ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 14, 2024

ನಿಜವಾದ ಆಸ್ತಿ ಜ್ಞಾನ ಇದು ಸ್ತ್ರೀ ಗೆ ಹೆಚ್ಚಾಗಿರಬೇಕೋ ಪುರುಷರಿಗೂ?

ಭೂಮಿಯ ಮೇಲೆ ಯಾರು ಹೆಚ್ಚು ಆಸ್ತಿ ಮಾಡಬೇಕು?
ಸ್ತ್ರೀ ಯೋ ಪುರುಷರೋ?
ಆಸ್ತಿ ಇಲ್ಲವೆಂದರೆ ಅಸ್ತಿ ವಿಸರ್ಜನೆಗೂ ಯಾರೂ ಇರೋದಿಲ್ಲ ಎನ್ನುವ ಕಾಲದಲ್ಲಿ ಕಲಿಗಾಲವಿದೆ. ಹೀಗಾಗಿ
ಆಸ್ತಿಗಾಗಿ ಹೊಡೆದಾಟ,ಬಡಿದಾಟ,ಹೋರಾಟ,ಹಾರಾಟ
ಮಾರಾಟ  ಮಾಡಿಕೊಳ್ಳುವ ವ್ಯವಹಾರದಲ್ಲಿ ಜೀವನ
ಮುಳುಗಿಹೋಗುತ್ತಿದೆ. ಆಸ್ತಿಯನ್ನು ಹೋಗುವಾಗ ಬರೋವಾಗ ಹೊತ್ತು ಬರೋದಾಗಿದ್ರೆ  ಯಾರೂ  ಬಡವರಾಗಿ ಹುಟ್ಟುತ್ತಿರಲಿಲ್ಲವೇನೋ? ಇಂದಿನ ಜೀವನ
ಮುಂದೆ ಇರೋದಿಲ್ಲ.ಹೀಗಿರುವಾಗ ಈ ಜನ್ಮದ ಆಸ್ತಿ ಮುಂದಿನ ಜನ್ಮಕ್ಕೆ ಸಿಗುವುದೆ? 
ಆಸ್ತಿಯಲ್ಲಿಯೂ ಎರಡು ವಿಧವಿದೆ.ಒಂದು ಜ್ಞಾನ ಇನ್ನೊಂದು  ವಿಜ್ಞಾನ. ಸತ್ಯಜ್ಞಾನದಿಂದ  ಆಸ್ತಿ ಮಾಡಿದರೆ
ಶಾಂತಿ,ಮಿಥ್ಯಜ್ಞಾನದಿಂದ ಮಾಡಿದ ಆಸ್ತಿ  ಶಾಶ್ವತವಾದ
ಶಾಂತಿ ಸಿಗೋದಿಲ್ಲವೆನ್ನುವ ಕಾರಣಕ್ಕಾಗಿಯೇ ಹಿಂದಿನ
ಮಹಾತ್ಮರುಗಳು ಕೊನೆಗಾಲದಲ್ಲಿ ಭೂಮಿ ಮೇಲಿರುವ
ತಮ್ಮ ಹೆಸರಿನ ಆಸ್ತಿಯನ್ನು ದಾನ ಮಾಡಿ  ಮುಂದೆ ನಡೆದರು. ಅವರ ಚರಾಸ್ತಿ ಭೂಮಿ ಮೇಲಿದ್ದರೂ ಯಾರದ್ದೋ ಪಾಲಾಗಿದೆ. ಸ್ಥಿರಾಸ್ತಿ ಜ್ಞಾನ ಮಾತ್ರ ಅವರ ಹೆಸರಲ್ಲಿದೆ. ಇದನ್ನು ಸ್ತ್ರೀ ಪುರುಷರಿಬ್ಬರೂ ಅರ್ಥ ಮಾಡಿಕೊಂಡು ಯಾವ ಆಸ್ತಿಗಾಗಿ ನಾವು ಜೀವನ ನಡೆಸಿರುವೆವೋ ಅದರಿಂದಾಗಿ ನನ್ನ ನಂತರದ ದಿನದಲ್ಲಿ
ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನುವ ಜ್ಞಾನ ನಾವೇ
ಇದ್ದಾಗಲೇ ಪಡೆದಾಗಲೇ ಜೀವನಕ್ಕೆ ಅರ್ಥವಿರುತ್ತದೆ.
