ಹೊರಗೆ ಗುಂಪು ಕಟ್ಟಿಕೊಂಡು ತಲೆಓಡಿಸುವುದಕ್ಕಿಂತ ಒಳಗಿನ ಗುಂಪಿನಲ್ಲಿ ನಡೆಯುತ್ತಿರುವ ವಿಚಾರವನರಿತು ನಡೆಯುವುದೇ ಉತ್ತಮವೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಹೊರಗೆ ಬೆಳೆದರೂ ಸಂಘರ್ಷಣೆಗಳು ಬೆಳೆಯುತ್ತಿವೆ ಎಂದರೆ ಎಲ್ಲೋ ದಾರಿತಪ್ಪಿದೆ ಎಂದರ್ಥ ವಾಗುತ್ತದೆ.
ಸತ್ಸಂಗದಿಂದ ನಿಸ್ಸಂಗದೆಡೆಗೆ ನಡೆಯಬೇಕಾದ ಮಾನವ ಸತ್ಸಂಗದಲ್ಲಿದ್ದೂ ದುಷ್ಟರ ವಶವಾದರೆ ದಾರಿಸರಿಯಿಲ್ಲ ಅಥವಾ ನಮ್ಮ ಉದ್ದೇಶ ಸರಿಯಿಲ್ಲ ಅಥವಾ ನಮ್ಮ ವಿಚಾರವೆ ಸರಿಯಿಲ್ಲದಿರಬಹುದು.
ಭಾರತವನ್ನು ವಿಶ್ವಗುರು ಎಂದರು. ಆದರೆ ಭಾರತದ ಶಿಕ್ಷಣ ಮಾತ್ರ ವಿಶ್ವಕ್ಕೆ ಮಾದರಿ ಯಾದರೂ ಭಾರತೀಯರ ವಿರೋಧವಿದೆ ಎಂದರೆ ನಮ್ಮೊಳಗೇ ನಾವು ಹೊಕ್ಕಿ ನೋಡದೆ ಪರಕೀಯರ ವಶದಲ್ಲಿರುವಾಗ ಹೊರಗಿನ ಸಂಘ ಸಂಸ್ಥೆಗಳು ಹೊರಗಿನವರ ಹಣದಲ್ಲಿ ನಡೆದಿದೆ.ಯಾವಾಗ ಇದು ರಾಜಕೀಯಕ್ಕಿಳಿದಿದೆಯೋ ಆಗಲೇ ರಾಜಯೋಗ ಹಿಂದುಳಿಯುತ್ತದೆ. ಯೋಗವಿಲ್ಲದ ಸಂಘಟನೆಯು ಭೋಗಕ್ಕೆ ಸೀಮಿತವಾಗಿ ಅಧಿಕಾರ ಹಣ ಸ್ಥಾನಮಾನಕ್ಕೆ ಹೋರಾಟ ಹಾರಾಟ ಮಾರಾಟದೆಡೆಗೆ ನಡೆದರೆ ಇದರಲ್ಲಿ ಅಧ್ಯಾತ್ಮ ಎಲ್ಲಿರುವುದು?
ರಾಜಕಾರಣಿಗಳು ರಾಜಕೀಯ ಕ್ಷೇತ್ರದ ರಾಜರು
ಧಾರ್ಮಿಕ ಗುರುಹಿರಿಯರು ಧಾರ್ಮಿಕ ಕ್ಷೇತ್ರದ ಮಹಾ ಗುರು
ರಾಜನಿಗೂ ಗುರುವಿಗೂ ಹತ್ತಿರದ ಸಂಬಂಧ ವಿದೆ. ಜನರು ಇಬ್ಬರ ಹಿಂದೆ ನಡೆಯುವಾಗ ಗುರುವಿನಹಿಂದೆ ರಾಜ ನಡೆದರೆ ಉತ್ತಮ ರಾಜ್ಯಭಾರ .ರಾಜನ ಹಿಂದೆ ಗುರು ನಡೆಯುತ್ತಾ ಸರ್ಕಾರವನ್ನು ಬೇಡಿಕೊಂಡಿದ್ದರೆ ಶಿಷ್ಯರ ಗತಿ ಅಧೋಗತಿ.
