ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 5, 2024

ಕಲಿಕೆಯೇ ಸರಿಯಿಲ್ಲದ ತಿಳುವಳಿಕೆಯೇ ಅಜ್ಞಾನ

ಪುರಾಣ ಇತಿಹಾಸದ‌ ವಿಚಾರಗಳನ್ನು ನಾವು ಆಧ್ಯಾತ್ಮಿಕ ವಿಚಾರವೆಂದರಿತರೆ ಪೂರ್ಣ ಸತ್ಯವಲ್ಲ. ಅದು ನಡೆದು ಹೋಗಿರುವ ಭೌತಿಕ ವಿಚಾರವೇ ಆಗಿದೆ.ಅದರಲ್ಲಿ ರಾಜಯೋಗವನ್ನು ಅರ್ಥ ಮಾಡಿಕೊಂಡಾಗ ಆತ್ಮಜ್ಞಾನ ಜ್ಞಾನಾಭಿವೃದ್ದಿ ರಾಜಕೀಯಕ್ಕೆ ಬಳಸಿದರೆ  ಭೌತವಿಜ್ಞಾನ.ಸತ್ಯ ಒಂದೇ  ಅದರಲ್ಲಿ ಎರಡು ರೀತಿಯಲ್ಲಿ  ಸತ್ಯವಾದಾಗ ಅರ್ಧ ಸತ್ಯದ  ರಾಜಕೀಯವಾಗಿರುತ್ತದೆ.
ವೇದ ಶಾಸ್ತ್ರ  ಪುರಾಣಗಳು ನಡೆದಿರೋದು ಭೂಮಿಯ ಮೇಲೇ ಎಂದಾಗ ಭೂಮಿ ಒಂದೇ. ಭೂ ಋಣ ತೀರಿಸಲು ಧರ್ಮ ಮಾರ್ಗದಲ್ಲಿ ನಡೆಯಬೇಕೆಂಬುದೇ ಸನಾತನ ಋಷಿಗಳ  ಸಂದೇಶ. ಹೀಗಿರುವಾಗ ಧರ್ಮ ತತ್ವವರಿಯದೆ ಕಲಿಸಿದ ವಿದ್ಯೆಯೇ ಅವಿದ್ಯೆಯಾಗಿ ಅಜ್ಞಾನ ಬೆಳೆಸಿದರೆ  ಇದರಿಂದ  ಲಾಭ ನಷ್ಟ ಯಾರಿಗೆ? ಋಣಸಂದಾಯವಾಗದೆ ಜೀವಾತ್ಮನಿಗೆ‌ಮುಕ್ತಿಸಿಗದು ಎಂದಾಗ‌ ಋಣ ತೀರಿಸಲು ಸತ್ಕರ್ಮ ಸ್ವಧರ್ಮ, ಸಂಸ್ಕಾರದ ಶಿಕ್ಷಣ ವೇ ಮೂಲವಾಗಬೇಕು ಎನ್ನುವ ಮಹಾತ್ಮರುಗಳೆಲ್ಲರೂ ವಿದ್ಯಾವಂತರಾಗಿರಲಿಲ್ಲ ಜ್ಞಾನಿಗಳಾಗಿದ್ದರು.ವಿದ್ಯೆ ಹೊರಗಿನಿಂದ ಕಲಿತರೆ ಜ್ಞಾನ ಒಳಗಿನಿಂದ ಬೆಳೆಯುವ ಶಕ್ತಿ.
ವಿದ್ಯೆ ಜ್ಞಾನಕ್ಕೆ ಪೂರಕವಾದಾಗ ಸಂಪೂರ್ಣ .ವಿರುದ್ದ ಆಗಿದ್ದರೆ ಅಪೂರ್ಣ.
