ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, January 18, 2024

ರಾಮನಭಕ್ತಿ ರಾವಣನ ಶಕ್ತಿ

ರಾವಣ ಶಿವನ ಆತ್ಮಲಿಂಗವನ್ನೇ ತಪ್ಪಸ್ಸಿನಿಂದ ಪಡೆದು ಭೂಮಿಯಲ್ಲಿಡುವಂತಾಯಿತು ರಾಮ ಶಿವಲಿಂಗವನ್ನು ತಯಾರಿಸಿಕೊಂಡು ಪೂಜಿಸಿದ್ದಕ್ಕೆ ರಾಮೇಶ್ವರ ಪ್ರಸಿದ್ದವಾಯಿತು.ಇದರಲ್ಲಿ ರಾವಣನ  ತಪಶಕ್ತಿಗಿಂತ ರಾಮನ ಭಕ್ತಿಯೇ ದೊಡ್ಡದಾಗಿರುವುದನ್ನು ಕಾಣಬಹುದು.ಅಂದರೆ ಭೂಮಿಯಲ್ಲಿ ಶಕ್ತಿಗಿಂತ ಭಕ್ತಿಯೇ ಹೆಚ್ಚಾಗಿದ್ದರೆ  ಧರ್ಮ ರಕ್ಷಣೆ ಸಾಧ್ಯವೆನ್ನಬಹುದಷ್ಟೆ. ಶಕ್ತಿಪ್ರದರ್ಶನ ರಾಜಕೀಯ ಭಕ್ತಿಯದರ್ಶನ ರಾಜಯೋಗ. ಹಾಗಾಗಿ ರಾಮರಾವಣರು ಆದರ್ಶ ಪುರುಷರಾದರೂ ಆದರಿಸುವುದು ಆರಾಧಿಸುವುದು ಶ್ರೀ ರಾಮನನ್ನೇ  ಆದರೂ ಜನರು  ರಾವಣನ ಶಕ್ತಿ ಪ್ರದರ್ಶನ ಕ್ಕೆ ಹೆಚ್ಚಾಗಿ ಗೌರವ ಸಹಕಾರ ಸಹಾಯ ಕೊಡುತ್ತಿರುವುದರಿಂದ ರಾಮನ ಹೆಸರಿನಲ್ಲಿ ರಾವಣರೂ ಸೇರಿಕೊಂಡು  ದೇಶವನ್ನು ಆಳಲು ಹೊರಟರೆ ರಾಮರಾಜ್ಯ ಆಗೋದಿಲ್ಲವಲ್ಲ.
ಒಳಗೊಂದು ಹೊರಗೊಂದು ನಾಟಕವಾಡಿದರೆ  ಪರಮಾತ್ಮ ಒಲಿಯೋದಿಲ್ಲವೆನ್ನುವುದೇ  ಅಧ್ಯಾತ್ಮ. ಒಟ್ಟಿನಲ್ಲಿ ನಮ್ಮ ಸಹಕಾರ ಯಾರಿಗೆ ಕೊಡಬೇಕು ಯಾಕೆ ಎಷ್ಟು ಯಾವಾಗ ಕೊಡಬೇಕೆಂಬ ಜ್ಞಾನವಿದ್ದರೆ  ಪರಮಾತ್ಮನ  ಕಾಣುವ ಯೋಗವೂ ಬರುತ್ತದೆ. ನಿಧಾನವೇ ಪ್ರಧಾನ ಎಂದರು ಹಾಗಾಗಿ  ರಾವಣನ ಅವಸರಕ್ಕೆ  ಆತ್ಮಲಿಂಗ ಸಿಗಲಿಲ್ಲ ಶ್ರೀ ರಾಮನ ತಾಳ್ಮೆಗೆ ಶಿವ ಒಲಿದ.