ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, May 22, 2024

ನಾರಸಿಂಹನ ಅವತಾರ ನರಸಿಂಹ

ನಾರಸಿಂಹನ ಅವತಾರವೇ ನರಸಿಂಹ ವಿಷ್ಣುವಿನ ಅವತಾರದಲ್ಲಿ‌
ಮುಖ್ಯವಾಗಿರುವನರಸಿಂಹ‌ಜಯಂತಿಯ ಶುಭಾಶಯಗಳು.
ಮಾನವರ ಜನ್ಮದಿನಕ್ಕೆ ಶುಭಾಶಯಗಳನ್ನು ತಿಳಿಸುವಂತೆ  ಭಗವಂತನ ಅವತಾರದಿಂದ ಮಾನವರಿಗೆ ಶುಭವಾಗಿರುತ್ತದೆ ಹೀಗಾಗಿ   ನಮಗೆ‌ನಾವೇ ಶುಭಾಶಯಗಳನ್ನು ಹೇಳಿಕೊಳ್ಳುವಾಗ  ಶುಭ ಯಾವುದು ಅಶುಭ ಯಾವುದೆನ್ನುವ ಸದ್ವಿಚಾರ ತಿಳಿಯುವುದು ಶುಭವೆ.
ನರಸಿಂಹನ  ಅವತಾರದ  ಕಥೆ ಎಲ್ಲರಿಗೂ ತಿಳಿದದ್ದೆ. ಹಿರಣ್ಯಕಶ್ಯಪುವಿನ ವಧೆಗಾಗಿಯೇ ಅವತಾರವೆತ್ತಿ ಬಂದ ವಿಷ್ಣುವಿನ ಪರಮವೈರಿ ಹಿರಣ್ಯಕಶ್ಯಪು. ಅವನ‌ಮಗನಾಗಿ ಜನ್ಮ ತಳೆದ ಪ್ರಹ್ಲಾದ ವಿಷ್ಣುವಿನ  ಮಹಾಭಕ್ತ. ಅಂದರೆ ಒಂದೇ ಮನೆಯಲ್ಲಿ  ದೇವಾಸುರರು ಜನ್ಮಪಡೆಯಬಹುದು.
ಒಬ್ಬರಿಗೊಬ್ಬರು  ಹೊಡೆದಾಡಲೂಬಹುದು. ಆದರೆ ಭಗವಂತ ಭಕ್ತರ ರಕ್ಷಣೆಗಾಗಿ ದುಷ್ಟರನ್ನು  ಶಿಕ್ಷಿಸುವುದು ಸತ್ಯ.
ಇಲ್ಲಿ  ಪ್ರಹ್ಲಾದನಿಗೆ ಗರ್ಭದಲ್ಲಿರುವಾಗಲೇ ದೇವತೆಗಳ ರಕ್ಷಣೆ ದೈವಾನುಗ್ರಹವಿದ್ದು  ಉತ್ತಮ ಸಂಸ್ಕಾರದಿಂದ ಭೂಮಿಗೆ ಬಂದ ಕಾರಣ ಸ್ವಂತ ತಂದೆಯ  ವಿರುದ್ದ ನಿಲ್ಲುವ ಜ್ಞಾನವಿತ್ತು.
ಜ್ಞಾನದಿಂದ ದೈವತ್ವ ಅಜ್ಞಾನದಿಂದ ಅಸುರತ್ವ.ಅಹಂಕಾರ ಸ್ವಾರ್ಥ ದಿಂದ‌ಜ್ಞಾನ‌ಕುಸಿಯುತ್ತದೆ.ಸತ್ಯ ತಿಳಿಯದೆ ಅಧರ್ಮ ಬೆಳೆಯುತ್ತದೆ....ಇವುಗಳನ್ನು ನಾವು ಪುರಾಣ ಕಥೆಗಳಲ್ಲಿ ತಿಳಿದರೂ ನಮ್ಮೊಳಗೇ ಅಡಗಿರುವ ಎಷ್ಟೋ ಜನ್ಮದ ಈ ಗುಣಗಳಿಂದ‌ಮುಕ್ತಿ ಪಡೆಯಲಾಗಿಲ್ಲ. ಇದಕ್ಕಾಗಿ ಹೊರಗೆ ಹೋರಾಟ ಮಾಡಿ ಉಪಯೋಗವಿಲ್ಲ.
ಪೋಷಕರ ಗುಣವೇ‌ಮಕ್ಕಳ ರಕ್ತದಲ್ಲಿದ್ದರೂ ಉತ್ತಮ ಸಂಸ್ಕಾರದ ಶಿಕ್ಷಣದಿಂದ  ಸ್ವಚ್ಚಗೊಳಸಬಹುದೆನ್ನುವ ಸಂದೇಶ ಇದರಲ್ಲಿದೆ. 
