ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, January 2, 2024

ಗುರುಹಿರಿಯರ ಆಸ್ತಿ ಸದ್ಬಳಕೆಯಾದರೆ ಸದ್ಗತಿ

ಗುರುಹಿರಿಯರಿಂದ ಬಳುವಳಿಯಾಗಿ ಬಂದ ಜ್ಞಾನದ ಆಸ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಸದ್ಗತಿ ಮುಕ್ತಿ ಮೋಕ್ಷ ಮಾರ್ಗ. ದುರ್ಭಳಕೆ ಮಾಡಿಕೊಂಡಷ್ಟೂ ದುರ್ಗತಿ ದು:ಖ.ಹೊರಗಿನ ಆಸ್ತಿ ಯ ಹಿಂದೆ ಹೇಗೆ ಧರ್ಮ ಕರ್ಮ ಗಳ ಋಣವಿರುವುದೋ ಹಾಗೆಯೇ  ಒಳಗಿನ ಜ್ಞಾನದ ಆಸ್ತಿಗೂ ಇರುತ್ತದೆ. ಯಾರೂ  ಎಲ್ಲವನ್ನೂ ತೆಗೆದುಕೊಂಡು ಹೋಗಲಾಗದು.ಹಂಚಿಹೋಗಬಹುದು. ಹಂಚುವಾಗ ಯಾರಿಗೆ ಎಷ್ಟು ದಕ್ಕುವುದೋ ಅಷ್ಟೇ ತಿನ್ನುವುದು.ಹಂಚದೆ ಕೂತರೆ ಜೀವ ಹೋಗುವಾಗ  ತೆಗೆದುಕೊಂಡು ಹೋಗಲಾಗದು ಆದರೆ ಪಾಪಪುಣ್ಯ ಫಲಾಫಲವಂತೂ ಮುಂದೆ ಇದ್ದೇ ಇರುತ್ತದೆ. ಇದು ಸನಾತನಧರ್ಮ ತಿಳಿಸುತ್ತದೆ.
ಇದನ್ನು ಪರಕೀಯರೂ ತಿಳಿಯುತ್ತಾರೆ. ನಡೆಸುವವರು ನಡೆಯುವವರು  ವಿರಳ. ಜ್ಞಾನದ ಆಸ್ತಿ ಬೆಳೆಸಲು ಶಿಕ್ಷಣವೂ ಅದೇ ಜ್ಞಾನದಲ್ಲಿರಬೇಕಷ್ಟೆ. ಹೊರಗಿನ ಜ್ಞಾನದಿಂದ ಸಂಪಾದಿಸಿದ ಆಸ್ತಿಯನ್ನು  ಒಳಗಿನ ಜ್ಞಾನದಿಂದ ಸದ್ಬಳಕೆ ಮಾಡಿಕೊಳ್ಳಲು ಮೊದಲು ಒಳಜ್ಞಾನದ ಶಿಕ್ಷಣ ಪಡೆದಿರಬೇಕು. ಹೊರಗೆ ಹೋದವರನ್ನು ಒಳಗೆಳೆಯೋದು ಕಷ್ಟ.ಒಳಗಿದ್ದವರನ್ನು ಹೊರಗಿನ ಸತ್ಯ ತಿಳಿಸುತ್ತಾ ನಡೆಸುವುದು ಸುಲಭ. ಮಕ್ಕಳಿಗೆ  ಒಳಗಿನ ಜ್ಞಾನದ ಶಿಕ್ಷಣ ನೀಡುವುದು ಪೋಷಕರ ಧರ್ಮ. ಇಲ್ಲವಾದರೆ ಮಕ್ಕಳೇ ಮುಂದೆ ಪೋಷಕರ ವಿರುದ್ಧ ನಡೆದು ಶೋಷಣೆ ಮಾಡಿದರೂ  ಯಾರೂ ಕೇಳೋದಿಲ್ಲ. ನಿದ್ದೆ ಮಾಡಿದವರನ್ನು ಎಚ್ಚರಿಸಬಹುದು.ನಿದ್ದೆ ಬಂದವರಂತೆ ನಾಟಕವಾಡೋರನ್ನು ಎಬ್ಬಿಸಲಾಗದು. ಆತ್ಮಸಾಕ್ಷಿಗೆ‌ಮೀರಿದ ಸತ್ಯವಿಲ್ಲವೆಂದಿದ್ದಾರೆ ಮಹಾತ್ಮರುಗಳು. ಭಾರತದ ಆತ್ಮವೇ ಅಧ್ಯಾತ್ಮ ಸತ್ಯವಾಗಿದೆ.

No comments:

Post a Comment