ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, February 26, 2024

ಮಾನವ ಅದರಲ್ಲಿ ಭಾರತೀಯರು ಎಡವಿದ್ದೆಲ್ಲಿ?

ಮಾನವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆಬಂದರೆ ಶಿಕ್ಷಣದಲ್ಲಿ ಎನ್ನುವ ಉತ್ತರ ಬರುತ್ತದೆ. ಶಿಕ್ಷಣ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರಬೇಕು.ಅವರೊಳಗಿದ್ದ ಆತ್ಮವಿಶ್ವಾಸ ಹೆಚ್ಚಿಸಬೇಕು ಅವರ ಜೀವನ ಅವರೇ ನಡೆಸಿಕೊಳ್ಳುವಂತಾಗಬೇಕಾದರೆ ಅವರ ಸಂಶೋಧನೆ  ಯಾರೋ  ಹೊರಗಿನವರು ನಡೆಸಬಹುದೆ? ಆತ್ಮಜ್ಞಾನಿಗಳಿಗೆ ಸಾಧ್ಯವಿದೆ ಮನೋವಿಜ್ಞಾನಿಗಳಿಗೂ ಸಾಧ್ಯವಿದೆ.ಹೀಗಾಗಿ ಪ್ರಾಥಮಿಕ ಶಿಕ್ಷಣದಲ್ಲಿಯೇ ಇವರನ್ನು ಶಿಕ್ಷಕರನ್ನಾಗಿಸಿ ಮಕ್ಕಳ ಲ್ಲಿ ಅಡಗಿರುವ‌ ಜ್ಞಾನ,ಆಸಕ್ತಿ ಪ್ರತಿಭೆಯನ್ನು ಗುರುತಿಸಿ ಅದೇ ವಿಷಯಕ್ಕೆ ಪೂರಕವಾದ ಹೆಚ್ಚಿನ ಶಿಕ್ಷಣ  ನೀಡಿದಾಗಲೇ ಪರಿಪೂರ್ಣತೆ  ಮಕ್ಕಳಲ್ಲಿ ಕಾಣಬಹುದು.
ಯಾರಿಗೆ ಗೊತ್ತು ಯಾವ ದೇಹದಲ್ಲಿ ಯಾವ ಮಹಾತ್ಮರಿರುವರೋ? ಮಹಾತ್ಮರನ್ನು ಪ್ರತಿಮೆಯಾಗಿ ದೇವರಾಗಿ  ಹೊರಗಿಟ್ಟು ತಮ್ಮ ಸ್ವಾರ್ಥ ದ ರಾಜಕೀಯ ನಡೆಸೋ ಬದಲಾಗಿ‌ಮಕ್ಕಳನ್ನೇ ಮಹಾತ್ಮರಾಗಿಸುವತ್ತ ನಡೆಸಿದರೆ  ಉತ್ತಮ ಬದಲಾವಣೆ ಸಾಧ್ಯವಿದೆ.
ನಾವ್ಯಾರು? ನಾನ್ಯಾರು? ಎಂಬ‌ಪ್ರಶ್ನೆ ಒಳಗಿನಿಂದ ಬರೋದೇ ಬೇರೆ, ನೀನ್ಯಾರೆಂದು ತಿಳಿಸೋದೇ ಬೇರೆ .ಒಟ್ಟಿನಲ್ಲಿ ಯಾರೋ ನಮ್ಮ ಜೀವನ ನಡೆಸುವರೆಂದು ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಲು ಸೋತರೆ  ಹೊರಗಿನವರೆ ಬೆಳೆಯೋದು. ಈಗಲೂ  ಕಾಲಮಿಂಚಿಲ್ಲ.ನಿಮ್ಮ‌ನಿಮ್ಮ ಮಕ್ಕಳ ಭವಿಷ್ಯ ಸರ್ಕಾರ ಕೊಡುವ ಶಿಕ್ಷಣದಲ್ಲಿಲ್ಲ.ನನೀವೇ ಕೊಡುವ ಸಂಸ್ಕಾರಯುಕ್ತ ಜ್ಞಾನದಲ್ಲಿದೆ.ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಮನೋವೈಧ್ಯರಾಗಲೇಬೇಕಿಲ್ಲ.