ನನ್ನ ಜೀವನಾನುಭವದಲ್ಲಿ ತಿಳಿದ ಸದ್ವಿಚಾರವನ್ನು ಕೇಳೋರಿಲ್ಲದೆ ಹೋದಾಗ ತನ್ನಲ್ಲಿಯೇ ಅಡಗಿರುವ ಶಕ್ತಿಯ ದರ್ಶನ ವಾಗಿ ಅದರಂತೆನಡೆಯಲು ಸಾಧ್ಯವಾಯಿತು.
ಅಂದರೆ ಸತ್ಯ ಯಾವತ್ತೂ ಒಳಗಿರುತ್ತದೆ ಅದನ್ನು ನಂಬಿದವರಿಗಷ್ಟೆ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವ ಸನಾತನ ಹಿಂದೂ ಧರ್ಮ ಈಗಲೂ ಸ್ಥಿರವಾಗಿದೆ ಆದರೆ ಹಿಂದೂಗಳಲ್ಲಿ ಒಳಗಿರುವ ಸತ್ಯಕಾಣದೆ ಹೊರಗಿನಸತ್ಯಕಾಣುತ್ತಿರುವ ಕಾರಣದಿಂದ ಜಗತ್ತು ವೈಜ್ಞಾನಿಕ ದೃಷ್ಟಿಯಿಂದ ಸರಿಯಿದೆ ವೈಚಾರಿಕತೆಯಲ್ಲಿ ತಪ್ಪಾಗಿ ಕಾಣುತ್ತಿದೆ. ವಿಚಾರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ.ಆದರೆ, ಆತ್ಮಸಾಕ್ಷಿ ಕಾಲಕಾಲಕ್ಕೂ ಒಂದೇ ಇರುತ್ತದೆ.ಅದನ್ನರಿತುನಡೆದಾಗಲೇ ಆಚಾರ ವಿಚಾರಪ್ರಚಾರದಲ್ಲಿರುವ ಲೋಪದೋಷಗಳನ್ನು ಅರ್ಥ ಮಾಡಿಕೊಂಡು ಸರಿಪಡಿಸಬಹುದು. ಇದು ಎಲ್ಲರ ಮನೆಯ ದೋಷವಾಗಿರುವಾಗ ಅವರವರ ದೋಷಗಳನ್ನು ಉತ್ತಮ ಗುರು ಶಿಕ್ಷಣದಿಂದ ಮನೆಯೊಳಗೆ ಸರಿಪಡಿಸಿಕೊಂಡರೆ ಮುಂದಿನಪೀಳಿಗೆ ಸ್ವಚ್ಚವಾಗಿರಬಹುದು. ಒಳಗೇಹುಳುಕಿರುವಾಗ ಹೊರಗಿನಕೊಳಕನ್ನುತೊಳೆದರೂ ವ್ಯರ್ಥ. ಇದೇ ನಮ್ಮ ಅಹಂಕಾರ ಸ್ವಾರ್ಥ ದ ಜೊತೆಗೆ ಅಸತ್ಯ ಅಧರ್ಮ ವನ್ನೂ ಬೆಳೆಸಿದೆ. ಒಟ್ಟಿನಲ್ಲಿ ನಮ್ಮನ್ನು ನಾವು ಸಂಸ್ಕರಿಸಿಕೊಳ್ಳದೆ ಮಕ್ಕಳನ್ನು ಸಂಸ್ಕರಿಸುವುದುಕಷ್ಟ.
ಇದರಲ್ಲಿ ರಾಜಕೀಯ ಬೆರೆತಾಗಲೇ ಕಷ್ಟನಷ್ಟದ ವ್ಯವಹಾರವಾಗಿರೋದು. ಹಣದ ಲಾಭ ಜ್ಞಾನದ ನಷ್ಟ. ಹೀಗಾಗಿ ಜ್ಞಾನದಿಂದ ಹಣಗಳಿಸಿ ದಾನಧರ್ಮ ದೇವರ ಕಾರ್ಯ ನಡೆಸಿದರೆ ಉತ್ತಮ ಬದಲಾವಣೆಯ ಗಾಳಿ ಬೀಸುವುದು.
