ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, May 14, 2024

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ

ಹಿಂದೂ ಮುಸ್ಲಿಂ, ದೇಶ ವಿದೇಶ, ವರ್ಣ ಜಾತಿ, ಸ್ತ್ರೀ ಪುರುಷ, ಭೂಮಿ ಆಕಾಶ,ದ್ವೈತ ಅದ್ವೈತ ಯಾವತ್ತೂ ಒಂದಾಗಲು ಸಾಧ್ಯವಿಲ್ಲವೆನ್ನುವ ಮಟ್ಟಿಗೆ  ಅಂತರ ಬೆಳೆಸಿದ್ದರೂ ಮಧ್ಯವರ್ತಿ ಮಾನವ ಮಾತ್ರ ನಾವೆಲ್ಲರೂ ಒಂದೇ ಎಂದು ಪ್ರಚಾರ ಮಾಡುತ್ತಾ  ತನ್ನ ಸ್ವಾರ್ಥ ಸುಖಕ್ಕಾಗಿ  ಬದುಕುತ್ತಾ ತನ್ನೊಳಗೆ ದ್ವೇಷ ದ್ವಂದ್ವದ ರಾಜಕೀಯವಿದ್ದರೂ ತೋರಿಸಿಕೊಳ್ಳದೆ ನಾಟಕವಾಡುತ್ತಾ  ಭೂಮಿಯ ಮೇಲಿದ್ದೂ ದೇಶದ ಒಳಗಿದ್ದೂ, ವರ್ಣ, ಜಾತಿ, ಪಕ್ಷ,ದೇವರುಗಳನ್ನು ಬೆಳೆಸಿಕೊಂಡು  ಆಳೋದರಿಂದ  ಏನಾದರೂ ನನ್ನಲ್ಲಿ ಬದಲಾವಣೆ  ಆಗಿದ್ದರೆ  ಅದೊಂದು ತಾತ್ಕಾಲಿಕ ವಷ್ಟೆ.

ಎರಡರ ಮಧ್ಯೆ ನಿಂತು  ಅಥವಾ ಎರಡು ದೋಣಿಯೊಳಗೆ ಕಾಲಿಟ್ಟುಕೊಂಡುಸಂಸಾರದ  ದೋಣಿ ನಡೆಸುವುದು ಕಷ್ಟ.
ಹಾಗಾಗಿ  ಒಂದು ಮಾಡೋದಕ್ಕೆ ತತ್ವ ಅರ್ಥ ವಾಗಬೇಕು. ಎರಡಾಗಿಸಲು ತಂತ್ರವಿದೆ. ಸ್ವತಂತ್ರ ಜ್ಞಾನದಿಂದ  ನೆಮ್ಮದಿ ಶಾಂತಿ ಹೆಚ್ಚುವುದು.  ಎಲ್ಲಿದೆ ಸ್ವತಂತ್ರ ಜ್ಞಾನ? ಒಳಗೋ ಹೊರಗೋ?
ದಾರಿಯಾವುದಯ್ಯ ವೈಕುಂಟಕ್ಕೆ ಎಂದು ಕೇಳಿದರೆ ಕೈಲಾಸದ ದಾರಿ ತೋರಿಸುವರು. ಕೈಲಾಸದೆಡೆಗೆ ನಡೆದರೆ ವೈಕುಂಟವೇ ಶ್ರೇಷ್ಠ ಎನ್ನುವರು. ಇರೋದು ಭೂಮಿ ಮೇಲೆ.ಇಲ್ಲಿಯ ಋಣ ತೀರದೆ ಯಾವ ಕೈಲಾಸವೈಕುಂಟ ಸಿಗೋದಿಲ್ಲವಲ್ಲ. ಇದನ್ನರಿತವರು  ಸೀದಾ ಪರಮಾತ್ಮನ ಪರಮಸತ್ಯದೆಡೆಗೆ ನಡೆದರು.ಅಂತರವೇ ಅವಾಂತರವನ್ನು ಸೃಷ್ಟಿ ಮಾಡಿದರೆ ಒಗ್ಗಟ್ಟಿನಿಂದ  ಬದುಕುವುದು ಹೇಗೆ? 

ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗುತ್ತಿದೆ. ಇಲ್ಲಿ ತತ್ವ ಸಿದ್ದಾಂತದ ಒಳಜಗಳ, ಜಾತಿಗಳ ಜಗಳ, ಧರ್ಮದ ದ್ವೇಷಕ್ಕೆ  ಅಡಿಪಾಯವಾಗಿ  ಅಧರ್ಮ ಜನ್ಮ ತಾಳಿತು. ಅಧರ್ಮ ಅಧರ್ಮ ದ ನಡುವೆಯೇ ರಾಜಕೀಯ ಬೆಳೆದು
ದೇಶ ಒಡೆಯಿತು, ದೇಶ ದೇಶಗಳ ನಡುವಿನ‌ಒಪ್ಪಂದಗಳು  ವ್ಯವಹಾರಕ್ಕೆ ಸೀಮಿತವಾಗಿ  ಮನೆಮನೆಯೊಳಗೆ ಇದ್ದ ಒಗ್ಗಟ್ಟು  ಮರೆಯಾಯಿತು. ಹಾಗಾದರೆ  ಜೋಡಿಸುವುದು ಯಾರು? ಒಡೆದವರು ಯಾರು? ಇದಕ್ಕೆ ಸಹಕರಿಸಿದವರು ಯಾರು? ಎಲ್ಲಾ ನಾವೇ ನಮ್ಮ ಸಹಕಾರವೇ ಕಾರಣವಾದಾಗ ಅದರ ಪ್ರತಿಫಲ ಅನುಭವಿಸೋದು ಯಾರು?
ಕರ್ಮ ಕ್ಕೆ ತಕ್ಕಂತೆ ಫಲ ಒಳಗಿರುವ ಜೀವಾತ್ಮನೇ ಅನುಭವಿಸುವಾಗ. ಪರಮಾತ್ಮನಿಗೆ ತಲುಪೋದಿಲ್ಲ. ಸ್ಥಿರವಾಗಿರುವ ಶಾಶ್ವತವಾಗಿರುವ ಶಕ್ತಿಯನ್ನು  ಇಲ್ಲವೆಂದರೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ.

ಆ ಒಂದರೆಡೆಗೆ ಹೋಗೋದು ಅದ್ವೈತ. ಅಧ್ವೈತ ದೊಳಗಿರುವ ದ್ವೈತ ಬೆಳೆದರೆ ಮನಸ್ಸು ಹೊರಗೇ ಇರೋದು.

ಸ್ತ್ರೀ ರಕ್ಷಣೆ ಭೂಮಿ ರಕ್ಷಣೆ ಮಾಡೋದು ದೈವಶಕ್ತಿಯ ಧರ್ಮ. ಸ್ತ್ರೀ ಯೇ ಭೂಮಿಯನ್ನು  ದುರ್ಭಳಕೆ ಮಾಡಿಕೊಂಡರೆ  ಅವಳ ರಕ್ಷಣೆಯಾಗುವುದೆ? ಹಾಗೆ ದೇಶದೊಳಗೆ ಇದ್ದು ದೇಶವನ್ನು ಅಸುರರ ವಶಕ್ಕೆ ಬಿಟ್ಟರೆ ಏನರ್ಥ?  
ಭೂಮಿಯಲ್ಲಿ ಜನ್ಮ ಪಡೆಯುವುದಕ್ಕಾಗಿ ಎಷ್ಟೋ ಕೋಟಿ ಜೀವಾತ್ಮರು ಕಾಯುವರು. ಜನ್ಮಪಡೆದ ಮೇಲೆ ಬಂದಿರುವ ಉದ್ದೇಶ ‌ಮರೆತು ನಡೆಯುವರು.ಕಾರಣ ಸರಿಯಾದಗುರು ಶಿಕ್ಷಣ,ಜ್ಞಾನದ ಕೊರತೆ. ಇದನ್ನು  ಕೊಡದೆ ಆಳಿದರೆ  ಸುರರೂ ಅಸುರರ ವಶವಾಗುವರು. ನಮ್ಮೊಳಗೇ ಇರುವ ಒಳ್ಳೆಯಗುಣ  ಸದ್ಬಳಕೆ ಆಗದೆ  ಇದ್ದರೆ  ದುರ್ಭಲರು ಬೆಳೆಯುವರು. ಆತ್ಮದುರ್ಭಲತೆಯೇ  ಭ್ರಷ್ಟಾಚಾರಕ್ಕೆ ಕಾರಣ. ಇದನ್ನರಿತು  ನಮ್ಮ ನಮ್ಮ ಮನೆಯ ಮನಸ್ಸಿನ ಶುದ್ದತೆ ಕಡೆಗೆ  ನಡೆದರೆ  ಧರ್ಮ ಕ್ಕೆ ಅಪಾಯವಿರದು. ಯಾರು ಧರ್ಮರಕ್ಷಣೆಯ ದಾರಿಯಲ್ಲಿರುವರೋ ಅವರನ್ನು ಧರ್ಮ ರಕ್ಷಿಸುವುದು. ಇದರಲ್ಲಿ ದೇವತೆಗಳು ಮಾನವರು ಅಸುರರು  ಇರುವರು. ಸೂಕ್ಮವಾಗಿರುವ ದೇವತೆಗಳ ಧರ್ಮ
ಕಣ್ಣಿಗೆ ಕಾಣೋದಿಲ್ಲವಾದ್ದರಿಂದ ಹೊರಗಿನ ಎರಡೂ ಧರ್ಮ ಬೆಳೆದಿದೆ. ದೈವೀಕ ಸಂಪತ್ತಾದ ಜ್ಞಾನವೂ ಹಿಂದುಳಿಯುತ್ತಿದೆ.

No comments:

Post a Comment