ಕಾರಣ, ಅಧ್ಯಾತ್ಮ ಸಾಧನೆ ಒಳಗಿನಜ್ಞಾನದಿಂದಷ್ಟೆ ಆಗೋದು
ಯಾವಾಗ ಇದನ್ನು ರಾಜಕೀಯವಾಗಿ ಹೊರಗೆಳೆದು ಜನರನ್ನು ಆಳಲು ಬಳಸಲಾಗುವುದೋ ಅದರಲ್ಲಿ ಸತ್ಯ ಹಾಗು ಧರ್ಮ ತತ್ವ ಹಿಂದುಳಿಯುತ್ತದೆ. ಸತ್ಯ ಧರ್ಮ ಕ್ಕೆ ಚ್ಯುತಿ ಬಂದಾಗ ಹೋರಾಟ ಹಾರಾಟ ಮಾರಾಟದಿಂದ ಹಣ ಗಳಿಸಿ ಹಣವನ್ನು ದುರ್ಭಳಕೆ ಮಾಡಿಕೊಂಡು ಹೆಣ್ಣು ಹೊನ್ನು ಮಣ್ಣಿನ ಹಿಂದೆ ನಡೆಯುವ ಸಂಘಗಳು ಬೆಳೆದು ಅದೇ ಮುಂದೆ ಸಂಘರ್ಷಕ್ಕೆ ದಾರಿಮಾಡಿಕೊಡುತ್ತದೆ.
ಇದರೊಳಗೆ ಸೇರಿಕೊಂಡವರಿಗೆ ಅರ್ಥ ವಾಗೋ ಹೊತ್ತಿಗೆ ಸಮಯ ಕಳೆದುಹೋಗಿರುತ್ತದೆ.ಹೀಗಾಗಿ ಅಧ್ಯಾತ್ಮ ಸತ್ಯದ ಹಿಂದೆ ನಡೆದವರು ಈ ಹೊರಗಿನ ರಾಜಕೀಯ,ಸಂಘಟನೆ ಬಿಟ್ಟು ಸ್ವತಂತ್ರ ಜೀವನ ನಡೆಸುತ್ತಾ ಒಳಗಿನ ಸತ್ಸಂಗದಿಂದ ಶಾಂತಿ ಪಡೆದರು. ಈಗಿದು ಕಷ್ಟ.ತಂತ್ರಜ್ಞಾನ ಮಿತಿಮೀರಿದೆ.
ಒಳಗಿದ್ದರೂ ತಂತ್ರದಿಂದ ಹೊರಗೆಳೆಯುವವರು ಹೆಚ್ಚು.
ಹೀಗಾಗಿ ನಾವೆಲ್ಲಿದ್ದೇವೆನ್ನುವುದು ಅರ್ಥ ಮಾಡಿಕೊಂಡು ಸಂಘದಲ್ಲಿ ಸತ್ಯ ಧರ್ಮಕ್ಕೆ ಬೆಲೆಕೊಟ್ಟರೆ ಅದೇ ನಿಜವಾದ ಸಂಘಟನೆ.ಸಂಘಟನೆಯೇ ಸರಿಯಿಲ್ಲವಾದರೆ ಅದರೊಳಗೆ ಇದ್ದರೂ ವ್ಯರ್ಥ. ಮನಸ್ಸು ಚಂಚಲ.ಯಾವಾಗ ಬೇಕಾದರೂ ಬದಲಾಗಬಹುದು. ಹೀಗಾಗಿ ನಮ್ಮ ಮನಸ್ಸನ್ನು ಸಂತೋಷಗೊಳಿಸಲು ಹೊರಗೆ ನೆಡೆಯುವ ಮೊದಲು ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿ ಹೆಜ್ಜೆ ಹಾಕಿದರೆ ಉತ್ತಮ.ಮುಂದೆ ನಡೆದವರು ಹಿಂದೆ ಬರಲೇಬೇಕು. ಅದು ಉತ್ತಮದಾರಿಯಾಗಿದ್ದರೆ ಸಮಸ್ಯೆಯಿಲ್ಲ.
No comments:
Post a Comment