ಸೋಮವಾರವನ್ನು ಮಂಡೆಯೆಂದು
ಆಂಗ್ಲ ಬಾಷೆಯಲ್ಲಿ ತಿಳಿಸಿದ್ದಾರೆ.ಕನ್ನಡ ಬಾಷೆಯಲ್ಲಿ ಇದರ ಅರ್ಥ ನಿನ್ನ ತಲೆಯ ವಾರವಾಗುತ್ತದೆ.ನಮ್ಮ ತಲೆಗೆ ಶುಭಾಷಯಗಳು.
ಜ್ಞಾನ ವಿಜ್ಞಾನವೆರಡೂ ಒಂದೇ ನಾಣ್ಯದ ಎರಡು ಮುಖ.ಹಾಗೆ ವಿಶ್ವದಲ್ಲಿರೋ ಸ್ವದೇಶ,ವಿದೇಶ.ಭಾಷೆ, ಧರ್ಮ,ಸಂಸ್ಕೃತಿ, ವ್ಯವಹಾರಜ್ಞಾನವೆಲ್ಲವೂ ಎರಡು ರೀತಿಯ ಸತ್ಯಾಸತ್ಯತೆಗಳನ್ನ ಬೆಳೆಸಿದೆ.ಇದು ಕಾಲದ
ಮಹಿಮೆ.ಇದರಲ್ಲಿ ಸೂತ್ರಧಾರಿಗಳಿಗಿಂತ ಪಾತ್ರಧಾರಿ
ಗಳ ಪಾತ್ರದ ಅಭಿನಯ ಸಮಾಜ ಹಾಗು ಸಂಸಾರ
ವನ್ನ. ಸರಿದಾರಿಗೆ ತರಲು ಸಾಧ್ಯ.ಯಾವಾಗ ಪಾತ್ರಧಾರಿ
ಸೂತ್ರಧಾರನನ್ನೇ ಮರೆತು ರಾಜಕೀಯಕ್ಕಿಳಿಯುವನೋ ಆಗ ತನ್ನ ಜೊತೆಗೆ ಇಡೀ
ಸಂಸಾರವನ್ನೂ ಹಾಳುಮಾಡಿಕೊಳ್ಳುತ್ತಾನೆ.
ನಾವೀಗ ಎರಡೂ ದೋಣಿಯೊಳಗೆ ಕಾಲಿಟ್ಟುಕೊಂಡು
ನೀರಿನ ಮಧ್ಯೆ ನಿಂತಿರೋ ಮಧ್ಯವರ್ತಿಗಳು. ಇದು ಯಾರನ್ನು ಸರಿಯಾದದಡತಲುಪಿಸುತ್ತದೋ,ಯಾರನ್ನ ಮುಳುಗಿಸುವುದೋಅವರವರಕರ್ಮಫಲವೆನ್ನುವುದೇ ಸೋಮವಾರದ ಸಂದೇಶ.ತಲೆ ಸರಿಯಾಗಿದ್ದು ಹೃದಯವಂತಿಕೆಯಿಲ್ಲವಾದರೆ ವಿಜ್ಞಾನ.ಅದೇ ತಲೆ ಹೃದಯವಂತಿಕೆಯ ಜ್ಞಾನವೇ ಆತ್ಮಜ್ಞಾನ.ಇಲ್ಲಿ ವ್ಯವಹಾರದಲ್ಲಿ ಸತ್ಯಧರ್ಮವಿರುತ್ತದೆ.ರಾಜಕೀಯದ ಅಹಂಕಾರ,ಸ್ವಾರ್ಥಕಡಿಮೆಯಿದ್ದು,ಆತ್ಮವಿಶ್ವಾಸವಿರುತ್ತದೆ.
ಕಾಲದ ಪ್ರಭಾವ ನಾವೆಲ್ಲರೂ ಒಂದೇ ಭೂಮಿ,ದೇಶರಾಜ್ಯ,
ಕುಟುಂಬದೊಳಗಿದ್ದರೂ ಬೇರೆ ಬೇರೆ ಚಿಂತನೆ ಗಳಿಂದ ದೂರವಿರೋದು ಯಾರಿಗೆ ಲಾಭ ಯಾರಿಗೆ ನಷ್ಟ.
ನಮ್ಮೊಳಗೇ ಅಡಗಿರೋ ಸತ್ಯನಾಶಮಾಡಿಕೊಂಡು ಸತ್ಯವೇ ದೇವರೆಂದು ಹೊರಗೆ ಪ್ರಚಾರ ನಡೆಸಿದಂತಿದೆ ನಮ್ಮ ಜೀವನ.ಕಾರಣ ಸತ್ಯದ ದಾರಿ ಇಂದು ನಾವೇ
ಮುಚ್ಚಿಕೊಂಡಿದ್ದೇವೆ.ಇದೇ ಜೀವನವೆ?.
ನಾಣ್ಯದ ಎರಡೂ ಮುಖ ವ್ಯವಹಾರಕ್ಕೆ ಎಷ್ಟು ಅಗತ್ಯವೋ ಹಾಗೆ ಜೀವಾತ್ಮ ಪರಮಾತ್ಮರ ಇಬ್ಬರೂ
ಒಂದೇ ನಾಣ್ಯದ ಎರಡು ಮುಖ.ಇದೇ ಅದ್ವೈತ.
ಸೃಷ್ಟಿ ಯೇ ಇಲ್ಲದೆ ಸ್ಥಿತಿ ಲಯವಿಲ್ಲ.ನಿರಂತರವಾಗಿ ನಡೆಯೋ ಈ ಸೃಷ್ಟಿ ಕಾರ್ಯ ಕ್ಕೆ ತಕ್ಕಂತೆ ಸ್ಥಿತಿ ಲಯವೂ ಮಾನವನ ಕೈ ಮೀರಿ ಬುದ್ದಿ ಮೀರಿ,ಜ್ಞಾನ ಮೀರಿ ನಡೆಯುತ್ತಲೇ ಇರುತ್ತದೆ.ಹಾಗಾಗಿಮಂಡೆ ಸರಿಯಿದ್ದರೆ ಸಾಲದು ಹೃದಯ ಶುದ್ದವಾಗಿರಬೇಕೆನ್ನುವರು ಮಹಾತ್ಮರುಗಳು.
ಏನೇ ಇರಲಿ ಒಳಗಿರುವ ಮೂಲಾಧಾರ ಚಕ್ರ ಶುದ್ದವಾಗಿ ಮೇಲಿರುವ ಚಕ್ರ ಶುದ್ದವಾದರೆ ಸಹಸ್ರಾರ ಚಕ್ರ ಪರಿಶುದ್ದವಾಗೋದು. ಕಣ್ಣಿಗೆ ಕಾಣದ ಚಕ್ರ ಬಿಟ್ಟು ಕಾಣುವಚಕ್ರದಿಂದ ಭೂಮಿ ಸುತ್ತಿದರೆ ತಲೆ ಕೆಡುತ್ತದೆ.
No comments:
Post a Comment