ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, May 22, 2024

ಬುದ್ದಪೂರ್ಣಿಮೆಯ ಶುಭಾಶಯಗಳು

ಬುದ್ದ ಪೂರ್ಣಿಮೆ ಇಂದು ಎಷ್ಟರ ಮಟ್ಟಿಗೆ  ಅರ್ಥ ವಾಗುವುದೋ  ನಮಗೇ ಗೊತ್ತಿಲ್ಲ.
ಆಸೆಯೇ ದು:ಖದ ಮೂಲ ಎನ್ನುವ ಸತ್ಯ ಅತಿಆಸೆಯೇ  ದು:ಖದ ಮೂಲವೆನ್ನುವಸ್ಥಿತಿಗೆ ಬಂದಿದೆ.ಆಸೆ ಇಲ್ಲದವರಿಗೆ ಜನ್ಮವಿಲ್ಲ. ಜನ್ಮವಾಗಿದೆ ಎಂದರೆ ಏನೂ ಒಂದು ಆಸೆ ಜೀವ ಪಡೆದಿತ್ತೆಂದರ್ಥ.
ಹೀಗಾಗಿ ಅತಿಯಾದ ಜನಸಂಖ್ಯೆಯಿಂದ ಆಸೆ  ನಿರಾಸೆಯ ಕಡೆಗೆ ನಡೆಯದಂತಾಗಿ ಭೌತಿಕದಲ್ಲಿ ಬುದ್ದನನ್ನು ಹುಡುಕುವ ಮಟ್ಟಕ್ಕೆ ‌ಮನಸ್ಸು ನಿಂತಿದೆ.
ಸಂಸಾರ ತೊರೆದು ಹೋದರೆ ಬುದ್ದನಾಗೋದಿಲ್ಲ. ಆದರೆ ಇಂದು ಸಾಕಷ್ಟು ಬ್ರಹ್ಮಚಾರಿಗಳ ಜೊತೆಗೆ ಬ್ರಹ್ಮಚಾರಿಣಿಯರೂ ತಮ್ಮದೇ ಆಶ್ರಮದಲ್ಲಿ ಬ್ರಹ್ಮಜ್ಞಾನ ಹುಡುಕಿಕೊಂಡು  ಬ್ರಹ್ಮಾಂಡದೊಳಗಿದ್ದಾರೆ. ಆದರೆ ಸಂಸಾರ ಸಾಗರದೊಳಗಿದ್ದು ಬ್ರಹ್ಮತತ್ವವನರಿತವರು ವಿರಳವಾಗುತ್ತಾ ಸಂಸಾರಸ್ಥರಿಗೆ  ಬ್ರಹ್ಮನ ಅರಿವರದೆ  ಸೃಷ್ಟಿಯ ಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆ  ಬುದ್ದ ಕಾರಣವೆನ್ನುವವರೂ ಇದ್ದಾರೆ. ತತ್ವಜ್ಞಾನ ಸಂಸಾರಿಗಳಿಗೆ ಬೇರೆ ಸಂನ್ಯಾಸಿಗಳಿಗೆ ಬೇರೆ ಎಂದರೂ ಅಧ್ವೈತ ವಾಗೋದಿಲ್ಲ.ಅದರಲ್ಲಿ ಪ್ರಜಾಪ್ರಭುತ್ವದ ದೇಶವಾದ ಭಾರತೀಯರಿಗೆ  ವಿಶ್ವಗುರು  ತತ್ವಜ್ಞಾನದಿಂದಲೇ ಕಾಣಬೇಕಿದೆ. ಹಾಗಂತ  ತುಂಬಾ ಹಿಂದೆ ನಡೆಯಲೂ‌ಕಷ್ಟ.ವಾಸ್ತವವರಿತು ಭವಿಷ್ಯದೆಡೆಗೆ ನಡೆದರೆ ಉತ್ತಮ.ಕೇವಲ ಪುರಾಣ ಹಿಡಿದು ಭವಿಷ್ಯ ತಿಳಿಯುವುದರಿಂದ ವಾಸ್ತವದಲ್ಲಿ  ಏರುಪೇರಾಗುತ್ತದೆ.
ಅಂದಿನ ಬುದ್ದ ಇಂದಿನ ಬುದ್ದನಾಗಿರೋದಿಲ್ಲ. ತ್ರೇತಾಯುಗದ ರಾಮ ದ್ವಾಪರದ ಕೃಷ್ಣ ಎಂದರೆ ಹೇಗೆ ಬದಲಾವಣೆ ಕಾಣಬಹುದೋ ಹಾಗೆ ಅಂದಿನ‌ ಮಹಾತ್ಮರುಗಳು ಇಂದೂ ಇದ್ದರೂ ಅದೇ ರೀತಿಯಲ್ಲಿ ‌ಜೀವನ ನಡೆಸಲಾಗೋದಿಲ್ಲ ಆಗಿಲ್ಲ. ಆತ್ಮ ಒಂದೇ ಜನ್ಮ ಹಲವು. ದೇವನೊಬ್ಬನೆ ನಾಮ ಹಲವು. ಆಸೆಯೇ ಇದಕ್ಕೆ ಕಾರಣ. ಭೌತಿಕ ಆಸೆ ಅಧ್ಯಾತ್ಮಿಕ ತೆಯನ್ನು ಹಿಂದುಳಿಸಿ ಆಳುತ್ತದೆ. ಅಧ್ಯಾತ್ಮಿಕ  ಜಿಜ್ಞಾಸೆ ಭೌತವಿಜ್ಞಾನದಿಂದ ದೂರ ಸರಿಸುತ್ತದೆ. ಒಟ್ಟಿನಲ್ಲಿ  ಬುದ್ದನ ಕಾಲದಿಂದಲೂ ಸಂಸಾರ ತೊರೆದು  ಸಂನ್ಯಾಸಿಗಳಾಗಿ ಹೊರಬಂದವರು‌ಹಿಂದೂಗಳೆ.
ಈಗ ಹಿಂದೂಗಳ ಸಂಖ್ಯೆ ಕುಸಿದಿದೆ ಎಂದರೆ ಇಲ್ಲಿ ಹೆಣ್ಣಿಗೆ ಸಂನ್ಯಾಸ ಸ್ವೀಕಾರ ನಿಶಿದ್ದ. ಹೊರನೆಡೆದ ಗಂಡನ ಹಿಂದೆ ಹೋಗದ ಹೆಣ್ಣಿನ ಕಥೆ ಕೇಳೋರಿಲ್ಲವಾದಾಗ  ದುಷ್ಟರಿಗೆ  ಅವಕಾಶ ಕೊಟ್ಟಂತಾಗುತ್ತದೆ. ಜೊತೆಗೆ ಜ್ಞಾನಿಗಳ ಸಂತಾನದ ಕೊರತೆಯಿಂದ ಭೂಮಿ ದುರ್ಭಳಕೆ ಆಗುತ್ತದೆ. 
ಜನ್ಮಸಾರ್ಥಕವಾಗೋದು  ಪುರುಷಾರ್ಥಗಳಿಂದ ಎಂದರೆ 
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸವನ್ನು ಯೋಗದಿಂದ ಅನುಭವಿಸಿದ‌ಮೇಲೇ ಮೋಕ್ಷ. ಕೆಲವರಿಗಷ್ಟೆ ಭಗವಂತ ನೇರವಾಗಿ ಸಂನ್ಯಾಸ ಸ್ವೀಕಾರಕ್ಕೆ ಅಧಿಕಾರ ಕೊಟ್ಟು ಲೋಕಕಲ್ಯಾಣಕ್ಕಾಗಿ ಬಳಸಿದ್ದರೆ‌  ಇದನ್ನು  ಇಂದು ಕೆಲವರು ತಮ್ಮ ದೈಹಿಕ ಸ್ವಾರ್ಥ ಸುಖಕ್ಕಾಗಿ  ಹಣ ಅಧಿಕಾರ ಸ್ಥಾನಮಾನದ ಆಸೆಗೆ  ವೇಷಹಾಕಿಕೊಳ್ಳುವವರ ಹಿಂದೆ ಅನೇಕ ಅಮಾಯಕ ಜನ ಹೋಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಂಡಿರೋದು ಕಲಿಯುಗದ ಪ್ರಭಾವ.