ನಾವೆಷ್ಟೇ ಬೌತಿಕದಲ್ಲಿ ಆಸ್ತಿ ಮಾಡಿದರೂ  ಮಿತಿಮೀರಿದರೆ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಅದನ್ನು ದಾನ ಮಾಡಲೇಬೇಕು. ಯಾರದ್ದೋ ಪಾಲನ್ನು
ಯಾರೋ  ಅನುಭವಿಸಿದರೂ ಅದರೊಡನೆ  ಕರ್ಮಫಲ
ಋಣವೂ ಸೇರಿರುವುದರಿಂದ ರೋಗ,ಕಷ್ಟ ನಷ್ಟಗಳು
ಹೆಚ್ಚುತ್ತದೆ. ನಿಜ, ಹಣವಿದ್ದವರಲ್ಲಿ,ಆಸ್ತಿಯಿದ್ದವರಲ್ಲಿ
ಸಮಾಜ  ಗೌರವದಿಂದ ನಡೆಸಿಕೊಳ್ಳುತ್ತದೆ.ಆದರೆ ಅವರ
ಹಿಂದಿನ  ಉದ್ದೇಶ ಸ್ವಾರ್ಥ ಪೂರ್ಣವಾಗಿರುತ್ತದೆ. ಜನರ
ಮನಸ್ಸನ್ನು ಗೆಲ್ಲುವುದಕ್ಕಾಗಿ ಆಸ್ತಿ ಮಾಡೋದರಿಂದ ನಮ್ಮ ಆತ್ಮಕ್ಕೆ ತೃಪ್ತಿ, ಶಾಂತಿ,ಮುಕ್ತಿ ಸಿಗುವುದಾಗಿದ್ದರೆ ಈಗಿನ ಭಾರತದ ಜನಸಂಖ್ಯೆ ಇಷ್ಟೊಂದು ಬೆಳೆಯುತ್ತಿರಲಿಲ್ಲ.ಇಷ್ಟು ಅಧರ್ಮ, ಅನ್ಯಾಯ, ಭ್ರಷ್ಟಚಾರ ಬೆಳೆಯುತ್ತಿರಲಿಲ್ಲ. ಭೂಮಿಯ ಮೇಲೆ ಜನ್ಮ
ಪಡೆದ ಜೀವಕ್ಕೆ ಜ್ಞಾನದ ಆಸ್ತಿ ಅತಿಮುಖ್ಯ. ಅದಿಲ್ಲದೆ
ಎಷ್ಟು ಆಸ್ತಿ ಅಂತಸ್ತು, ಅಧಿಕಾರ,ಹಣಗಳಿಸಿದರೂ ಅದನ್ನು ತಿರುಗಿಸುವವರೆಗೂ ಆತ್ಮಕ್ಕೆ ಮುಕ್ತಿ ಯಿಲ್ಲ.
ಭೂಮಿಯ ಋಣ ತೀರಿದಲಾಗದು.ತಾಯಿಯ ಋಣ ತೀರಿಸಲಾಗದು ಎಂದ ಮೇಲೆ ಸ್ತ್ರೀ ಯಾಗಲಿ ಪುರುಷರಾಗಲಿ  ಆಸ್ತಿಗಾಗಿ ಹೊಡೆದಾಡಿಕೊಂಡು ಜೀವನ ನಡೆಸೋದರಲ್ಲಿ ಅರ್ಥವಿಲ್ಲ. ಕೆಲವು ಸತ್ಯಗಳುಎಲ್ಲರಿಗೂ ತಿಳಿಯುತ್ತದೆ.
ಆದರೆ ಸಮಾಜದ ದೃಷ್ಟಿಯಿಂದ ನೋಡಿದಾಗ   ಇದಿಲ್ಲದೆ 
ಸಮಾಜದಲ್ಲಿ ಜೀವನ ನಡೆಸೋದೆ ಕಷ್ಟವಾಗುತ್ತದೆ. ಕಷ್ಟಪಡದೆ ಸುಖ ವಿಲ್ಲ ಎನ್ನುವುದು ಸತ್ಯ.ಆದರೂ ಇಂದು ಹೆಚ್ಚು ಜನರು ಅಡ್ಡ ದಾರಿಯಲ್ಲಿ  ನಡೆದು  ಬೌತಿಕದಲ್ಲಿ 
ಸುಖ ಜೀವನದಲ್ಲಿ ನಡೆಸುವಾಗ ನೇರವಾಗಿನಡೆಯುವವ
ರನ್ನು ಸಮಾಜವೆ ತಡೆಯುತ್ತದೆ.
