ರಕ್ತ ಹೊರಬರುವುದಕ್ಕೂ ಕಣ್ಣೀರು ಹೊರಬರುವುದಕ್ಕೂ ವ್ಯತ್ಯಾಸವಿದೆ. ದೇಹಕ್ಕೆ ಗಾಯವಾದಾಗ ರಕ್ತ ಬಂದರೆ ಮನಸ್ಸಿಗೆ ನೋವಾದಾಗ ಕಣ್ಣೀರು ಹೊರಬರುತ್ತದೆ. ಭೂಮಿಯಲ್ಲಿ ಇವೆರಡೂ ನಡೆಯುತ್ತಲೇ ಇರುತ್ತದೆ.ಕಣ್ಣಿಗೆ ಕಾಣುವ ರಕ್ತಪಾತವೇ ಕಣ್ಣೀರಿಗೆ ಕಾರಣವಾಗುತ್ತಾ ಹೋಗಿದೆ. ಹಾಗಾದರೆ ಇದನ್ನು ತಡೆಯಲು ಸಾಧ್ಯ ವೇ?
ಹೃದಯವಂತಿಕೆಯಿಂದ ಸಾಧ್ಯವಿದೆ. ಮಾನವನ ಹೃದಯದ ಬಡಿತ ಅವನಿಗೇ ಕೇಳದಂತೆ ನಡೆಯುತ್ತಿದೆ.ಯಾವಾಗ ಶಾಂತವಾಗಿ ಆ ಹೃದಯದ ಬಡಿತವನ್ನು ಕೇಳಿಸಿಕೊಳ್ಳುವನೋ ಆಗ ಇತರರ ಹೃದಯವಂತಿಕೆಯೂ ಬೆಳೆಯಲುಬಿಡುವನು. ಎಲ್ಲಿ ಹೃದಯವಂತಿಕೆ ಇರುವುದೋ ಅಲ್ಲಿ ರಕ್ತಪಾತವಾಗಲಿ ದ್ವೇಷ ರೋಷ ಹೋರಾಟವಾಗಲಿ ಇರದೆ ಮನಸ್ಸು ಶಾಂತವಾಗಿ ಕಣ್ಣೀರು ಹಾಕದೆ ಎಲ್ಲವನ್ನೂ ಸಹಜವಾಗಿ ತಿಳಿದು ನಡೆಯುವವರಾಗುವರು.
ಆದರೆ ಇದು ಕಷ್ಟವಿದೆ.ಹೃದಯವಂತಿಕೆ ಆತ್ಮಜ್ಞಾನದ ಸ್ವಂತಿಕೆ ಆಗಿರುವಾಗ ಇದನ್ನು ಬೆಳೆಸಿಕೊಂಡು ಬೆಳೆಸುವವರ ಸಂಖ್ಯೆ ಕಡಿಮೆ. ಹೃದಯದಕಸಿ ಮಾಡಿ ಜೀವ ಉಳಿಸುವ ವಿಜ್ಞಾನ ದ ಸಂಶೋಧನೆಗೆ ಸಾಕಷ್ಟು ಸಹಕಾರವಿದೆ.ಆದರೆ ಹೃದಯಹೀನರಿಗೆ ಸರಿಯಾದ ಸಂಸ್ಕಾರ ಕೊಟ್ಟು ಹೃದಯವಂತಿಕೆ ಬೆಳೆಸುವಲ್ಲಿ ಸೋತಿರುವ ಶಿಕ್ಷಣದಿಂದ ಇಂದು ಕಣ್ಣೀರು ಹೆಚ್ಚಾಗುತ್ತಿದೆ. ಒಳಗಿನ ಜಗತ್ತಿನಲ್ಲಿ ವಿರೋಧಿಸಿ ಹೊರಜಗತ್ತಿನ ಕಡೆಗೆ ನಡೆದವರು ರಕ್ತವನ್ನು ಮಾರಾಟದ ವಸ್ತುವಾಗಿಸಿ ವ್ಯವಹಾರ ನಡೆಸಬಹುದು.
