"ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು"
ಎರಡು ರಾಷ್ಟ್ರೀಯ ಪಕ್ಷಗಳ ರಾಜಕೀಯ ದ್ವೇಷಕ್ಕೆ ದೇಶವೇ ಬಡತನದೆಡೆಗೆ ನಡೆದಿದೆ. ಒಂದು ಮೊದಲಿನಿಂದಲೂ ತಾನೇ ಸರಿ ಎಂದು ನಡೆದು ಜನರನ್ನು ಮೋಸಗೊಳಿಸಿ ಆಳುತ್ತಾ ಮುಂದೆ ಬಂದಂತೆಲ್ಲಾ ಇನ್ನೊಂದು ಪಕ್ಷ ತನ್ನದೇ ಆದ ರೀತಿಯಲ್ಲಿ ಬದಲಾವಣೆಗೆ ಪ್ರಯತ್ನಪಟ್ಟು ಮುಂದೆ ಬಂತು.
ಎರಡೂ ಪಕ್ಷಗಳಿಗೂ ಪ್ರಜಾಸಹಕಾರ ಸಿಕ್ಕಿ ಸರ್ಕಾರ ನಮಗೇನು ಕೊಡುತ್ತದೆನ್ನುವ ಸ್ವಾರ್ಥ ಪರ ಜೀವನಕ್ಕೆ ತಮ್ಮ ಜ್ಞಾನವನ್ನು ಲೆಕ್ಕಿಸದೆ ಹಣ ಪಡೆದು ಸಾಲದ ಸುಳಿಯಲ್ಲಿ ರೈತರಿಂದ ಹಿಡಿದು ಶಿಕ್ಷಕರವರೆಗೂ ಬೆಳೆದರು.ಅವರ ಹಿಂದೆ ಸಾಲದ ಹೊರೆಯೂ ಹೆಚ್ಚಾದಾಗ ಸಾಲ ತೀರಿಸಲು ಭ್ರಷ್ಟಾಚಾರ ಬೆಳೆಯಿತು. ಭ್ರಷ್ಟರ ಹಿಂದೆ ನಡೆದವರಿಗೆ ದೇಶ ಕಾಣದೆ ವಿದೇಶಿ ಸಾಲ ಬೆಳೆಸಿದರು. ಇದರಿಂದಾಗಿ ಭಾರತ ಆತ್ಮದುರ್ಭಲ ವಾಗಿದೆಯೆ ಹೊರತು ಆತ್ಮನಿರ್ಭರ ವಾಗಿಲ್ಲವೆಂದರೆ ವಿರೋಧಿಸುವವರು ನಮ್ಮವರೆ.ಇಲ್ಲಿ ವಿದೇಶಿಗರಿಗೆ ಮಣೆ ಹಾಕುವವರೆ ಹೆಚ್ಚು.ವಿದೇಶದಿಂದ ಇಲ್ಲಿ ಬಂದವರು ಹಿಂದೂಗಳಾಗಿಲ್ಲವಾದಾಗ ಅವರ ಧರ್ಮಕ್ಕೆ ಹೆಚ್ಚಿನ ಸಹಕಾರವಿರುತ್ತದೆ.ಹಣ,ಬಂಡವಾಳ ಸಾಲ ವ್ಯವಹಾರ ಮೂಲ ಶಿಕ್ಷಣವೇ ಪರಕೀಯರದ್ದಾಗಿದ್ದರೆ ಒಳಗಿರುವ ಜ್ಞಾನ ಯಾರದ್ದು?