ಹರಿಹರರಲ್ಲಿ‌ ಬೇಧವಿರದು ಎನ್ನುವ ವರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಭೇಧ ಹೆಚ್ಚಾಗಿರುವಾಗ ಶ್ರೀ ರಾಮ ಬೇರೆ ಶ್ರೀ ಕೃಷ್ಣ ಬೇರೆ ಎನ್ನುವತನಕ ಬಂದು  ಶ್ರೀ ರಾಮನೊಳಗೇ ಹರಿಹರರಿರುವ‌ ಸತ್ಯ ಒಪ್ಪದಿದ್ದರೆ  ದೇಶದೊಳಗೆ ನಾನಿರೋದೆನ್ನುವ ಸಾಮಾನ್ಯ ಜ್ಞಾನವಿದ್ದರೆ ಉತ್ತಮ ಪ್ರಗತಿಯಾಗುತ್ತದೆ. ಇಲ್ಲಿ ಹಿಂದೆ ನಡೆದದ್ದರಲ್ಲಿ ಲೋಪದೋಷಗಳನ್ನು ಹುಡುಕಿದರೆ ಬುದ್ದಿವಂತರಾಗಬಹುದು.ಜನರೂ ಅವರಿಗೆ ಸನ್ಮಾನ ಮಾಡಬಹುದು ಹಣ ಅಧಿಕಾರವೂ ಸಿಗಬಹುದು.ಆದರೆ ಆ ಲೋಪದೋಷದಿಂದ ಏನಾದರೂ ಧರ್ಮ ಸ್ಥಾಪನೆ ಸತ್ಯರಕ್ಷಣೆ ಆಗಿರುವುದೆ? ಆಗಿದ್ದರೆ ಸರಿ ಇಲ್ಲವಾಗಿದ್ದರೆ ಈ ಪಾಪದ ಫಲ ಅನುಭವಿಸಲೇಬೇಕೆನ್ನುವುದು ಅಧ್ಯಾತ್ಮ ಸತ್ಯ.
ಏನೇ ಆದರೂ ದೇವಾನುದೇವತೆಗಳು ತಮ್ಮ ತಮ್ಮ ಕೆಲಸ ನಿರಂತರವಾಗಿ ನಡೆಸಿರುವರು. ಆದರೆ ಮಾನವರು ಮಧ್ಯೆ ನಿಂತು  ತಾನೇ ದೇವರೆನ್ನುವ ವೇಷಧರಿಸಿ ನಾಟಕ ಮಾಡಿ ಜನರನ್ನು ದಾರಿತಪ್ಪಿಸಿ ದರೆ  ರಾಮ ಕಾಣದೆ ರಾವಣರೆ ಬೆಳೆಯಬಹುದು.
ಇಲ್ಲಿ ತ್ರೇತಾಯುಗದ ರಾವಣನ ಹಿಂದಿನ  ಕಥೆ ಎಲ್ಲರಿಗೂ ತಿಳಿದ ವಿಷಯವೇ  ಜಯವಿಜಯರ ಅಹಂಕಾರದ  ಪ್ರತಿಫಲವಾಗಿ ಅಸುರ ಜನ್ಮವೇ ರಾವಣನ ಅವತಾರ.ಅವರ ಸಂಹಾರಕ್ಕೆ ಶ್ರೀ ರಾಮನ ಅವತಾರ. ಶ್ರೀ ವಿಷ್ಣುವಿನ ಒಂದು ಮಹಾಅವತಾರವೇ ರಾಮಾವತಾರ. ಹೀಗೇ ಯುಗಯುಗವೂ ನಡೆದು ಬಂದಿದೆ. ಎಲ್ಲಾ ವಿಷಯ ಅರ್ಥ ಆದರೂ  ಮಾನವನಿಗೆ ತನ್ನೊಳಗೆ ಅಡಗಿರುವ ದೇವಾಸುರರ  ಗುಣಲಕ್ಷಣಗಳನ್ನು  ಕಾಣಲಾಗದು.ಇದು ಬೇರೆಯವರಿಗೆ ಕಂಡಾಗ ಹೇಳುವರಷ್ಟೆ.ಒಳ್ಳೆಯದಿದ್ದರೆ  ಹೇಳುವವರು ಕಡಿಮೆ.ಕೆಟ್ಟದ್ದನ್ನು ಹೆಚ್ಚಾಗಿ ಹೇಳಿಹರಡುವರು. ಯಾವುದನ್ನು ಹರಡುವೆವೋ ಅದೇ ಬೆಳೆಯುವುದು. ನಮಗೆ  ಕಣ್ಣಿಗೆ ಕಾಣೋದು ಅರ್ಧ ಸತ್ಯವಷ್ಟೆ.ಪೂರ್ಣ ಸತ್ಯ ತಿಳಿಯದೆ ಹರಡಿದರೆ  ಅಸತ್ಯವೇ ಬೆಳೆಯೋದು.
