ಸಾಲವೇ ಶೂಲ ಯಾವುದಿದರ ಮೂಲ?
ಸರ್ಕಾರವೇ ಇದರ ಮೂಲ.
ಇಲ್ಲಿ ಸರ್ಕಾರ ಎಂದರೆ ಸಹಕಾರವಾಗುತ್ತದೆ. ನಮ್ಮ ಸಹಕಾರವೇ ಸಾಲದ ಮೂಲವಾಗಿದೆ.ಭೌತವಿಜ್ಞಾನದ ಹಿಂದೆ ಹೋದಷ್ಟೂ ಸಾಲ ಬೆಳೆಯುತ್ತದೆ ಅಧ್ಯಾತ್ಮ ವಿಜ್ಞಾನದೆಡೆಗೆ ನಡೆದಷ್ಟೂ ಸಾಲದಿಂದ ಬಿಡುಗಡೆ ಸಿಗುತ್ತದೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ದೈವತ್ವದೆಡೆಗೆ ಹೋದಷ್ಟೂ ಆತ್ಮತೃಪ್ತಿ ಸಿಗುತ್ತದೆ ಅಸುರತ್ವದೆಡೆಗೆ ನಡೆದಷ್ಟೂ ಅಹಂಕಾರ ಬೆಳೆಯುತ್ತದೆ. ನಾನು ನನ್ನದು ನನ್ನಿಂದ ನನಗಾಗಿ ನಾನೇ ಮಾಡಿಕೊಂಡಿರೋದನ್ನು ಅನುಭವಿಸೋದೂ ನಾನೇ ಆದಾಗ ಮಾಡಿದ ಸಾಲವನ್ನು ನಾನೇ ತೀರಿಸಬೇಕಷ್ಟೆ.ಇದನ್ನು ಹೊರಗಿನ ಸರ್ಕಾರ ತೀರಿಸಲೆಂದು ಹೋರಾಟ ಹಾರಾಟ ಮಾರಾಟದಲ್ಲೇ ಜೀವನ ನಡೆಸುತ್ತಿದ್ದರೆ ಹನುಮಂತನ ಬಾಲದಂತೆ ಸಾಲವೂ ಬೆಳೆಯುತ್ತಾ ಕೊನೆಗೆ ಜೀವ ಹೊರೆತಾಳಲಾರದೆ ಹೋಗುತ್ತದೆ.ತೀರಿಸಲು ಮತ್ತೆ ಜನಿಸುತ್ತದೆ. ಜನನ ಮರಣವೆಂಬುದು ಆತ್ಮಕ್ಕಲ್ಲ ಜೀವಕ್ಕೆ ಮಾತ್ರ ಎಂದು ಹಿಂದೂ ಸನಾತನ ಧರ್ಮ ತಿಳಿಸಿದರೆ ಇದನ್ನು ವಿರೋಧಿಸುವ ಧರ್ಮ ಗಳಿವೆ. ಕಾರಣ ಕಣ್ಣಿಗೆ ಕಾಣದ ಸತ್ಯವನ್ನು ನಂಬೋದು ಕಷ್ಟ. ಕಷ್ಟಪಟ್ಟು ಜೀವನ್ಮುಕ್ತಿಯ ಮಾರ್ಗ ಹಿಡಿದವರನ್ನು ಮಹಾತ್ಮರೆಂದರು.ಅವರೀಗ ಪೂಜನೀಯರಾಗಿದ್ದರೂ ಅವರಂತೆ ನಡೆಯೋರು ವಿರಳ. ನಡೆದವರನ್ನು ಬಡವರು ಅಸಹಾಯಕರು,ದೀನದಲಿತರು, ಅನಕ್ಷರಸ್ಥರು, ಅಬಲರು,ಅನಾಥರೆನ್ನುವ ಮಟ್ಟಿಗೆ ಅಜ್ಞಾನ ಮಿತಿಮೀರಿದೆ. ಹಾಗಾದರೆ ಅವರ ಹೆಸರಿನಲ್ಲಿ ನಡೆಸುವ ಎಲ್ಲಾ ರಾಜಕೀಯ ವ್ಯವಹಾರದಿಂದ ಏನಾದರೂ ಬದಲಾವಣೆ ಆಗಿದೆಯೆ? ಜನಸಾಮಾನ್ಯರ ಮಕ್ಕಳ ಮೊಮ್ಮಕ್ಕಳ ತಲೆಯ ಮೇಲೇ ಸಾಲದ ಹೊರೆ ಹಾಕಿ ಆಳುವ ಅರಸರನ್ನು ದೇಶಭಕ್ತರೆಂದರೆ ಸರಿಯೆ?
