ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, May 3, 2024

ಬ್ರಾಹ್ಮಣ ರಾಜಕೀಯ ನಡೆಸಬಾರದೆ?

ಬ್ರಾಹ್ಮಣನಿಗೆ ರಾಜಕೀಯ ನಡೆಸೋದು ಕಷ್ಟವೆನ್ನುತ್ತದೆ ಧರ್ಮ. ಕಾರಣ ಬ್ರಹ್ಮಜ್ಞಾನ ಪಡೆದ ನಂತರ ರಾಜಕೀಯದಿಂದ  ಮನಸ್ಸು ದೂರವಾಗುತ್ತದೆ.ಯಾರನ್ನೂ ಆಳುವಷ್ಟು  ಉತ್ಸಾಹವಿರೋದಿಲ್ಲ ತ್ನ ತಾನರಿತ ಮೇಲೆ  ರಾಜಕೀಯಕ್ಕೆ ಇಳಿಯುವುದು ಕ್ಷಾತ್ರ ಧರ್ಮ. ನಾನೆಂಬುದಿಲ್ಲ ಎನ್ನುವ  ಸತ್ಯವರಿತವರು ಈ ಜಗತ್ತಿನಲ್ಲಿಯೇ ಇರೋದಿಲ್ಲ ಇದರಲ್ಲಿ ಅದ್ವೈತ ವಿದೆ. ಯಾವಾಗ‌ಮಾನವನಲ್ಲಿ ಅಹಂಕಾರ ಅಳಿಸಿಹೋಗುವುದೋ ಆಗ ಯಾರನ್ನೋ ಆಳುವ ಆಸೆಯೂ ಉಳಿದಿರದು. ಹೀಗಾಗಿ ಅದ್ವೈತ ತತ್ವ ಸಂನ್ಯಾಸಿಗಳಿಗೆ ಸರಿಯಾಗಿ ಅರ್ಥ ವಾದರೆ ಸಂಸಾರಿಗಳಿಗೆ ಕಷ್ಟ. ಬ್ರಾಹ್ಮಣ ವರ್ಗ  ಹಿಂದೆ  ಬಡತನದಲ್ಲಿ ಜೀವನ ನಡೆಸಿರೋದಕ್ಕೆ ಕಾರಣವೇ ಈ ಜ್ಞಾನ. ಎಲ್ಲಿಯವರೆಗೆ ಭೂ ಸಾಲ ತೀರಿಸಲಾಗದೋ ಅಲ್ಲಿಯವರೆಗೆ ಜೀವನ್ಮುಕ್ತಿ ಸಿಗದು ಎನ್ನುವ  ಅಧ್ಯಾತ್ಮ ಸತ್ಯದ‌ಹಿಂದೆ ನಡೆಯುವಾಗ ರಾಜಕೀಯ ನಡೆಸಲು ಹಣ ಬೇಕು.ಹಣ ಸಂಪಾದನೆಯಲ್ಲಿ ಧರ್ಮ ಇರಬೇಕು.ಧರ್ಮ ದ ಹಾದಿಯಲ್ಲಿ ನಡೆಯುವಾಗ ತತ್ವಕ್ಕೆ ಬೆಲೆ ಕೊಡಬೇಕು. ತತ್ವವನರಿತು ನಡೆದಂತೆಲ್ಲಾ ಎಲ್ಲರೊಳಗೂ ಅಡಗಿರುವ ಪರಮಾತ್ಮನ ಕಾಣಬೇಕು. ಪರಮಾತ್ಮ ಎಲ್ಲರೊಳಗೂ ಇದ್ದಾಗ ಯಾರನ್ನು ಯಾರು ಆಳಬೇಕು?
ಹೀಗೇ ಹಿಂದೂ ಸನಾತನ ಧರ್ಮ ವನರಿತಾಗಲೇ  ಸನಾತನ ಕಾಲದಲ್ಲಿದ್ದ ಸಾತ್ವಿಕ  ಶಕ್ತಿಯ ಹಿಂದಿನ ಬ್ರಹ್ಮಜ್ಞಾನ ಸ್ವಲ್ಪ ಮಟ್ಟಿಗೆ ಅರಿವಿಗೆ ಬರೋದು. 