ಶ್ರೀ ರಾಮ ರಾಜ್ಯ ಮಾಡಲು ಹೊರಟಿರುವ ನಮಗೆ ತಾಳ್ಮೆ,ಸಹನೆ  ನಿಸ್ವಾರ್ಥ ನಿರಹಂಕಾರವಿದೆಯೆ? ಶ್ರೀ ರಾಮ ಮಹಾದೇವನಾಗಿ ಜಗತ್ತಿನೆಲ್ಲೆಡೆ ಪೂಜನೀಯನಾಗಿದ್ದರೂ ಯಾಕೆ ನಮ್ಮಲ್ಲಿ  ಶಾಂತಿ‌ಯ ಕೊರತೆಯಿದೆ? ಎಂದಾಗ  ದೈವ ಗುಣ ಸಂಪತ್ತಿನ ಕೊರತೆ ಒಳಗಿದ್ದು ಅದನ್ನು ಹಣದಿಂದ ಅಧಿಕಾರದಿಂದ ಪಡೆಯಬಹುದೆನ್ನುವ ಅಜ್ಞಾನ ಮನೆ ಮಾಡಿದೆ. ಶ್ರೀ ರಾಮನ ಪಿತೃಭಕ್ತಿ, ಪ್ರಜಾಪರಿಪಾಲನೆ,ಧರ್ಮನಿಷ್ಠೆ  ಶಾಂತ ಸ್ವಭಾವ  ಇಂದಿನ ರಾಜಕಾರಣಿಗಳಲ್ಲಿ  ಕಾಣಲಾಗದು.ಇದಕ್ಕೆ ಕಾರಣ ಪ್ರಜೆಗಳ ಅಜ್ಞಾನದ ಬೇಡಿಕೆಗಳಾಗಿದೆ.ಎಷ್ಟು ಕೊಟ್ಟರೂ ಸಾಲದು ಎನ್ನುವ  ಹಂತಕ್ಕೆ  ಬಂದಿರುವವರ ಸಾಲ ಮಿತಿಮೀರಿದೆ. ಅದನ್ನು ತೀರಿಸಲು ಯೋಗಮಾರ್ಗ ಹಿಡಿಯಬೇಕಿತ್ತು .ಈಗಲೂ ಭೋಗದೆಡೆಗೆ ಹೊರಟು ಉಚಿತವಾಗಿ ಪಡೆದು ತಿಂದು  ತೇಗಿದರೆ‌ಹೊಟ್ಟೆಗೆ ಹೋದಮೇಲೆ ಮುಗಿಯಿತು ಕಥೆ.ಸಾಲ ಮೈತುಂಬಿರುವಾಗ ಎಲ್ಲಿಯ ಶಾಂತಿ?
ಅಧ್ಯಾತ್ಮ ವಿಚಾರಗಳಲ್ಲಿಯೂ ಸಾಕಷ್ಟು ತಿರುಚಲಾಗಿದೆ.
