ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 19, 2024

ಜನಸಂಖ್ಯೆ ಸ್ಪೋಟಕ್ಕೆ ಕಾರಣವೇನು?

ಜನಸಂಖ್ಯೆಯ ಲೆಕ್ಕಾಚಾರದ ಪ್ರಕಾರ ಹೆಚ್ಚು ಜನರಿಗೆ ಹೆಚ್ಚು ಹಣದ ಅಗತ್ಯವಿದೆ. ಭಾರತದಲ್ಲಿ ಜನಸಂಖ್ಯಾ ಸ್ಪೋಟವಾಗುತ್ತಿದೆ ಎಂದಾಗ ಹಣದಿಂದ ಇದನ್ನು ಸರಿಪಡಿಸಬಹುದೆ ಎನ್ನುವ ಪ್ರಶ್ನೆಗೆ ಉತ್ತರ ಭೌತವಿಜ್ಞಾನ ಸಾಧ್ಯವೆಂದು  ಒಪ್ಪಿಕೊಂಡರೆ  ಅಧ್ಯಾತ್ಮ ವಿಜ್ಞಾನ ಒಪ್ಪದಿರಬಹುದು.ಇಲ್ಲಿ ಜನರೊಳಗಿರುವ ಜ್ಞಾನದ‌ಮೇಲೇ‌ದೇಶದ ಭವಿಷ್ಯವಿರುವುದರಿಂದ ಜ್ಞಾನವಿದ್ದವರಿಗೆ ಅಲ್ಪ ಹಣವೂ ಬಂಡವಾಳವಾಗಿರುತ್ತದೆ. ಅಜ್ಞಾನದಲ್ಲಿದ್ದವರಿಗೆ‌ಕೋಟಿ ಹಣವಿದ್ದರೂ ನೋಟಷ್ಟೆ ಕಾಣೋದು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಸುಜ್ಞಾನವಿದ್ದರೆ  ಪ್ರಗತಿಸಾಧ್ಯವಿದೆ.
ಅನಾವಶ್ಯಕ ವಾಗಿ ಚುನಾವಣೆಗಳಲ್ಲಿ ಸುರಿಯುವ ಹಣವೂ ದೇಶದ್ದೇ  ಹಾಗೆ ಅನಾವಶ್ಯಕ ಕಾರ್ಯಕ್ರಮ, ಸಮಾರಂಭ, ಜನರಿಗೆ ಹಣಹಂಚಿಕೊಂಡು ಸೇರಿಸುವ  ಸಮಾವೇಷಗಳೇ  ಜನರನ್ನು ದಾರಿತಪ್ಪಿಸಿ ನಡೆಸಿದಾಗ ಜನಸಂಖ್ಯೆ ಮಿತಿಮೀರಿ ಹೋಗುತ್ತದೆ.
ಹಿಂದಿನ ಕಾಲದಲ್ಲಿದ್ದ ಸ್ವಾವಲಂಬನೆ ಗೂ ಇಂದಿನ ಸ್ವಾವಲಂಬನೆ ಗೂ ವ್ಯತ್ಯಾಸವಿದೆ. ಇಂದು ತನ್ನ ವಿದ್ಯೆಗೆ ತಕ್ಕಂತೆ ಕೆಲಸ ಮಾಡಿ ತನ್ನ ಜೀವನ ನಡೆಸೋದೇ ಸ್ವಾವಲಂಬನೆ ಎನ್ನುವ ಮಂದಿಗೆ ಎಷ್ಟು ಹಣಸಂಪಾದಿಸಿದರೂ  ತೃಪ್ತಿ ಯಿಲ್ಲ ಕಾರಣ ಅವರಲ್ಲಿ ಸಂಸಾರ ಬೇರೆ ಸಮಾಜ ಬೇರೆ ಎನ್ನುವ ಮನಸ್ಥಿತಿ ಇದ್ದು ಸರ್ಕಾರ ಎಲ್ಲರನ್ನೂ ನೋಡಿಕೊಳ್ಳಬೇಕೆಂಬ ಅಜ್ಞಾನವಿರುತ್ತದೆ. ಆದರೆ ಹಿಂದಿನ ಕಾಲದಲ್ಲಿ ತಮ್ಮ ಜ್ಞಾನಕ್ಕೆ ತಕ್ಕಂತೆ ಧರ್ಮ ಕರ್ಮ ವನರಿತು ಸ್ವತಂತ್ರ ವಾಗಿದ್ದು  ಒಗ್ಗಟ್ಟಿನಿಂದ  ಸಂಸಾರದೊಳಗಿದ್ದು ಸಮಾಜ ಸೇವೆ ಯಲ್ಲಿ ತೊಡಗಿಸಿಕೊಂಡವರಿಗೆ ಹಣವಿಲ್ಲದಿದ್ದರೂ  ಸುಜ್ಞಾನವಿದ್ದ ಕಾರಣ ಸ್ವಾವಲಂಬನೆ ಯ ಸುಖವಿತ್ತು.