ಭೂಮಿಯ ಸಾಲ ತೀರಿಸಲು ಬಂದ ಜೀವಾತ್ಮನಿಗೆ ಪರಮಾತ್ಮನ ತೋರಿಸುವ ಶಿಕ್ಷಣವೇ ಕೊಡದೆ ನಾನೇ ರಾಜ,ನಾನೇ ದೇವರೆನ್ನುವಂತವರು ತಮ್ಮೆಡೆ ಸೆಳೆದುಕೊಂಡು ಒಳಗೇ ಇದ್ದ ಜ್ಞಾನವನ್ನು ಸರಿಯಾಗಿ ಗುರುತಿಸದೆ ಹೊರಗಿನ ದೇವರನ್ನು ತೋರಿಸಿ ಬೇಡಿಕೊಳ್ಳಿ ಎಂದರೆ ಏನನ್ನು ಬೇಡಬೇಕು? ಯಾಕೆ ಬೇಡಬೇಕು? ಹೇಗೆ ಬೇಡಬೇಕೆನ್ನುವುದೇ ಪ್ರಶ್ನೆಯಾಗಿರುತ್ತದೆ. ಒಟ್ಟಿನಲ್ಲಿ ಸಾಲದ ಹಣದಲ್ಲಿ ದೊಡ್ಡ ದೊಡ್ಡ ಮನೆ,ಮಂದಿರ ಮಠ,ಮಸೀದಿ ಚರ್ಚೆ,ಶಾಲಾ ಕಾಲೇಜ್ ಕಟ್ಟಬಹುದು. ಆದರೆ ಅದರೊಳಗೆ ಯಾವ ಜ್ಞಾನವನ್ನು ಬೆಳೆಸುವರು ಯಾವ ದಿಕ್ಕಿನಲ್ಲಿ ಮನಸ್ಸನ್ನು ಎಳೆಯುವರು, ಯಾರ ಕೈಕೆಳಗೆ ಕೆಲಸ ಮಾಡಿಸುವರು, ಯಾರಿಗಾಗಿ ನಡೆಸುವರು ಎನ್ನುವ ಬಗ್ಗೆ ಸಾಮಾನ್ಯ ಜನರು ಮನೆಯೊಳಗೆ ಇದ್ದು ಸ್ಥಿತಪ್ರಜ್ಞರಾಗಿ ಚಿಂತನೆ ನಡೆಸಿದಾಗ ತಿಳಿಯುವುದು ಎಲ್ಲಾರೂ ಮಾಡುವುದು ಓಟಿಗಾಗಿ ನೋಟು ಸೀಟಿಗಾಗಿ ಅಷ್ಟೆ.
ಪ್ರಜಾಪ್ರಭುತ್ವದಲ್ಲಿ ರಾಜರು ಯಾರು?ಪ್ರಜಾಧರ್ಮದ ಪ್ರಕಾರ ದೇಶದ ಸಾಲ ತೀರಿಸಲು ಪ್ರಜೆಗಳಲ್ಲಿ ಸತ್ಯಜ್ಞಾನದ ಶಿಕ್ಷಣವಿರಬೇಕಿತ್ತು. ಅಸತ್ಯದ ಶಿಕ್ಷಣದಲ್ಲಿ ತಂತ್ರ ಬೆಳೆಯುತ್ತದೆ.
ಅದೇ ಮುಂದೆ ಸಾಲದೆಡೆಗೆ ನಡೆಸುತ್ತಾ ಅತಂತ್ರಸ್ಥಿತಿಗೆ ತಲುಪಿಸಿ ಯಂತ್ರಮಾನವರ ಕೈಕೆಳಗೆ ಮಾನವನ ಜೀವನ ಇರುತ್ತದೆ.ಇದನ್ನು ಪ್ರತ್ಯೇಕವಾಗಿ ತಿಳಿಸುವ ಅಗತ್ಯವಿಲ್ಲ.ಕಣ್ಣಿಗೆ ಕಾಣುತ್ತಿರುವ ಸತ್ಯವನ್ನೇ ಅಲ್ಲಗೆಳೆದು ತಮ್ಮ ಸ್ವಾರ್ಥ ಪೂರಿತ ರಾಜಕೀಯ ನಡೆಸುವಾಗ ಕಾಣದ ಸತ್ಯವನ್ನು ಅರ್ಥ ಮಾಡಿಸುವುದು ಕಷ್ಟ. ಆದರೂ ಸಾಲ ಎಂದರೆ ಋಣ ಕರ್ಮ ಎಂದರೆ ಕೆಲಸ. ಸತ್ಕರ್ಮ ಸತ್ಯದಿಂದ ಧರ್ಮ ದಿಂದ ಗಳಿಸಿದ ಹಣದಿಂದ ಹಿಂದಿನ ಸಾಲವನ್ನು ತೀರಿಸುವುದೇ ಜೀವನದ ಗುರಿ. ಇದಕ್ಕಾಗಿ ಮೈ ಮನಸ್ಸು ಯೋಗದೆಡೆಗೆ ನಡೆಯಬೇಕೆನ್ನುತ್ತದೆ ಅಧ್ಯಾತ್ಮ. ಹಾಗಾದರೆ ಇಂದಿನ ಜಗತ್ತಿನಲ್ಲಿ ನಾವು ಕಾಣುತ್ತಿರುವ ವ್ಯವಹಾರದಲ್ಲಿ ಧರ್ಮ ವಿದೆಯೆ? ರಾಜಕೀಯದಲ್ಲಿ ಧರ್ಮ ವಿದೆಯೆ?
ಧರ್ಮದಿಂದ ಶಾಂತಿ ತೃಪ್ತಿ ಮುಕ್ತಿ ಸಿಗೋದಾದರೆ ಯಾರಿಗೆ ಸಿಕ್ಕಿದೆ? ಇದ್ದಾಗಲೇ ಒಳಗಿರುವ ಪರಮಸತ್ಯ ಪರಮಾತ್ಮನ ಕಂಡವರನ್ನು ಜೀವಹೋದಮೇಲೆದೇವರೆಂದರು. ಇದ್ದಾಗ ಅವರೊಳಗಿದ್ದ ದೈವತ್ವವನ್ನು ಕಡೆಗಣಿಸಿದವರೆ ಹೋದ ಮೇಲೆ ಗುಡಿಗೋಪುರ ,ಚರ್ಚ, ಮಸೀದಿ ಮಂದಿರ ಕಟ್ಟಿ ರಾಜಕೀಯ ನಡೆಸಿದರೆ ಏನರ್ಥ?