ಅದ್ವೈತ ದೊಳಗೇ ದ್ವೈತ ವಿದ್ದರೂ ಬೇರೆ ಬೇರೆ.ಭಾರತದೊಳಗೇ ಪ್ರಜೆಗಳಿದ್ದರೂ ಬೇರೆ ಬೇರೆ ಎನ್ನುತ್ತಾ ಜೊತೆಗೆ ವಿದೇಶ ವ್ಯಾಮೋಹವನ್ನೂ ಸೇರಿಸಿಕೊಂಡು  ಧರ್ಮ ಬಿಟ್ಟು ನಡೆದರೆ  ಅಧ್ಯಾತ್ಮ ಪ್ರಗತಿ ಕಷ್ಟವಿದೆ.ಇನ್ನು ದೇವರನ್ನು ಒಳಗೇ ಸೇರಿಕೊಳ್ಳಲು ಆಂತರಿಕ ಜ್ಞಾನ ಬೆಳೆಸಬೇಕಿತ್ತು.ಭೌತವಿಜ್ಞಾನ ಮಿತಿಮೀರಿ ಭೂ ಗರ್ಭ ದೊಳಗಿನ ಸಂಪತ್ತನ್ನು ಅಗೆದು ಹೊರಹಾಕಿದರೆ ಸ್ವಚ್ಚವಾಗುವುದೆ? ಆತ್ಮಶುದ್ದತೆಗೆ  ಇವೆಲ್ಲವೂ ಅಡಚಣೆ ಆಗಿರುವಾಗ ಇದನ್ನು  ತಡೆಯುವವರಿಲ್ಲದೆ ಅಸುರರೆ ಹೊರಗೆ ಹೋರಾಟ ಹಾರಾಟ ಮಾರಾಟದಲ್ಲಿದ್ದರೆ  ಅದನ್ನು ಸಾಧನೆ ಎಂದು ಸನ್ಮಾನ ಮಾಡುವವರು‌ ಹೆಚ್ಚು. ಸಾಧನೆ ಒಳಗಿನ  ಶಕ್ತಿಯಿಂದ  ಮಾಡುವುದೇ ಬೇರೆ.ಹೊರಗಿನ ಶಕ್ತಿಯಿಂದ ತಿಳಿದು ನಡೆಯುವುದೇ ಬೇರೆ. ಇದರಿಂದಾಗಿ ಧರ್ಮ ಸತ್ಯ ರಕ್ಷಣೆ ಆದರೆ ನಿಜವಾದ ಧರ್ಮ ಕಾರ್ಯ ಎನ್ನುವ ಹಿಂದೂ ಸನಾತನ ಧರ್ಮ  ಅರ್ಥ ವಾದಂತೆಯೇ.
ಇದನ್ನು  ರಾಜಕೀಯದಿಂದ ತಿಳಿಯೋ ಬದಲು ರಾಜಯೋಗದೆಡೆಗೆ ನಡೆದಾಗಲೇ  ಅರ್ಥ ವಾಗೋದೆಂದು ನಡೆದು ತೋರಿಸಿದ್ದಾರೆ ಮಹಾತ್ಮರುಗಳು. ಯೋಗದಿಂದ ರಾಜಕೀಯ ನಡೆಸೋದಕ್ಕೂ ಭೋಗಕ್ಕಾಗಿ ರಾಜಕೀಯ ನಡೆಸೋದಕ್ಕೂ ವ್ಯತ್ಯಾಸವಿದೆ. ಭೌತವಿಜ್ಞಾನದ ಅರ್ಧ ಸತ್ಯಕ್ಕೂ ಅಧ್ಯಾತ್ಮ ವಿಜ್ಞಾನದ ಪೂರ್ಣ ಸತ್ಯಕ್ಕೆ ಅಂತರವಿದೆ.ಅಂತರವನ್ನು  ಸತ್ಯಜ್ಞಾನದಿಂದ ತುಂಬಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ.ಮಿಥ್ಯಜ್ಞಾನದಿಂದ ಬೆಳೆಸಿದಷ್ಟೂ ಅತೃಪ್ತ ಆತ್ಮಗಳ ರಾಜಕೀಯವೇ ಗತಿ. ರಾಜಕೀಯ ಹೊರಗಿರುತ್ತದೆ.ರಾಜಯೋಗ ಒಳಗಿರುತ್ತದೆ. ಜ್ಞಾನವಿಜ್ಞಾನದ ಅಂತರದಲ್ಲಿ  ಮಾನವನಿರೋದು.ಯೋಗದಿಂದ ಅಧಿಕಾರ ಬಂದರೆ  ರಾಮರಾಜ್ಯ ..ಭೋಗಕ್ಕಾಗಿ ಅಧಿಕಾರ ಪಡೆದರೆ ಅಸುರರ ಸಾಮ್ರಾಜ್ಯವಾಗಬಹುದು. ಅಧಿಕಾರ ಯಾರಿಗೆ ಯಾಕೆ ಕೊಡಬೇಕೆಂಬ ಅರಿವು ಮಾನವನಿಗಿರಬೇಕಷ್ಟೆ.‌
ತಿನ್ನುವುದಕ್ಕಾಗಿ ಬದುಕುವುದಲ್ಲ ಬದುಕಲು ತಿನ್ನಬೇಕು.
