ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, May 23, 2024

ಬುದ್ದ ಬುದ್ದಿವಂತಿಕೆಯಲ್ಲಿರುವರೆ?

ಬುದ್ದ‌ಜಯಂತಿಯ ಶುಭಾಶಯಗಳು
ಭಗವಾನ್ ಬುದ್ದನನ್ನು ವಿಷ್ಣುವಿನ‌ಒಂದು ಅವತಾರವೆನ್ನುವರು , ಕೆಲವರು ಅಲ್ಲ ಎನ್ನುವರು. ಹಿಂದೂಗಳ ಒಂದು ಸಮಸ್ಯೆ ಯೆಂದರೆ ಈ ಅಲ್ಲ ಪದವನ್ನು ಹೆಚ್ಚಾಗಿ ಬಳಸುತ್ತಾ ನಾನೇ ಎಲ್ಲಾ ಎನ್ನುವುದಾಗಿದೆ. ಇದರ ಪ್ರಭಾವದಿಂದಾಗಿ ಎಲ್ಲೆಡೆ ಅಲ್ಲ ಬೆಳೆದಿರುವುದಾಗಿದೆ.ಒಂದು ಪದದ ಅರ್ಥ ಏನೇ ಇರಲಿ ಅದನ್ನು ಬಳಸುವಾಗ  ನಮಗೆ  ಅದರಿಂದ. ಲಾಭವೋ ನಷ್ಟವೋ ಎನ್ನುವ ಜ್ಞಾನ ಅಗತ್ಯ.
ಅತಿಸೂಕ್ಮವಾಗಿರುವ ಈ ವಿಚಾರ  ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದರೂ ಎಲ್ಲರೂ ಗಮನಿಸೋದಿಲ್ಲ.
ಒಂದೊಂದು  ಮಾತಿಗೂ ಮೇಲಿರುವ ದೇವತೆಗಳು ಅಸ್ತು ಎನ್ನುವರಂತೆ ಎಂದು ನಮಗೆ ಹಿಂದೆ ಹಿರಿಯರು ತಿಳಿಸುತ್ತಿದ್ದರು.ಅದಕ್ಕೆ ಒಳ್ಳೆಯ ಮಾತಾಡಬೇಕು ಒಳ್ಳೆಯದನ್ನು ‌ಕೇಳಬೇಕು,ಹೇಳಬೇಕು ಕೇಳಿಸಿಕೊಳ್ಳಬೇಕು ವಿರೋಧಿಸಬಾರದು ಹೀಗೇ ಉಪದೇಶ‌ಮಾಡುತ್ತಾ ಬೆಳೆಸಿದ ಗುರುಹಿರಿಯರ ಮಾತಿಗೆ ಇಂದಿನ‌ಯುವ ಜನತೆ ಅಲ್ಲಗೆಳೆದು  ದೇವರೇ ಅಲ್ಲ ಎನ್ನುವ‌ಮಟ್ಟಿಗೆ ಬೆಳೆದಿರೋದು. ಕೆಟ್ಟದ್ದನ್ನು ಹೇಳಿ,ಕೇಳಿ,ನೋಡಿ,ಮಾಡೋದನ್ನು ಅಲ್ಲಗೆಳೆದಿದ್ದರೆ ದೈವತ್ವ ಒಳಗೇ ಬೆಳೆಯುತ್ತಿತ್ತು.ಇರಲಿ ಕಾಲದ ಪ್ರಭಾವ.
ಬುದ್ದನ  ಜ್ಞಾನ,ಪ್ರಜ್ಞೆ ಸನಾತನ ಧರ್ಮದಲ್ಲಿ ವಿರೋಧಿಸಿ  ಹಲವು‌ ಬದಲಾವಣೆಗಳು ಕಾಲಕ್ಕೆ ತಕ್ಕಂತೆ ‌ನಡೆದಿವೆ. ಈಗಲೂ  ಬದಲಾಗೋದು ಅಗತ್ಯವಾಗಿದೆ. 
ತತ್ವದ ಪ್ರಕಾರ ಬದಲಾವಣೆ ಆದಾಗ ಜಗತ್ತಿನಲ್ಲಿ ಧರ್ಮ ವಿರುತ್ತದೆ. ತಂತ್ರವೇ‌ಬೆಳೆದಾಗ ಅತಂತ್ರಸ್ಥಿತಿಗೆ ಮನುಕುಲ ತಲುಪುತ್ತದೆ.
ಬುದ್ದನ‌ಪ್ರಕಾರ ಆಸೆಯೇ ದು:ಖಕ್ಕೆ ಕಾರಣ ಇದನ್ನುಈಗ ಅತಿಆಸೆಯೇ ದು:ಖಕ್ಕೆ ಕಾರಣವೆನ್ನಬಹುದು.