ಕಣ್ಣಿಗೆ ಕಾಣದ ಈ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ಸರ್ಕಾರ ನಡೆಸಿದರೆ ಅಸತ್ಯ ಅನ್ಯಾಯ ಅಧರ್ಮ ದೆಡೆಗೆ ನಡೆಯುತ್ತಿದ್ದರೂ ನಾನು ಪರಿಶುದ್ದನೆನ್ನುವ ಭ್ರಮೆಯೇ ಹೆಚ್ಚಾಗುತ್ತದೆ. ಯಾರದ್ದೋ ಹಣವನ್ನು ಯಾರೋ ಯಾರಿಗೋ ಕೊಟ್ಟು ದಾನಶೂರ ಕರ್ಣ ಎನ್ನುವ ಬಿರುದು ಪಡೆದರೆ ಅಧರ್ಮ. ಕರ್ಣ ನ ಕಥೆ ಇದಕ್ಕೆ ಸಾಕ್ಷಿ.ಆದರೆ ಆ ಮಹಾಶೂರ ಕರ್ಣ ನಲ್ಲಿ ಧರ್ಮ ಜ್ಞಾನವಿತ್ತು.ದುರ್ಯೋಧನನ ಪಕ್ಷದ ಋಣ ತೀರಿಸುವುದಾಗಿತ್ತು.ಆದರೆ ಅಂದಿನ ರಾಜರ ಕಾಲ ಇಂದಿಲ್ಲ ಹೀಗಿರುವಾಗ ಪ್ರಜೆಗಳ ಹಣವನ್ನು ದುರ್ಭಳಕೆ ಮಾಡಿಕೊಂಡು ಅಜ್ಞಾನದಲ್ಲಿ ಆಳುವುದರಿಂದ ಆಗುವ ನಷ್ಟ ತುಂಬೋದೇ ಕಷ್ಟ. ಕಷ್ಟಪಡದೆ ಕೋಟ್ಯಾಂತರ ರೂಗಳನ್ನು ಹಾಳುಮಾಡುವವರ. ಹಿಂದೆ ಸಾಕಷ್ಟು ಶ್ರಮಜೀವಿಗಳು ಬುದ್ದಿಜೀವಿಗಳು ಜ್ಞಾನಿಗಳಿದ್ದಾರೆಂದರೆ ಎಲ್ಲಿದೆ ಸತ್ಯ ಧರ್ಮ?
ಸಾಮಾನ್ಯ ಜ್ಞಾನವಿಲ್ಲದೆ ವಿಶೇಷಜ್ಞಾನದ ಹಿಂದೆ ನಡೆದವರಿಗೆ ಒಳಗೇ ಅಡಗಿರುವ ಭ್ರಷ್ಟ ದುಷ್ಟ ಗುಣಗಳ ಅರಿವಿಲ್ಲದೆ ಏನಾದರಾಗಲಿ ನಾನುಗೆಲ್ಲಬೇಕೆಂಬ ಅಜ್ಞಾನ ಮಿತಿಮೀರಿದೆ.
ಇದಕ್ಕೆ ಸಾಕ್ಷಿಯಾಗಿರುವ ಪರಮಾತ್ಮನೇ ಸುಮ್ಮನಿರುವನೆಂದರೆ ಸಾಮಾನ್ಯರಿಗೆ ಯಾವ ಸಂದೇಶ ಹೋಗುತ್ತಿದೆ? ಒಟ್ಟಿನಲ್ಲಿ ದೇವರು ಧರ್ಮ, ಭಾಷೆ,ಸಂಸ್ಕೃತಿ ಸಂಪ್ರದಾಯಗಳು ರಾಜಕೀಯಕ್ಕೆ ಬಂದಾಗ ಅಳಿಸಿಹೋಗಿ ನಾನೇ ದೇವರು ಎನ್ನುವ ಹಂತಕ್ಕೆ ಬಂದಾಗ ನಾನೆಲ್ಲಿರೋದೆನ್ನುವುದೂ ಮರೆತು ಹೋಗುತ್ತದೆ. ದೇಶದೊಳಗೇ ಇದ್ದು ವಿದೇಶಿಗಳಿಗೆ ಮಣೆಹಾಕುವ ಸಂಸ್ಕೃತಿ ಯಾವ ಮಹಾತ್ಮರು ಕಲಿಸಿದ್ದಾರೋ ? ಪುರಾಣಗಳಲ್ಲಿಯೇ ನಾವು ರಾಜ್ಯ ರಾಜ್ಯದ ನಡುವೆ ನಡೆದ ಯುದ್ದಕ್ಕೆ ಅಧರ್ಮ ದ ರಾಜಕೀಯತೆ ಕಾರಣವಾಗಿದ್ದನ್ನು ತಿಳಿಯಬೇಕಿದೆ. ಆದರೆ ಇಲ್ಲಿ ಅಧರ್ಮ ವೇ ರಾಜಕೀಯ ನಡೆಸಿರುವಾಗ ಧರ್ಮ ಎಲ್ಲಿದೆ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಲ್ಲಿ ಅಜ್ಞಾನ ಮನೆಮಾಡಿ ಹಣ ಅಧಿಕಾರ ಸ್ಥಾನಕ್ಕಾಗಿ ಭ್ರಷ್ಟ ದುಷ್ಟ ರಿಗೆ ಸಹಕರಿಸುವ ಗುಣ ಬೆಳೆದಿರೋದೇ ದುರಂತ. ಇಷ್ಟು ವರ್ಷ ಆಳಿದ ಪಕ್ಷಗಳಿಗೆ ದೇಶದ ಮೂಲ ಶಿಕ್ಷಣದೊಳಗಿದ್ದ ಸಾತ್ವಿಕ ಸತ್ಯದ ಅರಿವಾಗದೆ ರಾಜಕೀಯತೆ ಬೆಳೆದು ಅದೇ ದ್ವೇಷ ರೂಪತಳೆದು ಮಧ್ಯವರ್ತಿಗಳು ಬೆಳೆದರು. ಮಹಾತ್ಮರು ಬೆಳೆದಿಲ್ಲವೆಂದರೆ ಆತ್ಮದುರ್ಭಲ ಭಾರತವಾಗಿದೆ ಎಂದರ್ಥ.
ಎಲ್ಲಿ ರಾಜಕೀಯವಿರುವುದೋ ಅಲ್ಲಿ ಸತ್ಯವಿರದು.ಎಲ್ಲಿ ಸತ್ಯವಿರದೋ ಅಲ್ಲಿ ಧರ್ಮ ವಿರದು.ಎಲ್ಲಿ ಧರ್ಮ ಇರದೋ ಅಲ್ಲಿ ದೇವತೆಗಳಿರೋದಿಲ್ಲ.ಎಲ್ಲಿ ದೇವತೆಗಳಿರುವುದಿಲ್ಲವೋ ಅಲ್ಲಿ ಶಾಂತಿಯಿರದು. ಹೀಗಾಗಿ ದೇಶದೊಳಗೆ ಕ್ರಾಂತಿಯೇ ಮುಂದಾಗಿದೆ.ಇದರಲ್ಲಿ ಯಾರು ಜ್ಞಾನಿಗಳೋ ಅಜ್ಞಾನಿಗಳೋ ಭಗವಂತನಿಗೇ ಗೊತ್ತು. ಸೃಷ್ಟಿ ಸರಿಯಿಲ್ಲದೆ ಸ್ಥಿತಿ ಲಯವೂ ಸರಿಯಾಗಿರದು.ಲಯದೆಡೆಗೆ ನಡೆದಿರುವ ನಮ್ಮ ಜೀವನದಲ್ಲಿ ಬದಲಾವಣೆ ಆಗಬೇಕಾದರೆ ಸೃಷ್ಟಿ ಯ ರಹಸ್ಯ ಅರ್ಥ ವಾಗುವ ಶಿಕ್ಷಣಕೊಡಬೇಕಿದೆ.
ಜೀವ ಶಾಶ್ವತವಲ್ಲ ಆತ್ಮಶಾಶ್ವತ ಎಂದಿರುವ ಮಹಾತ್ಮರ ಹೆಸರಿನಲ್ಲಿ ಕೆಸರೆರಚಾಟ ಮಾಡಿಕೊಂಡು ತಾವೇ ಶುದ್ದವಾಗದೆ ಜನರನ್ನು ಶುದ್ದಮಾಡಲು ರಾಜಕೀಯಕ್ಕೆ ಮಣೆ ಹಾಕಿದವರಿಗೆ ಜನಬಲ ಹಣಬಲ ಅಧಿಕಾರ ಬಲವೇನೂ ಸುಲಭವಾಗಿ ಸಿಗಬಹುದು ಆದರೆ ಸತ್ಯಜ್ಞಾನ ಸಿಗೋದಿಲ್ಲ.ಕಾರಣ ಸತ್ಯ ಒಂದೇ ಇರೋದು ಅದೂ ಒಳಗೇ ಇರೋವಾಗ ಹೊರಗಿನ ರಾಜಕೀಯದಲ್ಲಿ ಕಾಣದು.
