ಜೀವಕ್ಕಾಗುವ ನೋವು ನಲಿವಿನ ಅನುಭವದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುತ್ತದೆ. ಭೂಮಿಯ ಮೇಲಿರುವ ಎಲ್ಲಾ ರೀತಿಯ ಜೀವ ಸಂಕುಲಗಳಲ್ಲಿ ಮಾನವನ ಜೀವಕ್ಕೆ ಹೆಚ್ಚಿನಬೆಲೆ. ಹೀಗಾಗಿ ಪ್ರಾಣಿ ಪಕ್ಷಿ ಜಂತುಹುಳ ಕೀಟಗಳಂತಹ ಅತಿಸಣ್ಣ ಜೀವಿಗಳಿಗೆ ಬೆಲೆಕೊಡದೆ ತನ್ನ. ಜೀವನಕ್ಕಾಗಿ ಇತರ ಜೀವಿಗಳನ್ನು ದುರ್ಭಳಕೆ ಮಾಡಿಕೊಂಡಾಗಲೇ ಒಳಗಿನ ಜೀವಾತ್ಮನಿಗೆ ಹಿಂಸೆಯಾಗುತ್ತಾ ಆರೋಗ್ಯ ಹಾಳಾಗಿ ಜೀವ ಹೋಗುತ್ತದೆ.
ಪ್ರತಿಯೊಂದು ಜೀವಿ ಯಲ್ಲಿಯೂ ಅಡಗಿರುವ ಶಕ್ತಿಯಲ್ಲಿ ವ್ಯತ್ಯಾಸವಿದೆ. ಆರೋಗ್ಯ ಉತ್ತಮವಾಗಿರಲು ಆ ಶಕ್ತಿಯ ಗುಣವಿಶೇಷತೆ ತಿಳಿದು ಬಳಸುವುದು ಅಗತ್ಯ.ಹಾಗಂತ ನಾವು ಸೇವಿಸುವ ಗಾಳಿ,ನೀರಲ್ಲಿ ಶಕ್ತಿಯನ್ನು ಹುಡುಕಿದರೆ ಜೀವವೇ ಇರೋದಿಲ್ಲ. ಉಳಿದ ಧಾನ್ಯ ಅಕ್ಕಿ ಬೇಳೆ ಕಾಳುಗಳಲ್ಲಿ , ತರಕಾರಿ ಹಣ್ಣು ಗಳಲ್ಲಿ ಅಡಗಿರುವ ಸತ್ವಕ್ಕೂ, ಮಾಂಸಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಆಹಾರವನ್ನು ಸತ್ವ ರಜಸ್ಸು ತಾಮಸ್ಸೆಂಬ ಮೂರು ಗುಂಪಾಗಿ ಪರಿಗಣಿಸಿದ್ದಾರೆ. ಇದನ್ನು ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿರುವುದನ್ನು ನಾವು ತಿಳಿದಿದ್ದರೂ ಈಗಿನ ಆರೋಗ್ಯದ ಸಮಸ್ಯೆನ ಸಾತ್ವಿಕ ಆಹಾರ ಪಡೆದವರಲ್ಲಿಯೂ ಕಾಣುತ್ತಿರೋದರೋದು ನಮ್ಮ ಹಣ ಸಂಪಾದನೆಯ ಹಿಂದೆ ಇರುವ ಸತ್ವ,ರಜಸ್ಸು ತಮಸ್ಸಿನ ಮಾರ್ಗವಾಗಿದೆ.
ಅನ್ನದಾನ ಮಹಾದಾನವಾದರೂ ದಾನ ಯಾರಿಗೆ ಯಾವಾಗ ಹೇಗೆ ಎಷ್ಟು ಯಾಕೆ ಮಾಡಬೇಕೆಂಬ ಜ್ಞಾನ ಅಗತ್ಯವಿದೆ.
ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವಿರದು. ಹೊಟ್ಟೆ ತುಂಬಿದವರಿಗೆ ಅನ್ನದಾನ ಮಾಡಬಾರದು. ಇದೇ ರೀತಿ ಭ್ರಷ್ಟಾಚಾರದ ವಶದಲ್ಲಿ ದ್ದವರ ದಾನ ಧರ್ಮ ವು ಪರಮಾತ್ಮನವರೆಗೆ ತಲುಪಿಸುವುದು ಬಹಳಕಷ್ಟ. ಆದರೂ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಪರಮಾತ್ಮನ ಶಕ್ತಿಯನ್ನು ಕಂಡವರು ಮಾಡುವ ದಾನ ಶ್ರೇಷ್ಠ. ಹಾಗಾಗಿ ಹಿಂದೆ ಎಷ್ಟೋ ಯೋಗಿಗಳು ಭಕ್ತರು ಪರಮಾತ್ಮನಿಗಾಗಿಯೇ ಸೇವೆ ಮಾಡುತ್ತಾಜನರ ಸೇವೆಯಲ್ಲಿ ಜನಾರ್ದನ ನನ್ನು, ದೇಶ ಸೇವೆಯಲ್ಲಿ ಈಶ್ವರನನ್ನು, ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಿದ್ದರು. ಇದರಿಂದಾಗಿ ಸಮಾನತೆಯಲ್ಲಿ ಲಿಂಬೇಧ, ಜಾತಿಬೇಧಧರ್ಮ ಬೇಧ, ಪಕ್ಷಬೇಧವ ಮರೆತು ರಾಜಯೋಗದೆಡೆಗೆ ನಡೆದಿದ್ದರು.
