ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಸಂಖ್ಯೆ ಬಾರಿ ಕುಸಿಯುತ್ತಿದೆ ಎನ್ನುವ ಪ್ರಚಾರ ನಡೆದಿದೆ. ಇದು ಸತ್ಯವಾಗಿದ್ದರೂ ಹಿಂದೂಗಳಲ್ಲಿ ಒಗ್ಗಟ್ಟು ಮರೆಯಾಗುತ್ತಿರುವುದು ದುರಂತವೇ ಸರಿ. ಹಿಂದುತ್ವ ಹಿಂದೂಗಳಲ್ಲಿ ಮರೆಯಾಗಿರೋದೆ ಇದಕ್ಕೆ ಕಾರಣ. ತಂತ್ರಜ್ಞಾನದ ವಶದಲ್ಲಿ ಹಣ ಸಂಪಾದನೆ ಮಾಡುವವರಿಗೆ ತತ್ವಜ್ಞಾನದ ಕೊರತೆ,ತತ್ವಜ್ಞಾನದಲ್ಲಿದ್ದವರಿಗೆ ತಂತ್ರ ಅರ್ಥ ಆಗುತ್ತಿಲ್ಲ. ಇದನ್ನು ಹೊರಗಿನವರು ನೋಡಿಕೊಂಡು ಹಿಂದೂಗಳನ್ನು ತಮ್ಮೆಡೆ ಸೆಳೆದುಕೊಂಡು ರಾಜಾರೋಷವಾಗಿ ಕೆಲಸ ಮಾಡಿಸಿಕೊಂಡು ಮುಂದೆ ನಡೆದಿದ್ದಾರೆ. ಅವರ ಹಿಂದೆ ಹೋದವರಿಗೆ ಹಿಂದಿರುಗಿ ಬರಲಾಗದೆ ಹೊರಗೇ ಉಳಿದರು. ಒಳಗಿದ್ದ ಖಾಲಿಸ್ಥಾನದಲ್ಲಿ ಖಾಲಿಸ್ಥಾನಿಗಳು ಆಕ್ರಮಣ ಮಾಡಿಕೊಂಡರು. ಇದು ಇತಿಹಾಸ ಕಾಲದಿಂದಲೂ ನಡೆದು ಬಂದಿರುವ ಹಿಂದು ಸತ್ಯ.
ನಮ್ಮ ಒಳಗಿದ್ದ ತತ್ವಜ್ಞಾನ ಹೊರಗೆ ಬಂದಂತೆಲ್ಲಾ ಒಗ್ಗಟ್ಟು ಮರೆಯಾಯಿತು. ಬಿಕ್ಕಟ್ಟು ಬಿನ್ನತೆ,ಭಿನ್ನಾಭಿಪ್ರಾಯ ದ ವಾದ ವಿವಾದದಲ್ಲಿ ತಂತ್ರಪ್ರಯೋಗವಾಗಿ ನಮ್ಮವರನ್ನೇ ದ್ವೇಷಮಾಡಲಾಯಿತು. ಇದರಿಂದಾಗಿ ಪರರು ನಮ್ಮವರನ್ನು ಆಳಲು ಅವಕಾಶ ಸಿಕ್ಕಿದಂತಾಗಿ ಅವರ ಶಿಕ್ಷಣ,ಧರ್ಮ ಸಂಸ್ಕೃತಿ ಭಾಷೆ ವ್ಯವಹಾರ ಬಂಡವಾಳ ಸಾಲದ ಮೂಲಕ ದೇಶವನ್ನು ವಿದೇಶ ಮಾಡಲು ರಾಜಕಾರಣಿಗಳೇ ಸಹಕಾರ ಕೊಟ್ಟಾಗ ರಾಜಕಾರಣಿಗಳ ಹಿಂದೆ ನಡೆದ ನಮ್ಮವರ ಸಹಕಾರದಿಂದ ಇನ್ನಷ್ಟು ಅಧರ್ಮ ಬೆಳೆಯಿತು.