ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 26, 2024

ಯೋಗದಿಂದ ಧರ್ಮ ರಕ್ಷಣೆ ಸಾಧ್ಯವೆಂದಿದ್ದರು ಮಹಾತ್ಮರು

ಜ್ಞಾನಯೋಗಕ್ಕೂ ಕರ್ಮ ಯೋಗಕ್ಕೂ ವ್ಯತ್ಯಾಸವಿದೆಯೆ? ಅಂತರವಿದೆಯೆ?ಅಂತರದಲ್ಲಿರವ ರಾಜಯೋಗ ಭಕ್ತಿಯೋಗವನರಿತವರಿಗೆ ಅಂತರವಿರದು. ಒಟ್ಟಿನಲ್ಲಿ ಯೋಗಕ್ಕೂ ಯೋಗಕೂಡಿಬರಬೇಕಷ್ಟೆ.

ಭಾರತದ ಈ ಸ್ಥಿತಿಗೆ ಕಾರಣವಾಗಿರುವ ಭೋಗಕ್ಕೆ ಬಳಸಿಕೊಂಡಿರುವ ಯೋಗದ ವಿಚಾರದ ಅಂತರದಲ್ಲಿ ಯಾರು ಯೋಗಿಗಳಾದರೆನ್ನುವ‌ ಪ್ರಶ್ನೆಗೆ ಉತ್ತರ ಹುಡುಕೋದು ಕಷ್ಟ.ಕಾರಣ ಯೋಗ ಆಂತರಿಕವಾಗಿರುವ ಜ್ಞಾನವಾದಾಗ ಜ್ಞಾನಯೋಗ ಅದೇ ರಾಜಕೀಯಕ್ಕಿಳಿದಾಗ ಅಂತರ ಹೆಚ್ಚಾಗುತ್ತದೆ. ರಾಜಯೋಗ ಭಕ್ತಿಯೋಗ ಕರ್ಮ ಯೋಗದ ವಿಚಾರಗಳೂ ಹೀಗೇ. ನಾನು ಯೋಗಿ ಎಂದು ಮುಂದೆ ‌ನಡೆದವರ ಹಿಂದೆ ಸಾಕಷ್ಟು ಜನರ ಸಹಕಾರವಿದ್ದಾಗ ನಾನೇ ಬೇರೆ ಜನರೆ ಬೇರೆ ಆಗೋದು ಅದ್ವೈತ ವಾಗದು. ಭಗವದ್ಗೀತೆಗೂ ಡಿ  ವಿ.ಜಿಯವರ ಕಗ್ಗಕ್ಕೂ ವ್ಯತ್ಯಾಸವಿದೆ ಎನ್ನುವವರು ಒಂದೆಡೆ ವ್ಯತ್ಯಾಸವಿಲ್ಲ ಎನ್ನುವವರು ಮತ್ತೊಂದು ಕಡೆ.ಎರಡನ್ನೂ ಓದಿದವರು ಒಂದೆಡೆ ಒಂದು ಮಾತ್ರ ತಿಳಿದವರು ಇನ್ನೊಂದು ಕಡೆ.ಆದರೆ ಭಗವಂತನ ಗೀತೆ ಓದಿ ತಿಳಿದೇ ಕಗ್ಗ ಹೊರಬಂದಿರುವಾಗ ಬೇರೆ ಹೇಗೆ? ಈ ರೀತಿಯಲ್ಲಿ  ನಾವು ಇಂದಿನ‌ಪ್ರತಿಯೊಂದು ವಿಚಾರವನ್ನು ತಮ್ಮೊಳಗೇ  ಅಳವಡಿಸಿಕೊಂಡು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡೋದಕ್ಕೆ ಯಾವುದೇ ರಾಜಕೀಯತೆಯ ಅಗತ್ಯವಿರಲಿಲ್ಲ.ತಿಳಿದವರನ್ನು ರಾಜಕೀಯ ಮುಂದೆ ಹೋಗಲು ಬಿಡದಿದ್ದರೆ ಧರ್ಮ ವಾಗದು. ಇದೊಂದು ತಂತ್ರವಷ್ಟೆ.ತತ್ವವಿಲ್ಲದ ತಂತ್ರವನ್ನು ನಂಬಿ‌ಕೆಟ್ಟವರೆ ಹೆಚ್ಚು.
ಹುಚ್ಚು ಎಲ್ಲರಿಗೂ ಒಂದೇ ಕಾರಣಕ್ಕೆ ಹಿಡಿಯೋದಿಲ್ಲ.