ಹೀಗಾಗಿ ಸಮಸ್ಯೆ ಗಳು  ಹೆಚ್ಚಾಗಿರೋದು.
ಮಧ್ಯವರ್ತಿಗಳು  ತಮ್ಮ ತಮ್ಮ ಆಸ್ತಿ,ಅಂತಸ್ತು, ಹೆಸರು
ಅಧಿಕಾರಕ್ಕಾಗಿ  ಮೇಲಿನವರ ಆಸ್ತಿಯನ್ನು ಕೆಳಗಿನವರಿಗೆ
ತಲುಪಿಸೋ ಕೆಲಸದಲ್ಲಿ ಮಧ್ಯೆ  ಹಾದುಹೋಗುವ ಇದನ್ನು ತಾವು ಬೇಕಾದಷ್ಟು ಬಳಸಿಕೊಂಡು ಅಳಿದುಳಿದ
ಚೂರುಪಾರನ್ನು ಬಡವರಿಗೆ  ನೀಡುತ್ತಾ  ಬಡವರ ಜ್ಞಾನ
ಕುಸಿದಿದೆ. ಬಡತನವಿರೋದು  ಜ್ಞಾನದಲ್ಲಿ. ಹಿಂದಿನ ಮಹಾತ್ಮರನ್ನು ಪೂಜಿಸುವವರಿಗೆ ಅವರ ಜ್ಞಾನದಿಂದ
ಹಣ,ಹೆಸರು,ಅಧಿಕಾರ,ಸ್ಥಾನಮಾನಗಳು ಸುಲಭವಾಗಿ
ಸಿಗುತ್ತಿದೆ ಎಂದರೆ ಜ್ಞಾನ ಪಡೆಯಲು ಅವರು ಕಷ್ಟಪಟ್ಟು
ದುಡಿದು ಸಂಪಾಧಿಸಿ ನಂತರ ಎಲ್ಲಾ ಸಮಾಜಕ್ಕೆ ದಾನ
ಮಾಡಿ ಅಮರರಾದರು. ಯಾರ ಹಣಕ್ಕಾಗಲಿ,ಅಧಿಕಾರ
ಕ್ಕಾಗಲಿ  ಆಸೆ ಪಡದೆ ಜೀವನ ನಡೆಸಿದ ಅವರ  ಜ್ಞಾನ 
ಇಂದಿಗೂ ಭೂಮಿಯಲ್ಲಿದೆ. ಈ ಸತ್ಯ ಸಾಮಾನ್ಯಜ್ಞಾನ
ದಿಂದ ಅರ್ಥ ಮಾಡಿಕೊಂಡರೆ ಈಗಿನ ಯುವಕಯುವತಿ
ಯರಲ್ಲಿಯೂ  ಆಂತರಿಕ ಜ್ಞಾನ ಇದೆ .
ಆದರೆ ಅವರಿಗೆ ಯಾವ ಮಾರ್ಗದಲ್ಲಿ ನಡೆದರೆ ಅದರ ಸದ್ಬಳಕೆ ಆಗುವುದೆನ್ನುವುದನ್ನು ತಿಳಿಸಿಹೇಳುವ
ಗುರುವಿಲ್ಲದೆ  ಬೌತಿಕಾಸಕ್ತಿ ಹೆಚ್ಚಿಸಿಕೊಂಡು ರಾಜಕೀಯದ ಕಡೆ ಮುಖಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ.
ಇದರಿಂದಾಗಿ  ಜೀವನ ನಡೆಯುವುದೆ?  ನಡೆದರೂ ಶಾಂತಿಯಿರುವುದೆ? ಹಣದ ಅಗತ್ಯವಿದೆ.ಆದರೆ ಅದನ್ನು ಸಂಪಾಧಿಸುತ್ತಾ ಜೀವನ ಸತ್ಯ ತಿಳಿಯದೆ  ಹೆಣವಾದರೆ  ಹಣವನ್ನು  ಇನ್ನಾರೋ ಬಳಸುತ್ತಾರೆ. 