ಹಿಂದೂಮುಸ್ಲಿಂ ನಡುವಿರುವ ಇಸ್ಲಾಂ ಧರ್ಮ ಮತಾಂತರ ಮಾಡಿ ತನ್ನ ಸ್ಥಾನ ಭದ್ರಗೊಳಿಸಿಕೊಂಡರೂ ಅದರಿಂದ ದೇಶದ ಮೂಲ ಶಿಕ್ಷಣದಲ್ಲಿದ್ದ ತತ್ವದರ್ಶನ ಆಗೋದಿಲ್ಲ. ಜನಸಂಖ್ಯೆಗಿಂತ ಸತ್ಯಜ್ಞಾನಿಗಳ ಸಂಖ್ಯೆ ಮುಖ್ಯ.ಅದರಲ್ಲೂ ಸತ್ಯಜ್ಞಾನ ಜೀವಾತ್ಮನಿಗೆ ಅಗತ್ಯ .ಪುನರ್ಜನ್ಮ ಇಲ್ಲವೆನ್ನಬಹುದು ಆದರೆಇದು ಸತ್ಯವಾಗಿರದು.ಈ ಜನ್ಮದ ಹಿಂದೂ ಮುಂದೆ ಇಸ್ಲಾಂ ಮುಸ್ಲಿಂ ಆದಂತೆ ಇಸ್ಲಾಂ ಮುಸ್ಲಿಂ ಮುಂದೆ ಹಿಂದೂವಾಗಿ ಜನ್ಮ ಪಡೆಯುವುದಿಲ್ಲವೆ?
ಸನಾತನ ಹಿಂದೂ ಧರ್ಮ ತಿಳಿಸುವುದಿಷ್ಟೆ ಭೂಮಿಯ ಋಣ ತೀರಿಸುವುದಕ್ಕಾಗಿ ನಾವು ಜೀವಾತ್ಮನಿಗೆ ಸತ್ಯ ಧರ್ಮದಲ್ಲಿ ನಡೆಯುವ ಶಿಕ್ಷಣ ಕೊಡಬೇಕಷ್ಟೆ.ಭೌತವಿಜ್ಞಾನ ಅಧ್ಯಾತ್ಮ. ವಿಜ್ಞಾನದಿಂದ ದೂರವಾದಷ್ಟು ಸಾಲ ಬೆಳೆಯುತ್ತದೆ. ಸಾಲ ತೀರಿಸದೆ ಜೀವನ್ಮುಕ್ತಿ ಸಿಗದು. ಹಿಂದೂಗಳೇ ಈವಿಚಾರಕ್ಕೆ ವಿರೋಧಿಸಿ ಮುಂದೆ ಮುಂದೆ ನಡೆದಿರುವಾಗ ಇದನ್ನರಿಯದ ಪರಧರ್ಮ ದವರ ವಿರುದ್ದ ದ್ವೇಷಮಾಡಿ ಉಪಯೋಗವಿಲ್ಲ.
ನಮ್ಮ ಮಕ್ಕಳಿಗೇ ಉತ್ತಮಜ್ಞಾನದ ಶಿಕ್ಷಣ ನೀಡಲು ಕಷ್ಡವಾಗಿರುವಾಗ ಪರರಿಗೆ ಉಪದೇಶ ಮಾಡಿ ಉಪಯೋಗವಿದೆಯೆ?ನಮ್ಮನೆಯೇ ಸಾಲದೊಳಗಿರುವಾಗ ಪರರಮನೆಯ ಸಾಲತಂದು ತೀರಿಸಬಹುದೆ? ಹೀಗೆ ದೇಶದ ಒಳಗೆ ಸಾಕಷ್ಟು ಅಗರ್ಭ ಶ್ರೀಮಂತ ರಿದ್ದರೂ ದೇಶದ ಸಾಲ ತೀರಿಸಲು ಸಾಧ್ಯವಾಗಿಲ್ಲವೆಂದರೆ ಆ ಹಣ ಭ್ರಷ್ಟಾಚಾರದ ಅಧರ್ಮ ಅನ್ಯಾಯ ಅಸತ್ಯದ ಸಂಪಾದನೆ ಆಗಿರುತ್ತದೆ.