ಕೆಲವರಿಗೆ ಜ್ಞಾನದ ಹುಚ್ಚು ಹಲವರಿಗೆ ಅಜ್ಞಾನದ ಹುಚ್ಚು.ಆಗಿಹೋಗಿದ್ದನ್ನು ಕೆದಕಿ ಗಾಯ ಮಾಡಿಕೊಂಡು ಹುಣ್ಣು ಮಾಡಿಕೊಂಡರೂ ಹೊರಗಿನವರ ತಪ್ಪು ಎನ್ನುವವರೆ ಹೆಚ್ಚು.ಒಟ್ಟಿನಲ್ಲಿ ವಾದ ವಿವಾದದಿಂದ ಏನಾದರೂ ಬದಲಾವಣೆ ಆಗೋದಿದ್ದರೆ ಶ್ರೀ ಶಂಕರರ ಕಾಲದಲ್ಲಿದ್ದ ವಾದ ವಿವಾದದ ತತ್ವಜ್ಞಾನವಿರುತ್ತಿತ್ತು.ಇಂದು ತಂತ್ರಜ್ಞಾನದಿಂದ ತತ್ವದ ವಾದ ವಿವಾದ ನಡೆಸಿಕೊಂಡು ಪೂರ್ಣ ಸತ್ಯವಿಲ್ಲದೆ ಅರ್ಧ ಸತ್ಯದ ರಾಜಕೀಯದ  ವಶದಲ್ಲಿ ನಿಂತರೆ  ರಾಜಕೀಯದಿಂದ  ಅದ್ವೈತ ದರ್ಶನ ಸಾಧ್ಯವಿಲ್ಲ.
ಈವರೆಗೆ ಲೇಖನಗಳಲ್ಲಿ ಯಾವುದೇ ಹೆಸರನ್ನು ನೇರವಾಗಿ ಸೂಚಿಸದೆ ಜನಸಾಮಾನ್ಯರಿಗೆ  ವಾಸ್ತವದಲ್ಲಿ ನಡೆಯುತ್ತಿರುವ ವಿಷಯಗಳನ್ನು ಅಧ್ಯಾತ್ಮ ದ ಪ್ರಕಾರ ಸತ್ಯಾಸತ್ಯತೆಯನ್ನು  ತಿಳಿಸುವ ಪ್ರಯತ್ನ ನಡೆದಿದೆ.
ಅನುಭವಕ್ಕೆ ಬಂದರೂ  ಒಂದೆ ತತ್ವ‌,ಬರದಿದ್ದರೂ ಒಂದೇ ತತ್ವ ಹಾಗೆ ಸತ್ಯವೂ ಒಂದೇ. ಒಂದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಯೋಗದ ವಿಚಾರದಲ್ಲಿ  ಮುಂದೆ ನಡೆದವರಿಗೆ  ಭೌತವಿಜ್ಞಾನ ಅರ್ಥ ವಾದರೂ ಅಧ್ಯಾತ್ಮ ವಿಜ್ಞಾನ ಹಿಂದುಳಿದಿರುವುದರಿಂದ ಈಗ ಹಿಂದಿರುಗಿ ಬಂದರೆ ಉತ್ತಮ ಯೋಗ.

ಮಹಾಭಾರತ‌ಪುರಾಣದಲ್ಲಿದ್ದ ವರ್ಣ ಪದ್ದತಿಯ ಬೇಧ ಇಂದು ಜಾತಿಯಾಗಿದೆ. ಏಕಲವ್ಯನ ಗುರುಭಕ್ತಿಗೂ  ಕರ್ಣನ ಗುರುಭಕ್ತಿಗೂ ವ್ಯತ್ಯಾಸವಿರಲಿಲ್ಲ.ಆದರೂ  ಅಲ್ಲಿ ವರ್ಣ ಅಡ್ಡಬಂದಿತ್ತು ಅವರೊಳಗಿದ್ದ ಜ್ಞಾನಕ್ಕೆ ಬೆಲೆಯಿರಲಿಲ್ಲ.‌ ಈಗ ಕಾಲಬದಲಾಗಿದ್ದರೂ  ಹಿಂದಿನ ಪುರಾಣದ ರಾಜಕೀಯ ಸರಿಯಾಗಿ ಅರ್ಥ ವಾಗದೆ ಅಧರ್ಮ ಎದ್ದು ನಿಂತು ಅಟ್ಟಹಾಸ ಮಾಡುತ್ತಿದೆ.
