ಆಳುವವರು ಬೆಳೆಯುವರು. ಹೀಗೇ ಮುಂದೆ ತಾಳ್ಮೆ ಸಹನೆಯಿಂದ ಸಹಿಸಿಕೊಂಡಾಗ ಇನ್ನಷ್ಟು ದುರಾಡಳಿತ ಬೆಳೆದು ತಾಳ್ಮೆಯ ಕಟ್ಟೆ ಒಡೆದು ಕೋಪದ ಜ್ವಾಲೆ ಏರುತ್ತದೆ. ಭಾರತೀಯರ ಸ್ಥಿತಿ ಇದೇ ಆಗಿದೆ. ಜ್ಞಾನವಿದ್ದವರು ಜೀವನದಲ್ಲಿ ಉಳಿತಾಯ ಮಾಡಲು ಸಾಕಷ್ಟು ಹಣವನ್ನು ದಾನಧರ್ಮ ಕಾರ್ಯಕ್ಕೆ ಬಳಸುತ್ತಾ ಇನ್ನಷ್ಟು ಸರಳ ಜೀವನಕ್ಕೆ ಹೋಗಿ ಪರಮಾತ್ಮನ ದರ್ಶನ ಪಡೆದು ಮುಕ್ತರಾದರು. ಆದರೆ, ಅವರು ಉಳಿಸಿ ಬೆಳೆಸಿದ ಧರ್ಮ ಸತ್ಯವನ್ನು ಅಪಾರ್ಥ ಮಾಡಿಕೊಂಡು ಅವರನ್ನು ಬಡವರೆಂದು ಕರೆದು ಹೊರಗಿನವರುಹಣ ನೀಡಿ ನಿಜವಾದ ಜ್ಞಾನವನ್ನು ಹಿಂದುಳಿಸಿ ಸಾಲದ ಹೊರೆ ಹಾಕಿ ಜನರನ್ನು ಆಳಿದವರಿಗೆ ಅಜ್ಞಾನ ಮಿತಿಮೀರಿದಾಗಲೇ ಸತ್ಯದ ಅರಿವಾಗಿ ಹಿಂದಿರುಗಿ ಬರಲಾಗದೆಮುಂದೆನಡೆಯಲಾಗದೆ ಅತಂತ್ರಸ್ಥಿತಿಗೆ ಜೀವನ ತಲುಪಿದಾಗ ತಮ್ಮ ಜೀವನನೆಡೆಸಲು ಸಾಕಷ್ಟು ಜನರು ಭ್ರಷ್ಟಾಚಾರ ಒಪ್ಪಿಕೊಳ್ಳುವ ಪರಿಸ್ಥಿತಿ ಬರುತ್ತದೆ.
ಆದರೆ ಭ್ರಷ್ಟಾಚಾರ ಕ್ಕೆ ಸಹಕಾರ ಕೊಟ್ಟಷ್ಟೂ ಲೋಕಕಲ್ಯಾಣ ಆಗೋದಿಲ್ಲವೆನ್ನುವುದು ಅಧ್ಯಾತ್ಮ ಸತ್ಯ.
ಎಲ್ಲಾ ಉಪದೇಶ ಮಾಡೋದಕ್ಕೆ ಸುಲಭ.ಆಚರಣೆಗೆ ತರಲು ಕಷ್ಟ. ತರದಿದ್ದರೆ ಅಗೋದು ನಮಗೇ ನಷ್ಟ.
ಆತ್ಮರಕ್ಷಣೆಗಾಗಿ ಈ ಸದ್ಗುಣಗಳನ್ನು ಬೆಳೆಸುವುದೇ ಶ್ರೀ ರಕ್ಷ.
ಪಾಂಡವರನ್ನ ಹೀನಾಯವಾಗಿ ಕಂಡ ಕೌರವರು ಹತರಾದರು. ಆಯಸ್ಸು ಮುಗಿದು ಹೋಗೋದಕ್ಕೂ ಯುದ್ದ ಮಾಡಿ ಜೀವ ಹೋಗೋದಕ್ಕೂ, ರೋಗ ಅಪಘಾತ ಪ್ರಕೃತಿ ವಿಕೋಪದಿಂದ. ಜೀವ ಹೋಗೋದಕ್ಕೂ ವ್ಯತ್ಯಾಸವಿದೆ.
No comments:
Post a Comment