*ಸಂಬಂಧಗಳನ್ನು ಜೋಡಿಸುವುದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸಾಧನೆ. ಜೀವನದಲ್ಲಿ ನಾವು ಎಷ್ಟು ಒಳ್ಳೆಯವರು,ಎಷ್ಟು ಕೆಟ್ಟವರು ಎಂಬುದು ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ನಮ್ಮೆಲ್ಲರ "ಪರಮಾತ್ಮ" ಮತ್ತು ನಮ್ಮ "ಅಂತರಾತ್ಮ"*
ಸಂಬಂಧ ಗಳು ದ್ವೇಷದಿಂದ ಕೂಡಿಕೊಂಡರೆ ಸಮಸ್ಯೆಗಳನ್ನು ಕೂಡಿಸಿಕೊಂಡಂತೆ. ಇದು ಖಾಸಗಿ ಜೀವನದಲ್ಲಿ ನಡೆಯೋದಿಲ್ಲ ರಾಜಕೀಯ ಜೀವನದಲ್ಲಿ ನಡೆಯುತ್ತದೆ. ಅಂದರೆ ಒಂದು ಪಕ್ಷವನ್ನು ನಾಶ ಮಾಡಿ ಇನ್ನೊಂದು ಪಕ್ಷ ಕಟ್ಟುವಾಗ. ಬೇರೆ ಸಣ್ಣ ಪಕ್ಷಗಳ ಸಹಕಾರ ಸಹಾಯ ಬೇಕು. ಇಂತಹ ಸ್ಥಿತಿಯಲ್ಲಿ ಉತ್ತಮ ಉದ್ದೇಶವನ್ನು ಇಟ್ಟುಕೊಂಡವರ ಸಂಬಂಧ ವಿದ್ದರೆ ಉತ್ತಮ ಪಕ್ಷದಿಂದ ಭವಿಷ್ಯದಲ್ಲಿ ಪ್ರಗತಿ ಕಾಣಬಹುದು. ಯಾವಾಗ ದ್ವೇಷದಿಂದ ಕೂಡಿದ್ದನ್ನು ಸೇರಿಸಿಕೊಂಡೆವೋ ಆಗ ನಮ್ಮಲ್ಲಿದ್ದ ಒಗ್ಗಟ್ಟೂ ಮರೆಯಾಗುತ್ತಾ ಇಡೀ ಪಕ್ಷದೊಳಗೇ ಭಿನ್ನಾಭಿಪ್ರಾಯ ದ್ವೇಷ ಅಸೂಯೆಯ ಹೊಗೆ ಹೆಚ್ಚಾಗುತ್ತಾ ಬೆಂಕಿಯಾಗಿ ಉರಿದು ತಾವೂ ನಾಶವಾಗೋದರ ಜೊತೆಗೆ ಸುತ್ತಮುತ್ತಲಿನ ಪಕ್ಷಗಳೂ ನಾಶವಾಗುತ್ತದೆ. ಇದಕ್ಕೆ ಪರಿಹಾರವೆಂದರೆ ನಮ್ಮ ದ್ವೇಷ ವನ್ನು ಬಿಟ್ಟು ಉತ್ತಮ ಸಂಬಂಧ ವನ್ನು ನಿಸ್ವಾರ್ಥ ನಿರಹಂಕಾರದಿಂದ ಕೂಡಿಸಿಕೊಳ್ಳುವುದಾಗಿದೆ.ಇದು ಹೊರಗಿನ ರಾಜಕೀಯ ದಲ್ಲಿ ಕಷ್ಟವಿದೆ.ಒಳಗಿರುವ ರಾಜಯೋಗದಿಂದ ಸಾಧ್ಯವಿದೆ. ದ್ವೇಷದಿಂದ ಏನೂ ಸಾಧನೆ ಮಾಡಲಾಗದು. ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಎಂದಂತೆ ಒಂದು ಪಕ್ಷ ಕಟ್ಟುವುದಕ್ಕೆ ಧರ್ಮ ಸತ್ಯವನರಿಯುವುದು ಬಹಳ ಕಷ್ಟದಕೆಲಸ.ಕಟ್ಟಿದ ಮೇಲೆ ಅದನ್ನು ನಡೆಸುವುದು ಬಹಳ ಕಷ್ಟ ಕಾರಣ ನಡೆಯುವಾಗ ಮಧ್ಯೆ ಬರುವ ಅಧರ್ಮ, ಅಸತ್ಯವನ್ನು ದ್ವೇಷ ಮಾಡಿದರೆ ಅವು ಮೈಮೇಲೆರಗಿ ಬೀಳಿಸುವ ಕೆಲಸ ಮಾಡೋದು ಸಹಜ ಹೀಗಾಗಿ ಅವುಗಳನ್ನು ನಿರ್ಲಕ್ಷಿಸಿ ಶಾಂತವಾಗಿರೋದಕ್ಕೆ ಮಹಾತ್ಮರಿಗಷ್ಟೆ ಸಾಧ್ಯ.