ಬಳಸುವವರಲ್ಲಿಯೂ ಜ್ಞಾನವಿಲ್ಲವಾದರೆ
ಆತ್ಮಕ್ಕೆ ಮುಕ್ತಿ ಸಿಗದೆ  ಜನನ‌ ಮರಣದ  ಮಧ್ಯೆ ಸಿಲುಕಿ
ಅದೇ  ಹಿಂದಿನ ಜೀವನ. ಇದೊಂದು ಅಜ್ಞಾನದ  ಅತಿರೇಖವಷ್ಟೆ. ಹಿಂದೆ  ದೊಡ್ಡ ಸಂಸಾರವಾದರೂ  ಶಾಂತಿ ನೆಮ್ಮದಿ,ಸಂತೋಷ,ತೃಪ್ತಿ ಕರ ಜೀವನವಿತ್ತು.
ಇಂದು ಸಣ್ಣ ಸಂಸಾರದಲ್ಲಿದ್ದರೂ  ಶಾಂತಿಯಿಲ್ಲವಾದರೆ
ಜ್ಞಾನದ ಕೊರತೆ ಕಾರಣ. ಹೀಗಾಗಿ ಭಾರತೀಯರಾಗಲಿ
ವಿದೇಶಿಗರಾಗಲಿ ಮೊದಲ  ಶಿಕ್ಷಣದಲ್ಲಿ ಸತ್ಯಜ್ಞಾನವಿರಲಿ.
ಮನುಕುಲದ ಉದ್ದಾರ ಸತ್ಯಜ್ಞಾನದೊಳಗಿದೆ.ಸತ್ಯ ಎಲ್ಲಿದೆ? ಭೂಮಿಯಲ್ಲಿದೆಯೇ? ಆಕಾಶದಲ್ಲಿದೆಯೆ?
ಸತ್ಯ ನಮ್ಮೊಳಗೇ ಅಡಗಿದೆ. ಸತ್ಯವೇ ದೇವರಾಗಿದೆ.
ಆದರೆ, ಬೌತಿಕದಲ್ಲಿ ಸತ್ಯಕ್ಕೆ ಬೆಲೆಯಿಲ್ಲದೆ  ಆಧ್ಯಾತ್ಮ ಸತ್ಯ
ಹಿಂದುಳಿದಿದೆ.ಮಕ್ಕಳನ್ನು ದೇವರೆನ್ನುತ್ತಿದ್ದರು ಕಾರಣ
ಅವರ ನಿಷ್ಕಲ್ಮಶ  ಮನಸ್ಸು ಸ್ವಚ್ಚವಾಗಿರುತ್ತಿತ್ತು.ಆದರೆ
ಇಂದಿನ ಮಕ್ಕಳ ಮನಸ್ಸು ಹಾಳು ಮಾಡಿ ಪೋಷಕರೆ ಅವರನ್ನು ಒಂದು ಯಂತ್ರದಂತೆ  ಬಳಸಿ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು  ಬೌತಿಕಾಸಕ್ತಿ ಹೆಚ್ಚಿಸಿ
ಬೆಳೆಸಿದರೆ  ಮಹಾತ್ಮರನ್ನುದೂರಮಾಡಿಕೊಂಡಂತಾಗುತ್ತದೆ. 
ಧಾರ್ಮಿಕ  ಆಚರಣೆ ಸತ್ಯ,ಧರ್ಮದ ಪರವಾಗಿದ್ದಿದ್ದರೆ 
 ಈಗ  ಯಾಕೆ ಇಷ್ಟು ಸಮಸ್ಯೆ ಬೆಳೆಯುತ್ತಿತ್ತು? 