ದೇಶದ ತುಂಬಾ ದೇವರು,ಧರ್ಮ, ಜಾತಿ, ಜನರಿದ್ದರೂ ಜನರಲ್ಲಿ ದೈವತ್ವವೇ ಮರೆಯಾದಾಗಲೇ ಹಿಂದಿನವರಲ್ಲಿದ್ದ ಧರ್ಮ ಕರ್ಮದ ಸೂಕ್ಮ ಜ್ಞಾನ ಹಿಂದುಳಿದು ಹಿಂದೂಗಳ ಸಂಖ್ಯೆ ಕುಸಿಯುವುದು. ಹಿಂದೂಗಳಿಗೆ ಹಿಂದೂಸ್ತಾನಿಗಳಿಗೆ ದೇಶದೊಳಗೇ ಜೀವನ ನಡೆಸೋ ಅವಕಾಶವಿಲ್ಲ,ಕೆಲವರಿಗೆ ಇಷ್ಟವಿಲ್ಲದೆ ಹೊರಗೆ ಹೋಗಿದ್ದರೆ ಹಲವರಿಗೆ ತಾವು ಕಲಿತ ವಿದ್ಯೆಗೆ ಸರಿಯಾದ ಕೆಲಸ ಸಿಗದೆ ವಿದೇಶಕ್ಕೆ ಹೋಗಬೇಕಿದೆ.
ಹಾಗಂತ ಹಿಂದೂಗಳು ವಿದೇಶದಲ್ಲಿದ್ದಾರೆ ಸ್ವದೇಶದಲ್ಲಿ ಲ್ಲ.
ಯಾವಾಗ ದೇವರು ಹೊರಗೆ ಬೆಳೆದರೂ ಒಳಗಿದ್ದ ದೈವತ್ವ ಹಿಂದುಳಿಯಿತೋ ಆಗಲೇ ತತ್ವ ಹೋಗಿ ತಂತ್ರ ಬೆಳೆಯಿತು.
ಒಟ್ಟಿನಲ್ಲಿ ಹಿಂದಿನಿಂದಲೂ ಇದ್ದ ಮೂರು ಪಂಗಡಗಳು ಈಗಲೂ ಇವೆ.ದೇವರು ಮಾನವರು ಅಸುರರು. ಈ ಮಧ್ಯವರ್ತಿ ಮಾನವರೊಳಗೇ ಅಡಗಿರುವ ದೇವಾಸುರರ ಗುಣ ಜ್ಞಾನ ಅರ್ಥ ವಾದರೆ ಹಿಂದೂ ಸನಾತನ ಧರ್ಮ ಅರ್ಥ ಆದಂತೆಯೇ.
ಎಲ್ಲರೊಳಗೂ ಇರುವ ಪರಾಶಕ್ತಿ ಪರಮಾತ್ಮನ ತಂತ್ರದಿಂದ ಕಂಡವರಿಲ್ಲ.ತತ್ವದಿಂದ ಕಂಡಿದ್ದಾರಷ್ಟೆ. ಹೀಗಾಗಿ ನಮ್ಮಲ್ಲಿ ಒಗ್ಗಟ್ಟು ಏಕತೆ,ಸಮಾನತೆ,ಐಕ್ಯತೆಯ ಮಂತ್ರವಿದೆ ಇದನ್ನು ವ್ಯವಹಾರಿಕ ತಂತ್ರಕ್ಕೆ ಹೆಚ್ಚಾಗಿ ಬಳಸಿದಷ್ಟೂ ಯಂತ್ರಮಾನವರು ಬೆಳೆಯಬಹುದು.