ಇತ್ತೀಚಿನ ದಿನಗಳಲ್ಲಿ ಸಾಯಿಬಾಬರನ್ನು ನಂಬುವ ಹಿಂದೂಗಳನ್ನು ಬಾಬ ಮುಸ್ಲಿಂ ಜನಾಂಗದ ಪಕೀರನಾದ್ದರಿಂದ ಹಿಂದೂಗಳಿಗೆ ಸಮಸ್ಯೆಗಳಾಗುತ್ತಿದೆ ಎನ್ನುವ ಪ್ರಚಾರ ನಡೆದಿದೆ. ಇದು ಎಷ್ಟು ಸತ್ಯ ಅಸತ್ಯವೆನ್ನುವ ಬದಲಾಗಿ ಸಾಯಿಭಕ್ತರ ನಡವಳಿಕೆಯಲ್ಲಿ ಹಿಂದುತ್ವ ಇದೆಯೆ ಇಲ್ಲವೆ ಎನ್ನುವ ಬಗ್ಗೆ ತಿಳಿಯುವುದು ಅಗತ್ಯವೆನಿಸುತ್ತದೆ.
ಹಿಂದೂ ದೇವಾಲಯದ ಹಣವನ್ನು ಅನ್ಯಧರ್ಮ ದವರ ಉದ್ದಾರಕ್ಕೆ ಬಳಸುವುದು ತಪ್ಪು ಎಂದಂತೆ ಸಾಯಿ ಟ್ರಸ್ಟ್ ಹಣವನ್ನು ಅನ್ಯಧರ್ಮದವರಿಗೆ ಕೊಡಬಾರದು ಎಂದರೆ ಇಲ್ಲಿ ಇತ್ತೀಚಿಗೆ ಮುಸ್ಲಿಂ ಗೆ ಕೋಟ್ಯಾಂತರ ಹಣವನ್ನು ನೀಡಿದ ವಿಚಾರವನ್ನು ಗಮನಿಸಿದರೆ ನಿಜವಾಗಿಯೂ ಹಿಂದೂಗಳ ಹಣ ಯಾರ ಪಾಲಾಗುತ್ತಿದೆ ? ಸಾಯಿಬಾಬರ ಕಾಲವೇ ಬೇರೆ ಈಗಿನ ಕಾಲವೇ ಬೇರೆಯಾಗಿದೆ.ಅಂದಿನ ಬಾಬರ ಪವಾಡಗಳನ್ನು ಇಂದಿಗೂ ಜನರುಮೆಚ್ಚುವರು. ಹಾಗೆ ಇನ್ನೂ ಅನೇಕ ದೇವಾನುದೇವತೆಗಳ ಪವಾಡಗಳನ್ನು ಮರೆಯಲ್ಲಿಟ್ಟು ಮರೆತವರು ನಾವೇ ಎಂದಾಗ ಯಾವುದು ಪ್ರಚಾರದಲ್ಲಿದೆ ಅದೇ ಬೆಳೆಯೋದು. ಹಣದಿಂದ ಸಂತನಾಗೋದಿಲ್ಲ ಹಾಗೆ ಪಕೀರನಾಗೋದಿಲ್ಲ. ಜ್ಞಾನದಿಂದ ಇದು ಸಾಧ್ಯ. ಸಾಯಿಬಾಬಾರ ಭಕ್ತರು ವಿಶ್ವದೆಲ್ಲೆಡೆ ಇರುವರು.
ಅವರನ್ನು ಶಿವ ಸ್ವರೂಪ ಗುರುವೆಂದು ಗುರುತಿಸಿ ಬೆಳೆಸಿದವರು ಹಿಂದೂಗಳೇ ಆಗಿರುವರು. ಇದರಿಂದ ಸಾಕಷ್ಟು ಶ್ರೀಮಂತ ವರ್ಗದವರು ಸಾಯಿಭಕ್ತರಾಗಿದ್ದಾರೆ.
ಇದನ್ನು ತಪ್ಪು ಎಂದರೆ ಭಕ್ತಿಗೆ ಅಡೆತಡೆಯಿಲ್ಲ. ಆದರೂ ಒಂದು ಸೂಕ್ಷ್ಮ ವಾಗಿರುವ ಸತ್ಯ ನಮ್ಮಲ್ಲಿ ಸಾಕಷ್ಟು ಹಣ,ಅಧಿಕಾರ,ಸ್ಥಾನಮಾನವೆಲ್ಲವೂ ಇದ್ದರೂ ಯಾಕೆ ನೆಮ್ಮದಿ ಶಾಂತಿ ತೃಪ್ತಿ ಇಲ್ಲ? ಈ ಪ್ರಶ್ನೆ ಹಿಂದೂ ದೇವತೆಗಳನ್ನು ಆರಾಧಿಸಿ ಪೂಜಿಸಿದವರೂ ಕೇಳಿಕೊಂಡರೆ ನಮ್ಮ ಸಮಸ್ಯೆಗೆ ಪರಿಹಾರ ಒಳಗೇ ಸಿಗುತ್ತದೆ.