ಆಚರಣೆಗಳಿಂದ ಮನಸ್ಸು ಆತ್ಮ ಶುದ್ದವಾಗಬೇಕಾದರೆ ಅದರಲ್ಲಿ ಸತ್ಯಜ್ಞಾನವಿರಬೇಕು. ರಾಜಕೀಯದ ವ್ಯವಹಾರವಿದ್ದರೆ ಹಣ,ಆಸ್ತಿ,ಅಂತಸ್ತು, ಹೆಸರು,
ಪದವಿ,ಪದಕ,ಪ್ರತಿಷ್ಟೆ  ಸಿಕ್ಕರೂ  ಎಲ್ಲೋ ಒಂದು 
ಮೂಲೆಯಲ್ಲಿರುವ  ಸತ್ಯ. ಜೀವನದ ಕೊನೆಯಲ್ಲಿ 
ಮುಂದೆ ಬಂದು ಪ್ರಶ್ನೆ ಮಾಡಿದರೆ ಉತ್ತರ ನಮ್ಮಲ್ಲಿ
ರೋದಿಲ್ಲ.ಕಾರಣ ನಾವು ಸತ್ಯದ ಹಿಂದೆ ನಡೆದಿರೋದಿಲ್ಲ
ವಲ್ಲ. ಹೀಗಾಗಿ ಆಚರಣೆಗಳ ಹಿಂದಿನ ಉದ್ದೇಶ,ಗುರಿ,
ಗುರುವನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳಲು  ಜ್ಞಾನದ ಶಿಕ್ಷಣದಿಂದ ಸಾಧ್ಯ. ಯಾರೋ ಯಾವುದೋ ಯುಗ, ಕಾಲದಲ್ಲಿ  ಹೇಳಿದ್ದಾರೆ,ಮಾಡಿದ್ದಾರೆ,ನಡೆದಿದ್ದಾರೆ ಎನ್ನುವ ಕಾರಣಕ್ಕೆ ನಾವು ಈಗಿನ ಕಾಲದಲ್ಲಿ ಹಾಗೆಯೇ ನಡೆಯಲು 
ಸಾಧ್ಯ ವಾದರೆ ಉತ್ತಮ.ಸಾಧ್ಯವಿಲ್ಲವೆಂದರೆ ಬೇರೆಯವರನ್ನು ನಡೆಸೋ ರಾಜಕೀಯ ಬಿಟ್ಟು ನಮ್ಮನ್ನು
 ನಾವು  ಅರಿತು ನಮ್ಮ ಕಾಲುಬುಡದ  ಸ್ವಚ್ಚತೆ ಕಡೆಗೆ
 ನಡೆಯಬೇಕು.
ನಮಗೆ ಅಧಿಕಾರ,ಜ್ಞಾನ ಭಗವಂತ ನೀಡಿರುವಾಗ  ಅದನ್ನು  ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವಾಗ
ಎಲ್ಲರೊಳಗೂ ಅಡಗಿರುವ ಪರಮಾತ್ಮನ ಸತ್ಯವನ್ನು
ಗೌರವದಿಂದ ಕಾಣುವುದೂ  ಧರ್ಮವೆ. ಹಾಗಂತ ಸತ್ಯ
ಕಾಣೋದಿಲ್ಲ.ಅರಿವಿಗೂ ಬರೋದಿಲ್ಲ.ಹೀಗಾಗಿ ಹಿಂದಿನ
ಮಹಾತ್ಮರುಗಳು ತೋರಿಸಿದ ದಾರಿಯಲ್ಲಿ ನಡೆಯುವುದು ಅಗತ್ಯ.ದಾರಿಯನ್ನು ಮುಚ್ಚಿ,ಇಲ್ಲ ದಾರಿಗೆ ಅಡ್ಡ ನಿಂತು ರಾಜಕೀಯ ನಡೆಸುವವರಿಗೇ  ಅಧಿಕಾರ, ಸಹಕಾರ,
ಗೌರವ ನೀಡುತ್ತಾ ನಮ್ಮೊಳಗೇ ಇದ್ದ ಮಹಾಚೈತನ್ಯ ಮರೆತರೆ ನಷ್ಟ ಯಾರಿಗೆ? ಇಲ್ಲಿ ಸ್ತ್ರೀಆಸ್ತಿ ಮಾಡಿದರೆ ತಪ್ಪು, ಪುರುಷ 
ಮಾಡಿದರೆ ಸರಿ ಎನ್ನುವ ಭಿನ್ನಾಭಿಪ್ರಾಯ ದಿಂದ ಸ್ತ್ರೀ ಶಕ್ತಿಯನ್ನು ಆಳೋದಕ್ಕೆ ಹೊರಟು,ಈಗ ಸ್ತ್ರೀ  ಬೌತಿಕದಲ್ಲಿ ಆಸ್ತಿಮಾಡಿ ಪುರುಷನಿಗೆ ವಿರೋಧಿಸುವ‌ಮಟ್ಟಿಗೆ ಸಂಸಾರ
 ನಡೆದಿದೆ.