ಹೀಗಾಗಿ ಹಿಂದೂ ಧರ್ಮದಲ್ಲಿ 16 ಸಂಸ್ಕಾರಗಳನ್ನು ಮುಖ್ಯವಾಗಿ  ಹೆಸರಿಸಲಾಗಿದೆ. ಆದರಿದು ಈಗ‌ಮರೆಯಾದ ಕಾರಣ ಅಸುರಿ ಶಕ್ತಿ ನಮ್ಮೊಳಗೇ ಜಾಗೃತವಾಗಿದ್ದು ಹೊರಗೂ ಬೆಳೆದಿದೆ.ಹಾಗಾದರೆ ನಾವು ಅಸುರರೆ?
ಒಪ್ಪಿಕೊಳ್ಳಲು ಕಷ್ಟವಿದೆ. ಅಸುರಿಗುಣಗಳೆಂದರೆ ಅತಿಯಾದ ಕಾಮ,ಕ್ರೋಧ,ಲೋಭ,ಮೋಹ,ಮಧ,ಮತ್ಸರವಾಗಿದೆ.
ಇದರ  ಪರಿಣಾಮವಾಗಿ  ಇಂದು ಲೋಕಕಂಟಕರು ಬೆಳೆದು ತಾನೂ ಬದುಕದೆ ಇತರರನ್ನು ಬದುಕಲು ಬಿಡದಂತಹ ಪರಿಸ್ಥಿತಿ ‌ಹೆಚ್ಚಾಗುತ್ತಿದೆ.
ತಾಯಿಯೇ‌ ಮೊದಲ ಗುರು. ಪ್ರಹ್ಲಾದನ ತಂದೆ ಅಸುರನಾದರೂ  ತಾಯಿಯ ಗರ್ಭದಲ್ಲಿರುವಾಗಲೇ ಸಿಕ್ಕಿದ ಸತ್ಸಂಗ ಸಂಸ್ಕಾರದ ಫಲವೇ  ಪ್ರಹ್ಲಾದ ಭಕ್ತನಾಗಲು ಕಾರಣ.
ಇಲ್ಲಿ ಪ್ರತಿಯೊಬ್ಬ ತಾಯಿಯೂ ತನ್ನ ‌ಮಗು ದೈವೀಕ ಸಂಪತ್ತನ್ನು ಹೊಂದಿರಬೇಕೆಂಬ ಬಯಕೆಯಲ್ಲಿ ಸತ್ಕರ್ಮ, ಸದಾಚಾರ,ಸದ್ಗುಣ,ಸತ್ಸಂಗದೆಡೆಗೆ  ನಡೆಯುವ ಅವಕಾಶ ಇದ್ದರೆ ಭೂಮಿಯಲ್ಲಿ  ಶಾಂತಿ ಇರುತ್ತದೆ. ಇದಕ್ಕೆ ವಿರುದ್ದ ಅಜ್ಞಾನ ಬೆಳೆದಾಗಲೇ ಅಸುರರ ವಂಶ ಬೆಳೆಯೋದು.
ಇಲ್ಲಿ ನಮ್ಮ ಲ್ಲೇ ಅಡಗಿರುವ ಈ ಗುಣಗಳೇ ನಮ್ಮ ಭವಿಷ್ಯವಾಗಿದೆ. ಸತ್ಯ ತಿಳಿಯಲು  ಮೊದಲುಒಳಗಿನ ಸತ್ಯ ಅರ್ಥ ಆಗಬೇಕು. ನಂತರ ಭೌತಿಕ ಸತ್ಯ ತಿಳಿಯಬಹುದು.
ಮನಸ್ಸನ್ನು ಹತೋಟಿಯಲ್ಲಿಡಲು ಯೋಗಮಾರ್ಗ ಅಗತ್ಯ.ನಂತರ ಭೋಗದ ಪ್ರಭಾವ ತಿಳಿಯಬಹುದು.
ಹಾಗೆ ಶಿಕ್ಷಣದಲ್ಲಿ ‌ಮೊದಲು ಮಕ್ಕಳ ಆತ್ಮಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯನರಿತು ಬೆಳೆಸಬೇಕು.ನಂತರವೇ  ಹೊರಗಿನ ಜಗತ್ತಿನಲ್ಲಿ ಹೇಗಿರಬೇಕೆಂಬ ಅರಿವಿರುತ್ತದೆ. ಇದೆಲ್ಲವೂ ಪುರಾಣವೆನಿಸುತ್ತದೆ. ಪುರಾಣದ ರಾಮಾಯಣ‌ ಮಹಾಭಾರತ ಕಥೆ  ವೈಭೋಗದಲ್ಲಿದ್ದು  ತಿಳಿಯುವುದೇ ಬೇರೆ ವೈಚಾರಿಕತೆಯೆಡೆಗೆ ನಡೆದು ಅರ್ಥ ಮಾಡಿಕೊಳ್ಳುವುದೆ ಬೇರೆ.