ಪುರಾಣ ಪಾತ್ರ ಪರಿಚಯದಲ್ಲಿ ಸಾಕಷ್ಟು ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಆತ್ಮಜ್ಞಾನವಿರಬೇಕು. ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲರೂ ಆಳೋರೆ ಆದಾಗ ಎಲ್ಲಾ ಒಂದು ರೀತಿಯ ಆಳುಗಳೇ ಆದರೆ ಯಾರನ್ನು ಯಾರು ಆಳಬೇಕಿತ್ತು ಎನ್ನುವ ಪ್ರಶ್ನೆಗೆ ಉತ್ತರ ತಿಳಿದವರಿಲ್ಲದೆ ಅಳುವ ಸರದಿಯಲ್ಲಿ ಸಾಕಷ್ಟು ಮಂದಿ ನಿಲ್ಲಬೇಕಾಗಿದೆ.
ಆತ್ಮ ಯಾವತ್ತೂ  ಸತ್ಯದೆಡೆಗೆ  ನಡೆಸುವಾಗ ಅಸತ್ಯ ಹೇಗೆ ಬೆಳೆಯಿತು? ಪುರಾಣಗಳು ಸತ್ಯ ವಾಗಿದ್ದರೂ ಅದರೊಳಗಿದ್ದ ತತ್ವ ಸತ್ವ ಸತ್ಯ ಯಾಕೆ ಹಿಂದುಳಿಯಿತು? ಇದಕ್ಕೆ ಕಾರಣವೆ ಪುರಾಣ ಇತಿಹಾಸವನ್ನು ರಾಜಕೀಯಕ್ಕೆ ಬಳಸಿಕೊಂಡು ವ್ಯವಹಾರ ನಡೆಸಿರೋದು. ವ್ಯವಹಾರದಲ್ಲಿ ಧರ್ಮ ಸತ್ಯ ಇದ್ದರೆ ಸರಿ ಅದೇ ಇಲ್ಲವಾದಾಗಲೇ  ಅನರ್ಥ ವಾಗುತ್ತದೆ.
ಒಟ್ಟಿನಲ್ಲಿ ಕಲಿಯುಗದಲ್ಲಿ  ಮೊದಲೇ ತಿಳಿಸಿದಂತೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ ಎಂದಂತಿದೆ. ಇದಕ್ಕೆ  ಪರಿಹಾರ ಒಳಗೇ ಇರೋವಾಗ ಒಳಹೊಕ್ಕಿ ಸತ್ಯ ತಿಳಿಯುವ ಜ್ಞಾನದ ಕೊರತೆಯಿದೆ.ಜ್ಞಾನ ಹೊರಗಿನಿಂದ ಬೆಳೆಸಿಕೊಂಡು  ಒಳಗಿನ‌ಜ್ಞಾನ ಹಿಂದುಳಿದಾಗ  ನಮ್ಮ ಆತ್ಮಕ್ಕೆ ತೃಪ್ತಿ ಸಿಗದೆ ಹೋಗುತ್ತದೆ. ಆದರೆ ಭೌತಿಕದಲ್ಲಿ ರಾಜಕೀಯ ಅಗತ್ಯವಿದೆ.
ಕಾರಣ  ಎಲ್ಲಿಯವರೆಗೆ  ಮಾನವನಿಗೆ ಕಾನೂನಿನ ಚೌಕಟ್ಟು ಇರುವುದಿಲ್ಲವೋ ಅಲ್ಲಿಯವರೆಗೆ ತನ್ನ ಮನಸ್ಸನ್ನು ಹಿಡಿದುಕೊಂಡು ‌ ಬದುಕಲಾಗದು. ಆದರೆ ಇದು ಹಣದಿಂದ  ಖರೀದಿಸುವಷ್ಟು  ಭ್ರಷ್ಟರ ಪಾಲಾದರೆ ಮಾತ್ರ  ಕಾನೂನಿಗೆ ಅರ್ಥ ವಿರದು. ಇಂದಿನ ಸಮಾಜದಲ್ಲಿ ಸಾಕಷ್ಟು ಜ್ಞಾನಿಗಳಿರುವರು. ಸಾಕಷ್ಟು  ಹೆಸರು,ಹಣ ಅಧಿಕಾರವನ್ನೂ ಪಡೆದು ಮುಂದೆ ಬಂದಿರುವರು.ಆದರೆ ಅವರು ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿದ್ದ ನಡೆಯುತ್ತಿರುವ ಅಧರ್ಮ ಅಸತ್ಯ ಅನ್ಯಾಯವನ್ನು ಪ್ರಶ್ನೆ ಮಾಡದ ಕಾರಣವೇ ಭ್ರಷ್ಟರು ದುಷ್ಟರು ಬಲಿಷ್ಟರಾಗಿರೋದು. ಬಿಲಿಷ್ಟರೆಂಬಕಾರಣಕ್ಕಾಗಿ ಇವರನ್ನು ದೇಶಭಕ್ತರೆಂದರೆ ತಪ್ಪು. ಒಬ್ಬ. ದೇಶಕಾಯುವ ಸೈನಿಕನಿಗೆ ಬಲಿಷ್ಟ ಎನ್ನಬಹುದು. ಆದರೆ ದೇಶ ಆಳುವವರಿಗೆ ಬಲಿಷ್ಟ ಎಂದರೆ ಹೇಗೆ? ಜನರಿಂದ ಜನರಿಗಾಗಿ ಜನರೇ  ಅವರ  ಮತದಾನದಿಂದ ‌ಮೇಲೆತ್ತಿರುವಾಗ ಯಾರಬಲ ಯಾರಲ್ಲಿದೆ?