'ಸತ್ಯಂ ವದ ಧರ್ಮಂ ಚರ' ಇಲ್ಲಿ ಅಧ್ಯಾತ್ಮ ಸತ್ಯ ಬಿಟ್ಟು ಭೌತಿಕ ಸತ್ಯದ ಹಿಂದೆ ನಡೆದಾಗ  ಧರ್ಮ ದ ದಿಕ್ಕು ಬದಲಾಗುತ್ತದೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಒಳಗಿನ ಧರ್ಮ ಸತ್ಯದೆಡೆಗೆ ನಡೆಯುತ್ತಾ  ಹೋದರೆ ಶಾಂತಿ ಸಿಗುತ್ತದೆ.
ಅಹಿಂಸೋ ಪರಮೋಧರ್ಮ:
ಹಿಂಸೆಗೆ ಕಾರಣವೇ ಅಕರ್ಮ, ಅಜ್ಞಾನವಾದಾಗ  ಯಾವುದನ್ನು ಹೇಗೆ ತಿಳಿಯಬೇಕೆನ್ನುವ ಶಿಕ್ಷಣವನ್ನು  ಮಕ್ಕಳ ಮನಸ್ಸಿಗೆ ಹಿಂಸೆ ಆಗದಂತೆ  ತಿಳಿಸುವುದೇ  ಗುರುವಿನ ಲಕ್ಷಣ.
ನಲಿಕಲಿ ಅಭಿಯಾನ್‌ಮೂಲಕ ಸರ್ಕಾರದ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪದ್ದತಿ  ಆರಂಭಿಸಿದ್ದರೂ ಅನಗತ್ಯ  ಪ್ರಭುದ್ದ ವಿಷಯಗಳನ್ನು ತಲೆಗೆ ತುಂಬುವುದರ ಮೂಲಕ ಮಕ್ಕಳ‌
ಮುದ್ಗತೆ ಹಾಳಾಗುತ್ತಾ‌ಹಿಂಸೆ ಬೆಳೆಯಿತು. ಇದರಿಂದಾಗಿ ಜ್ಞಾನ ಬಂದಿತೆ? ಅಜ್ಞಾನ ಮಿತಿಮೀರಿತೆ? ಹೀಗೆ‌ನಾವು‌ಹಿಂದಿನ ಮಹಾತ್ಮರುಗಳೇ  ಮನೆ ಬಿಟ್ಟು ಸಂನ್ಯಾಸಿಯಾಗಿ ದೇವರಾಗಿದ್ದಾರೆಂದು ಅಪಾರ್ಥ ‌ಮಾಡಿಕೊಂಡು ಎಲ್ಲಾ ಸಂಸಾರದ ಸುಖ ಅನುಭವಿಸಿ ಕೊನೆಗೆ ಕಷ್ಟವೆಂದು ಹೆಂಡತಿ‌ಮಕ್ಕಳನ್ನು ನಡುನೀರಿನಲ್ಲಿ ಬಿಟ್ಟು  ಹೊರಬಂದರೆ  ಅಜ್ಞಾನವಷ್ಟೆ.
ಶ್ರೀ ಕೃಷ್ಣ ಪರಮಾತ್ಮನೇ  ಸಾವಿರಾರು ಸ್ತ್ರೀ ಯರನ್ನು ಮದುವೆ ಆಗಿರುವಾಗ‌ನಾವ್ಯಾಕೆ ಆಗಬಾರದು ಎಂದರೆ ಅಧರ್ಮ ಅಜ್ಞಾನ ವಷ್ಟೆ. ಶ್ರೀ ರಾಮಚಂದ್ರನೇ  ಯಾರೋ ಸಾಮಾನ್ಯ ಪ್ರಜೆಯ ಮಾತಿಗೆ ಧರ್ಮ ಪತ್ನಿಯನ್ನು ತೊರೆದು ನಡೆದಾಗ ನಮ್ಮಂತಹ ಸಾಮಾನ್ಯರು ಯಾವ‌ಲೆಕ್ಕ?ಎಂದರೂ ಅಜ್ಞಾನ.
