ರಾಮ ರಾಜ್ಯದ ಕನಸಿನಲ್ಲಿ ರಾವಣನ ರಾಜ್ಯ ವಾಗದಿದ್ದರೆ ಉತ್ತಮ. ಅಂದಿನ ರಾಮ ರಾವಣರ ಜ್ಞಾನ ಇಂದಿಲ್ಲ.ಇಂದಿನ ವೈಜ್ಞಾನಿಕ ಜ್ಞಾನ ಅಂದಿರಲಿಲ್ಲ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡೋದಕ್ಕೆ ಸಾಕಷ್ಟು ಅವಕಾಶ,ಸ್ವಾತಂತ್ರ್ಯ ಹಣ ಅಧಿಕಾರವಿರೋವಾಗ ರಾಮನ ತತ್ವದರ್ಶ ನವಾಗೋದು ಬಹಳ ಕಷ್ಟವಿದೆ. ಸಾಮಾನ್ಯ ಪ್ರಜೆಯ ಮಾತಿಗೆ ಕಿವಿಗೊಟ್ಟು ಪತ್ನಿಯನ್ನು ದೂರಮಾಡಿಕೊಂಡ ಧರ್ಮಾತ್ಮ ಪ್ರಜಾಪಾಲಕ ಶ್ರೀ ರಾಮ
ಇಂದಿಗೂ ಪೂಜನೀಯನಾದರೂ ರಾವಣನಂತಹ ಶಿವಭಕ್ತರಿಲ್ಲದಿದ್ದರೂ ಶಿವಭಕ್ತರಿಗೇನೂ ಕೊರತೆಯಿಲ್ಲದೆ ತಮ್ಮ ಸ್ವಾರ್ಥ ದ ಬೇಡಿಕೆಗಾಗಿ ರಾಜಕೀಯದ ಹಿಂದೆ ಮುಂದೆ ಭಕ್ತರು ಬೇಡಿದರೆ ಇಲ್ಲಿ ರಾಜರ ಆಡಳಿತವೇ ಇಲ್ಲ . ಸರ್ಕಾರ ಕೊಡುವುದನ್ನು ನಿಲ್ಲಿಸಿದರೆ ಪಕ್ಷ ಉಳಿಯದು,ಕೊಟ್ಟರೆ ದೇಶವೇ ಸಾಲದಲ್ಲಿ ಮುಳುಗುವುದು.
ಇಂತಹ ಸ್ಥಿತಿಯಲ್ಲಿ ರಾಜಕೀಯ ನಡೆದಿದೆ ಅದರೊಂದಿಗೆ ಈ ರಾಮರಾವಣರ ಭಕ್ತರ ಹೋರಾಟ ಹಾರಾಟ ಮಾರಾಟ. ಗೆದ್ದವರಿಗೆ ಕಿರೀಟ ಪಟ್ಟ ಸೋತವರಿಗೆ
ಮತ್ತಷ್ಟು ಕಾಟ ತಪ್ಪಿದ್ದಲ್ಲ. ಒಟ್ಟಿನಲ್ಲಿ ಜನಬಲ ಹಣಬಲ ಅಧಿಕಾರ ಬಲವಿಲ್ಲದೆಯೇ ಶ್ರೀ ರಾಮ ವನವಾಸ ಮುಗಿಸಿ ರಾವಣನ ವಧೆ ಮಾಡಿ ಸೀತೆಯನ್ನು ಬಿಡಿಸಿಕೊಂಡು ಬಂದರೂ ನಾಡಿನ ಒಬ್ಬ ಸಾಮಾನ್ಯ ಪ್ರಜೆಯ ಮಾತಿಗೆ ತನ್ನ ಪತ್ನಿಯನ್ನು ಬಿಟ್ಟ ಶ್ರೀ ರಾಮನ ಆಳವಾಗಿರುವ ಧರ್ಮ ತತ್ವವನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುವ ಇಂದು ಅವನ ಹೆಸರಿನಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ರಾವಣ ವಂಶದವರೂ ಸೇರಿಕೊಂಡರೆ ಧರ್ಮ ಯಾರ ಪರವಿದೆ?