ಜೀವನದಲ್ಲಿ ಜೀವಿಗಳವನವಿದೆ.ಆ ವನವು ಸತ್ವಪೂರ್ಣ ವಾಗಿದ್ದರೆ ಸುಖ ಸಂತೋಷ ಇದ್ದಲ್ಲಿ ಸಿಗುತ್ತದೆ.   ರಾಜಸಿಕವಾಗಿದ್ದರೆ ಹೋರಾಟವೇ ಜೀವನವಾಗುತ್ತದೆ.ತಾಮಸಿಕವಾಗಿದ್ದರಂತೂ ರೋಗವೇ ಜೀವನವಾಗಿರುತ್ತದೆ. ಇದನ್ನು ಪುರಾಣ ತಿಳಿಸೋದಿಲ್ಲ.ಕಾಲಮಾನಕ್ಕೆ ತಕ್ಕಂತೆ ವರ್ತ ಮಾನವೂ ಬದಲಾಗುತ್ತಲೇ ಇರುತ್ತದೆ.ಹೀಗಾಗಿ ವಾಸ್ತವತೆಯನ್ನು  ಸತ್ಯ ಸತ್ವ ತತ್ವದಿಂದ ಅರ್ಥ ಮಾಡಿಕೊಳ್ಳಲು ಸಾಮಾನ್ಯ ರಿಗೆ ಸಾಮಾನ್ಯ ಜ್ಞಾನವಿದ್ದರೆ ಸಾಕು. ತನ್ನ ತಾನು ಆಳಿಕೊಳ್ಳಲು ಸೋತವರು ಪರರ ವಶವಾಗಿರುವರು. ಪರರ ವಶದಲ್ಲಿ ಇದ್ದಾಗ  ನಮ್ಮವರನ್ನೇ  ಗುರುತಿಸಲಾರರು.ಹೀಗಾಗಿ ನಮಗೆ ನಾವೇ ಶತ್ರುಗಳಾದಾಗ ನಿಜವಾದ ಮಿತ್ರರನ್ನು ಗುರುತಿಸುವ ಜ್ಞಾನ ಕಳೆದುಕೊಂಡು ದೇವರನ್ನು ಬೇಡೋದು.ಒಳಗಿದ್ದ ದೈವತ್ವಕ್ಕೆ ಸರಿಯಾದ ಶಿಕ್ಷಣ,ಸಂಸ್ಕಾರ ಕೊಟ್ಟರೆ‌ ಯಾರು ‌ಮೇಲು ಯಾರು‌ಕೀಳು? ಎಲ್ಲಾ ಒಂದು ರೀತಿಯಲ್ಲಿ ದೈವಾಂಶ ಸಂಭೂತರೆ ಆಗಿದ್ದವರು. ಅಜ್ಞಾನ ಹೊರಗಿನಿಂದ ಆವರಿಸಿಕೊಂಡು ಒಳಗಿರುವ ದೈವೀಶಕ್ತಿ ಕುಸಿದಿದೆಯಷ್ಟೆ.

No comments:

Post a Comment