ಹೊರ ದೃಷ್ಟಿಯಿಂದ ಒಳದೃಷ್ಟಿಯಿಂದ ದ್ವೈತಾದ್ವೈತದ ಸತ್ಯವನ್ನು ಸರಳವಾಗಿ ಸಾಮಾನ್ಯಜ್ಞಾನದಿಂದ ತಿಳಿಯುವ ಪ್ರಯತ್ನ ಸಾಮಾನ್ಯಜನತೆ ಮಾಡಿದರೆ ಸಾಕು. ಒಡೆದು ಹೋಗುತ್ತಿರುವ ದೇಶವನ್ನು ಒಂದು ಮಾಡಬಹುದು.
ಭಾರತೀಯ ಜ್ಞಾನಿಗಳಿಗೂ ವಿದೇಶಿ ಜ್ಞಾನಿಗಳಿಗೂ ವ್ಯತ್ಯಾಸವಿಲ್ಲವಾದರೂ ಅಂತರವಿದೆ. ಈ ಅಂತರದಲ್ಲಿ ಅಜ್ಞಾನಿಗಳಾದವರು ಸೇರಿಕೊಂಡು ವ್ಯವಹಾರಕ್ಕೆ ಇಳಿದಾಗ ಧರ್ಮ ಸೂಕ್ಮತೆ ಹಿಂದುಳಿಯುವುದು. ಯಾವಾಗ ಮಾನವ ತನ್ನ ಜೀವನಕ್ಕಾಗಿ ಧರ್ಮ ವನ್ನು ಬೆಳೆಸುವ ವ್ಯವಹಾರಕ್ಕೆ ಇಳಿದನೋ ಆಗಲೇ ಹಣ ಅಧಿಕಾರ ಸ್ಥಾನಮಾನ ಸನ್ಮಾನ ಹೊರಗಿನಿಂದ ಬಂದು ಸೇರಿದವು. ಹೊರಗಿನಿಂದ ಸೇರಿದ್ದು ದ್ವೈತ ಒಳಗೇ ಸೇರಿದ್ದು ಅದ್ವೈತ. ಇಲ್ಲಿ ಭೂಮಿಗೆ ಬಂದ. ಪ್ರತಿಯೊಂದು ಜೀವಾತ್ಮನಿಗೂ ಒಳಗಿನ ಸಂಬಂಧ ವಿರುತ್ತದೆ. ಅದನ್ನರಿತು ಹೊರಗಿನ ಸಂಬಂಧ ಬೆಳೆಸಿದಾಗಲೇ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಗೆ ಬೆಲೆ. ಆದರೆ, ಯಾವಾಗ
ಮೂಲತಿಳಿಯದೆ ಹೊರಗೆ ವಿಷಯ ತಿಳಿಯುವಪ್ರಯತ್ನದಲ್ಲಿ ಮನಸ್ಸು ಹೊರಗೆ ಹೊರಡುವುದೋ ಆಗಲೇ ಬೇರೆ ಬೇರೆಯಾಗುತ್ತದೆ.ಅಂತರ ಬೆಳೆಯುತ್ತದೆ
ಮಧ್ಯವರ್ತಿಗಳು ಆವರಿಸಿಕೊಂಡು ಅರ್ಧ ಸತ್ಯವನ್ನೇ ಸತ್ಯವೆಂದು ವಾದ ವಿವಾದ ಮಾಡುತ್ತಾ ಕೊನೆಗೆ ದ್ವೇಷದ ಬೀಜ ಬಿತ್ತಿ ಮಧ್ಯವರ್ತಿಗಳು ಆಳುವರು.
ಯಾವುದೇ ತತ್ವವಿರಲಿ ಇದು ಮನುಕುಲವನ್ನು ಜೋಡಿಸುವ ಕೆಲಸ ಮಾಡುತ್ತದೆ.
ಅದ್ವೈತ ಎಂದರೆ ಇದೇ.ಎಲ್ಲಾ ಒಂದೇ ದೇವರ ಸಣ್ಣ ಬಿಂದು ಗಳಾಗಿದ್ದರೂ ಎಲ್ಲರೊಳಗೂ ಒಂದೇ ರೀತಿಯ ಜ್ಞಾನವಿರದು.
ಜ್ಞಾನದಿಂದ ಶಾಂತಿ ಸಿಗಬೇಕಾದರೆ ನಮ್ಮೊಳಗೇ ಇರುವ ಸತ್ಯದ ಪ್ರಕಾರ ಜೀವನ ನಡೆಸಬೇಕೆನ್ನುತ್ತದೆ ಅಧ್ಯಾತ್ಮ.
ಆದರೆ ಇಂದು ಸತ್ಯವನ್ನು ತಿರುಚಿ ಅಸತ್ಯ ಬೆಳೆದಿರುವಾಗ ನಾವು ಸಾಮಾನ್ಯ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ
ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಿದೆ.ಪ್ರಜೆಗಳೇ ರಾಜರು ಎಂದಾಗ ಪ್ರಜೆಗಳನ್ನು ಆಳುವವರು ಸೇವಕರಾಗಿರಬೇಕು.
ಸೇವೆ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿದರೆ ಪರಮಾತ್ಮನಿಗೆ ಪ್ರೀತಿ.ಇದು ಅಸಾಧ್ಯವಾದಾಗ
ಅಧರ್ಮ ಅನ್ಯಾಯ ಅಸತ್ಯವನ್ನು ಬಳಸಿಕೊಂಡಾಗ ಇದೇ ಭ್ರಷ್ಟಾಚಾರ ವಾಗುತ್ತದೆ. ಭ್ರಷ್ಟಾಚಾರ ಕ್ಕೆ ಸಹಕಾರ ಸಹಾಯಮಾಡುವ ಪ್ರಜೆಗಳೂ ಭ್ರಷ್ಟರಾಗುತ್ತಾರೆ.
ಒಂದರ ಒಳಗೆ ಇನ್ನೊಂದು ಇರೋವಾಗ ಯಾರೂ ಬೇರೆಯಲ್ಲ. ಪರಮಾತ್ಮನ ಒಳಗೆ ಜೀವಾತ್ಮ, ದೇಶದೊಳಗೆ ಪ್ರಜೆಗಳು, ತಾಯಿಯೊಳಗೆ ಮಗು, ಸಮಾಜದೊಳಗೇ ಸಂಸಾರ, ಸ್ತ್ರೀ ಒಳಗೆ ಪುರುಷ,ಪುರುಷನೊಳಗೆ ಸ್ತ್ರೀ ಜ್ಞಾನಗುಣ ಎಲ್ಲಾ ಇದ್ದರೂನೋಡುವಾಗ ಬೇರೆಬೇರೆ ಎನಿಸಿದರೆ ಅಸತ್ಯವಾಗುತ್ತದೆ.
ಹಾಗೆ ಆಕಾಶದಲ್ಲಿ ಭೂಮಿ ಭೂಮಿಮೇಲೆಮನುಕುಲ ,
ಮನುಕುಲದೊಳಗೆ ದೇವಾಸುರರ ಅಗೋಚರ ಶಕ್ತಿಗಳಿವೆ.
ನನ್ನೊಳಗೇ ಇದ್ದುನಡೆಸೋ ಆ ಶಕ್ತಿಯ ಪರಿಚಯಕ್ಕೆನಾನೇ ಒಳಹೊಕ್ಕಿ ಪ್ರಯತ್ನಪಡದಿದ್ದರೆಹೊರಗಿನವರಿಗೆನಾನ್ಯಾರು ಎಂದು ತೋರಿಸಲು ಹೋದರೆನಾನು
ನಾನಾಗಿರೋದಿಲ್ಲ.ಯಾರದ್ದೋ ವಶದಲ್ಲಿ ನನ್ನ ಜೀವನ ನಡೆಯುತ್ತದೆ. ಪರಮಾತ್ಮನ ವಶದಲ್ಲಿ ರುವ ಎಲ್ಲಾ ಜೀವಾತ್ಮರಿಗೂಪರಮಾತ್ಮನ ದರ್ಶನ ವಾಗಿಲ್ಲ ಎಂದರೆಒಳ ಹೊಕ್ಕಿ ತಿಳಿಯೂಪ್ರಯತ್ನವಾಗಿಲ್ಲವಷ್ಟೆ.
ಪ್ರಯತ್ನನಮ್ಮದು ಫಲ ಭಗವಂತನದು.
ನಾವು ಹೊರಗಿನಸತ್ಯ ತಿಳಿಯುವಪ್ರಯತ್ನಪಟ್ಟರೆ ಫಲ ಹೊರಗೆ ಸಿಗುತ್ತದೆ.ಹಾಗೆ ಒಳಗಿನ ಸತ್ಯ ತಿಳಿಯುವ ಪ್ರಯತ್ನ ಕ್ಕೆ ಫಲ ಒಳಗೇ ಸಿಗುತ್ತದೆ.