ಸಂಸಾರವನ್ನು  ನಡೆಸುವುದೂ ಧರ್ಮ  ಅದೂ ಯೋಗದಿಂದ  ನಡೆಸುವುದು ಪರಮಧರ್ಮ. ಸಂಸಾರದಿಂದ ಮುಕ್ತರಾಗೋದೆಂದರೆ  ಬಿಟ್ಟು ನಡೆಯೋದಲ್ಲ. ಭೂ ತಾಯಿಯ ಮಕ್ಕಳಾಗಿರುವ‌ ಈ‌ ಮನುಕುಲದ ಸಂಸಾರ ಸತ್ಯ ಹಾಗು ಧರ್ಮದ ಅಡಿಪಾಯದಲ್ಲಿ ನಡೆದಿದೆ. ಯಾವಾಗ ಸತ್ಯ ಬಿಟ್ಟು ಧರ್ಮ ಪ್ರಚಾರವಾಯಿತೋ ಆಗಲೇ ಅಡಿಪಾಯ ಅಲ್ಲಾಡುತ್ತಾ ಈ ಕಡೆ ಧರ್ಮ ಇನ್ನೊಂದು ಕಡೆ ಅಧರ್ಮ . ಯಾವಾಗ ಧರ್ಮ ವೂ ಅಸತ್ಯದೆಡೆಗೆ ವಾಲಿತೋ ಆಗಲೇ ಅಡಿಪಾಯ  ಕಾಣದಾಯಿತು.ಕಾಲದ ವಶದಲ್ಲಿರುವ ಜೀವಕ್ಕೆ  ಬೆಲೆಕಟ್ಟುವುದು ಕಷ್ಟ. ವ್ಯವಹಾರಕ್ಕೆ ಇಳಿದಾಗ  ಜೀವವೇ ಮುಖ್ಯ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ ಎಂದು  ಬುದ್ದ  ಪ್ರಾಣಿ ಹಿಂಸೆ ಜೀವ ಹಿಂಸೆ ಆಗಬಾರದೆಂದರು. ಆದರೆ  ಪ್ರಕೃತಿ ಸಹಜವಾಗಿರುವ‌ ಪ್ರತಿಯೊಂದು ಜೀವ ಪ್ರಾಣಿಗಳಿಗೆ ಆಹಾರವೇ ಮುಖ್ಯವಾಗಿ ಒಂದನ್ನೊಂದು ಕೊಂದು  ತಿಂದು ಬದುಕಲೇಬೇಕೆಂಬ  ಮಾನವ ವಾದದಿಂದ  ಇಂದು ತಿನ್ನುವುದೇ ಜೀವನದ ಗುರಿಯಾಗಿಸುವಷ್ಟು ಬೆಳೆದಿದೆ.
ಅದರಲ್ಲಿ ಮಾನವ ಮಾನವನ ಮನಸ್ಸನ್ನೇ ತಿಂದು ಮುಂದುವರಿದವರಿಗೆ ಬುದ್ದ ಕಾಣೋದಿಲ್ಲ.ಯಾವುದೇ ಇರಲಿ ಅತಿಯಾದರೆ ಗತಿಗೇಡು.
ಸಸ್ಯಾಹಾರಿ ಮಾಂಸಹಾರಿಗಳ‌ನಡುವಿನ ವಾದಕ್ಕೆ ಕೊನೆಯಿಲ್ಲ
ಸಸ್ಯದಲ್ಲೂ ಜೀವವಿದೆ ಹಾಗೆ ಪ್ರಾಣಿಗಳೂ ಎನ್ನುವುದರ ಮೂಲಕ  ನಾವೇ ಸರಿ ಎಂದರೆ ಅರ್ಥ ವಿಲ್ಲ.