ಒಟ್ಟಿನಲ್ಲಿ ಪುರಾಣ ಕಾಲದಿಂದಲೂ  ಈ ಹೆಣ್ಣು ಹೊನ್ನು ಮಣ್ಣಿಗಾಗಿ  ಹೋರಾಟ ಹಾರಾಟ ಮಾರಾಟಗಳಾಗಿವೆ.ಇದು ವಿಪರೀತ  ಬೆಳೆದು ಅಸುರರು ಭೂಮಿಯಲ್ಲಿ ಬೆಳೆದುನಿಂತಾಗ ಯುದ್ದಗಳಾಗಿವೆ. ಇಂದು ವಿಪರ್ಯಾಸವೆಂದರೆ ಯುದ್ದಗಳೇನೋ ನಡೆಯುತ್ತಿದೆ ಆದರೆ ಅದರ ಉದ್ದೇಶ ಧರ್ಮ ರಕ್ಷಣೆಯಾಗಿಲ್ಲ. ಒಂದು ಜೀವ  ಮಾನವಜನ್ಮ ಪಡೆಯೋದಕ್ಕಾಗಿ ಎಷ್ಟೋ ಜನ್ಮಗಳೆತ್ತಿ ಕಷ್ಟಪಟ್ಟಿರುತ್ತದೆ.ಆದರೆ ಇಲ್ಲಿ ಮಾನವನಿಗೆ ತನ್ನ ಜೀವಾತ್ಮನಿಗೆ  ಮುಕ್ತಿ ಸಿಗೋದಕ್ಕೆ ಬೇಕಾದ ಸತ್ಯಜ್ಞಾನವೇ  ಸಿಗದಿದ್ದರೆ ಜನ್ಮ ವ್ಯರ್ಥ. ಹಾಗಂತ ಎಲ್ಲರಿಗೂ ಅದೇ ಉದ್ದೇಶ ವಿರದು.ಹಿಂದಿನ ದ್ವೇಷ,ಋಣಗಳ ಮೂಲವೇ ಈ ಜನ್ಮವಾದಾಗ ಹಿಂದಿನ ಪುರಾಣ ಇತಿಹಾಸ ತಿಳಿಯುವಾಗ ಅಂದಿನ ಮಹಾರಾಜ ರಲ್ಲಿದ್ದ ಧಾರ್ಮಿಕ ಪ್ರಜ್ಞೆ ಇಂದು ಆಳುವವರಿಗೆ ಇದೆಯೇ? ಅಂತಹಶಿಕ್ಷಣ ನೀಡಲಾಗಿದೆಯೆ?/ಇದ್ದರೆ ಯಾಕೆ ಜನಸಾಮಾನ್ಯರ ಸತ್ಯಕ್ಕೆ  ಸ್ಪಂಧಿಸುವ ಗುಣವಿಲ್ಲ..ರಾಜಕಾರಣಿಗಳಾದರೂ ಇದ್ದಾರೆ ಆದರೆ ಧಾರ್ಮಿಕ ಕ್ಷೇತ್ರದಲ್ಲಿನ  ಮುಖ್ಯಸ್ಥರು ತಾವು ದೇವರಿಗಿಂತ ಗುರುವಿಗಿಂತ ದೊಡ್ಡವರೆನ್ನುವಂತೆ‌ ವರ್ತ ನೆ ಮಾಡಿಕೊಂಡು ಭಕ್ತರ ಹಣದಲ್ಲಿ  ಶ್ರೀಮಂತ ರಾಗಿರೋದನ್ನು ನೋಡಿದರೆ ಇಲ್ಲಿ ಜ್ಞಾನಕ್ಕಿಂತ ಹಣವೇ ಮುಖ್ಯವಾಗಿದೆ. ನಿಜ ಒಂದು ಅಧಿಕಾರ ಪಡೆದಾಗ ಹಣವಿಲ್ಲದೆ ಕೆಲಸವಾಗದು.ಆದರೆ ಆ ಹಣದಿಂದ  ಧರ್ಮ ರಕ್ಷಣೆ ಆಗಿದ್ದರೆ ಸರಿ.ಅದೇ ಜನರನ್ನು ಅಧರ್ಮಕ್ಕೆ  ಸಹಕಾರನೀಡುವಂತೆ ಪ್ರಚೋಧಿಸಿದರೆ?