ಒಳಗೇ ಅಡಗಿದ್ದ ದೈವತ್ವದೆಡೆಗೆ ಹೋಗುವುದಕ್ಕೂ ಹೊರಗಿನ ದೇವರನ್ನು ಬೇಡಿಕೊಂಡು ನಾನೇ ದೇವರೆಂದು ಆಳೋದಕ್ಕೂ ವ್ಯತ್ಯಾಸವಿದೆ. ಹೆಸರು,ಹಣ,ಅಧಿಕಾರ,ಸ್ಥಾನಮಾನವೆಲ್ಲವೂ ಹೊರಗಿನಿಂದ ಸೇರಿಕೊಂಡಿರುವಾಗ ಅದೊಂದು ಋಣ ಅಥವಾ ಸಾಲವಷ್ಟೆ.
ನಾವು ಹೊರಗಿನಿಂದ ಪಡೆದದ್ದನ್ನು ತಿರುಗಿ ಕೊಡೋದಕ್ಕಾಗಿ ಭೂಮಿಗೆ ಬಂದಿರುವಾಗ ಮತ್ತಷ್ಟು ಹೊರಗಿನ ಸಾಲ ಏರಿಸಿದರೆ ಇದನ್ನು ಧರ್ಮ ಎನ್ನಲಾಗದು.
ಕಲಿಗಾಲದ ಪ್ರಭಾವ.ಕಲಿಕೆಯೇ ಸರಿಯಿಲ್ಲದೆ ಕಾಲಕೆಟ್ಟಿದೆ ಎಂದರೆ ಕಲಿಕೆಯನ್ನು ಸರಿಪಡಿಸುವುದೇ ಧರ್ಮ. ಯಾವ ಸರ್ಕಾರ ಬಂದರೂ ಜನರಿಗೆ ಉಚಿತವಾಗಿ ನೀಡಿದರೆ ಅಧಿಕಾರಕ್ಕೆ ದಕ್ಕೆಯಾಗೋದಿಲ್ಲವೆನ್ನುವ ಲೆಕ್ಕಾಚಾರದಲ್ಲಿ ದೇಶವನ್ನೇ ವಿದೇಶಿ ಸಾಲ,ಬಂಡವಾಳ,ವ್ಯವಹಾರ,ಶಿಕ್ಷಣದ ಜೊತೆಗೆ ಪರಧರ್ಮದವರ ಕಡೆಗೆಳೆದರೆ ನಾವ್ಯಾರು? ಪರದೇಶಿಗಳೆ? ಹಿಂದೆ ಸ್ವತಂತ್ರ ಜ್ಞಾನದಿಂದ ಸರಳ ಜೀವನ ನಡೆಸಿ ಸ್ವಾಭಿಮಾನ ಸ್ವಾವಲಂಬನೆ ಜೊತೆಗೆ ಜೀವನಸತ್ಯವನರಿತು ಸತ್ಕರ್ಮ ಸ್ವಧರ್ಮ ಬಿಡದೆ ಸಂತೋಷದಿಂದ ಕೂಡಿಬಾಳುತ್ತಿದ್ದ ಕುಟುಂಬ ವ್ಯವಸ್ಥೆ ಇಂದಿಲ್ಲ. ಕಾರಣ ಹೊರಗಿನವರ ಕುತಂತ್ರದ ಫಲ. ಯಾರನ್ನೋ ನಂಬಿ ಯಾರೋ ಮೋಸಹೋಗಿ ಇನ್ಯಾರೋ ಆಳುತ್ತಿರುವುದರಿಂದ ಇಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಿದೆ.
ಹಿಂದೂ ಮುಸ್ಲಿಂ ರ ಮಧ್ಯೆ ಇಸ್ಲಾಂ ರವರು ತಮ್ಮ ತಂತ್ರದಿಂದ ಬೆಳೆದರು. ತಂತ್ರವೇ ಅತಂತ್ರಸ್ಥಿತಿಗೆ ತಂದಿರುವಾಗ ಅದರಲ್ಲಿ ತತ್ವವಿದೆಯೆ ಇಲ್ಲವೆ ತಿಳಿದು ತತ್ವದೆಡೆಗೆ ನಡೆಸಿದರೆ ಉತ್ತಮ ಬದಲಾವಣೆ ಸಾಧ್ಯವಿದೆ.
ಸರ್ಕಾರಗಳು ಅನಾವಶ್ಯಕವಾದ ಯೋಜನೆಗಳಿಗೆ ಕೋಟ್ಯಾಂತರ ರೂಬಳಸಿ ಪ್ರಗತಿ ಎಂದರೆ ನಮ್ಮಲ್ಲಿ ಸಹಕಾರವಿದೆ.ಅದೇ ಹಣವನ್ನು ಅತ್ಯಗತ್ಯವಾಗಿರುವ ಉತ್ತಮ ಶಿಕ್ಷಣ ನೀಡಲು ಬಳಸಿದ್ದರೆ ಮಾನವನೊಳಗಿರುವ ಅಜ್ಞಾನ ತೊಲಗಿ ಸತ್ಯ ಯಾವುದು ಮಿಥ್ಯ ಯಾವುದು ನಾನ್ಯಾರು ನಾವ್ಯಾರು? ಎಲ್ಲಿಂದ ಬಂದೆವು? ಎಲ್ಲಿಗೆ ಹೋಗುವೆವು? ಜೀವನದ ಉದ್ದೇಶವೇನು? ಎಲ್ಲಿರೋದು?
