ಹಿಂದುತ್ವಜಾಗೃತವಾದರೆಹಿಂದೂ ಧರ್ಮ ಉಳಿಯುತ್ತದೆ ಎಂದು ಎಲ್ಲಾ ಹೇಳುವರು ಹಾಗಾದರೆ ಹಿಂದುತ್ವಹೇಳೋದೇನು? ತತ್ವ ಯಾವತ್ತೂ ಪರಮಾತ್ಮನ ಸತ್ಯದಲ್ಲಿ ಧರ್ಮದಲ್ಲಿ ಕಾಣಬೇಕೆನ್ನುತ್ತದೆ.ಸತ್ಯ ಯಾವುದು ಧರ್ಮ ಎಲ್ಲಿದೆ? ಎಂದರೆ ಎರಡೂ ನಮ್ಮೊಳಗೇ ಅಡಗಿರುವ ಅಂತರಾತ್ಮದೊಳಗಿದೆ.ಇದನ್ನು ತಿಳಿಯಲೆಂದೇ ಅಧ್ಯಾತ್ಮ ಸಂಶೋಧನೆಯಾಗಿದೆ. ಸಂಶೋಧಕರು ನಮ್ಮ ಮಹಾಗುರು ಹಿರಿಯರು, ಸಾದು ಸಂತ ದಾಸ ಶರಣರಾಗಿದ್ದರು. ಹಾಗಾದರೆ
ಹಿಂದುತ್ವ ಇದ್ದದ್ದು ಹಿಂದಿನಮಹಾತ್ಮರೊಳಗೆ ಅವರ ನಡೆ ನುಡಿಯೊಳಗೆ ಅವರ ಸಾತ್ವಿಕ ಗುಣಗಳ ಒಳಗೆ, ಅವರು ರಾಜಕೀಯದೆಡೆಗೆ ನಡೆಯದೆಯೇ ಯಾರನ್ನೋ ಆಳದೆಯೇ ಪರಮಾತ್ಮನನ್ನು ಕಂಡಿದ್ದರೆಂದರೆ ಹಿಂದುತ್ವಕ್ಕೆ ಮುಖ್ಯವಾಗಿ ಬೇಕಾಗಿರೋದು ಪರಮಸತ್ಯ ಧರ್ಮ ದ ಶಿಕ್ಷಣವಾಗಿತ್ತು.
ಹಿಂದಿನ ಗುರುಕುಲದಲ್ಲಿ ಗುರುಗಳಾಶ್ರಯದಲ್ಲಿ ಶಿಷ್ಯರು ಕಲಿತು ತನ್ನ ತಾನರಿತು ಸಂಸಾರವನ್ನು ಅರ್ಥ ಮಾಡಿಕೊಂಡು ಸ್ವತಂತ್ರ ಜ್ಞಾನದಿಂದ ಎಲ್ಲರೊಂದಿಗೆ ಬಾಳಿ ಬದುಕುವುದು ತತ್ವದ ಉದ್ದೇಶ ವಾಗಿತ್ತು. ಈಗ ಕಾಲ ಬದಲಾಗಿದೆ ಆದರೂ ತತ್ವದ ಉದ್ದೇಶ ಎಲ್ಲರನ್ನೂ ಒಂದು ಮಾಡೋದಾಗಿ ಹಣದಿಂದ ,ರಾಜಕೀಯ ಶಕ್ತಿಯಿಂದ ಹೊರಗೆ ನಡೆದು ಒಳಗೇ ಅಡಗಿದ್ದ ಬ್ರಹ್ಮತತ್ವ ಕಾಣದೆ ಹಿಂದುಳಿದಿದೆ. ಇದನ್ನು ತಂತ್ರದಿಂದ ಜೋಡಿಸುವುದಕ್ಕೂ ಕಷ್ಟ.ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದರೂ ಒಳಗೇ ಅಡಗಿದ್ದ ದ್ವೇಷ ಭಿನ್ನಾಭಿಪ್ರಾಯ ಅಸೂಯೆ ಎನ್ನುವ ದುಷ್ಟಶಕ್ತಿ ಯಾವಾಗ ಎದ್ದು ನಿಲ್ಲುವುದೋ ಗೊತ್ತಿಲ್ಲ. ಇದಕ್ಕಾಗಿ ನಾಟಕದಜಗತ್ತು ಬೆಳೆದಿದೆ. ಜೀವನವೇ ಒಂದು ನಾಟಕರಂಗ.ಇದರಲ್ಲಿ ಪಾತ್ರಧಾರಿಗಳಾದ ಮಾನವರಿಗೆ ಮೇಲಿನ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಪರಮ ಸತ್ಯ ಧರ್ಮದ ಶಿಕ್ಷಣದಕೊರತೆಯಿದೆ. ಶಿಕ್ಷಣವೇ ವ್ಯವಹಾರಕ್ಕೆ ಸೀಮಿತವಾದಾಗ ಧರ್ಮ ಎಲ್ಲಿರುವುದು?