ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, February 29, 2024

ನೀನು ಮಾಯೆಯೋ ನಿನ್ನೊಳಗೆ ಮಾಯೆಯೋ?

ನೀನು ಮಾಯೆಯೋ ನಿನ್ನೊಳು ಮಾಯೆಯೋ ಎನ್ನುವಂತಿದೆ ಮನುಕುಲದ ಸ್ಥಿತಿಗತಿ. ಮಾಯಾಲೋಕದಲ್ಲಿ ವಿಹರಿಸುತ್ತಿರುವ ಮನಸ್ಸಿಗೆ  ಮನಸ್ಸಿಗೆ ಬಂದದ್ದೆ ಸತ್ಯವೆನ್ನುವ ಭ್ರಮೆ ಆವರಿಸಿದೆ. ಆದರೂ ಜೀವನ ನಡೆಸಲೇಬೇಕು ನಡೆಯುತ್ತದೆ  ನಡೆಯುತ್ತಲೇ ಇರುತ್ತದೆ. ಆದರೆ ಯಾರು ಯಾರನ್ನು ನಡೆಸೋದು ಎನ್ನುವ ಪ್ರಶ್ನೆ ಬಂದಾಗಲೇ ಮಾಯೆ ಆವರಿಸೋದು.ನಿನ್ನೊಳಗೆ ಪರಮಾತ್ಮನಿರುವನೋ ನೀನೇ ಪರಮಾತ್ಮನೋ ಎನ್ನುವ ಚರ್ಚೆ ನಡೆಸುವ ಹೊತ್ತಿಗೆ ವಾದ ವಿವಾದಗಳೇ ಸುತ್ತಿಕೊಂಡು  ಸತ್ಯಹೊರಗೆ ಬರದಂತೆ ತಡೆಯುತ್ತದೆ. ಇರುವ ಒಂದೇ ಸತ್ಯವನ್ನು ತಡೆಯುವುದರಿಂದ ಯಾರಿಗೆ ಲಾಭ ನಷ್ಟ ಎಂದರೆಮ ಅದೂ ಮಾನವನಿಗೇ ಅಷ್ಟೆ. ಯಾರು ಯಾರನ್ನೋ  ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಜಗತ್ತಿನಲ್ಲಿ ತನ್ನ ತಾನರಿತು ಈ ಮಾಯೆಯಿಂದ ಹೊರಬರುವುದೇ ಜೀವನದ ಉದ್ದೇಶವೆಂದಿರೋ ಮಹಾತ್ಮರ ಹೆಸರಿನಲ್ಲಿಯೇ  ರಾಜಕೀಯ ವ್ಯವಹಾರ ಬೆಳೆದಾಗ ಇಂತಹ ದುರ್ಗತಿ  ಬರೋದು. ಇಷ್ಟಕ್ಕೂ ಇಲ್ಲಿ ನಾವ್ಯಾರು  ಜಗತ್ತನ್ನು ಸರಿಪಡಿಸಲು? ಜಗದೀಶ್ವರಿಯ ಕೃಪೆಯಿಂದ ಜನ್ಮ ತಾಳಿರುವ ಈ ಜೀವಾತ್ಮನಿಗೆ  ಪರಮೇಶ್ವರನೇ ಶ್ರೇಷ್ಠ ಎನ್ನುವುದು ಅರ್ಥ ವಾದಂತೆ ಪರಮೇಶ್ವರಿ  ಅರ್ಥ ವಾಗದಿರೋದಕ್ಕೆ  ಇಂದು ನಾರಿಯರು ಮಾರಿಯರಾಗಿರೋದು. ಇದಕ್ಕೆ ಕಾರಣವೇ ಕಷ್ಟಪಡದೆ ಕುಳಿತು ತಿನ್ನುವ ಜನರ ಸೋಮಾರಿತನ. ಇದನ್ನು ಬೆಳೆಸಿದ ಸರ್ಕಾರ ಇಂದಿಗೂ ತಮ್ಮ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದಿರೋದಕ್ಕೆ ಕಾರಣವೇ ಮಾಧ್ಯಮಗಳ ರಾಜಕೀಯ ಸುದ್ದಿ, ಅನಾವಶ್ಯಕ ವಿಚಾರಗಳ ಚರ್ಚೆ, ವಾದ ವಿವಾದದಿಂದಾಗುತ್ತಿರುವ ಮನಸ್ಸಿನ ವಿಕಲ್ಪ. ವಿಕಾರ ಮನಸ್ಸಿಗೆ ಕಾಣುತ್ತಿರುವ ಅಸತ್ಯ ಅನ್ಯಾಯ,ಭ್ರಷ್ಟಾಚಾರ. ಆ ಭ್ರಷ್ಟಾಚಾರ ವನ್ನೇ ವಿರೋಧಿಸುವಂತೆ ನಾಟಕವಾಡುವ ಅಸಂಖ್ಯಾತ ಮಧ್ಯವರ್ತಿಗಳು.. ಹೀಗೇ ಬೆಳೆಯುತ್ತಾ ಕಾಲ ಕಳೆಯುತ್ತಿದೆ .ಆದರೆ ಇವೆಲ್ಲದರ ಮೂಲವೇ ಅಜ್ಞಾನದ ಶಿಕ್ಷಣವೆಂದರೆ  ಒಪ್ಪಿಕೊಳ್ಳದ  ಪ್ರಜೆಗಳ ಒಳಗೇ ಮಾಯೆ ಇರೋವಾಗ  ಮಾಯಾಜಗತ್ತಿನಲ್ಲಿ  ನಾವಿರೋದು.
