ಭೂಮಿಯ ಮೇಲಿರುವಮನುಕುಲಕ್ಜಕೆ ಆಶ್ರಯ ನೀಡಿದ ಭೂಮಾತೆ, ಭಾರತೀಯರಿಗೆ ಭಾರತಮಾತೆ, ಕನ್ನಡಿಗರಿಗೆ ಕನ್ನಡ ಮಾತೆ, ಹೆತ್ತ ತಾಯಿಯರ ಹಿಂದೆ ನಡೆದವರು ವಿರಳ.
ಪರಮಾತ್ಮನ ಒಂದಂಶವಾಗಿರುವ ಭೂಮಿಯಲ್ಲಿ ಜನ್ಮ ಪಡೆದ ಮೇಲೆ ಭೂಮಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಪರಮಾತ್ಮನ ದರ್ಶ ನವಾಗೋದು ಕಷ್ಟ. ಅರ್ಥ ವಾದರೂ ಭೂಮಿಯ ಋಣ ತೀರಿಸೋದು ಇನ್ನೂ ಕಷ್ಟ ಹೀಗಾಗಿ ಹೊರಗಿನರಾಜಕೀಯ ಮಿತಿಮೀರಿದೆ. ತಮ್ಮೆಡೆ ಸೆಳೆದು ಆಳುವ ಅನೇಕರ ಹಿಂದೆ ನಡೆದಷ್ಟೂ ಜೀವಕ್ಕೆಸುಸ್ತು ನಿಜವಾದ ಮಹಾತ್ಮರು ನಿನ್ನ ನೀ ತಿಳಿದು ನಡೆ ಎನ್ನುವ ದಾರಿ ತೋರಿಸಿ ಸ್ವತಂತ್ರವಾಗಿರುವರು ತನ್ನ ಹಿಂದೆ ಎಷ್ಟು ಜನರಿದ್ದಾರೆಂದು ಲೆಕ್ಕಹಾಕೋರಿಗೆ ತನ್ನ ಲೆಕ್ಕಾಚಾರ ತಪ್ಪಾಗಿರೋದೇ ಅರ್ಥ ವಾಗಿರದು.
ಇದನ್ನು ಧಾರ್ಮಿಕ ಕ್ಷೇತ್ರದಲ್ಲಿಯೂ ಕಾಣುತ್ತಿರುವಾಗ ಭಗವಂತನ ಲೆಕ್ಕಾಚಾರ ಅರ್ಥ ವಾಗದೆ ಜೀವ ಹೋಗುತ್ತದೆ.
ಇದನ್ನೇ ರಾಜಕೀಯದವರೂ ಮಾಡಿದಾಗ ತಪ್ಪು ಎನ್ನುವ ಬದಲು ಅದರ ಮೂಲ ಯಾವುದೆನ್ನುವ ಬಗ್ಗೆ ಗಮನಹರಿಸುವುದಕ್ಕೆ ನಮ್ಮಲ್ಲಿ ಸತ್ಯಜ್ಞಾನವಿರಬೇಕಿದೆ. ಸತ್ಯವಿಲ್ಲದ ಮಿಥ್ಯ ಜಗತ್ತನ್ನು ಆಳೋದಕ್ಕೆ ಇಷ್ಟು ರಾಜಕೀಯ ಬೆಳೆದು ನಿಂತಿರುವಾಗ ಯಾರನ್ನೂ ಯಾರೋ ಆಳಿ ಅಳಿಸುವುದೇ ಜೀವನದ ಸಾಧನೆ ಎನ್ನುವ ಮಟ್ಟಿಗೆ ಮಾನವ ಬೆಳೆದು ತನ್ನ ಅಸ್ತಿತ್ವಕ್ಕೆ ತಾನೇ ಹೋರಾಟಮಾಡುವಂತಾಗಿರೋದು ವಾಸ್ತವ ಸತ್ಯ.
ಆಧಾರ್ ಕಾರ್ಡ್ ಇಲ್ಲದೆ ಜೀವನವಿಲ್ಲ ಎನ್ನುವ ಹಂತಕ್ಕೆ ಬಂದಿರುವ ವ್ಯವಹಾರಿಕ ಜೀವನದಲ್ಲಿ ನಮಗೆ ಆಧಾರವಾಗಿ ನಿಂತಿರುವ ಪರಮಾತ್ಮನೆಲ್ಲಿ ಕಾಣುವನು?