ಉಚಿತವಾಗಿ ಭೌತವಿಜ್ಞಾನ ಶಿಕ್ಷಣದ ಜೊತೆಗೆ ಅಧ್ಯಾತ್ಮ ವಿಜ್ಞಾನದ ಶಿಕ್ಷಣವೂ ಕೆಲವರಿಗೆ ಬೇರೆ ಬೇರೆಯಾಗಿ ಸಿಕ್ಕಿದ್ದರೂ ಇವೆರಡರ ಮಧ್ಯೆ ನಿಂತ ಸಾಮಾನ್ಯಜ್ಞಾನಕ್ಕೆ ಸರಿಯಾದ ಶಿಕ್ಷಣ ಸಿಗದವರು ಅತಂತ್ರಸ್ಥಿತಿಗೆ ತಲುಪಿರೋದು ಭಾರತಕ್ಕೆ ತುಂಬಲಾರದ ನಷ್ಟಕ್ಕೆ ಕಾರಣ. ಒಟ್ಟಿನಲ್ಲಿ ಮನುಕುಲಕ್ಕೆ ಸಾಮಾನ್ಯಜ್ಞಾನ ಅಗತ್ಯವಿದೆ. ನಮ್ಮ ಅಧ್ಯಾತ್ಮ ಸಾಧಕರು ಹೆಚ್ಚಾಗಿ ಸಾಮಾನ್ಯ ಸರಳ ಸುಲಭವಾಗಿ ಅರ್ಥ ವಾಗುವ ತತ್ವದಿಂದ ಪರಮಾತ್ಮನ ದರ್ಶನ ಮಾಡಿದ್ದರೆಂದರೆ ಇದು ಎಲ್ಲರೊಳಗೂ ಇರುವ ಜ್ಞಾನ.ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸ್ವಯಂ ಪ್ರಯತ್ನ ಬೇಕು.ಸ್ವತಂತ್ರ ಜೀವನ ಅಗತ್ಯ.ಇಂದು ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂನಮ್ಮ ಶಿಕ್ಷಣ ಪಡೆಯಲು ಸ್ವಾತಂತ್ರ್ಯ ವಿಲ್ಲವೆಂದರೆ ತಂತ್ರಕ್ಕೆ ಕೊಡುವ ಸಹಕಾರ ತತ್ವಕ್ಕೆ ಕೊಡದೆ ನಮ್ಮವರ ಸತ್ಯಕ್ಕೆ ಬೆಲೆ ಕೊಡದೆ ಪರರ ಸತ್ಯಕ್ಕೆ ಮಣೆಹಾಕುವ ಸಂಸ್ಕೃತಿ,ಸಂಸ್ಕಾರ ಆಗಿದೆಯೆ?
ನಮ್ಮ ಮಕ್ಕಳ ಭವಿಷ್ಯ ಹೊರಗಿನವರಲ್ಲಿದೆಯೆ? ಹೊರಗಿನ ಶಿಕ್ಷಣದಿಂದ ಆತ್ಮನಿರ್ಭರ ಆಗಬಹುದೆ? ಭೌತಿಕದಲ್ಲಿ ಸಾಕಷ್ಟು ಸಂಶೋಧಕರಿದ್ದರೂ ಅಧ್ಯಾತ್ಮ ಸಂಶೋದನೆ ಆಗದಿದ್ದರೆಪುರಾಣ ಇತಿಹಾಸದ ಸತ್ಯಾಸತ್ಯತೆಯನ್ನು ಅಪಾರ್ಥ ಮಾಡಿಕೊಂಡು ಜನರನ್ನು ಆಳೋರೇ ಬೆಳೆಯೋದು. ರಾಜಪ್ರಭುತ್ವದ ಅಂದಿನ ಕಾಲದ ಧರ್ಮ ನೀತಿಗೂ ಪ್ರಜಾಪ್ರಭುತ್ವದ ಇಂದಿನ ರೀತಿ ನೀತಿಗೂ ವ್ಯತ್ಯಾಸದಲ್ಲಿ ಬಹಳಷ್ಟು ಅಸತ್ಯ ಅಧರ್ಮ ಅನ್ಯಾಯ ಭ್ರಷ್ಟತೆ ತನ್ನ ಸ್ವಾರ್ಥ ಸುಖಕ್ಕಾಗಿ ಆವರಿಸಿಕೊಂಡು ಜನರ ಒಳ್ಳೆಯ ಗುಣವನ್ನು ತಿರಸ್ಕರಿಸಿ ಇಲ್ಲದ ದ್ವೇಷ ಹುಟ್ಟಿಸಿ ಮನೆಯಿಂದ ಹೊರಬಂದು ಮೂಲದಿಂದ ದೂರಮಾಡಿದೆ.
