ಸಾಕಾರ ನಿರಾಕಾರ ಬ್ರಹ್ಮಜ್ಞಾನದಲ್ಲಿ ಶ್ರೇಷ್ಠ ಕನಿಷ್ಠ ವಿದೆಯೆ?
ಕಣ್ಣಿಗೆ ಕಾಣದ್ದನ್ನು ಕಂಡೆ ಎಂದರೆ ತೋರಿಸಿ ಎನ್ನುವವರ ಮುಂದೆ ವಾದ ಮಾಡಲಾಗದು.ಅದೇ ನಾನು ಕಂಡುಕೊಂಡ ಸತ್ಯವನ್ನು ವಿವರಿಸಿದಾಗ ಅದು ಹಿಂದಿನ ಮಹಾತ್ಮರ ಅನುಭವಕ್ಕೆ ಹೊಂದಿಕೊಂಡಿದ್ದರೆ ಒಪ್ಪಬಹುದು. ಆದರೆ ಇಲ್ಲಿ ಹಿಂದಿನ ಮಹಾತ್ಮರ ಅನುಭವವನ್ನೇ ನನ್ನ ಅನುಭವವೆಂದು ಪ್ರಚಾರ ಮಾಡಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಧರ್ಮ ರಕ್ಷಣೆ ಆಗದು. ತಲೆಗೆ ತುಂಬಿದ ಜ್ಞಾನ ಹೃದಯಾಂತರಾಳದೊಳಗೆ ಇಳಿಯುವ ಮೊದಲೇ ಹೊರಹಾಕಿದರೆ ಅನುಭವಿ ಜ್ಞಾನಿಯಾಗಲಾರನು. ಇದರಿಂದ ಅರ್ಧ ಸತ್ಯದ ತಂತ್ರ ಬೆಳೆದು ತತ್ವ ಹಿಂದುಳಿದು ಸತ್ಯವೂ ಅರ್ಥ ವಾಗದೆ ಜೀವ ಹೋಗುತ್ತದೆ.
ಭಾರತ ದೇಶದೊಳಗೆ ಭಾರತೀಯರಿರೋದನ್ನು ಅಧ್ವೈತ ಎನ್ನಬಹುದು. ವಿದೇಶದೊಳಗಿದ್ದು ನಾನು ಭಾರತೀಯ ಎಂದರೆ ದ್ವೈತ. ಎರಡೂ ಸರಿ ಎಂದರೆ ನಮ್ಮ ಜ್ಞಾನ ಒಂದೇ ಇರಬೇಕಷ್ಟೆ. ಬ್ರಹ್ಮಜ್ಞಾನದಿಂದ ಸೃಷ್ಟಿ ಯ ರಹಸ್ಯ ತಿಳಿಯಬೇಕು.ಅದರಲ್ಲಿ ನಾನ್ಯಾರೆಂಬ ಸತ್ಯವೂ ಅಡಗಿರುವುದನ್ನು ಕಂಡುಕೊಳ್ಳಲು ಸಾಧ್ಯವಾಗಬೇಕು.ಆಗ ನಾನೆಂಬುದಿಲ್ಲವೆನ್ನುವುದೂ ಅರ್ಥ ವಾಗುತ್ತದೆ ಅಹಂಕಾರ ಅಳಿಯುತ್ತದೆ ಬ್ರಹ್ಮಚೈತನ್ಯವೇ ಶ್ರೇಷ್ಠ ವಾಗುತ್ತದೆ.ಆದರೆ ಇದು ಸಾಕಾರಕ್ಕೆ ಬಂದಾಗ ಎರಡಾಗಿ ಮೂರಾಗಿ ನೂರು ಸಾವಿರ ಲಕ್ಷ ಕೋಟಿಗೆ ಏರಿದರೆ ಸಮಸ್ಯೆ ಹೊರಗಿನಿಂದ ಒಳಗೆ ಸೇರುವುದು. ಜ್ಞಾನವೂ ಒಂದು ಋಣದ ಲೆಕ್ಕಾಚಾರದಲ್ಲಿದೆ.ಎಲ್ಲಾ ಶ್ರೇಷ್ಠ ವಾಗಿಯೇ ಇರದು.