ಭಗವಾನ್ ಬುದ್ದ ಅಂಗುಲಿಮಾಲರ ಒಂದು ಕಥೆ ಇದಕ್ಕೆ ಸಾಕ್ಷಿ. ಹಾಗೆಯೇ ಇನ್ನೂ ಕೆಲವು ಮಹಾತ್ಮರ ಜೀವನದಲ್ಲಿಯೂ ಇಂತಹ ಸನ್ನಿವೇಶ ನಡೆದು ದುಷ್ಟರೂ ಶಿಷ್ಟರಾಗಿರುವ ಕಥೆಗಳಿವೆ. ಹಾಗಂತ ಈಗಿನ ಪರಿಸ್ಥಿತಿ ಯಲ್ಲಿ ಇಷ್ಟೊಂದು ಶಾಂತಿದೂತರಿಲ್ಲದಿದ್ದರೂ ಶಾಂತಿಯನ್ನು ಕಾಪಾಡುವವರ ಸಂಬಂಧ ಬೆಳೆಸಿಕೊಂಡರೆ ನಮ್ಮೊಳಗೆ ಇನ್ನಷ್ಟು ಶಾಂತಿ ಹೆಚ್ಚುವುದಲ್ಲವೆ?
ಕ್ರಾಂತಿಗೆ ಹೆಚ್ಚು ಮಂದಿ ಕೈ ಜೋಡಿಸಿಕೊಂಡು ಹೊರಗೆ ಬಂದರೆ ಒಳಗಿದ್ದ ಸತ್ಯ ಧರ್ಮ ದ ಸೂಕ್ಮ ತೆ ಅರ್ಥ ವಾಗದೆ ಜೀವ ಹೋಗುತ್ತದೆ. ಎಲ್ಲಿಯವರೆಗೆ ಆತ್ಮಕ್ಕೆ ಶಾಂತಿ ಸಿಗದೆ ಜೀವ ಹೋಗುವುದೋ ಮತ್ತದೇ ಸ್ಥಿತಿಯಲ್ಲಿ ಜನ್ಮ ಪಡೆದು ಅದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತದೆ.ಹೀಗಾಗಿ ನಮ್ಮ ಸನಾತನ ಧರ್ಮ ವು ಶಾಂತಿಯನ್ನು ಬಯಸುತ್ತದೆ. ದುಷ್ಟರನ್ನು ಶಾಂತಿಯಿಂದಲೂ ಗೆಲ್ಲಬಹುದೆನ್ನುವುದು ಸತ್ಯವಾದರೂ ರಾಜಕೀಯಕ್ಕೆ ಇಳಿದ ಮನಸ್ಸಿನಲ್ಲಿ ಶಾಂತಿ ಯಿರದು.ಹಾಗಾಗಿ ರಾಜಕೀಯದಿಂದ ಶಾಂತಿ ಸೃಷ್ಟಿ ಮಾಡಲು ಕಷ್ಟವಿದೆ.ಆದರೆ ಧರ್ಮ ರಕ್ಷಣೆಗಾಗಿ ಹೋರಾಟ ಮಾಡುವಾಗ ಧರ್ಮ ಸೂಕ್ಮವನ್ನರಿಯುವುದು ಬಹಳ ಅಗತ್ಯವಾಗಿದೆ.