ಆದರೆ, ಅದೇ ರಕ್ತದೊಳಗಿರುವ ಒಂದೊಂದು ಬಿಂದುಗಳಲ್ಲಿ ಅಡಗಿರುವ ಅಗೋಚರ ಶಕ್ತಿಯನ್ನು ಅರಿಯದೆ ಒಳಗೆ ಸೇರಿಸಿಕೊಂಡರೆ ಒಳಗೆ ಹೋದ ಮೇಲೆ ಆಗುವ ಪರಿಣಾಮ ಕಣ್ಣಿಗೆ ಕಾಣೋದಿಲ್ಲ.
ಹೇಗೆ ಸರಸ್ವತಿ ಜ್ಞಾನದ ಸಂಕೇತವಾಗಿ ತಲೆಯಲ್ಲಿ ಬುದ್ದಿ ವಿದ್ಯೆ ತುಂಬುವಳೋ ಹಾಗೇ ಹೃದಯದ ಲಕ್ಮಿ ನಡೆಸುವಳು. ಸದ್ವಿದ್ಯೆ ಬುದ್ದಿ ಸುಜ್ಞಾನವಿಲ್ಲದವರ ಹೃದಯ ಶಕ್ತಿಹೀನವಾದಾಗಲೇ ಬೇರೆಯವರ ಕಣ್ಣೀರು ಹೊರಬರುವುದು. ಇದನ್ನು ದುರ್ಭಲತೆ ಎಂದು ಕರೆದರೂ ತಪ್ಪು. ಕಾರಣ ಕಣ್ಣೀರು ಹೃದಯಾಂತರಾಳದಿಂದ ಹೊರಬರುತ್ತದೆ. ಹೃದಯದ ಕಸಿ ಮಾಡಿ ಹೃದಯವಂತ ಜೀವ ಸೃಷ್ಟಿ ಮಾಡಬಹುದೆ? ಅಥವಾ ಹೃದಯವಂತಿಕೆಯ ಶಿಕ್ಷಣ ಕೊಟ್ಟು ಹೃದಯವನ್ನು ಗಟ್ಟಿಗೊಳಿಸಿಕೊಳ್ಳಬಹುದೆ?
ಎರಡೂ ಮಾನವನಿಗೆ ಸಾಧ್ಯವಿದೆ. ಕೆಟ್ಟ ಮೇಲೆ ಸರಿಪಡಿಸುವ ಬದಲು ಕೆಡದಂತೆ ಜೋಪಾನವಾಗಿ ನೋಡಿಕೊಳ್ಳುವುದರಿಂದ ಕಣ್ಣೀರನ್ನು ತಡೆಯಬಹುದು.
ವೈದ್ಯಕೀಯ ಕ್ಷೇತ್ರದ ಸಾಧನೆ ಹೊರಗೆನಡೆದಿದೆ.ಅಧ್ಯಾತ್ಮಿಕ ಸಾಧನೆ ಒಳಗೇ ನಡೆಯಬೇಕಿದೆ. ಒಳಗಿದ್ದವರಿಗೆಬೆಲೆಯಿಲ್ಲ ಹೊರಗೆ ಬಂದವರಿಗೆ ಬೆಲೆತೆತ್ತು ಸಾಲದ ಹೊಳೆ ಹರಿಸಿದರೆ ಕಣ್ಣೀರು ಹೆಚ್ಚುವುದು. ಮೈಗಾದ ಗಾಯಕ್ಕೆ ಔಷಧ ಹೊರಗಿದೆ.ಅದೇ ಮನಸ್ಸಿಗಾದ ಗಾಯಕ್ಕೆ ಔಷಧ ಒಳಗೇ ಕೊಡಬೇಕಿದೆ.
ಒಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದಾಗಲೇ ಕಣ್ಣೀರು ಹೆಚ್ಚುವುದು.
ಕಣ್ಣಿಗೆ ಕಂಡದ್ದೆ ಸತ್ಯವಲ್ಲ.ಕಾಣದ ಸತ್ಯ ಬೇಕಾದಷ್ಟಿದೆ.
No comments:
Post a Comment