ಋಣ ಕರ್ಮ, ದೇವರು ಧರ್ಮ ಎಲ್ಲಾ ವಿಷಯಕ್ಕೂ ಉತ್ತರ ಒಳಗಿನಿಂದ ತಿಳಿಯುವುದಕ್ಕೆ ಸಾಲ ಮಾಡುವ ಅಗತ್ಯವಿಲ್ಲ.ಸಾಲ ತೀರಿಸುವ ಅಗತ್ಯವಿದೆ.ಕಾರಣ ಆತ್ಮಶುದ್ದಿ ಆಗೋದಕ್ಕೆ ಸತ್ಯ ಧರ್ಮ ವೇ ಬಂಡವಾಳ. ಇದನ್ನು ಒಳಗೆ ತಿಳಿಯುತ್ತಾ ಬೆಳೆಸಿಕೊಂಡಾಗಲೇ ಪರಾವಲಂಬನೆಯಿಂದ ಬೆಳೆಯುತ್ತಿರುವ ಸಾಲವೇ ಎಲ್ಲಾ ನೋವು ಸಂಕಟ,ಸಮಸ್ಯೆಗಳಿಗೆ ಕಾರಣವಾಗಿ ಜೀವಾತ್ಮನಿಗೆ ತೃಪ್ತಿ ಸಿಗದೆ ಹೋಗಿ ಅದೇ ಅತೃಪ್ತ ಆತ್ಮಗಳಾಗಿ ಮುಂದಿನ ಪೀಳಿಗೆಯವರೆಗೂ ಕುಣಿಸುತ್ತಿದೆ.ಹೊರಗಿನಕುಣಿತದಿಂದ ಮನರಂಜನೆ ಸಿಗಬಹುದು ಆತ್ಮಕ್ಕೆ ತೃಪ್ತಿ ಶಾಂತಿ ಸಿಗಲು ಆತ್ಮಜ್ಞಾನ,ಆತ್ಮಪರಿಶೀಲನೆ,ಆತ್ಮವಿಶ್ವಾಸ ದ ಜೀವನ ಅಗತ್ಯ.
ಹೊರಗಿನಿಂದ ಗಳಿಸಿರುವ ಆಸ್ತಿ ಅಂತಸ್ತು ಹಣ ಅಧಿಕಾರ ಸ್ಥಾನ ಒಂದು ಜನ್ಮದಲ್ಲಿ ಸಂತೋಷಕೊಟ್ಟರೆ ಒಳಗಿನಿಂದ ಗಳಿಸಿದ ಆತ್ಮಜ್ಞಾನ ಜನ್ಮ ಜನ್ಮಗಳವರೆಗೆ ತೃಪ್ತಿ ನೀಡುತ್ತದೆ ಎನ್ನುವ ಸತ್ಯಕ್ಕೆ ತಲೆಬಾಗಿದವರ ಸಾಲಮನ್ನಾ ಆಗಿದೆ.ಪರಮಾತ್ಮನ ಸಾಲ ತೀರಿಸುವುದಕ್ಕೆ ಅಧ್ಯಾತ್ಮ ಅಗತ್ಯ.
ಅಧ್ಯಾತ್ಮ ರಾಜಕೀಯದಲ್ಲಿಲ್ಲ ರಾಜಯೋಗದಲ್ಲಿದೆ. ಜ್ಞಾನಯೋಗವು ಆತ್ಮಸಾಕ್ಷಿಯಿಂದ ಬೆಳೆಯುತ್ತದೆ. ಎಂದರೆ ಆತ್ಮನಿರ್ಭರ ಭಾರತಕ್ಕೆ ಪ್ರಜೆಗಳಲ್ಲಿ ಆತ್ಮಸಾಕ್ಷಿಯ ಜೀವನ ಶಿಕ್ಷಣದ ಅಗತ್ಯವಿತ್ತು.ಇಂದು ಶಿಕ್ಷಣವೇ ವಿದೇಶಿಗಳ ಕಡೆಗೆ ನಡೆದು ಅವರ ಬಂಡವಾಳ,ಸಾಲ,ವ್ಯವಹಾರದಲ್ಲಿ ನಮ್ಮ ತನ ಬಿಟ್ಟು ಹಣಗಳಿಸಿದರೆ ಸಾಲ ತೀರುವುದೆ? ಇದರಲ್ಲಿ ನಮ್ಮ ಹಿಂದಿನವರ ಸಾಲ ತೀರಿಸುವುದು ಕಷ್ಟವಿದೆ.ಕಾರಣ ಹಿಂದಿನ ಜ್ಞಾನ ಮೂಲಾಧಾರವಾಗಿದೆ. ಅದನ್ನು ತಿಳಿಯದೆ ಹೊರಗಿನ ಜ್ಞಾನದಿಂದ ಹಿಂದಿನ ಸಾಲ ತೀರಿಸಲಾಗದು.
ಹಾಗಾಗಿ ಎಷ್ಟು ಲಕ್ಷ ಸಂಪಾದಿಸಿದರೂ ಸಾಲ ಮಾಡೋದು ತಪ್ಪುತ್ತಿಲ್ಲ.ಲಕ್ಷಕ್ಕೆ ತಕ್ಕಂತೆ ಆಸೆ ಆಕಾಂಕ್ಷೆಗಳು ಬೆಳೆದಾಗ ಹಣ ಸದ್ಬಳಕೆ ಆಗದೆ ದುರ್ಭಳಕೆ ಆಗೋದೇ ಹೆಚ್ಚು.