ಕಾರಣವಿಷ್ಟೆ ಮನುಕುಲದ ಒಳಗೇ ಹೊರಗೆ  ಇರುವ‌ ಈ ಪರಮಾತ್ಮನ ಶಕ್ತಿಯನ್ನು  ಒಳಹೊಕ್ಕಿ ಅರ್ಥ ಮಾಡಿಕೊಳ್ಳುವುದು ಅಧ್ಯಾತ್ಮ ಸತ್ಯ, ಹೊರಗಿನ ಮಿಥ್ಯ ಭೌತಿಕ ಸತ್ಯ. ಆ ಕಾಲಕ್ಕೆ ಧರ್ಮ ಸಂಸ್ಥಾಪನೆಗಾಗಿ  ಅಂದಿನ‌ಜನರ ಮನಸ್ಥಿತಿ,ಪರಿಸರದ ಪರಿಸ್ಥಿತಿ ಆರ್ಥಿಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನು ಸೂಕ್ಮ ವಾಗಿ ಗಮನಿಸಿದಾಗ  ಒಂದು ಮಾಡುವ ತತ್ವ ಒಂದೆಡೆ ಕಂಡರೆ ಬೇರೆ ಮಾಡುವ ತಂತ್ರ ಮತ್ತೊಂದು ಕಡೆ ಕಾಣುತ್ತದೆ. ಬೇರೆ ಮಾಡುತ್ತಾ ದೇಶದ ಜೊತೆಗೆ ಜನರನ್ನು ಆಳಿ ಅಳಿಸಿದವರು ಅಸುರರಾದರೆ ಒಂದು ಮಾಡಿ  ಒಗ್ಗಟ್ಟಿನಿಂದ ಹೋರಾಟ ಮಾಡಿ ತಮ್ಮ ಆತ್ಮರಕ್ಷಣೆ ಮಾಡಿಕೊಂಡವರು  ಭಕ್ತರು ದೇವರು. ಹೀಗಾಗಿ ಯಾವುದೇ‌ಮಹಾತ್ಮರ ಜಯಂತಿಯಲ್ಲಿ ಅವರ ಆತ್ಮಕಥೆ ಅರ್ಥ ಮಾಡಿಕೊಳ್ಳಲು ಸುಜ್ಞಾನ ಬೇಕಿದೆ.

ಬುದ್ದನಂತಹ  ಮಹಾಜ್ಞಾನಿಗಳು  ಬೆಳೆಯುವುದು ಕಷ್ಟ.ತನ್ನ ಕರ್ತವ್ಯ ದಲ್ಲಿ ಬದ್ದನಾಗಿದ್ದರೆ ಸಾಧ್ಯ.  ಪ್ರಜಾಪ್ರಭುತ್ವದ ಈ ದೇಶದಲ್ಲಂತೂ ಎಲ್ಲದ್ದಕ್ಕೂ ಅಲ್ಲ ಎನ್ನುವವರು‌ ಬೆಳೆದರಂತು ಅಲ್ಲಾನೇ ಬೆಳೆಯೋದು ಸಹಜ. 
ಸನಾತನಧರ್ಮದ ಸತ್ಯ ಸತ್ವ‌ತತ್ವವರಿಯದೆ ಜನರು ಅಧರ್ಮಿ ಗಳಾಗಿ ಹಿಂಸಾಕೃತ್ಯಗಳಿಗೆ ತೊಡಗಿದಾಗ‌
ಮಹಾತ್ಮರುಗಳು ಮಹಾಸಂನ್ಯಾಸಿಗಳು ಜನ್ಮಪಡೆದು ಧರ್ಮ ವನ್ನು ಎತ್ತಿ ಹಿಡಿದಿರುವ ಈ ಭಾರತ ಇಂದು
ಅಧರ್ಮಿಗಳಿಗೆ‌ ಮತ್ತೆ ಮಣೆಹಾಕಿಕೊಂಡು  ರಾಜಕೀಯದ ಸುಳಿಯಲ್ಲಿದೆ. ಇದಕ್ಕೆ ಕಾರಣವೇ  ನಮ್ಮ ಶಿಕ್ಷಣ ಪದ್ದತಿ. ಇಲ್ಲಿ ತತ್ವವೇ  ಇಲ್ಲದ ತಂತ್ರ ಮಕ್ಕಳು ಮಹಿಳೆಯರನ್ನು ಹೊರಗೆಳೆಯುವಲ್ಲಿ ಯಶಸ್ವಿ ಆಗಿದ್ದು ಮನೆಮನೆಯೊಳಗೆ  ಇರಬೇಕಾದ ದೈವೀಕ  ಪ್ರಜ್ಞೆ ಹಿಂದುಳಿದಾಗ  ಅಸುರಿ ಶಕ್ತಿ ಜಾಗೃತವಾಗೋದು ಸಹಜ.
ಅಸುರಿ ಶಕ್ತಿ  ದೇಹದಲ್ಲಿ ಶಕ್ತಿಯಿರೋವರೆಗೂ ಕುಣಿಸುತ್ತದೆ ನಂತರ ಬಿಟ್ಟು ದೂರವಾದರೆ ದೈವೀ ಶಕ್ತಿ  ಶಕ್ತಿಯನ್ನು  ಸದ್ಬಳಕೆ ಮಾಡಿಕೊಂಡು  ಉಸಿರಿರುವರೆಗೂ ನೆಡೆಸುತ್ತದೆ.