ಆದರೆ ಕಾಲ ಬದಲಾಗುತ್ತಾ ಬಂದಂತೆಲ್ಲಾ ತನ್ನ ಸುಖಕ್ಕಾಗಿ ಸಂನ್ಯಾಸ ಸ್ವೀಕಾರ ಮಾಡಿದವರೂ ಹೆಚ್ಚಾಗಿ ಹೆಣ್ಣನ್ನು ಬಿಟ್ಟು ಹೊರನಡೆದರು. ಅಮಾಯಕ ಅಸಹಾಯಕ ಹೆಣ್ಣಿನ‌ಪರಿಸ್ಥಿತಿ ಹದಗೆಟ್ಟು ಅಸುರ ಶಕ್ತಿಯ ವಶವಾದರೂ  ಕೇಳೋರಿಲ್ಲವಾದಾಗ  ಅಸುರ ಸಂತಾನ ಬೆಳೆಯಿತು. ಇದೀಗ ಹೆಚ್ಚಾಗಿರುವ ಅಸುರಿ ಗುಣ ಎಲ್ಲಾ ಧರ್ಮ ದವರನ್ನೂ ದಾರಿತಪ್ಪಿಸಿ ಆಳುತ್ತಿದೆ.ಇದನ್ನು ಪ್ರಗತಿ ಎನ್ನುವ ಮಟ್ಟಿಗೆ  ಪ್ರಚಾರ ಕೂಡ ನಡೆಸಿರೋರು ಅಸುರರೆ ಆಗಿದ್ದಾರೆ.ಕಾರಣ‌ಹಣ ಅಧಿಕಾರ ಸಿಗೋದಾದರೆ‌ ಯಾಕೆ ಆಗಬಾರದು ಎನ್ನುವ ಅಜ್ಞಾನ. ಒಟ್ಟಿನಲ್ಲಿ ತಾವೇ ತೋಡಿಕೊಂಡ ಹಳ್ಳದಲ್ಲಿ ತಾವೇ ಬಿದ್ದರೂ ಇದಕ್ಕೆ ಯಾರೋ ಹೊರಗಿನವರು ಕಾರಣವೆಂದರೆ ನಂಬುವ ಅಮಾಯಕ ಜನರನ್ನು ಆಳುವ‌ಕುತಂತ್ರಕ್ಕೆ  ಎಷ್ಟೋ ಜೀವ‌ಬಲಿಯಾಗುತ್ತಿದೆ.
ಬ್ರಾಹ್ಮಣರನ್ನು ಈಗಲೂ ದ್ವೇಷ ಮಾಡುತ್ತಾರೆ. ಕಾರಣ ಅವರ ಒಳಗಿನ‌ಜ್ಞಾನವನ್ನು ಕದಿಯಲಾಗದು. ಹೊರಗಿನ ಆಸ್ತಿಯನ್ನು  ಲೂಟಿ ಮಾಡಿದರೆ  ಹೆದರಿ ದೂರಹೋಗಬಹುದೆನ್ನುವ  ನಂಬಿಕೆಯೂ ಸುಳ್ಳಾಗಿ ಕೊನೆಯಲ್ಲಿ ಜ್ಞಾನವೇ ಗೆದ್ದು ನಿಂತು  ಜನರನ್ನು ಆಳಿರೋದು ಪುರಾಣ ಇತಿಹಾಸ ತಿಳಿಸಿವೆ. ಇಲ್ಲಿ ಬ್ರಾಹ್ಮಣ ಒಂದು ವರ್ಣ ವಲ್ಲ ಜಾತಿಯೂ ಅಲ್ಲ .ಇದೊಂದು  ಬ್ರಹ್ಮನ ಜ್ಞಾನಶಕ್ತಿ. ಇದನ್ನು ಸದ್ಬಳಕೆ ಮಾಡಿಕೊಂಡರೆ ಜಗತ್ತು ಕ್ಷೇಮವಾಗಿರುತ್ತದೆ.ದುರ್ಭಳಕೆ ಮಾಡಿಕೊಂಡರೆ ಅಷ್ಟೇ ಕಠೋರವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಒಳಗೂ ಅಡಗಿರುವ  ಈವಿಶೇಷವಾದ ಜ್ಞಾನವನ್ನು  ತಾವೇ ಸಂಶೋಧನೆ ಮೂಲಕ ಸ್ವಯಂ ಪ್ರಕಾಶವಾಗಿ ಬೆಳಗುವಂತಹ  ಸತ್ಕರ್ಮ , ಸತ್ಸೇವೆ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ ಯ ಮೂಲಕ  ಉಳಿಸಿಬೆಳೆಸಿಕೊಂಡಾಗ ಹೊರಗಿರುವ ಭ್ರಷ್ಟ ರಾಜಕೀಯದ ಒಳಗೆ ಹೋಗುವ‌ ಮೊದಲು ಯೋಚಿಸಬಹುದು. ದೇಶ ಆಳುವ‌ಮೊದಲು ದೇಹವನ್ನು ಆ ವರಿಸಿ ಆಳುತ್ತಿರುವವರು ಯಾರೆಂಬ ಅರಿವಿದ್ದರೆ ಉತ್ತಮ.