ಇಲ್ಲಿ ಪರಮಾತ್ಮಜೀವಾತ್ಮನ ನಡುವಿನ ಅಂತರದಲ್ಲಿ ಸಾಕಷ್ಟು ರಾಜಕೀಯ ಶಕ್ತಿ ಬೆಳೆದಿದೆ. ದೈವತ್ವದೆಡೆಗೆ  ನಡೆದ ಯೋಗಿಗಳ ಜೀವನದಲ್ಲಿ ರಾಜಕೀಯವಿತ್ತೆ? ಪ್ರಶ್ನೆಗೆ ಉತ್ತರ ಇಲ್ಲವೆಂದಾಗ ಈಗಿನ ರಾಜಕೀಯ ಹೋರಾಟದಲ್ಲಿ ತಂತ್ರವೇ ಹೆಚ್ಚಾಗಿ ಒಳಗಿದ್ದ ಮಹಿಳಾ ಮಣಿಗಳು ಮುಗ್ಧ ಮಕ್ಕಳು ಹೊರಬಂದು  ಭೋಗದ ವೈಭೋಗದ ಕಾರ್ಯಕ್ರಮ ಹೆಚ್ಚಿದೆ.
ಇದರ ಹಿಂದಿನ‌ಕೈಗಳ ಉದ್ದೇಶ ಏನಾಗಿದೆ ಎಂದು ಚಿಂತನೆ ನಡೆಸುವಷ್ಟು ಸಮಯವಿಲ್ಲ.ಒಟ್ಟಿನಲ್ಲಿ ಜನಬಲ ಹಣಬಲ ಇದ್ದರೆ ಎಷ್ಟು ಬೇಕಾದರೂ ದೊಡ್ಡ ‌ಮಠ‌ಮಂದಿರ ಮಸೀದಿ ಚರ್ಚ್ ಕಟ್ಟಿ ವಾದವಿವಾದ ಆಗಬಹುದು. ಅದರೊಳಗೆ ತತ್ವವಿರುವುದೆ ತಂತ್ರವೆ ಎನ್ನುವ‌ಪ್ರಶ್ನೆ ಎದ್ದಾಗ  ಉತ್ತರ ಸಿಗೋದು ಒಂದೇ .ನನ್ನ ನಾ ತಿಳಿಯಲು ಬಹಳ‌ಕಷ್ಟ.
ಪರರನ್ನು ತಿಳಿಯುವುದಕ್ಕೆ ನನಗೆ ಇಷ್ಟ.ಆದರೆ  ಆ ಇಷ್ಟದ ಫಲವೇ ನನ್ನ  ನಷ್ಟ.
ಜ್ಞಾನಕ್ಕಿಂತ ದೊಡ್ಡ ಶಕ್ತಿಯಿಲ್ಲ. ಜ್ಞಾನಯೋಗವೇ ಶ್ರೇಷ್ಠ. ಸತ್ಯ
ತಲೆಗೆ ತುಂಬುವ ಜ್ಞಾನವೇ ನನ್ನದ್ದಲ್ಲವಾಗಿದ್ದರೆ ಯಾರಿಗೆ ನಷ್ಟ?
ಇದೇ ರೀತಿಯಲ್ಲಿ ಎಲ್ಲಾ ಯೋಗವನ್ನು ಅರ್ಥ ಮಾಡಿಕೊಳ್ಳಲು  ಹೊರಗಿನ‌ ಶಿಕ್ಷಣದಲ್ಲಿ ಯೋಗವಿರಬೇಕು.
ಮಕ್ಕಳ ತಲೆಗೆ ಪೋಷಕರ‌ ಇಷ್ಟ ಕಷ್ಟವನ್ನು ತುಂಬಿದರೆ‌
ಪೋಷಕರಿಗೇ ನಷ್ಟ.ಪರಮಾತ್ಮನ ಒಳಗಿರುವ ಎಲ್ಲರಲ್ಲಿಯೂ ವಿಶೇಷವಾಗಿರುವ ಜ್ಞಾನವಿದ್ದರೂ ಯಾರೋ ಒಬ್ಬರ ವಿಶೇಷಜ್ಞಾನವನ್ನು ಎಲ್ಲರ ತಲೆಯೊಳಗೆ ತುಂಬಿದರೆ ಉಳಿದವರ ಜ್ಞಾನದ ಗತಿ?