ಸ್ವತಂತ್ರ, ಸರಳ,ಸ್ವಾಭಿಮಾನ ಸ್ವಾವಲಂಬನೆ ಸತ್ಯ ಧರ್ಮ ದಲ್ಲಿ ಈಗ ನಡೆಯುವುದು ಬಹಳ ಕಷ್ಟ. ಕೆಲವರಿದ್ದರೂ ಅವರನ್ನು ಹಿಂದೂಗಳೇ ಕೇವಲವಾಗಿ ಕಂಡಾಗ ಜೀವನ ನಡೆಸಲು ಪರಕೀಯರೆಡೆಗೆ ನಡೆಯುವರು. ಪರಕೀಯನ್ನು ದ್ವೇಷ ಮಾಡಿ ಏನೂ ಉಪಯೋಗವಿಲ್ಲ. ದ್ವೇಷ ಮಾನವನ ಜೀವನವನ್ನು ಹಾಳು ಮಾಡುವುದೆನ್ನುವುದು ಸತ್ಯ.ಹಾಗಾಗಿ
ನಿಮ್ಮ ನಿಮ್ಮ ಮನವ ತನುವ ಸಂತೈಸಿಕೊಳ್ಳಿ ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ ಎಂದಿರುವ ದಾಸರಂತೆ ಪರಮಾತ್ಮನ ಅಂತರಾತ್ಮದ ಮೂಲಕ ಕಾಣುವುದನ್ನು ಹಿಂದೂಗಳು ಬೆಳೆಸಿಕೊಳ್ಳಲು ಹೊರಗಿನ ಭ್ರಷ್ಟ ದುಷ್ಟ ರಾಜಕೀಯದ ಅಗತ್ಯವಿರಲಿಲ್ಲ. ನಮ್ಮ ಪುಣ್ಯದ ಫಲವನ್ನು ಭ್ರಷ್ಟ ದುಷ್ಟರಿಗೆ ಆಶೀರ್ವಾದ ಮಾಡಿ ಕಳೆದುಕೊಳ್ಳುವ ಬದಲು ಉತ್ತಮ ಕೆಲಸದಲ್ಲಿ ಸ್ವತಂತ್ರ ವಾಗಿದ್ದು ತೊಡಗಿಸಿಕೊಂಡರೆ ಒಳಗಿರುವ ತತ್ವಜ್ಞಾನ ಹೆಚ್ಚಾಗಿ ಶಾಂತಿ ಸಿಗುತ್ತದೆ.
ಹಿಂದೂ ಸನಾತನ ಧರ್ಮದ ಆಳ ಅಗಲವನ್ನು ಹೊರಗಣ್ಣಿನಿಂದಾಗಲಿ,ಜನಸಂಖ್ಯೆಯಿಂದಾಗಲಿ ಅಳೆಯಲಾಗದು. ಇಡೀ ವಿಶ್ವದ ಕಣಕಣಗಳಲ್ಲಿರುವ ಈ ಶಕ್ತಿ ನಮ್ಮೊಳಗೆ ಬೆಳೆಸಿಕೊಳ್ಳದಿದ್ದರೆ ಧರ್ಮಕ್ಕೆ ಚ್ಯುತಿ ಬರುತ್ತದೆ.
ಒಟ್ಟಿನಲ್ಲಿ ಅಸುರೊಳಗೇ ಅಡಗಿರುವ ಸುರರು ಹೊರಗಿನ ಸಾಧನೆಯಲ್ಲಿ ಮೈಮರೆತಾಗಲೇ ಅಸುರರ ಸಾಮ್ರಾಜ್ಯ ವಾಗೋದು. ಒಂದು ರೀತಿಯಲ್ಲಿ ಇಲ್ಲಿ ಯಾರೂ ಶುದ್ದ ಹಿಂದೂಗಳಿಲ್ಲ .ಎಲ್ಲಾ ಆಪರೇಷನ್ ಪ್ರಭಾವವಷ್ಟೆ.