ಭ್ರಷ್ಟಾಚಾರ ದ ಹಣದಲ್ಲಿ ಎಷ್ಟು ಗುಡಿಗೋಪುರ ಪ್ರತಿಮೆಗೆ ಪೂಜಿಸಿದರೂ ಜನರ ಹಣ ಅಸುರರ ಪಾಲಾಗುವುದು.
ಪ್ರತ್ಯಕ್ಷವಾಗಿ ಕಾಣುತ್ತಿರುವ ಸತ್ಯವಾಗಿದೆ. ಸಾಲದ ಹಣದಲ್ಲಿ ದೇಶ ನಡೆಸೋದಾಗಲಿ,ಸಂಸಾರ ನಡೆಸೋದಾಗಲಿ,ಸಮಾಜಸೇವೆ ಮಾಡೋದಾಗಲಿ ನೀರಿನಲ್ಲಿ ಹೋಮಮಾಡಿದಂತೆ.ಇದರಲ್ಲಿ ಯೋಗವಿಲ್ಲ.ಯೋಗವೆಂದರೆ ಕೂಡುವುದು.ಪರಮಾತ್ಮನ ಜೀವಾತ್ಮ ಕೂಡಿ ನಡೆಸೋ ಎಲ್ಲಾ ಕಾರ್ಯ ಯೋಗವಾಗುತ್ತದೆ.ಅದು ಜ್ಞಾನ,ಭಕ್ತಿ ಕರ್ಮಯೋಗದ ಮೂಲಕ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಇರಬೇಕು ಎಂದು ಭಗವದ್ಗೀತೆ ತಿಳಿಸಿದೆ. ಆದರೆ ಇಂದು ಗೀತೆಯನ್ನು ವಿರೋಧಿಸಿ ತಿಳಿಯದೆಯೇ ಅಸತ್ಯ ಅಧರ್ಮ ಅನ್ಯಾಯದಲ್ಲಿಯೇ ದೇವರನ್ನು ದೇವಸ್ಥಾನವನ್ನು ಧರ್ಮ ವನ್ನು ಉಳಿಸುತ್ತೇವೆಂದವರು ದೇಶ ಆಳುತ್ತಿರೋದು ಯಾತ್ರಾ ಸ್ಥಳದ ಪವಿತ್ರತೆಗೇ ದಕ್ಕೆಯಾಗುತ್ತಾ ಪ್ರವಾಸಿ ತಾಣದ ವ್ಯವಹಾರವೇ ಮುಖ್ಯವಾಗಿರೋದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಆ ವ್ಯವಹಾರದ ಹಣವನ್ನು ದುರ್ಭಳಕೆ ಮಾಡಿಕೊಳ್ಳುವವರ ಅಜ್ಞಾನಕ್ಕೆಮಿತಿಯೇ ಇಲ್ಲ.ವಿನಾಶಕಾಲೇ ವಿಪರೀತ ಬುದ್ದಿ ಎಂದರೆ ಹೀಗೆಯೇ ಇರಬೇಕು.ಕೆಲವೆಡೆ ಶುದ್ದವಿದ್ದರೂ ಅಲ್ಲಿಯೂ ರಾಜಕೀಯ ಪ್ರವೇಶ ಮಾಡುತ್ತಿರುವುದು ಎಷ್ಟು ಸರಿ? ಹಣದಿಂದ ದೇವರೆ? ಜ್ಞಾನದಿಂದ ದೈವತ್ವವೆ?
ಸತ್ಯ ತಡೆದಷ್ಟೂ ದೂರವಾಗುತ್ತದೆ.ಆದರೆ ಹಿಂದಿರುಗಿ ಬರೋವಾಗ ಕಠೋರವೆನಿಸುತ್ತದೆ. ಪಾಪಕ್ಕೆ ಪ್ರಾಯಶ್ಚಿತ್ತವೇ ಮದ್ದು. ಕರ್ಮಕ್ಕೆ ತಕ್ಕಂತೆ ಪ್ರತಿಫಲ.
