ನನ್ನ ಜೀವಾನುಭವದಲ್ಲಿ ತಿಳಿದ ಸತ್ಯಕ್ಕಿಂತ ಅಸತ್ಯವೇ ಕಣ್ಣ ಮುಂದೆ ಸ್ಥಾನಮಾನ ಗಳಿಸಿಮುಂದೆ ನಡೆದಾಗ ಅಸಹಾಯಕತೆಗೆ ತಲೆಬಾಗಿ ನಡೆಯೋನ ಪರಿಸ್ಥಿತಿ ಬಂದಾಗೆಲ್ಲಾ ನನ್ನ ಒಳಮನಸ್ಸು ಪ್ರಶ್ನೆ ಮಾಡಿದ್ದು ಸತ್ಯವೇ ದೇವರೆನ್ನುವುದು ಯಾಕೆಂದು. ಉತ್ತರ ಹುಡುಕಲಾಗದೆ ಹೊರಗೆ ನಡೆದರೆ ಹಿಂದಿರುಗಿ ಬರುವಂತಾಯಿತು. ಒಳಗಿದ್ದರೆ ಕಷ್ಟ ಹೊರಗೆ ತಿಳಿದರೆ ನಷ್ಟ. ಎರಡನ್ನೂ ಅನುಭವಿಸಿದ ಮೇಲೇ ಸತ್ಯದರ್ಶನ ವಾಗಿದ್ದು. ಹಣ ಇದ್ದರೆ ಎಷ್ಟು ಅಸತ್ಯವಿದ್ದರೂ ಬೆಳೆಯಬಹುದು.ಆದರೆ ಅದೇ ಮುಂದೆ ಕಷ್ಟ ನಷ್ಟಕ್ಕೆ ಕಾರಣವಾದಾಗ ಸತ್ಯದ ಸಂಶೋಧನೆ ಕಡೆಗೆ ಮಾನವ ಹಿಂದಿರುಗಲೇ ಬೇಕೆನ್ನುವ ಅಧ್ಯಾತ್ಮ ವನ್ನು ಯಾರೂ ಬೆಳೆಸಲಾಗದು.ಕಾರಣ ಅದು ಹಿಂದೆಯೇ ಬೆಳೆದಿರುವಾಗ ನಾವೇ ಹಿಂದಿನವರ ಧರ್ಮ/ಕರ್ಮ ಜ್ಞಾನದೆಡೆಗೆ ನಡೆಯಬೇಕೆಂಬ ಸಾಮಾನ್ಯ ಜ್ಞಾನ ಇದ್ದರೆ ನಮ್ಮ ಮುಂದಿನ ಭವಿಷ್ಯ ನಮ್ಮ ಆತ್ಮಾವಲೋಕನ ದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವುದು ಅನುಭವದ ಸತ್ಯ.
ಇದಕ್ಕೆ ವಿರೋಧಗಳು ನಮ್ಮವರಿಂದ ಹೊರಗಿನಿಂದ ಬರುತ್ತಲೇ ಇರುತ್ತದೆ. ಆದರೆ ನಮ್ಮ ಚಿಂತನೆಯಲ್ಲಿ ಯಾವ ದೋಷವಿರದೆ ಸತ್ಯವಿದ್ದರೆ ಅದನ್ನು ವಿರೋಧಿಸಿ ಅಥವಾ ಶಾಂತಿಯಿಂದಲೇ ಕಡೆಗಣಿಸಿ ಸ್ವತಂತ್ರ ಜ್ಞಾನದಿಂದ ಇರಲು ಸಾಧ್ಯ. ಯಾವತ್ತೂ ಸತ್ಯ ಕ್ಕೆ ಸಾವಿಲ್ಲ ಎನ್ನುವವವರೆ ಅಸತ್ಯಕ್ಕೆ ಸಹಕಾರ ಸಹಾಯ ಅವಕಾಶ,ಅಧಿಕಾರ ಕೊಟ್ಟು ಮುಂದೆ ನಡೆದರೋ ಆಗಲೇ ಅಸತ್ಯಕ್ಕೆ ಬಲ,ಬೆಲೆ ಹೆಚ್ಚಾಗಿ ತನ್ನ ಸ್ಥಾನಭದ್ರಗೊಳಿಸಿಕೊಳ್ಳಲು ಭ್ರಷ್ಟಾಚಾರ ದೆಡೆಗೆ ನಡೆದಿದೆ.ಇದನ್ನು ಇಂದಿನವರು ತಡೆಯುವುದಕ್ಕೆ ಕಷ್ಟವಿದೆ.ಆದರೆ ಪ್ರಯತ್ನ ಪಟ್ಟರೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಸಾಧ್ಯವಿದೆ.ಸಂಪೂರ್ಣ ಆಗದಿದ್ದರೂ ಆ ದಾರಿಯಲ್ಲಿ ಹಿಂದಿರುಗಿದವರಿಗೆ ನೆಮ್ಮದಿ ಇದೆ.ಆದರೆ ಇದು ರಾಜಕೀಯವಾಗಿರಬಾರದಷ್ಟೆ. ಯಾರನ್ನೋ ಸರಿಪಡಿಸಲು ಹೋಗಿನಾವೇ ಅವರಡಿ ನಿಲ್ಲಬೇಕಾಗಬಹುದು.