ಕಾರಣ ನಮ್ಮನ್ನೇ ಅಸುರರು ಆಳುತ್ತಿದ್ದರೆ  ನಾವು ದೇಶವನ್ನು ಆಳೋದರಲ್ಲಿ ಅರ್ಥ ವಿಲ್ಲ ಅಲ್ಲವೆ?
ಶ್ರೀ ರಾಮನಂತೆ ಆಳ್ವಿಕೆ ನಡೆಸೋದು ಕಷ್ಟವಾದರೂ ಕೊನೆಪಕ್ಷ ಶ್ರೀ ರಾಮನಲ್ಲಿದ್ದ  ಧರ್ಮ ನಿಷ್ಟೆಯ ಜ್ಞಾನವಿದ್ದರೆ ಬ್ರಾಹ್ಮಣ ಕ್ಷೇಮ. ಎಲ್ಲಾ ಬ್ರಹ್ಮನ ಸೃಷ್ಟಿ ಯಾಗಿದ್ದರೂ ಜ್ಞಾನ ಬೇರೆ ಬೇರೆಯಾದಾಗ ನಮ್ಮ ಜ್ಞಾನವನ್ನು ಶುದ್ದಗೊಳಿಸಿಕೊಳ್ಳುವ ಶಿಕ್ಷಣವಿದ್ದರೆ  ಅದೇ  ನಮ್ಮ ಪುಣ್ಯ.
ಬ್ರಾಹ್ಮಣರ ಮಕ್ಕಳಿಗೆ ಎಂತಹ ಶಿಕ್ಷಣವಿರಬೇಕಿದೆ? ಈಗ ಏನು ಕೊಡಲಾಗುತ್ತಿದೆ? ಇದಕ್ಕೆ ಕಾರಣವೇನು? ಯಾರು ಕಾರಣ? ಎಂದಾಗ ಪೋಷಕರೆ ಇದಕ್ಕೆ ಕಾರಣ.ಹಾಗೆ ಇತರ ವರ್ಗದವರೂ ಬೆಳೆದಿರುವರು. ತಲೆಗೆ ತುಂಬುವ ವಿಷಯವೇ ದೇಹವೆಲ್ಲಾ ಆವರಿಸಿ ನಡೆಸೋದಲ್ಲವೆ? ಕೆಲವರಿಗಷ್ಟೆ ಇದರಲ್ಲಿ ಮೀಸಲಾತಿ ಇದೆ. ಅಂದರೆ ಧಾರ್ಮಿಕ ಶಿಕ್ಷಣದಲ್ಲಿ ಮೀಸಲಾತಿ ಬೇಕಿತ್ತೆ?ಯಾರಿಗೆ ಗೊತ್ತು ಯಾವ ದೇಹದಲ್ಲಿ  ಯಾವ ಮಹಾತ್ಮನಿರುವರೋ ಯಾವ ಜ್ಞಾನಿ ಅಡಗಿರುವರೋ ಯಾವ ದೇವರಿರುವರೋ? ಅಧ್ಯಾತ್ಮ ಶಿಕ್ಷಣ ಸಿಗದ ಜೀವಾತ್ಮ ಇಂದಿಗೂ ಪರಮಾತ್ಮನ ವಿರುದ್ದ ತನ್ನ ಕರ್ಮ ನಡೆಸಿಕೊಂಡು ಹೊರಗೆ ಹೋರಾಟ ಹಾರಾಟ ಮಾರಾಟದಲ್ಲಿ‌ಮಗ್ನನಾಗಿದ್ದರೆ ಬ್ರಹ್ಮನ ಅರಿವಾಗೋದಿಲ್ಲ.