ಇರೋದರಲ್ಲಿ ಅಲ್ಪ ಸ್ವಲ್ಪ ಶುದ್ದ ಗುಣವಿದ್ದರೂ ಶಿಕ್ಷಣದ ಮೂಲಕ ಉಳಿಸಿ ಬೆಳೆಸೋದೆ ಗುರುಹಿರಿಯರ ಧರ್ಮ. ಇದನ್ನು ಸರ್ಕಾರ ಮಾಡಲೆಂದು ಕುಳಿತರೆ ಅಧರ್ಮ ಮಿತಿಮೀರಿ ಬೆಳೆಯುತ್ತದೆ. ಅಜ್ಞಾನವನ್ನು ಜ್ಞಾನವೆಂದು ತಿಳಿದು ನಡೆಯುವುದು ಸಾಮಾನ್ಯವಾಗುತ್ತದೆ. ಈ ವಿಚಾರ ಯಾರಿಗೂ ಇಷ್ಟವಾಗದಿದ್ದರೂ ಇದು ಸತ್ಯ. ಸತ್ಯವೇ ದೇವರು. ಹಿಂದೂ ಧರ್ಮ ದೈವತ್ವವನ್ನು ಬೆಳೆಸುತ್ತದೆ ಅಹಂಕಾರ ಸ್ವಾರ್ಥ ಮಿತಿಮೀರಿದೆ ಎಂದರೆ ಇದರಲ್ಲಿ ತತ್ವಕ್ಕಿಂತ ತಂತ್ರವೇ ಹೆಚ್ಚಾಗಿದೆ ಎಂದರ್ಥ. ಶ್ರೀ ಕೃಷ್ಣ ಪರಮಾತ್ಮನೂ ದುಷ್ಟರ ಸಂಹಾರಕ್ಕಾಗಿ ತಂತ್ರಪ್ರಯೋಗ ಮಾಡಿರುವಾಗ ನಾವು ಮಾಡಬಾರದೆ ಎನ್ನುವ ಕಾಲದಲ್ಲಿ ನಾವಿದ್ದೇವೆ. ಆದರೆ, ತತ್ವಜ್ಞಾನವನರಿಯದೆ ಹೊರಗಿನ ರಾಜಕೀಯ ತಂತ್ರಕ್ಕೆ ಜೀವ ವಶವಾದಾಗ ಧರ್ಮಸೂಕ್ಮ ಅರ್ಥ ವಾಗದೆ ಜೀವ ಹೋಗುತ್ತದೆ. ತತ್ವವನರಿತು ತಂತ್ರದಸದ್ಬಳಕೆ ಆದಾಗಲೇ ಹಿಂದೂ ಸನಾತನಧರ್ಮದಲ್ಲಿ
ರುವ ಸ್ವತಂತ್ರ ಜ್ಞಾನ ಮಾನವರಲ್ಲಿ ಬೆಳೆಯುತ್ತದೆ. ಅಲ್ಲಿಯವರೆಗೆ ಅತಂತ್ರಸ್ಥಿತಿಯಲ್ಲಿ ಪ್ರೇತಾತ್ಮ,ಭೂತಾತ್ಮವಾಗಿ ಜೀವ ಭೂಮಿ ಮೇಲಿದ್ದು ಕುಣಿಯುತ್ತಿರುತ್ತದೆ.ಕುಣಿತದಲ್ಲಿ ಶಾಂತಿಯಿರುವುದೆ?.
ಶಾಂತಿಯಿಂದ ಷ್ಟೆ ಆತ್ಮಕ್ಕೆ ತೃಪ್ತಿ ಸಿಗುವುದೆಂದು ಹಿಂದೂ ಧರ್ಮ ತಿಳಿಸುತ್ತದೆ. ಅಶಾಂತಿ ಒಳಗೂ ಹೊರಗೂ ಇರೋವಾಗ ಶಾಂತಿಯಿಂದ ಸತ್ಯ ತಿಳಿಯುವುದು ಕಷ್ಟ.
ಒಟ್ಟಿನಲ್ಲಿ ಹಿಂದೂ ಧರ್ಮ ಯಾವತ್ತೂ ಶಾಶ್ವತವಾಗಿದ್ದರೂ ಹಿಂದೂಗಳು ಶಾಶ್ವತ ವಲ್ಲ. ಕಾರಣ ಪರರೊಂದಿಗೆ ವ್ಯವಹಾರಕ್ಕೆ ಇಳಿದಾಗ ಅವರೂ ಬೇರೆಯಾಗಲಾರರು.