ಇತ್ತೀಚೆಗೆ ಸಾಕಷ್ಟು ತಿಳಿದವರೂ ದುಷ್ಟರ ಸಂಬಂಧ ಮಾಡಿಕೊಂಡು ದಾರಿತಪ್ಪಿರುವುದು ಸತ್ಯ. ಯಾರೋ ಹೊರಗಿನವರು ಏನೋ ತಿಳಿಸಿದರೆಂದು ನಂಬಿ ನಮ್ಮವರನ್ನೇ ಅಪಾರ್ಥ ಮಾಡಿಕೊಂಡು ಧರ್ಮ ಸತ್ಯ ಬಿಟ್ಟು ಹೊರಗೆ ನಡೆದು ಹೊರಗಿನ ಸಂಬಂಧ ಗಟ್ಟಿಗೊಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಒಳಗಿನ ಶಕ್ತಿಯ ವಿರುದ್ದ ನಡೆದಂತೆಲ್ಲಾ ಆತ್ಮಹತ್ಯೆಗಳೇ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಅಷ್ಟು ಬೇಗ ಬೆಳೆಯೋದಿಲ್ಲ ಹಾಗಾಗಿ ಇತ್ತೀಚೆಗೆ ಯುವಪೀಳಿಗೆಯಲ್ಲಿ ಆತ್ಮವಿಶ್ವಾಸ ಕುಸಿದು ಅಹಂಕಾರ ಮಿತಿಮೀರಿದೆ. ತನ್ನ ತಾನರಿಯದ ಜೀವಕ್ಕೆ ಪರಕೀಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಇನ್ನು ಪರಮಾತ್ಮ ಅರ್ಥ ಆಗುವನೆ? ಆತ್ಮನಿರ್ಭರ ಭಾರತಕ್ಕೆ ಅಧ್ಯಾತ್ಮಿಕ ಸಂಬಂಧ ಅಗತ್ಯವಿದೆಯೇ ಹೊರತು ಭೌತಿಕದ ಸಂಬಂಧ ವಲ್ಲ. ಮೊದಲು ಆಂತರಿಕ ಶುದ್ದಿಗಾಗಿ ಮನಸ್ಸನ್ನು ಒಳಗೆಳೆದುಕೊಂಡು ಒಳಗೇ ಅಡಗಿರುವ ನಮ್ಮ ಹಿತಶತ್ರುಗಳಾದ ಅಹಂಕಾರ ಸ್ವಾರ್ಥ ಪೂರಿತ ಸಂಬಂಧ ದಿಂದ ದೂರವಾದರೆ ನಿಜವಾದ ಮಿತ್ರ ಒಳಗಿದ್ದಾನೆ. ಅವನೆ ಪರಮಾತ್ಮ. ಆ ಪರಮಾತ್ಮನ ಜೀವಾತ್ಮ ಸೇರೋದೆ ಯೋಗ ಸಂಬಂಧ.