 ಮೊನ್ನೆ ಒಂದು ಶಾರದಾಮಠಕ್ಕೆ ಹೋಗಿದ್ದಾಗ  ಅಲ್ಲಿ ಇದೇ ಪ್ರಶ್ನೆ ಬಂದಿತು.ನಿಮ್ಮ ವಿಚಾರ  ಯಾರಿಗೂ ಅರ್ಥ ವಾಗದ ಮೇಲೆ  ತಿಳಿಸೋ ಅಗತ್ಯವಿಲ್ಲವೆಂದು.ಇದೇ ಪ್ರಶ್ನೆ  ಜನರು ಹಾಕಿದರೆ  ಹೇಗೆ? ಶ್ರೀ ಶಂಕರ ಮದ್ವ ರಾಮಾನುಜಾಚಾರ್ಯ ರಂತಹ ಮಹಾಜ್ಞಾನಿಗಳನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದವರು ಅವರ ವಿಚಾರವನ್ನು ಪ್ರಚಾರ ಮಾಡಿದರೆ ಜನಬಲ ಹಣಬಲ ಅಧಿಕಾರ ಬಲ ಸಿಗುತ್ತದೆ  ಆದರೆ  ಜನರ ಸಾಮಾನ್ಯ ಜ್ಞಾನಕ್ಕೆ ಅರ್ಥ ವಾಗುವಂತೆ ಅನುಭವದ ಸತ್ಯ ತಿಳಿಸಿದರೆ ಅರ್ಥ ವಾಗುವುದಿಲ್ಲವೆ? ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದ್ದರೂ ರಾಜಕೀಯದಲ್ಲಿ  ತಂತ್ರವೇ  ಇರುತ್ತದೆ.ಆದರೆ ಧಾರ್ಮಿಕ ಸತ್ಯ ಅರ್ಥ ವಾಗೋದಕ್ಕೆ ರಾಜಕೀಯದ ಅಗತ್ಯವಿಲ್ಲ. ತತ್ವಜ್ಞಾನದ ಅಗತ್ಯವಿದೆ.ಒಂದೇ ದೇಶದಲ್ಲಿ ಅಸಂಖ್ಯಾತ ಧರ್ಮ/ಜಾತಿ ಕುಲ ಗೋತ್ರ ದೇವಾನುದೇವತೆಗಳಿರಬಹುದು. ಹಾಗಂತ ದೈವತ್ವ ಒಂದೇ ಸಮನಾಗಿರದು. ಹೀಗಾಗಿ ನಾವು ದೇವರನ್ನು  ಹೊರಗಿನಿಂದ ಬೆಳೆಸಿದರೆ ಕಣ್ಣಿಗೆ ಕಾಣುತ್ತದೆ.ಒಳಗೇ ಇಟ್ಟು ಪೂಜಿಸಿದರೆ ದೈವತ್ವ ಬೆಳೆಯುತ್ತದೆ.ಈ ವಿಚಾರ ದೊಡ್ಡ ವರಿಗೆ
ತಿಳಿಸುವುದೇ‌ಮಹಾಪರಾಧ ಎನ್ನುವ ಸ್ಥಿತಿ ಇರೋವಾಗ ಇನ್ನೂ  ಕೆಳಗಿರುವ ಸಣ್ಣ ಮಕ್ಕಳಿಗೆ ತಿಳಿಸಿ ಬೆಳೆಸುವುದೇ ಉತ್ತಮವೆನ್ನುವ ಕಾರಣದಿಂದ ಇಷ್ಟು ವರ್ಷ  ಪೋಷಕರಾಗಿ ಶಿಕ್ಷಣಕ್ಷೇತ್ರದ ಜೊತೆಗೆ ಉಳಿದ ಕ್ಷೇತ್ರಗಳಲ್ಲಿ ಬೆಳೆದಿರುವ ರಾಜಕೀಯದ ಪ್ರಭಾವದಿಂದಾಗಿ ಧರ್ಮ ಹಾಳಾಗಿದೆ ಎಂದು ತಿಳಿಸಿದರೆ‌ ನಿಮಗೇನು ಅಧಿಕಾರವಿದೆ? ಹಣವಿದೆ? ಎನ್ನುವ ಮೂಲಕ ಸತ್ಯ ಹೊರಬರದಿದ್ದರೂ ಸರಿ ನಮ್ಮ ಆತ್ಮರಕ್ಷಣೆಯ ಜವಾಬ್ದಾರಿ ನಾವೇ ಹೊತ್ತುಕೊಳ್ಳದಿದ್ದರೆ ನಮಗೇ ನಷ್ಟವೆನ್ನುವ ಕಾರಣಕ್ಕಾಗಿ ನೇರವಾಗಿ ಲೇಖನಗಳು ಜನರೆಡೆಗೆ  ತಲುಪುತ್ತಿದೆ. ಹಾಗಂತ ಇದರಿಂದಾಗಿ ಯಾರಿಗೂ ನಷ್ಟವಿಲ್ಲ. ಹಣದ ನಷ್ಟದ ಹಿಂದೆ ಜ್ಞಾನದ ಲಾಭವಿದೆ ಎಂದು ಅನುಭವವಾಗಿರುವ‌ ಕಾರಣ ನಮ್ಮವರು ಪರರು ಯಾರೇ ಇರಲಿ ಅವರವರ  ಯೋಗಕ್ಷೇಮ ಯೋಗದಲ್ಲಿ ಅಡಗಿದೆ. ಪ್ರಜಾಪ್ರಭುತ್ವದಲ್ಲಿ  ಯಾರು ದೊಡ್ಡವರು ದಡ್ಡರು ಎನ್ನುವ ಬದಲಾಗಿ ಯಾರಲ್ಲಿ ಸ್ವತಂತ್ರ ಜ್ಞಾನವಿದೆ ಎನ್ನುವ ಪ್ರಶ್ನೆ ಹಾಕಿಕೊಂಡರೆ ನಮ್ಮೊಳಗಿರುವ‌ಜ್ಞಾನ ಹೊರಗಿನವರದ್ದೆ ಹೆಚ್ಚು.ಹೀಗಾಗಿ ನಮ್ಮ ಹಿಂದಿನವರ ಒಳಗಿನವರ ಜ್ಞಾನಕ್ಕೆ ಬೆಲೆಯಿಲ್ಲ.ಅರ್ಥ ವಾಗದ್ದನ್ನು ತಿಳಿಸೋ ಮೊದಲು ಅರ್ಥ ವಾಗಿದ್ದನ್ನು ತಿಳಿಸುವುದೇ ಉತ್ತಮ.ಅದೂ ಯೋಗದಿಂದ ಆಗಬೇಕಿದೆ. ಎಷ್ಟು ಹಣ ವಿದ್ದರೂ ಜ್ಞಾನವನ್ನು ಖರೀದಿಸಲು ಕಷ್ಟ.ಹೀಗಾಗಿ ಅಜ್ಞಾನದಲ್ಲಿ  ಜನ ವಿದ್ಯೆಯನ್ನು ಖರೀದಿಸಲು ಹೋಗಿ  ಜೀವನವೇ ಅತಂತ್ರಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ನಮ್ಮದೇ ಸಹಕಾರವಾಗಿತ್ತು. ಈಗ‌ಬದಲಾವಣೆ ಆಗುತ್ತಿದೆ. ಬದಲಾವಣೆ  ಯೋಗದೆಡೆಗೆ ನಡೆದಷ್ಟೂ ಆತ್ಮನಿರ್ಭರ ಭಾರತವಾಗುತ್ತದೆ.
ಇದು ಜ್ಞಾನ,ಭಕ್ತಿ,ಕರ್ಮದ ಮೂಲಕವೇ  ನಡೆಯುವುದೂ ಪರಮಸತ್ಯ. ಎಷ್ಟು ಭೋಗವಿದ್ದರೂ ಸತ್ಯವಿಲ್ಲವಾದರೆ  ಅಧ್ಯಾತ್ಮ ವಾಗದು. ಯಾರನ್ನೋ ಯಾರೋ ನಡೆಸುವುದಾಗಿದ್ದರೆ ಪುರಾಣ ಇತಿಹಾಸದಿಂದ ಸಾಕಷ್ಟು ಬದಲಾವಣೆ ಆಗುತ್ತಿತ್ತು. ಪುರಾಣ ಇತಿಹಾಸ ರಾಜಪ್ರಭುತ್ವ ದ ಸತ್ಯವಾಗಿದ್ದರೆ  ಪ್ರಜಾಪ್ರಭುತ್ವದ ಸತ್ಯ ವಾಸ್ತವದಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.