ಅತಿಯಾದ ಸ್ವಾರ್ಥ ಅಹಂಕಾರ ಪೂರಿತ ಜೀವನದಲ್ಲಿ ನಮ್ಮಹಿಂದಿನವರ ತತ್ವಜ್ಞಾನ ಅರ್ಥ ವಾಗದೆ ತಂತ್ರ ಬೆಳೆದಿದೆ.
ಕಾಲಕ್ಕೆ ತಕ್ಕಂತೆ ಬದಲಾಗಬೇಕು.ಆದರಿದು ಧರ್ಮ ಸತ್ಯದ ದಾರಿಯಲ್ಲಿರಬೇಕು. ಜನ್ಮ ಪಡೆದ ಕುಲದ ಧರ್ಮ ಕರ್ಮ ಬಿಟ್ಟು ಹೊರ ನಡೆದವರೂ ಹಿಂದೂಗಳಾಗಿದ್ದರೂ ಹಿಂದೂಸ್ತಾನಿಗಳಾಗಿಲ್ಲ.ಹಾಗಾಗಿ ಭಾರತದಲ್ಲಿ ಹಿಂದೂಗಳನ್ನು ಅಲ್ಲಾಡಿಸಿಕೊಂಡು ಅಟ್ಟಾಡಿಸಿಕೊಂಡು ಕುಣಿಸಿಕುಣಿದು ಕುಪ್ಪಳಿಸುವ ಸಂಸ್ಕೃತಿ ಹೊರಗಿನವರಿಂದ ಬೆಳೆದಿದೆ ಇದರ ಜೊತೆಗೆ ಆಳುವ ಪ್ರಯತ್ನ ನಡೆದಿದೆ.ಒಗ್ಗಟ್ಟಿನ ಕೊರತೆಯೇ ಇದಕ್ಕೆ ಕಾರಣ.
ಅರ್ಧ ಸತ್ಯ ಹಿಡಿದು ಜನರ ದಾರಿತಪ್ಪಿಸುವ ಮಧ್ಯವರ್ತಿಗಳು ತಿಳಿದೋ ತಿಳಿಯದೆಯೋ ದೇಶದ ವಿರುದ್ದ ವಿರುವವರಿಗೆ ಮಣೆ ಹಾಕಿದರೆ ಅಧರ್ಮ ವೇ ಬೆಳೆಯೋದು.ಈಗಲೂ ಕಾಲಮಿಂಚಿಲ್ಲ.ಒಳಗಿದ್ದೇ ಎಚ್ಚರವಾದರೆ ಕ್ಷೇಮ. ಆಗೋದನ್ನು ತಡೆಯಲಾಗದು, ಆದ ಮೇಲೆ ಹಿಂದಿರುಗುವುದೂ ಕಷ್ಟ. ಯಾಕೆ ಆಗುತ್ತಿದೆ ಎಂದು ತಿಳಿದು ಹೆಜ್ಜೆ ಹಾಕಿದರೆ ಉತ್ತಮ ದಾರಿ ಕಾಣುತ್ತದೆ. ಕಲಿಗಾಲ ಕಲಿಸುತ್ತಲೇ ಇರುತ್ತದೆ. ಯಾವುದನ್ನು ಕಲಿಯಬೇಕೆಂಬುದು ಗುರುಹಿರಿಯರು ಪೋಷಕರು ಕಲಿಸಬೇಕೆನ್ನುತ್ತದೆ ಹಿಂದೂ ಧರ್ಮ. ಹಿಂದಿನ ಗುರುಕುಲ ಪದ್ದತಿಗೂ ಈಗಿನ ಶಿಕ್ಷಣ ಪದ್ದತಿಗೂ ವ್ಯತ್ಯಾಸವಿದೆ. ಅಂದಿನ ಗುರುಗಳ ಅಧ್ಯಾತ್ಮಿಕ ಶಕ್ತಿ ಇಂದಿನ ಭೌತಿಕ ಶಕ್ತಿ ಬೇರೆ ಬೇರೆ ದಾರಿ ಹಿಡಿದಿದೆ. ಕಣ್ಣಿಗೆ ಕಾಣುತ್ತಿರುವ ಶಿಕ್ಷಣಕ್ಷೇತ್ರದ ಭ್ರಷ್ಟಾಚಾರ ನೋಡಿಯೂ ನೋಡದಂತಿರೋದು ಹಿಂದೂಗಳ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ. ಅಧ್ಯಾತ್ಮ ಎಂದರೆ ಪುರಾಣ,ವೇದ ಶಾಸ್ತ್ರ , ಸಂಪ್ರದಾಯ ಆಚರಣೆ ಯ ಮೂಲಕ ಬೆಳೆಯಬೇಕಾದರೆ ಅದರೊಳಗಿದ್ದ ಸತ್ಯ ಸತ್ವತತ್ವದ ಬಗ್ಗೆ ಮೊದಲು ತಿಳಿಯಬೇಕಿದೆ. ಕೇವಲ ಪ್ರಚಾರಕ್ಕೆ ವ್ಯವಹಾರಕ್ಕೆ ಸೀಮಿತವಾಗಿ ಶಿಕ್ಷಣ ವೇ ಅನ್ಯರ ವಶವಾದಾಗ. ಮಕ್ಕಳು ಮಹಿಳೆಯರ ಒಳಗೆ ಸೇರಿದಹೊರಗಿನ ವಿಷಯವೇ ಜೀವನದಲ್ಲಿ ಮುಖ್ಯಪಾತ್ರವಹಿಸಿ ಒಳಗೇ ಅಡಗಿದ್ದ ಆಧ್ಯಾತ್ಮ ವಿಜ್ಞಾನ
ತೆರೆಮರೆಯಲ್ಲಿದ್ದು ಹಿಂದುಳಿಯುತ್ತದೆ. ಇದೊಂದು ಸಾಮಾನ್ಯ ಜನರಿಗೆ ತಿಳಿಯುವ ಸತ್ಯವಾದರೂ ಇದನ್ನರಿತು ನಡೆಯೋದು ಇಂದು ಕಷ್ಟ.ಕಾರಣ ಹಿಂದೂಗಳೇ ಇದಕ್ಕೆ ವಿರೋಧಿಗಳಾಗಿದ್ದಾರೆಂದರೆ ಇದರರ್ಥ ಹಿಂದುತ್ವಕ್ಕೆ ಅಪಾಯವಿಲ್ಲ ಹಿಂದೂಗಳೇ ಅಪಾಯದಲ್ಲಿದ್ದಾರೆ.ಇದಕ್ಕೆ ಉಪಾಯ ನಮ್ಮ ಹಿಂದಿನ ಗುರುಹಿರಿಯರ ತತ್ವವರಿತು ಧರ್ಮ ಸತ್ಯ ತಿಳಿದು ಅಳವಡಿಸಿಕೊಂಡು ಮುಂದೆ ನಡೆಯೋದು. ಇದಕ್ಕೆ ಪರಕೀಯರ ಸಹಾಯವಿರದು ಪರಮಾತ್ಮನ ಸಹಕಾರವಿರುವುದು. ಒಳಗಿನವರನ್ನು ವಿರೋಧ ಮಾಡಿದಷ್ಟೂ ಹೊರಗಿನವರು ಬೆಳೆಯುವರಲ್ಲವೆ?
ಆತ್ಮಸಾಕ್ಷಿಗೆ ವಿರುದ್ದನಡೆದರೆ ಆತ್ಮಹತ್ಯೆಯಾಗುತ್ತದೆ.ಅಂದರೆ ಆತ್ಮಜ್ಞಾನ ಕುಸಿದರೆ ದೇವರನ್ನು ಕಂಡ .ಮಹಾತ್ಮರನ್ನರಿಯೋದು ಕಷ್ಟ. ಮಹಾತ್ಮರನ್ನು ಅರ್ಥ ಮಾಡಿಕೊಳ್ಳದೆ ಪ್ರಚಾರಕರಾದರೆ ಅಧರ್ಮವಾಗುತ್ತದೆ.
No comments:
Post a Comment