ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 21, 2024

ದಕ್ಷಿಣದಿಂದ ಉತ್ತರಕ್ಕೆ ದೇವತೆಗಳ ಪಯಣ ಶುಭಸೂಚನೆ

ದಕ್ಷಿಣದಿಂದ ಉತ್ತರ ದಿಕ್ಕಿಗೆ ದೇವತೆಗಳು ಏರುತ್ತಿರೋದು ಶುಭ ಸೂಚನೆಯಾಗಿದೆ. ಉತ್ತರ ಶಿವನ ದಿಕ್ಕು ದಕ್ಷಿಣ ಯಮನ ದಿಕ್ಕು.ಬಿಡುಗಡೆ ಅಥವಾ ಮುಕ್ತಿ  ಪಡೆಯಲು ಉತ್ತರ ಅಗತ್ಯವಿದೆ.ಯಾವುದಕ್ಕೆ ಉತ್ತರ ಕಂಡುಕೊಂಡರೆ ಮುಕ್ತಿ ಸಿಗುವುದೆನ್ನುವ ಬಗ್ಗೆ ಅರಿವಿದ್ದಾಗಲೇ ಎಲ್ಲಾ ಪ್ರಶ್ನೆ ಗೆ ಉತ್ತರವಿದೆ.
 
ಹೇಗೆ ಎಲ್ಲಾ ಸಮಸ್ಯೆಗೆ ಪರಿಹಾರ ಮಾರ್ಗ ವಿರುವುದೋ ಹಾಗೆ ಪ್ರಶ್ನೆಗೆ ಉತ್ತರವೂ ಇದೆ.ಆದರೆ ಇದನ್ನು ಒಳಗಿನಿಂದ ಹುಡುಕಿಕೊಂಡರೆ ಅಧ್ಯಾತ್ಮ ವಾಗುತ್ತದೆ ಭೌತಿಕದಲ್ಲಿ ಹುಡುಕಿದರೆ ವಿಜ್ಞಾನ ವಾಗುತ್ತದೆ. 
ಅರಿವೇ ಗುರು ಅರಿವೇ ದೇವರು ಎಂದರು .
ಜ್ಞಾನಸರಸ್ವತಿಯೂ ದಕ್ಷಿಣಕ್ಕೆ ಇಳಿದಿದ್ದಳು ಈಗ ಮತ್ತೆ ಮೇಲೇರಿದ‌ ಮೇಲೇ ಶ್ರೀ ರಾಮಚಂದ್ರನಂತಹ ಪುರುಷೋತ್ತಮನನ್ನು ಅಯೋಧ್ಯಾ ದಲ್ಲಿ ಪ್ರತಿಷ್ಟಾಪನೆ   ಮಾಡುವ  ಸುಯೋಗ ಬಂದಿದೆ. ಭಾರತೀಯರಿಗಷ್ಟೆ ಅಲ್ಲದೆ ಮನುಕುಲಕ್ಕೆ ಒಂದು ದಾರಿದೀಪವಾಗುವ ಶ್ರೀ ರಾಮನ ತತ್ವ ಆ ತಾಯಿ ಸರಸ್ವತಿಯ ಜ್ಞಾನದಿಂದ ಅರ್ಥ ವಾದಾಗಲೇ ಯೋಗಿಗಳ ದೇಶವಾಗೋದು. ಯೋಗಿಗಳಿಂದಲೇ  ಜ್ಞಾನದ ರಕ್ಷಣೆ ಸಾಧ್ಯ.ಜ್ಞಾನದಿಂದ ವಿಜ್ಞಾನ ಬೆಳೆದಾಗಲೇ  ಆತ್ಮಜ್ಞಾನ.
ಅಧ್ಯಾತ್ಮದ  ವಿಜ್ಞಾನ ಭೌತವಿಜ್ಞಾನ ದ ನಡುವಿರುವ ಸಾಮಾನ್ಯ ಜ್ಞಾನಕ್ಕೆ ಸರಿಯಾದ ಶಿಕ್ಷಣ  ನೀಡುವುದೇ ಧರ್ಮ.
