ಚುನಾವಣೆಯ ನೀತಿ ಸಂಹಿತೆಯಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಬಾರದೆನ್ನುವ ಕಾನೂನಿರಬೇಕಿತ್ತು. ಈ ಸಮಯದಲ್ಲಿ ಸಂಸಾರ ಸಮೇತ ರಸ್ತೆಗಿಳಿದು ಹಣಮಾಡಿಕೊಳ್ಳುವುದು ಸಾಮಾನ್ಯ ವಾಗಿದೆ.ಕಾಲೇಜ್ ಶಾಲೆ ಬಿಟ್ಟು ಮಕ್ಕಳು ರಾಜಕೀಯಕ್ಕೆ ಇಳಿದಾಗ ಅವರ ಮನಸ್ಸು ದಾರಿತಪ್ಪಿ ನಡೆಯೋದಷ್ಟೆ. ಚುನಾವಣೆಯ ನಂತರ ಯಾರ ಹಿಂದೆ ನಡೆದಿದ್ದರೋ ಅವರೇ ಅವರ ಜೀವನದ ನಾಯಕರಂತೆ ನಾಯಿಯ ಹಾಗೆ ಹಿಂಬಾಲಿಸುವಾಗ ಅವರ ಸ್ವಂತ ಬುದ್ದಿವಂತಿಕೆಯೇ ಇರೋದಿಲ್ಲ. ತಾತ್ಕಾಲಿಕ ಸುಖ ನೀಡುವ ಹಣಕ್ಕಾಗಿ ಯುವಜನತೆ ಮಕ್ಕಳನ್ನು ದುರ್ಭಳಕೆ ಮಾಡಿಕೊಂಡು ಆಳೋದೆ ಭ್ರಷ್ಟಾಚಾರ.ಇದನ್ನು ಪೋಷಕರಾದವರು ಸಹಕರಿಸುತ್ತಿರುವುದೇ ಅಜ್ಞಾನ. ದೇಶದ ಹಣವನ್ನು ನೀರಿನಂತೆ ಸುರಿದು ಜನರನ್ನು ದಾರಿತಪ್ಪಿಸಿ ಗೆದ್ದರೇನು ಸೋತರೇನು ಎಲ್ಲಾ ಭ್ರಷ್ಟಾಚಾರ ವೆ ಆಗಿರುತ್ತದೆ. ಚುನಾವಣೆ ಸ್ವಂತ ಬಲದಿಂದ ಹಣದಿಂದ ನಡೆಸಬೇಕೆ ಹೊರತು ಭ್ರಷ್ಟಾಚಾರ ದಿಂದಲ್ಲ. ಇದನ್ನು ವಿರೋಧಿಸುವವರಿಲ್ಲದೆ ಎಲ್ಲಾ ಪಕ್ಷಗಳೂ ತಮ್ಮ ಪಾಡಿಗೆ ತಾವು ಸ್ವಚ್ಚವಾಗಿದ್ದೇವೆಂಬ ಭ್ರಮೆಯಲ್ಲಿ ನಡೆದಿವೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಅಮ್ಮಎಲ್ಲಿ ಕೇಳಿದರೆ ಹಣದಲ್ಲಿ ಎಂದರೆ ಸರಿಯೆ? ಜ್ಞಾನದಲ್ಲಿ ಅಮ್ಮನಿರಬೇಕು.ಭಾರತ ಮಾತೆ ಜ್ಞಾನದಲ್ಲಿ ಕಾಣಬೇಕಿತ್ತು.ಭಾರತೀಯ ಶಿಕ್ಷಣದಲ್ಲಿಯೇ ಅಮ್ಮನಿಗೆ ಗೌರವವಿಲ್ಲದೆ ಹಣದ ಲೆಕ್ಕಾಚಾರದಲ್ಲಿ ಅಮ್ಮನ ಹಿಂದೆ ನಿಂತರೆ ಅಮ್ಮ ಹೊರಗೆ ದುಡಿದು ಸಾಲ ತಂದು ಮಕ್ಕಳನ್ನು ಸಾಕೋದು ಧರ್ಮ ವೆ? ಭೂಮಿಯ ಋಣ ತೀರಿಸಲು ಬಂದ ಜೀವಾತ್ಮನಿಗೆ ಇನ್ನಷ್ಟು ಋಣ ಭಾರ ಏರಿಸಿರೋದೆ ರಾಜಕೀಯ ವ್ಯವಸ್ಥೆ. ಈ ಅವಸ್ಥೆ ಯಲ್ಲಿ ಮಕ್ಕಳನ್ನು ಸೇರಿಸಿಕೊಂಡರೆ ಜನಸಂಖ್ಯೆ ಹೆಚ್ಚಬಹುದು ಜ್ಞಾನ ಬೆಳೆಯದು. ನಿಮ್ಮ ನಿಮ್ಮ ಮಕ್ಕಳ ಮಹಿಳೆಯರ ಯೋಗಕ್ಷೇಮಕ್ಕೆನೀವೇ ಜವಾಬ್ದಾರರು. ದಾರಿತಪ್ಪಿಸಿ ಆಳಿದರೆ ಅದೇ ಮುಂದೆ ಮಾರಿಯಾಗಿ ಕಾಡಬಹುದು.
ನಿಮ್ಮನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದಿದ್ದರು ಮಹಾತ್ಮರು. ಯಾರ ಸಂತಾನ ಯಾರೋ ಸಾಕಲು ಸಾಧ್ಯವೆ? ಹಣದ ಹೊಳೆ ಹರಿಯುತ್ತಿರುವಾಗ ಜ್ಞಾನದ ಕೊಳೆ ಕಾಣೋದಿಲ್ಲ ಎಂದಂತಿದೆ ...
ಕಳೆದ ಚುನಾವಣೆಗಳಲ್ಲಿ ಸಾರ್ವಜನಿಕರಾಗಿದ್ದು ಕಂಡ ಸತ್ಯವನ್ನು ತಿಳಿಸಲಾಗಿದೆ. ಮಕ್ಕಳಿಗೆ ರಾಜಯೋಗದ ಶಿಕ್ಷಣ ನೀಡಿದಾಗ ಆತ್ಮನಿರ್ಭರ ಭಾರತವಾದರೆ ರಾಜಕೀಯದ ಶಿಕ್ಷಣ ನೀಡಿದಷ್ಟೂ ಆತ್ಮದುರ್ಭಲ ಭಾರತವಾಗುತ್ತದೆ. ನಮ್ಮ ಶಾಲಾ ಕಾಲೇಜ್ ಗಳಲ್ಲಿ ತಿಳಿಸಲಾಗುತ್ತಿರುವ ವಿಷಯಗಳಲ್ಲಿ ಹೆಚ್ಚಾಗಿ ಭೌತವಿಜ್ಞಾನವಿದೆ.ಅಧ್ಯಾತ್ಮ ವಿಜ್ಞಾನಮಕ್ಕಳ ಒಳಗೇ ಅಡಗಿದ್ದರೂ ಗುರುತಿಸದ ಪೋಷಕರುಶಿಕ್ಷಕರುಮಕ್ಕಳು ಬೇಗ ಬೆಳೆದು ದೊಡ್ಡವರಾದರೆ ಸಾಕೆನ್ನುವ ಬಲದಲ್ಲಿ ಮುಗ್ದ ಮನಸ್ಸಿಗೆ ಪ್ರಭುದ್ದ ವಿಷಯಗಳನ್ನು ಬಲವಂತವಾಗಿ ತುರುಕುವ ಜೊತೆಗೆ ಹಣ ಸಂಪಾ್ನೆಯೇ ಜೀವನದ ಗುರಿ ಎನ್ನುವ ಮಟ್ಟಿಗೆ ಸಮಾಜದ ಬೆಳವಣಿಗೆಯಾಗಿದೆ. ಮಕ್ಕಳ ಪ್ರತಿಭೆ ತೋರುಗಾಣಿಕೆಯಾಗುತ್ತಾಮನರಂಜನೆಗೆ ಬಳಸಲಾಗಿ ಮಕ್ಕಳ ಮನಸ್ಸಿನಲ್ಲಿ ಅಹಂಕಾರ ಸ್ವಾರ್ಥ ಬೆಳೆಸಿದರೆ ಅದೇ ಮುಂದಿನ ಭವಿಷ್ಯಕ್ಕೆ ಮಾರಕವಾದಾಗ ಪೋಷಕರಿಗೆ ಸರಿಪಡಿಸಲಾಗದ ಪರಿಸ್ಥಿತಿ ಯಿರುತ್ತದೆ.ಇದನ್ನು ಸರ್ಕಾರ ಹಣದಿಂದ ಸರಿಪಡಿಸಲು ಸಾಧ್ಯವೆ?