ಪರಮಾತ್ಮನಿಗೆ ತಲುಪದ ಈ ಹಣದಿಂದ ಧರ್ಮ ರಕ್ಷಣೆ ಕಷ್ಟವಿದೆ. ಜನರ ಹಣವೇ ದುರ್ಭಳಕೆ ಆಗಿರುವಾಗ ಜನರಲ್ಲಿ ಅರಿವಿನ ಕೊರತೆ ಇರೋವಾಗ ಅವರನ್ನೇ ಆಳಲು ಹೊರಟರೆ ಏನರ್ಥ?ನಾವ್ಯಾರು ? ನಮ್ಮ ಸಹಕಾರ ಯಾರಿಗೆ ಕೊಟ್ಟು ಜ್ಞಾನ ದುರ್ಭಳಕೆ ಆಗುತ್ತಿದೆ? ಸತ್ಯ ತಿಳಿಸಬಾರದೆನ್ನುವರು ಆದರೆ ಸತ್ಯವೇ ದೇವರೆನ್ನುವರು.ಮಕ್ಕಳಿಗೂ ಇದೇ ರೀತಿ ಅಡ್ಡ ಗೋಡೆ ಮೇಲೆ ದೀಪ ಇಟ್ಟು ಅರ್ಧ ಕತ್ತಲಲ್ಲೇ ಕಾಲಕಳೆದರೆ ಪೂರ್ಣ ಸತ್ಯ ಪೂರ್ಣಬೆಳಕಿನೆಡೆಗೆ ಹೋಗಲು ಸಾಧ್ಯವೆ?ಜ್ಞಾನದಿಂದ ಮುಂದುವರಿದಿದ್ದ ದೇಶವನ್ನು ಅಜ್ಞಾನದ ಶಿಕ್ಷಣದಿಂದ ಹಿಂದುಳಿಸುತ್ತಾ ವಿದೇಶ ಮಾಡಲು ಹೊರಟವರಿಗೆ ಇಂದು ಬೇಡಿಕೆ ಹೆಚ್ಚು. ಸ್ವಾತಂತ್ರ್ಯ ಸ್ವೇಚ್ಚಾಚಾರವಾದರೆ ಆತ್ಮದುರ್ಭಲ ವಾಗಿದೆವೆಂದರ್ಥ..
ಮನರಂಜನೆಯಿರಲಿ ಆತ್ಮವಂಚನೆಯಾಗದಿರಲಿ.ಯಾವ ಪಕ್ಷ ಬಂದರೂ ಜನಬಲದಿಂದಾಗಿರುವುದು ಅದು ಆತ್ಮಬಲವಾದರೆ ಉತ್ತಮ ದೇಶ.ಸ್ಮಾಟ್ ಆಗಲು ಹೋಗಿ ಸಾಲದ ಹೊರೆಹೊತ್ತು ನಡೆಯಲಾಗದೆ ಕುಸಿದರೆ ಮೇಲೆ ಎತ್ತಲು ಯಾರಿರುವರು? ಎಲ್ಲದ್ದಕ್ಕೂ ಇತಿಮಿತಿಗಳಿದ್ದರೆ ಉತ್ತಮ.
ಕಾಲವೇ ಹೀಗಿದೆ.ಹಾಗಂತಕಾಲರಾಯ ಸುಮ್ಮನಿರೋದಿಲ್ಲ.