ಸ್ವತಂತ್ರವಾಗಿ ಮುಂದೆ ನಡೆದಿದ್ದ ಭಾರತವನ್ನು ಆಳಲು ಬಂದವರು ಈಗಲೂ ಶಿಕ್ಷಣ ವ್ಯವಹಾರ ಬಂಡವಾಳ ಸಾಲದ ಮೂಲಕ ಒಳಗೇ ಇದ್ದರೂ ನಾವು ಸ್ವತಂತ್ರ ರೆನ್ನುವ ಭ್ರಮೆಯಲ್ಲಿ ನಮ್ಮವರನ್ನೇ ಆಳಲು ಹೊರಟವರೆ ದೊಡ್ಡವರಾಗಿರೋದು. ದೊಡ್ಡವರ ಒಳಗಿರೋರು ಯಾರು?
ಮತದಾನ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವಾಗ ಮತದಾತರಲ್ಲಿ ಜ್ಞಾನವಿದ್ದರೆ ಉತ್ತಮ.ಅಜ್ಞಾನವೇ ಇದ್ದರೆ ? ಜನಸಂಖ್ಯೆ ಯ ಆಧಾರದಲ್ಲಿ ಭಾರತ ಮಹಾದೇಶವಾಗುತ್ತಿದೆ ಇಂತಹ ಮಹಾದೇಶವನ್ನು ಆಳೋದಕ್ಕೆ ಪೈಪೋಟಿ ಹಗರಣ ಭ್ರಷ್ಟಾಚಾರ ಹೋರಾಟ ಹಾರಾಟಮಾರಾಟ ನಡೆದಿದೆ.ಇಲ್ಲಿ ಮಹಾತ್ಮರ ಹಿಂದೆ ನಡೆದವರೆಷ್ಟು ಮಂದಿ ಸ್ವತಂತ್ರ ಜೀವನ ನಡೆಸಲಾಗುತ್ತಿದೆ? ಎಲ್ಲಾ ಪ್ರಜೆಗಳ ಹಣದಿಂದಲೇ ನಡೆದಿರುವಾಗ ಪ್ರಜೆಗಳನ್ನು ಹಿಡಿದಿಟ್ಟುಕೊಂಡು ತನ್ನ ವಶಪಡಿಸಿಕೊಂಡರೆ ಧರ್ಮ ವೆ?
ಹೋಗಲಿ ಅವರಿಗೆ ಸ್ವತಂತ್ರ ಜ್ಞಾನದ ಶಿಕ್ಷಣ ನೀಡಿ ಸತ್ಯ ಧರ್ಮ ದಿಂದ ಜೀವನ ನಡೆಸಿದ್ದರೆ ಪರಮಾತ್ಮ ಒಲಿಯಬಹುದು. ಇದಕ್ಕೆ ವಿರುದ್ದ ನಡೆದವರನ್ನು ತಮ್ಮ ವಶಪಡಿಸಿಕೊಂಡರೆ ಸಮಸ್ಯೆಯನ್ನು ಮೈಮೇಲೆಳೆದುಕೊಂಡಂತೆ.ಭಾರ ತಾಳಲಾರದೆ ಜೀವ. ಹೋಗುತ್ತದೆ.