ಭೌತಿಕದಲ್ಲಿ ಭಾರತದೊಳಗಿದ್ದರೂ ಅಧ್ಯಾತ್ಮ ದ ಪ್ರಕಾರ ಭಾರತಾಂಬೆಯ ಮಕ್ಕಳು. ಎಷ್ಟು ವ್ಯತ್ಯಾಸವಿದೆ.ಜ್ಞಾನದಿಂದ ಕರ್ಮ ಯೋಗವಾದರೆ ಯೋಗಿ. ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿದರೆ ರೋಗಿ. ಹಠ ಮಾಡಿ ಮನೆ‌ಮಠ ಮಂದಿರ ಮಸೀದಿ ಚರ್ಚ್ ಕಟ್ಟಬಹುದು.ಕಟ್ಟಲು‌ ಹಣ
ಬೇಕು.ಹಣ ಹೊರಗಿನವರ ದಾನವಾಗಿರಬೇಕು. ದಾನ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದಂತಿರಬೇಕು.
ಈಗ ಹೇಗಿದೆ ? ಹಣಕೊಟ್ಟು ಅಧಿಕಾರ ಚಲಾಯಿಸುವವರೆ ಹೆಚ್ಚು. ಹೀಗಾದರೆ ದೇವರಿರುವರೆ ಅಸುರರೆ? ಪವಿತ್ರವಾಗಿದ್ದ ದೇಶವನ್ನು ಯಾತ್ರಾಸ್ಥಳ ಎನ್ನಬಹುದು.ಅದೇ ಪ್ರವಾಸಿತಾಣ ಆದರೆ ಏನರ್ಥ? ಅನರ್ಥಗಳಿಗೆ ಕಾರಣವೇ ಮಾನವನ ಹಠ. ಹಠವಿರಲಿ ಅದು ಯೋಗಮಾರ್ಗದಲ್ಲಿದ್ದರೆ ಉತ್ತಮ. 
ದೇವರನ್ನು ಪ್ರತಿಷ್ಟಾಪನೆ ಮಾಡೋದು ಸರಿ  ಸರಿಯಾದ ಪೂಜಾರಿಗಳಿಲ್ಲದೆ ಪೂಜೆಪುನಸ್ಕಾರಗಳಿಲ್ಲವಾದರೆ   ಭಕ್ತರು ಬರೋದಿಲ್ಲ.
ಇರುವ ಒಂದೇ ಸತ್ಯ  ಅರ್ಥ ವಾದ ಮೇಲೆ ಹೊರಗಿನ ಅನೇಕ ಸತ್ಯದಲ್ಲಿ ರುವ ತಂತ್ರವೇ ಕಾಣುತ್ತದೆ. ತಂತ್ರ ರಾಜಕೀಯಕ್ಕೆ ಬಳಸುವಾಗ ಧರ್ಮ ವಿದ್ದರೆ ಉತ್ತಮ.ಅಲ್ಲಿಯೂ ಅಧರ್ಮ ವಿದ್ದರೆ ಬದಲಾವಣೆ ಕಷ್ಟವಿದೆ. ಕಲಿಗಾಲದ ಕಲಿಕೆಯೇ  ಹೀಗೆ..ದೇವಾಸುರರ ನಡುವಿರುವ‌ ಮನುಕುಲ ಯಾವತ್ತೂ ಮಧ್ಯವರ್ತಿ. ಅಗೋಚರ ಶಕ್ತಿ  ತೋರಿಸಲಾಗದು. ಅರಿವಿಗೆ ಬರೋದಕ್ಕೆ ಅರಿವಿನ ಶಿಕ್ಷಣವಿರಬೇಕಿದೆ. ಧಾರ್ಮಿಕ ಕ್ಷೇತ್ರದವರು ಶಿಕ್ಷಣಕ್ಷೇತ್ರದೊಳಗೇ ಅಡಗಿರುವ ಅಧರ್ಮ ಅನ್ಯಾಯ ಅಸತ್ಯದ ಭ್ರಷ್ಟಾಚಾರ ನೋಡಿಯೂ ನೋಡದಂತಿರಲು ಸಾಧ್ಯವೆ? ಹೇಳಿ ಕೇಳಿ ಓದಿ ತಿಳಿಯುವುದು  ಎಲ್ಲರಿಗೂ  ಇದೆ ಆದರೆ  ಅದರೊಳಗೆ ಹೊಕ್ಕಿ ನೋಡಿ ಸತ್ಯ ತಿಳಿಯುವುದು  ಎಲ್ಲರಿಗಾಗದು.ಅದಕ್ಕೆ ಎಲ್ಲರೂ ಸಹಕರಿಸುವುದಿಲ್ಲವಾದರೂ  ನಮ್ಮ ಧರ್ಮ  ತಿಳಿಸೋದಷ್ಟೆ. ಅವರವರ‌ ಯೋಗಕ್ಕೆ ತಕ್ಕಂತೆ ಜೀವನ.

No comments:

Post a Comment