ಒಂದು ಸೂಕ್ಮವಾಗಿರುವ ಅಧ್ಯಾತ್ಮ ಸತ್ಯ ಗಮನಿಸಿದರೆ ಭಗವಂತ ಮಾನವನಿಗೆ ಪಾಠ ಕಲಿಸುವುದಕ್ಕೆ ಅಸುರರೊಳಗೆ ಸುರರನ್ನು,ಸುರರೊಳಗೆ ಅಸುರರನ್ನು ಹಿಡಿದು ಆಟವಾಡಿಸಿ ಕೊನೆಗೆ ಸುರರನ್ನು ಗೆಲ್ಲಿಸೋದಾಗಿರತ್ತೆ.ಆದರೆ ಮಾನವನಿಗೆ ಸುರರತತ್ವ ಅಸುರರ ತಂತ್ರವನ್ನು ಗಮನಿಸುವ ಜ್ಞಾನ ಬೇಕಷ್ಟೆ. ಇಲ್ಲವಾದರೆ ಎಲ್ಲರಲ್ಲಿಯೂ ಅಡಗಿರುವ ಅಸುರ ಶಕ್ತಿ ಜಾಗೃತವಾಗಿ ಜೀವ ಹೋದರೂ ಸತ್ಯ ತಿಳಿಯದು. ಇದನ್ನೇ ಮಾಯೆ ಎಂದರು. ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲ ಆದರೂ ಹೋರಾಟ ಹಾರಾಟ ಮಾರಾಟಕ್ಕೆ ಬೆಲೆ ಹೆಚ್ಚು. ಇದು ಕೂಡ ಭಗವಂತನ ಆಟ. ಹಾಗಾದರೆ ಭಗವಂತನಿರೋದೆಲ್ಲಿ ಎಂದರೆ ಚರಾಚರದಲ್ಲಿರುವ ಅಣುರೇಣುತೃಣಕಾಷ್ಟದೊಳಗೇ ಸೂಕ್ಮವಾಗಿರುವ ಶಕ್ತಿ.ಸೂಕ್ಮ ಶಕ್ತಿಯನ್ನು ಕಣ್ಣು ನೋಡದೆ ಪ್ರತಿಕ್ಷಣ ಅನುಭವಿಸುತ್ತಿದ್ದರೂ ನಾನೇ ಬೇರೆ ನೀನೇ ಬೇರೆ ಎನ್ನುವ ದ್ವಂದ್ವವೇ ದ್ವೇಷವಾಗಿ ಬದಲಾದಾಗ ಸುರಾಸುರರ ಕಾಳಗ ನಡೆದಿರೋದನ್ನು ಪುರಾಣ ತಿಳಿಸಿದೆ. ದೇವತೆಗಳು ಮಾಡಿದ್ದನ್ನೇ ಅಸುರರು ಮಾಡಿದರೆ ತಪ್ಪೇನು? ಎನ್ನುವ ಪ್ರಶ್ನೆ ಎದ್ದಾಗ ದೇವತೆಗಳು ಆತ್ಮಕ್ಕೆ ಬೆಲೆಕೊಟ್ಟು ಸತ್ಯ ಧರ್ಮದ ಪರವಿದ್ದರೆ ಅಸುರರು ದೇಹಕ್ಕೆ ಬೆಲೆಕೊಟ್ಟು ಅಧರ್ಮ ಅಸತ್ಯದಿಂದ ಭೂಮಿಯನ್ನು ಆಳುವರಷ್ಟೆ ವ್ಯತ್ಯಾಸ.
ಈಗಲೂ ಪಕ್ಷ ಪಕ್ಷಗಳ ನಡುವೆ ನಡೆದಿರುವ ರಾಜಕೀಯದ ಆಟದಲ್ಲಿ ಜನರನ್ನು ಯಾರು ಯಾವ ದಿಕ್ಕಿನಲ್ಲಿ ನಡೆಸಿದ್ದಾರೆಂದು ಸೂಕ್ಮವಾಗಿ ಗಮನಿಸಿದರೆ ದೇಶದ ಪರ ನಿಂತವರಿಗಿಂತ ದೇಶದ ವಿರುದ್ದ ನಿಂತವರಿಗೇ ಸಹಕಾರ ಹೆಚ್ಚು. ಕಾರಣ ವಿದೇಶದ ಸಾಲ ಬಂಡವಾಳ, ವ್ಯವಹಾರದಿಂದ ಸಾಕಷ್ಟು ಹಣದ ಹರಿವು ಒಳಗಾದರೂ ಅದನ್ನು ತೀರಿಸಲು ಪ್ರಜೆಗಳೇ ಕಷ್ಟಪಟ್ಟು ದುಡಿಯಲೇಬೇಕೆಂಬುದು ಅಧ್ಯಾತ್ಮ ಸತ್ಯ.ಹೀಗಾಗಿ ಅದರ ಬದಲಾಗಿ ನಮ್ಮ ನಮ್ಮ ಮೂಲ ಧರ್ಮ ಕರ್ಮ ದೆಡೆಗೆ ಹಿಂದಿರುಗಿ ಸ್ವತಂತ್ರವಾಗಿ ದುಡಿದು ಸೇವೆ ಮಾಡಿದವರ ಸಾಲ ಇದ್ದಲ್ಲಿಯೇ ತೀರಬಹುದು.ಇದಕ್ಕಾಗಿ ವಿದೇಶದವರೆಗೆ ಹೋಗುವ ಅಗತ್ಯವೇ ಇರೋದಿಲ್ಲ ಎಂದಾಗ ಆತ್ಮನಿರ್ಭರ ಭಾರತ. ಇದನ್ನು ಒಪ್ಪದವರು ವಿರೋಧಿಸಿ ಪಕ್ಷ ತೊರೆದರೆ ದೇಶ ಒಂದೇ ಇರೋದು.ದೇಶದ ಸಾಲ ತೀರಿಸಲು ದೈವತತ್ವ ಅಗತ್ಯವಿದೆ. ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆಯ ಮಂತ್ರ ಹೇಳೋದು ಸುಲಭ ಅದರಂತೆ ನಡೆಯದಿದ್ದರೆ ತಂತ್ರದಿಂದ ಅತಂತ್ರಜೀವನ. ಒಟ್ಟಿನಲ್ಲಿ ಎಲ್ಲರಲ್ಲಿಯೂ ದೇವಾಸುರರ ಗುಣವಿದೆ ಎಂದಾಗ ದೇವರನ್ನು ಬೇಡೋರಲ್ಲಿ ದೈವಸಂಪತ್ತಿದೆ ಎಂದರ್ಥ ವಲ್ಲ. ಸಂಪತ್ತು ಸತ್ಯ ಜ್ಞಾನದಿಂದ ಸಂಪಾದಿಸಿದರೆ ದೈವಶಕ್ತಿ ಹೆಚ್ಚುವುದು. ಅಸತ್ಯದಿಂದ ಸಂಪಾದಿಸಿದರೆ ಅಸುರಿಶಕ್ತಿ ಹೆಚ್ಚುವುದಷ್ಟೆ ವ್ಯತ್ಯಾಸ. ದೇವರಿರೋದೆಲ್ಲಿ? ಸತ್ಯದಲ್ಲಿ ಧರ್ಮ ದಲ್ಲಿ. ಸತ್ಯ ಒಂದೇ ಅದು ನಮ್ಮೊಳಗೇ ಇರುವ ಆತ್ಮಸಾಕ್ಷಿಯಾಗಿದೆ. ಯಾವಾಗ ಮಾನವ ಅಸತ್ಯದಿಂದ. ಮುಂದೆ ನಡೆಯುವನೋ ಸತ್ಯ ಹಿಂದೆ ಉಳಿದು ಅರ್ಥ ವಾಗದಷ್ಟೆ.ಹಾಗಂತ ಸತ್ಯ ಒಳಗಿಲ್ಲ ಎಂದಲ್ಲ ಇದ್ದರೂ ಅರ್ಥ ವಾಗದಷ್ಟು ಅಸತ್ಯ ಒಳಗಿದೆ ಎಂದಾಗುತ್ತದೆ. ಹಾಗಾಗಿ ಜಗತ್ತನ್ನು ಮಿಥ್ಯ ಎಂದರು.ಬ್ರಹ್ಮ ಸತ್ಯ ಎಂದರು.ಬ್ರಹ್ಮ ಕಣ್ಣಿಗೆ ಕಾಣದು ಜಗತ್ತು ಕಾಣುತ್ತದೆ ಆದರೂ ಶಾಶ್ವತವಲ್ಲ.ಬದಲಾಗುವ ಜಗತ್ತಿನಲ್ಲಿ ಬ್ರಹ್ಮಜ್ಞಾನ ಹುಡುಕಲಾಗದು.ಹೀಗಾಗಿ ಒಳಗಿನಜಗತ್ತನ್ನು ಒಳಗೇ ಹುಡುಕಿಕೊಳ್ಳಲು ಯೋಗದೆಡೆಗೆ ನಡೆದರು. ಯೋಗವೆಂದರೆ ಆಸನವಲ್ಲ ಸೇರುವುದು ಕೂಡುವುದು ಒಂದಾಗುವುದು.