ಯಾವುದೇ ವಿಚಾರವಿದ್ದರೂ ರಾಜಕೀಯ ವಿಚಾರ ಬಂದರೆ ಗೆಲ್ಲೋದು ಅಸತ್ಯ ಅನ್ಯಾಯ ಅಧರ್ಮ .ಕಾರಣವಿಷ್ಟೆ ನಾವು ಯಾವುದನ್ನು ಸತ್ಯವೆಂದು ಕಣ್ಣಿಗೆ ಕಾಣುತ್ತಿರುವೆವೋ ಅದೇ ಅಸತ್ಯ ಅಧರ್ಮ ವಾಗಿರುವಾಗ ಜನಬಲ ಸಿಗೋದು ಕಣ್ಣಿಗೆ ಕಾಣೋದಕ್ಕೆ ಮಾತ್ರ. ಹೀಗಾಗಿ ಪ್ರತಿಪಕ್ಷಗಳೂ ತಮ್ಮ ದ್ವೇಷವನ್ನು ಪ್ರೀತಿಯಿಂದಲೇ ಹೊರಹಾಕಿ ಜನರೆಡೆಗೆ ಹೋದರೂ ಜನ ಬಯಸೋದು ಪ್ರೀತಿ ವಿಶ್ವಾಸ ಆಶ್ವಾಸನೆಯ ಭಾಗ್ಯವಷ್ಟೆ.ಅದರ ಹಿಂದಿನ ಸಾಲದ ಹೊರೆ ತಾವೇ ಹೋರಬೇಕಾದಾಗ ಶ್ರೀ ರಾಮನೇ ಬೇಕು. ರಾಮನ ದ್ಯಾನದಿಂದ ಬರುವ ಭಕ್ತಿಗೆ ಯಾವ ರಾಜಕೀಯ ಅಗತ್ಯವಿಲ್ಲವಾದರೂ ರಾಜಕೀಯದಲ್ಲಿಯೇ ದೇವರು ಸಿಲುಕಿರುವಾಗ ನಮ್ಮ ಭಕ್ತಿಯೋಗದಿಂದಭಕ್ತಿಯನ್ನು ಹೇಗೆ ಮೂಡಿಸಬೇಕೆಂಬ ಜ್ಞಾನವಿದ್ದರೆ ಎಲ್ಲೆಡೆಯೂ ಇರುವ ರಾಮ ಒಬ್ಬನಾಗಿ ಕಾಣಬಹುದು. ರಾವಣನೂ ಅವನೊಳಗೇ ಇರೋವಾಗ ಬೇರೆ ಹೇಗೆ? ಶಿವಭಕ್ತ ರಾವಣನ ಸೋಲಿಸಲು ರಾಮನೂ ಶಿವಪೂಜೆ ಮಾಡಬೇಕಾಯಿತೆಂದರೆ ದೇಶವನ್ನು ರಕ್ಷಣೆ ಮಾಡೋದಕ್ಕೆ ಪ್ರಜೆಗಳಲ್ಲಿ ದೇಶಭಕ್ತಿ ಇರಬೇಕು. ದೇವರ ಭಕ್ತರೆಲ್ಲ ದೇಶಭಕ್ತರಾದರೆ ಸರಿ ವಿದೇಶಿ ಭಕ್ತರಾದರೆ ತಪ್ಪು ಒಳಗಿದೆ. ರಾಮನ ತತ್ವ ರಾಮಭಕ್ತರೊಳಗಿದೆ ಹಾಗೇ ಕೃಷ್ಣ ಭಕ್ತರು ಇನ್ನಿತರ ಎಲ್ಲಾ ದೇವತೆಗಳ ಭಕ್ತರು ದೇಶದೊಳಗೆ ಇದ್ದಾಗ ಯೋಗದಿಂದ ಭಕ್ತಿ ಹೆಚ್ಚಲು ರಾಮದ್ಯಾನದ ಅಗತ್ಯವಿದೆ. ಯಾವ ಖರ್ಚು ವೆಚ್ಚವಿಲ್ಲದೆಯೇ ದೇವರನ್ನು ಕಾಣುವ ಶಕ್ತಿ ಯೋಗಿಗಳಲ್ಲಿತ್ತು. ರಾಮ ದ್ಯಾನ ಮಾಡಿದರೂ ಸರಿ ಅವನ ಹೆಸರಿನಲ್ಲಿ ನಡೆದರೂ ಸರಿ,ಹೇಳದೆಯೇ ದ್ವೇಷ ಮಾಡಿದರೂ ಸರಿ ಎಲ್ಲಾ ತಲುಪುವುದು ಶ್ರೀ ರಾಮನಿಗೇ ಎಂದಾಗ ಯಾರು ಹೇಗೆ ನಡೆದರೂ ರಾಮಾಯಣವೇ ಆಗಿರುತ್ತದೆ. ರಾಮನನಡಿಗೆ ಅವನ ತತ್ವದಲ್ಲಿತ್ತು. ಹೊರಗಿರುವ ಭೂಮಿಯಲ್ಲಿ ನಡೆದ ಸ್ಥಳದಲ್ಲಿ ಗುಡಿಗೋಪುರ ಕಟ್ಟಿ ಪೂಜಿಸಿದರೂ ರಾಮನ ಪೂಜೆ, ಕಟ್ಟಿದ್ದನ್ನು ವಿರೋಧಿಸಿದರೂ ರಾಮನಿಗೇ ತಲುಪುತ್ತದೆ. ರಾವಣನು ರಾಮನನ್ನು ಕೊನೆಕ್ಷಣದವರೆಗೂ ನೆನಸಿಕೊಂಡು ಅವನ ಧರ್ಮ (ಅಸುರಿ) ದ ಪ್ರಕಾರ ನಡೆದ ಪರಿಣಾಮ ಶ್ರೀ ರಾಮನಿಂದಲೇ ಹತನಾಗಿ ಅವನೊಳಗೇ ಸೇರಿಕೊಂಡು ಮುಕ್ತನಾದನೆಂದರೆ ರಾಮನಾಮಕ್ಕಿದ್ದ ಶಕ್ತಿ ರಾಮನಿಗಿಂತ ದೊಡ್ಡದಾಗಿದೆ ಎಂದರ್ಥ.
No comments:
Post a Comment