ಕಷ್ಟಪಟ್ಟು ದುಡಿದು ದೊಡ್ಡ ಸಂಸಾರವನ್ನು ನಡೆಸಿದ್ದ ಅವರನ್ನು  ಯಾವುದೇ ಹೊರಗಿನ  ಸರ್ಕಾರ ನಡೆಸಿರಲಿಲ್ಲ ಅಂದರೆ ಅಂದಿನ ರಾಜಪ್ರಭುತ್ವದ  ಶಿಕ್ಷಣವು  ಆಂತರಿಕ ಜ್ಞಾನಕ್ಕೆ  ಪೂರಕವಾಗಿದ್ದು ಅವರವರ ಧರ್ಮ ಕರ್ಮ ದ ಮಧ್ಯೆ ಯಾರೂ ಹೊರಗಿನವರ ಪ್ರವೇಶವಿರದ ಕಾರಣ ಒಗ್ಗಟ್ಟು ಹೆಚ್ಚಾಗಿದ್ದು ಗುರುಹಿರಿಯರು  ಅಧ್ಯಾತ್ಮಿಕ  ಮಾರ್ಗದಲ್ಲಿ  ಕಿರಿಯರನ್ನು ಸ್ವತಂತ್ರ ವಾಗಿದ್ದು ನಡೆಸಲಾಗಿತ್ತು. ಹೀಗಾಗಿ ಬಡತನ ಹಣದಲ್ಲಿ ಕಂಡರೂ ಜ್ಞಾನದ ಶ್ರೀಮಂತಿಕೆ  ಜನರಲ್ಲಿ ಸ್ವಾವಲಂಬನೆ ಕಡೆಗೆ  ನಡೆಸಿತ್ತು. ಈಗಿದು ಅಜ್ಞಾನದೆಡೆಗೆ ನಡೆಸಿ  ಮನೆಮನೆಯೊಳಗೆ ಜನರಿಲ್ಲ ಹೊರಗೆ ಜನಸಂಖ್ಯೆ ಮಿತಿಮೀರಿದೆ. ಮನಸ್ಸು ಹೊರನಡೆದಷ್ಟೂ ಹಿಡಿತ
ಕಳೆದುಕೊಂಡು  ಮನುಷ್ಯತ್ವ ಕಳೆದುಕೊಳ್ಳುತ್ತದೆ. ಜನಸಂಖ್ಯೆ ನಿಯಂತ್ರಣಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದರೂ ಸತ್ವ ಸತ್ಯ ತತ್ವ ಇಲ್ಲದ  ಮಾನವನ ಮನಸ್ಸು  ಬೇರೆ ಬೇರೆಯಾಗಿರುವಾಗ  ಏಕತ್ವ ಏಕತೆ,ಐಕ್ಯತೆ,ಸಮಾನತೆಯ ಕೊರತೆ ಹೆಚ್ಚಾಗುತ್ತದೆ.ಇದನ್ನು ದುರ್ಭಳಕೆ ಮಾಡಿಕೊಂಡು ಆಳುವವರೂ ಬೆಳೆಯುವರು.
ಪ್ರಜಾಪ್ರಭುತ್ವದಲ್ಲಿ ಆಳು ಯಾರು ಅರಸರು ಯಾರು? 
ಇಷ್ಟು ದೊಡ್ಡ ಜನಸಂಖ್ಯೆಯುಳ್ಳ ದೇಶವನ್ನು ಆಳುವುದೇ ದೊಡ್ಡ ಸಾಧನೆ. ಆದರೆ  ಜನರೇ ಆಳುವವರನ್ನು ದಾರಿತಪ್ಪಿಸಿ ನಡೆಸಿದರೆ  ಇದರರ್ಥ ಅಜ್ಞಾನ ಮಿತಿಮೀರಿದೆ. ಅಜ್ಞಾನದ ಜನರನ್ನು ಆಳೋದಕ್ಕೆ ಹಣ ಬೇಕಿದೆ.ಹಣ ಭ್ರಷ್ಟಾಚಾರದಿಂದ ಗಳಿಸಿರುವಾಗ ಜನರೂ ಭ್ರಷ್ಟ ರ ವಶದಲ್ಲಿದ್ದಾರೆ. ಇದರ ಫಲ ಮಕ್ಕಳು ಮಹಿಳೆಯರ ಮೇಲೂ ಸಾಲದ ಹೊರೆ ಏರಿದೆ.