ಅದಕ್ಕೆ ವಿರುದ್ದವಿದ್ದರೆ ಅಧರ್ಮ. ಒಟ್ಟಿನಲ್ಲಿ ಧರ್ಮಾತ್ಮ ಶ್ರೀ ರಾಮನಿಂದ  ದೇಶದ ಎಲ್ಲಾ ರಾಜ್ಯಗಳಲ್ಲಿ ಧರ್ಮ ನೆಲೆಸಲು ಪ್ರಜೆಗಳಲ್ಲಿ ಮುಖ್ಯವಾಗಿ ಸಾಮಾನ್ಯ ಜ್ಞಾನ ಅಗತ್ಯವಿದೆ.
ಶ್ರೀ ರಾಮ ಸಾಮಾನ್ಯರಲ್ಲಿ ಸಾಮಾನ್ಯನಂತೆ ಇರಲು ಅಂದಿನ ತ್ರೇತಾಯುಗದಲ್ಲಿ ಸಾಧ್ಯವಾಗಿತ್ತು.ಆದರೆ ಈಗ ಹಾಗೆ ಇದ್ದರೆ ಕೆಳಗೆಳೆದು ಹಾಕುವವರೆ ಹೆಚ್ಚಾಗಿರುವಾಗ ಶ್ರೀ ರಾಮನ ತತ್ವಕ್ಕೆ ಬೆಲೆಯಿರುವುದೆ?
ಬೆಲೆ ತತ್ವಕ್ಕೆ ಸಿಕ್ಕಾಗಲೇ ರಾಮರಾಜ್ಯದ ಕನಸು ನನಸಾಗಲು ಸಾಧ್ಯ.ಪ್ರತಿಯೊಂದು ತಂತ್ರದಿಂದ  ಹೆಣೆಯಲಾಗದು.ಇದು ಒಮ್ಮೆ ಬಿಟ್ಟು ಹೋದಾಗ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.ಹಾಗಾಗಿ ಸ್ವತಂತ್ರ ಭಾರತವನ್ನು ಸ್ವತಂತ್ರ ಜ್ಞಾನದಿಂದ ಕಟ್ಟಿ ಬೆಳೆಸುವ ಶಿಕ್ಷಣವಿದ್ದರೆ  ಎಲ್ಲರಲ್ಲಿಯೂ ಅಡಗಿರುವ ಶ್ರೀ ರಾಮನ ಭಕ್ತಿಯ ಜೊತೆಗೆ ದೇಶಭಕ್ತಿಯೂ ಹೆಚ್ಚಾಗುವುದು. ಇಷ್ಟು ಸುಲಭವಾಗಿ  ಬದಲಾವಣೆ ಆಗದ ಕಾರಣ  ದೇವತೆಗಳಿಗೂ  ಮಾನವರನ್ನು ಸರಿಪಡಿಸಲು ಕಷ್ಟ.
ಕಾರಣ ದೇವತೆಗಳೇ ತಿಳಿಯದೆಯೇ ರಾಜಕೀಯ ದಾಳವಾಗಿ
ಓಡಾಡುತ್ತಿರುವಾಗ ಶ್ರೀ ರಾಮ  ರಾಜಯೋಗಿಯಾಗಿದ್ದು ಧರ್ಮ ಪರಿಪಾಲನೆ ಮಾಡಿರೋದನ್ನು  ತಿಳಿಯಬೇಕಷ್ಟೆ.