ನಮ್ಮ ಮನಸ್ಸನ್ನು ಸ್ವಚ್ಚ ಮಾಡಿಕೊಂಡು  ಒಳ ಜಗತ್ತನ್ನು ಅರ್ಥ ಮಾಡಿಕೊಳ್ಳುತ್ತಾ ಹೊರಗಿನ ಸತ್ಯಾಸತ್ಯತೆಯನ್ನು ತಿಳಿದರಾಯಿತು. ನಾವೀಗ ಒಳಗೇ  ಸರಿಯಾಗಿ ತಿಳಿಯದೆ ಹೊರಗೆ ಬಂದಿರುವಾಗ ನಮ್ಮ  ಶಕ್ತಿಯನ್ನು  ಹಂಚಿಕೊಂಡು ಬೆಳೆಯುವ ಮಕ್ಕಳ ಗತಿ ನಮ್ಮ ಮನಸ್ಥಿತಿಯ ಮೇಲಿದೆ.ಶಿಕ್ಷಣದಿಂದ ಮಾನವನಿಗೆ ಶಾಂತಿ ಸಿಗಬೇಕೇ ಹೊರತು ಅಶಾಂತಿಯಾಗಬಾರದು. ಇಲ್ಲಿ ಭಾರತೀಯ ಶಿಕ್ಷಣವನ್ನು ಎಲ್ಲರೂ ಹೊಗಳುವರೆ ಆದರೆ ಕೊಡೋ ಶಿಕ್ಷಣದಲ್ಲಿ ಭಾರತೀಯತೆ ಇದೆಯೆ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಇಲ್ಲ ಎನ್ನುವ ಉತ್ತರ ಬಂದರೂ ಕೊಡಲು ತಯಾರಿಲ್ಲ.ಕಾರಣ ಅದರ ಆಳ ಅಗಲ ಅಷ್ಟು ಸುಲಭವಾಗಿ ಅರ್ಥ ವಾಗದು.ನಾವೇ ಆಳಕ್ಕಿಳಿದು ಅರ್ಥ ಮಾಡಿಕೊಳ್ಳಲು ಸರ್ಕಾರ ಬಿಡದು.ಸರ್ಕಾರ ಎಂದರೆ ಸಹಕಾರ ಎಂದರ್ಥ. ನಮ್ಮವರೆ ನಮಗೆ ವಿರುದ್ದವಿದ್ದರೆ  ಏನರ್ಥ?
ಎಲ್ಲಾ ಅನರ್ಥಗಳ ಮೂಲವೇ ಅರ್ಥ ವಿಲ್ಲದ ಶಿಕ್ಷಣ. ಇಲ್ಲಿ ಅರ್ಥ ಎಂದರೆ ಹಣವಲ್ಲ.ಹಣಸಂಪಾದನೆಯೇ ಮುಖ್ಯವಾಗಿರುವಾಗ  ಜ್ಞಾನದಿಂದ  ಹಣಸಂಪಾದಿಸಲು ಬೇಕಿದೆ  ಆತ್ಮವಿಶ್ವಾಸ ಆತ್ಮಬಲ ಹೆಚ್ಚಿಸುವ ಶಿಕ್ಷಣ.ಇದೇ  ಮಾನವನ  ಆಸ್ತಿಯಾಗಿದೆ ಎಂದಿರೋದು ಮಹಾತ್ಮರು.
ಮಹಾತ್ಮರ ಹೆಸರಿನಲ್ಲಿ ಅಸುರರೂ ಹಣಗಳಿಸಿ ಆಳುವರು.ಇದರಿಂದಾಗಿ  ಯಾರಿಗೆ ಕಷ್ಟ ನಷ್ಟ? ನಮ್ಮ ಕಷ್ಟ ನಷ್ಟಕ್ಕೆ ಕಾರಣವೇ ನಾವೇ  ಬೆಳೆಸಿಕೊಂಡು ಬಂದಿರುವ ಪಾಶ್ಚಾತ್ಯ ಧರ್ಮ, ಶಿಕ್ಷಣ, ವ್ಯವಹಾರ, ಸಂಸ್ಕೃತಿ, ಭಾಷೆ ಎಂದರೆ ಇದರಲ್ಲಿ ನಮ್ಮದೇನಿದೆ? ಎಲ್ಲಾ ಪರರದ್ದೆ ಆದಾಗ ಪರಮಾತ್ಮನ ದರ್ಶನ ವಾಗದು.ಕಾರಣ ಪರಮಾತ್ಮನಿರೋದು  ಯೋಗ ಶಿಕ್ಷಣದಲ್ಲಿ ಇಂದು ಯೋಗದ ಹೆಸರಿನಲ್ಲಿಯೇ ಭೋಗವಡಗಿದೆ.ಕೆಲವರಷ್ಟೆ ಉತ್ತಮ ಶಿಕ್ಷಣ ನೀಡಿದ್ದರೆ ಅನೇಕರಿಗೆ ನಾವೆಲ್ಲರೂ ಎಲ್ಲಿ ತಪ್ಪಿದ್ದೇವೆಂಬ ಅರಿವಾಗದೆ ರಾಜಕೀಯದ ವಶದಲ್ಲಿದ್ದಾರೆ.