ಒಳಗಿನ ಸತ್ಯದೆಡೆಗೆನಡೆಯುವುದಕ್ಕೆ ಹೊರಗಿನ ರಾಜಕೀಯದಿಂದ ದೂರವಿರಬೇಕು. ಹೊರಗಿನ ಸತ್ಯಕ್ಕೆ ಬೆಲೆ ಸಿಗಬೇಕಾದರೆ ರಾಜಕೀಯಕ್ಕೆ ಇಳಿಯಲೇಬೇಕು. ರಾಜಕೀಯತೆಯಲ್ಲಿ ಧರ್ಮ ವಿದ್ದರೆ ಸತ್ಯವೂ ನಿಲ್ಲುವುದು.
ಅಧರ್ಮ ವಿದ್ದರೆ ಅಸತ್ಯ ತಾಂಡವವಾಡುತ್ತದೆ. ಅಸತ್ಯದ ಕುಣಿತದಲ್ಲಿ ಮೈ ಮರೆತಾಗಲೇ ಅನಾಹುತಗಳಾಗೋದು.
ಹೀಗೇ ಒಂದೇ ದೇವರನ್ನು ಹಲವು ಮಾಡಿ,ಒಂದೇ ಧರ್ಮ ಅನೇಕವಾಗಿ,ವರ್ಣ ಜಾತಿಗಳಾಗಿ ,ಜಾತಿಯಿಂದ ಪಂಗಡವಾಗಿ ಒಂದೇ ಮನೆಯೊಳಗಿದ್ದವರು ದೂರದೂರವಾದಂತೆಲ್ಲಾ ಆ ಖಾಲಿ ಸ್ಥಳವನ್ನು ಖಾಲಿಸ್ಥಾನಿಗಳು ತಮ್ಮ ವಶಕ್ಕೆ ಪಡೆದಾಗ ದೂರವಾದವರಿಗೆ ಹಿಂದಿರುಗಲಾಗಲಿಲ್ಲ. ಹಿಂದುಳಿದವರನ್ನು ಮುಂದೆ ನಡೆಯಲು ಮಧ್ಯವರ್ತಿಗಳು ಬಿಟ್ಟಿಲ್ಲ.
ಹರಿಹರರಲ್ಲಿ ಬೇಧ, ಶಿವಶಕ್ತಿಯರಲ್ಲಿ ಬೇಧ ಸ್ತ್ರೀ ಪುರುಷರ ಬೇಧ, ದೇವಾನುದೇವತೆಗಳಲ್ಲಿ ಬೇಧಭಾವ ಹೆಚ್ಚಾದಂತೆ ಇದರ ಲಾಭ ಪಡೆದವರು ಅಸುರರಾದರು.
ಇಬ್ಬರಜಗಳದಲ್ಲಿಮೂರನೆಯವರು ಬೆಳೆದು ಆಳುವಾಗ ಜಗಳ ಬಿಟ್ಟು ಸತ್ಯ ತಿಳಿಯುವುದು ಅಗತ್ಯ.
ಬೀಸೋದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆನ್ನುವುದು ಬುದ್ದಿವಂತರ ಲಕ್ಷಣ. ಆದರೆ ಅದು ಬಿಟ್ಟು ಮತ್ತಷ್ಟು ದ್ವೇಷಕ್ಕೆ ಬೆಂಕಿಇಟ್ಟು ಸುಟ್ಟರೆ ಬೂದಿಯಾದರೂ ಅದೂ ಭೂಮಿಯ ಮೇಲೇ.
ಶ್ರೀ ಕೃಷ್ಣ ಪರಮಾತ್ಮ. ತಿಳಿಸಿದಂತೆ ಜೀವಾತ್ಮ ಹೋಗುವಾಗ ಯಾವ ಚಿಂತನೆಯಲ್ಲಿರುವುದೋ ಅದೇ ಮುಂದಿನಜನ್ಮದ
ಪ್ರಾರಂಭವಾಗಿರುತ್ತದೆ. ಈಗಿನ ದ್ವೇಷಕ್ಕೆ ಹಿಂದಿನ ಜನ್ಮದ ಅಜ್ಞಾನದದ್ವೇಷವೇಕಾರಣವೆಂದರೆ ಈಗ ನಾವು ದ್ವೇಷ ಬಿಟ್ಟು ದೇಶಕಟ್ಟುವಕೆಲಸ ಮಾಡಿದರೆ ಅದೇ ದೇಶಕ್ಕೆ ಕೊಡುವ ಉಡುಗೊರೆ. ತಾಯಿಗೆ ಉಡುಗೊರೆ ಕೊಡುವಷ್ಟು ಶಕ್ತಿಯಿಲ್ಲವಾದರೂತಾಯಿಯ ರಕ್ಷಣೆಗಾಗಿ ನಮ್ಮ ಅಂತರಾತ್ಮ ಶುದ್ದಿಯಕಡೆಗೆ ನಡೆಯಬಹುದು.
No comments:
Post a Comment