ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 19, 2024

ಶಿವರಾತ್ರಿಯ ಜಾಗರಣೆಯಿಂದ ಶಿವಮಯವಾಗುವುದೆ?

ಇತ್ತೀಚಿನ ದಿನಗಳಲ್ಲಿ ಪಕ್ಷ ಪಕ್ಷಗಳ ನಡುವೆ ನಿಂತು ಮಾಧ್ಯಮಗಳು ಪ್ರಸಾರ ಮಾಡುವ ಸುದ್ದಿಗಳಲ್ಲಿ ಅಡಗಿರುವ ದ್ವೇಷದ ಕಿಚ್ಚು ಯಾವ ದೇಶಕ್ಕೆ ಒಳಿತಾಗುವುದು ಕೆಡುಕಾಗುವುದೆನ್ನುವ ಸಾಮಾನ್ಯ ಜ್ಞಾನವಿಲ್ಲದೆ  ಜನರು ಅಸತ್ಯ ಅಧರ್ಮ ದೆಡೆಗೆ ನಡೆಯುತ್ತಿರುವುದು ಸಾಮಾನ್ಯವಿಚಾರವಾಗಿದೆ.ಆದರೆ ಪ್ರಜಾಪ್ರಭುತ್ವದ ಭಾರತಕ್ಕೆ ಇದೇ ದೊಡ್ಡ ಕಂಟಕತಂದೊಡ್ಡಿರೋದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಲು ಸೋತಿರೋದೇ ದುರಂತ. ಎಲ್ಲಾ ವಿನಾಶದತ್ತ ನಡೆದಿರುವಾಗ ತಡೆಯೋ ಶಕ್ತಿ ಆ ಬ್ರಹ್ಮನಿಗಿಲ್ಲ.ಎಲ್ಲಾ ಶಿವಮಯವೇ .
ಶಿವರಾತ್ರಿಯ ಜಾಗರಣೆ ಮಾಡಿದರೆ ಮುಕ್ತಿ ಸಿಗುವುದು ಪಾಪ ಕಳೆಯುವುದೆಂದು ರಾತ್ರಿಇಡೀ  ಮನರಂಜನೆಯಲ್ಲಿ ಮೈಮರೆತು ಬೆಳಿಗ್ಗೆ ಯಥಾಪ್ರಕಾರ ಅಸತ್ಯ ಅನ್ಯಾಯ ಅಧರ್ಮ ದಲ್ಲಿಯೇ  ಇದ್ದರೆ ಪ್ರಯೋಜನವೇನು?
ನಮ್ಮ ಆತ್ಮಕ್ಕೆ ಮುಕ್ತಿ ಸಿಗಬೇಕಾದರೆ ಮೊದಲು ಆಂತರಿಕ ಶುದ್ದತೆ ಇರಬೇಕು.ಇದನ್ನು ಹೊರಗಿನ ರಾಜಕೀಯದಿಂದ ಗಳಿಸಲಾಗದು. ಭೂಮಿ ಮೇಲೆ ನಿಂತು ಅವಳ ಋಣ ತೀರಿಸಲಾಗದೆ ಅವಳನ್ನೇ ದುರ್ಭಳಕೆ ಮಾಡಿಕೊಂಡು ದೇವರು ಧರ್ಮ ದೇಶ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರವನ್ನು ಪ್ರಚಾರ ಮಾಡಿದವರಿಗೆ  ದೈವತ್ವದ ಗುಣವಿದೆ ಎನ್ನಬಹುದಾದರೆ ಪ್ರತಿಯೊಬ್ಬರೂ ಮಧ್ಯವರ್ತಿಗಳೇ ಮಾನವರು ದೇವರಾಗಬಹುದಿತ್ತು. ಯಾಕಿಷ್ಟು ದ್ವೇಷ ಸೇಡು ಕೆಟ್ಟ ನಡೆ ನುಡಿಗಳಿಂದ  ಎಳೆದಾಡಿಕೊಂಡು ತಾವೂ ಸತ್ಯ ತಿಳಿಯದೆ ತಿಳಿದವರನ್ನೂ  ಮುಂದೆ ನಡೆಯದಂತೆ ತಡೆಯುವ  ಮಧ್ಯವರ್ತಿಗಳು ಬೆಳೆದಿರೋದಕ್ಕೆ ಕಾರಣ ಅಜ್ಞಾನ.