ಪುರುಷನೊಬ್ಬನೆ ಅವನೇ  ಎಲ್ಲರನ್ನೂ ಒಳಗೊಂಡಿರುವ ಪರಮಾತ್ಮನೆನ್ನುವ ಅದ್ವೈತ  ತತ್ವವರಿತವರು ಸ್ತ್ರೀ ಶಕ್ತಿಯ ಋಣ ತೀರಿಸಲು ಭೂ ಸೇವೆ, ತಾಯಿ ಸೇವೆ ಪರಮಾತ್ಮನ ಸೇವೆಯಲ್ಲಿ ಜೀವನದ ಗುರಿ ತಿಳಿದು ಮುಕ್ತರಾಗಿದ್ದಾರೆ.
ಆದರೆ ಯಾವಾಗ ಅಜ್ಞಾನ ಆವರಿಸಿ  ಭೂಮಿಯನ್ನು ಭೋಗಕ್ಕಾಗಿ ಬಳಸಲಾಯಿತೋ  ಅದಕ್ಕೆ ಸರಿಯಾಗಿ ಸ್ತ್ರೀ ಸಹಕಾರ ದೊರೆಯಿತೋ  ಸ್ತ್ರೀ ಆಟಕ್ಕುಂಟು ಲೆಕ್ಕಕ್ಕಿಲ್ಲದೆ  ಋಣ ತೀರಿಸುವುದಿರಲಿ ಅವಳನ್ನು ಸೇವಕಿಯಾಗಿಸಿಕೊಂಡು ಆಳುವವರು  ಬೆಳೆದು ಭೌತ ವಿಜ್ಞಾನ ಬೆಳೆದು ಅಧ್ಯಾತ್ಮ ವಿಜ್ಞಾನ ಹಿಂದುಳಿಯಿತು.ಸ್ತ್ರೀ ಜ್ಞಾನ ದೇವತೆಯಾಗಿದ್ದರೂ ಅವಳ ಆತ್ಮಜ್ಞಾನಕ್ಕೆ ಸರಿಯಾದ ಶಿಕ್ಷಣ,ಸಹಕಾರವಿಲ್ಲದೆ  ಗೃಹಲಕ್ಮಿ ಯಾದಳು. ಗೃಹಲಕ್ಮಿ ಸಂಪಾದನೆ ಮಾಡಲು ಹೊರಗೆ  ಬರುವಂತಾಯಿತು. ಹೀಗಾಗಿ ಸಾಲ ಮಿತಿಮೀರಿ ಬೆಳೆದಾಗ  ಎಲ್ಲದ್ದಕ್ಕೂ ಸ್ತ್ರೀ ಕಾರಣ ಎನ್ನುವ ಹಂತಕ್ಕೆ ತಲುಪಿ ಶೋಷಣೆಗಳೂ ನಡೆದವು. ಜೀವಕ್ಕಾದ ಹಿಂಸೆಯಿಂದ ಬೇಸತ್ತ ಸ್ತ್ರೀ ವಿರೋಧಿಸಿಹೊರಗೆ ಬಂದಾಗ  ಅದನ್ನು ಪ್ರಗತಿ ಸಾಧನೆ ಎನ್ನುವವರೂ ಬೆಳೆದರು. ಇದು ಸತ್ಯವಾದರೂ ಯಾವ ಮನೆಯಲ್ಲಿ ಸ್ತ್ರೀ ಯಿರುವುದಿಲ್ಲವೋ  ಆ ಮನೆಯಲ್ಲಿ ಸುಖ ಸಮೃದ್ದಿ ಸಂತೋಷವಿರಲು ಕಷ್ಟ.ಸಂಸಾರದ ಒಂದು ಕಣ್ಣು  ಇನ್ನೊಂದು ಕಣ್ಣನ್ನು ಅರ್ಥ ಮಾಡಿಕೊಳ್ಳಲು ಎರಡೂ ಕಣ್ಣಿನ ದೃಷ್ಟಿ ಒಂದೇ ಆಗಿರಬೇಕು.
ಇಲ್ಲಿ  ಹೆಚ್ಚು ಆಸ್ತಿ ಮಾಡುವ ಉದ್ದೇಶದಿಂದ ಹೊರಗೆ ಹಣಸಂಪಾದನೆ ಹೆಚ್ಚಾದರೂ ಅದರ ಹಿಂದೆ ಸತ್ಯ ಧರ್ಮದ ಕೊರತೆಯಿದ್ದರೆ ಅದು ಪರಮಾತ್ಮನ ವರೆಗೆ ತಲುಪಲಾರದೆ ಯೋಗವಾಗದೆ  ಭೂಮಿಯ ಸಾಲ ತೀರದು.
