ಪ್ರಕೃತಿ ಪುರುಷನಿಂದಲೇ ಜೀವಾತ್ಮನಿಗೆ ಮುಕ್ತ ಮುಕ್ತಿ ಮೋಕ್ಷವೆನ್ನುವರು ಸನಾತನ ಮಹರ್ಷಿಗಳು. ಒಮ್ಮೆ ಶಿವಪಾರ್ವತಿಗೆ ಸೃಷ್ಟಿಯ ರಹಸ್ಯವನ್ನು ಒಂದು ಗುಹೆಯೊಳಗಿದ್ದು ಹೊರಗೆ ಯಾರಿಗೂ ಕೇಳಿಸಬಾರದೆಂದು ಹೇಳುತ್ತಿರುವಾಗ ಅದೇ ಗುಹೆಯಲ್ಲಿ ವಾಸವಿದ್ದ ಒಂದು ಶುಕಪಕ್ಷಿ ಅದನ್ನು ಕೇಳುತ್ತಿತ್ತಂತೆ ಹೇಳುವಾಗಮಧ್ಯೆದಲ್ಲಿ ಹುಂ ಹುಂ ಎನ್ನುವ ಶಬ್ದ ಬರುತ್ತಿದ್ದಾಗ ಪಾರ್ವತಿ ಮಧ್ಯದಲ್ಲಿ ನಿದ್ರೆಗೆ ಜಾರಿದ್ದಳು .ದ್ವನಿ ಮಾತ್ರ ಬರುತ್ತಿದ್ದ ಕಡೆ ಶಿವನ ದೃಷ್ಟಿ ಹೋದಾಗ ಶುಕ ಸತ್ತು ಹೋಯಿತಂತೆ. ಮುಂದಿನ ಜನ್ಮದಲ್ಲಿ ಅದೇ ಶುಕ ಪಕ್ಷಿ ವೇದವ್ಯಾಸರ ಮಗನಾಗಿ ಜನಗಮ ಪಡೆದು ಭಾಗವತ ಪುರಾಣದ ಪ್ರಚಾರಕ್ಕೆ ಕಾರಣಕರ್ತ ರಾದ ಶುಕಮುನಿಗಳಾದರೆನ್ನುವುದು ಪುರಾಣ.
ಇಲ್ಲಿ ಒಂದು ಸಣ್ಣ ಪಕ್ಷಿ ಭಗವಂತನ ವಾಣಿ ದರ್ಶನ ಮಾಡಿ ಉನ್ನತ ಜನ್ಮ ಪಡೆದಿರುವಾಗ ನಮ್ಮಂತಹ ಸಾಮಾನ್ಯರಿಗೆ ಯಾಕೆ ಸಾಧ್ಯ ವಾಗುತ್ತಿಲ್ಲ.ಕೆಲವರಂತೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೆ,ಹಲವರು ಅವರ ಹಿಂದೆ ಸಹಕರಿಸುವರು.ಕೆಲವರಿಗೆ ಎಲ್ಲಾ ತಿಳಿದರೂ ಹೇಳದೆ ಹೋದರೆ ಮತ್ತೆ ಕೆಲವರಿಗೆ ಬೇರೆಯವರಿಗೆ ಒಳ್ಳೆಯದಾದರೆ ನಮಗಮ ಗತಿ ಏನೆಂಬ ಸ್ವಾರ್ಥ ಚಿಂತನೆ.ಅಮಾಯಕರ ಸ್ಥಿತಿ ಕೇಳೋದೇ ಬೇಡ.ಇವೆಲ್ಲವೂ ಪೂರ್ವಾರ್ಜಿತ ಕರ್ಮ ಫಲ ಎನ್ನುವುದು ಸತ್ಯ.ಇಂದು ನಾವು ಮಾಡುವಕರ್ಮದ ಫಲ ಮುಂದೆ ಅನುಭವಿಸೋದನ್ನು ಯಾರೂ ತಡೆಯಲಾಗದು.
ಪುರುಷಾತ್ಮ ಎಲ್ಲಾ ಕಡೆ ಇದ್ದು ಪ್ರಕೃತಿಯೊಂದಿಗೆ ಬೆರೆತು ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣಕರ್ತ ನಾಗಿದ್ದರೂ ಮಾನವನಿಗೆ ತಾನೇ ಸೃಷ್ಟಿ ಕರ್ತ ಎನ್ನುವ ಅಹಂಕಾರ ಸ್ವಾರ್ಥ ಮಿತಿಮೀರಿ ಕೊನೆಗೆ ಜೀವ ಹೋಗುತ್ತದೆ. ಹಾಗಾದರೆ ವಾಸ್ತವದಲ್ಲಿ ನಾವು ಬದುಕಿದ್ದೇವೆಯೆ? ಪುರಾಣದಲ್ಲಿ ಬದುಕಿದ್ದೇವೆಯೆ? ಅಥವಾ ಭವಿಷ್ಯದಲ್ಲಿ ಬದುಕಿದ್ದೇವೆಯೆ?