ಕನಿಷ್ಠ ವೆಂದರೂ ತಪ್ಪು. ಕಾರಣ ಭೂಮಿಯಲ್ಲಿ ಜನ್ಮ ಪಡೆದಿರುವಾಗ ಅದರ ಹಿಂದೆ ಒಂದು ನಿರ್ದಿಷ್ಟ ಕಾರಣವಿರುತ್ತದೆ. ಹಾಗೇ ಅದಕ್ಕೆ ತಕ್ಕಂತೆ ಜ್ಞಾನವೂ ಒಳಗೇ ಅಡಗಿರುತ್ತದೆ. ಅದನ್ನು ಗುರುತಿಸದೆ ಹೊರಗಿನಿಂದ ಅಳೆದು ತೂಗಿ ತನ್ನ ಇಚ್ಚೆಯಂತೆ ತಲೆಗೆ ವಿಷಯ ತುಂಬಿ ಕೊನೆಗೆ ತಲೆಸರಿಯಿಲ್ಲವೆಂದರೆ ತುಂಬಿಕೊಂಡ ವಿಷಯಗಳು ಸುಮ್ಮನಿರುವವೆ? ಹಾಗೆಯೇ ಒಂದು ದೇಶದ ಭವಿಷ್ಯವೂ ಅದರೊಳಗಿರುವ ಪ್ರಜೆಗಳ ತಲೆಗೆ ತುಂಬಿದ ಶಿಕ್ಷಣದ ವಿಷಯಗಳಲ್ಲಿ ಅಡಗಿರುವುದು. ಕಾಣದ ಸತ್ಯ ಬಿಟ್ಟು ಕಾಣುವ ಸತ್ಯವೇ ತುಂಬಿದ್ದರೆ ಸಾಕಾರಕ್ಕೆ ಬೆಲೆಹೆಚ್ಚು. ಆದರೆ ಇದರಿಂದ ಸತ್ಯವಾಗಲಿ ಧರ್ಮ ವಾಗಲಿ ಬೆಳೆದಿದೆಯೆ?
ಆತ್ಮಜ್ಞಾನ ಕಣ್ಣಿಗೆ ಕಾಣೋದಿಲ್ಲವೆಂದರೆ ಇಲ್ಲವೆಂದರ್ಥ ವಲ್ಲ.
ಹಾಗೆ ದೇವರಿಲ್ಲವೆಂದರೂ ಅನರ್ಥ ವಾಗುತ್ತದೆ.
ದೇಶವೇ ಇಲ್ಲ ನಾನೇ ಎಲ್ಲಾ ಎನ್ನಬಹುದೆ?
ಭೂಮಿಯೇ ಇಲ್ಲದೆ ಮನುಕುಲವಿದೆಯೆ?
ಹೀಗೇ ತಾಯಿಯವರೆಗೂ ದೇವರನ್ನು ತೋರಿಸಿಕೊಟ್ಟ ಸನಾತನ ಧರ್ಮ ಇಂದು ತಾಯಿಯನ್ನೇ ಮರೆತು ಮುಂದೆ ಹೋದವರಿಗೆ ಮಣೆಹಾಕಿ ಸ್ವಾಗತಿಸಿದರೆ ಇದರರ್ಥ ವ್ಯವಹಾರ ಜ್ಞಾನ ಧರ್ಮ ವನರಿಯದೆ ಮೇಲೇರಿದೆ ಎಂದು.
ಇದನ್ನು ಒಪ್ಪಿಕೊಂಡು ಹಣದ ಶ್ರೀಮಂತ ರಾಗಬಹುದು, ರಾಜಕೀಯ ನಡೆಸಬಹುದು ಆದರೆ ಧರ್ಮ ರಕ್ಷಣೆ ಮಾಡಲಾಗದು. ಮಾತೃಭೂಮಿ,ಮಾತೃಭಾಷೆಗಾಗಿ ಹೋರಾಟ ಹಾರಾಟ ಮಾರಾಟ ಹೊರಗೆ ನಡೆಸಿದರೆ ಸಾಲದು ಒಳಗಿನಿಂದ ಅರ್ಥ ಮಾಡಿಕೊಂಡು ಬೆಳೆಸುವ ಜ್ಞಾನವಿರಬೇಕಿದೆ. ಭಾಷೆಯಿಂದ ಜ್ಞಾನ ಬೆಳೆಯುತ್ತದೆ ಎಂದರೆ ರಕ್ತಗತವಾಗಿ ಸೇರಿಕೊಂಡಿರುವ ಧರ್ಮ ಸಂಸ್ಕೃತಿ ಭಾಷೆಗೆ ತಕ್ಕಂತೆ ಶಿಕ್ಷಣವಿದ್ದರೆ ಎಲ್ಲಾ ನಿರಾಕಾರವೇ. ಒಳಗಿರೋದನ್ನು ಕಾಣಲಾಗದಲ್ಲವೆ?