ನಮ್ಮೊಳಗಿನ ಮಾಯೆಯೇ ಜಗತ್ತನ್ನು ಬೆಳೆಸಿರೋದು ಎರಡೂ ಸರಿ. ಇದರಿಂದ ಹೊರಬರೋದಕ್ಕೆ ಮಹಾತ್ಮರಿಗೆ ಸಾಧ್ಯವಾಗಿತ್ತು. ಪಾಪಾತ್ಮರು, ಪುಣ್ಯಾತ್ಮರು, ಎನ್ನುವುದು  ಮಾನವನ ಧರ್ಮ ಕರ್ಮದ ಮೇಲಿತ್ತು.ಈಗ ಸೂಕ್ಷ್ಮ ವಾಗಿ ನೋಡಿದಾಗ ಯಾರು ಧರ್ಮದ ಹೆಸರಿನಲ್ಲಿ  ರಾಜಕೀಯ ನಡೆಸಿರುವರೋ ಅವರನ್ನು ಪುಣ್ಯವಂತರೆನ್ನಬಹುದೆ? ಅಥವಾ ಧರ್ಮ ದ ವಿರುದ್ದ ನಿಂತು ರಾಜಕೀಯಕ್ಕೆ ಇಳಿದವರನ್ನು ಪುಣ್ಯವಂತರೆನ್ನಬೇಕೆ? ಇಬ್ಬರಿಗೂ ಭಗವಂತ ಅಧಿಕಾರ ಹಣ ಸ್ಥಾನಮಾನ ಎಲ್ಲಾ ಕೊಟ್ಟಿರುವಾಗ ಇಬ್ಬರೂ ಪುಣ್ಯವಂತರೆ? ಅವರನ್ನು ಎತ್ತಿ ಮೇಲೆ ಕೂರಿಸಿ ನಮ್ಮನ್ನು ಆಳಿ ಎಂದಿರುವ ಪ್ರಜೆಗಳೇ ಪಾಪಿಷ್ಟರು. ಪಾಪ ಮಾಡಿದವರನ್ನು ಆಳೋದಕ್ಕೆ ಪುಣ್ಯ ಮಾಡಿರಬೇಕೆ? ಒಂದು ರೀತಿಯಲ್ಲಿ ಎಲ್ಲರೂ ಪಾಪದ ಕೂಪದಲ್ಲಿ ಮುಳುಗಿ ಭ್ರಷ್ಟಾಚಾರ. ನಡೆಸುತ್ತಾ ಜನರನ್ನು ತಮ್ಮೆಡೆ ಸೆಳೆದುಕೊಂಡು ಅಧಿಕಾರ ಪಡೆಯೋದರಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಸತ್ಯ,ಅನ್ಯಾಯ ಅಧರ್ಮ  ನಡೆಸಿದರೂ  ಮಧ್ಯವರ್ತಿಗಳು ಮಾಧ್ಯಮಗಳು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟುಕೊಂಡು  ಹೆಚ್ಚು ತೂಗಿದವರತ್ರ ತಮ್ಮ ಪಾಲು ಪಡೆದು  ಜನರಿಗೆ ಸುದ್ದಿ ಹರಡೋದರಿಂದ ದೇಶಕ್ಕೆ ಕಷ್ಟ ನಷ್ಟ. ಇದನ್ನು  ಸಾಮಾನ್ಯ ಜ್ಞಾನದಿಂದ ಅರ್ಥ ಮಾಡಿಕೊಳ್ಳಲು ನಾವು ಸಾಮಾನ್ಯ ಪ್ರಜೆಯಾಗಿದ್ದು ಆತ್ಮಸಾಕ್ಷಿ ಯ ಕಡೆಗಿದ್ದು ನಮ್ಮೊಳಗೇ ಅಡಗಿರುವ‌ಮಾಯೆಯಿಂದ ಹೊರಬರಲು ಪ್ರಯತ್ನಪಟ್ಟರೆ ಫಲ ಒಳಗೇ ಸಿಗಬಹುದಷ್ಟೆ. ಎಷ್ಟೋ ಯುಗಯುಗದಿಂದಲೂ  ಭೂಮಿಯಿದೆ ದೇವರು ಮಾನವರು ಅಸುರರಿದ್ದಾರೆ.ಯುದ್ದಗಳಾಗಿದೆ ಜೀವಹೋಗಿ ಜನ್ಮ ಪಡೆದಿದೆ...ಆದರೆ ಹಿಂದಿನ ಹೋದ ಜೀವ,ಜೀವನವನ್ನೇ ಮುಂದೆ ತಂದು  ಅವಾಂತರ ಮಾಡಿಕೊಂಡರೆ  ಮಾಯೆ ಹೆಚ್ಚಾಗಿದೆ ಎಂದಲ್ಲವೆ?