ಪುರಾಣ ಭವಿಷ್ಯದ ಪ್ರಚಾರ ವಾಸ್ತವದಲ್ಲಿ ನಡೆದರೂ ಅಂತರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿ ಯಾಗಿ ಅಸತ್ಯ ಅನ್ಯಾಯ ಅಧರ್ಮ ಕ್ಕೆ ನಮ್ಮ ಸಹಕಾರ ಹೆಚ್ಚಾಗಿ ಈ ಕಡೆ ಪುರಾಣವೂ ಅರ್ಥ ವಾಗದೆ ವಾಸ್ತವದಲ್ಲಿ ಬದುಕಲಾಗದೆ ಭವಿಷ್ಯವನ್ನು ಹಾಳು ಮಾಡುವವರು ಬೆಳೆದಿರುವುದು ಕಲಿಗಾಲದ ಕಲಿಕೆಯ ಪ್ರಭಾವ.
ಒಟ್ಟಿನಲ್ಲಿ ಯಾವಜನ್ಮದಲ್ಲಿ ಏನು ಕೇಳಿದರೆ ಮಾಡಿದರೆ ನೋಡಿದರೆ ಅದೇ ಮುಂದಿನ ಜನ್ಮದ ಪ್ರಾರಂಭವಾಗಿರುತ್ತದೆ ಎಂದು ಶುಕಮುನಿಗಳ ಕಥೆಯ ಸಾರಾಂಶ.
ಇದನ್ನು ಶ್ರೀ ಕೃಷ್ಣ ಪರಮಾತ್ಮನೂ ಜೀವ ಹೋಗುವ ಕ್ಷಣದಲ್ಲಿ ಯಾವ ಚಿಂತನೆಯಿರುವುದೋ ಅದೇ ರೀತಿಯಲ್ಲಿ ಮುಂದಿನ ಜನ್ಮನಿರ್ಧಾರವಾಗುತ್ತದೆ ಎಂದರೆ ವಾಸ್ತವದಲ್ಲಿ ಹೆಚ್ಚಿನ ಜನರಮನಸ್ಸು ರಾಜಕೀಯದಲ್ಲಿ ಮುಳುಗಿರುತ್ತದೆ.
ಅಧ್ಯಾತ್ಮಿಕ ಪ್ರಗತಿ ರಾಜಯೋಗದ ಮೂಲಕ ಆಗುತ್ತದೆ ಎಂದಾಗ ತನ್ನ ತಾನರಿಯದೆ ಹೊರಗಿನ ರಾಜಕಾತಣಿಗಳನ್ನು ಪ್ರತಿಷ್ಠಿತ ಜನರನ್ನು ಅರ್ಥ ಮಾಡಿಕೊಳ್ಳುತ್ತಾ ಪರಮಸತ್ಯ ಪರಮಾತ್ಮನಿಂದ ಮನಸ್ಸು ದೂರವಿದ್ದರೆ ಜೀವನ್ಮುಕ್ತಿ ಎಲ್ಲಿ?
ಇದನ್ನು ಪ್ರಗತಿ ಎನ್ನಬೇಕೋ ಅಧೋಗತಿ ಎನ್ನಬೇಕೋ. ಹೊರಗಿನ ಪ್ರಗತಿಯ ಹಿಂದೆ ಅಧ್ಯಾತ್ಮ ಚಿಂತನೆಯೂ ಇದ್ದರೆ ಸಮಸ್ಥಿತಿ. ಇದು ಸಾಧ್ಯವಾಗೋದಕ್ಕೆ ನಮ್ಮ ಪರಿಸ್ಥಿತಿ ಪುರಾಣ ಕಾಲದ ಪರಿಸ್ಥಿತಿ ಒಂದೇ ಇರಬೇಕು. ಅಂದಿನ ಜ್ಞಾನದ ಸ್ಥಿತಿ ಇಂದಿಲ್ಲ. ಹೀಗಾಗಿನಡೆ ನುಡಿಯ ನಡುವಿನ ಅಂತರ ಬೆಳೆದಿದೆ. ಏನೇ ಇರಲಿ ಪುರಾಣದಿಂದ ನಮ್ಮ ಆತ್ಮಜ್ಞಾನ ಆತ್ಮಾವಲೋಕನ ಆತ್ಮಪರಿಶೀಲನೆ,ಆತ್ಮಸಂಶೋಧನೆಯಿಂದ ಆತ್ಮತೃಪ್ತಿ ಸಿಗುವುದೆನ್ನುವುದು ಸತ್ಯ.ಆದರೆ ಅದರೊಳಗೆ ಹೊಕ್ಕಿ ಸತ್ಯ ತಿಳಿದು ನಡೆದವರಿಗೆ ಇದು ಸಾಧ್ಯವಾಗಿದೆ. ನೆಡೆದವರು ಕಣ್ಮರೆಯಾಗಿದ್ದಾರೆ. ಕಣ್ಣಿಗೆ ಕಾಣೋರು ನಡೆಯುತ್ತಿಲ್ಲ. ನಡೆಯುವವರನ್ನು ಮಧ್ಯವರ್ತಿಗಳು ಮುಂದೆ ಹೋಗದಂತೆ ತಡೆಹಿಡಿದಿರುವರೆಂದರೆ ಯಾರನ್ನು ಯಾರು ತಡೆಯಬೇಕಿತ್ತು.ತಡೆಯುತ್ತಿರುವವರು ಯಾರು? ಇದರಲ್ಲಿ ಲಾಭ ನಷ್ಟ ಯಾರಿಗೆ?