ನಮ್ಮ ಆತ್ಮಕ್ಕೆ ಮುಕ್ತಿಸಿಗಬೇಕಾದರೆ  ಹಿಂಸೆಯಿಂದ ದೂರವಿರಬೇಕು. ಆಸೆಯಿಂದ ಮುಕ್ತರಾಗಿರಬೇಕು, ಸತ್ಯವೇ ದೇವರಾಗಿರಬೇಕು...ಬ್ರಹ್ಮನ್ ಸತ್ಯ ಜಗತ್‌ಮಿಥ್ಯ,ಅಹಂ ಬ್ರಹ್ಮಾಸ್ಮಿ, ಇದರ ಅರಿವಾಗಬೇಕಾದರೆ ಅಂತರಾತ್ಮ ಶುದ್ದತೆ ಅಗತ್ಯವಿದೆ ಇದಕ್ಕಾಗಿ ಸಂನ್ಯಾಸಿಗಳಾಗಬೇಕಿದೆ. ಸಂನ್ಯಾಸಿಗಳಿಗೆ ಸ್ವಾರ್ಥ ಅಹಂಕಾರ ಪ್ರತಿಫಲಾಪೇಕ್ಷೆ ಇರೋದಿಲ್ಲ. ಪರಮಾತ್ಮನ ಸೇವೆಯು ಯೋಗದಿಂದ ಮಾಡೋದೇ  ಗುರುವಿನ  ಪರಮಗುರಿಯಾಗಿರುತ್ತದೆ. ಇದನ್ನು ನಮ್ಮ ಮಹಾತ್ಮರಲ್ಲಿ ಕಾಣಬಹುದಾಗಿತ್ತು. ಈಗಲೂ ಕೆಲವರಿರುವರು ಆದರೆ  ಜನಸಾಮಾನ್ಯರಿಗೆ ಕಾಣದೆ ಹಿಂದುಳಿದಿರುವರು. ಹೆಚ್ಚು ಹೆಚ್ಚು ಓದಿ ತಿಳಿಯುವುದಕ್ಕೆ ಬುದ್ದಿಶಕ್ತಿ ಬೇಕು.ಹೆಚ್ಚು ಅನುಭವಿಸಿ ತಿಳಿಯುವುದಕ್ಕೆ ಜ್ಞಾನ ಬೇಕು. ಆತ್ಮಜ್ಞಾನದಿಂದ ಆಸೆ ಕುಸಿದರೆ,ವಿಜ್ಞಾನದಿಂದ ಆಸೆ ಬೆಳೆಯುತ್ತದೆ. ಇವೆರಡರ ನಡುವಿರುವ ಸಾಮಾನ್ಯಜ್ಞಾನ ಮಾನವನಲ್ಲಿದ್ದಾಗ   ಆಸೆ ಇತಿಮಿತಿಯಲ್ಲಿರುತ್ತದೆ.
ಸಾಲ ತೀರಿಸಲು ಬಂದಿರುವ‌ಜೀವದ ಮೇಲೆ ಇನ್ನಷ್ಟು ಹೊರಗಿನಿಂದ ಸಾಲ ಮಾಡಿ ಏರಿಸಿದರೆ ಹೇಗಿರುತ್ತದೆ?
ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ ರೂ ಸಾಲ ಮಾಡುವ ಬದಲಾಗಿ ಮನೆಯೊಳಗೆ  ಸಂಸ್ಕಾರದ ಶಿಕ್ಷಣ ಕೊಟ್ಟು ನೋಡಿ  ನಿಮ್ಮ ಸಾಲ ತೀರಿಸುವಷ್ಟು ಜ್ಞಾನಿಗಳಾಗಿ ಜೀವನ‌ನಡೆಸುವರು. ಭಾರತೀಯರಿಗೆ ಸಾಕಷ್ಟು ಜ್ಞಾನವಿದೆ ಆದರೆ ಸಾಮಾನ್ಯ ಜ್ಞಾನದ ಕೊರತೆಯಿದೆ ಇದಕ್ಕೆ ಕಾರಣವೇ ವಿಶೇಷ ಜ್ಞಾನದ ಹಿಂದೆ ನಡೆದಿರೋದು ಆತ್ಮಜ್ಞಾನವನ್ನು ತಿರಸ್ಕರಿಸಿರೋದು.
ಕೆಲವರು ವಿಶೇಷಜ್ಞಾನವನ್ನು ತಿರಸ್ಕರಿಸಿ ದ್ವೇಷ ಬೆಳೆಸಿರೋದಾಗಿದೆ. ಭೂಮಿಯಲ್ಲಿ ಬದುಕಲು  ಸಾಮಾನ್ಯ ಜ್ಞಾನ ಅಗತ್ಯ.ಅದರ ಸದ್ಬಳಕೆ ವಿಶೇಷಜ್ಞಾನವಾಗುತ್ತದೆ.ದುರ್ಭಳಕೆ ಸಶೇಷವಾಗಿ ಹಿಂದುಳಿಸುತ್ತದೆ. ಒಟ್ಟಿನಲ್ಲಿ ಕಲಿಯುಗದಲ್ಲಿ ಕಲಿಕೆ ಸರಿಯಿಲ್ಲದೆ ಕಲಿಯಲೇಬೇಕಾದ್ದನ್ನು ಕಲಿಸದೆ ಮುಂದೆ ನಡೆದವರ ಹಿಂದೆ ಹಿಂದೂಗಳು ಹೊರಟಾಗ ಹಿಂದುತ್ವಕ್ಕೆ ದಕ್ಕೆ.