ಸಕಾಲದಲ್ಲಿ ಎಲ್ಲಾ ಸರಿಯಾಗಿ ಸನ್ಮಾರ್ಗದಲ್ಲಿ ನಡೆದರೆ ಕಾಲವೂ ಚೆನ್ನಾಗಿಯೇ ಇರುತ್ತದೆ. ಇದು ಎಲ್ಲಾ ದೇಶಗಳಿಗೂ ಅನ್ವಯಿಸುತ್ತದೆ. ಯಾರದ್ದೋ ಮೂಲ ಶಿಕ್ಷಣ ಇತರರು ಬಂದು ಹಾಳುಮಾಡಿದರೆ ಅವರ ಬುದ್ದಿವಂತಿಕೆ ಚೆನ್ನಾಗಿದ್ದರೂ ಜ್ಞಾನದ ಕೊರತೆ ಕಾಣುವುದು. ಅಜ್ಞಾನದಲ್ಲಿ ಎಷ್ಟು ಹೋರಾಡಿದರೂ ವ್ಯರ್ಥ.
ಯಾಕೆ ರಾಜಕೀಯದ ವಿರುದ್ದ ನಿಲ್ಲಬೇಕೆ ಎಂದರೆ ರಾಜಕೀಯ ಬೇಕು ಅದು ಧರ್ಮದ ಪರವಿರಬೇಕು. ಮನೆಯೊಳಗೇ ಅಧರ್ಮ ವಿದ್ದರೆ ದೈವತ್ವ ಬೆಳೆಯುವುದೆ?
ಸರಳವಾಗಿದ್ದ ತತ್ವವನ್ನು ಕಷ್ಟಕರವಾಗುವಂತೆ ತಿಳಿಸಿ ತಂತ್ರದ ಕಡೆಗೆ ನಡೆದರೆ ತಂತ್ರ ಇಸ್ಲಾಂ ರ ಕೊಡುಗೆ ಯಂತ್ರ ಮುಸ್ಲಿಂ ರ ಮೂಲಕ ಬಂದಿರೋದು.ಹಾಗಾದರೆ ಸ್ವತಂತ್ರ ರು ಯಾರು? ಹಿಂದೂಗಳಮಂತ್ರಶಕ್ತಿಯೇ ತಂತ್ರ ಯಂತ್ರಗಳ ಸೃಷ್ಟಿ ಗೆ ಕಾರಣವಾದಾಗ ಮೂಲವನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ಆಳಿದಷ್ಟೂ ತಂತ್ರ ಯಂತ್ರವೂ ಅದೇ ದಾರಿಹಿಡಿದು ಮನುಕುಲವೇ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೂಪಮಂಡೂಕದಂತಿರುವ ಅನೇಕರಿಗೆ ಹೊರಗಿನ ಹಣ ಸುಲಭವಾಗಿ ಒಳಗೆ ಸೇರುವಾಗ ಹೊರಗಿನ ಅಧರ್ಮ ಅಸತ್ಯ ಅನ್ಯಾಯ ಕಾಣೋದಿಲ್ಲ ಅದನ್ನು ತಡೆಯಲಾಗದು.
ತಾವೂ ಪಾಲುದಾರರಾದಾಗಲೇ ಬೇಲಿಯೇ ಎದ್ದು ಹೊಲಮೇಯೋದು. ಹೀಗಾಗಿ ಇಂದು ಎಷ್ಟೋ ಜ್ಞಾನಿಗಳ ಜ್ಞಾನಯೋಗ,ಭಕ್ತಿಯೋಗ ಕರ್ಮ ಯೋಗ ಹಿಂದುಳಿದು ಭೌತವಿಜ್ಞಾನ ಮುಗಿಲುಮುಟ್ಟಿ ಆಳುತ್ತಿದೆ.ಇದನ್ನು ಪ್ರಗತಿ ಎಂದರೆ ಅಧ್ಯಾತ್ಮ ದ ಪ್ರಕಾರ ಇದೇ ಅಧೋಗತಿಗೆ ಕಾರಣ.
ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಚೆನ್ನಾಗಿರುತ್ತದೆ.ಸೃಷ್ಟಿ ಮಾಡಲಾಗದವರು ಲಯ ಮಾಡುವ ಅಧಿಕಾರವಿದೆಯೆ?
ಎಲ್ಲಾ ಒಂದೇ ಎನ್ನುವವರಲ್ಲಿ ಭಿನ್ನಾಭಿಪ್ರಾಯ ದ್ವೇಷ ಇರುವುದೆ? ಇದೆ ಎಂದರೆ ತಪ್ಪು ನಡೆದಿದೆ ಎಂದರ್ಥ.