ಹಿಂದೂ ಧರ್ಮಕ್ಕೆ ಅಪಾಯವಿಲ್ಲ ಹಿಂದೂಗಳಿಗೆ ಅಪಾಯವಿದೆ.ಹಿಂದಿರುಗಿ ಬಂದು ಸತ್ಯ ಧರ್ಮ ದೆಡೆಗೆ ನಡೆಯೋದೊಂದೇ ಇದಕ್ಕಿರುವ ಉಪಾಯ. ಅವರವರ ಮನೆಯ ಸಾಲ ಸರ್ಕಾರ ತೀರಿಸಬೇಕೆ? ಮನೆಯವರ ಸಹಕಾರವಿದ್ದರೆ ದುಡಿದು ತೀರಿಸುವ ಜ್ಞಾನವಿರಬೇಕಷ್ಟೆ. ಅದೇ ಹೊರಗಿನವರದ್ದಾಗಿದ್ದರೆ ಹೊರಗಿನ ಸಾಲವೇ ಹೆಚ್ಚುವುದು. ಇಷ್ಟೊಂದು ಹೋರಾಟ ಹಾರಾಟ ಮಾರಾಟದಿಂದ ಏನಾದರೂ ಶಾಂತಿ ಸಿಕ್ಕಿತೆ? ಶಾಂತಿಯಿಂದ ಮಾತ್ರ ಸತ್ಯದರ್ಶನ. ಬೆಂಕಿ ಆರುವಾಗ ದೊಡ್ಡದಾಗಿ ಉರಿಯುವಂತೆ ವಿನಾಶಕಾಲೇ ವಿಪರೀತ ಬುದ್ದಿ ಬೆಳೆದಿದೆ.ಅದರಲ್ಲಿ ಸತ್ಯದ ಕೊರತೆಯಿದೆ. ಸತ್ಯವೇ ದೇವರಾದರೆ ಸತ್ಯ ಎಲ್ಲಿದೆ? ಧರ್ಮ ಯಾವುದು?
ಆತ್ಮಾವಲೋಕನ ನಡೆಸಿಕೊಳ್ಳಲೂ ಅನೇಕರಿಗೆ ಕಷ್ಟವಿದೆ.
ಮಹಾತ್ಮರ ಜೀವಕ್ಕೂ ಸಾಮಾನ್ಯರ ಜೀವಕ್ಕೂ ಅಂತರ ಬೆಳೆದಂತೆಲ್ಲಾ ಮಧ್ಯವರ್ತಿಗಳ ಜೀವನವೇ ಹೆಚ್ಚಾಗುತ್ತದೆ.
ಇಲ್ಲಿ ಜೀವಕ್ಕೆ ಸಾವಿದೆ ಆತ್ಮಕ್ಕಿಲ್ಲವೆಂದವರು ಮಹಾತ್ಮರಾದರು, ಜೀವ ಎಲ್ಲರಲ್ಲಿಯೂ ಇದೆಜೀವಿಸುವಹಕ್ಕು ಎಲ್ಲರಿಗೂ ಇದೆ ಎನ್ನುವ ಸಾಮಾನ್ಯ ಜ್ಞಾನ ಎಲ್ಲರಿಗೂ ತಿಳಿದರೂ ಮಧ್ಯೆ ಪ್ರವೇಶ ಮಾಡುವವರು ಇಬ್ಬರ ಜೀವನದಲ್ಲೂ ಆಟವಾಡಿಕೊಂಡು ತನ್ನ ಸ್ವಾರ್ಥ ಸುಖಕ್ಕಾಗಿ ಜೀವನದ ಮುಖ್ಯ ಉದ್ದೇಶ ಮರೆತು ತಾವೂ ಮುಂದೆ ನಡೆಯದೆ ನಡೆಯುವವರನ್ನೂ ಬಿಡದೆ ಅತಂತ್ರಸ್ಥಿತಿಗೆ ತರುವರು.ಹೀಗಾಗಿ ಮಧ್ಯವರ್ತಿ ಮಾನವನಿಗೆ ಆತ್ಮಜ್ಞಾನದೆಡೆಗೆ ಸತ್ಯದೆಡೆಗೆ ಹೋಗೋದಕ್ಕೆ ಮಧ್ಯವರ್ತಿಗಳ ಕಾಟ ಹೆಚ್ಚಾಗಿರುವುದರಿಂದ ಮಹಾತ್ಮರು ತಮ್ಮ ಆತ್ಮಸಾಕ್ಷಿಯಂತೆ ಆತ್ಮಾವಲೋಕನ ದಲ್ಲಿದ್ದು ಸತ್ಯದೆಡೆಗೆ ನೇರವಾಗಿ ನಡೆದು ಪರಮಾತ್ಮನ ಸೇರಿದರು.
No comments:
Post a Comment