ಮುಖ್ಯವಾಗಿ ಭೂಮಿಯ ಸಾಲ ತೀರಿಸಲು ಯೋಗಮಾರ್ಗ ಅಗತ್ಯವೆಂದು ಹಿಂದೂ ಧರ್ಮ ತಿಳಿಸುವಾಗ ಭೋಗದಲ್ಲಿ ಸಾಲ ತೀರದು ಎನ್ನುವ ಸತ್ಯವರಿತವರು  ಸ್ತ್ರೀ ಗೂ ಅಧ್ಯಾತ್ಮ ಶಿಕ್ಷಣ ನೀಡುತ್ತಾ ಸಂಸಾರವನ್ನು ಧರ್ಮ ಸತ್ಯದ ಮಾರ್ಗದಲ್ಲಿ ಸಾಮರಸ್ಯದಿಂದ  ನಡೆಸಿಕೊಂಡು ಮಹರ್ಷಿಗಳಾದರು.
ಋಷಿಪರಂಪರೆಯಿಂದ ಮುಂದೆ ಬಂದಿರುವ‌ ಮನುಕುಲಕ್ಕೆ
ಉತ್ತಮ ಶಿಕ್ಷಣವಿದ್ದರೆ  ಉತ್ತಮ ಬದಲಾಚಣೆ. ಅದರಲ್ಲಿ ಲಿಂಗ ಭೇಧ  ಜಾತಿ ಬೇಧ ಹೆಚ್ಚಾದರೆ ಸಾಲ ವೇ ಶೂಲ. ಹೀಗಾಗಿ ಲಕ್ಮಿಯನ್ನು ಆಳದೆ ಸರಸ್ವತಿಯನ್ನರಿತು ನಡೆದರೆ ಎಲ್ಲಾ ಭೂಮಿಗೆ ಆಸ್ತಿಯಾಗಿರುವರು. ವಿರುದ್ದ ನಡೆದರೆ ತಕ್ಕ ಶಾಸ್ತಿಯಾಗುತ್ತದೆ.
ಇದಕ್ಕಾಗಿ  ಭೂಮಿ ಸ್ತ್ರೀ ಸ್ವಯಂ ಲಕ್ಮಿ ಸ್ವರೂಪರಾದಾಗ  ಅವರನ್ನು  ಯಾವ ರೀತಿಯಲ್ಲಿ ಬಳಸಿದರೆ ಉತ್ತಮವೆನ್ನುವ ಅರಿವು ಪುರುಷರಿಗೆ ಅಗತ್ಯವಿದೆ.
ದುರ್ಭಳಕೆ ಮಾಡಿಕೊಂಡರೆ ಆಳಬಹುದು ಆದರೆ ನಂತರ ಆಳಾಗಿ ಜನ್ಮ ಪಡೆಯಲೇಬೇಕೆನ್ನುತ್ತದೆ ಅಧ್ಯಾತ್ಮ.  ಪುರಾಣವೂ ಸ್ತ್ರೀ ಯನ್ನು  ದೇವಿಯೆನ್ನುವ ದೃಷ್ಟಿಯಲ್ಲಿ  ವಿವರಿಸಿಲ್ಲವಾದರೂ ಎಲ್ಲದಕ್ಕೂ ಸ್ತ್ರೀ ಕಾರಣವೆಂದಿದೆ ಎಂದರೆ ಭೂಮಿಯಲ್ಲಿ ಜನ್ಮ‌ಪಡೆಯಲು ಸ್ತ್ರೀ ಋಣವೂ ಒಂದು ಕಾರಣವಾಗಿದೆ. ಹೀಗಾಗಿ ಸಂಪಾದನೆ ಜ್ಞಾನದಿಂದ ಮಾಡಿದರೆ ಸತ್ಯದ ಜೊತೆಗೆ ಧರ್ಮ ವೂ ಇದ್ದು ಋಣ ತೀರಿಸಬಹುದು. 