ಭೂತಾಯಿಯ ಋಣ ತೀರಿಸುವಮಹಾತ್ಮರು ಭೂಮಿಯನ್ನು ಆಳೋದಿಲ್ಲ. ಆಳೋರಿಗೆ ಧರ್ಮ ಮಾರ್ಗ ತೋರಿಸಿ ಸತ್ಯದ ಕಡೆಗೆ ನಡೆಸುವರಷ್ಟೆ. ಇಂದು ತಾನೇ ಅಧರ್ಮಕ್ಕೆ ತಲೆಬಾಗಿ ಭ್ರಷ್ಟ ದುಷ್ಟ ರ ಹಣ ಪಡೆದು ಜನರನ್ನು ಆಳೋದಕ್ಕೆ ನಾಟಕ ಮಾಡಿಕೊಂಡಿರುವವರ ವೇಷ ಯಾರಿಗೂ ಕಾಣದಿರೋದಕ್ಕೆ ಅಜ್ಞಾನ ಕಾರಣ.ಕಲಿಗಾಲದ ಮಹತ್ವ ಕಲಿಕೆಯೇ ಸರಿಯಿಲ್ಲದೆ ನಡೆ ನುಡಿ ಸರಿಪಡಿಸಲಾಗದು. ಪ್ರಚಾರಕ್ಕೆ ಸತ್ಯ ಧರ್ಮ ವಿದೆ ಅದರೆಡೆಗೆ ನಡೆಯೋರಿಗೆ ತಡೆಯಿದೆ ಎಂದರೆ ಮಧ್ಯವರ್ತಿ ಮಾನವನಿಗೆ ತನಗೆ ತಾನೇ ಮೋಸಹೋಗುತ್ತಿದ್ದರೂ ಅರ್ಥ ವಾಗದಮನಸ್ಥಿತಿ ಪರಿಸ್ಥಿತಿ ಬೆಳೆದಿರೋದೇ ರಾಜಕೀಯವಾಗಿದೆ. ಎಲ್ಲಿಯವರೆಗೆ ತತ್ವದಲ್ಲಿ ರಾಜಕೀಯಕ್ಕೆ ಬೆಲೆಯಿರುವುದೋ ಅಲ್ಲಿಯವರೆಗೆ ತಂತ್ರ ಕುತಂತ್ರದಿಂದ ಜನರನ್ನು ಆಳುತ್ತಿರುವುದು. ಇದರಿಂದಾಗಿ ಸ್ವತಂತ್ರ ಜ್ಞಾನ ಹಿಂದುಳಿಯುವುದು.
ಸ್ವತಂತ್ರ ಭಾರತವನ್ನು ಆಳಿದವರ ಗತಿ ಏನಾಗಿದೆ ಏನಾಗುತ್ತಿದೆ ದೇಶ ಎತ್ತ ಸಾಗುತ್ತಿದೆ.ಇದಕ್ಕಾಗಿ ಮಾಡಿದ ಸಾಲ ಎಷ್ಟು? ಪರಮಾತ್ಮನ ಕಂಡವರೆಷ್ಟು ಮಂದಿ ರಾಜಕೀಯ ನಡೆಸಿದ್ದರು? ಮಹಾತ್ಮರ ದೇಶದಲ್ಲಿ ಪಾಪಿಷ್ಟರೆ ಬೆಳೆದಿರಲು ಕಾರಣವೇನು? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ. ಪರಮಾತ್ಮ ನಮ್ಮೊಳಗೇ ಇದ್ದರೂ ಹೊರಗಿನ ವ್ಯಕ್ತಿಯ ಹಿಂದೆ ಹೋಗುವ ಮೊದಲು ಅವರಲ್ಲಿ ಸತ್ಯವಿದೆಯೆ ಮಿಥ್ಯವಿದೆಯೆ ರಾಜಯೋಗವಿದೆಯೆ ರಾಜಕೀಯವಿದೆಯೆ ಎನ್ನುವ ಸಾಮಾನ್ಯ ಜ್ಞಾನವಿದ್ದರೆ ಮಾನವಮಹಾತ್ಮರ ಹಿಂದೆ ನಡೆಯಬಹುದಲ್ಲವೆ? ಲಾಭನಷ್ಟ ಹಣದಲ್ಲಿ ಕಾಣಬಹುದು.ಜ್ಞಾನದಲ್ಲಿ ಕಾಣಲಾಗದು.ಭಾರತೀಯರ ಜ್ಞಾನ ಶಕ್ತಿ ಹಿಂದುಳಿಸಿ ಆಳೋದೇ ಅಜ್ಞಾನದ ಲಕ್ಷಣ. ಇದಕ್ಕೆ ನಮ್ಮದೇ ಸಹಕಾರವಿದ್ದಾಗ ಅದರ ಪ್ರತಿಫಲ ಅನುಭವಿಸಲೇಬೇಕು.