ಹಾಗಾದರೆ ದೇವರಿಗೆ ಮಾಡೋರೆಲ್ಲರೂ‌  ಉತ್ತಮರೆ ಎಂದರೆ ತಪ್ಪು ‌ದೈವತ್ವ ಹೊಂದಿದವರು ಉತ್ತಮರಾಗಿದ್ದರು. ತತ್ವ ಒಂದು ಮಾಡುತ್ತದೆ ತಂತ್ರ  ಬೇರೆ ಮಾಡುತ್ತದೆ.
ಅಪಾರ್ಥ ಮಾಡಿಕೊಂಡು ತತ್ವವನ್ನು  ಒಂದಾಗಿ ಕಾಣದೆ ದ್ವೇಷ,ಭಿನ್ನಾಭಿಪ್ರಾಯ, ಜಗಳ, ಮನಸ್ತಾಪ ಬೆಳೆದಾಗ ಅಲ್ಲಿ ತಂತ್ರ ಪ್ರವೇಶವಾಗಿ‌ಮಾನವ ಯಂತ್ರದ ವಶವಾಗೋದು.
ಯಾಂತ್ರಿಕ ಜೀವನದಲ್ಲಿ  ದೇವರನ್ನು ಹುಡುಕೋದು ಕಷ್ಟ.
ಜೀವ ಇದ್ದರೆ ಜೀವನ. ಇದೇ ಲೆಕ್ಕಕ್ಕೆ ಇಲ್ಲವಾದರೆ ಮರಣ.
ಆತ್ಮಕ್ಕೆ ಸಾವಿಲ್ಲ ಎನ್ನುವ ಸತ್ಯ ವನ್ನು ಯಾರೂ ಅಲ್ಲಗೆಳೆಯಲಾರರು. ಎಲ್ಲಾ ಧರ್ಮ ವೂ ಒಂದೇ ಆದರೂ ಅವರವರ ಕರ್ಮಕ್ಕೆ ತಕ್ಕಂತೆ ಫಲ ಬೇರೆ ಬೇರೆ ಇರುತ್ತದೆ.
ನಾವೆಷ್ಟು ವರ್ಷ ಬದುಕಿದ್ದರೂ  ಎಷ್ಟು ಸತ್ಯಜ್ಞಾನ ಒಳಗೆ ತಿಳಿದೆವು ಮಿಥ್ಯಜ್ಞಾನ ತಿಳಿದೆವು ಎನ್ನುವುದರ ಮೇಲಿದೆ ಭವಿಷ್ಯ.ಕಾಲಜ್ಞಾನಿಗಳೇ ತಿಳಿಸಿರುವಂತೆ ಕಲಿಯುಗದ ಸ್ಥಿತಿ ಇಂದೇ ಹೀಗಾದರೆ ಮುಂದೆ ಹೇಗಿರಬಹುದು. ಒಟ್ಟಿನಲ್ಲಿ ಎಲ್ಲಾ ಬಿಟ್ಟು ಹೋಗೋದು ಸತ್ಯ ಆದರೆ ಪಾಪಪುಣ್ಯಕ್ಕೆ ತಕ್ಕಂತೆ ಜನ್ಮವಿದೆ ಎನ್ನುವುದೂ ಸತ್ಯ.  ಪುಣ್ಯಕಾರ್ಯ  ಯೋಗದಿಂದ ನಡೆದರೆ ಅಧ್ಯಾತ್ಮ. ಅಂದರೆ ಭಗವಂತ ನೀಡಿರುವುದನ್ನು ಸದ್ಬಳಕೆ ಮಾಡಿಕೊಂಡು ದಾನ ಧರ್ಮ ದೆಡೆಗೆ ನಡೆದರೆ ಪುಣ್ಯ. ಭ್ರಷ್ಟಾಚಾರ ದ ಹಣ ಬಳಸಿ ದಾನ ಮಾಡಿದರೆ ಪಾಪವೇ ಸುತ್ತಿಕೊಳ್ಳುವುದೆಂದಿದ್ದಾರೆ ದಾಸ ಶ್ರೇಷ್ಠ ರು. ಹೀಗಾಗಿ ಅಂದಿನ ಮಹಾತ್ಮರುಗಳು ಭೌತಿಕ ಆಸ್ತಿ ತ್ಯೆಜಿಸಿ ಜ್ಞಾನದ ಆಸ್ತಿಯನ್ನು ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಸೇರಿದರು.ಈಗಿದುವಿರುದ್ದ ದಿಕ್ಕಿನ ಕಡೆ ಸಾಗಿದೆ .ಕಲಿಕೆಯ ಪ್ರಭಾವ ಹೊರಜಗತ್ತಿನೆಡೆಗೆ ಜೀವ ಸಾಗಿದೆ.. 

No comments:

Post a Comment