ತಾಳುವಿಕೆಗಿಂತ ತಪವಿಲ್ಲ ಎನ್ನುವರು .ಹೀಗಾಗಿ ಆತ್ಮಾವಲೋಕನ ನಿಧಾನವಾದರೂ ಆಗಲೇಬೇಕಿದೆ.ಕಾರಣ ಒಳಗೇ ಅಡಗಿರುವ ದಿವ್ಯಾತ್ಮನ ಅರಿಯದ ಅರಿವಿನಿಂದ ಸಾಧನೆ ಹೊರಗಿನವರಿಗೆ ಕಂಡರೂ ತಾತ್ಕಾಲಿಕ ವಷ್ಟೆ.
ಹಿಂದಿನ ಎಲ್ಲಾ ದೇವತೆಗಳು ಮಾನವರು ಅಸುರರು ಎಲ್ಲಿರೋದು? ಪ್ರತಿಮೆಯಲ್ಲೋ ಪ್ರತಿಭೆಯಲ್ಲೋ?
ಪ್ರತಿಮೆಮಾತನಾಡದು ಮಾಡಿ ಪೂಜಿಸಬಹುದು. ಆದೇ ಪ್ರತಿಭೆ ಆಡೋದೊಂದು ಮಾಡೋದೊಂದಾಗಿನಾಟಕ ಹೆಚ್ಚಾಗಿ ಆತ್ಮವಂಚನೆಯಿಂದ ಮನರಂಜನೆಗೂ ಇಳಿಯಬಹುದು. ಎರಡೂ ರೀತಿಯಲ್ಲಿ ಸತ್ಯವಿದೆ.ಒಳಗಿನ ಸತ್ಯ ಹಿಂದುಳಿದಿದೆ.ಇದಕ್ಕೆ ಕಾರಣ ನಾವೇ ಹಿಂದೂಗಳೆಂದರೂ ತಪ್ಪು ಎನ್ನುತ್ತೇವೆ. ಒಳಗಿನ ಸಮಸ್ಯೆಗೆ ಪರಿಹಾರ ಹೊರಗೆ ಹುಡುಕಿದರೆ ಸಿಗದು. ಪರಿಪೂರ್ಣ ತೆ ಆತ್ಮಜ್ಞಾನದಿಂದಷ್ಟೆ ಸಿಗೋದು ಎಂದರೆ ಓದಲು ಸಾಕಷ್ಟು ಗ್ರಂಥವಿದ್ದರೂ ಯಾವುದನ್ನು ಓದಿದರೆ ಉತ್ತಮ ಅಧಮ ಎನ್ನುವ ಬಗ್ಗೆ ತಿಳಿದವರು ತಿಳಿಸಿ ಕಲಿಸಿ ಬೆಳೆಸುವುದೇ ಧರ್ಮ. ಈಗ ಹೇಗಿದೆ?
ನಮ್ಮ ಭಾರತೀಯ ಶಿಕ್ಷಣ ಪತ್ರಿಕೆ ನೆಡೆಸುವಾಗಿನ ಹಲವು ಅನುಭವದ ಸತ್ಯದ ಪ್ರಕಾರ ನಮ್ಮ ದೇಶ ಶಿಕ್ಷಣದಿಂದ ಹಿಂದುಳಿದಿದೆ, ಶಿಕ್ಷಣವೇ ಪರರ ವಶದಲ್ಲಿ ರುವಾಗ ನಮ್ಮ ತನ ಏನಿರುತ್ತದೆ? ಹೋಗಲಿ ಮನೆಯೊಳಗೆ ಕಲಿಸೋಣವೆಂದರೆ ಮನೆಯವರ ವಿರೋಧವಿದೆ ಎಂದರೆ ಒಳಗೇ ಸರಿಯಿಲ್ಲದೆ ಹೊರಗೆ ತೇಪೆಹಾಕಿ ಬಣ್ಣ ಹಚ್ಚುವ ಕೆಲಸ ಸಾಕಷ್ಟು ನೆಡೆದಿದೆ. ತೇಪೆ ಒಮ್ಮೆ ಕಳಚೋದೆ ಎಂದಾಗ
ಒಳಗಿನ ಶಕ್ತಿ ಜಾಗೃತವಿದ್ದರೆ ಉತ್ತಮ.