ಮಾಡಿದ್ದುಣ್ಣೋ ಮಹಾರಾಯ ಎನ್ನುವುದು ಇದಕ್ಕೆ ಇರಬೇಕು. ಭೂಮಿಯಲ್ಲಿ ದೇವಾಸುರರು ತಮ್ಮ ಸ್ಥಾನಮಾನಕ್ಕೆ ಹೋರಾಟ ಮಾಡೋದು ಯುಗಯುಗದ ಸತ್ಯ.ಸತ್ಯವೇ ದೇವರು ಎಂದಾಗ ಸತ್ಯದಲ್ಲಿ ಜನರನ್ನು ನಡೆಸುವವರಿದ್ದಾರೆಯೆ? ನಡೆಸಲಾಗದೆ ಹೋದವರಿದ್ದಾರೆ. ಕಾರಣ ಇಲ್ಲಿ ಸತ್ಯ ಒಳಗಿರುವಾಗ ಹೊರಗಿನ ಸತ್ಯ ಅದನ್ನು ವಿರೋಧಿಸುತ್ತದೆ.ಸುಮ್ಮನೆ ವಿರೋಧಕಟ್ಟಿಕೊಂಡು ಇರುವ ಧರ್ಮ ಕರ್ಮ ಬಿಟ್ಟರೆ ನಷ್ಟ ಹೀಗಾಗಿ ಮೌನವಾಗಿ ತಮ್ಮ ಜ್ಞಾನವನರಿತು ಸ್ವತಂತ್ರ ಜೀವನ ನಡೆಸಿದವರೆ ಮಹರ್ಷಿಗಳಾದರು.ಅಂತಹ ಋಷಿ ಪರಂಪರೆಯ ತಳಿಗಳಾಗಿರುವ ಇಂದಿನ ಜನರನ್ನು ಯಾರ ಖುಷಿಗಾಗಿ ದುರ್ಭಳಕೆ ಮಾಡಿಕೊಂಡರೂ ಹೇಳುವಂತಿಲ್ಲ.ಹೇಳಿದರೂ ಅರ್ಥ ವಾಗದೆ ಕೇಳೋರಿಲ್ಲ ಎಂದರೆ ಒಳಗೇ ಅಸುರಿ ಶಕ್ತಿ ಬೆಳೆದಿರುವಾಗ ಏನೂ ಮಾಡಲಾಗದು. ಭೂಮಿ ಎಲ್ಲವನ್ನೂ ಸಹಿಸಿಕೊಳ್ಳುವಳೆಂಬುದು ಸುಳ್ಳು.ಒಮ್ಮೆ ಅಲ್ಲಾಡಿದರೆ ಜೀವ ಉದುರಿಹೋಗುವುದು. ಇದಕ್ಕೆ ಹೇಳೋದು ತಾಯಿಯ ಋಣ ತೀರಿಸಲಾಗದೆಂದು.ವಿಶ್ವದ ದೈವಮೂಲೆಯಲ್ಲಿರುವ ಭಾರತ ಮಾತೆ ಕನ್ನಡಮ್ಮನ ಋಣ ತೀರಿಸಲು ರಾಜಕೀಯ ಬೇಕೆ? ರಾಜಯೋಗವೆ?
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧರ್ಮ ಯಾವುದು ಎಲ್ಲಿದೆ? ಒಳಗೋ ಹೊರಗೋ?ಒಳಗಿನ ಶಿಕ್ಷಣ ಬಿಟ್ಟು ಹೊರ ನಡೆದವರ ಹಿಂದೆ ಸಾಕಷ್ಟು ಜನರುನಡೆದು ರಾಜಕೀಯ ನಡೆಸಿದ್ದಾರೆ. ಇದನ್ನು ಧರ್ಮ ಎನ್ನಬೇಕೋ ಅಧರ್ಮ ಎನ್ನಬೇಕೋ ಪ್ರಜೆಗಳೇ ನಿರ್ಧಾರ ಮಾಡಿಕೊಂಡರೆ ಆತ್ಮನಿರ್ಭರ ಭಾರತವಾಗುವುದು. ಸರ್ಕಾರ ಬೇಕು ಆದರೆ ಅದು ತನ್ನ ತಾನರಿತಿರಬೇಕು. ತಾನೇ ದಾರಿತಪ್ಪಿರುವಾಗ ಜನರನ್ನು ದಾರಿತಪ್ಪಿಸಿ ಆಳುವುದು ಅಧರ್ಮ. ಇದಕ್ಕೆ ಮತದಾತರು ಸಹಕರಿಸಿದರೆ ಮುಗಿಯಿತು ಕಥೆ.
