ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, February 29, 2024

ತಪ್ಪು ಮಾಡದವರಿದ್ದಾರೆಯೆ?

ನಮ್ಮ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸುವ‌ನಮಗೆ ಬೇರೆಯವರ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸೋ ಗುಣ ಬರೋದಿಲ್ಲ ಎಂದರೆ ತಪ್ಪು ನಮ್ಮೊಳಗೇ ಬೆಳೆಯುತ್ತಿದೆ ಎಂದರ್ಥ. ಮಕ್ಕಳ ತಪ್ಪು ತಿದ್ದಿ ಸರಿಪಡಿಸುವುದು ಧರ್ಮ  ಇದು ಶಿಕ್ಷಕರಿಗೆ ಅತ್ಯಗತ್ಯ.ಆದರೆ ಕಾಲ ಬದಲಾಗಿದೆ ಶಿಕ್ಷೆ ನೀಡೋ ಹಾಗಿಲ್ಲ. ಹೇಳಿ ಬೆದರಿಸೋ ಹಾಗಿಲ್ಲ  ಆದರೆ  ತಪ್ಪು ತಪ್ಪಾದ ವಿಷಯಗಳನ್ನು ಮಕ್ಕಳ ತಲೆಗೆ ತುಂಬುವ ಶಿಕ್ಷಣಕ್ಕೆ ಎಲ್ಲರ  ಸಹಕಾರವಿದೆ. ಹೀಗಾಗಿ  ಎಲ್ಲರ ಕಣ್ಣಿಗೆ ಸರಿಯಾದ ಸತ್ವ ಸತ್ಯ ತತ್ವ ಕಣ್ಣಿಗೆ  ತಪ್ಪಾಗಿ ಕಾಣುತ್ತದೆ. ಅಸತ್ಯ ತಂತ್ರ ಸರಿಯಾಗಿ ಕಾಣುತ್ತದೆ. ಇದನ್ನು ಮಕ್ಕಳೂ ಕಲಿತು ಮುಂದೆ ಹೋದಾಗ  ಮಕ್ಕಳ ತಪ್ಪು ಕಣ್ಣಿಗೆ ಕಂಡರೂ ಶಿಕ್ಷೆ ನೀಡುವ ಹಂತದಲ್ಲಿರೋದಿಲ್ಲ. ಹೊರಗಿನವರಿಂದ ಶಿಕ್ಷೆ ಅನುಭವಿಸುವಾಗ ಹೇಳುವ ಅಧಿಕಾರವೂ ಇರೋದಿಲ್ಲ.
ಇದೊಂದು ರಾಜಕೀಯದಿಂದ ಬೆಳೆದಿರುವ ದೋಷವಾಗಿರುವಾಗ ಅದನ್ನು ರಾಜಯೋಗದ ವಿಚಾರಗಳನ್ನು  ತಿಳಿದು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟವರಿಗಷ್ಟೆ ತಪ್ಪು ಯಾವುದು ? ಯಾರದ್ದು? ಸರಿ ಯಾರು? ಎಲ್ಲಿದೆ ಎಂದು ತಿಳಿಯಬಹುದು.ಕಾಲ ಮೀರುವ ಮೊದಲು  ಹಿಂದಿರುಗಿದರೆ ಮೂಲ ಸತ್ಯದ ಕಡೆಗೆ ನಿಧಾನವಾಗಿಯಾದರೂ  ಒಳಗಿರುವ ತಪ್ಪು ಕಲ್ಪನೆಗಳಿಂದ ಬಿಡುಗಡೆ ಪಡೆಯಬಹುದು. ಹೊರಗಿನವರು  ಕೊಟ್ಟಿರುವ ವಿಶೇಷಜ್ಞಾನವನ್ನು ಒಳಗಿರುವವರ ವಿಶೇಷಜ್ಞಾನದೆಡೆಗೆ ನಡೆಸಿದರೆ  ಸಂಪೂರ್ಣ ಸತ್ಯ ಅರ್ಥ ವಾಗದಿದ್ದರೂ  ಹೊರಗಿನ ಜ್ಞಾನದಿಂದ ನಮ್ಮ ಬುದ್ದಿ ಬೆಳೆದಿದೆ.ಆದರೆ ಸತ್ಯಜ್ಞಾನ‌ಕುಸಿದಿದೆ. ತತ್ವವಿಲ್ಲದ ತಂತ್ರ ಅತಂತ್ರವಾಗಿರುತ್ತದೆ.
ತಪ್ಪು ಮಾನವ ಮಾಡದೆ ಮರ ಮಾಡುವುದೆ? ಎನ್ನುವರು
ಸತ್ಯ .ಮಾನವನ ಮನಸ್ಸು ತಪ್ಪು ಗ್ರಹಿಕೆಗೆ ಒಳಪಟ್ಟಾಗ ತಿಳಿಯದೆಯೇ  ತಪ್ಪು ದಾರಿ ಹಿಡಿದರೂ ಸರಿಯಾದ ಮಾರ್ಗ ದರ್ಶಕರ ಗುರು ಹಿರಿಯರ ಹಿಂದೆ ಇರುವ ಸತ್ಯಜ್ಞಾನದ ಅನುಭವಪೂರಿತ  ಹಿತನುಡಿಗಳಿಂದ ಸರಿಪಡಿಸಿಕೊಂಡರೆ
ಉತ್ತಮ ಜೀವನ. ಅದುಬಿಟ್ಟು ಮಧ್ಯವರ್ತಿಗಳು ರಾಜಕಾರಣಿಗಳ ಹಿಂದೆ ನಡೆದರೆ ಇನ್ನಷ್ಟು ಅತಂತ್ರಸ್ಥಿತಿಗೆ ಜೀವನ ಬಂದು ನಿಲ್ಲುವುದು. ಸ್ವತಂತ್ರ ವಾಗಿರುವ ಒಂದೇ ಸತ್ಯವನರಿಯದೆ  ಅಸಂಖ್ಯಾತವಾಗಿ ಬೆಳೆದಿರುವ ಅನೇಕ ಅಸತ್ಯಕ್ಕೆ ಬೆಲೆಕೊಟ್ಟು  ತಪ್ಪು ಮಾಡಿದ ಜೀವಕ್ಕೆ ಹಿಂದಿರುಗಿ ಬರೋದಕ್ಕೆ  ಸಮಯಬೇಕಷ್ಟೆ. ಮಕ್ಕಳಿಗೂ ಹಾಗೆ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳದಿದ್ದರೆ ದೊಡ್ಡ ದಾಗಿ ಬೆಳೆದಾಗ ಶಿಕ್ಷೆ ಕೊಡಲೇಬೇಕು.ಆಗಲೂ  ಕೊಡದಿದ್ದರೆ ಅದೇ ಶಿಕ್ಷೆ ಪೋಷಕರು ಅನುಭವಿಸುವಂತಾಗಬಹುದು. ದೈಹಿಕ ಶಿಕ್ಷೆಗಿಂತ ಮಾನಸಿಕ ಹಿಂಸೆ ಹೆಚ್ಚು ನೋವಾಗುವುದಲ್ಲವೆ?
ತಪ್ಪು ಯಾರೇ ಮಾಡಲಿ ಅದು ತಪ್ಪೆ. ಇಂದು ಹಣದಿಂದ ನ್ಯಾಯಾಲಯವು ಬೆಳೆದಿದೆ ಎಂದರೆ ತಪ್ಪಿತಸ್ಥರು ಹೊರಗೆ  ಸ್ವತಂತ್ರವಾಗಿ ಬೆಳೆದಿರುವರು.ಇದಕ್ಕೆ ಕಾರಣ ಶಿಕ್ಷಣ.
ಗುರುವೇ ದಾರಿತಪ್ಪಿದರೆ ಶಿಷ್ಯನ ಗತಿ ಏನು?
ಮನೆಯೊಳಗೆ ಇರುವ ಗುರುಗಳೇ ಮಕ್ಕಳಿಗೆ ಹಣದಿಂದ ಬೆಳೆಸಿದ್ದರೆ  ಬೇಲಿಯೇ ಸರಿಯಿರದು.
ದೇಶ ರಕ್ಷಣೆ,ಧರ್ಮ ರಕ್ಷಣೆ ಮಾಡೋರೇ ತಪ್ಪಿತಸ್ಥ ರ ವಶದಲ್ಲಿದ್ದರೆ  ದೇಶ ಧರ್ಮ ಉಳಿಯುವುದೆ?