ಸ್ವತಂತ್ರ ಭಾರತಕ್ಕೆ ಬೇಕಿದೆ ಸ್ವತಂತ್ರ ಜ್ಞಾನ ಗುರುತಿಸುವ ಗುರು ಹಾಗು ಶಿಕ್ಷಣ . ಸಿಗುವುದೆ?
ಮನೆಮನೆಯೊಳಗೆ ಗುರುಕುಲವಿದ್ದ ಭಾರತವೀಗ ಮನೆಯೊಳಗೆ ಇದ್ದ ಮೊದಲ ಗುರು ವನ್ನೇ ಹೊರಗೆ ದುಡಿದು ಬರುವಂತೆ ಮಾಡುತ್ತಾ ವಿಪರೀತ ಸಾಲದೊಳಗೆ ಮುಳುಗಿಸಿ ರಾಜಕೀಯಕ್ಕೆ ಜನರನ್ನು ಎಳೆದಿದೆ.ಜೊತೆಗೆ ಮಕ್ಕಳು ಯುವಕರ  ಜ್ಞಾನಶಕ್ತಿ  ಭೌತವಿಜ್ಞಾನದ ಕಡೆಗೆ ಹೆಚ್ಚಾಗಿ ಅಧ್ಯಾತ್ಮ ಸತ್ಯ ಹಿಂದುಳಿದರೆ ಆತ್ಮದುರ್ಭಲ ವಾಗಿರುತ್ತದೆ.
ಇಂತಹ ದುರ್ಭಲರನ್ನು ಆಳೋದಕ್ಕೆ ಬಹಳಸುಲಭ.ಅಸತ್ಯವೇ ಇದರ ಬಂಡವಾಳ. ಇದರೊಂದಿಗೆ ಅಧರ್ಮ ವೂ ಜೊತೆಯಾಗಿ  ವೈಭೋಗಕ್ಕೆ  ಸಾಲದ ಹೊರೆ ಏರಿಸಿಕೊಂಡು  ಜನರಜೀವ‌ ಹೋಗುತ್ತಿದೆ. ಎಲ್ಲಿಯವರೆಗೆ ಸತ್ಯಜ್ಞಾನ  ಅರ್ಥ ವಾಗದೋ ಅಲ್ಲಿಯವರೆಗೆ ಮಿಥ್ಯದ ಜಗತ್ತನ್ನು  ಅಧರ್ಮ ಆಳುತ್ತದೆ. ಒಟ್ಟಿನಲ್ಲಿ ಎಲ್ಲಾರೂ ಮಾಡೋದು ಹೊಟ್ಟಗಾಗಿ ಗೇಣುಬಟ್ಟೆಗಾಗಿ ಎನ್ನುವುದನ್ನು ಈಗಿನ ರಾಜಕೀಯದಲ್ಲಿ ಎಲ್ಲರೂ ಮಾಡೋದು ಓಟಿಗಾಗಿ ನೋಟು ಸೀಟಿಗಾಗಿ ಎಂದರೆ ಸರಿಯಾಗಬಹುದು. ಇದಕ್ಕೆ ಸರಿಯಾದ ಪ್ರಜಾಸರ್ಕಾರ  ಮೋಸಹೋಗಿರೋದೇ ಶಿಕ್ಷಣದಲ್ಲಿ ಎಂದರೆ  ವಿರೋಧಿಸೋರು ನಮ್ಮವರೆ  ಕಾರಣ ಹೆಚ್ಚಿನ  ಜನರು ಪರಕೀಯರ ವಶದಲ್ಲಿರುವಾಗ ಜ್ಞಾನವೂ ನಮ್ಮದಾಗಿರದು. ಕಾಲ ಬದಲಾಗೋದು ನಮ್ಮ ಮನಸ್ಥಿತಿಯ ಮೇಲಿರುತ್ತದೆ.ಮನಸ್ಸು ನಮ್ಮದೇ ಜ್ಞಾನದೆಡೆಗೆ ಇದ್ದರೆ ಶಾಂತಿ ಸಿಗುತ್ತದೆ. ಇಷ್ಟು ತಿಳಿಯಲು ಪುರಾಣ ಇತಿಹಾಸ ಕೆದಕುವ ಅಗತ್ಯವಿಲ್ಲ.ಮನಸ್ಸನ್ನರಿತು ನಡೆಯುವ ಮನುಷ್ಯರಾಗಿದ್ದರೆ ಸಾಕು.
