ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀ ರಾಮಚಂದ್ರನು ಧರ್ಮದ ಪ್ರಕಾರ ಕಾಡಿಗೆ ಹೋದನು ಅಲ್ಲಿ ತಂದೆಯ ಮಾತನ್ನು ಮೀರಿದರೆ ಪಿತೃಗಳಿಗೇ ಮೋಕ್ಷವಿಲ್ಲವೆನ್ನುವುದಾಗಿತ್ತು. ಕಲಿಗಾಲದಲ್ಲಿ ತಂದೆಯ. ವಿರುದ್ದ ನಿಂತು ವಿದೇಶಕ್ಕೆ ಹಾರುವುದು ಒಂದು ಸಾಮಾನ್ಯವಾಗಿದ್ದು ತಂದೆಯ ಅಂತಿಮಕಾರ್ಯ ಅಲ್ಲಿಯೇ ಮಾಡುವವರಿದ್ದಾರೆ. ಇದ್ದಾಗ ಮಾತು ಕೇಳದವರು ಹೋದ ಮೇಲೆ ಕರ್ಮ ಮಾಡಿ ಫಲವೇನು?
ಯಾವುದೇ ರೀತಿಯ ಸುಖಾಭೋಗವಿಲ್ಲದೆಯೆ ರಾಮನೊಡನೆ ಪತಿವ್ರತೆ ಸೀತೆ ಹೊರಟಳು,ಜೊತೆಗೆ ಸೇವೆಗಾಗಿ ಪತ್ನಿಯನ್ನು ಬಿಟ್ಟು ಅಣ್ಣ ಅತ್ತಿಗೆಯೊಂದಿಗೆ ಹೊರಟ ಲಕ್ಮಣ ಬೇರೆ .ವನವಾಸ ಮುಗಿಯುವವರೆಗೂ ಶ್ರೀ ರಾಮನಿಗಾಗಿ ಕಾದು ಕುಳಿತ ಎಲ್ಲಾ ತಮ್ಮಂದಿರು ಅವರ ಪತ್ನಿಯರ ಧಾರ್ಮಿಕ ಪ್ರಜ್ಞೆ ಇಡೀ ಅಯೋದ್ಯಾವಾಸಿಗಳು
ಶ್ರೀ ರಾಮನ ಆಡಳಿತಕ್ಕಾಗಿ ಕಾದಿದ್ದರು. ತಿರುಗಿಬಂದ ನಂತರ ಎಲ್ಲರಿಗೂ ಸಮಾಧಾನ ಸಂತೋಷ ಸುಖ ಆದರೆ ಕೊನೆಯಲ್ಲಿ ಶ್ರೀ ರಾಮನೆ ಸೀತಾಮಾತೆಯನ್ನು ಬಿಡುವ ಹಾಗಾಗಿ ದೊಡ್ಡ ಧರ್ಮ ಸಂಕಟ ಎದುರಾದಾಗಲೂ ಕಂಗೆಡದ ಧರ್ಮಾತ್ಮ ಸೀತೆಯನ್ನು ಬಿಟ್ಟರೂ ತನ್ನ ಆಡಳಿತಕ್ಕೆ ಲೋಪಬರದಂತೆ ಸಾಮ್ರಾಟನಾಗಿದ್ದ ಶ್ರೀ ರಾಮನ ಕಥೆ ರಾಮಾಯಣವಾಯಿತು.
ಹಿಂದೂಗಳ ಪವಿತ್ರಗ್ರಂಥದ ಇದರಲ್ಲಿನಪ್ರತಿಯೊಂದು ಪಾತ್ರವೂ ಮಹಾತ್ಮರದ್ದಾಗಿತ್ತು. ಧರ್ಮ ರಕ್ಷಣೆಗಾಗಿಯೇ ದುಷ್ಟಶಿಕ್ಷಣೆಗಾಗಿಯೇ ಶ್ರೀ ರಾಮಾವತಾರವಾದಂತೆ ಶ್ರೀ ಕೃಷ್ಣಾವತಾರವಾಗಿದೆ. ಇವರಿಬ್ಬರ ಕಾಲದಲ್ಲಿ ಅಂತರವಿದ್ದ ಕಾರಣ ರಾಮಬ ಕಾಲದ ತತ್ವ ಶ್ರೀ ಕೃಷ್ಣನಕಾಲಕ್ಕೆ ತಂತ್ರವಾಗಿ ಬದಲಾಗಿತ್ತು. ಒಂದೇ ವಸ್ತು ಎರಡಾಗಿಸಿದರೂ ಒಂದೇ ಸತ್ಯ ಎರಡು ರೀತಿಯಲ್ಲಿ ತಿಳಿಸಿದರೂ ಎರಡು ಎರಡೆ ಒಂದು ಒಂದೇ. ಒಂದು
ಒಂದು ರಾಜಯೋಗ ಇನ್ನೊಂದು ರಾಜಕೀಯ..ಒಂದು ಶಾಂತಿ ಇನ್ನೊಂದು ಕ್ರಾಂತಿ.ಒಂದು ಯೋಗದಮಾರ್ಗ ಇನ್ನೊಂದು ಭೋಗದ ಮಾರ್ಗ.ಎರಡನ್ನು ಎಷ್ಟೇ ಬೇರೆ ಮಾಡಿದರೂ ಒಂದಾಗದಿದ್ದ ಮೇಲೆ ತತ್ವದರ್ಶನ ವಾಗಿದ್ದರೆ ಇದು ಅಧ್ಯಾತ್ಮ ವಾಗುತ್ತದೆ.
ಶ್ರೀ ರಾಮನಿರೋದೆಲ್ಲಿ ಭಕ್ತರ ನಾಮಜಪದಲ್ಲೋ? ರಾಮಭಕ್ತರಾದ ಸಾದು ಸಂತ,ದಶಸ,ಶರಣರು ನಾಮಜಪದಿಂದಲೇ ಶ್ರೀ ರಾಮನ ದರ್ಶನ ಮಾಡಿದ್ದರು
No comments:
Post a Comment