ಕಲಿಗಾಲದ ಕಲಿಕೆಯಲ್ಲಿಯೇ ರಾಜಕೀಯ ಬೆರೆಸಿಕೊಂಡು ಯಾವುದನ್ನು ತಿಳಿಸಿದರೆ ಆತ್ಮಜ್ಞಾನ ಬೆಳೆಯುವುದೋ ಅದನ್ನು ಬಿಟ್ಟು ಹೊರಗೆನಡೆದವರ ಹಿಂದೆ ನಿಂತು ರಾಜಕೀಯಕ್ಕೆ ಸಹಕರಿಸುವವರೆ ಶಿಕ್ಷಕರಾಗಿ ಗುರುವಾಗಿದ್ದರೆ  ಅದರಲ್ಲಿ ರಾಜಯೋಗವೇ ಇಲ್ಲ.
ಯೋಗವೆಂದರೆ ಸೇರೋದು.ಪರಮಸತ್ಯದ ಜೊತೆಗೆ ಪರಮಧರ್ಮ ಸೇರೋದು.ಪರಮಾತ್ಮನಜೊತೆ ಜೀವಾತ್ಮ ಸೇರೋದು ಯೋಗ.ಇದು ಸತ್ಯಜ್ಞಾನ ,ಭಕ್ತಿ ಸತ್ಕರ್ಮದ  ಮೂಲಕವಾದಾಗಲೇ  ಯೋಗಿಯಾಗೋದು.ಪುರಾಣದಲ್ಲಿ ಯೋಗಿಗಳಿಂದ ಧರ್ಮ ರಕ್ಷಣೆಯಾಗಿದೆ. ಶ್ರೀ ರಾಮ ಮಹಾಯೋಗಿ. ಶ್ರೀ ಕೃಷ್ಣನೂ ಯೋಗಿಯೇ ಆಗಿದ್ದರೂ ಅವನ ಭೋಗ ಜೀವನವನ್ನು ಅಪಾರ್ಥ ಮಾಡಿಕೊಂಡು ಸುಖವಾಗಿದ್ದು ಜನಬಲ ಹಣಬಲ ಅಧಿಕಾರ ಬಲದಿಂದ  ಇಂದು  ಭಕ್ತರೆನಿಸಿಕೊಂಡರೆ  ಸತ್ಯವಿರದು. ಹೀಗಾಗಿ ಕಣ್ಣಿಗೆ ಕಾಣುವ ವೇಷಭೂಷಣಗಳು ಹೊರಗಿನ‌ಜನರನ್ನು ಮರುಳುಮಾಡಿದ್ದರೂ ಒಳಗೇ ಇರುವ ಪರಮಾತ್ಮನಿಗೆ ಮೋಸಮಾಡಲಾಗದು.ಆತ್ಮಸಾಕ್ಷಿಯೇ ಪರಮಾತ್ಮನ ಸತ್ಯ. ಆದರೆ ಇದಕ್ಕೆ ಬೇಕಿದೆ ಸ್ವಚ್ಚಜ್ಞಾನ ವಿಜ್ಞಾನ.