ಕಲಿಪುರುಷ ಯಾರೆಂಬಪ್ರಶ್ನೆ ಗೆ ಉತ್ತರ ಅಜ್ಞಾನದಲ್ಲಿರುವ ಪುರುಷರೆಂದರೆ ಸರಿಯಾಗಬಹುದೆ?
ಕಲಿಗಾಲದಲ್ಲಿ ಪುರುಷರಲ್ಲಿ ಅಜ್ಞಾನಮಿತಿಮೀರಿ ಭೂಮಿಯಲ್ಲಿ ಅಧರ್ಮ ಅನ್ಯಾಯ ಅಸತ್ಯಹೆಚ್ಚಾಗುತ್ತದೆ.ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು ? ಎನ್ನುವ ಸ್ಥಿತಿ ಬರುತ್ತದೆ ಎಂದು ಮೊದಲೇ ಭವಿಷ್ಯ ನುಡಿದಿದ್ದಾರೆಂದರೆ ಇಂತಹಲಕ್ಷಣಗಳು ಯಾರಲ್ಲಿದೆಯೋ ಹುಡುಕಿಕೊಂಡರೆ ಉತ್ತಮ ಕಾಲ ಬರುತ್ತದೆ.ಇಲ್ಲವಾದರೆ ಕಾಲವೇ ಉತ್ತರ ಕೊಡುತ್ತದೆ.
ಇಲ್ಲಿ ಭೂಮಿಯಲ್ಲಿ ರುವ ಹೆಣ್ಣು ಹೊನ್ನು ಮಣ್ಣಿನ ಋಣ ತೀರಿಸಲು ಪುರುಷರಿಗೆ ಜ್ಞಾನವಿರಬೇಕು. ಅಜ್ಞಾನದಲ್ಲಿ ಹಣ ಮಾಡಿಕೊಂಡು ಎಷ್ಟು ಇದನ್ನು ದುರ್ಭಳಕೆ ಮಾಡಿಕೊಂಡು ಆಳುವರೋ ಅಷ್ಟೇ ಕೆಟ್ಟದಾದ ಪ್ರತಿಫಲವೂ ಅದೇ ಜೀವ ಅನುಭವಿಸಲೇಬೇಕೆಂದಾಗ ಇದನ್ನು ತಡೆಯಲು ಕಲಿಪುರುಷ ಬರುವನಂತೆ.ಇರುವವನೊಬ್ಬನೇಪುರುಷ ಅದರೊಳಗಿರುವ ಅಸಂಖ್ಯಾತ ಜೀವಾತ್ಮರಲ್ಲಿ ಅಡಗಿರುವ ಆ ಒಬ್ಬನ ಸತ್ಯವನರಿಯುವುದೇ ಜೀವನದ ಗುರಿಯಾಗಿತ್ತು.
ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೂ ನಡೆದು ಬಂದಿರುವ ಜೀವಾತ್ಮನಿಗೆ ಪರಮಾತ್ಮನೇಬೇರೆ ನಾನೇ ಬೇರೆ ನನ್ನಿಂದಲೇ ಭೂಮಿ ನಾನೇ ರಾಜ ನಾನೇ ಸರಿ ನಾನೇ ಎಲ್ಲಾ ನನ್ನಿಂದ ಲೇ ಎಲ್ಲಾ ನಡೆದಿರೋದೆನ್ನುವ ಅಹಂಕಾರ ಮಿತಿ ಮೀರಿದಾಗ. ಭೂಮಿಯ ಮೇಲಿರುವ ಸತ್ಯ ಸತ್ವ ತತ್ವವೂ ಅರ್ಥ ವಾಗದೆ ಜನ್ಮ ವ್ಯರ್ಥ ವಾಗಿ ಜೀವ ಹೋಗುತ್ತದೆ.
ಆತ್ಮಕ್ಕೆ ಸಾವಿಲ್ಲವೆಂದಾಗ ಅದು ಲಿಂಗರೂಪದಲ್ಲಿ ಸ್ತ್ರೀ ಯಾಗಿಯೂ ಜನ್ಮ ತಾಳಬಹುದು.ಪುರುಷನಾಗಿಯೂ ಜನ್ಮ ಪಡೆಯಬಹುದು.