ಇದು ಕಲಿಪ್ರಭಾವ ಎಂದು ಸುಮ್ಮನೆ ಕೂರಬಹುದೆ?
ಆ ಪರಮಾತ್ಮನ ಲೀಲೆ ಎಂದು ಒಪ್ಪಬಹುದೆ? ಸಾಧ್ಯವಾಗಿದ್ದರೆ ಈ ಹೋರಾಟ ಹಾರಾಟ ಮಾರಾಟವೇ ಇರುತ್ತಿರಲಿಲ್ಲ.ಒಟ್ಟಿನಲ್ಲಿ ಹೋರಾಟ ಒಳಗಿನ ಆತ್ಮತತ್ವದೆಡೆಗೆ ನೆಡೆದರೆ ನಮ್ಮ ತಪ್ಪು ನಮಗೆ ಕಾಣೋದು.ನಾವು ಬದಲಾಗದೆ ಯಾರನ್ನೋ ಬದಲಾವಣೆ ಮಾಡಲಾಗದು ಎಂದು ತತ್ವ ತಿಳಿಸುತ್ತದೆ. ಪರಮಾತ್ಮ ಇರೋದು ಸತ್ಯ,ಸತ್ಯವೇ ದೇವರು ಇದು ಎರಡು ರೀತಿಯಲ್ಲಿ ವಿರುದ್ದ ದಿಕ್ಕಿನಲ್ಲಿ ನಡೆದಿದ್ದರೂ ಒಂದೇ ಶಕ್ತಿಯ ಅಧೀನದಲ್ಲಿರುವುದೆ ಅದ್ವೈತ ತತ್ವ. ಅದ್ವೈತ ದೊಳಗೆ ದ್ವೈತ ಕಾಣುವಾಗ ಎರಡೂ ಸತ್ಯ. ನಾನಿಲ್ಲದ ನೀನಿಲ್ಲ.ನೀನಿಲ್ಲದ ಜಗತ್ತಿಲ್ಲ. ಹಾಗಾದರೆ ನೀನ್ಯಾರು? ನಾನ್ಯಾರು? ಉತ್ತರ ಒಳಗಿನಿಂದ ಸಿಕ್ಕಿದರೆ ತತ್ವ ಹೊರಗೆ ಹುಡುಕಿದರೆ ತಂತ್ರ.ತಂತ್ರ ಸದ್ಬಳಕೆಯಾದರೆ ಸ್ವತಂತ್ರ. ದುರ್ಭಳಕೆ ಆದರೆ ಅತಂತ್ರ ಜೀವನ. ಅತಂತ್ರಸ್ಥಿತಿಗೆ ತಲುಪಿದವರನ್ನು ಕುತಂತ್ರದಿಂದ ಆಳೋದೆ ಅಸುರಿ ಶಕ್ತಿ.
ಎಲ್ಲರನ್ನೂ ನಡೆಸೋ ಒಂದೇ ಶಕ್ತಿಯನ್ನು ಎಲ್ಲಾ ಒಂದೇ ರೀತಿ ಅರ್ಥ ಮಾಡಿಕೊಳ್ಳಲು ಅಸಾಧ್ಯ.ಹೀಗಿರುವಾಗ ನಮ್ಮ ಆತ್ಮಕ್ಕೆ ತೃಪ್ತಿ ಸಿಗುವ ಸ್ವಧರ್ಮ ಸತ್ಕರ್ಮ ನಮ್ಮಲ್ಲಿ ಇದ್ದರೆ ಅದೇ ತತ್ವ. ಜೀವಾತ್ಮನು ಪರಮಾತ್ಮನ ಸೇರೋದೆ ಯೋಗ.
No comments:
Post a Comment