ಹಿಂದೂ ದೇವಾನುದೇವತೆಗಳು ಹಿಂದೆ ಇಂದುಮುಂದೆ ಇದ್ದೇ ಇರುತ್ತಾರೆ.ಆದರೆ, ಹಿಂದೆ ಪುರಾಣಗಳಲ್ಲಿ ನಾವೀಗ ಹೊರಗಿನ ವ್ಯಕ್ತಿಗಳನ್ನು ದೇವರೆಂದು ಪೂಜಿಸುವುದನ್ನು ಕಾಣೋದಿಲ್ಲ. ಗೌರವಿಸಿ ಅವರ ದೈವಶಕ್ತಿಯನರಿತು ಅವರ ದಾರಿಯಲ್ಲಿ ನಡೆದವರನ್ನು ಕಾಣಬಹುದಷ್ಟೆ. ಇಂದು ಸಾಕಾರಕ್ಕೆ ಕೊಡುವ ಲಕ್ಷ ಹಣ ನಿರಾಕಾರಕ್ಕೆ ಕೊಡದೆ ನಿರ್ಲಕ್ಷ್ಯ ಮಾಡಿ ಇದ್ದಾಗಲೇ ಸಾಯಿಸಿ,ಸತ್ತ ಮೇಲೆ ಬದುಕಿಸುವ ಪ್ರಯತ್ನ ನೆಡೆದಿದೆ.
ಅಂದರೆ ಸಾವು ಎಲ್ಲರಿಗೂ ನಿಶ್ಚಿತ. ಹಾಗಂತ ಬದುಕು ಶಾಶ್ವತವಾಗದು. ನಮ್ಮ ಆತ್ಮಸಾಕ್ಷಿ ಗೆ ನಾವೇ ಹೊಣೆಗಾರರು.
ನಮ್ಮ ಮೂಲದ ಗುರು ಹಿರಿಯರು ನಡೆದು ನುಡಿದು ಅರಿತು ಕೊಂಡ ಅಧ್ಯಾತ್ಮ ಸತ್ಯದ ಪ್ರಕಾರ ದೇವರು ನಮ್ಮೊಳಗೇ ಇದ್ದು ನಮ್ಮನ್ನು ತಾಯಿ ತಂದೆ ಗುರು ಬಂಧು ಬಳಗ ಸ್ನೇಹಿತರ ಮೂಲಕ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಕೊಡುವಾಗ ದೂರದಿಂದ ಯಾರೋ ಬಂದು ನಾನೇ ದೇವರು ಎಂದರೆ ಹತ್ತಿರವಿರುವ ಸಂಬಂಧ ಮುರಿದು ಹೋದರೆ ಹಿಂದಿರುಗಿ ಬರೋದು ಕಷ್ಟವಿದೆ. ಯಾವುದೋ ಒಂದು ಶಕ್ತಿಯಿಂದ ಎಲ್ಲಾ ನಡೆದಿದೆ ಎನ್ನುವ ಅದ್ವೈತ ದ ಜೊತೆಗೆ ಆ ಶಕ್ತಿಯ ಜೊತೆಗೆ ನನ್ನಲ್ಲೂ ಒಂದು ಶಕ್ತಿಯಿದೆ ಅದನ್ನು ಅರ್ಥ ಮಾಡಿಕೊಂಡು ಕೂಡಿ ನೆಡೆದರೆ ತೃಪ್ತಿ ಇದೆ ಎನ್ನಬಹುದು. ಆದರೆ ಇವೆರಡನ್ನೂ ಬಿಟ್ಟು ಇನ್ನೊಂದು ಶಕ್ತಿ ಹಿಡಿದು ಮುಂದೆ ನಡೆಯುವೆ ಎಂದಾಗಲೇ ಸಮಸ್ಯೆ ಹೆಚ್ಚು.
ಅವರವರ ಇಷ್ಟದೇವರು ಕುಲದೇವರು ಗ್ರಾಮದೇವರು, ದೇಶದ ದೇವರು...ವಿಶ್ವದ ದೇವರುಗಳನ್ನು ಗುರುತಿಸುವ ಗುರುವನ್ನು ದೇವರೆಂದು ತಿಳಿಯುವುದು ಸರಿ. ಆದರೆ ನಮ್ಮ ಮೂಲದ ದೇವರು ಗುರುವನ್ನು ಮನೆಯೊಳಗೆ ಇದ್ದು ಗುರುತಿಸಿ ಗೌರವಿಸಿ ಬೆಳೆಸಿಕೊಂಡರೆ ಮನೆಯೊಳಗೆ ತೃಪ್ತಿ.
