ಸಣ್ಣ ವಯಸ್ಸಿನಿಂದಲೇ ಒಳಗೊಂದು ಪ್ರಶ್ನೆಇತ್ತು.ನಾನ್ಯಾರು?/ನಾನ್ಯಾಕೆ ಬಂದೆ? ಸತ್ಯ ಯಾವುದು? ಇದಕ್ಕೆ ಉತ್ತರ ಹೊರಗೆ ಹುಡುಕಿದಷ್ಟೂ ಪ್ರಶ್ನೆ ಬೆಳೆಯುತ್ತಿತ್ತು. ಯಾರನ್ನೋ ಕೇಳಿ ತಿಳಿಯುವ ಪ್ರಶ್ನೆ ಇದಾಗಿರಲಿಲ್ಲ ಕಾರಣ ಇದಕ್ಕೆ ಉತ್ತರ ಒಳಗೇ ಸಿಕ್ಕಾಗಲೇ ಎಷ್ಟೋ ವರ್ಷ ಕಳೆದುಹೋಗಿತ್ತು. ನಂತರದ ವಿಚಾರಗಳಲ್ಲಿ ಜ್ಞಾನ ವಿಜ್ಞಾನದ ಅಂತರವೇ ಅಧರ್ಮ ಕ್ಕೆಕಾರಣ, ರಾಜಕೀಯ ರಾಜಯೋಗದ ಅಪಾರ್ಥ ವೇ ಅಧರ್ಮಕ್ಕೆ ಕಾರಣ ದ್ವೈತಾದ್ವೈತದ ನಡುವಿರುವ ಅಂತರವೇ ತಂತ್ರ ಬೆಳೆಯಲು ಕಾರಣ ಎಲ್ಲದರ ಮೂಲವೇ ಶಿಕ್ಷಣ ವ್ಯವಸ್ಥೆ .ಇದನ್ನು ಸಾಮಾನ್ಯ ಜ್ಞಾನದಿಂದ ಸಾಮಾನ್ಯರ ನಡುವಿದ್ದು ತಿಳಿಯುವಾಗ ಎಷ್ಟೋ ಜನ ಈ ಕಾಲದಲ್ಲಿ ಇದು ನಡೆಯಲ್ಲ.ಕಾಲಕ್ಕೆ ತಕ್ಕಂತೆ ಜೀವನ ಶೈಲಿಬದಲಾಯಿಸಿಕೊಂಡು ಬದುಕಬೇಕು. ಇದನ್ನು ಯಾರೂಸರಿಪಡಿಸಲಾಗದು.ಗುರುಗಳೇ ಸಹಕಾರನೀಡದ ಮೇಲೆ ನಾವೇನೂಮಾಡಲಾಗದು. ನಿಮ್ಮ ಲೇಖನ ಸತ್ಯ ಇದ್ದರೂ ನಾವು ಬದಲಾಗೋದು ಕಷ್ಟ. ಹೀಗೇ ಉತ್ತರಗಳು ಬಂದಾಗ ಇದನ್ನು ಆ ದೇವರೆ ಹೇಳಿಸಿರೋದಾದರೆ ದೇವರೆ ಇದಕ್ಕೆ ಕಾರಣವೆಂದಾಗ ಅಧರ್ಮ ನಮ್ಮ ಅರಿವಿನಿಂದ ಬೆಳೆದಿದೆ. ಆ ಅರಿವಿನ ದಾರಿ ಸರಿಯಾದರೆ ಧರ್ಮ. ರಕ್ಷಣೆ.
ಅಂದರೆ ಶಿಕ್ಷಣ ಬದಲಾದರೆ ಧರ್ಮ ರಕ್ಷಣೆ ಎಂದಾಗ ಇದನ್ನು ಬದಲಾಯಿಸುವವರು ಯಾರು? ಶಿಕ್ಷಕರೆ?ಫೋಷಕರೆ?ಸರ್ಕಾರವೆ? ಎಲ್ಲರಿಗೂ ಅರ್ಥ ವಾದಾಗಲೇಬದಲಾವಣೆ ಸಾಧ್ಯ.