ನಮ್ಮ ಹಿಂದಿನ ಕಾಲದಲ್ಲಿ ಹಿರಿಯರು ಹತ್ತಿರದ ಸಂಬಂಧ ಕ್ಕೆ ಹೆಚ್ಚು ಹತ್ತಿರವಾಗೋದಕ್ಕೆ ಕಾರಣವಿಷ್ಡೆ ಇದು ಹಿಂದಿನ ಜನ್ಮದ ಋಣ ಸಂಬಂಧ. ಇದನ್ನು ತೀರಿಸಲು ನಮ್ಮ ಹಿಂದಿನ ಧರ್ಮ ಕರ್ಮ ವೂ ನಮ್ಮ ಹತ್ತಿರವೇ ಇದ್ದಾಗ ಸುಲಭವಾಗಿ ಋಣ ತೀರಿಸಲು ಸಾಧ್ಯವಾಗಿತ್ತು.ಯಾವಾಗ ಹೊರಗಿನವರ ಮಧ್ಯೆ ಪ್ರವೇಶವಾಗಿ ಅಂತರ ಬೆಳೆಯಿತೋ ಹಣ ಮಾತ್ರ ಕಣ್ಣಿಗೆ ಕಾಣುತ್ತಾ ಜ್ಞಾನ ಲೆಕ್ಕಿಕ್ಕಿಲ್ಲವಾಗಿ ಹೆಣ್ಣು ಹೊನ್ನು ಮಣ್ಣಿನ ದಾಸರಾಗಿ ಸಂಬಂಧ ಟೊಳ್ಳಾಗುತ್ತಾ ಭೂಮಿಗೆ ಜೀವ ಭಾರ ವಾಗಿ ಹೋಯಿತು.ಆತ್ಮ ಯಾವತ್ತೂ ಶುದ್ದ ಸತ್ಯ ಹೀಗಾಗಿ ಮನಸ್ಸು ಹಗುರವಾಗಲು ಆತ್ಮಜ್ಞಾನ ಅಗತ್ಯವಿದೆ.
ಒಟ್ಟಿನಲ್ಲಿ ಸಂಬಂಧ ಗಳು ಜ್ಞಾನದಿಂದ ಜೋಡಿಸಿದರೆ ಜೀವನ ಹಗುರವಾಗಿರುತ್ತದೆ.ಹಣದಿಂದ ಜೋಡಿಸಿದರೆ ಹೆಣಭಾರವಾಗುತ್ತಾ ಋಣ ತೀರಿಸಲಾಗದೆ ಹೋಗುತ್ತದೆ. ಇದಕ್ಕೆ ಯಾವ ಪುರಾಣ ಇತಿಹಾಸದ ಸಾಕ್ಷಿಯ ಅಗತ್ಯವಿಲ್ಲವಲ್ಲ. ಇತ್ತೀಚೆಗೆ ಏನೇ ಸತ್ಯ ಹೇಳಿದರೂ ಸಾಕ್ಷಿ ಏನಿದೆ ಎನ್ನುವ ಜನರಿದ್ದಾರೆ. ಆತ್ಮಸಾಕ್ಷಿಗಿಂತ ಬೇರೆ ಸಾಕ್ಷಿಯಿಲ್ಲವೆನ್ನುವುದು ಎಲ್ಲರಿಗೂ ತಿಳಿದರೂ ಅದರೊಂದಿಗೆ ನಡೆಯೋದೇ ಕಷ್ಟವಾದಾಗ ಹೊರಗಿನ ಸಾಕ್ಷಿ ಸುಳ್ಳಿನ ಕಂತೆ ಇಟ್ಟುಕೊಂಡು ಆಟವಾಡಿಸೋದು ಸಹಜ. ಒಟ್ಟಿನಲ್ಲಿ ನಮ್ಮ ಈ ಸ್ಥಿತಿಗೆ ನಮ್ಮ ಹೊರಗಿನ ಸಂಬಂಧವೇ ಕಾರಣವೆಂದರೆ ನಂಬದಿದ್ದರೂ ಸತ್ಯ ಒಂದೇ.