ತೀರಿಸಲು ಮನೆಯಿಂದ ಮಹಿಳೆ ಮಕ್ಕಳು ಹೊರಬಂದು ದುಡಿಯುವಂತಾಗಿದೆ.ಮನೆ ಖಾಲಿಯಾದಾಗ  ದೇವರಿರುವರೆ?
ಮನಸ್ಸಿನಲ್ಲಿ ದೇವರನ್ನು ನೆನಪಿಸಿಕೊಂಡು ಸತ್ಕರ್ಮದಿಂದ ಸ್ವಧರ್ಮದಿಂದ ಸುಜ್ಞಾನದಿಂದ ಸ್ವತಂತ್ರ ಜೀವನ ನಡೆಸಿದ ಹಿಂದಿನ ಮಹಾತ್ಮರಿಗೂ‌ಇಂದಿನವರಿಗೂ ಅಂತರ ಬೆಳೆದು ಆ ಅಂತರದಲ್ಲಿ ಮಧ್ಯವರ್ತಿಗಳು ಸ್ವತಂತ್ರ ವಾಗಿ ಏನೂ ಕೆಲಸ ಮಾಡದೆಯೇ ಜನರನ್ನು ಆಳುತ್ತಿರುವುದೆ ಭ್ರಷ್ಟ ರಾಜಕೀಯ.
ಪರಮಾತ್ಮನ ಕಾಣೋದಕ್ಕೆ  ಎಲ್ಲಿದ್ದರೇನು? ಹಣ ಬೇಕೆ ಜ್ಞಾನ ಬೇಕೆ?
ಜ್ಞಾನವಿದ್ದವರಿಗೆ ಹಣವಿಲ್ಲ.ಹಣವಿದ್ದವರಿಗೆ ಸುಜ್ಞಾನದ
ಕೊರತೆಯಿದೆ. ದೇಶದ ಸಾಲ ತೀರಿಸದೆ ವಿದೇಶಿ ಸಾಲಕ್ಕೆ ಬೇಡಿಕೆಯಿಟ್ಟರೆ ಏನರ್ಥ? ದೇಶದ ತುಂಬಾ  ಶ್ರೀಮಂತರು ಇದ್ದರೂ  ಸಾಲ ತೀರಿಸಲು  ತಯಾರಿಲ್ಲ. ಬಡವರನ್ನು ಆಳಲು ಹಣದ ಬಳಕೆಯಾಗಿದೆ ಎಂದರೆ ಧರ್ಮ ಯಾವುದು ಎಲ್ಲಿದೆ?
ಇಷ್ಟಕ್ಕೂ  ದೇಶದೊಳಗೆ ಇದ್ದ ಮೇಲೆ ಎಲ್ಲಾ ದೇಶದ ಸಾಲ.ಆ ಸಾಲ ತೀರಿಸಲು ಸ್ವಧರ್ಮ ಸುಜ್ಞಾನ ದಿಂದ ಸ್ವಾವಲಂಬನೆ ಕಡೆಗೆ ನಡೆಯಲೇಬೇಕಿದೆ. ಇದನ್ನು ತಿಳಿಸುವ ಸುಶಿಕ್ಷಣ ಅಗತ್ಯವಿದೆ. ನಮ್ಮ ಶಿಕ್ಷಣವೇ  ಇದಕ್ಕೆ ಬಂಡವಾಳವಾಗಿತ್ತು.
ಮಕ್ಕಳಿಗೆ ಕೊಡುವ  ಶಿಕ್ಷಣವೇ ಪೋಷಕರ ಭವಿಷ್ಯಕ್ಕೆ ಆಧಾರ. ನಮ್ಮನ್ನು ನಾವರಿತು ನಡೆಯೋ ಜನಸಂಖ್ಯೆಯಿಂದ ಶಾಂತಿಯಿರುತ್ತದೆ. ಪರಕೀಯರನ್ನು ಅರಿತು ನಡೆದಷ್ಟೂ ಅಶಾಂತಿಯ ಜೀವನ.ಯಾವುದೂ ಅತಿಯಾಗಬಾರದಷ್ಟೆ.