ಉದಾಹರಣೆಗೆ ಒಬ್ಬ ಭ್ರಷ್ಟನ ತಪ್ಪುನ್ನು ತಿಳಿಯುತ್ತಾ,ಹುಡುಕುತ್ತಾ,ಹೇಳುತ್ತಾ,ನಡೆಯುತ್ತಾ ಪ್ರಚಾರ ಮಾಡುವವರಿಗೆ ಹಣ ಹೆಚ್ಚಾಗಿ ಸಿಗುತ್ತದೆ.ಇದರಿಂದ ಅವನ ಸಂಸಾರ ಬೆಳೆಯುತ್ತದೆ.ಅಂದರೆ ಅದಕ್ಕೆ ಸಹಕರಿಸುವವರೂ ಬೆಳೆಯುವರು. ಅವರ ಜೊತೆಗೆ ಕೇಳಿದವರು ನೋಡಿದವರೂ ಇದೇ ಸತ್ಯವೆಂದರಿತು ನಂಬಿ ಎಲ್ಲಾ ಭ್ರಷ್ಟರೆ ಎಂದು ತೀರ್ಮಾನ ಮಾಡಿದರೆ ಎಲ್ಲರ ಮನಸ್ಸಿನಲ್ಲೂ ಭ್ರಷ್ಟರ ವಿಷಯವೇ ತುಂಬುವುದು. ಮನಸ್ಸನ್ನು ಸೇರಿದ ಮೇಲೆ ಅದನ್ನು ಹೊರಗೆ ತರಬಹುದೆ? ಬಹಳ ಕಷ್ಟ.ಇದಕ್ಕೆ ಕಾರಣವೇ ಮೂಲವ್ಯಕ್ತಿಯಾಗಿದ್ದರೂ ಇದರಿಂದ ಕಷ್ಟ ಅನುಭವಿಸೋರು ಹಲವರು.ಇದಕ್ಕಾಗಿ ನಾವು ಸತ್ಯ ಬಿಡದೆ ನಡೆದರೆ ಇದು ಕಷ್ಟವೆನಿಸಿದರೂ ಅಂತಿಮವಾಗಿ ತೃಪ್ತಿ ಸಿಗುವುದೆನ್ನುವ ಆತ್ಮವಿಶ್ವಾಸವಿರುತ್ತದೆ. ನಮ್ಮ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗೋದಕ್ಕೆ ಇದರಿಂದ ಮಾತ್ರ ಸಾಧ್ಯವೆನ್ನುವ ಸತ್ಯ ಒಂದೇ ಆಗಿದೆ.
ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನದ ಶಿಕ್ಷಣವೇ ಮೂಲಧಾರ.
ನಂತರದ ವಿಜ್ಞಾನ ಜೀವನಕ್ಕೆ ಅಗತ್ಯವಿದ್ದರೂ ಜೀವಾತ್ಮನ ವಿರುದ್ದ ನಡೆಯದಂತಿದ್ದರೆ ಸಮಾಧಾನ ಶಾಂತಿ ಇರುತ್ತದೆ.
ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣದಲ್ಲಿ ಬದಲಾವಣೆ ಆಗದೆ ದೇಶಬದಲಾಗದು. ಬದಲಾವಣೆ ಪೋಷಕರಿಂದಲೇ ಆಗಬೇಕು. ದೇಶದ ಪ್ರಜೆಗಳೇ ದೇಶದ ಪೋಷಕರು.ದೇಶದಲ್ಲಿ ಭ್ರಷ್ಟಾಚಾರ ಬೆಳೆದಿದೆ ಎಂದರೆ ಅದಕ್ಕೆ ಸಹಕಾರ ನೀಡಿದ ಪ್ರಜೆಗಳೇ ಆಗಿರುವಂತೆ ಶಿಕ್ಷಣಕ್ಷೇತ್ರ ಧಾರ್ಮಿಕ ಕ್ಷೇತ್ರದಲ್ಲೂ ಭ್ರಷ್ಟರಿದ್ದಾರೆಂದರೆ ಇದಕ್ಕೂ ನಮ್ಮ ಸಹಕಾರವೇ ಕಾರಣ. ಇದಕ್ಕೆ ತಕ್ಕಂತೆ ಫಲ ಅನುಭವಿಸೋದು ಮುಂದಿನ ಪೀಳಿಗೆ. ಮಕ್ಕಳು ಸರಿಯಿಲ್ಲ ಎನ್ನುವ ಮೊದಲು ಅವರಿಗೆ ಜೀವನದ ಸತ್ಯದ ಅರಿವಿದೆಯೆ ಚಿಂತನೆ ನಡೆಸಿ ತಿಳಿಸುತ್ತಾ ಬೆಳೆಸಲು ನಾವು ಅದರೊಳಗೆಹೊಕ್ಕಿರಬೇಕು.
ಅಂದರೆ ನಮ್ಮ ತಪ್ಪು ಒಪ್ಪು ನಮ್ಮ ಸತ್ಯ ಮಿಥ್ಯದ ಜ್ಞಾನವನ್ನೇ ಅವಲಂಭಿಸಿದೆ.
ಸತ್ಯ ಒಂದೇ ಧರ್ಮ ಒಂದೇ ಎನ್ನುವುದು ಅದ್ವೈತ. ಆದರೆ ಒಂದು ಹಲವು ಮಂದಿ ಹಲವು ರೀತಿಯಲ್ಲಿ ಸತ್ಯವನ್ನು ಧರ್ಮ ವನ್ನು ಅಲ್ಲಗೆಳೆಯಬಹುದು.ಆದರೆ ಸತ್ಸಂಗ ಅಗತ್ಯ. ಹಿಂದಿನವರು ಅಸತ್ಯದಲ್ಲಿದ್ದರೆ ಹಾಗೇ ಮುಂದಿರುವವರೂ ನಡೆಯಬಹುದು.ಎಲ್ಲೋ ಕೆಲವರಿಗಷ್ಟೆ ಇದರ ವಿರುದ್ದ ನಿಂತು ನಡೆಯೋ ಚೈತನ್ಯ ಶಕ್ತಿಯಿರುತ್ತದೆ. ಹೀಗಾಗಿ ಅಪ್ಪ ನೆಟ್ಟ ಆಲದ ಮರವೆಂದು ಯಾರೂ ನೇಣುಹಾಕಿಕೊಳ್ಳಲು ಆಗೋದಿಲ್ಲವೆಂದ ಮೇಲೆ ಅಸತ್ಯವನ್ನು ನಂಬಿ ನಡೆಯಬಾರದು. ಕಾಲಮಾನಕ್ಕೆ ತಕ್ಕಂತೆ ಸತ್ಯ ಬೆಳೆದಿದೆ ಆದರೆ ಅದು ಹೊರಗಿನಿಂದ ಬೆಳೆದಿದೆ ಮೂಲ ಸತ್ಯ ಒಳಗಿದೆ ಎಂದರ್ಥ.
No comments:
Post a Comment