 **ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದೊಳಿರುವ‌ ಮನುಜರೆಲ್ಲ ಹಗರಣಮಾಡುವುದ ಕಂಡು....** ದಾಸರ ಈ ಪದದಲ್ಲಿ ಮಾಯೆಯಿಲ್ಲ ಸತ್ಯವಿದೆ ಅನಿಸೋದಿಲ್ಲವೆ?  ಕಾರಣ ಅವರು ಪರಮಾತ್ಮನ ದಾಸರಾಗಿದ್ದರು ಪರಕೀಯರ ದಾಸರಾಗಿರಲಿಲ್ಲ..
ಕಾಂಗ್ರೆಸ್ ಒಳಗೆ ಬಿಜೆಪಿ ಇದೆ,ಬಿಜೆಪಿಯೋಳಗೆ ಕಾಂಗ್ರೆಸ್ ಇದೆ ಅಂದರೆ ಪಕ್ಷಾಂತರವಾದಾಗ ಯಾರೊಳಗೆ ಯಾರು ಸೇರಿಕೊಂಡರೂ ಒಂದೇ ಬುದ್ದಿ. ಆದರೆ ದೇಶ ಒಂದೇ ಆದಾಗ  ದೇಶದೊಳಗೆ ಅಡಗಿರುವ ಅನೇಕ ಧರ್ಮ, ಜಾತಿ,ಗಡ,ಪಕ್ಷದ ಉದ್ದೇಶ  ಯಾರ ಕಡೆಗಿದೆ ಎನ್ನುವ ಪ್ರಶ್ನೆ ಎದ್ದಾಗ ವಿದೇಶಿ ವ್ಯವಹಾರ ಶಿಕ್ಷಣ, ಬಂಡವಾಳ,ಸಾಲ  ಒಳಗೆ ತಂದು ನಾವೇ ಬೇರೆ ನೀವೇ ಬೇರೆ ಎಂದರೆ  ಹೇಗಿದೆ?
ಜಿಪುಣನಾದರೂ ಮಹಾದಾನಿಯಾಗಬಹುದು ಆದರೆ ಈ ಉಚಿತವಾಗಿ  ಕೊಟ್ಟು ದುಂದುವೆಚ್ಚ ಮಾಡಲು ಬಿಡುವವರನ್ನು  ದಾನವರು ಎಂದು ಪುರಾಣ ತಿಳಿಸಿದೆ.
ಒಟ್ಟಿನಲ್ಲಿ  ಅಸುರೊಳಗೇ ಸುರರೂ ಅಡಗಿರುವಾಗ ಯಾರು ಸ್ವತಂತ್ರ ರು? ಅತಂತ್ರರು?  ಎಲ್ಲಾ ಮಾಯೇ ಮೋಹದ ಜಾಲದಲ್ಲಿರುವ ಮಾನವರೆ ಆದಾಗ ಮನಸ್ಸು‌ ಒಂದಾಗೋದು ಕಷ್ಟ.ಕಾರಣ ಚಂಚಲ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು‌ ಸಮಾಜ,ಸಂಸಾರದ ರಾಜಕೀಯದಲ್ಲಿ  ಬದುಕಿರುವುದೇ ದೊಡ್ಡ ಸಾಧನೆ ಎನ್ನಬಹುದೆ? ನಾವೆಲ್ಲರೂ ಸಾಧಕರೆ  ಆದರೆ  ನಮ್ಮ ಸಾಧನೆಯ ಫಲ ಇನ್ಯಾರೋ ಪಡೆದು ಮುಂದೆ ಹೋಗಲು ಸಹಕರಿಸಿರುವುದಾಗಿದೆ. ಎಷ್ಟು ‌ಮುಂದೆ ಮೇಲೆ ಹೋದರೂ ಹಿಂದಿರುಗಿ ಬರಬೇಕೆಂಬುದೆ ಹಿಂದೂ ಧರ್ಮದ ತಿರುಳು.
ಸುತ್ತ ಸುತ್ತಿಕೊಂಡಿರುವ ಮಾಯಾಜಾಲದಿಂದ ಬಿಡುಗಡೆ ಪಡೆಯೋದೇ  ಜೀವನದ ಗುರಿ  ಎನ್ನುವುದು ಅಧ್ಯಾತ್ಮ.

No comments:

Post a Comment