ಶೇ 40 ರಿಂದ50 ಮತದಾನವಾಗಿದ್ದರೆ ಉಳಿದವರು ಯಾರು? ದೇಶದೊಳಗೆ ಇದ್ದು ದಾರಿತಪ್ಪಿಸಿ ಆಳುವ ಮಧ್ಯವರ್ತಿಗಳು ಈ ಕಡೆ ಯಾವಪಕ್ಷದ ಪರ ವಿರೋಧವಿಲ್ಲದೆ ವ್ಯವಹಾರಕ್ಕೆ ಇಳಿದು ಜನರಲ್ಲಿ ಪಕ್ಷಗಳ ನಡುವೆ ದ್ವೇಷ ಹೆಚ್ಚಿಸುವತ್ತ ಕೆಲಸ ಮಾಡಿದರೆ ದೇಶಭಕ್ತಿ ಎನ್ನಬಹುದೆ? ಇಂತಹ ತಂತ್ರಗಾರಿಕೆಯೇ ದೇಶದ ಸ್ವತಂತ್ರ ಹಾಳು ಮಾಡಿರುವಾಗ ಇದರ ಬಗ್ಗೆ ಜನ ಎಚ್ಚರ ವಾಗಲು ಜ್ಞಾನವಿರಬೇಕಿದೆ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ಅದರ ಹಿಂದೆ ನಡೆದವರಿಗೆ ಪರಮಾತ್ಮನ ದರ್ಶನ ವಾಗಿದೆ ಎಂದರೆ ಮಧ್ಯವರ್ತಿಗಳ ಲ್ಲಿ ಕಾಣಬಹುದೆ? ತನ್ನ ಜೀವನಕ್ಕಾಗಿ ಕೆಲಸ ಮಾಡೋದು ಸರಿ.ಅದರಿಂದ ಇಡೀ ದೇಶಕ್ಕೆ ಸಮಸ್ಯೆ ಯಾದರೆ ಅದು ಅಕರ್ಮ ಅಧರ್ಮ ವಾಗುತ್ತದೆ. ಇದಕ್ಕಾಗಿ ಹಿಂದಿನ ಮಹಾತ್ಮರುಗಳು ನೇರವಾಗಿ ಪರಮಾತ್ಮನ ಕಡೆಗೆ ನಡೆದಿದ್ದರು. ಕಾಲಬದಲಾಗಿದ್ದರೂ ಧರ್ಮ ಸತ್ಯ ಒಂದೇ. ಆ ಒಂದರ ಕಡೆಗೆ ನಡೆಯುವಾಗ ಜನಬಲ ಹಣಬಲ ಅಧಿಕಾರಬಲವಿರದು. ಹೀಗಾಗಿ ಇಂದು ಅದ್ವೈತ ಸಂಶೋಧನೆಗಳು ಹೊರಗೆ ನಡೆದಿದೆ.ಎಲ್ಲರನ್ನೂ ಒಂದಾಗಿಸಲು ರಾಜಕೀಯ ಬೆಳೆದಿದೆ. ಆದರೆ ಇದು ರಾಜಯೋಗದೆಡೆಗೆ ನಡೆಸಿದಾಗಲೇ ಅವರವರ ಧರ್ಮ ಕರ್ಮಕ್ಕೆ ಚ್ಯುತಿ ಬರದಂತಹ ಶಿಕ್ಷಣ ನೀಡಲು ಸಾಧ್ಯ.ಇದಕ್ಕೆ ಜನರಸಹಕಾರ ಸಹಾಯ ಸಿಕ್ಕಿದಾಗಲೇ ಆತ್ಮನಿರ್ಭರ ಭಾರತದ ಕನಸು ನನಸಾಗಬಹುದು. ಇಷ್ಟು ಸರಳ ಸುಲಭದ ವಿಚಾರ ಜನರಿಗೆ ತಿಳಿಸೋದು ಇಂದು ಸುಲಭವಾದರೂ ಅರ್ಥ ಮಾಡಿಕೊಳ್ಳಲು ಕಷ್ಟವಿರುವಕಾರಣ ರಾಜಕೀಯ ದಾರಿತಪ್ಪಿ ನಡೆದಿದೆ.ಧರ್ಮಾಂತರ, ಜಾತ್ಯಾಂತರ,ಮತಾಂತರ, ಪಕ್ಷಾಂತರಗಳು ದೇಶಾಂತರ ಹೋಗುವವರಿಗೆ ಪ್ರೇರಣೆ ನೀಡಿವೆ. ಅದು ಜ್ಞಾನದ ಅಂತರವಾಗದೆ ಅಜ್ಞಾನವಾಗಿರೋದು ದುರಂತವಲ್ಲವೆ?
