ನಿಮಗೆ ಗೊತ್ತೇ ???
ಮಾನವನಿಗಿಂತ ಇರುವೆ ದೊಡ್ಡದು.
1. ಇರುವೆಗಳಿಗೆ ಶ್ವಾಸಕೋಶವಿಲ್ಲ.
ಮಾನವನಿಗೆ ಶ್ವಾಸಕೋಶವಿಲ್ಲದೆ ಜೀವವಿಲ್ಲ
2. ಇರುವೆಗಳಿಗೆ ಕಿವಿ ಇಲ್ಲ. ಮಾನವನಿಗೆ ಕಿವಿ ಯಿದ್ದರೂ ಏನು ಕೇಳಬೇಕೆಂಬ ಅರಿವಿಲ್ಲ
3. ಇರುವೆಗಳು ಭೂಮಿಯ ಕೃಷಿಕರು.
ಮಾನವ ಭೂ ಒಡೆಯನಾಗಲು ಹೋಗಿ ಸೇವಕನಾಗಿಲ್ಲ
4. ಇರುವೆಗಳಿಗೆ ಎರಡು ಹೊಟ್ಟೆಗಳಿವೆ.
ಮಾನವನ ಒಂದು ಹೊಟ್ಟೆ ತುಂಬಿಸೋದೆ ಕಷ್ಟವಿದೆ
5. ಇರುವೇಗಳು ಈಜುತ್ತವೆ.
ಮಾನವನೂ ಸಂಸಾರವೆಂಬ ಸಾಗರದಲ್ಲಿ ಈಜಲೇಬೇಕು
6. ಇರುವೆಗಳು ಡೈನೋಸಾರ್‌ಗಳಷ್ಟು ಪ್ರಾಚೀನ ಇತಿಹಾಸ ಹೊಂದಿವೆ.
ಮಾನವನಿಗೂ ಸಾಕಷ್ಟು ಇತಿಹಾಸವಿದ್ದರೂ ತಿಳಿಯದೆ ನಡೆದಿದ್ದಾನೆ.
7. ಪ್ರಪಂಚದಾದ್ಯಂತ 12,000 ಕ್ಕೂ ಹೆಚ್ಚು ಜಾತಿಯ ಇರುವೆಗಳಿವೆ.
ಕೋಟ್ಯಾಂತರ ಜಾತಿಯ ಮನಸ್ಸುಳ್ಳ ಮಾನವನಿದ್ದಾನೆ
8. ಇರುವೆ ತನ್ನ ದೇಹದ ತೂಕಕ್ಕಿಂತ 20 ಪಟ್ಟು ಹೆಚ್ಚು ತೂಕ ಎತ್ತಬಲ್ಲದು.
ಮಾನವನಿಗೆ ಅವನಮೈ ಭಾರಹೊತ್ತು ಹೋಗೋದೆ ಕಷ್ಟ
9. ಕೆಲವು ರಾಣಿ ಇರುವೆಗಳು ವರ್ಷಗಳ ಕಾಲ ಬದುಕಬಲ್ಲವು.
ಭೂತಾಯಿಯಿಲ್ಲದೆ ಮನುಕುಲವಿಲ್ಲ
10. ಇರುವೆಗಳು ಹೋರಾಡಿದಾಗ, ಅವು ಸಾಮಾನ್ಯವಾಗಿ ಸಾವಿನವರೆಗೆ ಹೋರಾಡುತ್ತವೆ.
ಸಾವಿಗಂಜದ ಮಹಾತ್ಮರುಗಳಿದ್ದಾರೆ
11. ಕೆಲವು ನಿರ್ದಿಷ್ಟ ಗುಂಪಿನ ರಾಣಿ ಇರುವೆ ಸತ್ತಾಗ, ಗುಂಪು ಕೆಲವು ತಿಂಗಳುಗಳವರೆಗೆ ಮಾತ್ರ ಬದುಕಬಲ್ಲದು.
ಮೂಲ ಜೀವ ಹೋದ ಮೇಲೆ ಅದರಿಂದ ಜನ್ಮ ಪಡೆದ ಜೀವ
ಶಕ್ತಿಹೀನವಾಗುತ್ತದೆ.
12. ಇರುವೆಗಳು ಆಮ್ಲಜನಕವಿಲ್ಲದೆ ಎರಡು ಗಂಟೆಗಳ ಕಾಲ ಬದುಕಬಲ್ಲವು.
ಮಾನವನಿಗೆ ಆಮ್ಲಜನಕವೇ ಜೀವಾಧಾರ
13. ಇರುವೆಗಳಿಗೆ ರಕ್ತವಿಲ್ಲ !
ಮಾನವನ ರಕ್ತ ಜೀವಶಕ್ತಿಯ ಆಧಾರ.
ಒಂದು ಸಣ್ಣ ಇರುವೆಯಿಂದ ಹಿಡಿದು ದೊಡ್ಡ ಗಾತ್ರದ ಆನೆಯವರೆಗೂ ಮಾನವ ತಿಳಿಯಲು ಹೊರಗೆ ನಡೆದರೂ ತನ್ನೊಳಗೆ ಇರುವ ಶಕ್ತಿಯನ್ನು ಹೇಗೆ ಬಳಸಬೇಕೆಂಬ ಜ್ಞಾನ ಮಾನವನಿಗೆ ಅಗತ್ಯವಾಗಿದೆ.
~ ಪರಿಸರ ಪರಿವಾರ
👌ಒಂದರಿವಿನಜೀವಿ ಇರುವೆ.ಅಂದರೆ ಮೂಲ ಜೀವಿ ಇರುವೆಯಾಗಿದೆ.ಆರನೇ ಅರಿವಿನಜೀವಿ ಮಾನವ. ಒಂದನೇ ಅರಿವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆರನೇ ಅರಿವಿನವರೆಗೆ ಮಾನವ
No comments:
Post a Comment