ಸಮಾಜದ ವಿಚಾರಕ್ಕೆ ಬಂದಾಗ ಗ್ರಾಮ ದೇವತೆ ,ದೇಶದ ಪ್ರಶ್ನೆ ಬಂದಾಗ ಎಲ್ಲಾ ದೇವತೆಗಳಿಗೂ ಅವರದೇ ಆದ ವಿಶೇಷ ಶಕ್ತಿ ಯಿರುತ್ತದೆ. ದೇಶದ ರಕ್ಷಣೆಗಾಗಿ ದೇವರ ಭಕ್ತರು ಒಂದಾಗಿ ನಿಂತರೆ ದೇಶಭಕ್ತಿಯಿಂದ ಧರ್ಮ ರಕ್ಷಣೆಯಾಗುತ್ತದೆ. ಅದಕ್ಕಿಂತ ದೊಡ್ಡದು ವಿಶ್ವಶಕ್ತಿ ಇದನ್ನು ವಿಶ್ವದ ಜನರೆಲ್ಲರೂ ಅರ್ಥ ಮಾಡಿಕೊಳ್ಳಲು ಕಷ್ಟ.ಹಾಗಾಗಿ ಅಂತರ ಬೆಳೆದು ಯುದ್ದಗಳಾಗುತ್ತದೆ.
ಒಟ್ಟಿನಲ್ಲಿ ದೈವತ್ವಕ್ಕೆ ದೇವರನ್ನು ಮೂಲದಲ್ಲಿಯೇ ಅರ್ಥ ಮಾಡಿಕೊಳ್ಳಲು ದೈವೀಕ ಶಕ್ತಿಯನ್ನು ಬೆಳೆಸುವಗುರುವಿನ ಅಗತ್ಯವಿದೆ. ದೈವೀಕ ಶಕ್ತಿ ಬೆಳೆದಂತೆಲ್ಲಾ ಹಣ ಅಧಿಕಾರದ ದಾಹ ಕುಸಿಯುತ್ತದೆ. ಶ್ರೀಮಂತಿಕೆ ಜ್ಞಾನದಿಂದ ಬೆಳೆದಾಗ ವಿಶ್ವೇಶ್ವರನ ದರ್ಶನ. ಅರ್ಧ ನಾರೀಶ್ವರರ ಸಮಾನತೆಯಲ್ಲಿ ಏರುಪೇರಾದಾಗಲೇ ಅತಂತ್ರ ಜೀವನ.
ಗುರು ವ್ಯಕ್ತಿಯಲ್ಲ ಶಕ್ತಿ.ಆ ಶಕ್ತಿಯಿಂದ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗೋದಾದರೆ ಅರಿವೇ ಗುರು. ನಮ್ಮ ಸುಜ್ಞಾನ ಒಳಗಿನ ಶಿಕ್ಷಣ ಒಂದೇ ಆದಾಗಲೇ ಅರಿವು ಹೆಚ್ಚುವುದು. ಅಂತರ ಬೆಳೆದರೆ ಅಜ್ಞಾನ ಆವರಿಸಿ ಅಶಾಂತಿಯ ಅತೃಪ್ತ ಜೀವನ ಆಗೋದು.
ನಮ್ಮ ಮಹಾಯತಿಗಳು,ಸಾದು ಸಂತ ದಾಸ ಶರಣರ ಜ್ಞಾನ ಯಾರೋ ಹೊರಗಿನವರಿಂದ ಜನ್ಮಪಡೆದಿದ್ದಲ್ಲ.ಮೂಲ ಶಿಕ್ಷಣವೇ ಅವರ ಆತ್ಮಜ್ಞಾನಕ್ಕೆ ಪೂರಕವಾಗಿತ್ತು. ಕೆಲವರಿಗೆ ಜೀವನದ ಮಧ್ಯದಲ್ಲಿ ಜ್ಞಾನೋದಯವಾಗಿದ್ದರೆ, ಕೆಲವರಿಗೆ ಅಂತ್ಯದಲ್ಲಿ ಜ್ಞಾನೋದಯವಾಗಿದೆ. ಪ್ರಾರಂಭದಿಂದಲೂ ಜ್ಞಾನಿಗಳಾದವರಿಗೆ ಉತ್ತಮಗುರುವಿನ ಮಾರ್ಗ ದರ್ಶನ ಇತ್ತು. ಒಟ್ಟಿನಲ್ಲಿ ಜ್ಞಾನವೆಂಬುದು ಯಾರ ಸ್ವತ್ತಲ್ಲ. ಯಾರೂ ಕದಿಯೋ ವಸ್ತುವಲ್ಲ.ಆದರೆ ಇದನ್ನು ದುರ್ಭಳಕೆ ಮಾಡಿಕೊಂಡು ಹಣ ಮಾಡೋದೇ ಅಜ್ಞಾನವಾಗುತ್ತದೆ. ಎಷ್ಟು ಹಣಗಳಿಸಿದರೂ ಅದರ ಹಿಂದೆ ಅಸತ್ಯ ಅನ್ಯಾಯ ಅಧರ್ಮ ಇದ್ದರೆ ಗುರುವಿಗೆ ಮಾಡುವ ಅವಮಾನವಾಗುತ್ತದೆನ್ನುತ್ತದೆ ಸನಾತನ ಧರ್ಮ.