ಹೃದಯದ ಕಸಿ ವಿಜ್ಞಾನ ಮಾಡಬಹುದು ಹೃದಯವಂತಿಕೆ ತುಂಬಬಹುದೆ? ಹಾಗೆ ಹೊರಗೆ ದೇವಾನುದೇವತೆಗಳನ್ನು ಹಿಡಿದು ಬೇಡಬಹುದು.ಒಳಗಿರುವ ದೈವತ್ವ ಇದರಿಂದ ಬೆಳೆಯುವುದೆ?
ಮನಸ್ಸನ್ನು ಹೇಗೆಂದರೆ ಹಾಗೆ ಹರಿಹಾಯಿಸಬಹುದು ಆದರೆ ಅದನ್ನು ಒಂದೆಡೆ ತಡೆ ಹಿಡಿಯುವುದು ಸುಲಭವೆ?
ದೇಶವನ್ನು ವಿದೇಶಿ ಸಾಲ ಬಂಡವಾಳ ವ್ಯವಹಾರಕ್ಕೆ ಒಪ್ಪಿಸಿ ಆಳಬಹುದು ಆದರೆ ವಿದೇಶಿ ಸಾಲ ತೀರಿಸುವಷ್ಟು ದುಡಿದು ಜೀವನ ನಡೆಸುವಾಗ ನಮ್ಮ ಮೂಲಜ್ಞಾನವಿರುವುದೆ?
ಒಟ್ಟಿನಲ್ಲಿ ಎಲ್ಲರಿಗೂ ಕಣ್ಣಿಗೆ ಕಾಣುವ ಸತ್ಯದ ಹಿಂದೆ ಅಸತ್ಯವೂ ಅಡಗಿರುವ ಬಗ್ಗೆ ಜ್ಞಾನವಿಲ್ಲದೆ ನಿರಾಕಾರ ಬ್ರಹ್ಮ ಶ್ರೇಷ್ಠ ವೆಂದರೂ ಸಾಕಾರವೇ ಬೆಳೆದಿದೆ. ಸಾಕಾರದಿಂದ ನಿರಾಕಾರದೆಡೆಗೆ ನಡೆದವರೆ ಮಹಾತ್ಮರುಗಳಾದರು. ನಿರಾಕಾರವನ್ನು ನಿರಾಕರಿಸಿ ನಡೆದವರು ಮಾನವರಾದರು.
ಸಾಕಾರವನ್ನೂ ನಿರಾಕರಿಸಿದವರು ಅಸುರರಾದರು.
ಅಸುರರ ವಶದಲ್ಲಿ ಸುರರಿರೋದನ್ನು ಕಂಡೂ ಕಾಣದವರಂತೆ ನಾಟಕವಾಡುವವರನ್ನು ಏನೆನ್ನಬೇಕು ಮಧ್ಯವರ್ತಿಗಳು ಎಂದರೆ ಸರಿಯಾಗಬಹುದು.
ಎಲ್ಲರಿಗಿಂತ ಅಪಾಯ ತಂದಿಟ್ಟವರು ಅರ್ಧ ಸತ್ಯ ತಿಳಿದು ಪ್ರಚಾರ ಮಾಡುವ ಮಧ್ಯವರ್ತಿಗಳು. ಹೀಗೇ ಜಗತ್ತು ನಡೆಯುತ್ತದೆ. ಒಂದೆಡೆ ಮನರಂಜನೆ ಇನ್ನೊಂದು ಕಡೆ ಆತ್ಮವಂಚನೆ.