ಪ್ರಕೃತಿ ಪುರುಷರ ಮಹಾಸಂಗಮವು ಜ್ಞಾನದಿಂದಾಗಬೇಕಾದರೆ ಮಾನವನಿಗೆ ತನ್ನೊಳಗೇ ಅಡಗಿರುವ ದೈವತತ್ವದ ಅರಿವಿರಬೇಕು.ಹೊರಗಿರುವ ಅಸುರರಿಗೆ ಸಹಕಾರ ಕೊಟ್ಟು ಹೊರಬಂದು ಹಣದ ಶ್ರೀಮಂತ ರ ಸಂಬಂಧ ಹೆಚ್ಚಿಸಿಕೊಂಡರೆ ಋಣ ತೀರಿಸಲು ಮತ್ತೆ ತಿರುಗಿ ಬರಲೇಬೇಕು. ಭೋಗವಿರಲಿ ಯೋಗದಿಂದ ಕೂಡಿಬರಲಿ.ಅಂದರೆ ಕಷ್ಟಪಟ್ಟು ಸತ್ಕರ್ಮದಿಂದ ಸಂಪಾದಿಸಿದ ಹಣದಿಂದ ಭೋಗ ಜೀವನ ನಡೆಸಲು ಆತ್ಮಜ್ಞಾನ ಅಗತ್ಯವಿದೆ. ಇದಕ್ಕೆ ಮೂಲವೇ ಸಾಮಾನ್ಯ ಜ್ಞಾನ.
ಮೊದಲು ಮಾನವನಾದರೆ ನಂತರ ಮಹಾತ್ಮರ ಸಂಬಂಧ ಯೋಗದ ಮೂಲಕ ನಡೆಯುತ್ತದೆ. ಇದು ಶೀಘ್ರವಾಗಿ ನಡೆಯೋ ಕ್ರಿಯೆಯಲ್ಲದ ಕಾರಣ ಅವಸರದ ಅಪಘಾತಗಳು ಹೆಚ್ಚಾಗುತ್ತಿದೆ. ತಾಳಿದವನು ಬಾಳಿಯಾನು.ನಿಧಾನವೇ ಪ್ರಧಾನ. ಒಳ್ಳೆಯದು ಬೇಗ ಬೆಳೆಯದು. ಹಾಗಾಗಿ ಕೆಟ್ಟ ಸಂಬಂಧ ಬೆಳೆಯುತ್ತಿದೆ ಎಂದರೆ ಒಳ್ಳೆಯದು ಇಲ್ಲವೆಂದಲ್ಲ ಕಾಣುವ ದೃಷ್ಟಿ ಯಿಲ್ಲವಷ್ಟೆ. ಕಣ್ಣಿಗೆ ಕಾಣೋದೆಲ್ಲಾ ಸತ್ಯವಲ್ಲ ಕಾಣದ್ದು ಇಲ್ಲವೆಂದಲ್ಲ. ದೈವಶಕ್ತಿ ಯಾವತ್ತೂ ಕಣ್ಣಿಗೆ ಕಾಣೋದಿಲ್ಲವಾದರೂ ಅದೇ ಗೆಲ್ಲುವುದು. ಸತ್ಯಕ್ಕೆ ಸಾವಿಲ್ಲವೆಂದರೆ ಆತ್ಮಸಾಕ್ಷಿ ಯಾವತ್ತೂ ಸತ್ಯ. ಆದರೆ ಅಜ್ಞಾನದಲ್ಲಿರುವಾಗ ಮನಸ್ಸನ್ನು ಆತ್ಮವೆಂದರಿತು ಮುಂದೆ ನಡೆಯುತ್ತಾರೆ.ಮನಸ್ಸು ಚಂಚಲ ಆತ್ಮಸ್ಥಿರವಾಗಿರುವ ಆಂತರಿಕ ಶಕ್ತಿಯಾಗಿದೆ ಎಂದಿರುವರು ಮಹಾತ್ಮರುಗಳು. ಅವರ ಹೆಸರಿನಲ್ಲಿ ಸಂಬಂಧ ಬೆಳೆಸೋ ಮೊದಲು ಅವರ ತತ್ವಜ್ಞಾನವನರಿತರೆ ಉತ್ತಮ.
No comments:
Post a Comment