ಈಗೆಲ್ಲಿದೆ ಎಲ್ಲಾ ಹಿಂದಿನ ಪುರಾಣವಾಗಿದ್ದು ವಾಸ್ತವ ಸತ್ಯವನರಿಯದೆ ಭವಿಷ್ಯದೆಡೆಗೆ ನೇರವಾಗಿ ಹೊರನಡೆದು ರಾಜಕೀಯದ ಹಿಂದೆ ನಿಂತವರನ್ನು ಮಹಾತ್ಮರೆನ್ನಬಹುದೆ? ಹಿರಿಯ ಗುರುಗಳ ಕಾಲದಲ್ಲಿದ್ದ ಶಿಕ್ಷಣವ್ಯವಸ್ಥೆ ಮರೆಯಾಗಿ ಈಗಿನ ಶಿಕ್ಷಣದಲ್ಲಿಯೇ  ಜನರನ್ನು ಮಂತ್ರ ತಂತ್ರ ಯಂತ್ರದಿಂದ ಬಂಧಿಸಿದರೆ ಆ ಬಂಧನದಿಂದ  ಬಿಡಿಸಿಕೊಳ್ಳುವ ಸ್ವತಂತ್ರ ಜ್ಞಾನ  ಎಲ್ಲರೊಳಗೂ ಇದ್ದರೂ  ತಿಳಿಸುವವರಿಲ್ಲವಾದಾಗ ಅತಂತ್ರಸ್ಥಿತಿಗೆ ಜೀವ ತಲುಪಿ ಭೂತ ಪ್ರೇತ ಪಿಶಾಚಿಗಳಂತೆ ಅಲೆದಾಡುತ್ತವೆ. ಇದನ್ನು  ಆರಾಧಿಸಿ ಹಣಮಾಡಿ ಬದುಕಿದರೆ  ದೇವರು  ಕಾಣುವರೆ? ಭಗವಂತನ ತಲುಪಲು ಸಾಧ್ಯವೆ?
ಎಲ್ಲರೂ ಇರೋದು ಭಗವಂತನೊಳಗೇ ಆದರೂ ಭೂಮಿಯ ಮೇಲಿರುವಾಗ. ಆ ಭಗವಂತನ‌ ಶಕ್ತಿ ಊಹಿಸಲೂ ಕಷ್ಟ.ಮಾಯೆಯ ವಶದಲ್ಲಿರುವ‌ಮನಸ್ಸಿನ ನಿಗ್ರಹ ಮಾಡಿಕೊಂಡು  ಬದುಕಿದವರೆ ಮಹಾತ್ಮರಾದವರು.
 ಆ ಮಹಾತ್ಮರಿಂದಲೇ ಧರ್ಮ ರಕ್ಷಣೆಯಾಗಿರೋದು..ಈಗ ಮಹಾತ್ಮರ ಹೆಸರಿನಲ್ಲಿ ದೇವರು ಧರ್ಮ ಜಾತಿ ಪಕ್ಷದ. ಹೆಸರಿನಲ್ಲಿ ರಾಜಕೀಯತೆ ನಡೆಸಿದರೆ ಅದು ಅಧರ್ಮ ವೆ ಸರಿ.
ಎಲ್ಲರಲ್ಲಿಯೂ ಪರಮಾತ್ಮನ ಕಾಣೋದು ತತ್ವದ ಉದ್ದೇಶ.
ಪರಮಾತ್ಮನನ್ನೇ ಆಳೋದು ತಂತ್ರವಾಗಿದ್ದರೆ  ಅದು ದುರುದ್ದೇಶವಾಗಿರುತ್ತದೆ. ಇದಕ್ಕೆ ಪ್ರತಿಫಲ ಕಠೋರವಾಗಿರುತ್ತದೆನ್ನುವರು ಯೋಗಿಗಳು.

No comments:

Post a Comment