ವಿಶ್ವ ದ ತುಂಬಾ ಹಿಂದೂಗಳಿದ್ದರೂ ಹಿಂದೂಸ್ತಾನದಲ್ಲಿಲ್ಲದ ಕಾರಣ ಹಿಂದೂಗಳ ಸಂಖ್ಯೆ ಕುಸಿದಿದೆ ಎನಿಸುತ್ತದೆ.
ಹಿಂದೆ ಪುರಾಣಗಳಲ್ಲಿ ಇದ್ದ ಎಲ್ಲಾ ಹಿಂದೂಗಳೂ ಈಗ ಅನ್ಯಮತೀಯರಾಗಿರಲು ಕಾರಣವೇ ಹಿಂದಿನ ಶಿಕ್ಷಣದಲ್ಲಿದ್ದ ತತ್ವಜ್ಞಾನ ಬಿಟ್ಟು ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಶಿಕ್ಷಣದಲ್ಲಿ ಅಳವಡಿಸಿರೋದು. ಈಗಿದೇ ಮನುಕುಲಕ್ಕೆ ಮಾರಕವಾಗಿದೆ.
ಆದರೂ ಇದರ ಸದ್ಬಳಕೆ ಮಾಡಿಕೊಂಡರೆ ಸಮಾಧಾನವಿದೆ.ಪ್ರಯತ್ನ ನಮ್ಮದು ಫಲ ಭಗವಂತನದು.
ನಮ್ಮ ಕರ್ತವ್ಯ ದಲ್ಲಿ ಲೋಪಧೋಷಗಳಿದ್ದರೆ ಸರಿಪಡಿಸಿಕೊಂಡರೆ ಬುದ್ದನಾಗಬಹುದು. ಸಂಸಾರದಲ್ಲಿದ್ದೇ ಸಂನ್ಯಾಸಿಗಳಂತೆ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಬದುಕಿದ ಶರಣ ದಾಸ ಮಹಾತ್ಮರುಗಳು  ಇದ್ದರಲ್ಲವೆ? ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ
ಯಾರದ್ದೋ ಅನುಭವ ಸಾಹಿತ್ಯ ಹಿಡಿದು ಜ್ಞಾನಿ,ಗುರು ಆಗೋದು ಅರ್ಧ ಸತ್ಯವಾಗುತ್ತದೆ. ಹಾಗೆ ಯಾರದ್ದೋ ಧರ್ಮವನ್ನು ನಮ್ಮ ಧರ್ಮ ಎಂದರೆ ತಪ್ಪು. ಯಾರದ್ದೋ ದೇಶದಲ್ಲಿದ್ದು  ನಮ್ಮ ದೇಶವೆಂದರೆ ಸರಿಯೆ?
ಭೂಮಿ ಒಂದೇ ಆದರೂ ನಮ್ಮೊಳಗೇ ಅಡಗಿರುವ  ಜ್ಞಾನ ಒಂದೇ ರೀತಿಯಲ್ಲಿಲ್ಲದ ಕಾರಣ ಅದ್ವೈತ  ಅಗೋಚರವಾಗೇ ಉಳಿದಿದೆ. ಕಾಣದ ಶಕ್ತಿಯನ್ನು ಕಂಡೆನೆಂದರೆ ನಂಬೋರಿಲ್ಲ.ಹಾಗಂತ ತೋರಿಸಲಾಗದು ನಾವೇ ಒಳಹೊಕ್ಕಿ ಕಂಡುಕೊಂಡಾಗಲೇ ಅಧ್ಯಾತ್ಮ ವಿಜ್ಞಾನವಾಗುತ್ತದೆ.

No comments:

Post a Comment