ಪರಮಾತ್ಮನ ಜೀವಾತ್ಮ ಒಂದಾಗಲು ಒಳಗಿನ ಸತ್ಯ ಧರ್ಮ ದಿಂದ ಕೂಡಿಕೊಳ್ಳುವುದೇ ಯೋಗ.
ಹೊರಗಿನ ಸತ್ಯ ಧರ್ಮ ದ ಬೇಧಭಾವದಲ್ಲಿ ಕೂಡುವುದು ಕಷ್ಟ ಹಾಗಾಗಿ ನಾವು ಪುಣ್ಯದ ಕೆಲಸ ಮಾಡಿ ಕೂಡಬೇಕು
ಪಾಪದ ಕೆಲಸ ಕಳೆದು ನಡೆಯಬೇಕು, ಜ್ಞಾನವನ್ನು ಗುಣಿಸಿಕೊಂಡು ಅಜ್ಞಾನವನ್ನು ಭಾಗಿಸಿಕೊಳ್ಳುವ ಲೆಕ್ಕಾಚಾರದ ವ್ಯವಹಾರದಲ್ಲಿ ಸತ್ಸಂಗ ಸಂಘಟನೆಗಳನ್ನು ಸೃಷ್ಟಿ ಮಾಡಿದರೆ ಸ್ಥಿತಿಯೂ ಉತ್ತಮ ಮುಕ್ತಿಯೂ ಸುಗಮ.
ಇಲ್ಲಿ ಲೆಕ್ಕಾಚಾರದಲ್ಲಿ ಕೇವಲ ಹಣ ಮಾತ್ರ ಕಾಣುತ್ತಾ ಅಜ್ಞಾನ ಅಧರ್ಮ ಅನ್ಯಾಯ ಭ್ರಷ್ಟಾಚಾರ ವಿದ್ದರೂ ಸರಿ ನಾನು ಬೆಳೆಯಬೇಕೆಂದರೆ ಒಳಗಿರುವ ಜ್ಞಾನ ಕುಸಿಯುತ್ತಾ ಜೀವ ಹೋಗುತ್ತದೆ .ಪರಮಾತ್ಮನಿಗೇನೂ ನಷ್ಟವಿಲ್ಲ ಕಾರಣ ಅವನೊಳಗೇ ಎಲ್ಲಾ ಇರೋವಾಗ ಒಮ್ಮೆ ಮೇಲೆ ಬಂದರೆ ಇನ್ನೊಮ್ಮೆ ಕೆಳಗಿಳಿಯುವರಷ್ಟೆ.ಕೆಳಗಿದ್ದವರು ಮೇಲೆ ಬರುವರು.ಹಾಗೆ ಸುರರ ಅಹಂಕಾರ ಮಿತಿಮೀರಿದಾಗ ಅಸುರಶಕ್ತಿ ಬೆಳೆದರೆ ಅಸುರರ ಅಹಂಕಾರ ಬೆಳೆದಾಗ ಸುರರ ಜ್ಞಾನ ಮೇಲೇರುವುದು.ತಲೆ ಸರಿಯಿದ್ದರೆ ಕಾಲೂ ಸರಿದಾರಿಗೆ ನಡೆಯಬಹುದು. ತಲೆಯೇ ಸರಿಯಿಲ್ಲವಾದರೆ ನಡಿಗೆ ಸರಿಯಿರದು. ಒಂದು ಶರೀರದೊಳಗೆ ಎಲ್ಲಾ ಅಂಗಾಂಗಗಳಿಗೂ ಅದರದೇ ಆದ ವಿಶೇಷಶಕ್ತಿಯಿರುತ್ತದೆ. ಹಾಗಂತ ಮಾನವನಿಗೆ ಪ್ರತಿಕ್ಷಣ ಅದನ್ನು ನೋಡಿಕೊಂಡು ಬದುಕಲಾಗದು. ಅಂಗಕ್ಕೆ ಸಮಸ್ಯೆಯಾದಾಗಲೇ ಪರೀಕ್ಷೆ ನಡೆಯುತ್ತದೆ ಅದಕ್ಕೆ ಕಾರಣ ತಿಳಿದು ಉಪಚಾರ ಮಾಡಬಹುದು. ಇದು ಎಲ್ಲರಿಗೂ ಕಷ್ಟ ಹೀಗಾಗಿ ನಮ್ಮ ಗುಣದ ಬಗ್ಗೆ ನಾವೇ ಚಿಂತನೆ ಮಾಡಿದರೆ ಒಳಗೆ ಯಾವ ಶಕ್ತಿಯಿದೆ ನಡೆಸುತ್ತಿದೆ ಎನ್ನುವ ವಿಚಾರ ಅರ್ಥ ವಾಗುತ್ತದೆ.