ಹಾಗೆ ಬೇರೆ ಬೇರೆ ಆದಾಗಲೇ ಅಂತರದಲ್ಲಿ ಅಸುರರು ನಿಂತು ಆಟ ಆಡಿಸೋದು. ಅದ್ವೈತ ದೊಳಗೆ ದ್ವೈತ,ವಿಜ್ಞಾನ ದೊಳಗೆ ಜ್ಞಾನ, ಅಸುರರೊಳಗೆ ಸುರರು, ವಿದೇಶದೊಳಗೆ ದೇಶ, ಅಜ್ಞಾನದೊಳಗೆ ಜ್ಞಾನ  ಸೇರಿಕೊಂಡು ಹೊರಗೆ ಹುಡುಕಿದರೆ ಸಿಗೋದಿಲ್ಲ.ಹಾಗೆ ಮಹಾವಿಷ್ಣುವಿನ‌ನಾರಸಿಂಹನ ಪ್ರತಿರೂಪ ನರಸಿಂಹ.ಅವತಾರ ಹಲವು ಭಗವಂತ ಒಬ್ಬನೆ ಅದ್ವೈತ.
ದೇಶ ಒಂದೇ ರಾಜ್ಯಗಳು ಹಲವು ಪ್ರಜೆಗಳು ಅಸಂಖ್ಯಾತ..
ಧರ್ಮ ಸತ್ಯ ಒಂದೇ ರೂಪ ರೇಖೆಗಳು ಹಲವು ಬೇರು ಒಂದೇ. ಹಿಂದಿನ  ಕಾಲದ ಸತ್ಯ ಈಗಿನ ಸತ್ಯ ಮುಂದಿನ ಸತ್ಯ ಎಲ್ಲಾ ಒಳಗಿದೆ.ಆ ಒಂದು ಸತ್ಯ ಅರ್ಥ ಆದರೆ ಅಧ್ವೈತ.
ಅಸುರರಿಗೆ  ಸಾವೇ ಬರದಂತಹ ವರ ಯಾರೂ ಕೊಡಲಿಲ್ಲ ಆದರೆ ಬುದ್ದಿವಂತಿಕೆಯಿಂದ  ಇಂತಹವರಿಂದ ಹೀಗೇ ಸಾವು ಬರಬೇಕೆಂದು ವರ ಪಡೆದವರನ್ನು ಅದೇ ರೀತಿಯಲ್ಲಿ ಭಗವಂತನ ಅವತಾರವಾಗಿ  ಅಸುರ ಸಂಹಾರ ಮಾಡಿದ. ಅಂದರೆ ಬುದ್ದಿವಂತಿಕೆ ಹೊರಗಿತ್ತು ಒಳಗಿನ‌ಜ್ಞಾನ ಹಿಂದುಳಿದಿತ್ತು ಅಹಂಕಾರ ಮಿತಿಮೀರಿದರೆ ಹೀಗೇ ಮಾನವ ಅಸುರನಾಗೋದೆನ್ನುವುದಾಗಿದೆ.  ಪುರಾಣಗಳಿಂದ  ಕಲಿಯುವುದು ಬಹಳವಿದೆ.ಅಲ್ಪ ತಿಳಿದು ಹೆಚ್ಚು ಮಾತನಾಡುವ ಬದಲು ಹೆಚ್ಚು ತಿಳಿದು ಸ್ವಲ್ಪ ಮಾತಾಡಿದರೆ ಉತ್ತಮ. ಮಾತಿಗಿಂತ‌ ಕೃತಿಯೇ ಮೇಲು ಮಾತಿಗಿಂತ ಮೌನವೇ ಮೇಲೆಂದರು  ಮಹಾತ್ಮರು. ಆದರೆ ಕೆಲವೊಮ್ಮೆ ಮೌನಮುರಿದು ಮನುಕುಲದ ಒಳಿತಿಗಾಗಿ ಮುಂದೆ ನಡೆಯಲೇಬೇಕಾಗುವುದು. ಎಲ್ಲಾ ಕಾಲನಿರ್ಣಯ ಮಾಡಿರುವಾಗ ನಮ್ಮದೇನಿದೆ  ಇಲ್ಲಿ ಭಗವಂತನೇ ಎಲ್ಲರನ್ನೂ ನಡೆಸುವುದು ಎನ್ನುವಾಗ  ನಾನೆಂಬುದಿರದು.