ಒಟ್ಟಿನಲ್ಲಿ ಎಲ್ಲಾ ಒಳ್ಳೆಯದೇ ಆಗುತ್ತದೆ. ಇಂದಲ್ಲ ನಾಳೆ ಹಿಂದೆ ತಿರುಗಿ ಬರಲೇಬೇಕು. ಹಿಂದೂ ಧರ್ಮ ದ ಆಳ ಅಗಲ ಕಣ್ಣಿಗೆ ಕಾಣದಿದ್ದರೂ  ಭೂಮಿ ನಡೆದಿರೋದೇ ಸನಾತನ ಹಿಂದೂ ಧರ್ಮ ದ ತತ್ವ ಸತ್ವ ಸತ್ಯದಿಂದ ಎನ್ನುವುದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಲು ರಾಜಕೀಯದ ಅಗತ್ಯಕ್ಕಿಂತ ರಾಜಯೋಗದ ಅಗತ್ಯವಿದೆ. ಹೊರಗೆಳೆದು ಆಳೋದೇ ಬೇರೆ ಒಳಹೊಕ್ಕಿ ನೋಡೋದೇ ಬೇರೆ. ಈ ಬೇರೆ ಬೇರೆಯನ್ನು ಇನ್ನಷ್ಟು ಬೇರೆ ಮಾಡೋದೇ ರಾಜಕೀಯ.
ಒಂದು ಮಾಡೋದು ತತ್ವ‌ಬೇರೆ ಮಾಡೋದು ತಂತ್ರ.
ಶ್ರೀ ರಾಮನು ಪ್ರಜಾರಕ್ಷಕನಾಗಿದ್ದು ತನ್ನ ಪತ್ನಿಯನ್ನೇ ತೊರೆದು‌  ರಾಜನಾಗಿರಬೇಕಾದರೂ  ಧಾರ್ಮಿಕ ಕಾರ್ಯಕ್ಕೆ ಪತ್ನಿಯ ಮೂರ್ತಿಯನ್ನು ಪಕ್ಕಕ್ಕೆ ಇಟ್ಟುಕೊಂಡು ಮಾಡುವ ಪರಿಸ್ಥಿತಿ ಬಂದಿತು.ಅಂದರೆ ಭೂಮಿಯಲ್ಲಿರುವಾಗ ಭೂ ತಾಯಿಯಾಗಲಿ ಭೂಮಿ ಪುತ್ರಿಯರಾಗಲಿ ಪುರುಷನಿಗೆ ಧರ್ಮ ರಕ್ಷಣಾಕಾರ್ಯಕ್ಕೆ ಸಹಕರಿಸಿದಾಗಲೇ  ಭೂಮಿಯ ಋಣ ತೀರಿಸಲು ಪುರುಷನಿಗೆ ಸಾಧ್ಯ. ಜ್ಞಾನದೇವತೆಯೇ  ಮುಕ್ತಿ ಮೋಕ್ಷದ  ದಾರಿ  ತೋರಿಸೋದಲ್ಲವೆ? ಇಂದಿನ‌ಮಕ್ಕಳಿಗೆ ಕೊಡುತ್ತಿರುವ  ಭಾರತೀಯ ಶಿಕ್ಷಣದಲ್ಲಿ  ಸತ್ಯಜ್ಞಾನವಿದೆಯೆ? ಪೋಷಕರಾದವರು  ತಿಳಿದು ಸಹಕರಿಸಿದರೆ  ಮುಂದಿನ ಪೀಳಿಗೆಯಾದರೂ ರಾಮರಾಜ್ಯ ನೋಡಬಹುದು. ಇಲ್ಲವಾದರೆ ರಾಮನ ಹೆಸರಿನಲ್ಲಿ ರಾವಣರ ಸಾಮ್ರಾಜ್ಯ. ರಾವಣನಾದರೂ ಶಿವಭಕ್ತನಾಗಿದ್ದ. ಇಂದಿನ ಅಸುರರು ಶವಭಕ್ತರಾಗಿದ್ದಾರೆಂದರೆ  ಶವವನ್ನು ಬಿಡದೆ  ವ್ಯವಹಾರಕ್ಕೆ ಇಳಿದಿರೋದೆಂದರ್ಥ.

No comments:

Post a Comment