ಎಷ್ಟೋ ಯುದ್ದಗಳಾಗಿವೆ ಸಾವು ನೋವಾಗಿದೆ ಆದರೆ ಜನಸಂಖ್ಯೆ ಕಡಿಮೆಯಾಗಿಲ್ಲವೆಂದರೆ ಜೀವಾತ್ಮನಿಗೆ ಮುಕ್ತಿ ಸಿಗದೆ‌ಪುನರ್ಜನ್ಮ ಹೆಚ್ಚಾಗಿದೆ. ಜನ್ಮಕ್ಕೆ ಕಾರಣ ಹಿಂದಿನ ಜನ್ಮದ ಋಣ ಅಥವಾ ಸಾಲವಾಗಿದೆ.ಇದನ್ನು ತೀರಿಸಲು ಸತ್ಯಜ್ಞಾನದ ಶಿಕ್ಷಣವಿರಬೇಕು.ಸತ್ಯವೇ ಇಲ್ಲದ ಮಿಥ್ಯ ಶಿಕ್ಷಣದಿಂದ ಹಣ ಸಿಗಬಹುದು  ಹಣವನ್ನು ಸದ್ಬಳಕೆ ಮಾಡಿಕೊಂಡು ಬದುಕುವ ಕಲೆಯ ಅಗತ್ಯವಿದೆ. ಇದೇ ಭಾರತದ ಸಮಸ್ಯೆಗೆ ಕಾರಣವಾಗುತ್ತಿದೆ.ಬದಲಾವಣೆ ಜನರೊಳಗೆ ಆದರೆ  ಸಮಸ್ಯೆಗೆ ಪರಿಹಾರ ಒಳಗೇ ಸಿಗುತ್ತದೆ.
ರಾಜಕೀಯವಿದ್ದರೆ  ಕಷ್ಟ.ಯಾರು ಯಾರನ್ನೂ ಆಳಲಾಗದು.
ಇಂದಿನ ರಾಜ ಮುಂದಿನ ಸೇಕನಾಗಬಹುದು.ಇಂದಿನ ಬಿಕ್ಷು ಮುಂದಿನ‌  ಬಿಕ್ಷುಕನಾಗಲಾರ.ಬಿಕ್ಷುಗಳಿಂದ ಯೋಗಿಗಳಿಂದ ಆರೋಗ್ಯವಾಗಿದ್ದ ದೇಶವನ್ನು  ಭೋಗದೆಡೆಗೆ ನಡೆಸುತ್ತಾ ಬಿಕ್ಷುಕರ ದೇಶವಾಗಿಸಿರೋದೇ ಅಜ್ಞಾನ. ಪರಿಹಾರ ಜ್ಞಾನದ ಶಿಕ್ಷಣವಾಗಿತ್ತು. ಮಕ್ಕಳ ಪ್ರತಿಭೆ,ಜ್ಞಾನ ಆಸಕ್ತಿಯನ್ನು ಗುರುತಿಸಿ ಪೂರಕವಾದ ಶಿಕ್ಷಣ ನೀಡುವುದೇ ಪೋಷಕರ ಧರ್ಮ.ಹಾಗೆ ದೇಶದ ಪೋಷಣೆಯೂ  ಪ್ರಜೆಗಳ ಸುಜ್ಞಾನದಲ್ಲಿದೆ.  ರಾಜಕಾರಣಿಗಳು ಜ್ಞಾನಿಗಳನ್ನು ಸಾಕುವಂತಾಗಬಾರದು .ಜ್ಞಾನಕ್ಕೆ ಅಧಿಕಾರ ಹಣಕ್ಕಿಂತ ಮುಖ್ಯ  ಗುಣವಾಗಿರುತ್ತದೆ. ಸದ್ಗುಣಸಂಪನ್ನರಿಗೆ  ರಾಜಕೀಯ  ಹಿಡಿಸೋದಿಲ್ಲ.ಹೀಗಾಗಿ ರಾಜಕೀಯ  ಇಂದು ದಾರಿತಪ್ಪಿ ನಡೆದಿದೆ. ಎಲ್ಲಾ ನೋಡುತ್ತಿರುವ ಪರಮಾತ್ಮನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಾಗ ಭ್ರಷ್ಟಚಾರ  ಹೇಗೆ ಬೆಳೆಯಿತು? ಬೇಲಿಯೇ ಎದ್ದು ಹೊಲಮೇಯ್ದರೆ   ಸಂಸಾರದಲ್ಲಿ ಸತ್ಯ ಸತ್ವ ತತ್ವವಿರದು.
ಪುರಾಣ ಭವಿಷ್ಯದ ನಡುವರಿರುವ ವರ್ತಮಾನ ದ ಸ್ಥಿತಿ ಯನರಿಯುವುದೇ ಸ್ಥಿತಪ್ರಜ್ಞಾವಂತರ ಲಕ್ಷಣ. ನಮ್ಮ ಈ ಸ್ಥಿತಿಗೆ ‌ನಮ್ಮ ಸಹಕಾರವೇ ಕಾರಣ.

No comments:

Post a Comment