ಎಲ್ಲದ್ದಕ್ಕೂ ಸ್ತ್ರೀ ಯರ ಅತಿಆಸೆಯೇ ಕಾರಣವೆಂದಾಗ ಆಸೆಯ ಹಿಂದಿನ ಅಜ್ಞಾನವೂ ಕಾರಣ.ಅಜ್ಞಾನಕ್ಕೆ ಶಿಕ್ಷಣದ ಕೊರತೆ ಕಾರಣ.ಈ ಕೊರತೆಯನ್ನು ಸರಿಪಡಿಸುವುದು ಗುರುಹಿರಿಯರ ಧರ್ಮ. ಇದೀಗ ಕೆಲವೆಡೆ ನಡೆದರೂ ಹಲವು ಕಡೆ  ಅರ್ಥ ವಾಗದ ಶಾಸ್ತ್ರ ಸಂಪ್ರದಾಯಗಳು ಬೆಳೆಸಿಕೊಂಡು  ಸತ್ಯ ತಿಳಿಯದೆ  ಭೌತಿಕಾಸಕ್ತಿ ಹೆಚ್ಚಾಗಿರೋದು ದುರಂತ. ಎಲ್ಲದ್ದಕ್ಕೂ  ಕಾಲ ಕಾರಣ.ಕಲಿಯುಗದಲ್ಲಿ ಕಲಿಕೆಯುಉತ್ತಮಮಾರ್ಗದಲ್ಲಿದ್ದರೆ
 ಅದೇ ದೊಡ್ಡ ಆಸ್ತಿ.ಜ್ಞಾನಕ್ಕಿಂತ ದೊಡ್ಡ ಆಸ್ತಿ ಬೇರಿಲ್ಲ.

ಅಜ್ಞಾನದಿಂದ ಅಜ್ಞಾನದಿಂದ  ಯಾರಿಗೆ ಲಾಭವಾಗಿದೆ? ಸಮಾನತೆ
ಸುಜ್ಞಾನದಲ್ಲಿರಲಿ. ಜ್ಞಾನವೇ ಮಾನವನ ಆಸ್ತಿ. ಓದಿದ್ದನ್ನು
ಅಳವಡಿಸಿಕೊಂಡು  ಸತ್ಯ ತಿಳಿಯುವುದೆ ಜ್ಞಾನ.
ಓದಿದ ವಿಚಾರ ಆಧ್ಯಾತ್ಮ ವಾಗಿದ್ದರೆ  ಸಂಸಾರದಿಂದ ಮುಕ್ತಿ. ಬೌತಿಕವಾಗಿದ್ದರೆ  ರಾಜಕಿಯ ಶಕ್ತಿ. ಆಳೋದು
ತಪ್ಪಲ್ಲ.ಆದರೆ  ಆಳಾಗಿ ಕಾಣೋದು ತಪ್ಪು. ಆಳೋರೂ
ಒಂದು ರೀತಿಯಲ್ಲಿ ಆಳಾಗಿರುತ್ತಾರೆನ್ನುವುದೆ ಜ್ಞಾನ.
ಪ್ರಜಾಪ್ರಭುತ್ವದಲ್ಲಿ ಆಳೋರು ಯಾರು? ಆಳಾಗಿರೋರು ಯಾರು? ಇಬ್ಬರೂ ದೇಶದ ಪ್ರಜೆಗಳೆ.
ಭಾರತಮಾತೆಯನ್ನು  ಜ್ಞಾನದಿಂದ  ಆಳಿದರೆ ಅದೇ ದೇಶದ ಆಸ್ತಿ. ಇದಕ್ಕೆ ಬೇಕಾಗಿದೆ ಭಾರತೀಯರಿಗೆ ಸತ್ಯ ಜ್ಞಾನದ ಶಿಕ್ಷಣ. ಸತ್ಯದಿಂದ ಬೌತಿಕ ಜಗತ್ತು ಬೆಳೆದರೆ ಶಾಂತಿ.ಇಲ್ಲವಾದರೆ ಕ್ರಾಂತಿಯ ಅಶಾಂತಿ.ಪುರಾಣ ಪುರುಷ ಸ್ತ್ರೀ ಯರು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ
ಉತ್ತಮ  ಜ್ಞಾನದಿಂದ  ಸಂಸ್ಕಾರ ಪಡೆದ  ಮಕ್ಕಳೊಳಗೆ
ಮಹಾತ್ಮರನ್ನು ಕಾಣೋದಕ್ಕೆ  ಗುರು ಹಿರಿಯರು,ಶಿಕ್ಷಕರು
ಬೆಳೆಸೋದಕ್ಕೆ  ಹಣಕ್ಕಿಂತ ಜ್ಞಾನದ ಶಿಕ್ಷಣ ನೀಡಬೇಕಿತ್ತು.

No comments:

Post a Comment