ಇತ್ತೀಚಿನ ದಿನಗಳಲ್ಲಿ ಕೆಲವರು ಧರ್ಮ ಕ್ಕಿಂತ ನಮಗೆ ಹಣವೇ ಮುಖ್ಯ. ಜೀವನ ನೆಡೆಸಬೇಕಲ್ಲ ಎನ್ನುವ ಮೂಲಕ ವಾಮಮಾರ್ಗದಲ್ಲಿ ಅನ್ಯಧರ್ಮ ದವರೊಂದಿಗೆ ಸೇರಿಕೊಂಡು ಶ್ರೀಮಂತ ರಾಗಿದ್ದರೂ ಅವರ ಸಂತಾನಕ್ಕೆ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗಿದೆ ಎಂದರೆ ಇಲ್ಲಿ ಹೊರಗಿನವರ ಸಂಬಂಧ ಬೆಳೆಸೋ ಮೊದಲು ನಮ್ಮ ಮೂಲವನರಿತರೆ ಉತ್ತಮ.ಇದಕ್ಕಾಗಿ ಹಿಂದೆ ಸಂಬಂಧ ಗಳಲ್ಲಿ ಮದುವೆ ಆಗುತ್ತಿತ್ತು. ಆದರೆ ಅತಿಯಾದ ಸಲಿಗೆಯೂ ಸಮಸ್ಯೆಯ ಮೂಲವಾಗುತ್ತದೆ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗುತ್ತದೆ. ಬದಲಾವಣೆ ಒಳಗಿನಿಂದ ಆದರೆ ಹೊರಗಿನ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ತನ್ನ ತಾನರಿತು ಪರರನ್ನು ಬೆರೆತು ಪರಮಾತ್ಮನ ಅರಿಯುವುದು ಬಹಳ ಕಷ್ಟ. ಎರಡೂ ಕಡೆಯಿಂದ ಒಂದೇ ಶಕ್ತಿಯಿದ್ದರೂ ಮಧ್ಯದಲ್ಲಿ ತೂರಿಕೊಳ್ಳುವ ಮಧ್ಯವರ್ತಿಗಳು ಮಾನವನಿಗೆ ದಾರಿತಪ್ಪಿಸಿ ಅತಂತ್ರಸ್ಥಿತಿಗೆ ತಲುಪಿಸಬಹುದು.
ಅದಕ್ಕಾಗಿ ಮಧ್ಯವರ್ತಿಗಳಿಂದ ದೂರವಿದ್ದು ಮಾನವರಾಗಿ ಬದುಕಲು ಮನಸ್ಸು ನಿರ್ಮಲವಾಗಿರಬೇಕು. ಮಾಧ್ಯಮ ಮಧ್ಯವರ್ತಿ, ಮಹಿಳೆ ಮಕ್ಕಳು ಮನುಕುಲದ ಒಂದು ಭಾಗ.ಅವರೆ ದೇವರಾಗಿ ಗುರುವಾಗಿ ಮಹಾತ್ಮರಾಗಲು ತತ್ವಶಾಸ್ತ್ರ ಅಗತ್ಯವಿದೆ. ಅತಿಯಾದ ತಂತ್ರವಿದ್ದರೆ ಅತಂತ್ರ ಜೀವನ. ಭೂಮಿ ಒಂದು ಮಾಧ್ಯಮವಷ್ಟೆ. ಇಲ್ಲಿ ಬರಲು ಕಾರಣವಿದೆ.ಹಿಂದಿನ ಜನ್ಮದ ಋಣಾತ್ಮಕ ಗುಣಗಳಾಗಿದೆ.ಇದನ್ನು ಧನಾತ್ಮಕ ಗುಣವಾಗಿಸೋರೆ ನಿಜವಾದ ಗುರುವಾಗಿರುವರು.ನಮ್ಮಲ್ಲಿ ಅಂತಹ ಗುಣವಿದ್ದರೆ ನಾವೇ ಗುರು.ಶಿವಸ್ವರೂಪರಲ್ಲಿ ಜ್ಞಾನ ಹೆಚ್ಚು.
No comments:
Post a Comment