ಒಂದು ದಿನಕ್ಕೆ 500 1,000 ಮಕ್ಕಳಿಗೆ ಸಿಗುವುದೆನ್ನುವಕಾರಣಕ್ಕಾಗಿ ಕಾಲೇಜ್ ಮಕ್ಕಳನ್ನು ಸೇರಿಸಿಕೊಂಡು ಕಾಲಹರಣ ಮಾಡುತ್ತಾ ರಸ್ತೆಯಲ್ಲಿ ತಿರುಗಿದರೆ ಸ್ವಾವಲಂಬನೆ ಆಗುವುದೆ? ಇಲ್ಲಿ ತಪ್ಪು ಯಾರದ್ದು ಎನ್ನುವ ಪ್ರಶ್ನೆಯಿಲ್ಲ.ಇದೊಂದು ಸಾಮಾನ್ಯವಾಗಿ ಎಲ್ಲೆಡೆಯೂ ಚುನಾವಣೆಯ ಪ್ರಚಾರದಲ್ಲಿ ಎಲ್ಲಾ ಪಕ್ಷಗಳು ನಡೆಸಿವೆ ಎಂದರೆ ಜನಸಹಕಾರವಿದೆ ಇದಕ್ಕೆ ಕಾನೂನಿನಲ್ಲಿ ಯಾವುದೇ ಅಡೆತಡೆಯಿಲ್ಲ. ಮಾಧ್ಯಮಗಳಂತೂ ಈ ಸಮಯದಲ್ಲಿ ಸಾಕಷ್ಟು ಬೆಳೆದಿರುತ್ತವೆ.ಹಾಗಾದರೆ ಹಣಕ್ಕಾಗಿ ಚುನಾವಣೆಯೆ? ಇದರಿಂದ ಗೆದ್ದವರು ಮತ್ತೆ ಹಣಗಳಿಸಲು ಬಳಸೋ ತಂತ್ರ ಭ್ರಷ್ಟಾಚಾರ. ಅದೇ ಎಲ್ಲರಿಗೂ ಹಂಚಿಕೊಂಡರೆ ದೇಶ ಭ್ರಷ್ಟ ರ ವಶ. ಎಷ್ಟು ಹಣಗಳಿಸಿದರೂ ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿಲ್ಲವಾದರೆ ನೀರಿನಲ್ಲಿ ಹೋಮಮಾಡಿದಂತೆಯೇ.ಎಷ್ಟೋ ವರ್ಷಗಳಿಂದಲೂ ದೇವರ ಪೂಜೆ ಪುನಸ್ಕಾರ ಯಾಗ ಯಜ್ಞ ಧಾರ್ಮಿಕ ಕಾರ್ಯ ನಡೆಸುತ್ತಿದ್ದರೂ ಯಾಕಿಷ್ಟು ಅಧರ್ಮ ಅನ್ಯಾಯ ಅಸತ್ಯ? ಇದಕ್ಕೆ ಕಾರಣ ಅಜ್ಞಾನವಷ್ಟೆ.ಸತ್ಯವನರಿಯದ ಅಮಾಯಕ ಜನರನ್ನು ಆಳುವ ಭ್ರಷ್ಟ ರಾಜಕೀಯತೆ ಮಕ್ಕಳವರೆಗೂ ಹರಡಿದಂತೆಲ್ಲಾ ಆತ್ಮದುರ್ಭಲ ವಾಗುತ್ತಾ ಆತ್ಮಹತ್ಯೆ ಹೆಚ್ಚಾಗುತ್ತದೆ.ಆತ್ಮಹತ್ಯೆ ಎಂದರೆ ಜೀವನದಲ್ಲಿ ಸತ್ಯದ ವಿರುದ್ದದ ನಡೆ ನುಡಿಯಾಗಿದೆ. ಇದಕ್ಕೆ ಪರಮಾತ್ಮಕಾರಣವಲ್ಲ ಜೀವಾತ್ಮನೇ ಕಾರಣ.ಅಂದರೆ ಮಾನವನೇ ಕಾರಣ ಮಹಾತ್ಮರಲ್ಲವೆನ್ನಬಹುದು.
No comments:
Post a Comment