ಒಟ್ಟಿನಲ್ಲಿ ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನದ ನಡುವೆ ದೊಡ್ಡ ಅಂತರ ಬೆಳೆಸಿ ರಾಜಕೀಯ ತುಂಬಿಕೊಂಡಿದೆ. ಇದನ್ನು ಸರಿಪಡಿಸಲು  ಬ್ರಾಹ್ಮಣರು ರಾಜಕೀಯಕ್ಕೆ ಇಳಿದರೂ ಅಧರ್ಮ ವಾಗುತ್ತದೆ. ಆದರೆ ರಾಜಗುರುವಾಗಿ ಮಾರ್ಗದರ್ಶನ ಮಾಡಬಹುದು.ಇದು ಸ್ವಾರ್ಥ ಅಹಂಕಾರ ಪ್ರತಿಫಲಾಪೇಕ್ಷೆಯಿಲ್ಲದ  ದೇಶ ಸೇವೆ ಪರಮಾತ್ಮನ ಸೇವೆ ಆಗಬೇಕಿದೆ. ಜನರ ಹಣವನ್ನು ಸದ್ಬಳಕೆ ಮಾಡಿಕೊಂಡು  ಜನರಿಗೆ ಜ್ಞಾನದ ಶಿಕ್ಷಣ ಕೊಡುವುದು  ಮೊದಲ ಧರ್ಮ ಕಾರ್ಯ ವಾಗಿದೆ. ಅರಿವು ಬಂದ ಮೇಲೆ ಆಳೋದರಲ್ಲಿ ಅರ್ಥ ವಿಲ್ಲ. ಜನರೆ ಆಳಿಕೊಳ್ಳುವರು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ತಮ್ಮನ್ನು ತಮ್ಮ ದೇಶವನ್ನು ಆಳುವಷ್ಟು ಅಧಿಕಾರ ಪಡೆದಿರಬೇಕಿತ್ತು.ಇದಕ್ಕೆ ಸತ್ಯಜ್ಞಾನದ ಶಿಕ್ಚಣ ಅಗತ್ಯವಾಗಿತ್ತು.
ಶಿಕ್ಷಣವೇ ನಮ್ಮದಲ್ಲವಾದಾಗ ನಾವೇ ಆಳಾಗಿರುವುದು ಸಹಜ.
ಬ್ರಾಹ್ಮಣ ಬಹುಜನಪ್ರಿಯ ,ಜನರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲುವಷ್ಟು ಜ್ಞಾನಶಕ್ತಿ ಪಡೆದವರು ಬ್ರಾಹ್ಮಣರು.‌ ಇದು ಉತ್ತಮ ಗುರುವಾಗಿದ್ದವರಿಗೆ ಸಾಧ್ಯ.
ಕಾಲ ಬದಲಾಗಿದೆ. ವರ್ಣ ಹೋಗಿ ಜಾತಿ ಬೆಳೆದಿದೆ. ಅದೂ ಮುಖನೋಡಿ ಮಣೆ ಹಾಕುವ ಸಂಸ್ಕೃತಿಯಲ್ಲಿ ಹಣ ಅಧಿಕಾರದೆಡೆಗೆ  ಮನಸ್ಸು ಹೊರಗೆ ಬೆಳೆದು ಒಳಗಿನ‌ಮನಸ್ಸು ಸಂಕುಚಿತ ಸ್ಥಿತಿಗೆ ತಲುಪಿರುವಾಗ ತಾನು ಬದುಕುವುದೇ ಕಷ್ಟ ಎಂದಾಗ ಯಾರನ್ನು ಆಳುವ ಆಸೆಯಿರದು. ಇದ್ದರೂ ಇದು ಧರ್ಮ ವಾಗಿರದು. ಹಾಗಾಗಿ ಅಧರ್ಮ ಎದ್ದು ಕುಣಿಯುತ್ತಿದೆ.