ಹೊರಗಿನವರು ನಮ್ಮನ್ನು ಸಾಕಬೇಕು,ನೋಡಿಕೊಳ್ಳಬೇಕು ಎನ್ನುವ ಸ್ಥಿತಿಗೆ ಬಂದಿದೆ ಎಂದರೆ ನಮ್ಮಲ್ಲಿ ರೋಗ ಹೆಚ್ಚಾಗಿದೆ ಎಂದರ್ಥ. ಆ ರೋಗಕ್ಕೆ ಔಷಧ ಒಳಗಿದ್ದರೆ ಉತ್ತಮ ಹೊರಗೇ ಇದ್ದರೆ ಹೊರಗಿನ ರೋಗವೇ ಒಳಗಿದೆ ಎಂದರ್ಥ.
ಇದರಲ್ಲಿ ಭ್ರಷ್ಟಾಚಾರ ವೂ ಒಂದು ರೋಗವೇ. ಇದಕ್ಕೆ ಶಿಷ್ಟಾಚಾರದ ಔಷಧವಿದ್ದರೆ ಉತ್ತಮ ದೇಹಾರೋಗ್ಯ ಸಾಧ್ಯ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತಾಗುವಷ್ಟು ಮುಳ್ಳು ಒಳಗೆ ಬೆಳೆಸಿಕೊಂಡರೆ ಹೆಚ್ಚು ನೋವಾಗುತ್ತದೆ.ಹೀಗೇ ನಾವು ಅನೇಕ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ಸಮಸ್ಯೆಯ ಮೂಲ ತಿಳಿಯುವುದು ಅಗತ್ಯವಿದೆ. ಮನೆಯೊಳಗೆ ಸಮಸ್ಯೆಯಿದ್ದರೆ ಒಳಗೇ ಪರಿಹಾರವಿದ್ದರೆ ಉತ್ತಮ. ಹೊರಗಿನಿಂದ ಸಮಸ್ಯೆ ಒಳಗೆ ಬಂದಾಗ ಸಮಸ್ಯೆಯಿಂದ ದೂರವಿರೋದಷ್ಟೂ ಉತ್ತಮ. ಮಾನವನ ಸಮಸ್ಯೆಗೆ ಅವನ ಕರ್ಮ ಋಣವೇ ಕಾರಣವೆಂದಾಗ ಸತ್ಕರ್ಮದಿಂದ ಋಣಮುಕ್ತನಾಗೋದೆ ಧರ್ಮ. ಮಹಾತ್ಮರಾಗೋದಕ್ಕೆ ಹೊರಗೆ ನಡೆಯಬೇಕೆಂದಿಲ್ಲ ಒಳಗೆ ನಡೆಯಬೇಕು. ಆತ್ಮಾವಲೋಕನ ನಕ್ಕೆ ಸರ್ಕಾರದ ಹಣ. ಬೇಡ ಜ್ಞಾನಿಗಳ ಸಹಕಾರ ಅಗತ್ಯ. ಜ್ಞಾನಿಗಳೆನ್ನಿಸಿಕೊಂಡವರೆ ರಾಜಕೀಯದ ಸುಳಿಯಲ್ಲಿದ್ದರೆ ಸರ್ಕಾರದ ಗತಿ ಏನು?