ಅಜ್ಞಾನಕ್ಕೆ ಕಾರಣ ಶಿಕ್ಷಣ.ಸರಿಯಾದ‌ಸಾತ್ವಿಕ ಶಿಕ್ಷಣ ನೀಡದೆ ರಾಜಕೀಯಕ್ಕೆ ಇಳಿದವರಿಗೆ ಹಣ ಅಧಿಕಾರ ಸ್ಥಾನಮಾನವೇ‌ಮುಖ್ಯವಾಗಿ ತನ್ನೊಳಗೇ ಅಡಗಿರುವ  ಜ್ಞಾನವನ್ನು  ಸದ್ಬಳಕೆ ಮಾಡಿಕೊಳ್ಳಲು ಸೋತು ಪರಕೀಯರ‌ವಿಜ್ಞಾನಕ್ಕೆ ಶರಣಾಗಿ ನಾನು ಸ್ವತಂತ್ರ ವಾಗಿದ್ದೇನೆಂಬ ಭ್ರಮೆಯಲ್ಲಿ  ಜನರ ದಾರಿತಪ್ಪಿಸಿ ಆಳುವ ಕುತಂತ್ರಕ್ಕೆ ಸರಿಯಾದ  ಶಿಕ್ಷೆ  ಅಗಲೇಬೇಕು.
ಶಿಕ್ಷೆ ನೀಡುವವರು  ಯಾರು? ಭ್ರಷ್ಟರ ಪರ ನಿಂತು ನ್ಯಾಯಾಧೀಶರು  ಹಣಕ್ಕಾಗಿ ವಾದ ಮಾಡಿದರೆ ನ್ಯಾಯದೇವತೆ ಸುಮ್ಮನಿರುವಳೆ? ಕಣ್ಣಿಗೆ ಕಾಣುವಂತೆ ಕಳ್ಳರು ಸುಳ್ಳರು ಭ್ರಷ್ಟರು ದುಷ್ಟರು ತಮ್ಮ ಕೆಲಸ ರಾಜಾರೋಷವಾಗಿ ಮಾಡಿಕೊಂಡು ಓಡಾಡುತ್ತಿದ್ದರೂ  ನಮಗೇನು  ನಾವು ಸುಖವಾಗಿದ್ದರೆ ಸರಿ ಎನ್ನುವ ಹಲವು ಮಾಧ್ಯಮಗಳು ಮಧ್ಯವರ್ತಿಗಳು ಅವರಿಗೇ ಮಣೆ ಹಾಕಿ‌ ಜನರ ಮುಂದೆ  ಮಾತನಾಡಲು ಅವಕಾಶಕೊಟ್ಟರೆ  ಅದು ಭ್ರಷ್ಟರ ತಪ್ಪಲ್ಲ. ಕಾರಣ ಅಜ್ಞಾನದಲ್ಲಿ  ಎಲ್ಲರೂ ನಾವು ಸರಿಯಾಗಿದ್ದೇವೆಂದೇ ನಡೆಯುವರು. ಅವರಿಗೆ ಸಿಗುವ ಸಹಕಾರ ಅಧಿಕಾರ ಸಹಾಯ ಜನಬಲ ಹಣಬಲವಂತೂ ಇನ್ನಷ್ಟು ದಷ್ಟಪುಷ್ಟವಾಗಿಸುತ್ತದೆ.ಇವೆಲ್ಲವೂ ಹೊರಗಿನಿಂದ ಜನರೇ ಕೊಟ್ಟಿರುವಾಗ  ಇದು ಜನರ ತಪ್ಪು.ಜನರಲ್ಲಿ ಅಜ್ಞಾನವಿದೆ.ಅಜ್ಞಾನ ಬೆಳೆಯಲು ಕಾರಣ ಶಿಕ್ಷಣದ ದೋಷ.ಆ ದೋಷವನ್ನು ಕಂಡೂ ನಮಗೂ ಸರ್ಕಾರಕ್ಕೂ ಸಂಬಂಧ ವಿಲ್ಲವೆಂದು  ನಾನೇ ಬೇರೆ ನೀವೇ ಬೇರೆ ಎಂದು ಧರ್ಮ ಧರ್ಮ ದ ನಡುವೆ ರಾಜಕೀಯಬೆರೆಸಿ ಶಿಕ್ಷಣ ಸರಿಪಡಿಸದಿರೋದೇ ಅಧರ್ಮಕ್ಕೆ/ಕಾರಣ. ಅಂದರೆ ಪ್ರತಿಯೊಂದು ಸಮಸ್ಯೆಯ ಮೂಲವೇ ಅಜ್ಞಾನ. ಅರ್ಧ ಸತ್ಯ ಅಪಾಯಕಾರಿ. ಪೂರ್ಣ ಸತ್ಯ ಫಲಕಾರಿ. ಸತ್ಯದಲ್ಲಿ ಆತ್ಮಸಾಕ್ಷಿ ಯೇ ದೊಡ್ಡದು. ಹಾಗಾದರೆ ಈಗ ರಾಜಕೀಯದಲ್ಲಿ ಆತ್ಮಸಾಕ್ಷಿ ಇದೆಯೆ? ಪ್ರಜೆಗಳಲ್ಲಿ ಆತ್ಮಸಾಕ್ಷಿ ಜಾಗೃತವಾಗಿದೆಯೆ? ಇಷ್ಟು ವರ್ಷ ಉಚಿತವಾಗಿ  ಪಡೆದವರು ಶ್ರೀಮಂತ ರಾದರೆ? ಭಾರತದ ಬಡತನಕ್ಕೆ ಅಜ್ಞಾನ ಕಾರಣವಾದಾಗ  ಜ್ಞಾನದ ಶಿಕ್ಷಣ ಯಾರು ಉಚಿತವಾಗಿ ನೀಡಿರುವರು? ಉಚಿತ ನೀಡಿದಷ್ಟೂ ಸಾಲ ಖಚಿತ ಎನ್ನುವ ಹಾಗೆ ನಾವು ಸತ್ಯ ತಿಳಿಸಿದಷ್ಟೂ ಅದನ್ನು ತಡೆಯಲು ತಿಳಿದವರೆ‌ಮಧ್ಯೆ ನಿಂತರೆ ಬೇಲಿಯೇ ಎದ್ದು ಹೊಲಮೇಯ್ದಂತಾಗುತ್ತಿದೆ. ಒಟ್ಟಿನಲ್ಲಿ ಸತ್ಯಕ್ಕೆ ಸಾವಿಲ್ಲ.ರಾಜಕೀಯದಲ್ಲಿ ಸತ್ಯವೇ ಇಲ್ಲ. ಸತ್ಯ ಯಾವತ್ತೂ ಒಂದೇ  ಇದ್ದಂತೆ ದೇಶ ಒಂದೇ ಇದೆ. ಇದಕ್ಕೆ ಯಾವುದೇ ಅಪಾಯವಿಲ್ಲ ಕಾರಣ ಇದರೊಳಗಿರುವ. ಅಸಂಖ್ಯಾತ ಧರ್ಮ ಜಾತಿ ಪಕ್ಷಕ್ಕೆ  ಸತ್ಯ ಬೇಡವಾಗಿರುವಾಗ ಬೇಡೋರೇ ಹೆಚ್ಚು.ಮತಬೇಟೆ ಗೆ ಹಣಬಳಸಿದರೆ‌ಜ್ಞಾನ ಕುಸಿಯುತ್ತದೆ.
ಜ್ಞಾನ ಕುಸಿದರೆ ಅಸುರಿ ಶಕ್ತಿ ಜಾಗೃತವಾಗುತ್ತದೆ..ಅಸುರಿ ಶಕ್ತಿ ಬೆಳೆದಾಗಲೇ ಈ ರೀತಿಯ ದ್ವೇಷ ಸೃಷ್ಟಿ ಯಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಸಾಯೋದು.ಒಟ್ಟಿನಲ್ಲಿ ಶಾಂತಿ ಸಿಗೋದು ಅಸುರರು ಸತ್ತಾಗಲೇ.ಇದು ನಮ್ಮ ದುರ್ಗುಣವಾಗಿದೆಜೀವ ಇದ್ದಾಗಲೇ  ನಮ್ಮ ದುರ್ಗುಣ ಅರ್ಥ ವಾದರೆ  ಹಿಂದೆ ತಿರುಗಿ ಬರಬಹುದು. ಹಿಂದುಳಿದವರಿಂದ ಹಿಂದೂ ದೇಶವಾಗೋದಿಲ್ಲ.ಅವರೊಳಗಿರುವ‌ಜ್ಞಾನವನ್ನು ಬೆಳೆಸಿ ಸ್ವತಂತ್ರ ಜೀವನ ನಡೆಸೋದರಿಂದಲೇ ಹಿಂದೂ ದೇಶ ಆಗೋದು. ಇಲ್ಲಿ ಎಲ್ಲಾ ಹಿಂದೂಗಳೆ ಕಾರಣ ಭಾರತಮಾತೆ ಹಿಂದೂ ಮಾತೆ.ಅವಳೊಳಗೆ ಇರುವಾಗ ನಾವು ಬೇರೆಯೆ?

No comments:

Post a Comment