ನೂರು ರೂ ಕಷ್ಟಪಟ್ಟು ಸಂಪಾದಿಸುವ ಒಬ್ಬ ಕೂಲಿಕಾರ್ಮಿಕನಿಗೆ ಸಿಗುವ ತೃಪ್ತಿ ಲಕ್ಷ,ಕೋಟಿ ಒಂದೇ ಸಲ ಗಳಿಸುವ ಭ್ರಷ್ಟನಿಗಿರದು . ಆದರೆ ಲಕ್ಷ ಕೋಟಿ ಕೊಟ್ಟು ಒಂದು ಮಂದಿರ ಕಟ್ಟಿದರೆ ಅದರಲ್ಲಿ ಪ್ರತಿಷ್ಟಾಪನೆ ಮಾಡುವ. ದೇವರಿಗೆ ಶಕ್ತಿ ತುಂಬಿಸಲು ಜ್ಞಾನಯೋಗಿಗೆ ಮಾತ್ರಸಾಧ್ಯ. ಯಾವ ರಾಜಕೀಯ ಶಕ್ತಿಯಿಂದಲೂ ಪರಮಾತ್ಮನ ಕಾಣಲಾಗದು.. ಅಲ್ಲಿ ಜ್ಞಾನಯೋಗಿಯೇ ಇಲ್ಲದೆ ಪ್ರತಿಮೆ ಇದ್ದರೆ ಅದರೊಳಗೆ ಅಸುರಿ ಶಕ್ತಿಯೂ ಪ್ರವೇಶಮಾಡುವ ಸಾಧ್ಯತೆಯಿರುತ್ತದೆ ಎನ್ನುವ ಕಾರಣಕ್ಕಾಗಿ ಹಿಂದೂ ದೇವಾಲಯಗಳ ಗರ್ಭ ಗುಡಿಯೊಳಗೆ ದುಷ್ಟ ಶಕ್ತಿ ಪ್ರವೇಶಮಾಡದಂತೆ ಮಂತ್ರ ತಂತ್ತ ಯಂತ್ರಗಳ ಮೂಲಕ ದಿಗ್ಭಂಧನ ಮಾಡುವುದು ಶಾಸ್ತ್ರ ವಾಗಿದೆ. ಆ ಶಾಸ್ತ್ರ ದ ಹಿಂದಿನ ವಿಜ್ಞಾನವರಿಯದೆ ಎಷ್ಟೋ ದೇವಾಲಯಗಳು ವ್ಯವಹಾರಕ್ಕೆ ತಿರುಗಿ ರಾಜಕೀಯವ್ಯಕ್ತಿಗಳ ಕೈವಶವಾಗಿ ದೈವತ್ವ ಕಳೆದುಕೊಂಡು ಸಾಲ ಮಿತಿಮೀರಿದೆ. ಹಾಗಾದರೆ ದೇವರಿಂದ ಸಾಲ ತೀರಿಸಬಹುದೆ? ದೇವರಿರೋದು ಎಲ್ಲಿ?
ಆತ್ಮವೇ ದೇವರು, ಸತ್ಯವೇ ದೇವರು,ಧರ್ಮ ವೇ ದೇವರು.
ಭೂಮಾತೆ, ಹೆತ್ತತಾಯಿ ತಂದೆ ...ಎಲ್ಲಾ ಬಂಧುಬಳಗದವರ ಜೊತೆಗೆ ಇರುವ ನನ್ನಲ್ಲಿ ದೈವತ್ವವಿಲ್ಲವಾದರೆ ದೇವರನ್ನು ಗುರುತಿಸಲಾಗದು.
ಕೇಳಿದ್ದೆಲ್ಲಾ ಕೊಡುವವನು ದೇವರಲ್ಲ. ಯಾರಿಗೆ ಯಾವಾಗ ಎಷ್ಟು ಯಾಕೆ ಕೊಡಬೇಕೆಂಬ ಅರಿವಿದ್ದವನೆ ದೇವರು.ಅರಿವೇ ಗುರು,ದೇವರು...ಇದಕ್ಕೆ ಮಾನವ ಮಧ್ಯವರ್ತಿ ಯಾಗಿದ್ದು ಸತ್ಯ ಯಾವುದು ಅಸತ್ಯ ಯಾವುದೆನ್ನುವ ಬಗ್ಗೆ ತಿಳಿದು ತನ್ನ ಹಿಂದಿನ ಸಾಲ ತೀರಿಸುವತ್ತ ನಡೆಯುವುದೇ ಧರ್ಮ ವಾಗಿತ್ತು. ಹಿಂದಿನ ರಾಜಪ್ರಭುತ್ವ ಇಂದಿನಪ್ರಜಾಪ್ರಭುತ್ವದ ಶಿಕ್ಷಣದಲ್ಲಿಯೇ ವಿರೋಧವಿದ್ದಾಗ ಜ್ಞಾನವೂ ಬೇರೆಯಾಗಿರುತ್ತದೆ. ಆದರೆ ಒಳಗಿರುವ ಆತ್ಮ ಒಂದೇ. ಎಲ್ಲದ್ದಕ್ಕೂ ಸಾಕ್ಷಿಭೂತವಾಗಿದ್ದು
ಅದಕ್ಕೆ ತಕ್ಕಂತೆ ಫಲ ನೀಡುವ ಪರಮಾತ್ಮನ ಒಳಗಿರುವ ಜೀವಾತ್ಮನಿಗೆ ಎಲ್ಲವೂ ನನ್ನಿಂದಲೇ ನಡೆಯುತ್ತಿದೆ ಎನ್ನುವ ಭ್ರಮೆ ಹೆಚ್ಚಾದಾಗಲೇ ಋಣ ಬಾಧೆ ಹೆಚ್ಚಾಗುತ್ತದೆ.ಆಗಲೇ ಸಂಕಟ. ಸಂಕಟಬಂದಾಗ ವೆಂಕಟರಮಣ ಎನ್ನುವರು.