ಧರ್ಮ ರಕ್ಷಣೆಗಾಗಿ  ಯಾರೇ ಇರಲಿ ಶಸ್ತ್ರ ಹಿಡಿದು ಹೋರಾಟ ಮಾಡಲೇಬೇಕು. ಶಾಸ್ತ್ರ ಹಿಂದುಳಿದಾಗಲೇ ಶಸ್ತ್ರ ಚಿಕಿತ್ಸೆ ಹೆಚ್ಚುವುದು. ಆದರೆ  ಇದರಿಂದ ಸಾವು‌ನೋವುಗಳೆ ಹೆಚ್ಚು.
ಆತ್ಮಕ್ಕೆ ಸಾವಿಲ್ಲ.ಶೂದ್ರನೂ ಮುಂದಿನ ಜನ್ಮದ ಬ್ರಾಹ್ಮಣನಾಗಿ ಜನ್ಮ ಪಡೆಯಬಹುದು. ಇದು ಅವರವರ ಹಿಂದಿನ  ಧರ್ಮ ಕರ್ಮದ ಫಲವಾಗಿರುತ್ತದೆ. ಹಾಗಾಗಿ ಇಂದಿನ ಪ್ರಜಾಪ್ರಭುತ್ವದಲ್ಲಿ  ಎಲ್ಲವೂ ಮಿಶ್ರವಾಗಿದೆ. ಯಾರಲ್ಲಿ ಯಾರಿದ್ದಾರೆಂಬ ಅರಿವಿಲ್ಲ. ನೋಡಲು ಎಲ್ಲಾ ಮಾನವರಾದರೂ ಒಳಗಿರುವ‌ದೇವಾಸುರರ ಜ್ಞಾನಶಕ್ತಿ ಬೇರೆ ಬೇರೆ ಆದಾಗ ಅದರ ಫಲ ಜೀವ ಅನುಭವಿಸಿಯೇ ತೀರಬೇಕು. 
ರಾಜಕೀಯ ನಡೆಸಲೆಂದೇ ಕೆಲವರ ಜನ್ಮವಾಗಿರುತ್ತದೆ. ಆದರೆ ರಾಜಕೀಯ ಹೇಗೆ‌ ನಡೆಸಿದರೆ ಧರ್ಮ ರಕ್ಷಣೆಯಾಗುತ್ತದೆನ್ನುವ ಜ್ಞಾನ ಶಕ್ತಿ ಬ್ರಾಹ್ಮಣರಲ್ಲಿರುತ್ತದೆ ಹೀಗಾಗಿ ಹಿಂದೆ ಬ್ರಾಹ್ಮಣರನ್ನು ರಾಜಪುರೋಹಿತರಾಗಿ, ರಾಜಗುರುವಾಗಿ ನೇಮಕಮಾಡಿಕೊಂಡು ರಾಜ್ಯ ಸುಭಿಕ್ಷವಾಗಿತ್ತು. ಬಿಕ್ಷುಗಳಂತೆ  ಬದುಕುತ್ತಿದ್ದವರು ಇಂದು ಬಿಕ್ಷುಕರಂತೆ  ಭ್ರಷ್ಡರ ಹಿಂದೆ ನಿಂತರೆ  ಏನರ್ಥ? ಕಲಿಗಾಲದ ಕಲಿಕೆ ಸರಿಯಿಲ್ಲ ಎಂದರ್ಥ. ಕೆಲವರು ಸರಿಯಿದ್ದರೂ ಹಲವರನ್ನು ಸರಿಪಡಿಸುವ ಅಧಿಕಾರವಿಲ್ಲದಾಗಿದೆ. ಸತ್ಯ ಧರ್ಮ ಓದಿ ಅರ್ಥ ಮಾಡಿಕೊಳ್ಳಲು ಕಷ್ಟ. ನಡೆದು ಅರ್ಥ ಮಾಡಿಕೊಳ್ಳಲು ಇನ್ನೂ ಕಷ್ಟ ಹೀಗಾಗಿ ಅನರ್ಥಕ್ಕೆ ತಿರುಗಿದೆ.

No comments:

Post a Comment