ಎಲ್ಲಾ ಪರಮಾತ್ಮನ ಇಚ್ಚೆ ಎಂದಾಗ ಯಾವುದನ್ನು ವಿರೋಧಿಸಬೇಕಿದೆ? ಯಾರನ್ನು ಶತ್ರು ಗಳೆನ್ನಬಹುದು? ಯಾರು ಕಾರಣರು? ಯಾರು ಶಾಶ್ವತವಾಗಿರೋದು?
ಕಾಲಚಕ್ರ ತಿರುಗುತ್ತಲೇ ಇರೋವಾಗ ಮೇಲಿನವರು ಕೆಳಗಿಳಿಯುವರು ಕೆಳಗಿರುವವರು ಮೇಲೇರುವರು.
ಹಿಂದೆ ದೇವಲೋಕವನ್ನು ಅಸುರರು ವಶಪಡಿಸಿಕೊಂಡು ಆಳಿದರು.ನಂತರ ಭಗವಂತನೇ ಧರೆಗಿಳಿದು ಅಸುರ ಸಂಹಾರ ಮಾಡಿದನೆಂದು ಪುರಾಣ ಕಥೆಗಳಿವೆ.ಹಾಗಾದರೆ ಈಗ ಎಲ್ಲಿರುವರು ದೇವಾಸುರರು? ನಮ್ಮೊಳಗೇ ಅಡಗಿರುವ ಈ ಶಕ್ತಿಯನ್ನರಿಯದೆ ಹೊರಗೆ ಹುಡುಕಿದರೆ ಸಿಗುವರೆ ಕಾಣುವರೆ?
ರಾಮಕೃಷ್ಣ ಪರಮಹಂಸರಿಗೆ ಸ್ವಾಮಿ ವಿವೇಕಾನಂದ ರಂತಹ ಮಹಾಶಿಷ್ಯರು ಹಾಕಿದ ಪ್ರಶ್ನೆಗೆ ಉತ್ತರ ನೀಡುವಷ್ಟು ಆತ್ಮಜ್ಞಾನವಿತ್ತು. ಕಾರಣ ಅದು ಅವರ ಪರಿಶ್ರಮವಾಗಿತ್ತು. ಉಪಾಸನೆ,ಉಪವಾಸ,ಉಪದೇಶದ ಮೂಲಕ ದೇವರನ್ನು ಕಂಡವರು ವಿವೇಕಾನಂದರಾಗಬಹುದು. ವಿವೇಕದ ಆನಂದ ಅನುಭವಿಸಿಯೇ ತಿಳಿದರೆ ನಿರಾಕಾರವನ್ನು ಶ್ರೇಷ್ಠ ವೆನ್ನಬಹುದು. ಆದರೆ ಇದನ್ನು ಹೊರಗೆ ತೋರಿಸಲಾಗದು.
ಹೀಗಾಗಿ ಯಾವತ್ತೂ ಅದ್ವೈತ ಕಣ್ಣಿಗೆ ಕಾಣದು.ದ್ವೈತ ಬೆಳೆಯುತ್ತದೆ.ದ್ವೈತದಲ್ಲಿ ಒಗ್ಗಟ್ಟು ಏಕತೆ ಸಮಾನತೆ ಇದ್ದರೂ ಅದ್ವೈತ ವೇ ಆಗುತ್ತದೆ. ಯಾವುದೇ ತತ್ವ ರಾಜಕೀಯದಲ್ಲಿ ದುರ್ಭಳಕೆ ಆದರೆ ಮಾತ್ರ ಅಧರ್ಮಕ್ಕೆ ಸ್ಥಾನಮಾನ ಹೆಚ್ಚುವುದು.ಬಹಳ ಕಷ್ಟವಿದೆ ಅಧ್ಯಾತ್ಮ ಸಂಶೋಧನೆ. ಅದಕ್ಕೆ ಬೆಳೆದಿದೆ ಭೌತಿಕ ಸಂಶೋಧನೆ.
ಇದು ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೆ ಮಾತ್ರ ಆಗುವುದು ಶೋಷಣೆ. ಶೋಷಣೆಯಿಂದ ಯಾವ ಸತ್ಯವೂ ಅರ್ಥ ವಾಗದು.
No comments:
Post a Comment