ಧರ್ಮದಿಂದ ಕರ್ಮ ಮಾಡೋದಕ್ಕೂ ಧರ್ಮ ವರಿಯದೆ ಕರ್ಮ ದಲ್ಲಿ ತೊಡಗಿರೋದಕ್ಕೂ ವ್ಯತ್ಯಾಸ ವಿದೆ. ಇಂದಿನ ಭಾರತ ಧರ್ಮದ ಹೆಸರಿನಲ್ಲಿ ಕರ್ಮ ಮಾಡಲು ಹೊರಟರೂ ಅಧರ್ಮ ಬೆಳೆದಿರೋದಕ್ಕೆ ಕಾರಣವೇ ಪ್ರವೃತ್ತಿಯನ್ನು ವೃತ್ತಿ ಮಾಡಿಕೊಂಡಿರೋದು. ಯಾರೋ ಅವರ ವೃತ್ತಿಯಲ್ಲಿ ಅವರ ಧರ್ಮ ರಕ್ಷಣೆ ಮಾಡಿದ್ದರೆ ನಾವೂ ಅವರ ವೃತ್ತಿಯಲ್ಲಿ ನಮ್ಮ ಧರ್ಮ ರಕ್ಷಣೆ ಮಾಡೋದರಲ್ಲಿ ಸ್ವಧರ್ಮ ವಿರದು.
ಪರಧರ್ಮದೆಡೆಗೆ ನಡೆದ ಶಿಕ್ಷಣದಲ್ಲಿ ನಮ್ಮ ಜ್ಞಾನವೇ ಇರದೆ ನಾವು ಅವರ ಹಿಂದೆ ನಡೆದರೆ ಅಧರ್ಮಕ್ಕೆ ಜಯ. ಹೀಗಾಗಿ ದೇಶವನ್ನೇ ವಿದೇಶದಂತೆ ನಡೆಸೋ ರಾಜಕೀಯದೆಡೆಗೆ ಪ್ರಜೆಗಳು ನಡೆದಂತೆಲ್ಲಾ ನಮ್ಮವರನ್ನೇ ನಾವು ದೂರಮಾಡಿಕೊಂಡು ನಮ್ಮ ಮೂಲ ಧರ್ಮ ಕರ್ಮದ ಸತ್ಯಜ್ಞಾನ ಅರ್ಥ ವಾಗದೆಮನಸ್ಸು ಹೊರಬಂದಂತೆಲ್ಲಾ ಮನೆಯಿಂದ ಹೊರಬರೋರೆ ಹೆಚ್ಚಾಗಿ ಹೊರಗೆ ಜನ ಮನೆಯಲ್ಲಿ ಬಣಬಣ. ಮನಸ್ಸು ಒಳಗೆಳೆಯೋದಕ್ಕೆ ಬೇಕಿದೆ ಜ್ಞಾನದ ಶಿಕ್ಷಣ. ಕೊಡೋರೇ ಹೊರಗಿದ್ದರೆ ಅಜ್ಞಾನ.
No comments:
Post a Comment