ಒಂದು ಮಗುವಿನ ಭವಿಷ್ಯವಿರೋದೆ ಶಿಕ್ಷಣದಲ್ಲಿ. ಇದನ್ನು ಒಳಗಿನ ಜ್ಞಾನದಿಂದ ಬೆಳೆಸಿದರೆ ಶಾಂತಿ ಸುಖ ನೆಮ್ಮದಿ ತೃಪ್ತಿ ಇದ್ದ ಲ್ಲಿ ಯೇ ಸಿಗುತ್ತದೆ. ಹೊರಗಿನಿಂದ ಬೆಳೆಸಿದಷ್ಟೂ ಮನೆಯೊಳಗಿದ್ದರೂ ಮನಸ್ಸು ಹೊರಗೇ ಇದ್ದಾಗ ಮೇಲಿನ ಪ್ರಶ್ನೆಗೆ ಉತ್ತರ ಸಿಗದು.
ಸಿಕ್ಕಿದರೂ ಇದರಿಂದ ಯಾರಿಗೆ ಲಾಭ? ಅವರವರ ಹಿಂದಿನ ಜನ್ಮದ ಫಲವನ್ನು ಜೀವವೇ ಅನುಭವಿಸುವುದನ್ನು ಯಾರೂ ತಪ್ಪಿಸಲಾಗದು. ಒಬ್ಬರ ರೋಗ ಇನ್ನೊಬ್ಬರು ಅನುಭವಿಸಲು ಸಾಧ್ಯವಾಗದಿದ್ದರೂ ಹರಡುವುದು ನಿಲ್ಲದು.ಅದಕ್ಕಾಗಿ ಭ್ರಷ್ಟಾಚಾರ ದ ಹಿಂದೆ ನಡೆದವರಲ್ಲೂ ಭ್ರಷ್ಟಾಚಾರವೇ ನಡೆಸುವಾಗ ಒಳಗಿದ್ದ ಶಿಷ್ಟಾಚಾರ ಕಾಣೋದಿಲ್ಲ.
ಹಾಗೆ ಈ ಋಣ ಮತ್ತು ಕರ್ಮ ಫಲವೂ ಒಬ್ಬರಿಂದ ಒಬ್ಬರಿಗೆ ಹಣದ ಮೂಲಕ ದಾಟಿಸಿಕೊಂಡು ಹೊರಗೆ ಬೆಳೆದಿದೆ. ಅದಕ್ಕೆ ಹಿಂದು ಧರ್ಮ ಹಿಂದುಳಿದವರನ್ನು ಬೆಳೆಸಿ ಅಲ್ಲ ಸಂಖ್ಯೆ ಬಹುಸಂಖ್ಯಾತರಾಗಿ ಬೆಳೆದರು. ಸಂಖ್ಯೆ ಮುಖ್ಯವಲ್ಲ ಜ್ಞಾನವೇಮುಖ್ಯ.
ಜ್ಞಾನದ ನಂತರದ ಸತ್ಯಕ್ಕೂ ಹಿಂದಿನ ಸತ್ಯಕ್ಕೂ ಅಂತರವಿದೆ
ಆದರೆ ಒಂದೇ ಜನ್ಮದಲ್ಲಿ ಎರಡೂ ಸತ್ಯವರಿತಾಗ ಯಾವುದರ ಹಿಂದೆ ನಡೆಯಬೇಕೆನ್ನುವುದೂ
ಮುಖ್ಯವಾಗುತ್ತದೆ. ಇದಕ್ಕೆ ಸರಿಯಾದ ಸಹಕಾರದ ಕೊರತೆಯಿದ್ದರೆ ಮುಂದೆ ನಡೆಯದಿದ್ದರೂ ಇದ್ದಲ್ಲಿಯೇ ಸಾಧ್ಯವಾದಷ್ಟು ತಿಳಿಯಬಹುದು. ತಿಳುವಳಿಕೆ ಹೊರಗಿನಿಂದ ಸೇರಿದರೆ ಭೌತವಿಜ್ಞಾನ ಒಳಗಿನಿಂದ ಬೆಳೆದರೆ ಅಧ್ಯಾತ್ಮ ವಿಜ್ಞಾನ.
No comments:
Post a Comment