ಭಗವಂತನ ನ್ಯಾಯಾಲಯದಲ್ಲಿ ಒಂದೇ ನ್ಯಾಯ .ತಕ್ಕಡಿಯಲ್ಲಿ  ಎರಡು ಬಟ್ಟು ಇಟ್ಟು ಒಂದು ಹೆಚ್ಚು ತೂಗಿದರೆ ಇನ್ನೊಂದು ಕಡೆ ನಿಲ್ಲುವನು.ಆದರೆ ಅವನ‌ ಪ್ರತಿನಿಧಿಗಳಾದ ಮಾನವರು ಹಣಕ್ಕಾಗಿ ಭಗವಂತನನ್ನೇ ತೂಗಲು ಹೋದರೆ  ವಿನಾಶವಷ್ಟೆ.
ಎರಡೂ ಪಕ್ಷ ಭ್ರಷ್ಟಾಚಾರದ ಹಣದಲ್ಲಿಯೇ ದೇಶದ ಸಾಲ ತೀರಿಸುತ್ತೇವೆಂದರೆ ತೀರುವುದೆ? ದೇವರ ಸಾಲ ಶಿಷ್ಟಾಚಾರದ ಹಣದಲ್ಲಿಯೇ ತೀರಿಸಬೇಕಲ್ಲವೆ? ತಪ್ಪು ಯಾರದ್ದು? ದೇವರು ಮಾನವನನ್ನು ನಡೆಸಿದ್ದೆ? ಮಾನವ ದೇವರನ್ನು ಬೆಳೆಸಿದ್ದೆ? ದೈವತ್ವ ಬೆಳೆಸೋ ಶಿಕ್ಷಣ ನೀಡಿದಾಗಲೇ ತಪ್ಪು ಒಪ್ಪಿಕೊಳ್ಳಲು ಸಾಧ್ಯವಿದೆ ಎನ್ನುವುದು ಸನಾತನ ಧರ್ಮ.

No comments:

Post a Comment