ಬದಲಾವಣೆ ಆಗುತ್ತದೆ ಆಗಬೇಕಿದೆ.ಅದು ನಮ್ಮೊಳಗೇ ಆದಾಗ ಉತ್ತಮ ಶಾಂತಿ ಎನ್ನುತ್ತದೆ ಸನಾತನ ಧರ್ಮ.
ಆಗೋದೆಲ್ಲಾ ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು.ತಡೆದರೂ ತಪ್ಪಿಸಲಾಗದು.
ನಿಧಾನವಾಗಬಹುದಷ್ಟೆ.ಸಾವು ನಿಧಾನವಾಗಿಯಾದರೂ ಇದ್ದೇ ಇದೆ .ಇದ್ದಾಗಲೇ ಸತ್ತಂತೆ ಬದುಕುವುದು ಅಜ್ಞಾನ. ಆತ್ಮಕ್ಕೆ ಸಾವಿಲ್ಲವೆಂದಾಗ ಅದರ ಜೊತೆ ಬದುಕುವುದೇ ಜೀವನ. ಇದಕ್ಕೆ ಮಹಾತ್ಮರುಗಳ ಸಂಖ್ಯೆ ಹೆಚ್ಚಾಗಬೇಕಷ್ಟೆ. ಸತ್ಯಕ್ಕೆ ಬೆಲೆಕೊಡದವರು ಜನರನ್ನುಆಳಿ ಉಪಯೋಗವಿಲ್ಲ. ಭೂಮಿಗೇ ಭಾರವಷ್ಟೆ. ಈ ಭಾರವನ್ನು ಇಳಿಸುವುದಕ್ಕೆ ಯುದ್ದಗಳಾಗಿವೆ. ಧರ್ಮ ಯುದ್ದಗಳಾಗಿವೆ. ಈಗಲೂ ಮನೆ ಮನೆಯೊಳಗೆ ಯುದ್ದಗಳಾಗುತ್ತಿವೆ ಆದರೆ ಇದರಲ್ಲಿ ರಾಜಕೀಯವೇ ಹೆಚ್ಚಾಗುತ್ತಿದೆ ಎಂದರೆ ಮಾನವ ಎತ್ತ ನಡೆದಿರೋದು? ಅಧ್ಯಾತ್ಮ ವಿಜ್ಞಾನದೊಳಗಿರುವ ಸೂಕ್ಷ್ಮ ಜ್ಞಾನ ಕಣ್ಣಿಗೆ ಕಾಣೋದಿಲ್ಲ. ಕಣ್ಣಿಗೆ ಕಾಣುವ ಹೊರಗಿನಜ್ಞಾನ ದಲ್ಲಿ ಸತ್ಯಧರ್ಮ ವಿಲ್ಲ. ಒಟ್ಟಿನಲ್ಲಿ ಕಾಣದ್ದು ಕಂಡೆ ಎಂದರೆ ನಂಬುವವರ ಹಿಂದೆ ನಡೆದವರಿಗೆ ಪರಮಾತ್ಮ ಅರ್ಥ ವಾಗಿಲ್ಲ ಪರಕೀಯರು ಅರ್ಥ ಮಾಡಿಸುತ್ತಿದ್ದಾರೆ.ಇದೂ ಭಗವಂತನ ಆಟ.ನಾವೆಲ್ಲರೂ ಕಾಳಾಳುಗಳಷ್ಟೆ.ಚದುರಂಗದಲ್ಲಿ ಗೆದ್ದರೂ ಒಂದೇ ಸೋತರೂ ಒಂದೇ ರಾಜನನ್ನು ಉಳಿಸಿಕೊಳ್ಳುವ ಶಕ್ತಿ ಕಾಲಾಳುಗಳಿಗಿದ್ದರೂ ಹೋರಾಟ ಮಾಡುವ ಅಧಿಕಾರ ಹಣವಿಲ್ಲದೆ ಏನೂ ಮಾಡದ ಪರಿಸ್ಥಿತಿ ಯಲ್ಲಿ ದೇಶ ನಿಂತಿದೆ. ಕೊನೆಗೆ ಗೆಲ್ಲೋದು ಸತ್ಯವೇ ಆದರೂ ಸತ್ಯ ಒಳಗಿರುವಾಗ ಜನರು ಒಳಗೇ ಹುಡುಕಿಕೊಳ್ಳಬೇಕು.
No comments:
Post a Comment