ನಾನೇ ನಡೆಯುವಾಗ ನಾನೇ ಇರೋದು. 
ನಮ್ಮದು ಯಾವ ಜನ್ಮದ‌ಯಾವ ಅವತಾರವೋ ಯಾರಿಗೆ ಗೊತ್ತು. ಒಟ್ಟಿನಲ್ಲಿ ಹೊರಗಿನ ಅವತಾರದಿಂದ ಒಳಗಿನ ಅವಸ್ಥೆ  ಹಾಳಾದರೆ  ಸಂಕಷ್ಟ ಕಟ್ಟಿಟ್ಟ ಬುತ್ತಿ.ಹೊರಗಿನವರು ಯಾರೋ ಹೇಳಿದ್ದನ್ನು ಕೇಳಿಕೊಂಡು  ಹೊರಗೆ ಬಂದರೆ ಒಳಗೇ ಸಮಸ್ಯೆ ಹೆಚ್ಚಾಗುವುದು. ಸತ್ಯ ಧರ್ಮ ತಿಳಿದು ತಿಳಿದವರನ್ನು ಕೇಳಿಕೊಂಡು ನಡೆಯಬೇಕಿದೆ.
ವಯಸ್ಸಿನಲ್ಲಿ ಹಿರಿಯರಿದ್ದರೂ ಕಿರಿಯರ ಜ್ಞಾನವನ್ನು ನಿರ್ಲಕ್ಷ್ಯ ಮಾಡಿದರೆ  ಅನರ್ಥವಾಗುವುದು.ಇದನ್ನು ಹಿರಣ್ಯಕಶ್ಯಪು ಪ್ರಹ್ಲಾದರ ಕಥೆಯೇ ತಿಳಿಸುತ್ತದೆ. ಮಕ್ಕಳಿಗೆ ಕಥೆ ಹೇಳುವಾಗ ಪೋಷಕರೊಳಗಿರುವ  ಒಳ್ಳೆಯತನದ ಜೊತೆಗೆ ಕೆಟ್ಟತನವೂ ಮಕ್ಕಳು ಗುರುತಿಸುವರೆನ್ನುವುದನ್ನು ಮರೆಯಬಾರದು.ಹಾಗೆ ಶಿಕ್ಷಕರು ಗುರು ಹಿರಿಯರೂ ಅರ್ಥ ಮಾಡಿಕೊಳ್ಳುವುದು ಇಂದು ಅಗತ್ಯವಾಗಿದೆ. 
ಉಪದೇಶ ಮಾಡೋದು ಪ್ರಚಾರ ಮಾಡೋದು,
ಗುರುವಾಗೋದು,ತಾಯಿಯಾಗೋದು,ತಂದೆಯಾಗೋದು  ಸುಲಭವಿಲ್ಲ. ಸಂಸಾರದೊಳಗೆ ಇಳಿಯದವರು  ಅರ್ಧ ಸತ್ಯ ತಿಳಿದು ಧರ್ಮ ಪ್ರಚಾರ ಮಾಡಿದರೆ   ಅತಂತ್ರಸ್ಥಿತಿಗೆ  ಧರ್ಮ ತಲುಪುವುದು. ಇದು ಕಣ್ಣಿಗೆ ಕಾಣುತ್ತಿರುವ ಸತ್ಯ...ಹಣವಿದ್ದವರು ಏನು ಹೇಳಿದರೂ  ಕೇಳುವ ಜನ ಜ್ಞಾನಿಗಳ ಮಾತನ್ನು ಅಲ್ಲಗೆಳೆದು ಅಲ್ಲ ಅಲ್ಲ ಎಂದರೆ  ಅಲ್ಲನೇ ಬೆಳೆಯೋದು. ನೀನು ಬೇರೆಯಲ್ಲ ನಾನು ಬೇರೆಯಲ್ಲ ಆದರೂ ಒಂದಾಗಿ ಕಾಣಲಾಗಲ್ಲ.ಎಲ್ಲದರಲ್ಲೂ ಇರುವ ಅಲ್ಲ ನಮ್ಮೊಳಗೇ ಇದ್ದು ಬೆಳೆದಿರುವನಲ್ಲ. ಯಾಕೆ ನಮಗೆ ಕಾಣುತ್ತಿಲ್ಲವಲ್ಲ?ಇದರಲ್ಲಿ ತಪ್ಪೇನಿಲ್ಲವಲ್ಲ? ಇದ್ದರೆ ತಿಳಿಸಬಹುದಲ್ಲ?

No comments:

Post a Comment