ಕಾಲಕ್ಕೆ ತಕ್ಕಂತೆ ಕುಣಿಯಬೇಕೆಂದಿಲ್ಲ.ನಡೆಯಬೇಕು ಎಂದರೂ ಸತ್ಯ ಧರ್ಮ ಕ್ಕೆಚ್ಯುತಿ ಆದರೆ ಪರಮಾತ್ಮನಲ್ಲಿ ಕ್ಷಮೆಯಿಲ್ಲ. ತಿಳಿಯದೇ ನಡೆದ ತಪ್ಪಿಗೆ ಕ್ಷಮೆಯಿರಬಹುದಷ್ಡೆ.
ಸೂಕ್ಷ್ಮ ವಾಗಿರುವ ಈ ಅಧ್ಯಾತ್ಮ ವಿಜ್ಞಾನವನ್ನು ಹೊರಗಿನ ಜಗತ್ತು ಒಪ್ಪದಿದ್ದರೂ ಅದನ್ನು ಬಿಟ್ಟು ಜಗತ್ತಿಲ್ಲ.ಅದರ ಒಂದು ಸಣ್ಣ ಕಿಡಿ ನಮ್ಮೊಳಗೇ ಅಡಗಿರುವಾಗ ಅದರೆಡೆಗೆ ಹೋಗೋದೇ ಜೀವನದ ಮುಖ್ಯಗುರಿ ಎನ್ನುವರು ಮಹಾತ್ಮರು.ಎಲ್ಲಿರುವರು ಮಹಾತ್ಮರು? ರಾಜಕೀಯದಲ್ಲೋ? ರಾಜಯೋಗದಲ್ಲೋ?
ರಾಜಯೋಗದ ಶಿಕ್ಷಣ ಪ್ರಜೆಗಳಿಗೆ ಸಿಕ್ಕಿದ್ದರೆ ರಾಜಕೀಯ ಇಷ್ಟು ಹದಗೆಡುತ್ತಿರಲಿಲ್ಲ. ತನ್ನ ತಾನರಿತು ಪರಮಾತ್ಮನೆಡೆಗೆ ಸಾಗುವುದೇ ರಾಜಯೋಗಿಗಳ ಲಕ್ಷಣ. ಆದರಿದು ಸುಲಭವಿರದ ಕಾರಣ ಪ್ರಚಾರಕ್ಕಷ್ಟೆ ಸೀಮಿತವಾಗಿ ರಾಜಕೀಯತೆ ಬೆಳೆಯಿತು. ಈಗಲೂ ಇದರ ಚರ್ಚೆ ನಡೆಸಿದರೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಅರಿವು ಮೂಡಬಹುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇಶದ ಆಸ್ತಿ.ಅವರಲ್ಲಿ ಜ್ಞಾನವಿದ್ದರೆ ದೇಶದ ಪ್ರಗತಿ.ಅಜ್ಞಾನವಿದ್ದರೆ ಅಧೋಗತಿ.
ಮೂಲಸತ್ಯ ಧರ್ಮ ಬಿಟ್ಟು ನಡೆದವರಿಗೆ ವಿದೇಶವೇ ಗತಿಕಾಣಿಸುತ್ತದೆ. ಅಲ್ಲಿಯೂ ಉತ್ತಮ ಜ್ಞಾನದ ಶಿಕ್ಷಣವಿದ್ದರೆ ಸರಿಯಾಗಿರುತ್ತದೆ ಮಾನವನ ಮನಸ್ಥಿತಿ.
ರಾಜಯೋಗದ ಮಹಾತ್ಮರ ಸರಳತೆಯಿಂದಅಧ್ಯಾತ್ಮ ಪ್ರಗತಿಯಾಗಿದ್ದ ಭಾರತವನ್ನು ರಾಜಕೀಯದಿಂದ ಸ್ಮಾರ್ಟ್ ಮಾಡಲು ಹೋದರೆ ಅಧೋಗತಿ.
No comments:
Post a Comment