ಸ್ವತಂತ್ರ ಭಾರತದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಪ್ರಶ್ನೆಗೆ ಉತ್ತರ ಅಜ್ಞಾನಕ್ಕೆ ಸ್ವತಂತ್ರ ವಿದೆ. ಅಜ್ಞಾನವನ್ನು ಹಣಕೊಟ್ಟು ಖರೀದಿಸುತ್ತಿದ್ದಾರೆ. ಅದರಿಂದ ಇನ್ನಷ್ಟು ಸಾಲ ಬೆಳೆದು ಆತ್ಮಹತ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಜ್ಞಾನದ ಶಿಕ್ಷಣ ನೀಡೋದು.ಶಿಕ್ಷಕರು ಗುರುಗಳು ಸತ್ಯ ಧರ್ಮದ ಪಾಠ ಕಲಿತು ಕಲಿಸೋದು.ಕೆಲವರಿದ್ದಾರೆ ಅವರನ್ನು ಕೇವಲವಾಗಿಸಿ ಕಾಣೋರು ಬೆಳೆದಿದ್ದಾರೆಂದರೆ ಕಲಿಗಾಲದ ಮಹಿಮೆಯೆನ್ನಬೇಕೋ ಹಿರಿಮೆ ಎನ್ನಬೇಕೋ?
ಹಿಂದೆ ಯಾವುದೇ ಭೌತಿಕಸುಖವಿರದೆ ಶಾಂತಿಯಿಂದ ಜ್ಞಾನ ಪಡೆಯುತ್ತಿದ್ದರು .ಈಗ ಭೌತಿಕಾಸಕ್ತಿ ಮಿತಿಮೀರಿ ಅಜ್ಞಾನದಲ್ಲಿ ಸುಖಕ್ಕಾಗಿ ಹಾತೊರೆಯುವ ಜೀವನವಿದೆ. ಯಾವುದೂ ಅತಿಯಾದರೆ ಗತಿಗೇಡು. ಸುಖದು:ಖವಿಲ್ಲದ ಜೀವನ ಜೀವನವೇ ಅಲ್ಲ. ಅಲ್ಲ ಅಲ್ಲ ಎನ್ನುವುದರಿಂದ ಏನೂ ಸಿಗೋದಿಲ್ಲ. ಹಾಗಾಗಿ ಇದೆ ಎಂದುಕೊಂಡರೆ ಎಲ್ಲಾ ಇದೆ. ಇಲ್ಲವೆಂದರೆ ದೇವರೇ ಇಲ್ಲವೆನ್ನಬಹುದು.ಆದರೆ ತತ್ವ ಒಂದೇ ಇರುತ್ತದೆ. ಒಂದೇ ಭೂಮಿಯಲ್ಲಿ ದೇವಾಸುರರು ಮಹಿಳೆ ಮಕ್ಕಳು ಪುರುಷರು ಒಂದಾಗಿ ಬಾಳೋದು ಯೋಗಜ್ಞಾನವಿರಬೇಕಷ್ಟೆ. ಅಯೋಗ್ಯರಿಗೆ ಯೋಗ್ಯ ಶಿಕ್ಷಣ ನೀಡುವುದಕ್ಕೂ ಯೋಗಬೇಕು.ಕಾಲ ಕೂಡಿಬಂದಾಗ ಆಗುತ್ತದೆ ಹಾಗಾಗಿ ಮಾನವ ಕಾರಣಮಾತ್ರನಾದರೂ ಎಲ್ಲದ್ದಕ್ಕೂ ಕಾರಣನಾಗಿಯೇ ಇದ್ದಾನೆ. ಇದಕ್ಕೆ ಸ್ತ್ರೀ ಶಕ್ತಿಯೂ ಸೇರಿದಾಗ ಕಾರಣಾಂತರ ಸಮಸ್ಯೆ ಹೆಚ್ಚುವುದು. ಪರಿಹಾರ ಒಳಗೇ ಹುಡುಕಿಕೊಂಡರೆ ಸಿಗುವುದೆನ್ನುವ ಕಾರಣಕ್ಕಾಗಿ ಅಧ್ಯಾತ್ಮ ಜಗತ್ತು ಬೆಳೆದಿದೆ.
No comments:
Post a Comment