ತಿನ್ನುವುದಕ್ಕಾಗಿಯೇ ಜೀವಿಸೋದಲ್ಲ ಜೀವಿಸುವುದಕ್ಕಾಗಿ ತಿನ್ನಬೇಕೆಂದರು. ಆದರೆ ಏನೂ ತಿನ್ನದೆ ಸಾವಿರಾರು ವರ್ಷ ತಪಸ್ಸು ಮಾಡಿದವರಿದ್ದರೆಂದರೆ ಆತ್ಮಜ್ಞಾನವು ತಿನ್ನುವುದರಿಂದ ಬರೋದಿಲ್ಲವೆಂದು ಕೆಲವು ವ್ರತನಿಯಮ ಜಪತಪ ಯಾಗಯಜ್ಞ ಹಲವು ಯೋಗ ಮಾರ್ಗ ಧರ್ಮ ನಿಷ್ಠೆ ಉಪವಾಸ ಉಪಕಾರ ಉಪಚಾರ....ಬೆಳೆಯುತ್ತಾ ಹೋಗಿ ಈಗ ಊಟವೇ ಎಲ್ಲದರ ಮೂಲವಾಗಿದೆ. ಅಂದರೆ ಯಾವುದೇ ಕಾರ್ಯಕ್ರಮ ಮಾಡಿದರೂ ಅನ್ನದಾನವಿಲ್ಲದೆ ಸಂಪನ್ನವಾಗದು.
ದೇವತಾಕಾರ್ಯಗಳಲ್ಲಿ ಹಂಚುವ ಆಹಾರ
ಇದು ಪ್ರಸಾದವಾಗಿರುತ್ತದೆ. ಹಾಗಾಗಿ ಈ ಪ್ರಸಾದವು ಸಾತ್ವಿಕವಾಗಿ ಸತ್ವಪೂರ್ಣ ವಾಗಿ ಸತ್ಯ ಧರ್ಮ ದಲ್ಲಿದ್ದರೆ ಆರೋಗ್ಯ ಪೂರ್ಣ ಜೀವನ. ಪ್ರತಿಯೊಂದು ಮನೆಯ ಅನ್ನವೂ ಅನ್ನಪೂರ್ಣೇಶ್ವರಿ ಯ ಪ್ರಸಾದವಾಗಬೇಕಾದರೆ ಅನ್ನಬ್ರಹ್ಮನ ಸ್ಮರಣೆಯಿಂದ ತಯಾರಿಸುವುದು ಅಗತ್ಯ. ಇದು ಸಾಧ್ಯವಾಗುವುದಕ್ಕೆ ನಮ್ಮಲ್ಲಿ ಬ್ರಹ್ಮಜ್ಞಾನವಿರಬೇಕು.
ಎಲ್ಲಾ ಬ್ರಹ್ಮರೆ ಎನ್ನುವುದು ಸುಲಭ. ಎಲ್ಲಾ ಬ್ರಹ್ಮಚಾರಿ ಬ್ರಹ್ಮಚಾರಣಿಯರಾಗೋದು ಕಷ್ಟ. ಹೀಗಾಗಿ ಬ್ರಹ್ಮಚಾರಿಗಳ ಜ್ಞಾನ ಬ್ರಹ್ಮಚಾರಿಣಿಯರ ಜ್ಞಾನದಲ್ಲೂ ಬೇರೆ ಬೇರೆ ಕಾಣುತ್ತಾ ಜೀವ ಹಿಂಸೆ ಹೆಚ್ಚಾಗುತ್ತಾ ಭೂಮಿಯಲ್ಲಿ ಜೀವನ
ಬಲಿಕೊಟ್ಟು ಮುಂದೆ ನಡೆದವರಿಗೆ ಕೊನೆಗಾಲದಲ್ಲಿ ಜೀವನದ ಸತ್ಯವೂ ಅರ್ಥ ವಾಗದೆ ತನ್ನ ಜೀವಕ್ಕೆ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಜೀವಕ್ಕೆ ಲಿಂಗಬೇಧವಿಲ್ಲ. ಲಿಂಗಬೇಧವು ಧರ್ಮ ರಕ್ಷಣೆಗೆ ಅಪಾಯಕಾರಿ.
ಆತ್ಮಜ್ಞಾನದಿಂದ ಧರ್ಮ ರಕ್ಷಣೆಯಾಗಬೇಕಾದರೆ ಅವರವರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಅದೇ ಸಂತೋಷಕರ ಜೀವನ.ಹೆಣ್ಣು ಜೀವಕ್ಕೆ ಸಹನಾಶಕ್ತಿ ಹೆಚ್ಚಾಗಿರುವ ಕಾರಣ ಭೂಮಿಯಲ್ಲಿ ಹೆಣ್ಣಿಗೆ ಹೆಚ್ಚು ಜ್ಞಾನಶಕ್ತಿ . ಅದಕ್ಕಾಗಿ ಸ್ತ್ರೀ ಸಹನೆ,ಕರುಣೆ ಪ್ರೀತಿವಿಶ್ವಾಸ ಗಳಿಸಿದನ್ನು ರಾಜಕೀಯದಲ್ಲಿ ಕಳೆದುಕೊಳ್ಳುವುದೂ ಹೆಚ್ಚಾಗಿದೆ. ಗಳಿಸುವುದು ಕಷ್ಟ ಕಳೆದುಕೊಳ್ಳುವುದು ಸುಲಭ. ಯಾರೇ ಏನೇ ಪಡೆದರೂ
ಕೊಟ್ಟು ನಡೆಯಲೇಬೇಕಷ್ಟೆ ಅದರಲ್ಲಿ ಜೀವವೂ ಒಂದಾಗಿದೆ.
No comments:
Post a Comment