ವೆಂಕಟೇಶ್ವರ ನ ಸಾಲ ತೀರಿಸಲು ಮಾನವರು ಹೊರಟು ಈಗ ದೇಶದ ತುಂಬಾ ದೇವರುಗಳು ಆದರೆ ದೇಶದ ಸಾಲ ತೀರಿಸಲು ದೇವರುಗಳಿಗೆ ಸಾಧ್ಯವಿಲ್ಲವಾಗುತ್ತಿದೆ ಎಂದರೆಇದರಲ್ಲಿ ಸತ್ಯ ಯಾವುದು? ಮಿಥ್ಯ ಯಾವುದು?
ನಿಜವಾಗಿಯೂ ಭಾರತೀಯರು ಬಡವರೆ? ಒಂದೂಮನೆಯಿಲ್ಲದೆಯೂ ಕಾಡಿನಲ್ಲಿ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದ ಯೋಗಿಗಳೆಲ್ಲಿ? ಸಾಲದ ಹಣದಲ್ಲಿಅನೇಕ ಮನೆ ಕಟ್ಟಿಕೊಂಡು ಊಟಕ್ಕೆ ಸಮಯವಿಲ್ಲದೆ ದೇವರನ್ನು ನೆನಪಿಸಿಕೊಳ್ಳಲಾಗದೆ ನಾನೇ ಸರಿ ಎನ್ನುವ ಅಹಂಕಾರದಲ್ಲಿರುವ ಶ್ರೀಮಂತ ನ ಭೋಗವೆಲ್ಲಿ? ಒಟ್ಟಿನಲ್ಲಿ ಸಾಲ ಮಾಡೋದು ತಪ್ಪಲ್ಲ.ಅದನ್ನು ತೀರಿಸಲಾಗದೆ ಹೋಗೋದುತಪ್ಪು.
ಮಕ್ಕಳು ಮೊಮ್ಮಕ್ಕಳವರೆಗೂ ಆಸ್ತಿ ಮಾಡಿ ಸಾಲ ಬೆಳೆಸಿದರೆ ಸಾಲ ತೀರುವವರೆಗೂ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗದು.ಇದನ್ನು ಅಧ್ಯಾತ್ಮ ತಿಳಿಸಿರುವಾಗ ಈಗ ಎಷ್ಟು ಜನ ಹಿಂದೂಗಳು ಇದನ್ನರಿತು ಧರ್ಮ ರಕ್ಷಣೆ ಮಾಡಲು ಸಾಧ್ಯವಾಗಿದೆ?
ಹಣದ ಹಿಂದಿರುವ ಋಣದಲೆಕ್ಕಾಚಾರ ಮಾಡೋದು ಕಷ್ಟ.
ಹಾಗಾಗಿ ಋಣ ತೀರಿಸಲು ಸರ್ಕಾರಗಳು ತಂತ್ರ ಮಾರ್ಗ ಹಿಡಿದಿವೆ. ಇದರಿಂದ ಸ್ವತಂತ್ರ ಜ್ಞಾನ ಬಂದರೆ ಉತ್ತಮ ಪ್ರಗತಿ.
ಅತಂತ್ರಸ್ಥಿತಿಗೆ ಜೀವನ ತಲುಪಿದರೆ ಅಧೋಗತಿ. ಯಾರಿಗೆ ಎಷ್ಟು ಅರ್ಥ ವಾಗುವುದೋ ಅದೂ ಜ್ಞಾನದ ಮೇಲಿದೆ.
ಉಂಡೂ ಹೋದ ಕೊಂಡೂ ಹೋದ ಎನ್ನುವಂತಹ ಪರಿಸ್ಥಿತಿಯಲ್ಲಿದೆ ಭಾರತದ ಆರ್ಥಿಕ ಸ್ಥಿತಿ.
ವಿದೇಶಿ ಕಂಪನಿಗಳಲ್ಲಿ ದುಡಿಯುವ ಭಾರತೀಯ ಯುವಪೀಳಿಗೆಯ ಶ್ರಮ ದೇಶದ ಸಾಲ ತೀರಿಸುವತ್ತ ನಡೆಯದೆ ವಿದೇಶದೆಡೆಗೆ ಹೊರಟಿದೆ. ಹಾಗಾದರೆ ಇಲ್ಲಿನ ನೆಲ ಜಲದ ಋಣ ತೀರಿಸೋರು ಯಾರು?
ಸರ್ಕಾರಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿವೆ. ಅದರಲ್ಲಿ ಮೇಲು ಕೀಳಿನ ಜಾತಿ ರಾಜಕೀಯ. ಧರ್ಮ ಧರ್ಮಗಳ ಅಂತರದಲ್ಲಿ ಮಧ್ಯವರ್ತಿಗಳ ಸಾಮ್ರಾಜ್ಯ ಸ್ಥಾಪನೆಯಾಗಿ ಈ ಕಡೆ ಪೂರ್ಣ ಸತ್ಯವೂ ಇಲ್ಲ ಪೂರ್ಣ ಮಿಥ್ಯವೂ ಇಲ್ಲ. ಸತ್ಯ ತಿಳಿಸುವುದಕ್ಕೆ ಅಧಿಕಾರ ಹಣವಿಲ್ಲ, ಮಿಥ್ಯ ಬೆಳೆಸುವುದಕ್ಕೆ ರಾಜಕೀಯವಿದೆ. ಭೂಮಿಯ ಮೇಲೇ ನಿಂತು ಭೂಮಿಯನ್ನು ತನ್ನ ವಶಕ್ಕೆ ಪಡೆದು ಆಳುವ ಅಸುರರ ಒಳಗೇ ಸುರರಿರೋವಾಗ ಸ್ವತಂತ್ರ ಯಾರಿಗಿದೆ?