ಇದಕ್ಕೆ ಹಿಂದಿನ ಜನ್ಮ ಋಣ ಹಾಗು ಕರ್ಮ ವೇ ಕಾರಣ ವೆನ್ನುವುದು ಹಿಂದೂ ಧರ್ಮ. ಆದರೆ ಇದನ್ನು ವಿರೋಧಿಸಿ ನನಗೆ ಪುನರ್ಜನ್ಮ ಇಲ್ಲವೆಂದು ಅಧರ್ಮ ದಲ್ಲಿಯೇ ಜೀವನ ನಡೆಸಿದರೆ ಅಜ್ಞಾನವೇ ಸುತ್ತಿಕೊಂಡು ಕಲಿಪುರುಷನ ಮೂಲಕ ಕಲಿಯುಗದ ಅಂತ್ಯವಾಗುತ್ತದೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಸತ್ಯವನ್ನು ಸತ್ಯದಿಂದ ಅರ್ಥ ಮಾಡಿಕೊಳ್ಳಲು ಆತ್ಮಸಾಕ್ಷಿಯ ಕಡೆಗೆ ನಡೆ ನುಡಿಯಿರಬೇಕು. ಹೀಗಾಗಿ ಇಂದು ಭ್ರಷ್ಟಾಚಾರವನ್ನು ಭ್ರಷ್ಟರೆ ವಿರೋಧಿಸಿದರೂ ಭ್ರಷ್ಟಾಚಾರಕ್ಕೆ ಕೊನೆಯಿಲ್ಲ.
ಹೊರಗಿನ ಸತ್ಯ ಹೊರಗೇ ಇರುತ್ತದೆ.ಹಾಗಾಗಿ ಒಳಗಿನ ಸತ್ಯಜ್ಞಾನ ಬಿಟ್ಟು ಹೊರಗಿನಮಿಥ್ಯಜ್ಞಾನವೇ ಮೇಲೇರಿದೆ.
ಯಾವುದೂ ಅತಿಯಾದರೆ ಗತಿಗೇಡು. ಒಟ್ಟಿನಲ್ಲಿ ಭೂ ಋಣ ತೀರಿಸಲು ಬಂದವರು ಭೂಮಿ ಸೇವೆ ಮಾಡದೆ ಆಳಲು ಹೊರಟರೆ ಕಲಿಯುಗವಾಗುತ್ತದೆ. ಕಲಿಕೆ ಸೇವಾಮಾರ್ಗ ದ ಕಡೆಗೆ ನಡೆದರೆ ಸತ್ಯ ಯುಗ ಅರ್ಥ ವಾಗುತ್ತದೆ.
ಭ್ರಷ್ಟರ ಹಣದಲ್ಲಿ ಧರ್ಮ ಉಳಿಸಲು ಹೋದರೆ ಭ್ರಷ್ಟರಿಗೆ ಬಲ.
ಆದರೆ ಶಿಷ್ಟಾಚಾರದಲ್ಲಿಹಣಗಳಿಸುವುದೇ ಕಷ್ಟವಾದಾಗ ಜೀವನ ನಡೆಸಲು ವಾಮಮಾರ್ಗ ಅಡ್ಡದಾರಿ ಹಿಡಿದು ಹೋದರೆ ಅದೇ ಹಿಂದೆ ತಿರುಗಿ ಬರೋವಾಗಕಷ್ಟ ನಷ್ಟ ಜೀವ ಅನುಭವಿಸಲೇಬೇಕು.
ಋಣ ಸಂದಾಯವಾಗದೆ ಜೀವನ್ಮುಕ್ತಿ ಇಲ್ಲವೆಂದರೆ ಇದಕ್ಕೆ ಬೇಕಿದೆ ಯೋಗ .ಪರಮಸತ್ಯ ಧರ್ಮ ವನರಿತು ಹಣಗಳಿಸಿ ದಾನಧರ್ಮ ದೆಡೆಗೆ ನಡೆದಾಗಲೇ ಜೀವನ್ಮುಕ್ತಿ. ಇದೀಗ ಯಾರಿಗೆ ಸಾಧ್ಯವಿದೆ?
ಗುರುಹಿರಿಯರ ಆಸ್ತಿ ಬೇಕು ಜ್ಞಾನ ಬೇಡ.ಅವರಲ್ಲಿದ್ದ ತತ್ವ ತಿಳಿಯದೆ ತಂತ್ರಪ್ರಯೋಗದಿಂದ ಯಂತ್ರದಂತೆ ದುಡಿದರೂ ಸ್ವತಂತ್ರ ಜ್ಞಾನ ಸಿಗದು. ಸ್ವತಂತ್ರ ಜ್ಞಾನವಿಲ್ಲದ ಬದುಕು ಅತಂತ್ರಸ್ಥಿತಿಗೆ ತಲುಪುತ್ತದೆ.
ಪುರುಷರು ಕಲಿಯುವುದು ಬಹಳಷ್ಟಿದೆ ಇದಕ್ಕೆ ಇದು ಕಲಿಗಾಲ. ಕಲಿಯಬೇಕಾದದ್ದು ಒಳಗೇ ಇದ್ದರೂ ಹೊರಗೆ ಹುಡುಕಿದರೆ ಕಲಿಕೆ ದಾರಿ ತಪ್ಪಾಗಿದೆಯಷ್ಟೆ..
No comments:
Post a Comment