NEP ಬಂತು ಹಾಗೇ ಹೋಯಿತು.ಕಾರಣ ಇಲ್ಲಿ ಪಕ್ಷ‌ಬದಲಾವಣೆ ಹೆಛಚಾಗಿದೆಯೇ ಹೊರತು ಪೋಷಕರ ಮನಸ್ಥಿತಿ ಬದಲಾಗಿಲ್ಲ. ಮಕ್ಕಳು ಪೋಷಕರು ಕುಣಿಸಿ ಆಡಿಸೋ ಗೊಂಬೆಗಳಾಗಿರೋದು ದುರಂತಕ್ಕೆ ಕಾರಣ.ಇದೇ ಗೊಂಬೆಗಳು ಬೆಳೆದು ನಿಂತಾಗ  ಪೋಷಕರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸೋಲುವರು.ಕಾರಣ ಮೊದಲು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸೋತವರು ಪೋಷಕರೆ ಆದಾಗ ಕರ್ಮಕ್ಕೆ ತಕ್ಕಂತೆ ಫಲ. ಇದರಲ್ಲಿ ದೇವರು ಏನು ಮಾಡಲು ಸಾಧ್ಯ? ತಂದೆತಾಯಿಯರೆ ದೇವರೆನ್ನುವುದು ಸತ್ಯವಾದಾಗ ದೈವತ್ವ ದೆಡೆಗೆ ನಡೆಸಿದರೆ ದೇವರಾಗಬಹುದು. ದೈವೀಕ ಗುಣಸಂಪತ್ತನ್ನು ಯಾರೂ ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಒಳಗಿನಿಂದ ಬೆಳೆಸಬಹುದಷ್ಟೆ. ಅದು  ನಿಜವಾದ ಶಿಕ್ಷಣವೆನ್ನುವರು ಮಹಾತ್ಮರು. ಯಾವುದನ್ನು ಕೊಡಬೇಕಿತ್ತೋ ಕೊಡದಿದ್ದರೆ ಯಾವುದು ಆಗಬಾರದಿತ್ತೋ ಅದೇ ಆಗೋದು.ಪ್ರಜಾಪ್ರಭುತ್ವದ ಪ್ರಜೆಗಳಿಗೆ ಧಾರ್ಮಿಕ ಶಿಕ್ಷಣ ಕೊಡುವುದೇ ಧರ್ಮ ವಾಗಿತ್ತು.ಧಾರ್ಮಿಕ ಕ್ಷೇತ್ರಗಳಿವೆ ಆದರೆ ಶಿಕ್ಷಣವೇ ವಿರುದ್ದವಾಗಿದೆ ಎಂದಾಗ ಇದು ಯಾರ ತಪ್ಪು?
ಶಿಕ್ಷಣವೇ ರಾಜಕೀಯ ವ್ಯವಹಾರಕ್ಕೆ ತಿರುಗಿದರೆ ಅಧರ್ಮ.