ಒಳಗಿರುವ ದೈವಶಕ್ತಿಯನ್ನರಿತರೆ ಅಸುರ ಶಕ್ತಿ ದೂರವಾಗಿ ಸಾಲದಿಂದ ಮುಕ್ತಿ ಪಡೆಯಬಹುದು. ದೈವಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಆಳಿದರೆ ಆಳಾಗಿಯೇ ಸಾಲ ತೀರಿಸಬೇಕು. ಜನ್ಮಜನ್ಮಾಂತರದ ಈ ಋಣದ ಲೆಕ್ಕಾಚಾರ
ಮಾಡಲಸಾಧ್ಯ.ಅದಕ್ಕೆ ಬಂದದ್ದು ಬರಲಿ ಗೋವಿಂದನ ದಯೆ ಒಂದಿರಲಿ ಎಂದರು ದಾಸ ಶ್ರೇಷ್ಟರು.
ಹಾಗೆಯೇ ದೈವ ಋಣ ತೀರಿಸಲಾಗದೆ ನೀನ್ಯಾಕೋ ನಿನ್ನ ಹಂಗ್ಯಾಕೋನಾಮವೊಂದಿದ್ದರೆ ಸಾಕೋ ಎಂದರು.ಕೆಲವು ಸರಳ ಸತ್ಯ ಅನುಭವಿಸಿಯೇ ತಿಳಿಯುವುದು ಉತ್ತಮ.
ಯಾವಾಗ ಅಸತ್ಯಕ್ಕೆ ಅಸಹಕಾರ ಸಿಗುವುದೋ ಆಗ ಸಾಲ ಬೆಳೆಯುತ್ತದೆ.ಹಾಗೆಯೇ ಸರ್ಕಾರಗಳ ಅಸತ್ಯದ ಅಧರ್ಮ ವ್ಯವಹಾರಕ್ಕೆ ಪ್ರಜೆಗಳಾದವರು ಸಹಕರಿಸಿದಷ್ಟೂ ದೇಶದ ಸಾಲ ಬೆಳೆಯುತ್ತದೆ. ದೇಶದೊಳಗೆ ಮನೆ ,ಮಂದಿರ. ಮಸೀದಿ...ಮನಸ್ಸಿರೋವಾಗ ದೇಶ ಬೇರೆ ದೇವರು ಬೇರೆ ಮನೆ ಬೇರೆ ಮನಸ್ಸು ಬೇರೆ ಎಂದರೆ ಅದ್ವೈತ ತತ್ವ ಬೇರೆ,ದ್ವೈತ ಬೇರೆ,ವಿಶಿಷ್ಟಾದ್ವೈತ ಬೇರೆ ಎಂದಂತೆ.
ಆದರೆ ಭೂಮಿ ಒಂದೇ ಇದರ ಋಣ ತೀರಿಸಲು ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಿದ ಸೇವಾಕರ್ಮ ಗಳಿಂದ ಸಾಧ್ಯವೆಂದಿರೋದು ಭಗವದ್ಗೀತೆ.
ಇದರಲ್ಲಿನ ಯೋಗದ ಅರ್ಥ ಅಪಾರ್ಥ ಮಾಡಿಕೊಂಡು ರಾಜಕೀಯಕ್ಕಿಳಿದವರಿಗೆ ನಿಜವಾದ ರಾಜಯೋಗದ ಶಿಕ್ಷಣ ಕೊಟ್ಟರೆ ಉತ್ತಮ ಬದಲಾವಣೆಯ ಗಾಳಿಬೀಸಬಹುದು.
ಆದರೆ ವಿಪರ್ಯಾಸವೆಂದರೆ ರಾಜಯೋಗಿಗಳಾದವರು ಸಂಸಾರ ಬಿಟ್ಟು ಹೊರಗೆ ನಡೆದರೆ ಗೃಹಸ್ಥರ ಅನುಭವ ಆಗದೆ ಅವರ ಹಣದ ಋಣದಲ್ಲಿಯೇ ಇರಬೇಕಷ್ಟೆ. ತನ್ನ ಜೀವಾತ್ಮನಿಗೆ ಪರಮಾತ್ಮನ ಕಾಣೋದಕ್ಕೆ ತಾನೇ ಶ್ರಮ ಪಟ್ಟು ಸತ್ಯ ತಿಳಿದು ಸಂಸಾರದೊಳಗಿದ್ದು ಬದುಕಬೇಕು.
ಓದಿ ಕೇಳಿ,ನೋಡಿ ಹೇಳಿದಾಗ ಅರ್ಧ ಸತ್ಯವಾಗುತ್ತದೆ.ಇನ್ನರ್ಧ ಅಸತ್ಯದಿಂದ ಇನ್ನಷ್ಟು ಸಾಲ ಬೆಳೆಯುತ್ತದೆ. ಆದರೂ ಕೆಲವರಿಗೆ ಅನುಭವ ಜ್ಞಾನವಿದೆ ಅಧಿಕಾರ ಹಣವಿಲ್ಲ.ಹಲವರಿಗೆ ಅಧಿಕಾರ ಹಣವಿದೆ ಸತ್ಯದ ಅನುಭವವಿಲ್ಲದೆ ನೇರವಾಗಿ ನಡೆದವರನ್ನೂ ತಡೆದು ನಿಲ್ಲಿಸಿ ಆಳುತ್ತಿರುವುದೇ ದೊಡ್ಡ ಸಮಸ್ಯೆ ಗೆ ಕಾರಣವಾಗುತ್ತಿದೆ.