ಏನೂ ಅರಿವಿಲ್ಲದ ಮಕ್ಕಳಿಗೆ ಕಲಿಸುವುದು ಸುಲಭ.ಆದರೆ ಅರಿವು ಯಾವ ದಿಕ್ಕಿನಲ್ಲಿ ನೆಡಸುವುದೆನ್ನುವ ಅರಿವು ಪೋಷಕರಿಗೆ ಇದ್ದರೆ ಮಕ್ಕಳ ಭವಿಷ್ಯ ವೂ ಉತ್ತಮವಿರುತ್ತದೆ.
ಕಲಿಯುಗ ಪ್ರಭಾವದಿಂದಾಗಿ ಒಂದೇ ಮನೆಯಲ್ಲಿ ಶತ್ರುಗಳು ಹೆಚ್ಚಾಗಿರುವಾಗ ಹೊರಗಿನಿಂದ ಅವರನ್ನು ಒಂದು ಮಾಡಲು ಹೊರಗಿನ ಶಿಕ್ಷಣ ಸತ್ವಯುತ,ಸತ್ಯ ಹಾಗು ತತ್ವಯುತ ಆಗಿದ್ದರೆ ಇದ್ದಲ್ಲಿಯೇ ಬದಲಾವಣೆ. ಹೊರಗಿನಿಂದ ಸಾಲ ತಂದು ಮನೆ ನೆಡೆಸುವುದು ಸ
ಅನಿವಾರ್ಯ ಆದರೂ ಯಾರ ಹತ್ತ್ತಿರ ಸಾಲ ಪಡೆದೆವು ಎನ್ನುವ ಸೂಕ್ಮವೂ ಮುಖ್ಯ. ತೀರಿಸುವಷ್ಟು ಚೈತನ್ಯಶಕ್ತಿ ಇದ್ದರೆ ಅದೇ ಪುಣ್ಯ. ಭಾರತೀಯ ಶಿಕ್ಷಣ ಪದ್ದತಿ ಸರಳ ಸುಲಭ ಸಾಮಾನ್ಯ ಜ್ಞಾನದಿಂದ ವಿಶೇಷಜ್ಞಾನ ಆತ್ಮಜ್ಞಾನಕ್ಕೆ ಒತ್ತುಕೊಡುತ್ತದೆ. ಯಾವಾಗ ಇದು ಹೊರಗಿನ ವಿಶೇಷ ಜ್ಞಾನದಡಿ ಸಿಲುಕಿತೋ ಆಗಲೇ ಕೆಳಮಟ್ಟದ ಚಿಂತನೆ ಮೇಲೆ ಏರಿತು. ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಭೂಮಿಯಲ್ಲಿರುವವರಿಗೆ ಅಗತ್ಯ. ಭೂಮಿ ಹಾಳಾಗಲು ಮಾನವನೆ ಕಾರಣ.ಮನಸ್ಸೇ ಎಲ್ಲದ್ದಕ್ಕೂ ಕಾರಣ. ಯಾವಾಗ ಯಾರ ಮನಸ್ಸು ಬದಲಾಗುವುದೆನ್ನುವುದು ಯಾರಿಗೂ ತಿಳಿಯದು ಎಂದರೆ ಪರಮಾತ್ಮನ ಕಾಣೋದಕ್ಕೆ ಕಾಡುಮೇಡು ಅಲೆದವರು ಇಂದಿಲ್ಲ ಕಾರಣ ಸುತ್ತಲುಕಾಡೇ ಇಲ್ಲ. ಕಾಡುಪ್ರಾಣಿಗಳು ನಾಡಿಗೆ ಬರುವಂತಹ ಪರಿಸ್ಥಿತಿ ತಂದವರು ಯಾರು?
ಪ್ರಾಣಿ ಪಕ್ಷಿ ಗಳೊಗಿರುವಷ್ಟು ಸ್ವತಂತ್ರ ಜೀವನ ಮಾನವನೊಳಗಿಲ್ಲವೆ? ಇದ್ದರೂ ಕಂಡುಕೊಳ್ಳುವ ಶಿಕ್ಷಣವಿಲ್ಲ.
ಇದಕ್ಕೆ ಪರಕೀಯರು ಕಾರಣವಲ್ಲ ನಮ್ಮ ಅಂತರವೇ ಕಾರಣ.
No comments:
Post a Comment