ಅದು ಧಾರ್ಮಿಕ ಕ್ಷೇತ್ರದಲ್ಲಿಯೂ ನಡೆದಿರೋದನ್ನು ಈಗ ಕಾಣಬಹುದು. ಬದಲಾವಣೆ ಆಗುತ್ತಿದೆ ಅದಕ್ಕೆ ನಮ್ಮ ಸಹಕಾರ ಬೇಕಷ್ಟೆ.ಇದರಲ್ಲಿ ದ್ವೇಷವಿರಬಾರದಲ್ಲವೆ? ನಮ್ಮ ತಪ್ಪಿಗೆ ನಾವೇ ಕಾರಣವಾದಾಗ ಯಾರನ್ನು ದ್ವೇಷ ಮಾಡಬೇಕು? ದ್ವೇಷದಿಂದ ಜ್ಞಾನ ಕುಸಿಯುತ್ತದೆ. ಅಸತ್ಯ ಅಧರ್ಮ ಅನ್ಯಾಯ ಬೆಳೆಯುತ್ತದೆ. ಇದುಇನ್ನಷ್ಟು ಕಷ್ಟ ನಷ್ಟಕ್ಕೆ ದಾರಿಯಾಗುತ್ತದೆ.ಜೀವನವೇ ಹೀಗೆ ಈಸಬೇಕು ಇದ್ದು ಜೈಸಬೇಕು.ಇದಕ್ಕೆ ಉತ್ತಮ ಶಿಕ್ಷಣದ. ಜೊತೆಗೆ ಅನುಭವಿ ಜ್ಞಾನಿಗಳು ಶಿಕ್ಷಕರಾಗಬೇಕಿದೆ.
ಸಂನ್ಯಾಸಿ ಸಂಸಾರಿಯ ಸಮಸ್ಯೆಯನ್ನು ಅನುಭವಿಸಿ ತಿಳಿಯಲಾಗದು. ಹೀಗಾಗಿ ಸಂಸಾರಿಗಳಲ್ಲಿಯೇ ಒಗ್ಗಟ್ಟು ಹೆಚ್ಚಾಗುವ  ಜ್ಞಾನವಿರಬೇಕೆಂದರೆ ಜ್ಞಾನದ ಶಿಕ್ಷಣ ಪಡೆಯಬೇಕಿದೆ.
ಪುರಾಣದ ರಾಜರ ಕಾಲ ಹೋಗಿ ಪ್ರಜಾಪ್ರಭುತ್ವ ಬಂದಿದೆ ಎಂದರೆ ಪ್ರಜೆಗಳೇ  ಎಲ್ಲದ್ದಕ್ಕೂ ಕಾರಣರಾಗಿದ್ದಾರೆಂದರ್ಥ.ಇದರ ಮೂಲವೇ ಅಜ್ಞಾನದ ಶಿಕ್ಷಣ. ಅಜ್ಞಾನವೆಂದರೆ ಸತ್ಯದ ತಿಳುವಳಿಕೆಯಿಲ್ಲ ಎಂದರ್ಥ.ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ಅದರೊಂದಿಗೆ ನಡೆದವರೆ ಮಹಾತ್ಮರಾದವರು  ಇಂದಿಗೂ ಅಮರರು.ಅವರನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ನಾವೆಲ್ಲರೂ ಇಂದಿನ ಸಮಸ್ಯೆಗೆ ಕಾರಣಕರ್ತರಾಗಿರುವಾಗ ಹೊರಗಿನವರನ್ನು ವಿರೋಧಿಸುವ ಮೊದಲು ನಮ್ಮೊಳಗೇ ಹೊಕ್ಕಿ ಸತ್ಯ ತಿಳಿದರೆ ಉತ್ತಮ ಬದಲಾವಣೆ ಸಾಧ್ಯವಲ್ಲವೆ? ಭೌತವಿಜ್ಞಾನ ಅಗತ್ಯ ಆದರೆ ಅಧ್ಯಾತ್ಮ ವಿಜ್ಞಾನ ಮೂಲ ಶಿಕ್ಷಣ ಅತ್ಯಗತ್ಯ.ಯಾವುದೂ ಅತಿಯಾದರೆ ಗತಿಗೇಡು.ಹಣವಿದೆಯೆಂದು ಜನರನ್ನು ಕೊಂಡುಕೊಂಡರೆ ಅನರ್ಥಕ್ಕೆ ದಾರಿಯಾಗುತ್ತದೆ.

No comments:

Post a Comment