ಭಾರತದಂತಹ ಪವಿತ್ರ ದೇಶ,ಯಾತ್ರಾಸ್ಥಳ ಇಂದು ಪ್ರವಾಸಿತಾಣವಾಗಿ ವ್ಯವಹಾರದ ಗೂಡಾಗುತ್ತಿರುವುದೇ ದೊಡ್ಡ ದುರಂತ. ಸ್ವಚ್ಚ ಶಿಕ್ಷಣ ವ್ಯವಸ್ಥೆ ಯಿಲ್ಲದೆ ಆರೋಗ್ಯವಿಲ್ಲ. ಆರೋಗ್ಯ ಹಾಳಾದರೆ ರೋಗಿಗಳ ದೇಶ.ಇದಕ್ಕಾಗಿ ಹೈಟೆಕ್ ಆಸ್ಪತ್ರೆ ಗೆ ಸುರಿಯುವ ಹಣದಿಂದ ಜೀವಾತ್ಮನಿಗೆ ತೃಪ್ತಿ ಸಿಗುವುದೆ? ಜೀವ ಶಾಶ್ವತವಲ್ಲ ಆತ್ಮ ಶಾಶ್ವತ.ಹೀಗಾಗಿ ಮಕ್ಕಳಿರುವಾಗಲೇ ಸಂಸ್ಕಾರಯುತ ಶಿಕ್ಷಣ ನೀಡಿ ಜೀವನದ ಗುರಿ ಅರ್ಥ ವಾಗಿದ್ದರೆ ಸ್ವತಂತ್ರ ಜ್ಞಾನ ದಿಂದ ಸಾಲ ತೀರಿಸಬಹುದು.ಕೋಟಿ ವಿದ್ಯೆಗಿಂತ ಮೇಟಿವಿದ್ಯೆ ಮೇಲು. ವಿದೇಶಿ ಋಣದಲ್ಲಿ ಸ್ವದೇಶಿ ಸಾಲ ತೀರಿಸಬಹುದೆ?
ಮನೆಯವರ ಸಾಲ ಸರ್ಕಾರ ತೀರಿಸಬೇಕೆ?
ಕಷ್ಟಪಟ್ಟು ದುಡಿಯುವಕೈಗೆ ಕೆಲಸ ಕೊಡದೆ ಉಚಿತ ಊಟ,ವಸತಿ ವಸ್ತ್ರ ಕೊಟ್ಟರೆ ದುಡಿಯುವ ಮನಸ್ಸಿರುವುದೆ?
ಯುವಪೀಳಿಗೆಯನ್ನು ರಾಜಕೀಯದ ದಾಳ ಮಾಡಿಕೊಂಡು ಮನೆಯಿಂದ ಹೊರಗೆಳೆದರೆ ಒಳಗಿದ್ದ ಜ್ಞಾನಕ್ಕೆ ಬೆಲೆಯೆಲ್ಲಿ?
ಪೋಷಕರೆ ಮಕ್ಕಳನ್ನು ಮನೆಯಿಂದ ಹೊರಹಾಕಿ ದೂರ ಮಾಡಿಕೊಂಡರೆ ಸರ್ಕಾರ ಕಾರಣವಾಗದು.
ಒಟ್ಟಿನಲ್ಲಿ ಎಲ್ಲದ್ದಕ್ಕೂ ಕಾರಣ ನಮ್ಮ ಸಹಕಾರವಷ್ಟೆ.ಇದು ಸತ್ಯ ಧರ್ಮ ಕ್ಕೆ ಸಿಕ್ಕಿದರೆ ಸಾಲ ತೀರುತ್ತದೆ.ಅಸತ್ಯ ಅಧರ್ಮಕ್ಕೆ ಇದ್ದರೆ ಭ್ರಷ್ಟಾಚಾರ ಬೆಳೆದು ಭ್ರಷ್ಟರ ವಶದಲ್ಲಿ ಜೀವವಿರುತ್ತದೆ.
ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು.
ಇದು ಸಾಲದು ಅಂದರೆ ಸಾಲ ಅದು ಎಂದರ್ಥ.
ಮಹಾತ್ಮರುಗಳು ಯಾಕೆ ಯೋಗಮಾರ್ಗ ಹಿಡಿದರು,? ಭೋಗದಿಂದ ದೂರವಾದರು? ಕಾರಣ ಸಾಲದಿಂದಬಿಡುಗಡೆ ಪಡೆಯಲು ಯೋಗಮಾರ್ಗ ಅಗತ್ಯ.
ಆರೋಗ್ಯಕರಜೀವನದಿಂದ ಸುಖ ಸಮೃದ್ದಿ,ಶಾಂತಿ ತೃಪ್ತಿ ಸಿಗೋವಾಗ ಆರೋಗ್ಯಕೆಡಿಸಿಕೊಂಡು ಔಷಧಗಳಿಗೆ ಲಕ್ಷಾಂತರ ಹಣವನ್ನು ಸುರಿಯುವ ಅಗತ್ಯವಿದೆಯೆ? ಔಷಧಕ್ಕೆ ಬಳಸುವ ಹಣವನ್ನು ದಾನಧರ್ಮ/ಕಾರ್ಯಕ್ಕೆ ಬಳಸಿದರೆ ಅಸುರರ ಕಣ್ಣು ಕೆಂಪಾಗುತ್ತದೆ ಎಂದರೆ ಅಜ್ಞಾನ ಮಿತಿಮೀರಿದೆ. ಹೊರಗಿನ ತಳುಕು ಬಳುಕಿನ ಮನರಂಜನೆ ಒಳಗಿನ ಆತ್ಮಜ್ಞಾನವನ್ನು ಒಪ್ಪಿಕೊಂಡು ನಡೆಯದಂತೆ ತಡೆಯುತ್ತದೆ. ಎರಡೂ ಇತಿಮಿತಿಯಲ್ಲಿದ್ದರೆ ಸಮಾಧಾನ.
No comments:
Post a Comment